ಹಾರನಹಳ್ಳಿಯ ತ್ರಿಕೂಟಾಚಲ - ಭಾಗ 3

  ಹಾರನಹಳ್ಳಿಯ ತ್ರಿಕೂಟಾಚಲ - ಭಾಗ 3

ಲೇಖನ - ಮೈಸೂರು ಶ್ರೀನಿವಾಸ ಪುಟ್ಟಿ


ಇಲ್ಲಿಯ ವರೆಗೆ .......  

ಭಾಗ -1    link here

ಭಾಗ - 2    link here

ಭಾಗ 3

ಶುಕನಾಸಿಯ ಉತ್ತರ ಮುಖ (ಚಿತ್ರ ೧೩)



ಚಿತ್ರ ೧೩

 

87, 88

ಪುರುಷೋತ್ತಮ (ಚಮೂ ೧೭) (ಶಂ - ) ಲಕ್ಷ್ಮೀ

89, 90

ಅಧೋಕ್ಷಜ (ಚಮೂ ೧೮) (ಶಂ - ), ಬಲಗಡೆಯಲ್ಲಿ ಪದ್ಮ

91

ಪದ್ಮ ಮತ್ತು ಕಳಶವನ್ನು ಹಿಡಿದಿರುವ ಲಕ್ಷ್ಮೀ ಮತ್ತು ಗರುಡ (ಶಿಲ್ಪಿ: ಮಲ್ಲಿತಮ್ಮ )

92, 93

ಗೋವರ್ಧನಗಿರಿಧಾರಿ ಎಡಗಡೆಯಲ್ಲಿ ಹೂವನ್ನು ಹಿಡಿದಿರುವ ಸ್ತ್ರೀ (ಶಿಲ್ಪಿ: ಮಲ್ಲಿತಮ್ಮ )

94

ಹರಿಹರ (ಅಕ್ಷಮಾಲ, ತ್ರಿಶೂಲ,ಚಕ್ರ,ಶಂಖ)

95 – 97

ಇಕ್ಕೆಲಗಳಲ್ಲಿ ಒಬ್ಬ ಸೇವಕನ ನಡುವೆ ವೇಣುಗೋಪಾಲ. ಪೀಠದ ಮೇಲೆ ಗರುಡ

98

ಕೋದಂಡರಾಮ

99

ಪರಶುರಾಮ

    

ನವರಂಗದ ವಾಯವ್ಯ ಮೂಲೆ ( Northwest corner of Navaranga) 

(ಚಿತ್ರ ೧೪, ಚಿತ್ರ ೧೪.೧)



ಚಿತ್ರ ೧೪

 

100, 101

ಲಕ್ಷ್ಮೀ (ಎಡಗಡೆ) ಸಮೇತವಾದ ಸ್ಥಾನಕ ನರಸಿಂಹ (ಚಮೂ ೧೯) (ಪ-ಗ-ಶಂ-ಚ). ಶಿಲ್ಪಿ: ಮಲ್ಲಿತಮ್ಮ

 

102, 103

ಲಕ್ಷ್ಮೀ ಸಮೇತನಾದ ಅಚ್ಯುತ ( ಚಮೂ ೨೦) (--ಶಂ-)

104

ಬಲಿ, ವಾಮನ 

105

ಬಲಗಾಲನ್ನು ಎತ್ತಿರುವ ತ್ರಿವಿಕ್ರಮ. ಪೀಠದ ಮೇಲೆ ಗರುಡ





ಚಿತ್ರ ೧೪.೧

      

106

ಮಹಿಷಾಸುರಮರ್ದಿನಿ

107

ಪದ್ಮ ಮತ್ತು ಫಲವನ್ನು ಹಿಡಿದಿರುವ ಸ್ತ್ರೀ

108

ಅರ್ಜುನ, ಮತ್ಸ್ಯ ಯಂತ್ರ

109 - 111 

ಜನಾರ್ದನ (ಚಮೂ ೨೧) (-ಶಂ--). ಬಲಗಡೆಯಲ್ಲಿ ಲಕ್ಷ್ಮೀ ಮತ್ತು ಎಡಗಡೆಯಲ್ಲಿ ಚಾಮರಧಾರಿಣಿ. ಶಿಲ್ಪಿ: ಮಲ್ಲಿತಮ್ಮ

112, 113

ಇಬ್ಬರು ದೇವಿಯರು

   

ಉತ್ತರ ಗರ್ಭಗುಡಿಯ ಪಶ್ಚಿಮ ಮುಖ (ಚಿತ್ರ ೧೫)



ಚಿತ್ರ ೧೫

 

114 – 117

ಲಕ್ಷ್ಮೀನಾರಾಯಣ. ಎಡಗಡೆಯಲ್ಲಿ ಚಾಮರಧಾರಿಣಿ ಮತ್ತು ಪದ್ಮ ಹಾಗೂ ಕಳಶಗಳನ್ನು ಹಿಡಿದಿರುವ ದೇವಿ ಮತ್ತು ಬಲಗಡೆಯಲ್ಲಿ                    ಚಾಮರಧಾರಿಣಿ

118

ಬಲರಾಮ

119

ಎಡಮೊಣಕೈ ಮೇಲೆ ಗಿಣಿ ಮತ್ತು ಬಲಗೈನಲ್ಲಿ ಫಲವನ್ನು ಹಿಡಿದಿರುವ ಸ್ತ್ರೀ

120 – 122

ಲಕ್ಷ್ಮೀ ಸಮೇತನಾದ ಉಪೇಂದ್ರ (ಚಮೂ ) ( ---ಶಂ); ಷಡ್ಭಜ ನೃತ್ಯ ಲಕ್ಷ್ಮೀ ( ಅಕ್ಷಮಾಲ, ಗಜಹಸ್ತ,ಶಂಖ,ಸ್ವರ್ಗ ಹಸ್ತ,ಚಕ್ರ, ಫಲ)

 

ಉತ್ತರ ಗರ್ಭಗುಡಿಯ ಉತ್ತರ ಮುಖ (ಚಿತ್ರ ೧೬)



ಚಿತ್ರ ೧೬ 

 

123

ಷಡ್ಭುಜ ನೃತ್ಯ ಕೇಶವ ( ಬಲಗಡೆಯ ಕೆಳಗೈನಿಂದ ಮೇಲಕ್ಕೆ ಚಕ್ರಾಕಾರವಾಗಿ: ಪದ್ಮ, ಗಜ ಹಸ್ತ, ಶಂಖ , ಸ್ವರ್ಗ ಹಸ್ತ, ಚಕ್ರ, ಗದಾ)

124, 125

ಹರಿ ( ಚಮೂ ೨೩) ( -ಶಂ--) ಸ್ತ್ರೀ ಪರಿಚಾರಿಕೆ

126

ಸರ್ಪವೊಂದನ್ನು ಎತ್ತಿ ಹಿಡಿದಿರುವ ಮೋಹಿನಿ

127 – 131

ಇಕ್ಕೆಲಗಳಲ್ಲಿ ಒಬ್ಬ ಪರಿಚಾರಿಕೆ ಮತ್ತು ಒಬ್ಬ ದೇವಿಯ ನಡುವೆ  ಲಕ್ಷ್ಮೀ ವರಾಹ. ಶಿಲ್ಪಿ: ಮಲ್ಲಿತಮ್ಮ

132 - 135

ಶ್ರೀಕೃಷ್ಣ (ಚಮೂ ೨೪)(---ಶಂ) ಮೂವರು ಪರಿಚಾರಿಕೆಯರರು.

136

ಅಪೂರ್ಣ (Incomplete)

 

ಉತ್ತರ ಗರ್ಭಗುಡಿಯ ಪೂರ್ವ ಮುಖ (ಚಿತ್ರ ೧೭)



ಚಿತ್ರ ೧೭

 

137, 138

ಬಲಗಡೆಯಲ್ಲಿ ಗರುಡನೊಂದಿಗೆ ಯೋಗಾನರಸಿಂಹ

139 – 141

ಪರಿಚಾರಿಕೆಯೊಬ್ಬಳೊಡನೆ ನಾರಾಯಣ ಮತ್ತು ಲಕ್ಷ್ಮೀ. ಶಿಲ್ಪಿ: ಮಲ್ಲಿತಮ್ಮ

142 – 146

ಎಡದಲ್ಲಿ ಪರಿಚಾರಿಕೆ ಮತ್ತು ಭೂದೇವಿ ಮತ್ತು ಬಲದಲ್ಲಿ ರತಿ-ಮನ್ಮಥರ ನಡುವೆ ಲಕ್ಷ್ಮೀನರಸಿಂಹ

 

III.ಮೇಲ್ಛಾವಣೆ ಮತ್ತು ಕೈಪಿಡಿ ಗೋಡೆ

 

ಈ ಭಾಗದಲ್ಲಿ ಪೀಠದ ಮೇಲೆ ಶಿಖರಗಳನ್ನು ಕಾಣಬಹುದು. ಅವುಗಳ ಕೆಳಗೆ ಅಪೂರ್ಣವಾದ ವಿಗ್ರಹಗಳಿವೆ. ಅವುಗಳ ಮೇಲೆ ಮುಂದಕ್ಕೆ ಬಾಗಿರುವ ಕಟಾಂಜನದಲ್ಲಿ ಕೆಲವು ರತಿಬಂಧಗಳಿವೆ. ಕಟಾಂಜನದ ಮೇಲೆ ಕಲ್ಲಿನ ಜಾಲಂದ್ರಗಳಿವೆ. ಮೇಲ್ಚಾವಣಿಯ ಬೋದಿಗೆಗಳ ಕೆಳಭಾಗದಲ್ಲಿ ತೊಲೆಗಳಿವೆ. ಕೈಪಿಡಿಗೋಡೆಯ ಮೇಲೂ ಶಿಖರಗಳಿವೆ.

 

IV.ಶಿಖರ (ಚಿತ್ರ ೧೭)

ಚಿತ್ರ ೧೮

 

ಶಿಖರವು ನಾಲ್ಕು ಅಂತಸ್ತಿನದಾಗಿದೆ. ಅದು ನಕ್ಷತ್ರಾಕಾರವಾಗಿರುವುದರಿಂದ ಶಿಖರಕ್ಕೆ 

ಹೆಚ್ಚು ಅಲಂಕಾರಗಳಿಲ್ಲ. ಶುಕನಾಸಿಯ ಮೇಲೆ ಮುಂದೆ ಚಾಚಿರುವ ಭಾಗದಲ್ಲಿ ಹಿಂದೆ ಸಳನ ವಿಗ್ರಹವಿತ್ತೆಂದು ತಿಳಿದುಬಂದಿದೆ. ಆದರೆ ಅದು ಈಗ ಮಾಯವಾಗಿದೆ. ಅಂತೆಯೇ ಹಿಂದೆ ಇದ್ದ ಕಲ್ಲಿನ ಕಳಶಕ್ಕೆ ಬದಲಾಗಿ ಈಗ ಲೋಹದ ಕಳಶವನ್ನು ಇಡಲಾಗಿದೆ. ಕೇಶವನ ಗರ್ಭಗುಡಿಯ ಮೇಲೆ ಮಾತ್ರ ಶಿಖರವಿದೆ. ಈ ಶಿಖರವು ಒಂದು ಸುಂದರ ರಚನೆ.

 

V.ನವರಂಗ (ಚಿತ್ರ ೧೯)



ಚಿತ್ರ ೧೯

 

ನವರಂಗವು 15 ಅಡಿ ಉದ್ದ ಮತ್ತು ಅಗಲವನ್ನು ಹೊಂದಿರುವ ಒಂದು ಚೌಕಾಕಾರದ 

ರಚನೆ. ಇದರ ಪೂರ್ವದಲ್ಲಿ ಒಂದು ಅಂಕಣದ ಮುಖ ಮಂಟಪವಿದೆ. ಮುಖಮಂಟಪದ ಉತ್ತರ-ದಕ್ಷಿಣಗಳ ಗೋಡೆಗೆ ಅಂಟಿಕೊಂಡಂತೆ‌ ಕಲ್ಲಿನ ಜಗತಿಗಳಿವೆ. ಈ ಜಗತಿಯ ಹಿಂದೆ ಜಾಲಂದ್ರಗಳಿವೆ. ನಕ್ಷತ್ರಾಕಾರದ ಆರು ಆಧಾರ ಸ್ತಂಭಗಳು ಇಲ್ಲಿವೆ. ನವರಂಗದ ಪಶ್ಚಿಮದಲ್ಲಿ ನಾಲ್ಕು ಸುಂದರ ಮಂಟಪಗಳಿದ್ದು, ಪ್ರತಿಯೊಂದರ ಶಿಖರವೂ ಬೇರೆ ಬೇರೆಯಾಗಿವೆ. ಈ ಮಂಟಪಗಳಲ್ಲಿ ಆಸೀನ ಸರಸ್ವತೀ (ಅಕ್ಷಮಾಲ, ಅಂಕುಶ, ಪಾಶ, ಪುಸ್ತಕ), ಗಣಪತಿ, ಗಜ ಪೀಠದ ಮೇಲೆ ಸ್ಥಾನಕ ಲಕ್ಷ್ಮೀ (ಅಭಯ, ಶಂಖ, ಚಕ್ರ, ಕಳಶ) ಮತ್ತು ಕೂರ್ಮ ಹಾಗೂ ಆದಿಶೇಷ ಪೀಠದ ಮೇಲೆ ಸ್ಥಾನಕ ಭೂದೇವಿ (ಪದ್ಮ, ಶಂಖ, ಚಕ್ರ, ಫಲ ) ವಿಗ್ರಹಗಳಿವೆ.

 

ನವರಂಗದ ಮಧ್ಯದಲ್ಲಿರುವ ನಾಲ್ಕು ಸ್ತಂಭಗಳು ದುಂಡಾಗಿವೆ. ಇದರ ಪೂರ್ವದಲ್ಲಿರುವ ಆರು ಸ್ತಂಭಗಳು ೮, ೧೬, ೩೨ ಮತ್ತು ೬೪ ಕೋನಗಳನ್ನು ಹೊಂದಿವೆ. ಪೂರ್ವದ ಎರಡು ಕಂಬಗಳ ಕೋನಗಳ ನಡುವೆ, ಗಾಯಕ-ನರ್ತಕರ ಶಿಲ್ಪಗಳನ್ನು ಕಾಣಬಹುದು. 

 

ನವರಂಗದಲ್ಲಿ ಒಂಬತ್ತು, ಮತ್ತು ಮುಖಮಂಟಪದಲ್ಲಿ ಒಂದು, ಅಂದರೆ ಒಟ್ಟು ಹತ್ತು ಭುವನೇಶ್ವರಿಗಳು ಈ ದೇವಾಲಯದಲ್ಲಿ ಇವೆ. ಈ ಹತ್ತು ಭುವನೇಶ್ವರಿಗಳಲ್ಲಿ, ಮುಖಮಂಟಪದಲ್ಲಿರುವ ಭುವನೇಶ್ವರಿ ಅತ್ಯಂತ ಸುಂದರವಾಗಿದೆ. ಇದರಲ್ಲಿ ಎರಡು ಸಾಲು ಶಿಖರಗಳನ್ನೂ, ಯಕ್ಷರನ್ನೂ, ಮತ್ತು ಅವುಗಳ ಪಕ್ಕದಲ್ಲಿ ಸಿಂಹಗಳನ್ನೂ, ವಿಷ್ಣುವಿನ ಅವತಾರಗಳನ್ನೂ ಕಾಣಬಹುದು. ಇವುಗಳ ಮೇಲೆ ಮೂರು ವೃತ್ತಗಳನ್ನೂ ಮಧ್ಯದಿಂದ ಜೋಲಾಡುವ ‌ಕರ್ಣಿಕೆಯನ್ನು ಕಾಣಬಹುದು. ಕರ್ಣಿಕೆಯ ಕೆಳಭಾಗದಲ್ಲಿ ಕಾಳಿಂಗಮರ್ದನನ ಪುಟ್ಟ ಶಿಲ್ಪ ಇದೆ. ಇತರ ಒಂಬತ್ತು ಭುವನೇಶ್ವರಿಗಳಲ್ಲಿ ರೇಖಾಚಿತ್ರಗಳಿವೆ. ಮಧ್ಯದ ಭುವನೇಶ್ವರಿಯ ಕರ್ಣಿಕೆಯ ಮೇಲೆ ಸ್ಥಾನಕ ವಿಷ್ಣುವಿನ ವಿಗ್ರಹ ಇದೆ.

 

VI.ಗರ್ಭಗೃಹಗಳು

 

ಹಿಂದೆಯೇ ತಿಳಿಸಿರುವಂತೆ ಈ ದೇವಾಲಯವು ಒಂದು ತ್ರಿಕೂಟಾಚಲ.

 

ದೇವಾಲಯದ ದಕ್ಷಿಣ, ಪಶ್ಚಿಮ ಮತ್ತು ಉತ್ತರಗಳಲ್ಲಿ ಒಂದೊಂದು ಗರ್ಭಗುಡಿಗಳಿದ್ದು ಇವುಗಳಲ್ಲಿ ಕ್ರಮವಾಗಿ ವೇಣುಗೋಪಾಲ, ಕೇಶವ ಮತ್ತು ಲಕ್ಷ್ಮೀ ನರಸಿಂಹರ ವಿಗ್ರಹಗಳಿವೆ.

 

ದಕ್ಷಿಣದ ಗರ್ಭಗುಡಿ (ಚಿತ್ರ ೨೦)



ಚಿತ್ರ ೨೦

 

ದಕ್ಷಿಣದ ಗರ್ಭಗುಡಿಗೆ ಶುಕನಾಸಿ ಇಲ್ಲ. ಗರ್ಭಗುಡಿಯ ದ್ವಾರದ ಇಕ್ಕೆಲಗಳಲ್ಲಿ ದ್ವಾರಪಾಲಕರನ್ನೂ, ದ್ವಾರದ ಮೇಲೆ ಐದು ಶಿಖರಗಳನ್ನು ಮತ್ತು ಅವುಗಳ ನಡುವೆ ಸಿಂಹಗಳನ್ನು ಕಾಣಬಹುದು. ಮೇಲ್ಚಾವಣಿಯಲ್ಲಿ ವೇಣುಗೋಪಾಲ ಮತ್ತು ಎಂಟು ವಿಷ್ಣು ಮೂರ್ತಿಗಳಿವೆ. ಈ ಎಂಟು ವಿಗ್ರಹಗಳೂ ಅಂಜಲಿಹಸ್ತದಲ್ಲಿ   ಶಂಖ ಚಕ್ರಗಳನ್ನು ಮತ್ತು ಪಕ್ಕದಲ್ಲಿ ದೇವಿಯರನ್ನೂ ಹೊಂದಿವೆ. ಗರ್ಭಗುಡಿಯ ಒಳಗೆ ಗರುಡ ಪೀಠದ ಮೇಲೆ ಸುಂದರವಾದ ವೇಣುಗೋಪಾಲವಿಗ್ರಹವಿದೆ.

 

ಪಶ್ಚಿಮದ ಗರ್ಭಗುಡಿ (ಚಿತ್ರ ೨೧)



ಚಿತ್ರ ೨೧

ಪಶ್ಚಿಮದ ಗರ್ಭಗುಡಿಯು ಈ ದೇವಾಲಯದ ಮುಖ್ಯ ಗರ್ಭಗುಡಿಯೂ ಹೌದು. ಇದಕ್ಕೆ  ಹೊಂದಿಕೊಂಡಂತೆ ಶುಕನಾಸಿ ಇದೆ. ಶುಕನಾಸಿದ್ವಾರದಲ್ಲಿ ಇಕ್ಕೆಲಗಳಲ್ಲಿ ದ್ವಾರಪಾಲಕರ (ಇವರನ್ನು ಭದ್ರ, ಸುಭದ್ರ ಎಂದು ತಜ್ಞರು ಗುರುತಿಸಿದ್ದಾರೆ) ವಿಗ್ರಹಗಳಿವೆ. ದ್ವಾರಪಾಲಕರ ಮೇಲೆ ಜಾಲಂದ್ರವಿದೆ. ಗರ್ಭಗುಡಿಯ ದ್ವಾರವು ಸುಂದರವಾಗಿದ್ದು ಅದರ ದ್ವಾರಬಂಧದ ಮೇಲೆ ಷಡ್ಭುಜ ನೃತ್ಯಲಕ್ಷ್ಮೀ (ಪದ್ಮ, ಅಂಕುಶ, ಸ್ವರ್ಗ ಹಸ್ತ, ಶಂಖ, ಲಂಬಹಸ್ತ, ಕಳಶ) ಮತ್ತು ಗಾಯಕರು ಇದ್ದಾರೆ. ಗರ್ಭಗೃಹದಲ್ಲಿ ಗೋಪುರವುಳ್ಳ ಮೂರು ಗೋಡೆಗಳಿದ್ದು, ಮೇಲ್ಚಾವಣಿಯಲ್ಲಿ ಪದ್ಮ ಇದೆ. ಈ ವಿಗ್ರಹದ ತೋರಣದಲ್ಲಿ ದಶವತಾರಗಳಿವೆ.

 

ಇಲ್ಲಿನ ಕೇಶವ ವಿಗ್ರಹವು ಹೊಯ್ಸಳರ ಕಾಲದ್ದಲ್ಲವೆಂದೂ, ಬಹುಶಃ ವಿಜಯನಗರದ ಅರಸರ ಕಾಲದಲ್ಲಿ ಮೂಲ ಹೊಯ್ಸಳ ವಿಗ್ರಹವನ್ನು ತೆಗೆದು, ಈಗಿರುವ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಲಾಯಿತೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

 

ಉತ್ತರದ ಗರ್ಭಗುಡಿ (ಚಿತ್ರ ೨೨)



ಚಿತ್ರ ೨೨

ಉತ್ತರ ಗರ್ಭಗುಡಿಯ ದ್ವಾರದ ಮೇಲೆ ಆಸೀನ ಲಕ್ಷ್ಮೀನರಸಿಂಹ, ಪ್ರಹ್ಲಾದ, ಗರುಡ, ಲತಾತೋರಣದಲ್ಲಿ ದಶಾವತಾರಗಳು ಇವೆ. ಮೇಲ್ಚಾವಣಿಯಲ್ಲಿ ಯೋಗನರಸಿಂಹ ಇದ್ದರೂ, ಒಳಗೆ ಗರುಡ ಪೀಠದ ಮೇಲೆ ಲಕ್ಷ್ಮೀನರಸಿಂಹ ವಿಗ್ರಹವಿದೆ. ಪೀಠದ ಮೇಲೆ ಗರುಡ, ತೋರಣದಲ್ಲಿ ದಶಾವತಾರಗಳು ಇವೆ. ದೇವಾಲಯದ ಮೂಲ ವಿಗ್ರಹ ಕೇಶವನದಾದರೂ ಬಹಳಷ್ಟು ಜನ ಈ ದೇವಾಲಯವನ್ನು ಲಕ್ಷ್ಮೀನರಸಿಂಹ ದೇವಾಲಯವೆಂದೇ ಕರೆಯುತ್ತಾರೆ.

 

ಕೇಶವ ದೇವಾಲಯದ ಶಾಸನದ  ಆಯ್ದ ಭಾಗ



ಗ್ರಂಥಋಣ

1.     Mysore Archaeological Report

2.     ಹೊಯ್ಸಳ ವಾಸ್ತುಶಿಲ್ಪ. ಡಾ. ಶ್ರೀಕಂಠ ಶಾಸ್ತ್ರಿ




 


Comments

  1. ಭಾವಚಿತ್ರಗಳನ್ನು ನೋಡುತ್ತಿದ್ದರೆ ಅರ್ಧದಿನವಾದರೂ ಬೇಕು ಪೂರ್ಣ ದೇವಾಲಯ ನೋಡಲು ಎನಿಸುತ್ತದೆ. ಬಹಳ ಒಳ್ಳೆಯ ಮಾಹಿತಿ ಮತ್ತು ಅದ್ಭುತ ಚಿತ್ರಗಳನ್ನು ಒದಗಿಸಿದ್ದಕ್ಕಾಗಿ ಧನ್ಯವಾದಗಳು Sir

    ReplyDelete

Post a Comment