ಚೆನ್ನಕೇಶವದೇವಾಲಯ ಅರಳಗುಪ್ಪೆ ಭಾಗ - 3

 ಚೆನ್ನಕೇಶವದೇವಾಲಯ ಅರಳಗುಪ್ಪೆ  ಭಾಗ - 

ಲೇಖನ - ಮೈಸೂರು ಶ್ರೀನಿವಾಸ ಪುಟ್ಟಿ 

ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನಲ್ಲಿರುವ ಅರಳಗುಪ್ಪೆ ಗ್ರಾಮವು ತುಮಕೂರಿನಿಂದ ತಿಪಟೂರು ರೈಲು ಮಾರ್ಗದಲ್ಲಿ ಸುಮಾರು 60 ಕಿ.ಮೀ. ದೂರದಲ್ಲೂ, ತಿಪಟೂರಿನಿಂದ, ತುಮಕೂರು ಮಾರ್ಗದಲ್ಲಿ 15 ಕಿ.ಮೀ. ದೂರದಲ್ಲೂ ಇದೆ. ಶಾಸನಗಳಲ್ಲಿ ಅಲರಿಗುಪ್ಪೆ ಎಂದು ಕರೆಯಲ್ಪಟ್ಟಿರುವ ಈ ಗ್ರಾಮದಲ್ಲಿ ಹಲವು ಪ್ರಾಚೀನ ಕಟ್ಟಡಗಳಿದ್ದು, ಅವುಗಳಲ್ಲಿ ಹೊಯ್ಸಳ ಶೈಲಿಯ ಕೇಶವ ದೇವಾಲಯ ಪ್ರಮುಖವಾದದ್ದಾಗಿದೆ. .........

ಭಾಗ ೧ ಲಿಂಕ್ ಇಲ್ಲಿದೆ  https://horanadachilumesydney.blogspot.com/2021/03/1.html

ಭಾಗ  ಲಿಂಕ್ ಇಲ್ಲಿದೆ  https://horanadachilumesydney.blogspot.com/2021/04/2.html


ಮುಂದುವರೆದ  ಭಾಗ   .......

ಅದ್ಭುತ ಕೆತ್ತನೆಯ  ೧. ನವರಂಗದ ಆಗ್ನೇಯ ಮುಖ  



೧,೨ ಆದಿಶೇಷನ ಮೇಲೆ ಕುಳಿತಿರುವ ಅಮರನಾರಾಯಣ ಮತ್ತು ಲಕ್ಷ್ಮೀ.

2. ನವರಂಗದ ದಕ್ಷಿಣ ಮುಖ
ಈ ಮುಖದಲ್ಲಿ 18 ವಿಗ್ರಹಗಳಿದ್ದು , ನೊಡುಗರ ಬಲಗಡೆಯಿಂದ ಇಂತಿವೆ:
 

 

೩. ನೃತ್ಯ ಗಣಪತಿ ೪.ಸಹಾಯಕಿಯೊಬ್ಬಳು ಮೋಹಿನಿಯ ಕಾಲಿನಿಂದ ಮುಳ್ಳನ್ನು ತೆಗೆಯುತ್ತಿರುವುದು.
೫,೬. ಷಡ್ಭುಜ  ವೀಣಾಪಾಣಿ ನೃತ್ಯ ಸರಸ್ವತೀ.
೭,೮,೯. ಇಬ್ಬರು ದೇವಿಯರ ನಡುವೆ ಸ್ಥಾನಕ ಹರಿಹರ. ಅವನ ಕೈಗಳಲ್ಲಿ ಅಕ್ಷಮಾಲಾ, ಚಕ್ರ, ಶಂಖ, ದಂಡ. (ಶಿಲ್ಪಿ: ಹನೋಜ)
೧೦. ಷಡ್ಭುಜ ದೇವಿ (ಹರಿಹರೇಶ್ವರಿ ?) ಅವಳ ಕೈಗಳಲ್ಲಿ ಮುಸಲ, ಪದ್ಮ, ಚಕ್ರ, ಶಂಖ, ಪಾಶ ಮತ್ತು ಕಪಾಲ.
೧೧. ಕೇಶವ. (ಶಂಖ,ಚಕ್ರ, ಇಳಿಬಿಟ್ಟಿರುವ ಕೈ, ಪದ್ಮ)
೧೨. ವೇಣುಗೋಪಾಲ.
೧೩. ಕೃಷ್ಣ.
೧೪. ಲಕ್ಷ್ಮೀನರಸಿಂಹ.
೧೫. ಷಡ್ಭುಜ ರಾಮ. (ಬಾಣ, ಚಕ್ರ,ಪದ್ಮ, ಶಂಖ,ಮುಸಲ,ಬಿಲ್ಲು)

೧೬. ಷಡ್ಭುಜ ವಿಷ್ಣು. (ಅಭಯ, ಬಾಣ,ಶಂಖ,ಪದ್ಮ, ಬಿಲ್ಲು,ವರದ ಹಸ್ತ )
೧೭. ಷಡ್ಭುಜ ಸ್ಥಾನಕ ಲಕ್ಷ್ಮೀ. (ಪದ್ಮ, ಅಂಕುಶ, ಚಕ್ರ, ಶಂಖ, ಪಾಶ, ಫಲ)
೧೮. ಚತುರ್ಭುಜ ಯೋಗನಾರಾಯಣ - ಶಿಲ್ಪಿ ಹನೋಜ.
೧೯. ಪುಷ್ಪಗಳನ್ನು ಅರ್ಪಿಸುತ್ತಿರುವ ಸ್ತ್ರೀ.
೨೦. ಷಡ್ಭುಜ ವಿಷ್ಣು. (ಚಕ್ರ,?? ಪಾಶ, ಗುರಾಣಿ, ಶಂಖ (ಎರಡು ಕೈಗಳು ಗೋಡೆಯಲ್ಲಿ ಮರೆಯಾಗಿವೆ))
ಮೇಲೆ ಹೇಳಿರುವ ವಿಷ್ಣುವಿನ ಮೂರ್ತಿಯ ನಂತರ ಕೆಲವು ಶಿಲ್ಪಗಳು ನರಸಿಂಹ ದೇವಾಲಯದ ಗೋಡೆಯಿಂದ ಮುಚ್ಚಿಹೋಗಿವೆ.
 
3. ಗರ್ಭಗೃಹದ ಪಶ್ಚಿಮ ಮುಖ

 

 
೨೧. ?
೨೨. ಅಷ್ಟಭುಜ ನೃತ್ಯ ಸರಸ್ವತೀ (ಭಗ್ನ, ಭಗ್ನ, ಅಂಕುಶ, ಅಕ್ಷಮಾಲ, ಪುಸ್ತಕ,ಪಾಶ,ತಾಳ,ವೀಣೆ) ಇಕ್ಕೆಲಗಳಲ್ಲಿ ಡಮರು ಬಾರಿಸುತ್ತಿದ್ದಾರೆ.
 



೨೩,೨೪. ಪದ್ಮ ಮತ್ತು ಫಲದೊಂದಿಗೆ ದೇವಿ.
೨೫. ಕಲ್ಕಿಯ ಅವತಾರದಲ್ಲಿ  ವಿಷ್ಣು.(ಕತ್ತಿ, ಚಕ್ರ, ಶಂಖ, ಅಭಯ)









೨೬. ವರದರಾಜ. (ದಾನ, ಚಕ್ರ, ಶಂಖ, ಅಭಯ)
೨೭. ಲಕ್ಷ್ಮೀ.
೨೮. ವಿಚಿತ್ರಭಂಗಿಯಲ್ಲಿ ಚತುರ್ಭುಜ ವಿಷ್ಣು. (ಬಾಣ, ಚಕ್ರ, ಬಾಳೆ/ಕಬ್ಬು, ? ಬಿಲ್ಲು)












೨೯. ಅಷ್ಟಭುಜ ತ್ರಿಮೂರ್ತಿ. (ಕತ್ತಿ,ಭಗ್ನ,ತ್ರಿಶೂಲ,ಚಕ್ರ,ಶಂಖ,ಪಾಶ,ಪದ್ಮ,ಗುರಾಣಿ)
೩೦. ಸ್ಥಾನಕ ದೇವಿ.
೩೧,೩೨. ಜನಾರ್ದನ (ಚ-ಶಂ-?-ಪ) ಎಡದಲ್ಲಿ ಲಕ್ಷ್ಮೀ.
 

 
೩೩. ಚತುರ್ಭುಜ ‌ಹರಿಹರ. (ಕತ್ತಿ,ಚಕ್ರ,ಶಂಖ, ತ್ರಿಶೂಲ)
೩೪. ನಾಗನನ್ನು ಹಿಡಿದು ನರ್ತಿಸುತ್ತಿರುವ ಮೋಹಿನಿ.
೩೫,೩೬. ಸ್ಥಾನಕ ವಿಷ್ಣು (ಚಕ್ರ, ಮುಸಲ,ಮುಸಲ,ಶಂಖ), ಎಡದಲ್ಲಿ ಲಕ್ಷ್ಮೀ.
 
4.ಗರ್ಭಗೃಹದ ಉತ್ತರ ಮುಖ


 

೩೭,೩೮. ಬಲರಾಮನ ರೂಪದಲ್ಲಿ ವಿಷ್ಣು(ಅಭಯ, ಮುಸಲ, ಚಕ್ರ,‌ ಶಂಖ), ಬಲದಲ್ಲಿ ಲಕ್ಷ್ಮೀ. ೩೯. ಪರಶುರಾಮ (ಪದ್ಮ, ಪರಶು,ಚಕ್ರ,ಮುಸಲ)
 

 
೪೦. ಹಲಾಯುಧ. (?,ನೇಗಿಲು,ಚಕ್ರ,ಮುಸಲ)
೪೧,೪೨. ಲಕ್ಷ್ಮೀ.
೪೩. ಹಲಾಯುಧ. (ಪದ್ಮ,ನೇಗಿಲು,ಚಕ್ರ, ಮುಸಲ)

೪೪. ಬಲದಲ್ಲಿ ಲಕ್ಷ್ಮಿಯೊಂದಿಗೆ ವಿಷ್ಣು. (ಅಭಯ,ಚಕ್ರ,ಶಂಖ,ಮುಸಲ)
೪೬,೪೭. ಎಡದಲ್ಲಿ ಲಕ್ಷ್ಮಿಯೊಂದಿಗೆ ಅಷ್ಟಭುಜ ಹರಿಹರ. (ಅಕ್ಷಮಾಲ,ಚಕ್ರ,ಸರ್ಪ, ಪದ್ಮ ಶಂಖ,ನೇಗಿಲು, ಮುಸಲ,ಅಭಯ)


೪೮. ಸ್ಥಾನಕ ವಿಷ್ಣು - ಮುಂದಿನ ಎರಡು ಕೈಗಳು ಯೋಗಮುದ್ರೆಯಲ್ಲಿಯೂ, ಉಳಿದೆರಡು ಕೈಗಳಲ್ಲಿ ಆಯುಧಗಳು (ಶಂಖ,‌ಚಕ್ರ) ಇವೆ.













೪೯,೫೦,೫೧. ಇಬ್ಬರು ದೇವಿಯರ ನಡುವೆ ಸ್ಥಾನಕ ವಿಷ್ಣು. (ಪದ್ಮ,ಮುಸಲ,ಚಕ್ರ,ಶಂಖ)
೫೨,೫೩,೫೪. ಇಬ್ಬರು ದೇವಿಯರ ನಡುವೆ ಕಾಳಿಂಗಮರ್ದನ.
೫೫. ಪದ್ಮ, ಫಲಗಳನ್ನು ಹಿಡಿದಿರುವ ಸ್ತ್ರೀ., ೫೬. ಗರುಡ
 

೫೭,೫೮,೫೯. ಇಬ್ಬರು ದೇವಿಯರ‌ ನಡುವೆ ವಿಷ್ಣು. (ಮುಸಲ,ಪದ್ಮ,ಗದಾ,ಚಕ್ರ)
೬೦,೬೧. ವಿಷ್ಣು (ಫಲ,ಚಕ್ರ,ಪಾಶ,ಮುಸಲ),ಬಲದಲ್ಲಿ ಲಕ್ಷ್ಮೀ.
೬೨. ಕಪಿಯೊಂದರಿಂದ ಪೀಡಿಸಲ್ಪಡುತ್ತಿರುವ ಮೋಹಿನಿ.
೬೩. ಮಾಧವ.

 


೬೪,೬೫. ವರದರಾಜ, ಲಕ್ಷ್ಮೀ.  
೬೬. ಅಷ್ಟಭುಜ ಸ್ಥಾನಕ ವಿಷ್ಣು. (ಮುಸಲ, ಬಾಣ,ಪದ್ಮ, ಚಕ್ರ,ಬಿಲ್ಲು,ಶಂಖ, ಅಂಕುಶ, ಪುಸ್ತಕ), ೬೭. ದೇವತೆ.
೬೮,೬೯. ದೇವಿಯೊಂದಿಗೆ ಸ್ಥಾನಕ ಪುರುಷ ವಿಗ್ರಹ. (ಅಕ್ಷಮಾಲ,ವಜ್ರ,? ಪಾತ್ರೆ, ಭಗ್ನ)
 

 







೭೦. ವೆಂಕಟೇಶ. (ಶಂಖ,ಚಕ್ರ,ಕಟಿಹಸ್ತ,ಅಭಯ), ೭೧. ಹರಿಹರ (ತ್ರಿಶೂಲ,?,ಶಂಖ,ಅಕ್ಷಮಾಲ)
೭೨. ವಿಷ್ಣು. (ಮುಸಲ,ಚಕ್ರ,ಶಂಖ,ದಾನ)

 
೭೩. ಲಕ್ಷ್ಮೀನಾರಾಯಣ.
೭೪. ಚತುರ್ಭುಜ ವಿಷ್ಣು. (ರೆಂಬೆ,ಚಕ್ರ,ಶಂಖ,ಪದ್ಮ)
೭೫. ಚತುರ್ಭುಜ ವಿಷ್ಣು. (ಮುಂದಿನ ಕೈಗಳು ಅಂಜಲೀ ಮುದ್ರೆಯಲ್ಲಿವೆ ಮತ್ತು ಹಿಂದಿನ ಕೈಗಳಲ್ಲಿ ಚಕ್ರ ಮತ್ತು ಶಂಖ ಇವೆ)
೭೬. ಶ್ರೀರಾಮ. (ಬಾಣ, ಶಂಖ,ಚಕ್ರ,ಬಿಲ್ಲು)
೭೭. ಅಷ್ಟಭುಜ ಹರಿಹರ (ಮುಸಲ, ತ್ರಿಶೂಲ,ಗದೆ,ಚಕ್ರ,ಶಂಖ, ಅಂಕುಶ,ಪರಶು,ಮುಸಲ)
೭೮,೭೯. ಲಕ್ಷ್ಮೀ, ವಿಷ್ಣು. (ಶಂಖ,ಚಕ್ರ,ಶಂಖ,ಪದ್ಮ)
೮೦,೮೧. ಗೋಡೆಯಿಂದ ಮರೆಯಾಗಿದೆ.
೮೨. ಲಕ್ಷ್ಮೀ.
೮೩,೮೪. ಲಕ್ಷ್ಮೀ, ಅಷ್ಟಭುಜ ನೃತ್ಯ ವಿಷ್ಣು. (ಅಕ್ಷಮಾಲ,?,ಚಕ್ರ,ಭಗ್ನ, ಶಂಖ ,?,ಲಂಬ ಹಸ್ತ,ಕಳಶ)
೮೫,೮೬. ಹರಿಹರ (ಪದ್ಮ, ಚಕ್ರ,ಶಂಖ, ತ್ರಿಶೂಲ),ಬಲದಲ್ಲಿ ದೇವಿ.
 


 
III. ಮೇಲ್ಚಾವಣಿ ಮತ್ತು ಕೈಪಿಡಿ ಗೋಡೆ
 
ಮೇಲ್ಚಾವಣಿಯ ಬೋದಿಗೆ ಮತ್ತು ಕೈಪಿಡಿ ಗೋಡೆಯಮೇಲೆ ಲತೆ,ಮಕರ,ಕೀರ್ತಿ ಮುಖ ಮತ್ತು ಯಕ್ಷರ ಸಾಲುಗಳಿವೆ. ಅಲ್ಲದೇ, ಪೂರ್ವದಲ್ಲಿ ಷಡ್ಭುಜ ನೃತ್ಯ ಲಕ್ಷ್ಮೀ, ದಕ್ಷಿಣದಲ್ಲಿ ಷಡ್ಭುಜ ವಿಷ್ಣು ಮತ್ತು ಉತ್ತರದಲ್ಲಿ ಯೋಗಲಕ್ಷ್ಮೀ ವಿಗ್ರಹಗಳನ್ನು ಕಾಣಬಹುದು.
 
 
 
IV.ಶಿಖರ

 
ಶಿಖರವು ನಾಲ್ಕು ಅಂತಸ್ತಿನದಾಗಿದ್ದು ಕಳಶರಹಿತವಾಗಿದೆ. ಶಿಖರದ ಮುಂಭಾಗದಲ್ಲಿ ಇತ್ತೆಂದು ಹೇಳುವ ಸಳ ವಿಗ್ರಹವು ಈಗ ಮಾಯವಾಗಿದೆ.
 
 
V. ನವರಂಗ
 
ಒಂಬತ್ತು ಅಂಕಣಗಳನ್ನು ಹೊಂದಿರುವ ನವರಂಗಕ್ಕೆ ಪೂರ್ವ ದಿಂದ ಪ್ರವೇಶವಿದೆ ಇಲ್ಲಿನ ಪಶ್ಚಿಮದ ಗೋಡೆಯ ಗೂಡುಗಳಲ್ಲಿ ದಕ್ಷಿಣಕ್ಕೆ ಗಣೇಶ,ಉತ್ತರಕ್ಕೆ ಮಹಿಷಮರ್ದಿನಿ ವಿಗ್ರಹಗಳಿವೆ. ಇದಲ್ಲದೇ ಆರು ಅಡಿ ಎತ್ತರದ ಭಗ್ನವಾಗಿರುವ ಕೇಶವ ವಿಗ್ರಹವನ್ನೂ ಕಾಣಬಹುದು.ಕೇಶವನ ಈ ವಿಗ್ರಹವು ದೇವಾಲಯದ ಮೂಲವಿಗ್ರಹವಾಗಿದ್ದಿರಬಹುದೆಂದು ತಜ್ಞರು ಊಹಿಸುತ್ತಾರೆ.
 
 
 
 
VI.ಭುವನೇಶ್ವರಿ
 
ನವರಂಗದಲ್ಲಿ ಒಂಬತ್ತು ಮತ್ತು ಮುಖಮಂಟಪದಲ್ಲಿ ಒಂದು ಅಂದರೆ ಒಟ್ಟು ಹತ್ತು ಭುವನೇಶ್ವರಿಗಳನ್ನು ಈ ದೇವಾಲಯದಲ್ಲಿ ಕಾಣಬಹುದು. ದೇವಾಲಯದ ಪೂರ್ವದ್ವಾರದಿಂದ ಒಳಬಂದು, ಪ್ರದಕ್ಷಿಣಾಕಾರವಾಗಿ ಮುಂದುವರೆದಾಗ ಕಾಣುವ ಮುಖ್ಯ ಭುವನೇಶ್ವರಿಗಳು ಇಂತಿವೆ:
 
1. ಅಷ್ಟದಿಕ್ಪಾಲಕರು ಮತ್ತು ಅವರ ಮೇಲೆ ಯಕ್ಷರುಗಳು, ಭುವನೇಶ್ವರಿಯ ಮಧ್ಯದಲ್ಲಿ ಕಮಲದ ಕೇಸರ ಮೇಲಿನಿಂದ ಜೋತಾಡುತ್ತಿರುವಂತೆ ತೋರಿಸಲಾಗಿದೆ.
2. ಹನ್ನೆರಡು ಕೋನಗಳುಳ್ಳ ನಕ್ಷತ್ರಾಕಾರದ ರಚನೆ.
3. ಆರು ಕೋನಗಳ ನಕ್ಷತ್ರಾಕಾರದ ರಚನೆ.
4. ಅಷ್ಟಕೋನಾಕೃತಿಗಳು.
5. ಶ್ರೀ ಚಕ್ರಗಳು.
8. ಅಷ್ಟಕೋನಗಳ ನಕ್ಷತ್ರಾಕಾರದ ರಚನೆಗಳು
 
VII.ಶುಕನಾಸಿ
 
ಶುಕನಾಸಿ ದ್ವಾರದಲ್ಲಿ ಜಾಲಂದ್ರ, ದ್ವಾರಪಾಲಕರು,ಮೇಲೆ ಅಮರನಾರಾಯಣ,ಐದು ಉಪಗೋಪುರಗಳು ಹಾಗೂ ಈ ಗೋಪುರಗಳ ನಡುವೆ ಸಿಂಹಗಳನ್ನು ಕಾಣಬಹುದು.
 
VIII.ಗರ್ಭಗೃಹ
 
ಗರ್ಭಗೃಹದ ದ್ವಾರದ ಮೇಲೆ ಲಕ್ಷ್ಮೀನಾರಾಯಣ,ಅಕ್ಕ- ಪಕ್ಕಗಳಲ್ಲಿ ದ್ವಾರಪಾಲಕರು ಮತ್ತು ಮೇಲ್ಚಾವಣಿಯಲ್ಲಿ ಪದ್ಮಗಳನ್ನು ಕಾಣಬಹುದು.ಗರ್ಭಗೃಹದ ಮಧ್ಯದಲ್ಲಿ ಗರುಡ ಪೀಠದ ಮೇಲೆ ಸಣ್ಣ ಕೇಶವ ವಿಗ್ರಹವಿದೆ. ಈ ವಿಗ್ರಹವು ಮೂಲ ವಿಗ್ರಹದಂತೆ ಕಾಣುವುದಿಲ್ಲ ಕೇಶವ ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಉಬ್ಬುಶಿಲ್ಪಗಳನ್ನು ಕಾಣಬಹುದು.















ಗ್ರಂಥಋಣ - Mysore Archaeological Report

Comments

  1. well explained article. without your details we can relate and see the sculpture details. Absolutely amazing information sir.

    ReplyDelete
  2. Thank you very much for the kind words - Srinivasa Putty.

    ReplyDelete
  3. ಮತ್ತೊಮ್ಮೆ ಒಳ್ಳೆಯ ಮಾಹಿತಿಯ ಮತ್ತು ಅತ್ಯುತ್ತಮ ಚಿತ್ರಗಳನ್ನೊಳಗೊಂಡ ಲೇಖನ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಶ್ರೀ ಶ್ರೀನಿವಾಸ ಪುಟ್ಟಿಯವರಿಗೆ.

    ReplyDelete

Post a Comment