ಚೆನ್ನಕೇಶವದೇವಾಲಯ ಅರಳಗುಪ್ಪೆ ಭಾಗ - 2

ಚೆನ್ನಕೇಶವದೇವಾಲಯ ಅರಳಗುಪ್ಪೆ  ಭಾಗ - 

ಲೇಖನ - ಮೈಸೂರು ಶ್ರೀನಿವಾಸ ಪುಟ್ಟಿ 

ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನಲ್ಲಿರುವ ಅರಳಗುಪ್ಪೆ ಗ್ರಾಮವು ತುಮಕೂರಿನಿಂದ ತಿಪಟೂರು ರೈಲು ಮಾರ್ಗದಲ್ಲಿ ಸುಮಾರು 60 ಕಿ.ಮೀ. ದೂರದಲ್ಲೂ, ತಿಪಟೂರಿನಿಂದ, ತುಮಕೂರು ಮಾರ್ಗದಲ್ಲಿ 15 ಕಿ.ಮೀ. ದೂರದಲ್ಲೂ ಇದೆ. ಶಾಸನಗಳಲ್ಲಿ ಅಲರಿಗುಪ್ಪೆ ಎಂದು ಕರೆಯಲ್ಪಟ್ಟಿರುವ ಈ ಗ್ರಾಮದಲ್ಲಿ ಹಲವು ಪ್ರಾಚೀನ ಕಟ್ಟಡಗಳಿದ್ದು, ಅವುಗಳಲ್ಲಿ ಹೊಯ್ಸಳ ಶೈಲಿಯ ಕೇಶವ ದೇವಾಲಯ ಪ್ರಮುಖವಾದದ್ದಾಗಿದೆ. .........

ಭಾಗ ೧ ಲಿಂಕ್ ಇಲ್ಲಿದೆ  https://horanadachilumesydney.blogspot.com/2021/03/1.html

ಭಾಗ ೨  .......

5.ಗರ್ಭಗೃಹದ ಪಶ್ಚಿಮ ಮುಖ

೧೫. ರಾಮ, ಲಕ್ಷ್ಮಣ, ಸೀತೆಯರು ಗೋದಾವರಿ ನದೀ ತೀರದಲ್ಲಿ ವಾಸಿ‌ಸುತ್ತಿರುವುದು.

೧೬. ರಾಮ, ಲಕ್ಷ್ಮಣರಿಂದ ರಾಕ್ಷಸನೊಬ್ಬನ ಸಂಹಾರ. 

೧೭. ? (ಗುರುತಿಸಬೇಕಿದೆ) 

೧೮. ವಿರಾಧನ ಸಂಹಾರ. 

೧೯. ಶೂರ್ಪನಖಿಯ ನಾಸಿಕಾ ಛೇದ ಮತ್ತು ಕಬಂದುವಿನ ಸಂಹಾರ.







೨೦.ಚಿನ್ನದ ಜಿಂಕೆಯನ್ನು ಬೆನ್ನಟ್ಟಿ ಹೋಗುತ್ತಿರುವ ರಾಮ.(ಚಿತ್ರ ೬)



 ರಾವಣನಿಂದ ಸೀತಾಪಹರಣ, ಜಟಾಯು ವಧೆ. (ಚಿತ್ರ ೭)


6. ಗರ್ಭಗೃಹದ ಉತ್ತರ ಮುಖ 

೨೧. ಸುಗ್ರೀವನ ಪಟ್ಟಾಭಿಷೇಕ ಮತ್ತು ದರ್ಬಾರ್. (ಚಿತ್ರ ೮)

೨೨. ಸೀತಾನ್ವೇಷಣೆಗೆ ಹನುಮಂತವನ್ನು ಕಳುಹಿಸುತ್ತಿರುವ ರಾಮ. 



 



೨೩. ರಾಮನಿಗೆ ಸುದ್ದಿ ಮುಟ್ಟಿಸುತ್ತಿರುವ ಹನುಮಂತ. (ಚಿತ್ರ ೯)

೨೪. ದರ್ಭಾಶಯನ. 





೨೫. ಬಹುಶಿರದ ವ್ಯಕ್ತಿ ಬಹುಶಃ ರಾವಣ.(ಚಿತ್ರ ೧೦)

೨೬. ನಿಂತಿರುವ ರಾಮ, ಲಕ್ಷ್ಮಣ, ಸೀತಾ. 

೨೭. ಮೆರವಣಿಗೆಯಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಸೀತೆ.

7. ಶುಕನಾಸಿಯ ಉತ್ತರ ಮುಖ

೨೮. ಸಂಗೀತ ಮತ್ತು ನೃತ್ಯ ದೊಡನೆ ರಾಮ ಪಟ್ಟಾಭಿಷೇಕದ ಮೆರವಣಿಗೆ. 

ಇಲ್ಲಿಗೆ ರಾಮಾಯಣದ ಕತೆ ಮುಕ್ತಾಯವಾಗಿ, ಭಾಗವತ ಕತೆ ಪ್ರಾರಂಭವಾಗುತ್ತದೆ 

8.ನವರಂಗದ ವಾಯವ್ಯ ಮುಖ (Northwest of Navaranga)

೨೯. ವೈಕುಂಠದಲ್ಲಿ ಲಕ್ಷ್ಮೀನಾರಾಯಣ. 

೩೦. ಚರ್ಚೆಯಲ್ಲಿ ತೊಡಗಿರುವ ಲಕ್ಷ್ಮೀನಾರಾಯಣ ಮತ್ತು ದುರ್ಗೆ.

೩೧. ಗೋಕುಲದಲ್ಲಿರುವ ಯಶೋದೆಯ ಬಳಿಗೆ ಕೃಷ್ಣನನ್ನು ತರುತ್ತಿರುವ ವಾಸುದೇವ.



 



೩೨. ನವಜಾತ ಶಿಶು ಕೃಷ್ಣನ ಸಂಹಾರಮಾಡಲು ಪ್ರಯತ್ನಿಸಿದ ಕಂಸನಿಗೆ ಶಿಕ್ಷೆ ನೀಡುತ್ತಿರುವ ದುರ್ಗೆ.(ಚಿತ್ರ ೧೧)


 9.ನವರಂಗದ ಉತ್ತರ ಮುಖ

೩೩. ಕಂಸನ ದರ್ಬಾರ್. 

೩೪. ಗೋಕುಲದಲ್ಲಿ ಕೃಷ್ಣನ ಬೆಳವಣಿಗೆ.





೩೫. ಬೆಳಯುತ್ತಿರುವ ಕೃಷ್ಣನನ್ನು ಮುದ್ದಾಡುತ್ತಿರುವ ಸ್ತ್ರೀಯರು,ತೊಟ್ಟಿಲಿನಲ್ಲಿ ಕೃಷ್ಣ, ಅಂಬೆಗಾಲಿಡುತ್ತಿರುವ ಕೃಷ್ಣ.(ಚಿತ್ರ ೧೨)

೩೬. ಕೃಷ್ಣನಿಂದ ಪೂತನೀ ಸಂಹಾರ.



 


೩೭. ಕೃಷ್ಣನಿಗೆ ಗಾಡಿಗಳಲ್ಲಿ ಬೆಣ್ಣೆ ಮೊಸರುಗಳ ರವಾನೆ.(ಚಿತ್ರ ೧೩)



 



೩೮. ಕೃಷ್ಣನಿಂದ ಜೋಡಿ ಮರಗಳ ನಾಶ.(ಚಿತ್ರ ೧೪) 

೩೯. ಧೇನುಕಾಸುರ ಸಂಹಾರ.

10. ನವರಂಗದ ಈಶಾನ್ಯ (Northeast of Navaranga)


 ೪೦. ಕೃಷ್ಣನಿಂದ ಕಂಸನ ಆನೆಯ ಸಂಹಾರ. (ಚಿತ್ರ ೧೫)






೪೧. ಕಾಳಿಂಗ ಮರ್ದನ.(ಚಿತ್ರ ೧೬)

೪೨. ಗೋಪಿಯರಿಂದ ಕೃಷ್ಣನ ಮೆಚ್ಚುಗೆ. 

ದೇವಾಲಯ ಮುಂಭಾಗದಲ್ಲಿನ ಮೇಲಿನ ಎರಡು ಪಟ್ಟಿಕೆಗಳಲ್ಲಿ ಅರೆಗಂಬಗಳ ನಡುವೆ ಕುಳಿತಿರುವ ಯಕ್ಷರು ಮತ್ತು ಉಪಗೋಪುರಗಳನ್ನು ಕಾಣಬಹುದು. ಉಪಗೋಪುರಗಳ ಮೇಲಿನ ಸಾಲಿನಲ್ಲಿ ಲತಾಪಟ್ಟಿಕೆ ಇದೆ. ಇದಲ್ಲದೆ ಸ್ತ್ರೀಯರನ್ನೂ , ಸಂಗೀತಗಾರರನ್ನೂ ಮತ್ತು ಸೈನಿಕರನ್ನೂ ಕಾಣಬಹುದು.

ಅದ್ಭುತ ಕೆತ್ತನೆಯ  ೧. ನವರಂಗದ ಆಗ್ನೇಯ ಮುಖ  

ಲೇಖನ ಭಾಗ ೩ರಲ್ಲಿ  ಮುಂದುವರೆದುದು.............

 

Comments

  1. ಸಾಲು ಕೆತ್ತನೆ ಸೊಗಸಾಗಿವೆ. ೪೨ ರ ಹಾಗೆ ಇನ್ನೂ ಕೆಲವಿ ಚಿತ್ರಗಳಿಗೆ ಪುಟ್ಟ ವಿವರಣೆ ನೀಡಿದರೆ ಚೆನ್ನ ಎಂದು ನನ್ನ ಭಾವನೆ. ಈ ಒಳ್ಳೆಯ ಸರಣಿ ಲೇಖನದಿಂದ ಅರಳುಗುಪ್ಪೆ ಥರದ ಸ್ಥಳ ಪರಿಚಯಿಸಿದ್ದಕ್ಕೆ ಧನ್ಯವಾದಗಳು

    ReplyDelete

Post a Comment