ಧ್ವನಿ ಸುರುಳಿ

Tuesday Tuner ಆಶಾ ಆರ್ ವಿಶ್ವನಾಥ್  


ಅಂಕಣ 36 - ನಾವು ನಮ್ ಕಥೆ (audio) NEW

ಅಂಕಣ 35 - ಹೇಳಿಕೊಳ್ಳೋದು ಹೆಣಭಾರ ! (audio) 

ಅಂಕಣ 34 - ಉಸಿರುಗಟ್ಟಿಸಿಕೊಳ್ಳಿ   NEW (audio) 🔊

ಅಂಕಣ 33 - ನಿರೀಕ್ಷಯೇ ನಿರಂತರಂ   (audio) 🔊

ಅಂಕಣ 30 -  ಗುಡ್ ನೈಟ್ ಸ್ಲೀಪ್ ಟೈಟ್ (audio) 🔊 






ಅಂಕಣ 16  -  ದಸರಾ  ಪೂರ್ಣತ್ವ 2   (audio) 🔊


ಅಂಕಣ 14 - ಜನರನ್ನು ಆಕರ್ಷಿಸಲು ೫ ಮುಖ್ಯಾಂಶಗಳು (audio) 🔊

ಅಂಕಣ  13 -  ನಾವು ಅವರಲ್ಲ. 🔊  

ಅಂಕಣ  12 -  ಆತ್ಮಹತ್ಯೆ ತಡೆಗೆ ಉಪಾಯವಿದೆ 🔊 

ಅಂಕಣ  11 -  ಗುರು-ಶಿಷ್ಯ ಪರಂಪರೆ 🔊 

ಅಂಕಣ 10  - ತೊದಲ್ನುಡಿ  🔊 

ಅಂಕಣ  9  ನನ್ನ ಮಾತು ನನ್ನದು 🔊 

ಅಂಕಣ  8  ಖಿನ್ನತೆ ಯಾರಿಗೆ ? 🔊

ಅಂಕಣ  7  ಆತ್ಮಹತ್ಯೆ ಮತ್ತು ಮನಸ್ಸು  🔊 

ಅಂಕಣ  6  ರೇಡಿಯೋ ಅನುಭವ 🔊 

ಅಂಕಣ 5  ಶಾಂತಲಾ  🔊 

ಅಂಕಣ 4   ಒಳ್ಳೆಯ ಕೇಳುಗ - 2 🔊 

ಅಂಕಣ 3   ಒಳ್ಳೆಯ ಕೇಳುಗ - 🔊 

ಅಂಕಣ 2 - ಅರುಣಿಮಾ ಸಿನ್ಹಾ 🔊

ಪರಿಚಯ  ಮತ್ತು ಅಂಕಣ 1 ಯಂತ್ರ ಮಾನವ 🔊


ವ್ಯಕ್ತಿಯ ಪರಿಚಯ 

ಶ್ರೀಮತಿ ಆಶಾ ಆರ್ ವಿಶ್ವನಾಥ್ 


ಶ್ರೀಮತಿ ಆಶಾ ಆರ್ ವಿಶ್ವನಾಥ್ ಬೆಂಗಳೂರಿನಿಂದ ಹಿಡಿದು ವಿಶ್ವದೆಲ್ಲೆಡೆ ಎಲ್ಲ ಸಾಹಿತ್ಯಾಸಕ್ತರ, ಕಲಾ, ಸಾಂಸ್ಕೃತಿಕಾಸಕ್ತರ ಹಾಗು ಕನ್ನಡ ರೇಡಿಯೋ ಆಸಕ್ತರ ಪ್ರೀತಿ ಪಾತ್ರರು, ಸ್ವತಃ ಸಂಗೀತಗಾರರು, ಧ್ವನಿದಾನಿಕೆ (ವಾಯ್ಸ್ ಓವರ್), ವಾಕ್ ಶಿಬಿರ ತರಬೇತುದಾರರು, ದೂರದರ್ಶನದಲ್ಲಿ ನಿರ್ಮಾಪಕಿಯಾಗಿರುವವರು, ವೃತ್ತಿಯಲ್ಲಿ Psychological counselor ಮನಶಾಸ್ತ್ರ ಆಪ್ತ ಸಲಹೆಗಾರ್ತಿ  ಬಹಳಷ್ಟು ಜನರ ಜೀವನಕ್ಕೆ ದೀಪವಾಗಿ ಬೆಳಗುತ್ತಿರುವ ಕೌನ್ಸೆಲರ್ ಸಹ, ಜೊತೆಗೆ  ಬರಹಗಾರರೂ ಹೌದು ಸಾಹಿತ್ಯಲೋಕದಲ್ಲಿ ಪಳಗಿದವರು, ಆಕಾಶವಾಣಿಯಲ್ಲಿ Tuesday Tuner ಎಂದು ಹೆಸರು ಮಾಡಿದವರು.

ಇವರ ಅತ್ಯಾಕರ್ಷಕ ಧ್ವನಿ ಸುರುಳಿಗಳು ಇಲ್ಲಿ ಲಭ್ಯ. ಕೇಳಿ, ಆನಂದಿಸಿ , ಅನುಭವಿಸಿ, ಹಂಚಿಕೊಳ್ಳಿ, ಅಭಿಪ್ರಾಯ ತಿಳಿಸಿ. 





Comments

  1. ಮನಸ್ಸಿಗೆ ಮುಟ್ಟುವಂತೆ ಹೇಳಿದ್ದೀರ.

    ReplyDelete
    Replies
    1. ಸ್ಪಂದಿಸಿದ್ದಕ್ಕಾಗಿ ಧನ್ಯವಾದಗಳು. ಮತ್ಯಾವುದರ ಬಗ್ಗೆ ಕೇಳಲು ಬಯಸುವಿರಿ ತಿಳಿಸಿ.. 🤗🙏

      Delete
  2. The first audio clip is very apt for the current 2021 rat race we are in, something to reflect on and ensure we enjoy the journey rather look at end state.
    The second audio clip is very inspiring and touching, such amazing grit and perseverance, hats off!
    The third audio clip is something to keep on top of the mind and remind ourselves to shut up and keep our opinions to Ourselves while listening.

    Thank you very much for these tuner clips Madam, much appreciated. Looking forward to more of these in coming weeks. May need to change this to a daily tuner :)

    ReplyDelete
    Replies
    1. Lol about your last line. ;) Tuesdaytuner is the title bestowed upon me by my listeners when i did regular shows on fm.Rainbow of All India Radio for 10 nonstop years. However thanks much for your opinion shared. all I share is my everyday life experience. keep your comments coming in and suggest any changes to be brought in..

      Delete
    2. Sorry, was not aware of the Tuesday Tuner legacy.

      Delete
  3. Very nice initiative by Horanada chilume team. Mrs Asha has very attractive voice, intresting subject chosen. Every audio is different & beautifully done short and effective. Feels like listening to morning FM station. wonderful

    ReplyDelete
  4. ಶ್ರೀಮತಿ ಆಶಾ ವಿಶ್ವನಾಥ್ ತಮ್ಮ ಧ್ವನಿ ಸುರುಳಿ ನಮ್ಮ ಪತ್ರಿಕೆಗೆ ಹೊಸ ಹುರುಪು ತಂದಿದೆ. ಆಡಿಯೋ ಮೂಲಕ ತಮ್ಮ ಅನುಭವ, ಪ್ರಸಂಗ, ನೀತಿ ಕಥೆ ಹೀಗೆ ಮೂಡಿಬರುತ್ತಿರುವುದು ಕೇಳುಗರ ಮನ ಸೆಳೆದಿದೆ. ಇನ್ನಷ್ಟು ಆಸಕ್ತ ವಿಷಯಗಳನ್ನು ನಮ್ಮಲ್ಲಿ ಹಂಚಿಕೊಳ್ಳುವಿರೆಂಬ ಭರವಸೆಯೊಂದಿಗೆ ತಮಗೆ ಹೃತ್ಪೂರ್ವಕ ಧನ್ಯವಾದಗಳು
    ತಾವು ಮಾತನಾಡುವ ಶೈಲಿ, ಕಥೆ ಹೇಳುವ ಪರಿ, ಪದಬಳಕೆ, ಆಯ್ದುಕೊಳ್ಳುವ ವಿಚಾರ ಎಲ್ಲವೂ ಚೆನ್ನಾಗಿದೆ. ತಮ್ಮ ಧ್ವನಿ ಸುರುಳಿ ಬಹಳ ಜನರ ಮನ ಮುಟ್ಟಿದೆ. Many thanks

    ReplyDelete
  5. ತುಂಬಾ ಆಕರ್ಶಕ ಕಂಠಸಿರಿ, ವಿಷಯ ನಿರೂಪಣೆಯಲ್ಲಿ ದ್ವನಿಯ ಏರಿಳಿತಗಳು, ಹೇಳುವುದನ್ನೆಲ್ಲ ಅನುಮೋದಿಸಿ ಇನ್ನೂ ಕೇಳಬೇಕೆಂಬ ಕುತೂಹಲ ಹುಟ್ಟಿಸುತ್ತಿರುವಂತೆಯೇ, ಮುಗಿಸಿಬಿಡುವ ವಾಕ್ ಚಾತುರ್ಯ ಎಲ್ಲವೂ ಚೆನ್ನಾಗಿತ್ತು. ವಿಷಯವೇನೇ ಇರಲಿ, ಕನ್ನಡ ಭಾಷೆಯ ಜತೆ ಸಾಧ್ಯತೆಗಳ, ನಿಮ್ಮ ಆಟವನ್ನು ಕೇಳುತ್ತಾ ಅನುಭವಿಸುವುದೇ, ಹೆಮ್ಮೆಯಿಂದ ಎದೆತುಂಬಿಬರುವ ಅನುಭವ. ಕೇಳುತ್ತಾ ನನ್ನ ಭಾಷೆಯಿದು ಎಂದು ಬೀಗುತ್ತಿರುವಂತೆಯೇ, ನಿಮ್ಮಂತಹ ಅನೇಕರು ನಮ್ಮವರೆಂಬ ಅಭಿಮಾನವೂ ಉಕ್ಕುತ್ತದೆ. ಹೀಗೆಯೇ ಮುಂದುವರೆಯಲಿ ನಿಮ್ಮ ವಾಕ್ಜರಿ, ಕೇಳುತ್ತಾ ಧನ್ಯರಾಗುತ್ತೇವೆ.
    ಏನೋ ಹೇಳ್ಬೇಕು ಅನ್ನಿಸ್ತು ಹೇಳ್ದೆ.
    ಧನ್ಯವಾದಗಳೊಡನೆ,
    ಅಶೋಕ್.

    ReplyDelete
    Replies
    1. ಓಹ್, ನಿಮ್ಮ ಅಭಿಮಾನಕ್ಕೆ, ಅಭಿಪ್ರಾಯಕ್ಕೆ ಧನ್ಯೋಸ್ಮಿ... 💖🙏🙏

      Delete
  6. ಬಹಳ ಚೆಂದದ ದ್ವನಿ ಸುರುಳಿಗಳು. ಅಂದಿನ ದಿನಗಳ ರೇಡಿಯೋ ಕೇಳಿದಂತಿದೆ. ಹಾಗೆಯೇ ದ್ವನಿ ಸುರುಳಿಗಳ ವಿಷಯಗಳೂ ಚಿಕ್ಕದಾಗಿದ್ದು ಚಿಂತನೆಗೀಡು ಮಾಡುತ್ತವೆ. ಧನ್ಯವಾದಗಳು🙏.

    ReplyDelete
  7. ಆತ್ಮೀಯ ಧ್ವನಿತರಂಗಗಳಿಗೆ ಹೃದಯಪೂರ್ವಕ ಅಭಿನಂದನೆಗಳು.

    ReplyDelete
  8. ನಿಮ್ಮ ಆಕರ್ಷಕ ಕಂಠಸಿರಿಯಲ್ಲಿ ಕೆ. ವಿ.ಅಯ್ಯಿರ್ ಅವರ ಶಾಂತಲ ಪುಸ್ತಕ ಪರಿಚಯ ಅದ್ಭುತವಾಗಿತ್ತು.ಈ ಮುಂಚೆ ಓದಿದ್ದೆ ಆದ್ರೆ ನಿಮ್ಮ ವರ್ಣನೆಯಿಂದ ಮತ್ತೆ ಓದಬೇಕು ಅನ್ನಿಸುತ್ತಿದೆ.
    ಧನ್ಯವಾದಗಳು
    ಶಾರದ
    ಯೋಗ ಶಿಕ್ಷಕಿ

    ReplyDelete
    Replies
    1. ದಯವಿಟ್ಟು ಓದಿ, ನಾನು ಹೇಳಿದ್ದು ಉತ್ಪ್ರೇಕ್ಷೆಯಲ್ಲ! ತುಂಬ ಇಷ್ಟವಾಗುತ್ತದೆ. 🙏❤

      Delete
  9. “ ರೇಡಿಯೋ” ಎಂದಾಕ್ಷಣ ಚಿಕ್ಕಂದಿನ ನೆನಪುಗಳ ಕೆದಕಿದ್ದು ಆಗಿನ ಚಿತ್ರಗೀತೆಗಳನ್ನು ರೆಕಾರ್ಡ್ ಮಾಡುವ ಸಲುವಾಗಿ ಅಮ್ಮ ಮಾಡುತ್ತಿದ್ದ ಗಡಿಬಿಡಿ , ಕ್ಯಾಸೆಟ್ ಸೆಟ್ ಮಾಡಿಕೊಡಲೋಸುಗ ಕ್ಯಾಸೆಟ್ಟಿನಲ್ಲಿ ಪೆನ್ಸಿಲ್ ಹಾಕಿ ತಿರುಗಿಸುತ್ತಿದ್ದದ್ದು, ಅದನ್ನೇ ಅನುಕರಿಸಹೋಗಿ ಹಾಳುಮಾಡಿ ಹೊಡೆತ ತಿಂದದ್ದು ಇನ್ನು ಏನೇನೋ ಸವಿನೆನಪುಗಳ ಮತ್ತೆ ಮೆಲುಕುಹಾಕುವಂತೆ ಮಾಡಿದೆ ನಿಮ್ಮ ಈ ಬಾರಿಯ ದ್ವನಿ ಸುರುಳಿ, ಹಾಗೆಯೇ “ಕೊನೆಯಲ್ಲಿನ ಕಿವಿಮಾತು” ಅರ್ಥಗರ್ಭಿತವಾಗಿದ್ದು ಒಟ್ಟಾರೆ ಚೆಂದ ಮೂಡಿಬಂದಿದೆ.

    ReplyDelete
    Replies
    1. ಕೇಳ್ತಾಯಿರಿ ರೇಡಿಯೋ "ಹೊರನಾಡ ಚಿಲುಮೆ!" 😍🙏

      Delete
  10. ನಮಸ್ತೆ ಆಶಾ ಮೇಡಂ
    ಬಹಳ ಚೆನ್ನಾಗಿದೆ, ಜೀವನದ ಕುರಿತು ಬಹಳಷ್ಟು ಯೋಚಿಸುವಂತೆ ಮಾಡಿತು ಈ ಆಡಿಯೋ. ಹಾಗೆಯೇ ಈ ಆತ್ಮಹತ್ಯೆಗೆ ಅಥವಾ ಹಾಗೊಂದು ಮನಃಸ್ಥಿತಿಗೆ ಪ್ರಚೋಧಿಸುವ ವಿಷಯಗಳ ಬಗೆಯೂ ಒಂದಷ್ಟು ಹೇಳಿ, ಬಹಳ ಉಪಯೋಗಕಾರಿಯಾಗಿರುತ್ತೆ. 🙏.

    ReplyDelete
    Replies
    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಮುಂಬರುವ ಆಡಿಯೋಗಳನ್ನೂ ಕೇಳಿ, ನಿಮ್ಮ ಸಲಹೆಗಳನ್ನು ಖಂಡಿತಾ ಅಳವಡಿಸಿಕೊಳ್ಳುವೆ.. ♥️🙏

      Delete
  11. ತುಂಬಾ ಚೆನ್ನಾಗಿದೆ, ಬಹಳ ಅನ್ವಯವಾಗುತ್ತೆ ಇಂದಿನ ಪರಿಸ್ಥಿತಿಗೆ. ಜೊತೆಗೆ ಇಂತಹಾ ಪರಿಸ್ಥಿತಿಗೆ ಒಬ್ಬ ಮನುಷ್ಯ ಹೋಗಲು ಕಾರಣವಾಗುವ ವಿಷಯಗಳನ್ನು ಕೊಂಚ ವಿವರವಾಗಿ ತಿಳಿಸಿ.

    ReplyDelete
  12. ಈ ಸಲದ ಆತ್ಮಹತ್ಯೆ ಮತ್ತು ಮನಸ್ಸು ಎಂಬ ವಿಷಯ ಗಂಭೀರವಾಗಿದೆ
    ಕೇಳಿ ಒಂದು ನಿಮಿಷ ಮೌನವಾಗಿ ಯೋಚಿಸುವ ಹಾಗೆ ಮಾಡುತ್ತದೆ
    ಆದರೂ ಕಡೆಯಲ್ಲಿ ನೀವು ಇನ್ನೆರಡು ಸಾಂತ್ವನದ ಮಾತಾಡಬೇಕಿತ್ತು ಅನ್ನಿಸಿತು.
    ಒಟ್ಟಿನಲ್ಲಿ ಈ ಥರ ಜನಮನಗಳನ್ನು ಅರಿತ ನುಡಿಗಳು ಕೇಳಿದಾಗ ಬಹಳ ಹೆಮ್ಮೆಯಾಯಿತು ತಮ್ಮಂಥಹ ನುರಿತ ತಜ್ಞರು ನಮ್ಮೊಂದಿಗೆ ಇದ್ದಾರಲ್ಲ ಎಂದು . ಇಂಥಾ ವಿಷಯ ಕೈಗೆತ್ತಿಕೊಂಡು ಕತ್ತಲಲ್ಲಿರುವವರಿಗೆ ಎಲ್ಲೋ ಬೆಳಕಿನ ಆಶಾ ಕಿರಣ ಕಾಣುವಂತೆ ಮಾಡಿದ್ದೀರಿ.
    ಥ್ಯಾಂಕ್ಸ್ ಮೇಡಂ

    ReplyDelete
    Replies
    1. ಧನ್ಯವಾದಗಳು. ಕೇಳುಗರಿಗೆ ಉಪಯೋಗವಾದಲ್ಲಿ ಶ್ರಮ ಸಾರ್ಥಕ. 🙏

      Delete
  13. wow I missed this page. Heard all of them today. very nice to listen that you have touched many subjects. Last two was most needed at the current situation. Thanks Mrs Asha Could you please talk about humanity sometime on next time. Today is world Humanity day but looks like its missing somewhere.

    ReplyDelete
    Replies
    1. My pleasure that you liked my range of topics. Yea, would sure include your suggestion in further talks. 🙂👍

      Delete
  14. Enjoyed your sweet voice and valuable inputs.Wonderful👌

    ReplyDelete
  15. ನಮಸ್ತೆ ಆಶಾ ಮೇಡಂ, ಮಧುರವಾದ ಕಂಠ ಸಿರಿಯಲ್ಲಿ ಬಹಳ ಉಪಯುಕ್ತವಾದ ಮಾಹಿತಿ ಸರಳ ಭಾಷೆಯಲ್ಲಿ ಧನ್ಯವಾದಗಳು 🙏

    ReplyDelete
    Replies
    1. ಮೆಚ್ಚುಗೆಯಾಗಿದ್ದರೆ ಸಂತೋಷ... 🙏😍

      Delete
  16. ತುಂಬಾ ಚೆನ್ನಾಗಿದೆ ಗುರು ಶಿಷ್ಯರ ಬಗೆಗಿನ ಮಾತುಗಳು ಮನ ಮುಟ್ಟುವಂತೆ ಇದೆ.

    ReplyDelete
  17. ನಮಸ್ತೆ,
    ನಿಮ್ಮ “ಆತ್ಮಹತ್ಯೆ ಮತ್ತು ಮನಸ್ಸು” ಧ್ವನಿ ಸುರುಳಿಯೂ ಬಹಳ ಅರ್ಥಪೂರ್ಣವಾಗಿದ್ದು ಬಹಳಷ್ಟು ಹಳೆಯ ನೆನಪುಗಳ ಮತ್ತೆ ಮೆಲುಕುಹಾಕುವಂತೆ ಮಾಡಿದೆ. ಎಷ್ಟೋ ಮಂದಿ ಅಥವಾ ಎಲ್ಲರೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ಇಂತಹ ಒಂದು ಮನಸ್ಥಿತಿಯಡಿ ನುಸುಳಿರುತ್ತಾರೆಂದು ನನ್ನ ಭಾವನೆ. ಅವರವರ ಸಂಧರ್ಭಕ್ಕನುಗುಣವಾಗಿ, ಬುದ್ದಿವಂತಿಕೆಯಿಂದಲೋ, ಮತ್ತೊಬ್ಬರ ಸಹಾಯದಿಂದಲೋ ಅಥವಾ ಅವರದ್ದೇ ಮನೋಸ್ಥೈರ್ಯದಿಂದಲೋ ಅಂಥದ್ದೊಂದು ಪರಿಸ್ಥಿತಿಯಿಂದ ಹೊರಬಂದಿರುತ್ತಾರೆ. ಎಲ್ಲರೂ ಜೀವನವ ಕೊನೆಗೊಳಿಸುವದರ ಬಗ್ಗೆಯೇ ಯೋಚಿಸದಿದ್ದರೂ ಶೂನ್ಯ ಮನೋಭಾವನೆಯನ್ನಂತೂ (ಮುಂದೇನು ಅನ್ನುವದು ತೋಚದಾದಾಗ) ಅನುಭವಿಸಿಯೇ ಇರುತ್ತಾರೆ. ಇಲ್ಲಿಯೇ ಬೇಕಿರುವದು ನೀವು ತಿಳಿಸಿರುವ ಕೆಲವು ಕಿವಿಮಾತುಗಳು.
    ಅದಕ್ಕೆಂದೇ ಇಲ್ಲಿನ ಸರ್ಕಾರವು ತನ್ನದೇ ಆದ ರೀತಿಯಲ್ಲಿ “ ಆರ್ ಯು ಓಕೆ “ ಎನ್ನುವಂತಹ ಅಭಿಯಾನಗಳನ್ನೂ ಹಮ್ಮಿಕೊಂಡಿದೆ ಕೂಡ.
    ಇವೆಲ್ಲ ಏನೇ ಇದ್ದರೂ ನಮ್ಮ ಸಾಧ್ಯಂತ ಒಬ್ಬರ ಮನೋಸ್ಥೈರ್ಯ ಹೆಚ್ಚಿಸುವ ಮನೋಭಾವನೆ ಹೆಚ್ಚಲಿ. ನಿಮ್ಮ ಧ್ವನಿ ಸುರುಳಿಯೂ ಪೂರಕವಾಗಲಿ. 🙏

    ReplyDelete
  18. “ಗುರು ಶಿಷ್ಯ ಪರಂಪರೆ” ಚೆಂದ ಮೂಡಿಬಂದಿದೆ ಮೇಡಂ.
    ಇಂದು ಅಂತಹದ್ದೊಂದು ಪದವೇ ಮಾಯವಾಗುತ್ತಿರುವದು ವಿಷಾದನೀಯ. ಕಾರಣ ನಾವುಗಳೇ ಆಗಿರುವದು ಇನ್ನೂ ನೋವಿನ ಸಂಗತಿ. ಇಂದು ಮಕ್ಕಳಿಗೆ ಹೊಡೆಯುವಂತಿಲ್ಲ, ಬೈಯುವಂತಿಲ್ಲ ಕೊನೆಗೆ ಗಟ್ಟಿಯಾಗಿ ಗದರುವಂತೆಯೇ ಇಲ್ಲವಾಗಿ ಮಕ್ಕಳಿಗೆ ಅಂಕೆಯೇ ಇಲ್ಲವಾಗಿದೆ, ಜೊತೆಗೆ ಶಿಕ್ಷಕ/ಕಿಯರ ಜ್ಞಾನದ ಗುಣಮಟ್ಟವೂ ನೆಲಕಚ್ಚಿ ಅಧೋಗತಿಯಾಗಿದೆ. ಗೂಗಲ್ ಗುರುವಿನ ಮುಂದೆ ಬೇರೆಲ್ಲವೂ ಗೌಣವಾಗುತ್ತಿರುವದು ಮಕ್ಕಳಿಗೆ ತಾವು ಶಿಕ್ಷಕ/ಕಿಯರನ್ನು ಮೀರಿಸಿದ್ದೇವೆಂಬ ಭಾವನೆ ಬೇರೂರಿದೆ.
    “ಅಕ್ಷರವ ಕಲಿಸಿದಾತ ಗುರು” ಎಂಬ ಮನೋಭಾವನೆಯ ಮಕ್ಕಳ ಮನದಲ್ಲಿ ತುಂಬುವ, ಪೋಷಕರೆಲ್ಲರೂ ಸಾಧ್ಯಂತ ತಮ್ಮ ಮಕ್ಕಳಲ್ಲಿ ಇಂಥದ್ದೊಂದು ಮನೋಭಾವನೆಯು ಬೆಳೆಯುವಂತೆ ತಿಳಿಹೇಳಬೇಕಾದ ಜವಾಬ್ದಾರಿಯು ಮಹತ್ತರವಾಗಿದೆ.
    ಕಡೆ ಬೆಂಚಿನ ವಿಧ್ಯಾರ್ಥಿ ಜೀವನವ ಮತ್ತೆ ನೆನಪಿಸಿದ್ದೀರಿ, ಧನ್ಯವಾದಗಳು 🙏

    ReplyDelete
    Replies
    1. ಧನ್ಯವಾದಗಳು ಶಶಿ ಅವರೆ.. ♥️🙏

      Delete
  19. ಹೊಸ ವರ್ಷದ ಶುರುವಿಗೆ ಒಳ್ಳೆ ಹುರಿದುಂಬಿಸೋ ಮಾತು ಆಡಿದಿರಿ - ನಿಜಕ್ಕೂ ಮಾನವ ಜನ್ಮ ದೊಡ್ಡದು

    ReplyDelete
    Replies
    1. ಧನ್ಯವಾದಗಳು ಅಶ್ವಿನ್ ಅವರೇ. ಕೇಳುಗರಿಗೆ ಉಪಯೋಗ ಆದರೆ ಸಾಕು.. 🙏🙂

      Delete
  20. ನಿಮ್ಮ ಎಲ್ಲಾ ಧ್ವನಿ ಸುರಳಿಗಳಂತೆ " ಮಲಗೋಮುನ್ನ " ಕೂಡ ಸುಂದರವಾಗಿ ಮೂಡಿ ಬಂದಿದೆ. ಮಲಗೋಮುನ್ನ ನಾನು ಡಾ. ನಾ. ಸೋಮೇಶ್ವರ ಅವರ‌ "ತಟ್ ಅಂತ‌ ಹೇಳಿ" ಕಾರ್ಯಕ್ರಮ ಕೇಳ್ತೀನಿ. ಮಲಗಿದಾಗ "ಯೋಗ ನಿದ್ರಾ" audio ಕೇಳ್ತಾ ನಿದ್ರೆ ಹೋಗ್ತೀನಿ. ಉತ್ತಮ ಮಟ್ಟದ ಧ್ವನಿ ಸುರಳಿಗಳನ್ನು ನೀಡ್ತಾ ಇದ್ದೀರಿ. ಧನ್ಯವಾದಗಳು.

    ReplyDelete
    Replies
    1. ಆಹಾ, ಎಂಥಾ ಒಳ್ಳೆ ಅಭ್ಯಾಸ ನಿಮ್ಮದು. ಯೋಗ ನಿದ್ರೆ ಖಂಡಿತವಾಗಿಯೂ ಒಳ್ಳೆಯ ಆರಾಮವನ್ನು ಮೈ-ಮನಸ್ಸುಗಳಿಗೆ ನೀಡುತ್ತೆ. ನನ್ನ ವಿಚಾರಗಳು ನಿಮ್ಮ ಮೆಚ್ಚುಗೆಗೆ ಪಾತ್ರವಾಗಿದ್ದು ಸಂತೋಷ. ಕೇಳ್ತಿರಿ, ಅಭಿಪ್ರಾಯ ತಿಳಿಸಿ ರಾಜೇಶ್ವರಿ ಅವರೆ.. 😋😍🙏

      Delete
  21. ಶ್ರೀಮತಿ ಆಶಾ ಅವರೇ ಈ ಧ್ವನಿ ಸುರುಳಿ ಬಹಳ ಸೊಗಸಾಗಿದೆ. ಹತ್ತೂ ಸಲಹೆಗಳೂ ಮುತ್ತಿನಂಥಾ ಮಾತು. ಚಿಕ್ಕದಾಗಿ ಚೊಕ್ಕದಾಗಿ ಮನಮುಟ್ಟುವಹಾಗೆ ತಿಳಿಸಿದ್ದೀರಾ. ಬಹಳ ಜನ ಮುಖತಃ ಭೇಟಿಯಾದಾಗ ತಮ್ಮ ಆಡಿಯೋ ಬಗ್ಗೆ ಹೊಗಳುತ್ತಾರೆ, ದುರಾದೃಷ್ಟ ತುಂಬಾ ಜನ ಅಭಿಪ್ರಾಯ ಬರೆಯುವುದರಲ್ಲಿ ಏಕೋ ಹಿಂದು

    ReplyDelete

Post a Comment