ಕನ್ನಡ ಶಾಲೆಯ ಯುಗಾದಿ...

 ಸಿಡ್ನಿ ಕನ್ನಡ ಶಾಲೆಯ ಯುಗಾದಿ ಕಾರ್ಯಕ್ರಮ

ವರದಿ:

ದತ್ತು ಕುಲಕರ್ಣಿ ಸಿಡ್ನಿ.

Few photos : https://photos.app.goo.gl/Ln1HDvrZFJ8iSpP66



ಕಳೆದ ಮಾರ್ಚ್ ತಿಂಗಳು 29ರಂದು ಸಿಡ್ನಿ ಕನ್ನಡ ಶಾಲೆಯ ಮಕ್ಕಳಿಗಾಗಿ ಯುಗಾದಿ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ತುಂಗಾಬಿ ಶಾಲೆಯ ಸಭಾಭವನದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆವರೆಗೆ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ದೊಡ್ಡವರು ಹಾಡಿ ಕುಣಿದು ಸಂಭ್ರಮಿಸಿದರು.

ಮೊದಲು ಕನ್ನಡ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶ್ವೇತಾ ಫಡ್ನೀಸ ಅವರು ಎಲ್ಲರಿಗೂ ಸ್ವಾಗತ ಕೋರಿದ ನಂತರ ಕುಮಾರಿ ಮಹಿತಾ ಮಹಾಜನ್ ಅವಳು ಹಾಡಿದ ಮೊದಲೊಂದಿಪೆ ನಿನಗೆ ಗಣನಾಥ ಎನ್ನುವ ಭಜನೆಯೊಂದಿಗೆ  ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ನಂತರ ಧನ್ವಿ ತನ್ನ ಮಧುರ ಕಂಠದಲ್ಲಿ ಹಾಡಿದ ಹಾಡು ಚೆನ್ನಾಗಿತ್ತು. ಹಾಗೆಯೇ ಪ್ರಥಮ್ ಅಪ್ಪಳ ಒಂದು ನೀತಿ ಕಥೆಯನ್ನ ಹೇಳಿ ಎಲ್ಲರನ್ನ ಮನರಂಜಿಸಿದನು.

ಅಂತರ ಪ್ರಾರ್ಥನಾ ಹೆಗಡೆ ತನ್ನ ಕಿರು ಭಾಷಣದಲ್ಲಿ ಯುಗಾದಿ ಹಬ್ಬದ ಮಹತ್ವ ಮತ್ತು ಆಚರಣೆಗಳ ಬಗ್ಗೆ ತನ್ನ ಬಾಲನುಡಿಯಲ್ಲಿ ಸೊಗಸಾಗಿ ಹೇಳಿದಳು. ಆಮೇಲೆ ಪ್ರೇರಣ ಅಪ್ಪಳ ಅವಳ ಹಾಡು ಮತ್ತು ಆತ್ಮಿಕಾ ಅವಳ ವಾಯು ಲಿನ್ ಚೆನ್ನಾಗಿ ಮೂಡಿಬಂದಿತು.

ನಂತರ ತುಂಗಾಬಿ ಶಾಲೆಯ ಮಕ್ಕಳು ಇಂದಿನ ಕಾಲದ ಮಕ್ಕಳು ಎನ್ನುವ ಗೀತೆಯನ್ನು ಎಲ್ಲಾ ಸಂಗೀತ ವಾದ್ಯಗಳೊಂದಿಗೆ ಲೈವ್ ಮ್ಯೂಸಿಕ್ ರೂಪದಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದು ಪ್ರೇಕ್ಷಕರಿಂದ ತುಂಬು ಹೃದಯದ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು.

ಹೀಗೆ ಹಾಡು ಭಾಷಣ ಮುಂದುವರೆಯುತ್ತಿರುವಾಗ ರಿತ್ವಾನ ಮತ್ತು ಬೃಹತಿ ತಮ್ಮ ಡಾನ್ಸ್ ಮೂಲಕ ಗಮನ ಸೆಳೆದರು.ನಂತರ ಆಶಿ ಮತ್ತು ಅನ್ಯ ಕುಮಾರಸ್ವಾಮಿ ಹಾಡಿದ ತಾಯಿ ಶಾರದೆ ಲೋಕ ಪೂಜಿತೆ ಮತ್ತು ಆದ್ಯ ಲಂಕ ಹಾಡಿದ ನೀಡು ಶಿವ ನೀಡದಿರು ಶಿವ ಬಹಳ ಚೆನ್ನಾಗಿ ಮೂಡಿ  ಬಂತು. ಹಾಗೆಯೇ ಶಿವಾಂಗ, ಆಯುಕ್ತ ,ಅಥರ್ವ ಮತ್ತು ಅದಿತಿ ಆಚಾರವಿಲ್ಲದ ನಾಲಿಗೆ ಎನ್ನುವ ಹಾಡನ್ನು ಬಹಳ ಚೆನ್ನಾಗಿ ಹಾಡಿದರು. ಆರವಿ ಅಶ್ವಿನ್ ಹಾಡಿದ ಆಕಾಶದಾಗೆ ಯಾರೋ ಮಾಯಗಾರನುಕರೊಕೆಯಲ್ಲಿ ಉತ್ತಮವಾಗಿ ಮೂಡಿ ಬಂತು.

ಮುಂದೆ ಬಹಳ ಚಿಕ್ಕ ಮಕ್ಕಳಾದ ಧೃತಿ ಮತ್ತು ದೃಷ್ಟಿ ಮೂರು ಕೊಡಲಿಗಳು ಎನ್ನು ವ ನೀತಿ ಬೋಧಕ ಕಿರು ನಾಟಕವನ್ನು ಬಹಳ ಮುದ್ದಾಗಿ ಮಾಡಿ ತೋರಿಸಿದರು.

ಆಮೇಲೆ ಶಾಲೆಯ ಎಲ್ಲ ಮಕ್ಕಳು ಸೇರಿ ಶಿಶು ಗೀತೆಗಳು ಹಾಡಿದರು. ಸುಮಾರು 150 ಮಕ್ಕಳು ವೇದಿಕೆಯ ಮೇಲೆ ಸೇರಿ ಚಂದಮಾಮ ಓಡಿ ಬಾ ಮತ್ತು ಕರಡಿ ಬೆಟ್ಟಕ್ಕೆ ಹೋಯಿತು ಎನ್ನುವ ಶಿಶು ಗೀತೆಗಳನ್ನು ತಮ್ಮ ಬಾಲ ಕಂಠಗಳಲ್ಲಿ ಒಕ್ಕೊರಲಿನಿಂದ ಹೇಳಿದ್ದು ತುಂಬಾ ಮುದ್ದಾಗಿತ್ತು.

ನಂತರ ಪ್ರತಿ ವರ್ಷದಂತೆ ಈ ವರ್ಷವೂ ಕವಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಲ ರಾಷ್ಟ್ರಕವಿ ಕುವೆಂಪು ರವರಿಗೆ ನಮನವನ್ನು ಸಲ್ಲಿಸಲಾಯಿತು. ಶಾಲೆಯ ಮಕ್ಕಳಾದ ಸನ್ನಿಧಿ ಮತ್ತು ಕೃತಿ ತುಂಬಾ ಚೆನ್ನಾಗಿ ಇದನ್ನು ನಡೆಸಿ ಕೊಟ್ಟರು. ಎಲ್ಲರೂ ಎದ್ದನಿಂತು ಬಾರಿಸು ಕನ್ನಡ ಡಿಂಡಿಮವ ಹಾಡನ್ನು ಹಾಡುವ ಮೂಲಕ ಕವಿಗೆ ಗೌರವ ಸೂಚಿಸಿದರು.

ನಂತರ ಕರೋಕೆ ಹಾಡು ಸುಬ್ಬ ಭಟ್ಟರ ಮಗಳೇ ಅನ್ನು ಅವಿನಾಶ್ ಹಾಡಿದರೆ, ಹಾವವೆಂಬ ಹೂವು ಇದನ್ನು ಅದಿತಿ ಹರಿಹರನ್ ಸುಶ್ರಾವ್ಯವಾಗಿ ಹಾಡಿದಳು.

ಇದಾದ ಮೇಲೆ ಸಮುದ್ಯತಾ ತನ್ನ ಏಕ ಪಾತ್ರ ಅಭಿನಯದ ಮೂಲಕ ಜನರನ್ನೆಲ್ಲ ರಂಜಿಸಿದಳು.

 ನಂತರ ಮಕ್ಕಳಿಂದ ಎರಡು ದೊಡ್ಡ ಸಮೂಹ ನೃತ್ಯಗಳನ್ನು ಪ್ರಸ್ತುತಪಡಿಸಲಾಯಿತು.ಅನ್ವಿತಾ ಅಲೆಕ್ಯಾ ಇಂಚರ ಇಶಾನಿ ಧನ್ವಿ ಶ್ರಾವ್ಯ ಈಶಾನ್ವಿ ಸೇವೆ ಸೇರಿ ಸೇರಿ ‘’ಗಲ್ಲು ಗಲ್ಲೆನುತಾ ಹಾಡಿಗೆ ನೃತ್ಯ ಮಾಡಿದರೆ, ಮೈರಾ ಮನಸ್ವಿ ಆಶಿ  ಆನ್ಯ ಯಶ್ ಪ್ರಣವಿ ಧುವರಾಜ್ ಮತ್ತು ಆರ್ಯನ್ ಯುಗಾದಿ ಹಬ್ಬ ಹಾಡಿಗೆ ಕುಣಿದು ಕುಪ್ಪಳಿಸಿದರು.

ಆಮೇಲೆ ದೊಡ್ಡವರ ಕಾರ್ಯಕ್ರಮಗಳು  ಶುರುವಾದವು. ಮೊದಲಿಗೆ ಕನ್ನಡ ಶಾಲೆಯ ಶಿಕ್ಷಕಿ ಅಕ್ಷತಾ ಮತ್ತು ಅವರ ಸೋದರಿ ಹರ್ಷಿತ ಅವರು ಬೇಂದ್ರೆ ಅವರ ಮೂಡಲ ಮನೆಯಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಹಾಗೆಯೇ ದೇವಿಕಾ ಪ್ರಮೋದ್ ಹಾಡಿದ ತರಿಕೆರೆ ಏರಿ ಮೇಲೆಬಹಳ ಚೆನ್ನಾಗಿ ಮೂಡಿ ಬಂತು.

ರಾಜೇಶ್ ಹೆಗಡೆ ಹಾಡಿದ ಮೆಡ್ಲೇ ಹಾಡುಗಳು ಹಾಗೂ ಅರ್ಚನಾ ವಾಸುದೇವ್ ಮತ್ತು ಪ್ರಮೋದ್ ಅವರು ಪ್ರಸ್ತುತಪಡಿಸಿದ ಸದಾ ಕಣ್ಣಲಿ ಮತ್ತು ನೀನು ನೀನೇ ಮುಂತಾದ ಹಾಡುಗಳು ಪ್ರೇಕ್ಷಕರಿಂದ ಕರತಾಡನ  ಗಿಟ್ಟಿಸಿದವು.

 ನಂತರ ದಿನದ ಅತಿ ಆಕರ್ಷಕ ಮತ್ತು ಎಲ್ಲರ ಮನಸೂರೆಗೊಂಡ ಕ್ವಿಜ್ ಕಾರ್ಯಕ್ರಮವನ್ನು ನಡೆಸಲಾಯಿತು, ಶಾಲೆಯ ಶಿಕ್ಷಕ ಅಮರ್ ಅವರು ಇದನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟರು.

ಸುಮಾರು 25 ಜನ ಹಿರಿಯರು ಇದರಲ್ಲಿ ಭಾಗವಹಿಸಿದ್ದರು. ಕೇಳಿದ ಪ್ರಶ್ನೆಗಳಿಗೆ ಒಂದೇ ಕಾಗುಣಿತದಿಂದ ಶುರುವಾಗುವ ಪದಗಳನ್ನು ಉತ್ತರವಾಗಿ ಹೇಳಬೇಕಿತ್ತು. ಎಲ್ಲರೂ ಆತ್ಯುತ್ಸಾಹದಿಂದ ಇದರಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತಂದರು.

ಒಟ್ಟಿನಲ್ಲಿ ನಮ್ಮ ಭಾಷೆ, ಸಂಸ್ಕೃತಿ ಯನ್ನು ಆಚರಿಸುವ, ಸಂಭ್ರಮಿಸುವ ಇಂತಹ ಹಬ್ಬದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಸಿಡ್ನಿ ಕನ್ನಡ ಶಾಲೆಯ ಪ್ರಾಂಶುಪಾಲರಾದ ನಾರಾಯಣ್ ಕನಕಾಪುರ ಮತ್ತು ರಾಜಿ ನಾರಾಯಣ್ ಹಾಗೂ ಇನ್ನುಳಿದ ಎಲ್ಲಾ ಶಿಕ್ಷಕರಿಗೆ ಎಲ್ಲರೂ ಧನ್ಯವಾದ ಹೇಳಿದರು.


Comments

  1. ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.
    ಮಕ್ಕಳೇ, ಒಬ್ಬಟ್ಟು ತಿನ್ನಲು ನಮ್ಮ ಮನೆಗೆ ಬನ್ನಿ :)

    ReplyDelete

Post a Comment