ಮುಳ್ಳಿನೊಂದಿಗೆ ಬಾಳು...

ಮುಳ್ಳಿನೊಂದಿಗೆ ಬಾಳುವುದನ್ನು ಕಲಿಯಬೇಕು

 ಲೇಖಕರು : ಎಂ ಆರ್ ವೆಂಕಟರಾಮಯ್ಯ



 ‘ಮುಳ್ಳು’ ಎಂಬ ಪದ ಕಿವಿಗೆ ಕೇಳಿಸಿದ ಕೂಡಲೇ ನಮ್ಮ ಮುಖ ಮುದುಡುತ್ತೆ. ಏಕೆಂದರೆ ಇದು ಚುಚ್ಚುವ ವಸ್ತು, ಚುಚ್ಚಿ ನೋವು ಉಂಟು ಮಾಡುವುದು, ರಕ್ತ ಚಿಮ್ಮಿಸುವುದು ಎಂಬ ಕಾರಣಕ್ಕೆ. ಇಂತಹಾ ಸಮಯ ದಲ್ಲೆಲ್ಲಾ ನಮ್ಮ ಮನಸ್ಸು ಅನ್ನುತ್ತೆ “ಈ ಮುಳ್ಳನ್ನು ಸೃಷ್ಟಿಸಿದ ಸಮಯದಲ್ಲಿ ದೇವರಿಗೆ ಬುದ್ದಿ ಇರಲಿಲ್ಲ” ಎಂದು. ಏಕೆಂದರೆ ಈ ಮುಳ್ಳಿನಿಂದ ಯಾರಿಗೆ, ಏನು ಪ್ರಯೋಜನ ? ಎಂದು. ಈ ಎಲ್ಲ ಮಾತುಗಳು, ಭಾವನೆಗಳ ಸಾರಾಂಶ ಒಂದೇ, ಅದೆಂದರೆ ಮುಳ್ಳು ಎಂದರೆ ಕಷ್ಟ, ತೊಂದರೆ, ಅಡ್ಡಿ ಇದರ ಬಗ್ಗೆ ಇರಬೇಕು ಸದಾ ಎಚ್ಚರ ಇತ್ಯಾದಿಗಳು. ಈ ಅರ್ಥಗಳು ಹಾಗೂ ಇದಕ್ಕೆ ಸಮೀಪವಾದ ಅರ್ಥಗಳನ್ನು ನೀಡುವ ನಿತ್ಯ ಬಳಕೆಯಲ್ಲಿರುವ ಕೆಲವು ವಾಕ್ಯಗಳು ಎಂದರೆ :

 ಮುಳ್ಳಿನ ಮೇಲೆ ಬಿದ್ದ ಬಟ್ಟೆಯಂತೆ ಮುಳ್ಳಿನ ಹಾಸಿಗೆ, ಮತ್ತೊಬ್ಬರ ಜೀವನದಲ್ಲಿ ಮುಳ್ಳಾಗು, ಸುಂದರವಾಧ ಗುಲಾಬಿ ಗಿಡದ ತುಂಬಾ ಮುಳ್ಳು ಎಂಬುದಾಗಿದೆ. ಇದೇ ಮುಳ್ಳಿನ ಬಗ್ಗೆ ಇಂಗ್ಲೀಷಿನಲ್ಲಿ cause pain, sorrow, suffering, hardship difficulties,  enemy, obstacle agony, caution, Denoting sin, sorrow and hardship  ಮೊದಲಾದ ಪದಗಳಿವೆ. ಮುಳ್ಳಿನ ಸೃಷ್ಟಿ ಸಮಯದಲ್ಲಿ ಆ ದೇವರಿಗೆ ಬುದ್ದಿ ಇರಲಿಲ್ಲ ಎಂಬ ಒಂದು ವರ್ಗಧವರ ಅನಿಸಿಕೆ ಮೇಲೆ ಸೂಚಿಸಿದೆ. ಇದು ಸರಿಯೇ ? ಎಂಬ ಬಗ್ಗೆ ಯೋಚಿಸಿದಾಗ ನಮಗೇ ತಿಳಿಯುತ್ತೆ ಬುದ್ದಿ ಇಲ್ದೆಯಿರುವುದು ದೇವರಿಗಲ್ಲ, ನಮಗೆ ಎಂದು. ಏಕೆಂದರೆ ಸೃಷ್ಟಿಕರ್ತ ಈ ಸೃಷ್ಟಿಯಲ್ಲಿ ಯಾವ ನಿರುಪಯೋಗಿ ವಸ್ತುವನ್ನೂ ಸೃಸ್ಟಿಸಿಲ್ಲ. ಸೃಷ್ಟಿಯಲ್ಲಿ ಇರುವುದೆಲ್ಲ ಯಾರಿಗಾದರು,ಯಾವಾಗಲಾದರು, ಹೇಗಾದರೂ ನಮ್ಮ ಉಪಯೊಗಕ್ಕೇ ಬರುವಂತಹುದೇ, ಆದರೆ ಮತಿಹೀನರಾದ ನಮಗೆ ಅದರ ಉಪಯೋಗದ ಸಂದರ್ಭ ತಿಳಿಯ ದಾಗ “ಯೂ ಲೆಸ್ “ ಅಂತೀವಿ ಅಷ್ಟೇ. 

 ಮುಳ್ಳುಗಳಿರುವ ಬಿಲ್ವ ಪತ್ರೆ ಗಿಡ, ಕಳ್ಳಿ ಗಿಡ, ಭೋರೆ ಮರ, ಬಹಳ ಜನಕ್ಕೆ ಪರೋಪಕಾರಿ ಎನಿಸಿದರೆ, ಕೆಲವರಿಗೆ ಇದು ಅನಗತ್ಯ, ಇಂತಹಾ ಜನರಿಗೆ ಈ ಗಿಡಗಳು ಯೂಸ್ ಲೆಸ್

 ಜೀವನದಲ್ಲಿ ಕಿರಿ ಕಿರಿ, ನೋವು, ಸಂಕಟ, ದುಃಖ, ಕಷ್ಟ, ಎದುರಿಸ ಬೇಕಾದ ಅಡೆತಡೆಗಳು, ಇತ್ಯಾದಿಗಳನ್ನು ಸೂಚಿಸಲು ಮುಳ್ಳನ್ನು ಲೇಖಕರು ರೂಪಕವಾಗಿ ಬಳಸುತ್ತಾರೆ.

ಮುಳ್ಳುಗಳನ್ನು ಭಗವಂತ ಸಸ್ಯಗಳಲ್ಲಿ ಏಕಿಟ್ಟ ?ಎಂಬ ಬಗ್ಗೆ ಯೋಚಿಸಿದಾಗ ಅರಿವಾಗುತ್ತೆ ಈ ಸಸ್ಯಗಳ ರಕ್ಷಣೆಗೆ ಅಂತ. ಮುಳ್ಳುಗಳಿರದಿದ್ದ್ದರೆ ಕ್ರಿಮಿ ಕೀಟಿಗಳಿಂದ ಮನುಷ್ಯರಿಂದ ಸಸ್ಯಗಳು ನೋವು ಸಹಿಸಲಾಗುತ್ತಿರಲಿಲ್ಲ ಇವನು ಈ ಸಸ್ಯಗಳ ತಂಟೆಗೆ ಹೋಗದಂತೆ, ತನಗಾಗಿ ಬಳಸುವುದನ್ನು ತಪ್ಪಿಸಲು ಸಸ್ಯಗಳಿಗೆ ಮುಳ್ಳುಗಳನ್ನಿಟ್ಟ ದೇವರು. ಅಂದರೆ ಇದರರ್ಥ ದೇವರು ಸಸ್ಯಕ್ಕೆ ಮುಳ್ಳುಗಳನ್ನು ಕೊಟ್ಟಿರುವುದು ಸಸ್ಯಗಳ ಒಳಿತಿಗಾಗಿಯೇ. 

 ಇದೇ ತತ್ವ ಆಂದರೆ, ಮುಳ್ಳಿನಂತಹಾ ಚುಚ್ಚು, ಕಷ್ಟ,, ನೋವು, ಸಂಕಟ, ತೊಂದರೆ ಇವೆಲ್ಲಾ ಬರುವುದು ಮನುಷ್ಯನ ಒಳಿತಿಗಾಗಿಯೇ ಎಂದರೆ ಹೇಗೆ ಎಂಬುದು ಅರ್ಥವಾಗಲಿಲ್ಲವೇ ? ಇವೆಲ್ಲಾ ದೇವರು ನರನಿಗೆ ಕಾಲಕಾಲಕ್ಕೆ ಕೊಡುವ ಪರೀಕ್ಷೆ. ನಮ್ಮಲ್ಲಿರುವ ಶಕ್ತಿಯನ್ನು ಅರಿಯಲು ಇದು ಅವಕಾಶ ಎಂದು ತಿಳಿದು ವಿಪತ್ತು ಬಂದಾಗ ಮನುಷ್ಯರಾದ ನಾವು ಧೈರ್ಯ, ಮನ ಸ್ಥೆöÊರ್ಯ, ಛಲಗಳಿಂದ ಈ ಕೆಡುಕುಗಳಿಗೆ ಕಾರಣ ತಿಳಿದು ಇದಕ್ಕೆ ಪರಿಹಾರ ಮುಂದಿಟ್ಟುಕೊAಡು ಎದುರಿಸಿದರೆ ಮುಂದಿನ ಅವಧಿಯಲ್ಲಿ ನಮ್ಮ ಗುರಿ ಸಾಧಿಸಲು ನಮಗೆ ಅನುಕೂಲ, ಸಹಾಯವಾಗುವುದರಲ್ಲಿ ಸಂದೇಹವಿರದು ಎಂಬುದು ಅನುಭವಿಗಳ ಮಾತಾಗಿದೆ

 ಈ ಮಾತಿಗೆ ಉದಾಹರಣೆಯಾಗಿ ಒಬ್ಬ ವ್ಯಕ್ತಿಗೆ ರೋಗವೋ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೈಲಾಗಿದ್ದೋ ನಿರುದ್ಯೋಗಿಗೆ ಕೆಲಸ ಸಿಕ್ಕದ ಕಾರಣಕ್ಕೋ, ವಾಸಿ ಯಾಗದ ರೋಗದ ಕಾರಣವೋ, ಗಂಡ ಹೆಂಡಿರ ನಡುವಿನ ವೈಮನಸ್ಯ, ಹೀಗೆ ಯಾವುದೇ ಕಾರಣ ಆದಾಗಲೂ ಅದಕ್ಕೆ ಹೆದರಿಯೋ ಜಿಗುಪ್ಸೆಗೊಂಡೋ ಆತ್ಮಹತ್ಯೆಗೆ ಮುಂದಾಗುವ ಬದಲು ಈ ತೊಂದರೆ ಬರಲು ಕಾರಣ ಏನು ಎಂಬುದನ್ನು ತಿಳಿದು ಅದು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿ ಪರಿಹಾರೋಪಾಯಗಳನ್ನು ಸಕಾಲ ದಲ್ಲಿ ನಡೆಸಿದರೆ ವ್ಯಕ್ತಿಯ ಜೀವ ಉಳಿದು ಮುಂದೆ ಹಲವು ಒಳತುಗಳನ್ನು ಕಾಣಲು ಸಾಧ್ಯವಾಗುತ್ತೆ .

 ಐiಜಿe is ಟಿoಣ ಚಿ beಜ oಜಿ ಡಿoses. ಎಂಬ ಗಾದೆ ಬಳಕೆಯಲ್ಲಿದೆ. ಇದರರ್ಥ, ಜೀವನ ಎನ್ನುವುದು ಸುಖದ ಸುಪತ್ತಿಗೆಯಲ್ಲ. ಇಲ್ಲಿ ಸುಖವೂ ಉಂಟು ಕಷ್ಟವೂ ತಪ್ಪಿದ್ದಲ್ಲ. ಜೀವನ ಎನ್ನುವುದು ಎರಡು ಮುಖಗಳುಳ್ಳ ನಾಣ್ಯದಂತೆ ಒಂದೆಡೆ ಮುಖ, ಮತ್ತೊಂದೆಡೆ ಭಾಲ (ಇಂಗ್ಳೀಷಿನ ಹೆಡ್ ಅಂಡ್ ಟೈಲ್ ಎಂಬAತೆ.) ಯಾವಾಗಳೂ ಸಿಹಿಯನ್ನೇ ತಿನ್ನುತ್ತಿದ್ದರೆ ವಾಕರಿಕೆ, ಸಿಹಿಮೂತ್ರ ರೋಗ ಬರುತ್ತೆ. ಈ ಕಾರಣದಿಂದಲೇ ಊಟದಲ್ಲಿ ಉಪ್ಪು, ಕಾರ, ಹುಳಿ, ಸಿಹಿ, ಕಹಿ, ಒಗರು ಎಂಬ ಷಡ್ರಸಗಳಿರಬೇಕು, ಈ ಊಟವೇ ಆರೋಗ್ಯಕರ, ಏಕೆಂದರೆ ಇದು ಜೀವಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನೂ ಒದಗಿಸು ತ್ತದೆ ಎಂದಿದ್ದು ನಮ್ಮ ಹಿರಿಯರು

 ಎಲ್ಲಾ ವಿಷಯಗಳಲ್ಲೂ ಯಾವಾಗಲೂ ಯಾಂತ್ರಿಕತೆ, ರೊಟೀನ್, ಸ್ಟೀರಿಯೋ ಟೈಪ್ಡ್ ಎನ್ನುವುದು ಬೋರಿಂಗ್ ಬೇಸರ, ಎನಿಸುತ್ತದೆಯೇ ? ಈ ವಿಷಯದ ಬಗ್ಗೆ ಮಾತನಾಡುವಾಗ ನಾವು ಗಮನಿಸಬೇಕಾದ್ದು ಪ್ರಕೃತಿಯಲ್ಲಿನ ವೈವಿಧ್ಯತೆ. “ಗಿಚಿಡಿieಣಥಿ is ಣhe sಠಿiಛಿe oಜಿ ಟiಜಿe ವೈವಿಧ್ಯತೆಯು ಜೀವನದ ಮಸಾಲೆ' ಎಂಬ ಬಳಕೆಯಲ್ಲಿರುವ ಪದಗುಚ್ಚ (ನುಡಿಗಟ್ಟು) ಮೊದಲು 1785 ರಲ್ಲಿ ವಿಲಿಯಂ ಕೌಪರ್ ಅವರ 'ದಿ ಟಾಸ್ಕ್' ಎಂಬ ಕವಿತೆಯಲ್ಲಿ ಕಾಣಿಸಿಕೊಂಡಿತು. "ವೈವಿಧ್ಯತೆಯು ಜೀವನದ ಮಸಾಲೆ, ಅದು ಅದರ ಎಲ್ಲಾ ಸುವಾಸನೆಯನ್ನು ನೀಡುತ್ತದೆ." ವಿವಿಧ ಕೆಲಸಗಳನ್ನು ಮಾಡುವುದು ಮತ್ತು ಎಲ್ಲಾ ರೀತಿಯ ಜನರೊಂದಿಗೆ ಸಂವಹನ ನಡೆಸುವುದು ಇತ್ಯಾದಿಗಳು ಜೀವನವನ್ನು ಹೆಚ್ಚು ಆಸಕ್ತಿದಾಯಕವಾಗಿಸುವ ಒಂದು ಮರ‍್ಗವಾಗಿದೆ ಪ್ರಕೃತಿ ನಮಗೆ ಅದೆಷ್ಟು ವೈವಿಧ್ಯತೆಗಳನ್ನು ನೀಡಿ ನಮ್ಮ ಜೀವನವನ್ನು ಸ್ವಾರಸ್ಯಕರ, ಸಂತೋಷಭರಿತವನ್ನಾಗಿ ಮಾಡಿದೆ ಎಂಬುದಕ್ಕೆ ಇಲ್ಲಿದೆ ಕೆಲವು ಉದಾಹರಣೆಗಳು. 

 ಚಳಿಗಾಲ, ಬೇಸಿಗೆ, ಮಳೆ, ಗಾಳಿಗೇ ಕೆಲವು ತಿಂಗಳುಗಳು, 2 ಅಯನಗಳು, 6 ಋತುಗಳು, 7 ವಾರಗಳು, 15 ತಿಥಿಗಳು, ಸೂರ್ಯ, ಚಂದ್ರ, ನಕ್ಷತ್ರ ಗಳು, ದ್ವಾದಶ ರಾಶಿಗಳು, 27 ನಕ್ಷತ್ರಗಳು, ಹೀಗೆ ಭಗವಂತನ ಸೃಷ್ಟಿಯಲ್ಲೇ ವೈವಿಧ್ಯತೆ ಇದ್ದು ಇದನ್ನು ಎಲ್ಲಾ ಜೀವಿಗಳೂ ಅನುಭವಿಸಿ ಆನಂದಿಸುತ್ತಿರುವಾಗ ಇವನ್ನೆಲ್ಲಾ ಯಾಕಪ್ಪಾ ಇಟ್ಟ, ಕೊಟ್ಟ ಎಂದು ಗೋಳಿಡುವುದು ಮೂರ್ಖತನವಲ್ಲದೆ ಮತ್ತೇನು ! 

 ಈ ಹಿನ್ನೆಲೆಯಲ್ಲಿ ಇಲ್ಲಿನ ನೀತಿ\ತತ್ವ ಎಂದರೆ ಮುಳ್ಳಿನ ಸೃಷ್ಟಿ ಸಮಯದಲ್ಲಿ ಆ ದೇವರಿಗೆ ಬುದ್ದಿ ಇರಲಿಲ್ಲ ಎಂದು ಯೋಚಿಸದೆ ಭಗವಂತ ಸೃಷ್ಟಿಯಲ್ಲಿ ಯಾವುದೂ ಅಪ್ರಯೋಜಕವಲ್ಲ, ಎಲ್ಲವೂ ಯಾವುದೋ ಒಂದು ಜೀವಿಗೆ ಪ್ರಯೋಜಕವಾದ್ದದ್ದೇ ಆಗಿರುತ್ತದೆ.ಹುಲ್ಲು ಪಶುಗಳಿಗೆ ಆಹಾರ, ಮನುಷ್ಯರಿಗಲ್ಲ ಇಲ್ಲಿ ಇದು ಇವನಿಗೆ ಅಪ್ರಯೊಜಕವಾಗಿರಬಹುದು ಪಶುಗಳಿಗೆ ಪ್ರಯೋಜಕ. ಇಲ್ಲಿ ಮನುಷ್ಯ ಕಲಿಯಲೇಬೇಕಾದ ಒಂದು ಅತ್ಯಗತ್ಯ ನೀತಿ ಎಂದರೆ ಯಾವುದನ್ನು, ಯಾರು, ಯಾವಾಗ, ಹೇಗೆ, ಎಷ್ಟು ಬಳಸಬೇಕು ಎಂಬ ವಿವೇಕ ವಿವೇಚನೆಯಷ್ಟೆ. ಇವನ್ನು ನಾವು ಕಲಿತರೆ, ಸೃಷ್ಟಿಯಲ್ಲಿರುವುದೆಲ್ಲವೂ ಸೋಗಸಾದ್ದೇ, ಪ್ರಯೋಜಕವಾದ್ದೇ., ನಮಗಾಗಿಯೇ, ನಮ್ಮ ಸುಖಕ್ಕಾಗಿಯೇ ಎಂಬ ಅರಿವು ನಮ್ಮಲ್ಲಿ ಮೂಡಿ ನಾವು ವಿವೇಕಿಗಳೆನಿಸಿಕೊಳ್ಳುತ್ತೇವೆ.

Comments