ತಂದೆಯಿಂದ ಮಗನಿಗೆ ಬರೆದ ಓಲೆ
ಬರೆದವರು : ಜೆ. ಎಸ್. ಗಾಂಜೇಕರ, ಕುಮಟಾ
ಆಸ್ಟ್ರೇಲಿಯಾದಲ್ಲಿದ್ದ ಮಗನಿಗೆ ಬರೆದ ಓಲೆ.....
ಸಾಯಿ ಪ್ರಸಾದ ,
ಇಂದು ಮುಂಜಾನೆ ಗಾರ್ಡನ್ ಗೆ ಹೋಗಿದ್ದೆ ಬಹಳ ದಿನಗಳ ತರುವಾಯ ವಾಯುವಿಹಾರಕ್ಕೆoದು. ಅಲ್ಲಿ ನನಗೆ ಹಳೆಯ ಸ್ನೇಹಿತರು ಸಿಕ್ಕರು. ಅವರು ಸಹ ನನ್ನ ವಯಸ್ಸಿನವರೇ.
" ಗಾoಜೆಕರರೇ, ಬಹಳ ದಿನಗಳಾಯಿತು ಕಾಣಲೇ ಇಲ್ಲ?ಸೌಖ್ಯ ತಾನೇ " ಎಂದು ಆತ್ಮೀಯದಿಂದ ಕೇಳಿದರು.
ಆಗ ನಾನು " ಸೌಖ್ಯವಾಗಿದ್ದೇನೆ. ಸ್ವಲ್ಪ ಕಾಲು ನೋವಿನಿಂದ ಬರಲಾಗಲಿಲ್ಲ. ಈಗ ಸ್ಪಲ್ಪ ಕಡಿಮೆ ಆಗಿದೆ "ಎಂದೆ.
ನಾನು ಕೇಳಿದೆ " ಸರ್, ತಮಗೆ ಎಷ್ಟು ಜನ ಮಕ್ಕಳು? ಎಂದು.
ಆಗ ಅವರು ತಮ್ಮ ಕುಟುಂಬದ ಸವಿಸ್ತಾರ ಮಾಹಿತಿ ಯನ್ನುಕೊಟ್ಟರು.
ಆಗ ಅವರು ಹೇಳಿದರು......
ನನಗೆ ಇಬ್ಬರು ಗಂಡು ಮಕ್ಕಳು. ಇಬ್ಬರಿಗೂ ಮದುವೆ ಆಗಿದೆ. ಇಬ್ಬರೂ ಇಂಜಿನಿಯರ್ಸ್. ಒಬ್ಬವನು H.A. L. ಬೆಂಗಳೂರು ನಲ್ಲಿ , ಇನ್ನೊಬ್ಬನು ಹೈದ್ರಾಬಾದ್ ನಲ್ಲಿ ಇದ್ದಾನೆ. ಇಬ್ಬರೂ ಸ್ವಂತ ಫ್ಲಾಟ್ ತೆಗೆದುಕೊಂಡು ವಾಸವಾಗಿದ್ದಾರೆ.ಇಬ್ಬರೂ ಒಂದೊಂದು ಗಂಡು ಮಗು ಆಗಿದೆ. ಇಬ್ಬರೂ ತಮ್ಮ ತಮ್ಮ ಸಂಸಾರ ಮಾಡಿಕೊಂಡು ಆರಾಮಾಗಿ ಇದ್ದಾರೆ.
ಇಲ್ಲಿ ನಾನು ಮತ್ತು ಶ್ರೀಮತಿ ಆರಾಮಾಗಿ ಇದ್ದೇವೆ.
ಆಗ ನಾನು " ನಿಮಿಬ್ಬರು ಮಕ್ಕಳ ಮನೆಯಲ್ಲಿ ಆರಾಮಾಗಿ ಇರಬಹುದಿತ್ತಲ್ಲ ಎಂದು ಕೇಳಿದೆ.
ಆಗ ಅವರು " ಇಲ್ಲಾ ಗಾಂಜೇಕರ, ಮಗ ಸೊಸೆ ಆಫಿಸಿಗೆ ಹೋದರೆ ಮೊಮ್ಮಕ್ಕಳು ಸ್ಕೂಲಿಗೆ ಹೋದರೆ ನಾವಿಬ್ಬರೇ ಮನೆಯಲ್ಲಿ ಇರಬೇಕಾಗುತ್ತದೆ.
ನನ್ನ ಮಕ್ಕಳು, ಸೊಸೆ ಇಲ್ಲಿಯೇ ಇರ್ರಿ ಎಂದು ಒತ್ತಾಯ ಮಾಡುತ್ತಾರೆ. ಆದರೆ ನಮಗೆ ಅಲ್ಲಿರಲು ಇಷ್ಟ ಆಗುವುದಿಲ್ಲ. ಯಾಕಂದರೆ ಇಲ್ಲಿ ನಮ್ಮ ಪೂರ್ವಜರು ಕಟ್ಟಿದ ದೊಡ್ಡ ಮನೆ, ತೋಟ ಇದೆ. ನನಗೆ ಪಿಂಚಣಿ ಬರುತ್ತದೆ. ಅಷ್ಟೇ ಸಾಕು ನಮಗೆ. ಅವರು ಸಂತೋಷ, ಆನಂದದಿಂದ ಇದ್ದರೆ ಸಾಕು. ಈ ನಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸುಖ, ಶಾಂತಿ, ನೆಮ್ಮದಿಯ ಜೀವನದಿಂದ ಬಾಳಿದರೆ ಅದೇ ನಮಗೆ ತೃಪ್ತಿ. ಅವರ ಏಳ್ಗೆ , ಪ್ರಗತಿ, ಅಭಿವೃದ್ಧಿ ಅದುವೇ ನಮಗೆ ಪರಮಾನಂದ. ಏನಂತೀರಿ ಗಾoಜೆಕರರೇ? ಸರಿ ತಾನೇ?
ನಾನು ಹೇಳಿದೆ " ನೀವು ಹೇಳಿದ್ದು 100% ಸರಿ ಇದೆ ಸರ್. ನಾವು ಯೌವನದಲ್ಲಿದ್ದಾಗ, ಹೇಗೆ ನಮ್ಮ ತಂದೆ- ತಾಯಿಯವರು
ಸಾಕಿ ಸಲುಹಿ ನಮಗೆ ವಿದ್ಯೆಯನ್ನು ಕೊಟ್ಟು ಸುಂದರ ಬಾಳನ್ನು ಬಾಳಲು ಪ್ರೆರೇಪಿಸಿದರೋ ಹಾಗೆಯೇ ನಮ್ಮ ಮಕ್ಕಳ, ಮೊಮ್ಮಕ್ಕಳ ಭವಿಷ್ಯವನ್ನು ನೋಡಿ ಆನಂದ ಪಡುವುದೇ ನಮ್ಮ ಅಂತರಾಳದ ಬಯಕೆ. ಅದುವೇ ಭಗವಂತನಲ್ಲಿ ಪ್ರಾಥನೆ. " ಎಂದು ಹೇಳಿದೆ.
ಅವರೂ ಸಹ ನನ್ನ ಮಾತನ್ನು ಒಪ್ಪಿಕೊಂಡರು.
ಅವರು ಮುಂದುವರಿಸುತ್ತಾ ಹೇಳಿದರು....
"ಗಾoಜೆಕರರೇ, ನನ್ನ ಇಬ್ಬರು ಮಕ್ಕಳು ನಮಗೆ ತಿಂಗಳಿಗೆ ಖರ್ಚಿಗೆoದು ಒಂದಿಷ್ಟು ಹಣ ಕೊಡುವುದಾಗಿ ಹೇಳಿದರು. ಆಗ ನಾನು ಹೇಳಿದೆ, ನನಗೆ ಸಾಕಷ್ಟು ಪಿಂಚಣಿ ಬರುತ್ತದೆ. ನಮ್ಮ ಖರ್ಚಿಗೆ ಸಾಕಾಗುತ್ತದೆ. ಒಂದು ವೇಳೆ ನಮಗೆ ಹಣ ಕೊಡಬೇಕೆಂದಿದ್ದರೆ ಪ್ರತಿ ತಿಂಗಳು ಆ ಹಣವನ್ನು ನಿಮ್ಮ ನಿಮ್ಮ ಮಕ್ಕಳ ಹೆಸರಿನಲ್ಲಿ bank ನಲ್ಲಿ ಇಡಿ. ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಉಪಯೋಗಿಸಿರಿ " ಎಂದೆ.
ಹಾಗೆಯೇ ಒಂದು ಮಾತು ಅವರಿಗೆ ಹೇಳಿದೆ ...
" ಮಕ್ಕಳೇ, ನಿಮ್ಮ ಜನ್ಮದಿನದoದು ವೃಧಾಶ್ರಮಕ್ಕೊ ಅನಾಥಾಶ್ರಮಕ್ಕೊ ಹೋಗಿ ಅಲ್ಲಿಯವರಿಗೆ ಹಣ್ಣು - ಹಂಪಲ ಕೊಟ್ಟು ಬಂದರೆ ಒಳ್ಳೇದೆಂದು ಅನಿಸುತ್ತಿದೆ.
ಹಾಗೆಯೇ ಇನ್ನೊಂದು ಮಾತು ಮಕ್ಕಳೇ, ಏನಂದರೆ --- ನಾವು ಇನ್ನೆಷ್ಟು ದಿನ ಇರುತ್ತೇವೋ ಗೊತ್ತಿಲ್ಲ, ನೀವು ಇಬ್ಬರೂ ವಾರಕ್ಕೆ ಎರಡು ಸಲವಾದರೂ ನಮಗೆ ವಿಡಿಯೋ call ತಪ್ಪದೇ ಮಾಡಬೇಕು. ಆಗ ನಾವು ಮೊಮ್ಮಕ್ಕಳ ಜೊತೆ ಹಾಗೂ ಸೊಸೆಯೊಂದಿಗೆ ಮಾತಾಡಿದರೆ ಮಾತ್ರ ನಮಗೆ ಸಂತೋಷವೂ, ನೆಮ್ಮದಿಯೂ ದೊರೆತು ಇನ್ನೂ ಹೆಚ್ಚಿನ ಕಾಲ ಬದುಕಲು ಸಾಧ್ಯವಾದೀತು. ನಾನು ನಿಮ್ಮ ತಾಯಿ ಬಹು ಕಾಲ ಬದುಕಬೇಕೆಂಬ ಹಂಬಲ ನಿಮಗೆ ಇದ್ದರೆ ವಿಡಿಯೋ call ತಪ್ಪದೇ ಮಾಡಿ. ಎಂದು ಹೇಳಿದೆ.
ಹೀಗಾಗಿ ನನ್ನ ಮಕ್ಕಳು ತಪ್ಪದೇ ವಿಡಿಯೋ call ನಮಗೆ ಮಾಡುತ್ತಾರೆ. ಆಗ ನನ್ನ ಮೊಮ್ಮಕ್ಕಳು " ಹಾಯ್ ಅಜ್ಜಾ, ಹಾಯ್ ಅಜ್ಜಿ ಎಂದು ಕರೆದಾಗ ನಮಗಾಗುವ ಆನಂದ ಅಷ್ಟಿಷ್ಟಲ್ಲ. " ಎಂದು ಹೇಳಿ ತಮ್ಮ ಖುಷಿ ಹಂಚಿಕೊಂಡರು.
ಈ ರೀತಿಯಾಗಿ ಸ್ನೇಹಿತ ಹೇಳಿದ.
ನನ್ನ ವಿಚಾರಧಾರೆಯೂ ಹಾಗೆಯೇ ಇದೆ.
ಸ್ನೇಹಿತ ನನಗೆ ಕೇಳಿದ " ಸರ್, ತಮಗೆ ಎಷ್ಟು ಜನ ಮಕ್ಕಳು? ಎಂದು ಆಗ ನಾನು, ನನ್ನ ಕುಟುಂಬದ ಸವಿಸ್ತಾರ ಮಾಹಿತಿಯನ್ನು ಹೇಳಿದೆ.
ಆದುದರಿಂದ , ಸಾಯಿಪ್ರಸಾದ,
ನನ್ನ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ನಡೆದುಕೊಂಡರೆ ನನಗೂ ನಿಮ್ಮ ಆಯಿಗೂ ಖುಷಿ.
ಇನ್ನೆಷ್ಟು ದಿನ ನಮ್ಮ ಪಯಣವೋ ಗೊತ್ತಿಲ್ಲ.
ವಿಡಿಯೋ call ನೀವು ಮಾಡುವುದರಿಂದ , ನೀವು ಸೊಸೆಯಂದಿರು ಮೊಮ್ಮಕ್ಕಳು ಮಾತಾಡಿದಾಗ ನಮಗಾಗುವ ಆನಂದಕ್ಕೆ ಮಿತಿಯೇ ಇಲ್ಲ. ಈ ಅವಕಾಶ ನೀವೇಲ್ಲರೂ ನಮಗೆ ನೀಡಿದರೆ ನಾವು ಕೆಲವು ಕಾಲ ಬದುಕಬಹುದೇನೋ.
ನೀನು ನನ್ನ ಹಿರಿಯ ಮಗನಾಗಿ ನಿನ್ನಲ್ಲಿ ಹಂಚಿಕೊಂಡೆ.
ಈ ವಿಷಯವನ್ನು ನಿನ್ನ ತಮ್ಮoದಿರಿಗೂ ತಂಗಿಗೂ ತಿಳಿಸು.
ನಿಮ್ಮೆಲ್ಲರಿಗೂ ಶುಭವಾಗಲಿ,
ಆಯೀ - ಬಾಬಾ

Comments
Post a Comment