ಧಾರ್ಮಿಕ ವಿಧಿಯಲ್ಲಿ ಕಾಗೆಗೆ ಏಕೆ ಮಹತ್ವದ ಸ್ಥಾನ ! ?

 ಧಾರ್ಮಿಕ ವಿಧಿಯಲ್ಲಿ ಕಾಗೆಗೆ ಏಕೆ ಮಹತ್ವದ ಸ್ಥಾನ ! ?

 ಲೇಖಕರು : ಎಂ ಆರ್ ವೆಂಕಟರಾಮಯ್ಯ 



ಶೀರ್ಷಿಕೆಯಲ್ಲಿರುವ ಪ್ರಶ್ನೆ ಸಹಜ ಎನಿಸುವುದಿಲ್ಲವೇ ! ನಮ್ಮ ಕಾ ಕಾ ಗಳ ಜನನದ ಇತಿಹಾಸದ ಬಗ್ಗೆ ಹುಡುಕುತ್ತಾ ಹೊರಟರೆ (ಕಶ್ಯಪ ಮತ್ತು ಪತ್ನಿ ತಮ್ರ ದಂಪತಿಗಳ ಪುತ್ರಿ) ‘ಕಕಿ’ (ಕಾಕಿ) ಎಂಬಾಕೆಯಿAದ ಕಾಗೆ ಜನಿಸಿತು ಎಂಬುದು ಅಗ್ನಿ ಪುರಾಣದಿಂದ ತಿಳಿಯುತ್ತದೆ.

 ಇದರ ಜೊತೆಗೆ ಶಿವ ಪುರಾಣದನುಸಾರ, ಕಾಶಿ ದೊರೆಯ ಪುತ್ರಿ ಕಲಾವತಿ ಎಂಬಾಕೆ ಶಿವ ಮಹಾದೇವನ ಭಕ್ತಳಾಗಿದ್ದು ಯಾವಾಗಲೂ ಶಿವ ಪಂಚಾಕ್ಷರಿ ವiಂತ್ರ ಜಪಿಸುತ್ತಿದ್ದಳು ನಂತರದಲ್ಲಿ ಈಕೆ ಮಥುರೆಯ ದೊರೆ ದಶರ್ಹನನ್ನು ವಿವಾಹವಾದಳು. ಇಲ್ಲಿನ ಒಂದು ವಿಚಿತ್ರ ಎಂದರೆ ದಶರ್ಹ ಪತ್ನಿ ಕಲಾವತಿ ಯನ್ನು ಸ್ಪರ್ಶಿಸಿದಾಗೆಲ್ಲಾ ಆಕೆಯ ಮೈ ಬಿಸಿಯಾಗಿದ್ದು ದಶರ್ಹನ ಕೈಗಳನ್ನು ಸುಡುತ್ತಿತ್ತು. 

 ಇದಕ್ಕೆ ಕಾರಣ ಜ್ಞಾನಿಗಳನ್ನು ವಿಚಾರಿಸಿದಾಗ ದಶರ್ಹ ಅಧರ್ಮದ ಕಾರ್ಯಗಳನ್ನು ಮಾಡುತ್ತಿದ್ದು ಪಾಪಿಯಾಗಿದ್ದನು. ಆ ಪಾಪವೇ ಅವನ ಕೈಗಳನ್ನು ಸುಡುತ್ತಿತ್ತು ಎಂಬುದು ತಿಳಿಯಿತು. ನಂತರದಲ್ಲಿ ಗರ್ಗ್ ಋಷಿಯ ಮಂತ್ರ ಶಕ್ತಿ ದಶರ್ಹನ ಪಾಪಗಳನ್ನು ಸುಟ್ಟಿತು. ಈ ಪಾಪಗಳೇ ‘ಕಾಗೆಗಳಾ ಯಿತು” ಎಂಬ ಮಾಹಿತಿ ತಿಳಿದುಬಂದಿದೆ 

 ನಮಗೆ ಕಾಗೆಯ ಸಹಾಯದ ಬಗ್ಗೆ ಯೋಚಿಸಿದಾಗ ನೆನಪಾಗುವುದು ಪ್ರತಿ ದಿನ ಬೆಳಗಾಯಿತು ಎಂಬುದನ್ನು ಸೂಚಿಸಲು ಕಾಗೆ ಕಾ ಕಾ ಎಂದು ಕೂಗಿದಾಗ ಓಹ್, ಬೆಳಗಾಗಿದೆ ಎಂಬ ನೆನಪಾಗುತ್ತದೆ. ಇದಾಗದಾದರೆ ಕೊ ಕೊ ಕೋ ಎಂದು ಕೋಳಿಯಾದರೂ ಕೂಗಬೇಕು. ಹೀಗೆ ಇವುಗಳಿಂದ ನಮಗೆ ಸಿಗುತ್ತ ಇರುವ ನಿತ್ಯ ಸೇವೆಗಾÀಗಿ ಅವಕ್ಕೆ ನಾವು ಮನುಷ್ಯರುÀÄ ಏನನ್ನಾದರೂ ಪ್ರತಿಫಲ ನೀಡುತ್ತೇವೆಯೇ ? ಇಲ್ಲ. ಬದಲಿಗೆ ಹೊರಗೆ ಬಂದ ನಾವು ಅವನ್ನು ಹೈ ಚೂ ಎಂದು ಶಬ್ದಮಾಡಿ ಓಡಿಸುತ್ತೇವೆ . ಹೀಗಾದರೂ ಅವು ನಮ್ಮ ಕೃತಘ್ನತೆಗೆ ಬೇಸರಿಸಿಕೊಳ್ಳದೆ, ಯಾರ ಹೊಗಳಿಕೆ ತೆಗಳಿಕೆಯನ್ನೂ ಲಕ್ಷಿಸದೆ, “ಕರ್ಮಣ್ಯೇ ವಾಧಿಕಾರಸ್ಥೇ” ಎಂಬAತೆ ದಿನವೂ ತನ್ನ ಕರ್ಮವನ್ನು ಆಚರಿಸುತ್ತಿರುತ್ತದೆ. ಇವನಲ್ಲವೇ ಪ್ರತಿಫಲಾಪೇಕ್ಷೆಯಿಲ್ಲದ ನಿಷ್ಕಾಮ ಕರ್ಮಯೋಗಿ ಎಂದರೆ ? . 

 ಯಾರದಾದರೂ ಮನೆಯ ಮೇಲೆ ಕಾಗೆ ಕುಳಿತು ಕಾ ಕಾ ದ್ವನಿ ಮಾಡಿದರೆ ಓಹ್ ! ಯಾರ್ ಬರಬಹುದಪ್ಪಾ ನಮ್ಮ ಮನೆಗೆ ! ಕಾಗೆ ಕೂಗ್ತಾ ಇದೆ ಅಂತೀವಿ ಕಾಕತಾಳಿಯವೋ ಎಂಬAತೆ ನಾವ್ ಅಂದುಕೊAಡAತೆ ನಮ್ಮ ಮನೆಗೆ ಬಂಧು ಗಳೋ ಮಿತ್ರರೋ ಬಂದರೆ, ಹಾ, ನಾ ಆಗಲೇ ಹೇಳಲಿಲ್ಲವೇ ! ಕಾಗೆ ನಮ್ ಮನೆ ಮೆಲೆ ಕೂಗಿದಾಗಲೇ ಅಂದೆ, ನಮ್ಮ ಮನೆಗೆ ಯಾರಾದರೂ ರ‍್ತಾರೆ ಅಂತ, ಅಂದ ಹಾಗೇ ನೀವ್ ಬಂದಿರಿ ಅಂತ ನಮ್ಮ ಸೂಕ್ಷ ಬುದ್ದಿಯನ್ನು ಅವರೆದುರಿಗೆ ನಾವೇ ಹೊಗಳಿಕೊಳ್ತೇವೆಯೇ ಹೊರತಾಗಿ, ಕಾಗೆಯ ದೂರ ದೃಷ್ಟಿಯನ್ನು ಹೊಗಳೋದೇ ಇಲ್ಲ. ನಾವೆಷ್ಟು ಸ್ವಾರ್ಥಿಗಳು ಎನಿಸುವುದಿಲ್ಲವೇ !

 ಇದು ಕಾಗೆ ಉವಾಚ : ಹಿಂದೆAದೋ ನಮ್ಮಲ್ಲಿ (ಕಾಗೆಗಳ ಪೈಕಿ) ಯಾರೋ ಒಬ್ಬರು ಮರದ ಕೊಂಬೆಯ ಮೇಲೆ ಕುಳಿತ ¸ಂದರ್ಭದಲ್ಲೇ (ನಮ್ಮ ಭಾರ ತಡೆಯಲಾರದೆ ಅಲ್ಲದಾದರೂ )ಯಾವುಧೋ ಕಾರಣಕ್ಕೆ ಕೊಂಬೆ ಮುರಿದು ಬಿದ್ದ ಕಾರಣ, ಕೊಂಬೆ ಮೇಲೆ ಕಾಗೆ ಕುಳಿತಿದ್ದಕ್ಕೇ ಕೊಂಬೆ ಮುರಿಯಿತು ಎಂಬ ತಪ್ಪು ನಿರ್ಧಾರ ಹುಟ್ಟಿಸಿದ ಅಂದಿನ ಜನ, ನಮ್ಮ ಹೆಸರಿನಲ್ಲಿ “ಕಾಕತಾಳೀಯ ನ್ಯಾಯ” ಎಂದು ನಮ್ಮ ಹೆಸರಿನಲ್ಲೇ ನ್ಯಾಯಶಾಸ್ತçದ ವ್ಯಾಖ್ಯಾನವನ್ನೇ ಪ್ರಾರಂಭಿಸಿಬಿಟ್ಟರು.ಇದು ಸ್ವಾಮಿ ಜನ ನಮಗೆ ದೊಕಿಸಿದ ನ್ಯಾಯ !

 ಅಂದೇಕೆ ? ಇಂದೂ ಅದೆಷ್ಟೋ ಜನ ವಿದ್ಯಾವಂತರೂ ಬುದ್ದಿವಂತರೂ ಮಾನವೀಯತೆ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಉದ್ದುದದ ಭಾಷಣ ಮಾಡು ತ್ತಾರೆಯೇ ಹೊರತಾಗಿ ತಾವು ಆಚರಿಸುತ್ತಿಲ್ಲ. ಬದಲಿಗೆ “ಹಂಚಿ ತಿನ್ನುವ, ನೀನೂ ಬದುಕಿ ನನ್ನೂ ಬದುಕಿಸು, ಸರ್ವೇ ಜನಾಃ ಸುಖಿನೋ ಭವಂತು” ಎಂಬ ತತ್ವಕ್ಕೆ ತಿಲಾಂಜಲಿ ಕೊಟ್ಟು ಪೂರ್ತಿಯಾಗಿ ತಾವೂ ಸ್ವಾರ್ಥಿಗಳಾರುವುದೇ ಅಲ್ಲದೆ ತಮ್ಮವರನ್ನೂ ಅತಿ ಸ್ವಾರ್ಥಿಗಳನ್ನಾಗಿ ಮಾಡುತ್ತಿರುವುದೂ ದುರದೃಷ್ಠಕರ ಬೆಳವಣಿಗೆಯಾಗುತ್ತಿದೆ. . ಆದರೆ ಕಾಗೆಳಾದ ನಾವು ಇವರಂತಲ್ಲ. ಒಂದು ಚೂರು ಅಹಾರ ಎಲ್ಲೇ ನಮಗೆ ಕಾಣಿಸಿದರೂ ನಾವೊಬ್ಬರೇ ತಿಂದು ಮುಗಿಸುವ ಸ್ವಾರ್ಥಿಗಳಾಗಿರದೆ, ಎಲ್ಲೆಲ್ಲೋ ಇರಬಹುದಾದ ನಮ್ಮ ಪರಿವಾರದವರನ್ನ್ನು ಕಾ ಕಾ ಕಾ ಎಂದು ಕರೆದು ಸಿಕ್ಕಿದ್ದನ್ನು ಎಲ್ಲರೂ ತಿಂದು ಸಹಬಾಳ್ವೆಯ ತತ್ವವನ್ನು ಆಚರಣೆಯಲ್ಲಿಟ್ಟಿದ್ದೇವೆ.

 ಬಹು ಹಿಂದೆ ನಮ್ಮವನೊಬ್ಬ ’ಕಾಕಾಸುರ’ ಎಂಬುವವ ಇದ್ದನಂತೆ, ಇವನು ವನದಲ್ಲಿದ್ದ ಸೀತಾದೇವಿಯ ಸುತ್ತ ಸುತ್ತಿ ಕಾಡಿದ ಎಂಬ ಕಾರಣಕ್ಕೆ ಶ್ರೀರಾಮ ಆ ಕಾಕಾಸುರನಿಗೆ ಬಾಣ ಪ್ರಯೋಗ ಮಾಡಿದ ಪರಿಣಾಮ ನಮ್ಮವನ ಕಣ್ ಕಾಣಿಸದಾಯಿತಂತೆ, ಅಂದಿನಿAದೀಚೆಗೆ ಜನಿಸಿದ ನಮ್ಮ ಕಾ ಕಾ ಬಳಗವೆಲ್ಲಾ “ಒಕ್ಕಣ” ರಾದರಂತೆ.. ಹೀಗೆ ಒಬ್ಬರ ತಪ್ಪಿಗೆ ಅಮಾಯಕರಾದ ನಮ್ಮ ಬಳಗವೆಲ್ಲಾ”ಒಕ್ಕಣ ರು ಎಂಬ ಶಾಶ್ವತವಾದ ಅಪವಾದ ಹೊರಬೇಕಾಗಿದೆ. 

 ಮನುಷ್ಯರಿಗೆ ಇವರ ಯಾವ ದೇವರು ರಕ್ಷಣೆ ಕೊಡಲಿ ಕೊಡದಿರಲಿ, ನಮ್ಮನ್ನು ಮಾತ್ರ ನಮ್ಮನ್ನು ವಾಹನವಾಗಿಸಿಕೊಂಡಿರುವ ಶನಿದೇವರು ನಮ್ಮನ್ನು ಸದಾ ರಕ್ಷಿಸುತ್ತಿರುತ್ತಾನೆ, ನಮ್ಮೀ ದೈವಕ್ಕೆ ಹೆದರಿ ಅದೆಂತಹಾ ಕೆಟ್ಟ ಜನವಾದರೂ ಸರಿ, ನಮ್ಮ ತಂಟೆಗೆ ಬರುವುದಿಲ್ಲ.

 ಮನುಷ್ಯರ ಧಾಮಿಕ ವಿಧಿಗಳಲ್ಲಿ ಕಾಗೆಗಳಿಗೇಕೆ ಮಹತ್ವದ ಸ್ಥಾನ ಸಿಕ್ಕಿದೆ ಎಂಬುದಕ್ಕೆ ಕಾರಣ :. ಹಿಂದೊಮ್ಮೆ ಮರುತ್ತರಾಯನು ಧೇವತೆಗಳ ಸಭೆಯನ್ನು ಏರ್ಪಡಿಸಿದಾಗ ಇದಕ್ಕೆ ದೇವತೆಗಳೆಲ್ಲರೂ ಹಾಜರಾಗಿದ್ದರು. ಈ ಸಭೆಯಲ್ಲಿ ಪಾಲೊಳ್ಳಲು ಯರ್ಮ ಧರ್ಮರಾಯನೂ ಪ್ರಯಾಣ ಬೆಳೆಸಿದ್ದನು. ದೇವತೆಗಳ ಈ ಸಭೆಯ ವಿಷಯ ಲಂಕಾಧಿಪತಿ ರಾವಣನಿಗೆ ತಿಳಿಯಿತು. ಇಲ್ಲಿಗೆ ಬಂದು ಸಮಸ್ತ ದೇವತೆಗಳಿಗೂ ಕಿರುಕುಳ ಕೊಡಲು ನಿರ್ಧರಿಸಿದ ಈ ರಾವಣ, ಈ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬರುತ್ತಿದ್ದಾಗ ಮಾರ್ಗದಲ್ಲಿ ಯಮಧರ್ಮರಾಯನಿಗೆ ರಾವಣನು ಕಾಣಿಸಿದನು. ರಾವಣನನ್ನು ಕಂಡ ಯಮ ಹೆದರಿ ಹೇಗಾದರೂ ಇವನಿಂದ ನಾ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿ ಹತ್ತಿರದಲ್ಲಿದ್ದ ಕಾಗೆಯ ಶರೀರದಲ್ಲಿ ಅವಿತುಕೊಂಡನು. 

 ಯಮನನ್ನು ಕಾಣದ ರಾವಣ ಸಭೆಯ ಸ್ಥಳಕ್ಕೆ ಬಂದಾಗ ಇವನನ್ನು ಕಂಡು ಹೆದರಿದ ಹಲವು ದೇವತೆಗಳು ತಮ್ಮ ಹತ್ತಿರದಲ್ಲೇ ಕಾಣಿಸಿದ ಹಲವು ಪಕ್ಷಿಗಳ ಶರೀರಗಳಲ್ಲಿ ಅವಿತುಕೊಂಡರು. ತನ್ನ ಕೈಗೆ ಯಾರೂ ಸಿಗಲಿಲ್ಲವಲ್ಲಾ ಎಂಬ ನಿರಾಶೆಯಿಂದ ರಾವಣ ಆ ಜಾಗದಿಂದ ನಿರ್ಗಮಿಸಿದ.

 ನಂತರದಲ್ಲಿ ಪಕ್ಷಿಗಳಲ್ಲಿ ಅವಿತುಕೊಂಡಿದ್ದ ದೇವತೆಗಳು ಹೊರಗೆ ಬಂದು ತಮ್ಮ ಪ್ರಾಣ ರಕ್ಷಿಸಿದ್ದಕ್ಕೆ ಒಬ್ಬೊಬ್ಬ ದೇವತೆಯೂ ಒಂದೊAದು ಪಕ್ಷಿಗೆ ವರ 


ಕೊಟ್ಟರಂತೆ. ತನ್ನ ಪ್ರಾಣ ರಕ್ಷಿಸಿದ ಎಲ್ಲಾ ಕಾಗೆಗಳನ್ನೂ ಯಮಧರ್ಮ ರಾಯನೂ ಅಶೀರ್ವದಿಸಿ, ಶ್ರಾದ್ಧ ಕಾರ್ಯಕ್ರಮಗಳಲ್ಲಿ ಪಿತೃಗಳಿಗೆ ಅರ್ಪಿಸ ಲಾಗುವ ಆಹಾರವನ್ನು ತಿನ್ನುವ ಹಕ್ಕು ನಿಮಗೆ ನೀಡಿದ್ದೇನೆ ಎಂದನು.

 ಈ ಹಿನ್ನೆಲೆಯಲ್ಲೇ ಕಾಗೆಗಳನ್ನು ಜೀವಂತವಾಗಿರುವ ಹಾಗೂ ಮರಣಿ ಸಿದವರ ನಡುವಿನ ಕೊಂಡಿ, ಪೂರ್ವಜರು ಕಾಗೆಯ ರೂಪದಲ್ಲಿ ಜೀವಂತರನ್ನು ದರ್ಶಿಶಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಲ್ಲಿ ಹಿಂದುಗಳು ಶ್ರಾದ್ಧ \ಇತರ ವಿಶೇಷ ದಿನಗಳಲ್ಲಿ ಮರಣಿಸಿದವರ ನೆನಪಿನಲ್ಲಿ ತಮ್ಮ ಸಂಬAಧೀಕರಿಗೆ ಹಿಂದೆ ಅವರಿಗೆ ಇಷ್ಟವಿದ್ದ ಆಹಾರವನ್ನು ಕೊಡೊಯ್ದು ಕಾಗೆಗೆ ಉಣಬಡಿಸುತ್ತಾರೆ ಇದನ್ನು ತಮ್ಮ ಪೂರ್ವಜರೇ ಸೇವಿಸಿದ್ದಾರೆ ಎಂಬ ಅZಲ ನಂಬಿಕೆ ಹಿಂದುಗಳ ಲ್ಲಿನ ಹಲವು ಭಕ್ತರದ್ದು.

 ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ಎವ್ವೆರಿ ಡಾಗ್ ಹ್ಯಾಸ್ ಇಟ್ಸ್ ಡೆ ಎಂಬ ಗಾದೆಗಳು ಇಂದೂ ಜಾರಿಯಲ್ಲಿವೆ. ಇಂದಿನ ಯುಗದಲ್ಲಿ. ಜವಾನ ದಿವಾನ ನಾಗಬಹುದು, ಹಿಂದೊಮ್ಮೆ ಯಾರೂ ಲೆಕ್ಕಿಸದವನೊಬ್ಬ ಇದ್ದಕ್ಕಿದ್ದಂತೆ ದೊಡ್ಡ ಅಧಿಕಾರಸ್ಥನೋ ಕೋಟ್ಯಾಧೀಶನೋ ಆಗಿಬಿಡಬಹುದು, ಯಾವ ಹುತ್ತದಲ್ಲಿ ಎಂತಹಾ ಹಾವಿರುತ್ತದೋ ತಿಳಿದಿರುವುದಿಲ್ಲ. “ ಈ ಕಾರಣದಿಂದಲೇ ಈ ಯುಗದಲ್ಲಿ ಯಾರು ಯಾರನ್ನೂ ನಿರ್ಲಕ್ಷಿಸುವಂತಿಲ್ಲ. ಏ ಕತ್ತೆ ಗೂಬೆ ನಾಯಿ ಕಾಗೆ,ಹದ್ದು ನವಿಲು, ಇವನು ಯಾವ ಕೆಲಸಕ್ಕೂ ಬಾರದವ ಫಿಟ್ ಫಾರ್ ನತಿಂಗ್ ಎಂದು ಯಾರನ್ನೂ ಬೈಯುವಂತಿಲ್ಲ, ಏಕೆಂದರೆ ಇವರಿಗೆ ಒಳ್ಳೆಯ ಕಾಲ ಬಂದಾಗ ಹಿಂದೆ ಇವರನ್ನು ಯಾರು ಯಾರನ್ನೂ ತಿರಸ್ಕರಿಸಿ \ ನಿರ್ಲಕ್ಷಿಸಿದ್ದರೋ ಅವರೆಲ್ಲರನ್ನೂ ಇವು ತರಾಟೆಗೆ ತೆಗೆದುಕೊಂಡಾಗ ಇವರು ಅಂದು ನಿಮ್ಮ ತಂಟೆಗೆ ನಾ ಬರಬಾರ ದಾಗಿತು,್ತ ತಪ್ಪಾಯಿತು ಎಂಬ ಕ್ಷಮಾಪಣೆ ಕೇಳಿಸಿಕೊಳ್ಳಬಹುದು. ಇಂದಿನ ಯಾವ ನಿಕೃಷ್ಟ ಪಕ್ಷಿ ಪ್ರಾಣಿ ಮನುಷ್ಯ ಯಾವಾಗ ಉಚ್ಚ ಸ್ಥಾನಕ್ಕೆ ಏರಬಹುದೋ, ಯಾರು ನೀಚ ಸ್ಥಾನಕ್ಕೆ ಇಳಿದು ನಮಗೆ ಕಿರುಕುಳ ಕೊಡಬಹುದೋ ಇಂದು ತಿಳಿಯ ಲಾಗದು. ಅದಕ್ಕಾಗಿಯೇ ಟು ಬಿ ಆನ್ ಎ ಸೇಫರ್ ಸೈಡ್, “ನಮಸ್ಕಾರದ ನಂಜಪ್ಪನವರAತೆ” ಕಂಡ ಸಸಕಂಡವರಿಗೆಲ್ಲಾ ಬಗ್ಗಿ ನಮಿಸುತ್ತಾ ನಡೆದರೆ “ಅಂದರಿಕಿ ಮಂಚೋಡ್ ಅನಂತಯ್ಯ”ಎAಬAತೆ ಎಲ್ಲರಿಂದ ನಾವು ಒಳ್ಳೆಯವ ಎನಿಸಿಕೊಂಡು ಕಾಲದ ಜೊತೆ ನಾವೂ ಮುಂದೋಡಬಹುದು ಎಂಬ ವಿವೇಕ ನಮಗಿದ್ದರೆ ನಾವು ಸೇಫಾಗಿರಬಹುದಲ್ಲವೇ ! ? ಮೀರ್ ಏಮಂಟಾರ್ ಸರ್ ! ಅವನಂಟಾರ ಕಾದಂಟಾರಾ ಸರ್ ! ? ಮಾಕ್ಯಾಲಂಟಾರಾ ? (ಇದಕ್ಕೆ ತಾವೂ ಹೌದಂತೀರಾ ! ಅಲ್ಲಾ ಅಂತೀರಾ, ನಮಗ್ಯಾಕಂತೀರಾ ? ಸರ್ ) 

Comments