ಸರ್ಪಚರಿತ್ರೆ

ಸರ್ಪಚರಿತ್ರೆ 

ಲೇಖನ - ಶ್ರೀ  ಬೇಲೂರು ರಾಮಮೂರ್ತಿ



ಸಾಮಾನ್ಯವಾಗಿ ಸರ್ಪಗಳು ಆಷಾಡ ಮಾಸದಲ್ಲೂ, ಜ್ಯೇಷ್ಠ ಮಾಸದಲ್ಲೂ ಶರೀರದ ಮೇಲೆ ಎಚ್ಚರ ತಪ್ಪಿ ಮದವೇರುತ್ತವೆ. ಆಗ ಗಂಡು ಹಾವೂ ಹೆಣ್ಣು ಹಾವೂ ಮೈ ಮರೆತು ಮೈಥುನಕ್ಕೆ ಪ್ರಾರಂಭಿಸುತ್ತವೆ. ಪಂಚಮೀ ತಿಥಿ ಸರ್ಪಗಳಿಗೆ ಪ್ರಿಯವಾದುದು. ಪಂಚಮಿ ಸರ್ಪಗಳಿಗೆ ದೊಡ್ಡ ಹಬ್ಬದ ದಿನವಾಗಿದೆ. ಇದನ್ನು ಆಚರಿಸಿದರೆ ವಾಸುಕಿ, ತಕ್ಷಕ, ಕಾಲ್ಮಿಯ, ಮಣಿಭದ್ರಕ, ಐರಾವತ, ಧೃತರಾಷ್ಟç, ಕಾರ್ಕೋಟಕ, ಧನಂಜಯ ಎಂಬ ಈ ನಾಗಗಳು ಪ್ರಾಣಿಗಳ ಪ್ರಾಣಗಳನ್ನು ಬದುಕಿಸಿ ಅಭಯವನ್ನು ನೀಡುತ್ತವೆೆ. 

ತಾಯಿಯಿಂದಲೇ ಸರ್ಪಗಳಿಗೆ ಶಾಪ ಉಂಟಾಗಿದ್ದು ಒಂದು ರೋಚಕ ಕಥೆ. ಕ್ಷೀರಸಮುದ್ರದಲ್ಲಿ ಹುಟ್ಟಿದ ಉಚ್ಚೆöÊಶ್ರವಸ್ ಎಂದು ಕುದುರೆಯು ಬಹಳ ಬಿಳಿಯ ಬಣ್ಣದ್ದಾಗಿತ್ತು. ಸರ್ಪಗಳ ತಾಯಿಯಾದ ಕದ್ರು ತನ್ನ ಸವತಿ ವಿನತೆಯನ್ನು ಕರೆದು ಹಾಲಿನ ಸಮುದ್ರದಲ್ಲಿ ಹುಟ್ಟಿದ ಈ ಕುದುರೆಯ ಸರ್ವಾಂಗವೂ ಹಾಲಿನಂತೆಯೇ ಬೆಳ್ಳಗಿದೆ. ಆದರೆ ಇದರ ಬಾಲವೇಕೆ ಹೀಗೆ ಕಪ್ಪಗಿದೆ ಎಂದು ಕೇಳಿದಳು. ಅದಕ್ಕೆ ವಿನತೆಯು ಕುದುರೆಯ ಸರ್ವಾಂಗವೂ ಬೆಳ್ಳಗೇ ಇದೆ. ಇದರ ಅಂಗಗಳಲ್ಲಿ ಕಪ್ಪಾದುದು, ಕೆಂಪಾದುದು ಯಾವುದೂ ಇಲ್ಲ ಎಂದಳು. ಅದಕ್ಕೆ ಕದ್ರು ಒಂದು ಕಣ್ಣಿರುವ ನನಗೇ ಇದರ ಬಾಲ ಕಪ್ಪಾಗಿ ಕಾಣುತ್ತಿದೆ. ಆದರೆ ಎರಡು ಕಣ್ಣಿರುವ ನಿನಗೆ ಇದು ಏಕೆ ಕಾಣುತ್ತಿಲ್ಲ ಅಂದಳು. ಅವರಿಬ್ಬರಲ್ಲಿ ಹೀಗೆ ವಾದ ಬೆಳೆದು ಕಡೆಗೆ ವಿನತೆಯು ಕದ್ರುವಿಗೆ ನೀನು ಕುದುರೆಯ ಬಾಲದಲ್ಲಿ ಕಪ್ಪುಬಣ್ಣವನ್ನು ತೋರಿಸಿದರೆ ನಾನು ನಿನ್ನ ದಾಸಿಯಾಗುತ್ತೇನೆ, ಇಲ್ಲದಿದ್ದರೆ ನೀನು ನನ್ನ ದಾಸಿಯಾಗಬೇಕು ಅಂದಳು. ನಂತರ ಕದ್ರುವು ತನ್ನ ಮಕ್ಕಳಾದ ನಾಗರನ್ನು ಕರೆದು ನೀವೆಲ್ಲರೂ ಹೋಗಿ ಕುದುರೆಯ ಬಾಲದಲ್ಲಿ ಸೇರಿಕೊಳ್ಳಿ. ಆಗ ವಿನತೆಗೆ ಕುದುರೆಯ ಬಾಲ ಕಪ್ಪಾಗಿ ಕಾಣುವುದು. ಆಗ ಅವಳು ನನ್ನ ದಾಸಿಯಾಗುತ್ತಾಳೆ ಅಂದಳು. ತಾಯಿಯ ಈ ಕುಟಿಲವನ್ನು ಕೇಳಿದ ಮಕ್ಕಳು ಅಮ್ಮಾ ಇದು ನಿನಗೆ ಧರ್ಮವಲ್ಲ. ನಾವು ನಿನ್ನ ಮಾತಿನಂತೆ ನಡೆಯುವುದಿಲ್ಲ ಅಂದವು. ಅದಕ್ಕೆ ಕೋಪಗೊಂಡ ಕದ್ರು ನೀವೆಲ್ಲಾ ಬೆಂಕಿಯಲ್ಲಿ ಬಿದ್ದು ಸಾಯುತ್ತೀರ. ಕೆಲವೇ ದಿನಗಳಲ್ಲಿ ಪಾಂಡವರ ವಂಶದಲ್ಲಿ ಜನಮೇಜಯನೆಂಬುವವನು ಜನಿಸುವನು. ಅವನು ಇತರ ರಾಜರು ಮಾಡಲು ಅಸಾಧ್ಯವಾದ ಸರ್ಪಯಾಗವನ್ನು ಮಾಡುವನು. ಆ ಯಾಗದಲ್ಲಿ ಅವನು ನಿಮ್ಮನ್ನೆಲ್ಲಾ ಸುಡಲಿ ಎಂದು ಶಾಪ ಕೊಟ್ಟಳು. ತಾಯಿ ಶಾಪಕ್ಕೆ ಸರ್ಪಗಳು ಹೆದರಿದರೂ ತಾಯಿಯ ಮಾತನ್ನು ಕೇಳಲು ಒಪ್ಪಲಿಲ್ಲ. 

ಕದ್ರುವಿನ ಹಿರಿಯ ಮಗನಾದ ವಾಸುಕಿ ದು:ಖದಲ್ಲಿ ಇರುವುದನ್ನು ಕಂಡ ಬ್ರಹ್ಮ ಮುಂದೆ ನಡೆಯುವ ವಿದ್ಯಮಾನಗಳನ್ನು ತಿಳಿಸಿ ಮುಂದೆ ಜರತ್ಕಾರುವಿನ ಮಗನಾದ ಆಸ್ತಿಕನು ಜನಮೇಜಯನು ಮಾಡುವ ಸರ್ಪಯಾಗದಲ್ಲಿ ಸರ್ಪಗಳೆಲ್ಲಾ ಬಂದು ಹೋಮಕುಂಡದಲ್ಲಿ ಬೀಳುವುದನ್ನು ತಡೆದು ಜನಮೇಜಯನ ಸರ್ಪಯಾಗವನ್ನು ನಿಲ್ಲಿಸುತ್ತಾನೆ ಎಂದು ಅಭಯ ನೀಡಿದ. ಸರ್ಪಗಳಿಗೆ ಮರುಜನ್ಮ ಬಂದ ದಿನ ಪಂಚಮಿ. ಹೀಗಾಗಿ ಪಂಚಮಿ ತಿಥಿ ನಾಗಗಳಿಗೆ ಪ್ರಿಯವೂ ಅನಂದಕರವೂ ಆಗಿ ಬಹಳ ಶ್ರೇಷ್ಠವಾದುದು ಎನಿಸಿಕೊಂಡಿದೆ. ಹೀಗೆ ತಾಯಿಯಿಂದ ಶಾಪಗೊಂಡು ಹಗಲೂ ರಾತ್ರಿ ಬೇಯುತ್ತಿರುವ ಸರ್ಪಗಳಿಂದ ಯಾರು ಭಕ್ತಿಯಹಿಂದ ಪಂಚಮೀ ದಿನ ಹಾಲು, ನೀರುಗಳಿಂದ ತನಿ ಎರೆದು ಅವುಗಳ ದು:ಖ ಶಮನ ಮಾಡಿದವರ ವಂಶದಲ್ಲಿ ಯಾರಿಗೂ ಸರ್ಪಗಳಿಂದ ಭಯ ಇರುವುದಿಲ್ಲ ಎನ್ನುವ ನಂಬಿಕೆಯೂ ಇದೆ. 

ಸರ್ಪಗಳಿಗೆ ಸುಮಾರು 120 ವರ್ಷಗಳು ಆಯಸ್ಸು ಎಂದು ಹೇಳಲಾಗುತ್ತದೆ. ಅವುಗಳಿಗೆ ಸಾವು ಸಂಭವಿಸುವ ಎಂಟು ಬಗೆಗಳೆಂದರೆ, ನವಿಲುಗಳು, ಮನುಷ್ಯರು, ಚಕೋರಪಕ್ಷಿಗಳು, ಹಸುವಿನ ಕಾಲಗೊರಸಿನ ತುಳಿತ, ಬೆಕ್ಕುಗಳು, ಮುಂಗುಸಿಗಳು, ಹಂದಿ, ಚೇಳುಗಳು, ಇವುಗಳಿಂದ ಸರ್ಪಗಳು ತಪ್ಪಿಸಿಕೊಂಡಿದ್ದೇ ಆದರೆ ಇನ್ನೂ ಇಪ್ಪತ್ತು ವರ್ಷಗಳು ಬದುಕುತ್ತವೆ. ಇನ್ನು ಹಾವು ಏಕೆ ಕಚ್ಚುವುದೆಂಬುದಕ್ಕೆ ಕೆಲವು ಕಾರಣಗಳು ಹೀಗಿವೆ. ಯಾರಾದರೂ ತನ್ನನ್ನು ಹಿಡಿಯಲು ಬಂದಾಗ, ತನಗೆ ಮೊದಲು ಕೇಡುಂಟು ಮಾಡಿದ್ದ ಎನ್ನುವ ದ್ವೇಷ ತಿಳಿದಾಗ, ತನಗೇ ಹೆದರಿಕೆಯಾದಾಗ, ಕೊಬ್ಬಿ ಗರ್ವದಿಂದ ಇರುವಾಗ, ಬಹಳ ಹಸಿವಿನಿಂದಿರುವಾಗ, ತನ್ನ ಮರಿಗಳಿಗೆ ಇತರರಿಂದ ತೊಂದರೆಯುAಟಾಗುತ್ತಿದೆ ಎಂದು ತಿಳಿದಾಗ, ಮತ್ತು ಕಾಲಪುರುಷನ ಪ್ರೇರಣೆಯಾದಾಗ. ಹೆಣ್ಣು ಹಾವುಗÀಳಿಗೆ ರಾತ್ರಿ ಕಾಲದಲ್ಲಿಯೂ ಗಂಡು ಹಾವುಗಳಿಗೆ ಹಗಲು ಹೊತ್ತಿನಲ್ಲಿಯೂ ಶಕ್ತಿ ಹೆಚ್ಚು ಎನ್ನುತ್ತಾರೆ. ಭಕ್ತಿಯಿಂದ ನಾಗನನ್ನು ವಿಶೇಷವಾಗಿ ಪಂಚಮಿಯAದು ಭಕ್ತಿಯಿಂದ ಪೂಜಿಸಬೇಕು ಎನ್ನುತ್ತಾರೆ. (ಕೃಪೆ : ವಿಶ್ವವಾಣಿ )


Comments