ದಾಸನಾಗಿ ಧನಕೆ ನೀನೆಂದು ಬಾಳಬೇಡ
ಲೇಖಕರು : ಎಂ ಆರ್ ವೆಂಕಟರಾಮಯ್ಯ
ಶೀರ್ಷಿಕೆಯಲ್ಲಿರುವ ಸಾಲು ಸರ್ವಜ್ಞ ವಚನದಿಂದ ಆರಿಸಿಕೊಳ್ಳಲಾಗಿದೆ. ಇದೇ ಸಾಲಿನ ಹಿಂದಿನ ಮುಂದಿನ ಸಾಲುಗಳು ಹೀಗಿವೆ : ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ\ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೇ\ಹಣವು ಹೇಳಿ ದಂತೆ ನೀನೆಂದೂ ಕೇಳಬೇಡ\ದಾಸನಾಗಿ ಧನಕೇ ನೀನೆಂದು ಬಾಳ ಬೇಡ” ಎಂಬು ದಾಗಿದೆ. ಸರ್ವಜ್ಞನ ವಚನವನ್ನು ಇಲ್ಲಿ ಬಳಸಿಕೊಂಡಿರುವಾಗ ಈ ವಚನ ಕಾರನ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗುತ್ತದೆ.
ಸರ್ವಜ್ಞ (ಸಂಸ್ಕೃತದಲ್ಲಿ “ಎಲ್ಲವನ್ನೂ ತಿಳಿದವ” ಎನ್ನಲಾಗಿದೆ). ಈತ ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿ. ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರ ಅಂಬಲೂರ. ಇದು ಈಗ ಸರ್ವಜ್ಞನ ಅಬ ಲೂರು ಎಂದೇ ಪ್ರಸಿದ್ಧಿ ಪಡೆದಿದೆ. ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ ಬಾಲ್ಯದಲ್ಲಿಯೆ .ಅಗಾಧವಾದ ಪಾಂಡಿತ್ಯ ವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು.ತಂದೆ ತಾಯಿಗಳಿಂದ ಅಗಲಿ ಪುಣ್ಯ ಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನರ‍್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನ ಪ್ರಿಯ ವಚನ ಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿ ಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ .
ಈಗ ಶೀರ್ಷೀಕೆಯಲ್ಲಿರುವ ಪದ ‘ದಾಸ’ ಪದದ ಅರ್ಥದ ಬಗ್ಗೆ ಕೆಲವು ಆಂಶಗಳು ‘ದಾಸ’ ಎಂದರೆ ಸೇವಕ, ಗುಲಾಮ, ತೊತ್ತು, ಶರಣಾದವನು, ಅಧೀನನಾದವನು ಎಂ¨s ಅರ್ಥಗಳಿವೆ ಈ ಪೈಕಿ ಪ್ರಸಕ್ತ ಲೇಖನದಲ್ಲಿ ದಾಸ ಎಂಬ ಪದವನ್ನು ಶರಣಾ ದವನು, ಗುಲಾಮ, ಸೇವಕ ಎಂಭರ್ಥಲ್ಲಿ ಬಳಸ ಲಾಗಿದೆ.
‘ದಾಸನಾಗಿ ಧನಕೆ ನೀ ಎಂದೂ ಬಾಳಬೇಡ’ ಎಂದಿರುವ ಶೀರ್ಷಿಕೆಯನ್ನು ಓದಿದ ಹಲವರು, ಧನಕ್ಕೆ ಧಾಸನಾಗಿ ಅದರ ಹಿಂದೆ ಹೋಗದಿದ್ದರೆ ಅವ ನಮ್ ಹತ್ರ ರ‍್ತಾನೇನ್ರೀ ?ಅವನ ಹಿಂದೆ ಹೋದರೇನೇ ಅವ ನಮಗೆ ಸಿಗೋದ್ ಕಷ್ಟ, ಹಾಗಿರುವಾಗ ನಾವು ಮಡಿವಂತರಾಗಿ ಅದರ ಹಿಂದೆ ಹೋಗ ದಿದ್ದರೆ ನಷ್ಟ ನಮಗೇ ಹೊರತು ಧನಕ್ಕಲ್ಲ. ‘ಹಣವಿಲ್ಲದವನು ಹೆಣಕ್ಕೆ ಸಮಾನ’ ಅನ್ನೋ ಗಾಧೆ ನೀವ್ ಕೇಳಿಲ್ವಾ ! “ವಿತ್ತೇನ ಹಿನಂ ಪುರುಷಂ ತ್ಯಜಂತಿ, ದಾರಾಶ್ಚ ಪುತ್ರಾಶ್ಚ ಸಹೋದರಾಶ್ಚ | ತಂ ವಿತ್ತವಂತA ಪುನರೇವ ಯಾಂತಿ, ವಿತ್ತಂ ಹೀ ಲೋಕೇ ಪುರುಷಸ್ಯ ಬಂಧುಃ” ಧನ ಹೀನನನ್ನು ಹೆಂಡತಿ, ಮಕ್ಕಳು, ಸೋದರರು ಎಲ್ಲರೂ ನಿರ್ಲಕ್ಷಿಸಿ ಕೈ ಬಿಡುತ್ತಾರೆ ಈ ಕಾರಣದಿಂದ, ಲೋಕದಲ್ಲಿ ಮನುಷ್ಯನಿಗೆ ಹಣವೇ ನಿಜವಾದ ಬಂಧು ಎಂಬ ಪಾಠವನ್ನು ಜೀವನದ ಅನು ಭವ ಕಲಿಸುತ್ತದೆ “ಶೀಲಂಶೌಚA ಕ್ಷಾಂತಿರ್ದಾಕ್ಷಿಣ್ಯ ಮಧುರತಾ ಕುಲೇ ಜನ್ಮ | ನ ವಿರಜಂತಿ ಹಿ ಸವೇ ವಿತ್ತೆöÊರ್ಹೀ ನಸ್ಯ ಪುರುಷಸ್ಯ” ಹಣವಿಲ್ಲದ ಮನುಷ್ಯನ ನಡತೆ, ಪರಿಶುದ್ಧತೆ, ಕ್ಷಮಾಗುಣ, ದಾಕ್ಷಿಣ, ಉತ್ತಮ ಕುಲದಲ್ಲಿ ಜನನ ಇತ್ಯಾದಿ ಸದ್ಗುಣಗಳಾವುವೂ ಪ್ರಕಾಶಿಸುವುದಿಲ್ಲ ಎಂದಿದೆ ಪಂಚತAತ್ರ.
“ವರ ವನಂ ವ್ಯಾಘ್ರಗಜಾದಿ ಸೇವಿತಂ, ಜನೇನ ಹೀನಂ ಬಹುಕಂಟಕಾವೃತ | ತೃಣಾನಿ ಶಯ್ಯಾ ಪರಿಧಾನವಲ್ಕಲಂ, ನ ಬಂಧು ಮಧ್ಯೇ ಧನಹೀನ ಜೀವಿತಂ” ಅಂದರೆ, ಹುಲಿ, ಆನೆ ವಾಸಿಸುª ಕಾಡಾಗಲಿ, ಜನರೇ ಇಲ್ಲದ ಮುಳ್ಳು ತುಂಬಿದ ನಿರ್ಜನ ಪ್ರದೇಶವಾಗಲಿ, ಉಡಲು ನಾರು ಬಟ್ಟೆಯಾದರೂ ಸರಿ, ಮಲಗಲು ಹುಲ್ಲೇ ಹಾಸಿಗೆಯಾಗಲಿ ಅಂತಹಾ ಸ್ಥಳದಲ್ಲಿ ನೆಮ್ಮದಿಯಿಂದ ವಾಸಿಸಬಹುದು. ಆದರೆ ಬಂಧುಗಳ ಮಧ್ಯೆ ಹಣವಿಲ್ಲದೆ ಜೀವಿಸಲಾಗದು ಎಂಬ ಅನುಭವ ಧನಹೀನನಿಗಾಗುತ್ತದೆ.
‘ಸರ್ವೇ ಗುಣಾಃ ಕಾಂಚನಮಾಶ್ರಯAತಿÀ ಎಂ¨ ಲೋಕಾರೂಢಿಯ ಮಾತಿರು ವುದರಿಂದ, ಉದ್ದರೇದಾತ್ಮನಾತ್ಮಾನಮ್ ಎಂಬುದಾಗಿ ಭ.ಗೀ. ಯ ಅಧ್ಯಾಯ 6 ರ 5 ನೆಯ ಶ್ಲೋಕ ಹೇಳಿರುವುರಿಂದ ಧನಕ್ಕೆ ದಾಸನಾಗದಿದ್ದರೆ ನಮ್ಮ ಉದ್ದಾರ ಯರ‍್ರೀ ಮಾಡತಾರೆ ? ತಮ್ಮ ಉದ್ದಾರ ತಾವೇ ಮಾಡಿಕೊಳ್ಳಬೇಕು, ಇದಕ್ಕಾಗಿ ಹೊರಗಿ ನವರಾರೂ ಬರುವುದಿಲ್ಲ ನಮಗೆ ನಾವೇ ಮಿತ್ರರು, ,ನಮಗೆ ನಾವೇ ಶತ್ರುಗಳು ಎಂಬ ವಾಸ್ತವತೆ ಇರುವುದರಿಂದ ಇದನ್ನು ಅರಿತು ಕಾರ್ಯೋನ್ಮುಖರಾಗಬೇಕಲ್ವೇ ! ನಮ್ಮ ಉದ್ದಾರಕ್ಕೆ ಧನ ಅತ್ಯಗತ್ಯವಾಗಿ ಬೇಕಾಗಿರುವುದರಿಂದ ನಾವು ಧನಕ್ಕೆ ದಾಸರಾಗಿ ಅವÀನ್ನು ನಮ್ಮ ವÀಶಪಡಿಸಿ ಕೊಳ್ಳದಿದ್ದರೆ ನಮ್ಮ ಉದ್ದಾರವಾಗದು ಅನ್ನೋರು ಈ ವರ್ಗಧವರು.
ಹಾಗಾದರೆ ಧನಕ್ಕೆ ನೀ ದಾಸನಾಗಬೇಢ ಎಂದೇಕೆೆ ಅಂದಿದ್ದಾ£ ಸರ್ವಜ್ಞ ? ಎಂಬ ಪ್ರಶ್ನೆ ಉದ್ಭವಿಸುತ್ತದೆ ಅಲ್ವೇ ? “ಸಂಪದೋ ಜಲತರಂಗವಿಲೋಲಾ ಯೌವನಂ ತ್ರಿಚತುರಾಣಿ ದಿನಾನಿ | ಶಾರದಾ ಭ್ರಪರಿಪೇಲವಮಾಯುಃ ಕಿಂ ಧನೈ ಪರಹಿತಾನಿ ಕುರು ದ್ವಮ್” ನೀರಿನ ಅಲೆಗಳಂತೆ ಐಶ್ವರ್ಯವು ಚಂಚಲವಾದದ್ದು. ಯೌವನ ಮೂರು ನಾಲ್ಕು ದಿನಗಳು ಇರುವಂತಹುದು.ಆಯುಷ್ಯವಾದರೋ ಶರತ್ಕಾಲದ ಮೋಡ ದಂತೆ ಅತ್ಯಲ್ಪಕಾಲವಿರುವಂತಹುದು.“ಮೂಲA ದೋಷಸ್ಯ ಹಿಂಸಾದೇರರ್ಥಕಾಮೌ ಸ್ಮ ಮಾ ಪುಷಃ | ತೌ ಹಿ ತತ್ತಾ÷್ವವಬೋಧಸ್ಯ ದುರುಚ್ಚೇದಾವು ಪಪ್ಲವೌ” ಅರ್ಥ, ಕಾಮ ಅಂದರೆ, ಹಣ, ಸುಖ ಇವೆರಡೂ ಹಿಂಸೆ, ಸುಳ್ಳು, ಕಳ್ಳತನ ಮುಂತಾದ ದೋಷಗಳಿಗೆ ಮೂಲ. ಅದನ್ನು ಹೆಚ್ಚಿಸಬಾರದು. ಸಿರಿ ದೇವಿಯು ಚಂಚಲೆ. ಆಕೆ ಹೆಚ್ಚು ಕಾಲ ನಿಂತಲ್ಲೇ ನಿಲ್ಲುವುದಿಲ್ಲ. ಏಕೆಂದರೆ, ಆಕೆಯ ಗುಣವೇ ಚಲಿಸುತ್ತಿರುವುದು. ಇದೇ ವಿಷಯದಲ್ಲಿ, “ಸಂಪದೋ ಹಿ ಮನು ಷ್ಯಾಣಾಂ ಗಂಧರ್ವನಗರೋಪಮಾಃ | ದೃಶ್ಯಮಾನಾಃ ಕ್ಷಣೇನೈವ ಭವಂತಿ ನ ಭವಂತಿ ಚ” ಮನುಷ್ಯನ ಐಶ್ವರ್ಯವೆಂಬುದು ಗಂಧರ್ವ ನಗರಕ್ಕೆ ಸಮಾನ. ಅದು ಕಾಣಿಸುತ್ತಾ ಇರುವಂತೆಯೇ ಕ್ಷಣ ಮಾತ್ರದಲ್ಲಿ ಇದ್ದು, ಮತ್ತೊಂದು ಕ್ಷಣದಲ್ಲಿ ಇಲ್ಲವಾಗುತ್ತದೆ ಎನ್ನಲಾಗಿದೆ. “ಆಪದ್ಗಗತಂ ಹಸಸಿ ಕಿಂ ದ್ರವಿಣಾಂಧಃ ಮೂಢ ಲಕ್ಷಿö್ಮÃಃ ಸ್ಥಿರಾ ನ ಭವತೀತಿ ಕಿಮತ್ರ ಚಿತ್ರಂ | ಕಿಮ ತ್ವಂ ನ ಪಶ್ಯಸಿ ಘಟೀರ್ಜಲಯಂತ್ರ ಚಕ್ರೇ , ರಿಕ್ತಾ ಭವಂತಿ ಭರಿತಾ ಭರಿತಾಶ್ಚ ರಿಕ್ತಾಃ “ ಎಂಬೀ ಸುಭಾಷಿತದಲ್ಲಿ, ಸಂಪತ್ತಿನ ಅಸ್ಥಿರತೆ ಎಂತಹುದು ಎಂಬ ಬಗ್ಗೆ ತಿಳಿಸಲು ನೀರಿನ ರಾಟೆಯಲ್ಲಿ ಘಟಗಳು ತುಂಬುತ್ತವೆ, ಮತ್ತೆ ಬರಿದಾಗುತ್ತವೆ ಎಂಬ ಉಪಮೇಯ ವನ್ನು ನೀಡಲಾಗಿದೆ.
ಮನೆಯಲ್ಲಿ ಸಂಪತ್ತು ಹೆಚ್ಚಿದಂತೆಲ್ಲಾ ಆ ಮನೆಯಲ್ಲಿ ಮದ, ಅಹಂಕಾರ ಗಳು ಹೆಚ್ಚುತ್ತವೆ. ನ್ಯಾಯ, ಅನ್ಯಾಯ, ಪಾಪ ಪುಣ್ಯ, ಧರ್ಮ ಅಧರ್ಮಗಳ ವಿವೇಕವು ನಾಶವಾಗಿ, ಮಾನವರು ದಾನವರಾಗುತ್ತಾರೆ.ಏಂದಿದ್ದಾರೆ ಕಬೀರದಾಸರು.
ವ್ಯಕ್ತಿಯಲ್ಲಿ ಅಗತ್ಯಕ್ಕಿಂತಾ ಹೆಚ್ಚು ಹಣವು ಸಂಗ್ರಹವಾದರೆ, ಅವನು ಶಾರೀರಿಕ ಶ್ರಮ ಪಡದೆ, ತನ್ನೆಲ್ಲ ಕೆಲಸಗಳನ್ನೂ ನೌಕರರಿಂದ ಮಾಡಿಸಿ, ತಾನು ಆಲಸಿಯಾಗುತ್ತಾನೆ. ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾನೆ.
ಮನುಷ್ಯನಲ್ಲಿ ಎಲ್ಲಾ ದುರ್ಗುಣಗಳೂ ಮನೆ ಮಾಡುತ್ತವೆ. ಅವನಲ್ಲಿರುವ ದುಷ್ಟ ಮನಸ್ಸು ದುಷ್ಟ ಕಾರ್ಯಗಳಿಗೆ ಕೈ ಹಾಕುವಂತೆ ಹಣವು ಅವನನ್ನು ಪ್ರೇರೇಪಿಸಿ, ಪ್ರಚೋದಿಸುತ್ತದೆ. ತಾನು ಬರುವಾಗ ವ್ಯಕ್ತಿಗೆ ತಾನೇನು ಒಳಿತೂ ಮಾಡಿತೋ ಆ ಎಲ್ಲಾ ಒಳಿತುಗಳನ್ನೂ ಕೆಡುಕುಗಳಾಗಿ ಮಾರ್ಪಡಿಸಿ ಅವನ ವಿನಾಶಕ್ಕೆ ಕಾರಣಕರ್ತನಾಗುತ್ತದೆ.
ಧನ ತರಬಹುದಾಧ ಈ ಎಲ್ಲಾ ದುರ್ಗುಣಗಳು\ ಅಪತ್ತುಗಳ ಕಾರಣವೇ “ದಾಸನಾಗಿ ಧನಕೇ ನೀ ನೀನೆಂದು ಬಾಳಬೇಡ ಎಂದು ಸರ್ವಜ್ಞ ಕವಿ ಜನರನ್ನು ಎಚ್ಚಿರಿಸಿರುವುದು ಸರಿಯಲ್ಲವೆ ! ?

Comments
Post a Comment