ಸಿಡ್ನಿಯಲ್ಲಿ ಕನಕ ನಮನ-ಭಕ್ತಿ ಸಂಗೀತ ಮತ್ತು ಸಾಹಿತ್ಯಗಳ ಸಮ್ಮಿಲನ.
ವರದಿ - ಶ್ರೀ ದತ್ತು ಕುಲಕರ್ಣಿ
ಸಿಡ್ನಿ
ಕನ್ನಡ ಶಾಲೆ ಮತ್ತು ರಾಗ ಲಯ ಸಂಸ್ಥೆಯ ವತಿಯಿಂದ ಕಳೆದ ತಿಂಗಳು 27ರಂದು ಸಿಡ್ನಿಯಲ್ಲಿ ಕನಕ ನಮನ ಎನ್ನುವ ಅತಿ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ
ತನ್ನ ವಿಭಿನ್ನ ನಿರೂಪಣೆ ಮತ್ತು ಪ್ರಸ್ತುತಿಯೊಂದಿಗೆ ನೆರೆದ ಸುಮಾರು 200 ಜನರಿಗೆ ಸಂಗೀತದ ರಸದೌತಣ ನೀಡಿ ಪುಳಕಿತರಾಗುವಂತೆ ಮಾಡಿತು.
ಅಂದ ಹಾಗೆ
ಈ ಕನಕ ನಮನ
ಕಾರ್ಯಕ್ರಮವನ್ನು ಸುಮಾರು 11 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.
ಈ ಮೂಲಕ
ನಮ್ಮ ನಾಡಿನ ಸಾಹಿತ್ಯ ಮತ್ತು ಸಂಗೀತ ವಲಯಗಳನ್ನು ಶ್ರೀಮಂತಗೊಳಿಸಿದ ದಾಸವರೇಣ್ಯರು, ವಚನಕಾರರ ಬಗ್ಗೆ ತಿಳಿದುಕೊಳ್ಳುವ ಮತ್ತು ಅವರ ಹಾಡುಗಳನ್ನು ಕೇಳುವ ಮತ್ತು ಸಂಭ್ರಮಿಸುವ ಉದ್ದೇಶದೊಂದಿಗೆ ಈ
ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರಲ್ಲಿ ಪುರಂದರ ದಾಸರ ಬಗೆಗಿನ ಹಲವು ಕಾರ್ಯಕ್ರಮಗಳನ್ನು ಬೇರೆ ಬೇರೆ ಸಮಯದಲ್ಲಿ ಆಯೋಜಿಸುವುದರಿಂದ
ಅವರ ಕೃತಿಗಳನ್ನು
ಬಿಟ್ಟು ಇನ್ನುಳಿದವರ ಹಾಡುಗಳಿಗೆ ಹೆಚ್ಚಾದ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ.
ಇದೇ ರೀತಿ
ಈ ವರ್ಷ ವಾದಿರಾಜರು, ವಿದ್ಯಾ
ಪ್ರಸನ್ನ ತೀರ್ಥರು, ವಿಜಯದಾಸರು, ಹೇಳವನ ಕಟ್ಟೆ ಗಿರಿಯಮ್ಮ, ಜಗನ್ನಾಥದಾಸರು ಹಾಗೂ ಕನಕದಾಸರ ಬಗ್ಗೆ
ತಿಳಿದುಕೊಳ್ಳುವ ಹಾಗೂ ಅವರ ಕೃತಿಗಳನ್ನು ಕೇಳುವ ಸುಯೋಗ ಪ್ರೇಕ್ಷಕರದಾಗಿತ್ತು.
ಹಾಗೆ ಈ
ಕಾರ್ಯಕ್ರಮದ ವಿಭಿನ್ನ ನಿರೂಪಣೆಯ ಅಂಗವಾಗಿ ಶ್ರೀ ಶ್ರೀನಿವಾಸ್ ರಾವ್ ಅವರು ಐದು ಜನರ
ಪರಿಚಯವನ್ನು ಪ್ರತಿ ಹಾಡಿನ ಪ್ರಾರಂಭದಲ್ಲಿ ತುಂಬಾ ಚೆನ್ನಾಗಿ ಮಾಡಿದರು.
ಪ್ರತಿಯೊಬ್ಬರ ಕಾಲಮಾನ, ಅವರ ಆರಾಧ್ಯ ದೈವ, ಅವರ ಜೀವನದ ಪ್ರಮುಖ ಘಟನೆಗಳು ಮತ್ತು ದಾಸ
ಸಾಹಿತ್ಯದಲ್ಲಿ ಅವರ ಕೃತಿಗಳಿಗಿರುವ ಪ್ರಾಮುಖ್ಯತೆ ಮುಂತಾದವುಗಳ ಬಗ್ಗೆ ತುಂಬಾ ಸರಳವಾಗಿ
ವಿವರಿಸಿದ್ದು ಸಂದರ್ಭೋಚಿತವಾಗಿತ್ತು. ನಂತರ ಪ್ರತಿ ಪರಿಚಯದ ನಂತರ 35 ಜನ ಗಾಯಕರು ಸಮೂಹ ಗಾಯನದಲ್ಲಿ ಈ ಐದು ಜನರ ಕೃತಿಗಳನ್ನು ರಾಗಬದ್ಧವಾಗಿ
ಹಾಡಿದರು.
ವಾದಿರಾಜರ
‘ಗುಬ್ಬಿಯಾಳೊ
ರಂಗ ಗುಬ್ಬಿಯಾಳೊ’, ವಿದ್ಯಾ ಪ್ರಸನ್ನ ತೀರ್ಥರ ‘ಸ್ವೀಕರಿಸೆನ್ನಯ ಪೂಜೆಯ ತುಳಸಿ’, ವಿಜಯ
ದಾಸರ ‘ಡಿಡಿ
ಆಡಿಯಾನೆ ರಂಗ’, ಹೆಳವನಕಟ್ಟೆ ಗಿರಿಯಮ್ಮ ಅವರ ‘ಹೊನ್ನು ತಾ ಗುಬ್ಬಿ ಹೊನ್ನು ತಾ’, ಹಾಗೆ
ಕನಕದಾಸರ ‘ತೋರೆ
ಬೇಗನೆ ಸಖಿ’ ಬಹಳ
ಸುಷ್ತ್ರಾವ್ಯವಾಗಿ ಮೂಡಿಬಂದವು.
ಇದಾದ
ನಂತರ ಹಿರಿಯರಾದ ಅನಂತರಾವ್ ಅವರು ನಮ್ಮ ನಾಡಿನ ಪ್ರಮುಖ ಧಾನ್ಯ ರಾಗಿಯ ಬಗೆಗೆ ಪುರಂದರದಾಸರು
ಮತ್ತು ಕನಕದಾಸರ ಕೃತಿಗಳಲ್ಲದೆ ಅವರ ಗುರುಗಳಾದ ವ್ಯಾಸರಾಯರು ಬರೆದ ಕೃತಿಯ ಬಗ್ಗೆ ತುಂಬಾ ಪ್ರಬುದ್ಧವಾಗಿ
ವ್ಯಾಖ್ಯಾನಿಸಿದರು.ಇದಕ್ಕೆ ಪೂರಕವಾಗಿ ಸ್ಮೀತಾ ಅವರು ದಾಸರ ಪದವನ್ನು ಹೇಳಿದರು.
ನಂತರ
ವಿದ್ವಾನ್ ಅಭಿಷೇಕ್ ಅವರು ಇತರ ವಾದ್ಯದವರೊಂದಿಗೆ ಕನಕದಾಸ ವಿರಚಿತ ‘ಯಾದವ ರಾಯ ಬೃಂದಾವನದಲಿ’ ಎಂಬ ರಾಗ
ಮಾಲಿಕೆಯನ್ನು ಹಾಡಿದರು ಇದೆ ಹಾಡಿಗೆ ಕನ್ನಡ ಶಾಲೆಯ ಹಳೆಯ ವಿದ್ಯಾರ್ಥಿನಿ ಸಿಮರನ್ ಉದಯಗಿರಿ ಭಾವಪೂರ್ಣ ಭರತನಾಟ್ಯವನ್ನು
ಮಾಡಿದಳು.
ಇದಾದಮೇಲೆ
ಕುಮಾರಿ ಸಿಂಧು ನಾರಾಯಣ್ ಕನಕದಾಸರ ಕೃತಿ ‘ಸಾಕು ಮನುಜ ಸೇವೆಯು’ ಕೃತಿಯನ್ನು ಬಹಳ ಇಂಪಾಗಿ ಪ್ರಸ್ತುತ ಪಡಿಸಿದ್ದಳು.
ಕೊನೆಗೆ ಮತ್ತೋರ್ವ ಹಾಡುಗಾರ್ತಿ ದೇವಿಕಾ ಪ್ರಮೋದ್ ಜಗನ್ನಾಥದಾಸರ ಕೃತಿ ‘ವಿಠಲಯ್ಯ
ತಟಿತ್ಕೋಟಿ ನಿಭಕಾಯ’ ಎನ್ನುವ ಕೃತಿಯನ್ನು ತುಂಬಾ ಅನುರಣಿಸುವಂತೆ ಹಾಡಿದಳು.
ಎಲ್ಲ ಹಾಡುಗಾರರಿಗೆ ಸಹ ವಾದ್ಯಕಾರರಾಗಿ ಮೃದಂಗದಲ್ಲಿ ವಿಘ್ನೇಶ್
ಶಂಕರ್, ವಾಯಲಿನ್
ದಲ್ಲಿ ಐಶ್ವರ್ಯ ಹರಿಹರನ್, ಹಾರ್ಮೋನಿಯಂ ನಲ್ಲಿ ತೇಜಸ್ ಪ್ರತಾಪ್,
ತಬಲದಲ್ಲಿ ಆದ್ವಿಕ್ ಅಂಗಡಿ, ಕೊಳಲಿನಲ್ಲಿ ಶರತ್ ಮತ್ತು ಶ್ರೇಯಸ್ ಅವರು ಒಳ್ಳೆಯ ಜೊತೆ ಕೊಟ್ಟರು.
ಒಟ್ಟಿನಲ್ಲಿ ಬಹಳ ಸುಂದರವಾಗಿ ಮೂಡಿಬಂದ ಈ
ಕಾರ್ಯಕ್ರಮವನ್ನು ಶ್ರೀಮತಿ ಶ್ವೇತಾ ಫಡ್ನೀಸ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಇಂತಹ ಸುಂದರ ಸಂಗೀತ ಸಾಹಿತ್ಯ ಮತ್ತು ಸಂಸ್ಕೃತಿ
ಬಿಂಬಿಸುವ ಬಹುಮುಖಿ ಕಾರ್ಯಕ್ರಮವನ್ನು ಆಯೋಜಿಸಿದ ಸಿಡ್ನಿ ಕನ್ನಡ ಶಾಲೆಯ ನಾರಾಯಣ ಕನಕಪುರ ಮತ್ತು
ಸಂಗಡಿಗರಿಗೆ ಎಲ್ಲರೂ ಧನ್ಯವಾದ ಹೇಳಿದರು.
ವರದಿ: ದತ್ತು ಕುಲಕರ್ಣಿ ಸಿಡ್ನಿ.

Comments
Post a Comment