ಹಸ್ತಕೆ ಮೊಬೈಲೇ ಭೂಷಣ
ಲೇಖಕರು : ಎಂ ಆರ್ ವೆಂಕಟರಾಮಯ್ಯ
ಪ್ರಸಕ್ತ ಲೇಖನಕ್ಕೆ ‘ಮೊಬೈಲನ್ನೇ ವಿಷಯವನ್ನಾಗಿ ಏಕೆ ಆರಿಸಿಕೊಂಡಿರಿ’ ಎಂಬ ಪ್ರಶ್ನೆ ಕೇಳಬಹುದು ಹಲವರು. ಇದಕ್ಕೆ ಸ್ಪೂರ್ತಿಯಾಗಿದ್ದು ಈ ಕೆಳಗಿರುವ ಪದ್ಯದ ನಾಲ್ಕು ಸಾಲುಗಳು, :
“ರವಿಯಾಕಾಶಕೆ ಭೂಷಣಂ ರಜನಿಗಾ ಚಂದ್ರಂ ಮಹಾ ಭೂಷಣಂ |
ಕುವರಂ ವಂಶಕೆ ಭೂಷಣಂ ಸರಸಿಗಂಭೋಜಾತಗಳ್ ಭೂಷಣಂ ||
ಹವಿ ಯಜ್ಞಾಳಿಗೆ ಭೂಷಣಂ ಸತಿಗೆ ಪಾತಿವ್ರತ್ಯವೇ ಭೂಷಣಂ |
ಕವಿಯಾಸ್ಥಾನಕೆ ಭೂಷಣಂ ಹರಹರಾ ಶ್ರೀ ಚೆನ್ನ ಸೋಮೇಶ್ವರಾ ||೪||
ಈ ಪದ್ಯವನ್ನು ಬರೆದರು ಪುಲಿಗೆರೆ ಸೋಮನಾಥ ( ಕ್ರಿ.ಶ. ಸುಮಾರು 1299 ) ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಪುಲಿಗೆರೆಯವನು . ಪುಲಿಗೆರೆ ಸೋಮನಾಥನೆಂದೇ ಪ್ರಸಿದ್ಧಿ . ಕನ್ನಡ , ಸಂಸ್ಕೃತ ಭಾಷಾಪಂಡಿತನಾದ ಈತನ ಆಂಕಿತ ನಾಮ .ಪರಹರಾ ಶ್ರೀ ಚನ್ನಸೋಮೇಶ್ವರಾ. ಕನ್ನಡ ರತ್ನಕರಂಡಕ ಚಂಪೂವಿನಲ್ಲಿಯೂ ಸೋಮೇಶ್ವರ ಶತಕವನ್ನು ವೃತ್ತ ಛಂದಸ್ಸಿನಲ್ಲಿಯೂ ರಚಿಸಿದ್ದಾನೆ .
ಶೀರ್ಷಿಕೆ ಓದಿ ಅಲ್ರೀ, ಮೊಬೈಲ್ ಅನ್ನೋ ಸಾಧ಼ನ ಬಹುಪಯೋಗಿ ಆದ್ದರಿಂAದ ಇದು ಎಲ್ಲರ ಕೈಲೂ ಇರಬೇಕಾದ್ಧೇ ಅಲ್ಲವೇ ! ಇದರಲ್ಲೇನು ತಪ್ಪು ? ಎಲ್ಲರ ಬಳಿಯೂ ಇರುವ : ಇರಲೇಬೇಕಾದ ವಸ್ತುವನ್ನು ವ್ಯಂಗ್ಯವಾಗಿ ಏಕೆ ಉಲ್ಲೇಖಿಸ ಹೊರಟಿದ್ದೀರಿ ಎನ್ನಬಹುದು ಮೊಬೈಲ್ ಪ್ರಿಯರು. ಆದರೆ ಇಲ್ಲಿ ಸ್ಪಷ್ಟ ಪಡಿಸಬೇಕಾದ ಮುಖ್ಯ ವಿಷಯ ಅಂದರೆ ಶೀರ್ಷಿಕೆಯಲ್ಲಿ ಮೊಬೈಲ್ ಅನ್ನು ವ್ಯಂಗ್ಯವಾಗಿ ಚಿತ್ರಿಸಲು ಹೊರಟಿಲ್ಲ. ಬದಲಿಗೆ ಇಂದು ಇದು ನಿರ್ವಹಿಸುತ್ತಿರುವ ಮಹತ್ವದ ಪಾತ್ರ ಕುರಿತ ವಿವರಣೆ ನೀಡಲಾಗಿದೆಯಷ್ಟೇ.
ಹಿಂದಿನ ಕಾಲದ ಹಲವು ವೃದ್ಧರ ಕೈಗಳಲ್ಲಿ ಅಂದು ಸಾಮಾನ್ಯವಾಗಿ ಕಾಣುತ್ತಿದ್ದದ್ದು ನಡೆಯುವ ಉರುಗೋಲೋ, ನಶ್ಯದ ಡಬ್ಬಿಯೋ ಮೂಗು ಒರೆಸಿಕೊಳ್ಳುವ ಕೈ ವಸ್ತçವೋ ಮನೆಗೆ ಅಗತ್ಯವಾದ ಚಿಲ್ಲರೆ ಸಾಮಾನು ತರಲು ಸಣ್ಣ ಕೈಚೀಲವೋ. ಆದರೆ ಇಂದಿನ ಹಲವರ (ಇಲ್ಲಿ ಮಕ್ಕಳು, ಯುವಕರು, ವೃದ್ಧರು, ಉಳ್ಳವರು ಬಡವರು, ಎಂಬ ಯಾವ ತಾರತಮ್ಯ ಬೇಧಭಾವವೂ ಇಲ್ಲದೆ) ಕೈಗಳಲ್ಲಿ ನೊಬೈಲ್ ತಪ್ಪದು. .ಹೊರಗೆ ಬರುವ ಪ್ರತಿ ವ್ಯಕ್ತಿಯ ಕೈಲೂ ಮೊಬೈಲ್ ಇದ್ದೇ ಇರುವುದರಿಂದ ಮೊಬೈಲ್ ಇಲ್ಲದ ಕೈಗಳು ಏನೋ ಕಳಕೋಂಡ ಕೈಗಳಂತೆ ಕಾಣುವುದಿಲ್ಲವೇ ! ಬಿಕೋ’(ಗ್ರಾಮೀಣ ಭಾಷೆಯ ಶೂನ್ಯ ಎಂಬ ಪದ ಬಳಕೆ ಯಾಗಿ) ಎನಿಸುವುದಿಲ್ಲವೇ ? ಸಣ್ಣ ಹುಡುಗರಿಂದ ಹಿಡಿದು ಯುವಕ ಯುವತಿಯರು ಮಧ್ಯಮ ವಯಸ್ಸಿನವರು ವೃದ್ದರು, ಬೀದಿಯಲ್ಲಿ ಕಾಣಿಸುವ ಮಾರಾಟಗಾರರು, ಮನೆ ಕೆಲಸ ಮಾಡುವವರು, ಹೀಗೆ ವಿವಿಧ ವರ್ಗದ ಜನರು ತಮ್ಮ ಕೈಲಿ ಸದಾ ಮೊಬೈಲ್ ಹಿಡಿದೇ ಇರುವುದರಿಂದ ಇದು “ಹಸ್ತಕೆ ಭೂಷಣ” ಎನ್ನುವುದರಲ್ಲಿ ವ್ಯಂಗ್ಯ, ವಿಶೇಷ, ತಪ್ಪೇನಿದೆ. ?
ಮೊಬೈಲ್ ಬಳಕೆ ವಿಶ್ವದಲ್ಲಿ ಕಾಣಿಸಿದ ಮೊದಲ ಕೆಲವು ಕಾಲ, ಓಹ್ ! ಇದು ಬಹುಪಯೋಗಿಯಾದರೂ ಬಹು ತುಟಿ :್ಟ ಬೆಲೆ ಜಾಸ್ತಿ, ಸಾಮಾನ್ಯರ ಕೈಗೆ ಎಟಕುವಂತಹುದಲ್ಲಾ ಎಂಬನಿಸಿಕೆ ಜನರನ್ನು ಕಾಡಿ, ಇದು ಸಿರಿವಂತರ ಕೈ ಮಾತ್ರ ಅಲಂಕರಿಸಿತ್ತು, ಆದರೆ ನಂತರದ ಕಾಲದಲ್ಲಿ ಈ ಮೊಬೈಲ್ ಎಂ¨ ಸಾಧನದ ಬಹುಪಯೋಗಗಳನ್ನು ಕಂಡುಕೊಂಡ ಜನರಿಂದ ಇದಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಉತ್ಪಾದನೆಯೂ ಹೆಚ್ಚಿ ಇದೀಗ ಹಲವಾರು ಸೌಲಭ್ಯಗಳುಳ್ಳ ಕಡಿಮೆ ಬೆಲೆಗೆ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಮೊಬೈಲ್ ಕಾಣದ ಕೈಗಳನ್ನು ಕಾಣುವುದು ಅಪರೂಪವಾಗಿದೆ.
ಮೊಬೈಲ್‌ನಿಂದ ಏನೇನ್ ಉಪಯೋಗಗಳಿವೆ ಎಂಬ ಪ್ರಶ್ನೆ ಕ್ಷಣ ಪಕ್ಕಕ್ಕಿರಲಿ. ಈ ಸಾಧನ ಈಗ ಮಾಡುತ್ತಿರುವ ಹಲವು ಅವಾಂತರಗಳ ಒಂದು ಚಿತ್ರಣ ಕಾಣಿಸಿದೆ. ಮೊಬೈಲ್ ಎಲ್ಲರ ಕೈಲೂ ಯಾವಾಗಲೂ ಹಾಜರಿರುವುದರಿಂಧ ಮಾತನಾಡಬಲ್ಲ ಜನರೂ ಮೂಗರಂತಾಗಿ ಯಾರೂ, ಯಾರ ಬಳಿಯೂ ಮಾತನಾಡದೆ, ಸದಾ ಮೊಬೈಲ್‌ನಲ್ಲೇ ತಮ್ ಕಣ್ಗಳನ್ನು ಕೇಂದ್ರೀಕರಿಸಿರುವುದರಿಂದ ಇವರನ್ನು ಬೇರೆಯ ವರು ಮಾತನಾಡಿಸಿದಾಗಲೂ ಆಂ ಊಂ ಹುಂ ಎನ್ನುತ್ತಾ ತಮ್ಮ ತಲೆಯಾಢಿಸಿ ಸುಮ್ಮನಾಗುತ್ತಿದ್ದಾರೆ. ಇವರ ವರ್ತನೆ ಕಂಡವರು ಇವರು ಮೂಗರಿರಬಹುದೇ ! ಎಂಬ ಅನುಮಾನ ಬರುತ್ತಿದೆ.
ತಿಂಡಿ ತಿನ್ನುವಾಗ, ಊಟ ಮಾಡುವಾಗ, ಮಕ್ಕಳು ಪತ್ನಿ ಜೊತೆ ಸರಸವಾಗಿ ಮಾತಾಡುತ್ತಿರುವಾಗಲೂ ಬಳಿಯಿದ್ದ ಮೊಬೈಲ್ ಟ್ರಿಂಗೆAಬ ಸದ್ದು ಮಾಡಿದ ತಕ್ಕಣ ಜನ ಮೊಬೈಲ್ ಕೈಲಿ ಹಿಡಿದು ಹೊರಹೊರಟರೆ ಮಾತನಾಡುತ್ತಾ ಯಾವ ತಾಣಕ್ಕೆ ಬಂದಿದ್ದೇವೆ, ಎಷ್ಟು ಧೂರ ಬಂದಿದ್ದೇವೇ ಎಂಬ ಅರಿವೇ ಹೊಂದಿರದವರಿವರು. ಮತ್ತೆ ಕೆಲವರಂತೂ ಸ್ನಾನದ,ಕೋಣೆಗೂ ಮೊಬೈಲ್ ಹೊತ್ತೊಯ್ದು ಅಲ್ಲೇ ಮಾತನಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ, ಇನ್ನು ತಿಂಡಿ ಊಟ ಮಾಡುವಾಗಲೂ ಮೊಬೈಲ್ ವೀಕ್ಷಿಸುತ್ತಲೇ ಇರುವುದರಿಂದ ಇವರು ಏನು ತಿಂದರು ? ಅದರ ರುಚಿ ಹೇಗಿತ್ತು ?ಎಂಬ ಬಗ್ಗೆ ಸಹಾ ಇವರಿಗೆ ಅರಿವು ಇಲ್ಲದಿರುವುದರಿಂದ ಏನೋ ತಿಂದಿದ್ದದಾಗಿದೆ ಎನ್ನುವವರಿವರು
ಮೊಬೈಲ್ ಕೈಗೆ ಬಂದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ನಿತ್ಯ ಕಾರ್ಯಕ್ರಮಗಳ ನಿರ್ವಹಣೆಗಾಗಿ ಮನೆಯಿಂದ ಹೊರಗೆ ನಡೆಯುವುದೇ ತಪ್ಪಿಹೋಗಿದೆ. ಹೇಗೆಂದರೆ ಇವರ ಮನೆಗೆ ಅಗತ್ಯವಾದ ಹಣ್ಣು ತರಕಾರಿ ಔಷಧಿ ಉಡುಪು ಎಲ್ಲಾ ಬಗೆಯ ಆಹಾರ s ಸಾಮಗ್ರಿ, ಪುಸ್ತಕ, ಲೇಖನ ಸಾಮಗ್ರಿ, ತಿhಚಿಣ ಟಿoಣ ? eveಡಿಥಿ ಣhiಟಿg ನಮಗೆ ಅಗತ್ಯವಾದ ಎಲ್ಲವನ್ನೂ ಮನೆಯಲ್ಲಿ ಕುಳಿತೋ, ಮಲಗೋ, ಮೋಬೈಲ್‌ನಲ್ಲೇ ಆರ್ಡರ್ ಮಾಡಿದ ರಾಯ್ತು. ಕೆಲವೇ ನಿಮಿಷಗಳಲ್ಲಿ ಇವರ ಅಗತ್ಯಗಳ ಪ್ಯಾಕೆಟ್‌ಗಳು ಇವರ ಮನೆ ಬಾಗಿಲಿಗೆ ಹಾಜರ್.
ಆಫೀಸ್ ಕೆಲಸ ಕಾರ್ಯಗಳ ಕುರಿತ ಚರ್ಚೆಗಳು, ಇವೂ ಸಹಾ ಮೊಬೈಲ್ನಲ್ಲೇ ನಡೆಯುತ್ತಿವೆ ಅಂದರೆ. ನಂಬಲಾಗದೇ ! ಜನರ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಕೂಡಾ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಅಳವಡಿಸಿಕೊಂಡರೆ ಆಯಿತು.ಇದಕ್ಕೆ ಕೊಡಲು ಜೇಬಿನಲ್ಲಿ ಹಣ ಇಲ್ಲದಿದ್ರೂ, ಪರವಾಗಿಲ್ಲ, ಇವರ ವ್ಯಾಪಾರ ವ್ಯವಹಾರಗಳಿಗಾಗೋ ವೆಚ್ಚದ ಹಣ ಸಹಾ ಮೊಬೈಲ್‌ನಲ್ಲೇ ಪಾವತಿಸ ಬಹುದು.
ಇನ್ನು ನಮ್ಮ ಬಂಧು ಮಿತ್ರರ ಯೋಗ ಕ್ಷೇಮ ವಿಚಾರಣೆಯೋ, ಸರ್ಕಾರಿ ಕಚೇರಿ ಖಾಸಗಿ ಕಂಪನಿಗಳು ವಿವಿಧ ಬಗೆಯ ವ್ಯಾಪಾರಿ ಸಂಸ್ಥೆಗಳು ಮೊದಲಾದ ವರೊಡನೆ ಸಂಪರ್ಕ ಸಾಧನೆ, ವಿಚಾರಣೆ, ಪರಿಹಾರ ಪಡೆಯುವಿಕೆ ಇತ್ಯಾದಿಗಳನ್ನು ಹೊಂದಲು ಜನ ಅವರಿರುವ ಜಾಗಕ್ಕೇ ಖುದ್ದಾಗಿ ಹೋಗಬೇಕಾಗಿಲ್ಲ, ಬದಲಿಗೆ ತಾವು ಕುಳಿತಲ್ಲೇ ಅವರೊಡನೆ ಸಂಪರ್ಕ ಹೊಂದಿ ತಮ್ಮ ಕಾರ್ಯವನ್ನು ಮೊಬೈಲ್ ಮೂಲಕವೇ ಮಾಡಿಕೊಳ್ಳಬಹುದಾಗಿದೆ. ಆಟೋ, ಕ್ಯಾಬ್ ಮನೆಯ ಬಾಗಿಲಿಗೇ ಬರಲು ಮೊಬೈಲ್ ಬಳಕೆ ಸಾಧ್ಯವಿದೆ.
‘ಮೌನಂ ಕಲಹಂ ನಾಸ್ತಿ’ ಎಂಬ ತತ್ವವನ್ನು ಕಟ್ಟು ನಿಟ್ಟಾಗಿ ಪಾಲಿಸುವವರು ಮೊಬೈಲ್ ಹೋಲ್ರ‍್ಸ್, ಹೇಗೆಂದರೆ ಇವರು ಸದಾ ಮೋಬೈಲ್ ವೀಕ್ಷಣೆಯಲ್ಲೇ ನಿರತರಾಗಿರುವ ಕಾರಣ ಇವರು ಯಾರ ಬಳಿಯೂ ಮಾತನಾಡುವವರಲ್ಲ ಮೂಗ ರಂತೆ ಮೌನಿಗಳಾಗಿ ಇರುವುದರಿಂದ ಇವರು ಅನಾವಶ್ಯಕ ಮಾತುಗಳು, ವಾದ ವಿವಾದಗಳು ಮೊದಲಾದ ಯಾವ ಸಮಸ್ಯೆಗೂ ಸಿಲುಕಿ ಕೊಳ್ಳುವವರಲ್ಲ. .
ಮತ್ತೆ ಕೆಲವರು ತಮ್ಮ ಸ್ವಂತ ವಾಹನಗಳಿರಲಿ, ಬಸ್ ರೈಲ್ ಮೊದಲಾದ ವಾಹನಗಳಲ್ಲಿ ಪಯಣಿಸುವಾಗ, ಮೊಬೈಲ್ಗಳಿಗೆ ಕನೆಕ್ಟ್ ಮಾಡಿದ ವರ‍್ಗಳನ್ನ ಕಿವಿಗೆ ಸಿಕ್ಕಿಸಿಕೊಂಡು ಕಣ್ಮುಚ್ಚಿ ಕೇಳುತ್ತಾ ಕುಳಿತವರು ಕೇಳುವಿಕೆಯಲ್ಲೇ ತನ್ಮಯರಾಗಿರು ವುದರಿಂದ ತಾವು ಎಲ್ಲಿ ಇಳಿಯಬೇಕು ಎಂಬುದನ್ನೂ ಮರೆತು ಇಳಿಯಬೇಕಾದ ಬಗ್ಗೆ ನೆನಪಾದಾಗ ಎಲ್ಲೋ ಇಳಿದು ತಾವು ತಲುಪಬೇಕಾದ ತಾಣ, ಅದು ಇನ್ನೂ ಮುಂದಿದೆಯೋ ಹಿಂದೋಯ್ತೋ ತಿಳಿಯದೆ ಕಕ್ಕಾಬಿಕ್ಕಿಯಾದವರೂ ಇದ್ದಾರೆ
ಇವರು ಎಚ್ಚರವಾಗಿರುವ ಪೂರ್ಣ ಸಮಯವೂ ಮೊಬೈಲ್ ಚಾಲೂ ಮಾಡುವುದರಲ್ಲೇ ಮಗ್ನರಾಗಿರುವ ಕಾರಣ ,ಇವರ ಪಾಲಿನ ಪ್ರಪಂಚ ‘ಮೂಗರ ಪ್ರಪಂಚ’ ವಾಗಿರುತ್ತದೆ ಎಂದರೆ ಮಾತು ತಪ್ಪಾಗಲಾರದೇನೋ.
ವ್ಯಕ್ತಿಗಳು ಎಚ್ಚರವಾಗಿರುವ ಪೂರ್ಣ ಸಮಯದಲ್ಲೂ ಮೊಬೈಲ್ ಚಾಲೂ ಮಾಡುವುದರಲ್ಲೇ ಮಗ್ನರಾಗಿರುವ ವ್ಯಕ್ತಿಗಳ ಬಗ್ಗೆ ಮಾತನಾಡುವಾಗ ನೆನಪಾಗುವುದು ನಮ್ಮ ‘ಕುಚ್ಚಪ್ಪ” ನವರ ಪ್ರಸಂಗ. ಯಾರೀ ಕುಚ್ಚಪ್ಪ ಎಂದಿರಾ ? ಸ್ವಾಮಿ, ಈ ಕುಚ್ಚಪ್ಪ ಅನ್ನೋ ವ್ಯಕ್ತಿ ಒಬ್ಬರಿಬ್ಬರಲ್ಲ, ಈ ವರ್ಗದವರು ಬಹಳ ಜನ ಕಾÀಣಸಿಗ್ತಾರೆ. ಏನಿವರ ವಿಶೇಷ ಎಂದಿರಾ ? ಇವರು ತಮ್ಮ ಮನೆಯಲ್ಲಿದ್ದಾಗಲೂ ಬಂಧು ಮಿತ್ರರ ಮನೆಗಳಿಗೆ ಬೇಟಿಕೊಟ್ಟಾಗಲೋ ಮದುವೆ ಮುಂಜಿ ಗೃಹಪ್ರವೇಶ ತಿಥಿ ಊಟ ಎಂತಹುದೇ ಕಾರ್ಯ ಕ್ರಮಕ್ಕೆ ಹೋದಾಗಲೋ, ಇವರು ಆ ಜಾಗಕ್ಕೆ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲೇ ತಮ್ಮ ಜೇಬಿನಿಂದ ಮೊಬೈಲ್ ಹೊರತೆಗೆದು ಅದನ್ನು ಚುಚ್ಚುತ್ತಲೇ ಆನಂದ ಅನುಭವಿಸುತ್ತಿರುತ್ತಾರೆ. ಇವರು ಹೀಗಿರುವಾಗ ಅದೆಷ್ಟೋ ಸಲ ಇವರು ತಾವೆಲ್ಲಿದ್ಧೇವೆ ಎನ್ನುವುದನ್ನು ಮರೆತು, ಒಮ್ಮೆ ಮುಖದಲ್ಲಿ ನಗು, ಮತ್ತೊಮ್ಮೆ ಕೋಪ, ಬೇಸರ ಇತ್ಯಾದಿ ಚಿಹ್ನೆಗಳನ್ನು ಮುಖದಲ್ಲಿ ವ್ಯಕ್ತಪಡಿಸುತ್ತಿರುವವರು. ಸುತ್ತಲಿನ ಯಾರ ಕಡೆಗೂ ಇವರ ಗಮನ ಹರಿಯುವುದಿಲ್ಲ. ಇವರ ಮೊಬೈಲ್ ಕುಚ್ಚುವ ಕೆಲಸ ಇವರಿಗೆ ಖುಷಿ ತರಬಹುದಾದರೂ ಈ ವ್ಯಕ್ತಿಯನ್ನು ನೋಡಿದವರಿಗೆಲ್ಲಾ “ಈತ ಹೀಗೇ ¨ಂದ ಜಾಗದಲ್ಲೆಲ್ಲಾ ಮೊಬೈಲ್ ಕುಚ್ಚುತ್ತಿರುವ ಬದಲು ಮನೆಯಲ್ಲೇ ಈ ಕುಚ್ಚೋ ಕೆಲಸ ಮಾಡಬಹುದಲ್ಲವೇ” ! ಎನಿಸುತ್ತದೆ. ಹೀಗೆ ನೀವೇನಾದರೂ ಮಾತಾಡಿಕೊಳ್ಳಿ, ಇವರಂತೂ ಬೇಸರವಿಲ್ಲದೆ ಕುಚ್ಚೋ ಕೆಲಸ ಮಾಡುತ್ತಲೇ ಇರುವವರೇ. ಹೊರತಾಗಿ ನಿಮ್ಮ ಮಾತಿನ ಬಗ್ಗೆ ತಲೆ ಕೆಡಿಸಿಕೊಳ್ಳುವವರಲ್ಲಾ.
ಹಸ್ತಕ್ಕೆ ಭೂಷಣವಾದ ಮೊಬೈಲ್ ಬಗ್ಗೆ ಹೇಳುವುದು ಇನ್ನೂ ಬೇಕಾದಷ್ಟಿದ್ದರೂ ಓದುಗರ ಅಮೂಲ್ಯ ಸಮಯದತ್ತ ಚಿತ್ತ ಹರಿಸಿ ಈ ಮಾತಾಡಿದ್ ಬಂದ್ ಮಾಡಿ ಇಂದಿಗೆ ನಾವೂ ನೀವೂ ಮೊಬೈಲ್ ಕುಚ್ಚುವ ಕೆಲಸದಲ್ಲಿ ನಿರತರಾಗೋಣ.

Comments
Post a Comment