ವಿಶ್ವ ಗೂಬೆಗಳ ದಿನಾಚರಣೆ
ಲೇಖಕರು : ಎಂ ಅರ್ ವೆಂಕಟರಾಮಯ್ಯ
ಶೀರ್ಷಿಕೆ ಓದಿದ ಕೂಡಲೇ ಇದೇನ್ ಸ್ವಾಮಿ, ನಿಮ್ಮ ಲೇಖನಕ್ಕೆ ಮತ್ಯಾವ ಉಪಯುಕ್ತ ವಿಷಯವೇ ಸಿಗಲಿಲ್ಲವೇ ! ಗೂಬೇನೇ
ಬೇಕಾಯಿತೇ ನಿಮ್ಮ ಲೇಖನದ ವಸ್ತುವಾಗಿ ! ಎಂದು ವ್ಯಂಗ್ಯವಾಡಬಹುದು ಹಲವರು, ಆದರೆ ಹಲವು ವ್ಯಕ್ತಿಗಳು ಲೋಕಲ್
ಮಟ್ಟದಲ್ಲಿ ಪ್ರಸಿದ್ಧರಾಗಬಹುದು, ಮತೆ ಕೆಲವರು ಲೋಕಲ್ ಮತ್ತು ನೇಷನಲ್ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಬಹುದು.
ಇನ್ನೂ ಕೆಲವರು ಇವೆರಡನ್ನೂ ಮೀರಿ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುವವರಿದ್ದಾರೆ. ಇವರೇನು ಸಾಮಾನ್ಯರೇ
! ಈ ಹಂತ ತಲುಪಿರುವ ಇವರು ಅದೆಷ್ಟು ಬುದ್ದಿವಂತರಿರಬಹುದು, ಕೆಲಸ ಕಾರ್ಯಗಳಲ್ಲಿ ದಕ್ಷರಿರಬಹುದು ? ಜೊತೆಗೆ ಅದೆಷ್ಟು ಪ್ರಭಾವಿಗಳಾಗಿರಬಹುದು
! ಇವೆಲ್ಲವನ್ನೂ ಊಹಿಸುವುದು ಕಷ್ಟದ ಕೆಲಸವಲ್ಲವೇ ! ಇಂತಹಾ ಅಂತರಾಷ್ಟಿçÃಯ ಪ್ರಸಿದ್ದರನ್ನು ಕುರಿತು
ನಾವು ಕೆಲವು ಮುಖ್ಯ ವಿಷಯಗಳನ್ನಾದರೂ ತಿಳಿಯಬೇಡವೇ ? ವಿಷಯ ಹೀಗಿರುವಾಗ ನಮ್ಮೀ ಲೇಖನದ ವಸ್ತುವಾಗಿರುವ ಮಹನೀಯರನ್ನು ಅದೇಕೆ
ತುಚ್ಚವಾಗಿ ಕಾಣ್ತೀರಿ !
ಇದೆಲ್ಲಾ ಯಾರ ಪ್ರಶಂಸೆ ಎಂಬುದು
ಈಗಲೂ ನಿಮಗೆ ಅರ್ಥವಾಲಿಲ್ಲವೇ ? ಇವರೇ ಇಂಟರ್ ನೇಷನಲ್ ಫೇಮ್ “ಮಿಸ್ಟರ್ ಗೂಬೆರಾಯರು”
ಹೌದು, ಪ್ರತಿ ವರ್ಷದ ಆಗಸ್ಟ್ 4 ಅನ್ನು ‘ಅಂತರಾಷ್ಟಿçÃಯ ಗೂಬೆಗಳ ದಿನಾಚರಣೆ’ಯಾಗಿ
ಆಚರಿ ಸುತ್ತಿರುವುದು ನಿಜವಾದರೂ ಈ ಸತ್ಯ ಬಹಳಷ್ಟು ಜನರಿಗೆ ತಿಳಿದಿರಲಾರದು.
ನಮ್ಮ, ನಿಮ್ಮ ಆರಾಧ್ಯ ದೈವ : ದೇವತೆಗಳು
ಪ್ರತಿಯೊಬ್ಬರೂ ಒಂದೊAದು ಪಕ್ಷಿ,
ಪ್ರಾಣಿಯನ್ನು ತಮ್ನ ವಾಹನವನ್ನಾಗಿ
ಮಾಡಿಕೊಂಡಿರುವುದು ತಿಳಿದಿರುವ ವಿಷಯವಾಗಿರುತ್ತದೆ. ಉದಾಹರಣೆಗೆ ಗಣಪತಿಗೆ ಇಲಿ, ಈಶ್ವರನಿಗೆ ನಂದಿ, ಸರಸ್ವತಿಗೆ ಹಂಸ, ಶನಿದೇವರಿಗೆ ಕಾಗೆ, ಸುಬ್ರಹ್ಮಣ್ಯನಿಗೆ ಸರ್ಪ, ನವಿಲು. ಯಮದೇವರಿಗೆ ಎಮ್ಮೆ.
ಈ ಪಟ್ಟಿಯಲ್ಲಿ ಸಿರಿ ದೇವತೆಗೆ ವಾಹನ ಯಾರು ಎಂಬುದನ್ನು ಹೇಳಬಲ್ಲಿರಾ ! ನೀವು ಊಹಿಸಿರಲಾರಿರಿ. ಇವರೇ
ನಮ್ಮ ಗೂಬೆರಾಯರು ಎಂದರೆ ನಂಬಲು ಕಷ್ಟವೇ ! ಎಸ್, ಬಹಳಷ್ಟು ಸಲ ‘ಟ್ರುತ್ ಈಸ್ ಸ್ಟೆçÃಂಜರ್ ದ್ಯಾನ್ ಫಿಕ್ಷನ್’ ಎಂಬ ಗಾದೆಯಂತೆ ನಂಬಲು ಕಷ್ಟ ಎನಿಸಬಹುದು
ನಂಬಲಾಗದಾದರೂ ಇದು ಸತ್ಯ.
‘ಎವ್ವೆರಿ ಡಾಗ್ ಹ್ಯಾಸ್ ಇಟ್ಸ್ ಡೆ’ ಎಂಬುದು ಇಂಗ್ಲಿಷ್ ಭಾಷೆಯ
ಹಳೆಯ ಗಾದೆ. ಈ ಗಾದೆ ನಿಜ ಎಂಬAತೆ ಗೂಬೆ ರಾಯರಿಗೆ ಅದೃಷ್ಟ ಖುಲಾಯಿಸಿದೆ. ಅದಕ್ಕೇ ಇವರು ಅಂತರಾಷ್ಟೀಯ
ಮಟ್ಟಕ್ಕೇರಿದ್ದಾರೆ.
‘ಲೋಕೋ ಭಿನ್ನ ರುಚಿಃ, ಒಬ್ಬನ ಆಹಾರ ಮತ್ತೊಬ್ಬನಿಗೆ ವಿಷ’ ಎಂಬ ಗಾದೆಗಳಿರುವಂತೆ ನಮ್ಮಲ್ಲಿಯೇ
ಕೆ¯ವರಿಗೆ ಗೂಬೆಯನ್ನು ಕಂಡರೆ ಇದು ಶ್ರೀಮಹಾ ಲಕ್ಷಿö್ಮಯ ವಾಹನ, ಇದನ್ನು ಕಂಡವರಿಗೆ ಸಿರಿ ಸಿಗುತ್ತದೆ
ಆದ್ದರಿಂದ ಇದು ಶುಭ ಎನಿಸಿದರೆ, ಮತ್ತೆ ಹಲವರಿಗೆ, ಇದನ್ನು ನೋಡಿದರೆ ಅಸಹ್ಯ, ಅಶುಭ, ಕೆಟ್ಟ ವಾರ್ತೆ ಕೇಳಿಸುತ್ತದೆ, ಬಡತನ ಬರುತ್ತದೆ ಎಂ¨ ನಂಬಿಕೆಯಿದೆ. ಇವೆಲ್ಲಾ ವ್ಯಕ್ತಿಗಳ
ವೈಯಕ್ತಿಕ ವಿಷಯವಾಗಿದ್ದು ಇದು ಪಕ್ಕಕ್ಕಿರಲಿ.
ಗೂಬೆಯ ಗುಣ, ಕಾರ್ಯಾಚರಣೆ :
ಗೂಬೆಗಳಿಗೆ ಉತ್ತಮ ಕೇಳುವಿಕೆ
ಶಕ್ತಿಯಿರುತ್ತದೆ. ಇವು ಭೂಗತ ಇಲಿಯನ್ನೂ ಪತ್ತೆ ಮಾಡಿ ಅದರ ಚಲನೆ ಅನುಸರಿಸಿ ಹಿಡಿಯುತ್ತದೆ, ಇವು ಹಾರುವಾಗಲೂ ಶಬ್ಧ ಮಾಡುವುದಿಲ್ಲ.
ತನ್ನ ದಾಳಿಯ ಸೂಚನೆಯನ್ನು ದಾಳಿಗೊಳಗಾಗುವ ಪಕ್ಷಿಗೆ ಸುಳಿವೇ ಕೊಡದೆ ದಿಢೀರನೆ ಆಕ್ರಮಣ ಮಾಡುವ ಸ್ವಭಾವವನ್ನು
ಹೊಂದಿರುವುದರಿAದ ಇದಕ್ಕೆ ‘ಚೋರ್’ ಎಂಬ ಹೆಸರಿದೆ.
ಆಹಾರ ಸಂಗ್ರಹಣೆಗಾಗಿ ಇದು
ಹದ್ದಿನಷ್ಟು ಕಷ್ಟಪಡುವುದಿಲ್ಲ. ಇದು ಚುರುಕಾಗಿ ಬುದ್ಧಿವಂತ ಕ್ರಮಗಳ ಮೂಲಕ ತನ್ನ ಬೇಟೆಯನ್ನು ಹಿಡಿಯುತ್ತದೆ.
ಇದು ಹಗಲಿನಲ್ಲಿ ನಿದ್ರಿಸಿ ರಾತ್ರಿ ಎಚ್ಚರವಾಗಿದ್ದು ಸಂಚರಿಸುವ ಪ್ರಾಣಿ. ಇದರ ದೊಡ್ಡ ಕಣ್ಣುಗಳು
ದುರ್ಬೀನುಗಳಂತೆ ದೃಷ್ಟಿ ನೀಡಿ ಎಂತಹಾ ವಿಪರೀತ ಪರಿಸ್ಥಿತಿಯಲ್ಲೂ ಬೇಟೆಯಾಡಲು ಅನುವು ಮಾಡಿಕೊಡುತ್ತದೆ.
ಇದರ ನೇತ್ರ ದೃಷ್ಟಿ ಬಹಳ ಸೂಕ್ಷö್ಮವಾಗಿರುವುದರಿಂದ ಅದೆಷ್ಟೇ ದೂರದಲ್ಲಿರುವ ಪ್ರಾಣಿಯನ್ನಾದರೂ ಇದು
ಸ್ಪಷ್ಟವಾಗಿ ಗುರ್ತಿಸಿ ಹಿಡಿಯುತ್ತದೆ.
ಇವು ತಮ್ಮ ಪರಿಧಿಯ ಸಂಪೂರ್ಣ
ನೋಟವನ್ನು ಹೊಂದಿರುವ ಪ್ರಾಣಿ. ಇದು ತನ್ನ ತಲೆಯನ್ನು ಸಮತಲ ಅಕ್ಷದಲ್ಲಿ 270 ಡಿಗ್ರಿ ಮತ್ತು ಲಂಬ ಅಕ್ಷದಲ್ಲಿ
180 ಡಿಗ್ರಿ ತಿರುಗಿಸಬಲ್ಲ ಶಕ್ತಿಯನ್ನು
ಹೊಂದಿರುತ್ತದೆ. ಈ ವಿಶಿಷ್ಟ ಗುಣದಿಂದ ಇವುಗಳ ಹಾರಾಟದ ಸಮಯದಲ್ಲಿ ಯಾವುದೇ ದಿಕ್ಕನ ಕಡೆ ತಿರುಗಿ ನೋಡಲು
ಅನುಕೂಲವಾಗುತ್ತದೆ ಈ ಅನುಕೂಲದ ಜೊತೆಗೆ ಇವು ಬೇಟೆಯಾಡುವ ಸಂದರ್ಭದಲ್ಲೂ ನೇರವಾಗಿ ಹಿಂದಕ್ಕೆ ನೋಡಲು
ಸಾಧ.್ಯ ಹೀಗಾಗಿ ತಮ್ಮ ರಕ್ಷಣೆಗಾಗಿ ಮುಂದಿನ ಕ್ರಮ ವಹಿಸಲು ಸಾಧ್ಯವಾಗುತ್ತದೆ.
ಇದರ 360 ಡಿಗ್ರಿ ತಲೆಯ ಚಲನೆಯ ಸೌಕರ್ಯವು
ಇತರ ಪಕ್ಷಿಗಳು ತಮ್ಮ ಮೇಲೆ ಮಾಡಬಹುದಾದ ಬೇಟೆಯನ್ನು ಮೊದಲೇ ಊಹಿಸಿ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.
ಸಾಧರಣವಾಗಿ ¥ಕ್ಷಿಗಳು ಹಿಂಡು ಹಿಂಡಾಗಿಯೋ
ಗುಂಪಾಗಿಯೋ ವಾಸಿಸಲು ಬಯಸುತ್ತವೆ. ಆದರೆ ಗೂಬೆಗಳು ಏಕಂಗಿಯಾಗಿ ಸ್ವತಂತ್ರವಾಗಿಯೋ ಜಂಟಿಯಾಗಿಯೋ ಇರಲು
ಬಯಸುತ್ತದೆ.
ಗೂಬೆಯು ಬುದ್ದಿವಂತಿಕೆಗೆ
ಸಂಕೇತವಾಗಿರುತ್ತದೆ. ಏಕೆಂದರೆ ತಮ್ಮ ಆಹಾರವನ್ನು ಯಾವಾಗ ಹುಡುಕಿ ಹೋಗಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು, ಸಂಚಾರಕ್ಕೆ ಯಾವುದು ಸುಸಮಯ, ವಿಶ್ರಾಂತಿಗೆ ಯಾವುದು ಸಕಾಲ
ಎಂಬುದನ್ನು ಚೆನ್ನಾಗಿ ತಿಳಿದಿರುತ್ತದೆ. ಅನಾವಶ್ಯಕವಾಗಿ ಇವು ಸುತ್ತಾಡಿ ಆಯಾಸ ಮಾಡಿಕೊಳ್ಳುವುದಿಲ್ಲ
ಈ ಪ್ರಾಣಿಯ ಮತ್ತೊಂದು ವಿಶೇಷ
ಗುಣ ªಂದರೆ ಇವು ಹಿಂಡಿನ ಮನಸ್ಥಿತಿಯನ್ನು
ಅನುಸರಿಸುವುದಿಲ್ಲ. ಇತರರು ಏನು ಮಾಡುತ್ತಾರೋ ಅದನ್ನು ನಾನೂ ಮಾಡಿತ್ತೇನೆ ಅರ್ಥಾತ್ ಇತರರ ಅನುಸರಣಾ
ಬುದ್ದಿ ಇವಕ್ಕಿಲ್ಲ ಬದಲಾಗಿ ತನ್ನದೇ ಆದ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತದೆ.
ಯಶಸ್ಸು ಬೆಳವಣಿಗೆ ಅದೃಷ್ಟ
ಸಂಪತ್ತು ಸಮೃದ್ಧಿ ಬಯಸುವ ಮನುಷ್ಯರು ಕೇವಲ ಕಷ್ಟಪಟ್ಟು ಕೆಲಸ ಮಾಡಿದರೆ ಸಾಲದ.Ä ಇದರ ಜೊತೆಗೆ ಗೂಬೆಯ ಗುಣಗಳಂತೆ
ಅವರು ಚುರುಕಾಗಿರಬೇಕು. ತಮ್ಮ ಕೆಲಸದಲ್ಲಿ ಬುದ್ಧಿವಂತಿಕೆ ಉತ್ತಮ ಕಾರ್ಯತಂತ್ರಗಳನ್ನು ರೂಪಿಸಿಕೊಂಡು
ತಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು.
ಭಾರತೀಯ ಗ್ರಂಥಗಳಲ್ಲೇ ಅಲ್ಲದೆ
ಗ್ರೀಕ್ ಮತ್ತು ಇತರ ಪಾಶ್ಚಾತ್ಯ ದೇಶಗಳ ಗ್ರಂಥಗಳಲ್ಲಿಯೂ ಗೂಬೆಯನ್ನು ಬುದ್ಧಿವಂತಿಕೆಯ ಸಂಕೇತವಾಗಿ
ಬಳಸಲಾಗಿದೆ;
ಇದಕ್ಕೆ ಉದಾಹರಣೆಯಾಗಿ ಭಾರತದಲ್ಲಿನ
ನೀತಿ ಕತೆಯ ಪುಸ್ತಕವಾದ ‘ಪಂಚತAತ್ರ’ ದಲ್ಲಿ ಕಾಗೆಗಳು ಮತ್ತು ಗೂಬೆಗಳ ನಡುವಿನ ಹೋರಾಟದ ಸುಧೀರ್ಘ
ಪ್ರಸಂಗವನ್ನು ಹೊಂದಿರುವುದನ್ನು ಗಮನಿಸಬಹುದಾಗಿದೆ.
ಭಾರತದಲ್ಲಿ ಲಕ್ಷಿö್ಮ ಮತ್ತು ಚಾಮುಂಡಾ ದೇವಿಯರು
ಗೂಬೆಗಳನ್ನು ತಮ್ಮ ವಾಹನಗಳನ್ನಾಗಿ ಹೊಂದಿದ್ದಾರೆ.
ಹಿಂದಿನ ಹಿಂದೂಸ್ಥಾನದ ಭಾಗವಾಗಿದ್ದ
ಮಗಧ ಮೌರ್ಯರು ಇಂಡೋ ಗ್ರೀಕ್ ರಾಜರುಗಳ ಕಾಲದಲ್ಲಿ ಅವರು ಬಳಸುತ್ತಿದ್ದ ನಾಣ್ಯಗಳ ಮುಖ ಭಾಗದಲ್ಲಿ ಗೂಬೆಯ
ಚಿತ್ರವನ್ನು ಬಳಸಿದ್ದ ಮಾಹಿತಿ ತಿಳಿದುಬಂದಿದೆ.
ಹಲವು ದೇಶಗಳಲ್ಲಿನ ಶಿಕ್ಷಣ
ಸಂಸ್ಥೆಗಳು ಪುಸ್ತಕ ಮಳಿಗೆಗಳು ಪ್ರಕಾಶನ ಸಂಸ್ಥೆಗಳ ಲಾಂಛನಗಳಲ್ಲಿ ಗೂಬೆಯ ಭಾವ ಚಿತ್ರವನ್ನು ಬಳಸಿರುವುದು
ಗಮನಾರ್ಹ ವಿಷಯವಾಗಿದೆ,
ಗ್ರೀಸ್‌ನಲ್ಲಿ ಇವರ ಬುದ್ದಿವಂತಿಕೆಯ
ದೇವತೆಯಾದ ಪಲ್ಲಾಸ್ ಅಥೇನ\ ಮಿನರ್ವಾರನ್ನು ಗೂಬೆಯೊಂದಿಗೆ ಥಳಕು ಹಾಕಿರುವುದು ಕೇಳಿ ಬಂದಿದೆ,
ಕೆಲವು ಸಂಸ್ಕೃತಿಗಳಲ್ಲಿ ಗೂಬೆಗಳನ್ನು
ಈ ಲೋಕದ ಮಾಹಿತಿಗಳನ್ನು ಇತರೇ ಲೋಕಗಳಲ್ಲಿರುವ ಹಿರಿಯರಿಗೆ ತಲುಪಿಸುವ ವಾಹಕಗಳು\ ಕೇರಿಯರ್ಸ್ ಎಂಬ ನಂಬಿಕೆಯಿದೆ.
ಕೆಲವು ದೇಶಗಳು ಗೂಬೆಗಳ ರೆಕ್ಕೆಗಳನ್ನು ಪವಿತ್ರ ಎಂದು ಸಂಗ್ರಹಿಸುವ ರೂಢಿ ಇರುವುದು ಕೇಳಿಬಂದಿದೆ.
ಪ್ರತಿ ವರ್ಷದ ಆಗಸ್ಟ್ 4 ಅನ್ನು “ಔಲ್ ಅವೇರ್‌ನೆಸ್
ಡೇ” ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಇದರ ಉದ್ದೇಶ್ಯ ಎಂದರೆ ಕತ್ತಲೆಯಲ್ಲಿ ಕಾರ್ಯ ನಿರ್ವಹಿಸುವ
ಈ ಮಿಸ್ಟೀರಿಯಸ್ ಪಕ್ಷಿಯ ಚಲನವಲನ ಜೀವನ ಶೈಲಿ ಇದರ ಗುಣ ಸ್ವಭಾವ ಮೊದಲಾದುವುವನ್ನು ಅಧ್ಯಯನ ಮಾಡಲು, ಹಲವಾರು ಕಾರ್ಯ ಕ್ರಮಗಳನ್ನು
ಹಮ್ಮಿಕೊಳ್ಳುವುದಿದ್ದು ಇದರ ಅಂಗವಾಗಿ ಈ ಪಕ್ಷಿಯ ನೇಚುರಲ್ ಹೆಬಿಟೈಟ್ ಸ್ಥಳಗಳಿಗೆ ಬೇಟಿಕೊಡುವುದಿದೆ.
ಈ ನಿಶಾಚರ ಪಕ್ಷಿಯ ಬಗ್ಗೆ ಜನಕ್ಕೆ ಇರುವ ಮೂಢ ನಂಬಿಕೆಗಳನ್ನು ತೊಲಗಿಸಿ ಮನುಷ್ಯರಾದ ನಾವು ಈ ಪಕ್ಷಿಯಿಂದ
ಏನೇನು ಗುಣಗಳನ್ನು ಕಲಿಯ ಬಹುದು ಎಂಬ ಬಗ್ಗೆ ಸರಿಯಾದ ಅರಿವು ಮೂಡಿಸುವ ಸದುದ್ಧೇಶ್ಯವೂ ಗೂಬೆಗಳ ದಿನಾಚರಣೆಯ
ಹಿನ್ನೆಲೆಯಾಗಿದೆ.
ಗಾತ್ರ, ಬಲ, ಬುದ್ಧಿವಂತಿಕೆಗಳಲ್ಲಿ ಪ್ರಸಿದ್ಧಿ
ಪಡೆದು ‘ಗಜರಾಜ’ ಎನಿಸಿಕೊಂಡ ಆನೆ, ‘ಮೃಗರಾಜ’ ಎನಿಸಿಕೊಂಡ ಸಿಂಹ ಹುಲಿಗಳು, ‘ಜಲರಾಜ’ ಎನಿಸಿಕೊಂಡ ಮೊಸಳೆ, ಶಾರ್ಕ್ಗಳು ಮೊದಲಾದುವುಗಳೆಲ್ಲಾ
ತಮ್ಮ ತಮ್ಮ ವಾಸಸ್ಥಳ ತಾಣಗಳಲ್ಲಿ ಬಲಶಾಲಿಗಳೆಂದು ಪ್ರಸಿದ್ದಿ ಪಡೆದಿದ್ದರೆ. ಅಂತರಾಷ್ಟಿಯ ಮಾನ್ಯತೆ ಪಡೆದಿರುವ ಗೂಬೆಗಳಲ್ಲಿರುವ
ಹಲವು ಒಳ್ಳೆಯ ಗುಣಗಳನ್ನು ಮನುಷ್ಯರು ಗಮನಿಸಿ ತಮ್ಮದಾಗಿಸಿಕೊಳ್ಳಲು ಗೂಬೆಗಳ ದಿನಾಚರಣೆ ಸಕಾಲವಾಗಿದೆ.

Comments
Post a Comment