ಗಾರ್ದಭ ಚರಿತ್ರೆ
ಲೇಖಕರು : ಎಂ ಅರ್ ವೆಂಕಟರಾಮಯ್ಯ
ವಿದ್ಯಾಭ್ಯಾಸ ಕಾಲದಲ್ಲಿ ಇಂಡಿಯನ್ ಹಿಸ್ಟರಿ, ಬ್ರಿಟಿಷ್ ಹಿಸ್ಟರಿ, ಅಮೆರಿಕನ್ ಹಿಸ್ಟರಿ ಮೊದಲಾದ ಚರಿತ್ರೆಗಳ ಬಗ್ಗೆ ಓದಿದ್ದೆವು. ಆದರೆ ಈ ಗಾರ್ದಭ ಚರಿತ್ರೆ ಬಗ್ಗೆ ಕೇಳಿರಲಿಲ್ಲ. ಇಷ್ಟಕ್ಕೂ ಈ ಕತ್ತೆಯ ವಿಚಾರ ಕೇಳಿ ನಮಗೇನಾಗೇಕಾಗಿದೆ ! ಇದರಿಂದ ಪುಣ್ಯವಾ ! ಪುರುಷಾರ್ಥವಾ ! ಇದರಿಂದ ನಮಗೇನು ಲಾಭ ? ಎನ್ನಬಹುದು ಕೆಲವರು. ಮತ್ತೆ ಕೆಲ ವರು, ಅಲ್ರೀ ಸ್ವಾಮಿ, ಇಷ್ಟು ದಿನಗಳೂ ಒಳ್ಳೆ ಲೇಖನ ಕೊಡತ್ತಿದ್ದವರು ಇಂದ್ಯಾಕೆ ಕತ್ತೆ ಹಿಂದೆ ಹೋಗತ್ತಿದ್ದಿರಲ್ಲಾ ! ಎಂಬ ವ್ಯಂಗ್ಯವೊ ಹಾಸ್ಯವೋ ಮಾತನಾಡಬಹುದು, ಆದರೆ ಕತ್ತೆ ಅನ್ನೋ ಪ್ರಾಣಿ ನಮ್ಮ ನಡುವೆ ಇರುವುದು ನಿಜ ತಾನೇ ! ಇದೇ ಕತ್ತೆಗೆ ಇದ್ದಕ್ಕಿದ್ದಂತೇ ಅದೆಂತಹಾ ಪ್ರಾಮುಖ್ಯತೆ ಬಂದಿದೆ ಇಂದು ಎಂಬುದು ನಿಮಗೆ ಗೊತ್ತುಂಟೇ ? ನಮ್ಮ ನಿಮ್ಮ ಬಗ್ಗೆ ಎಂದಾದರೂ ವಿಧಾನ ಸಭೆ ಸರ್ಕಾರಗಳ ಮಟ್ಟದಲ್ಲಿ, ಹಲವು ದೇಶ ವಿದೇಶಗಳಲ್ಲಿ ಈ ಗಾರ್ದಭ ಚರ್ಚಾ ವಿಷಯವಾಗಿರುವುದು ನಿಮಗೆ ಗೊತ್ತೆ / ಉತ್ತರ ಇಲ್ಲ. ಹೀಗೆ ಎಲ್ಲ ಪ್ರಶ್ನೆಗಳಿಗೂ ಇಲ್ಲಪ್ಪ ಉತ್ತರ ಹೇಳಿದರೆ ನಿಮಗೆ ಅವಮಾನವಾಗದೇ ? ಅದಕ್ಕೆ ಇನ್ನಾದರೂ ಅವಮಾನಕ್ಕೆ ಗುರಿಯಾಗದೆ ಗಾರ್ದಭ ರಾಯರ ಬಗ್ಗೆ ನಿಮಗೇ ತಿಳಿದಿರಲಾರದ ಹತ್ತು ಹಲವು ಮುಖ್ಯ ವಿಷಯಗಳನ್ನು ಅರಿತು ಜನರ ಮದ್ಯೆ ನಿಮ್ಮ ಜಾಣ್ಮೆ ಮೆರೆಸಲು ಇದೊಂದು ಸದವಕಾಶ ಸಿಕ್ಕಿದೆ. ಬನ್ನಿ ಗಾರ್ದಭ ಗುರುವೆ ನಮೋ ನಮಃ ಎನ್ನುತ್ತಾ ಇದೀಗ ಈ ಗಾರ್ದಭ ರಾಯರ ದರ್ಶನಕ್ಕೆ ತೆರಳೋಣ.
“ಎತ್ತಣ ಮಾಮರ ಎತ್ತಣ ಕೋಗಿಲೆ” ಎಂಬಂತೆ, ಗಾದರ್ಭಕ್ಕೂ ಗುರುವಿಗೂ ಹೇಗೆ ಸಂಬAಧ ? ಎಂಬ ಅಚ್ಚರಿಯೇ ! ಯಾಕಾಗಬಾರದು ? ಕಲಿಸುವವನು ಯಾರಾದರೇನು ? ಅವನು ನಮ್ಮ ನಡುವೆಯೇ ಇರುವಾಗ, ಅವನಿಂದ ಕಲಿಯಬಹುದಾದ್ದನ್ನು ಕಲಿಯಲು ಅದು, ಇದು ಎಂಬ ಈ ಬೇಧವೇಕೆ ? ಸದ್ಗುಣಗಳ ಕಲಿಕೆಗಾಗಿ ಮನುಷ್ಯ ಅಲ್ಲಿ, ಇಲ್ಲಿ ಹುಡುಕಾಡಬೇಕಿಲ್ಲ. ಸರಿಯಾಗಿ ನೋಡುವ ಕಣ್ಣು, ಅರಿಯುವ ಹೃದಯ, ಕಲಿಯುವ ಮನಸ್ಸಿದ್ದರೆ ಸಾಕು, ಪ್ರಕೃತಿ, ನಮ್ಮ ಸುತ್ತಲಿರುವ ಪಶು ಪಕ್ಷಿ ಕ್ರಿಮಿ ಕೀಟಾದಿಗಳು, ಸೂರ್ಯ, ಚಂದ್ರ, ಸಮುದ್ರ ಭೂಮಿ, ವಾಯು, ಆಕಾಶ, ಜಲ, ಅಗ್ನಿ, ಸೂರ್ಯ, ಚಂದ್ರ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ, ದುಂಬಿ, ಆನೆ, ಜೇನು ತೆಗೆಯುವವನು, ಜಿಂಕೆ, ಮೀನು, ಪಿಂಗಳಾ, ವೇಶ್ಯೆ, ಕುವರ ಪಕ್ಷಿ, ಸರ್ಪ, ಜೇಡರ ಹುಳು, ಭೃಂಗ, ಮಗು, ಮೊದಲಾದುವುಗಳೆಲ್ಲವೂ ನಮಗೆ ನಿತ್ಯವೂ ಹತ್ತಾರು ಪಾಠಗಳನ್ನು ಕಲಿಸುತ್ತಲೇ ಇರುತ್ತವೆ,. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ನಾನೆಲ್ಲವನ್ನೂ ಬಲ್ಲೆ ಎಂಬ ಅಹಂ ವ್ಯಕ್ತಿಯ ಪ್ರಗತಿಗೆ ಮಾರಕವಾಗುತ್ತದೆ. ನಿಜವಾಗಿ ಕಲಿಯಬೇಕೆಂಬ ಮನೋಭಾವವಿರುವವನು ಎಲ್ಲೆಡೆಯೂ ಏನಾದರೂ ಸಿಕ್ಕೀತೇ ಎಂಬ ಕುತೂಹಲ ಹೊಂದಿ ಹುಡುಕಾಟದಲ್ಲಿರುತ್ತಾನೆ. ಆದರೆ ಕಲಿಯಲು ಮುಖ್ಯವಾಗಿ ಬೇಕಾಗಿರುವುದು ಮನಸ್ಸು, ಆಸಕ್ತಿ. ಶ್ರದ್ದೆ, ಇವಿಲ್ಲದಾಗ, ನಮ್ಮ ಕಣ್ಣೆದುರಿಗೇ ನಡೆಯುತ್ತಿರುವುದೂ ನಮಗೆ ಕಾಣಿಸುವುದಿಲ್ಲ.
ಸಂಸ್ಕೃತದಲ್ಲಿ ಕತ್ತೆಗೆ ‘ಗಾರ್ಧಭ’ ಎಂಬ ಹೆಸರಿದೆ. ಕತ್ತೆ ಎಂದ ಕೂಡಲೇ ನೆನಪಾಗುವುದು “ಮೂಢೋ, ಮೂರ್ಖೋ, ಗಾರ್ದಭೋ ಏಕ ರಾಶಿಃ “ ಎಂಬ ಗಾದೆ ಸಹಾ ಬಳಕೆಯಲ್ಲಿದೆ. ಬೆಳಗಾಗೆದ್ದರೆ ಮನೆಗ¼ಲ್ಲಿ ನಮ್ಮ ಮಕ್ಕಳ ಎಂತಹುದಾದರೂ ತಪ್ಪಿಗೆ ಅವರನ್ನು ಬೈಯ್ಯಲು, ‘ಯಾಕೋ ಹೀಗೆ ಮಾಡಿದೆ ! ಕತ್ತೆ ಮುಂಡೇದೇ, ಕತ್ತೆ ವಯ ಸ್ಸಾಗಿದೆ ಎಂಬುದನ್ನು ಬಳಸಿ ಆ ತಪ್ಪು ಕತ್ತೆಯೇ ಮಾಡಿತೇನೋ ಎಂಬAತೆ ಕತ್ತೆಯ ಮೇಲೆ ಬೈಗಳ ಹೊರಿಸ್ತೇವೆ. ನಿಮಗೇನೂÀ ಹೆಚ್ಚು ವಯಸ್ಸಾಗಿಲ್ಲ ಎಂದು ಯಾರಾದರೂ ನಮ್ಮ ಪರವಾಗಿ ಮಾತನಾಡಿದರೆ, ನನ್ನಗಿನ್ನೂ ಸಣ್ಣ ವಯಸ್ಸೇ ! 2-3 ಕತ್ತೆ ವಯಸ್ಸಾಯ್ತು ಅಂತೀವಿ. ಈ ಮಾತಿನಲ್ಲೂ ಕತ್ತೆಗೇ ಅವಹೆಳನ. ಮನೆಯಲ್ಲೋ, ಕಛೇರಿ ಯಲ್ಲೋ ನಮ್ಮ ಮೇಲೆ ಹೆಚ್ಚು ಕೆಲಸದ ಹೊರೆ ಬಿದ್ದಾಗ, ಸಾಕಾಗಿದೆಯಪ್ಪಾ , ಇಲ್ಲಿ ಕತ್ತೆ ಚಾಕರಿ ಅಂತೀವಿ. ಕಛೇರಿಗಳಲ್ಲಿ ಕೆಲಸ ಮಾಡದೆಯೋ, ಆಲಸ್ಯವಾಗಿರುವವನಿಗೋ, ಸಕಾಲದಲ್ಲಿ ಕೊಟ್ಟ ಕೆಲಸವನ್ನು ಪೂರೈಸದವನನ್ನು ಬೈಯ್ಯುವಾಗ, ಇಷ್ಟು ದಿವಸ ಏನ್ ಮಾಡ್ತಿದ್ರಿ , ಕತ್ತೆ ಕಾಯತಿದ್ರಾ ! ಎಂದೋ, ಓದು ಬರಹದಲ್ಲಿ ಹಿಂದೆ ಬಿದ್ದವ ನನ್ನೋ, ಓದಿನಲ್ಲಿ ಆಸಕ್ತಿ ತೋರಿಸದವನನ್ನೋ ಆಕ್ಷೇಪಿಸುವಾಗ, ಸರಿಯಾಗಿ ಓದಿ ಹೆಚ್ಚು ಅಂಕ ತಗೊಳ್ದೆ ಇದ್ದರೆ ನಿನ್ನ ಎಮ್ಮೆ : ಕತ್ತೆ ಕಾಯೋಕೆ ಹಾಕ್ತೀನಿ ಎನ್ನುವ ಹಿರಿಯರ ಬೈಗುಳವನ್ನು ನಾವೆಲ್ಲಾ ಕೇಳಿಯೇ ರ‍್ತೇವೆ. ನಮ್ಮ ಪ್ರಾಣಿ ಪ್ರಪಂಚದಲ್ಲಿ ಅದೆಷ್ಟೋ ಪ್ರಾಣಿಗಳಿದ್ದರೂ, ಅವ್ಯಾವುವನ್ನೂ ಹೀಗೆ ಹಿಗ್ಗಾ ಮುಗ್ಗಾ ಎಳೆಯದೆ, ತನ್ನ ಪಾಡಿಗೆ ತಾನು ಯಾರ ತಂಟೆಗೂ ಬರದೆ ಇರುವ ಕತ್ತೆಯನ್ನೇ ಎಲ್ಲಕ್ಕೂ ಎಳೆಯುತ್ತೇವೆ. ಹೀಗೆ, ಹಲವಾರು ಸಲ, ವಿವಿಧ ಕಾರಣಗಳಿಂದ ನಾವು ಈ ಗಾರ್ದಭ, ಅರ್ಥಾತ್ ‘ಕತ್ತೆ ‘ ಎಂಬ ಪ್ರಾಣಿಯನ್ನು ಸ್ಮರಿಸುತ್ತೇವೆ, ಆದರೆ ಈ ಸ್ಮರಣೆ ಕೃತಜ್ಞತೆಯಿಂದಲ್ಲ, ಬದಲಿಗೆ, ನಮ್ಮ ಕಣ್ಣೆದುರಿಗೆ ಇಲ್ಲದಿದ್ದರೂ, ನಮಗೇನೂ ಅಪಕರಿಸದಿದ್ದರೂ, ಈ ಪ್ರಾಣಿ ಯನ್ನು ಅವಹೆಳನಕಾರಿಯಾಗಿ, ಅವಮಾನಿಸುವ ರೀತಿ ಬಳಸುತ್ತೇವೆ. ಇದೆಲ್ಲಾ ಸರಿ ಉಂಟೇ ಮಾರಾಯ್ರೇ !
ಹಿಂದೊಂದು ಕಾಲಕ್ಕೆ ಗ್ರಾಮ ಹಳ್ಳಿ ಪಟ್ಟಣ ಎಂ¨ ಬೇಧವಿಲ್ಲದೆ ರಸ್ತೆಗಳಲ್ಲಿ ಕಸ ಕಡ್ಡಿ ಹಳೆ ಬಟ್ಟೆಗಳು ಎಲ್ಲಿ ಬಿದ್ದಿದ್ದರೆ ಅಲ್ಲಿ ಕಾಣಿಸುತ್ತಿದ್ದ ಈ ಪ್ರಾಣಿ ಇಂದಿನ ತಲೆಮಾರಿನ ಮಕ್ಕಳಿಗೆ ಪುಸ್ತಕದಲ್ಲಿನ ಚಿತ್ರ ತೋರಿಸಿ ಕತ್ತೆ ಎನ್ನ ಬೇಕಾದ ಪರಿಸ್ಥಿತಿ ಇಂದಿದೆ. ಅದಕ್ಕೇ ಕತ್ತೆ ಕಾಣದವರ ಮಾಹಿತಿಗಾಗಿ ಇಲ್ಲಿದೆ ಇದರ ಸ್ಥೂಲ ಚಿತ್ರಣ. ಇದೊಂದು ಸೌಮ್ಯವಾದ ವಿಶ್ವಾಸಾರ್ಹ ವಿಧೇಯ ಸಾಕು ಪ್ರಾಣಿಯಾಗಿದೆ ಸುಮಾರು 570 ಪೌಂಡ್ ವರೆಗೆ ತೂಗುವ, ಕಂದು, ಕೆಂಪು ಬಣ್ಣದ ಕೂದಲನ್ನು ಹೊಂದಿ, 3 ರಿಂದ 4 ಅಡಿಗಳ ಎತ್ತರದವರೆಗೆ ಬೆಳೆಯುವ ಕತ್ತೆಗಳು, 10 ರಿಂದ 30 ವರ್ಷಗಳವರೆಗೆ ಆಯುಸ್ಸನ್ನು ಹೊಂದಿರುತ್ತವೆ. ತಮ್ಮ ಶರೀರದ ಶೇಖಡಾ 30 ರಷ್ಟು ಭಾರವಾದ ವಸ್ತುಗಳನ್ನು ಇವು ಹೊರ ಬಲ್ಲದು ಎಂದಿದೆ ಒಂದು ಅಂದಾಜು. ಹೆಚ್ಚಿನ ದೂರದ ಜಾಗಗಳಿಗೆ ಭಾರವಾದ ಸಾಮಾನುಗಳನ್ನು ಸಾಗಿಸಲು, ನೀರಿಲ್ಲದ ಸ್ಥಳಗಳಿಗೆ ದೂರದ ತಾಣಗಳಿಂದ ನೀರನ್ನು ಸರಬರಾರಾಜು ಮಾಡಲು, ಹಾಲು ಮತ್ತು ಮಾಂಸ ಪಡೆ ಯುವ ಉದ್ದೇಶದಿಂದ ಈ ಪ್ರಾಣಿಯನ್ನು ಸಾಕಲಾಗುತ್ತಿದೆ. ವಿಶ್ವದ ಮೊದಲ ಯುದ್ಧದಲ್ಲಿ ಗಾಯಗೊಂಡÀ ಸೈನಿಕರನ್ನು ಯುದ್ಧರಂಗದಿAದ ಹೊರಗೆ ಸಾಗಿಸಲು ಕತ್ತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗಿತ್ತು. ಇಟಲಿ ಮತ್ತು ಯೂರೋ ಪಿಯನ್ ರಾಷ್ಟçಗಳಲ್ಲಿÀ ಕತ್ತೆಗಳ ಮಾಂಸ, ಚರ್ಮಕ್ಕೆ ಹೆಚ್ಚು ಬೇಡಿಕೆಯಿದ್ದು ಇದರ ಬೆಲೆಯೂ ದುಭಾರಿಯಾಗಿದೆ ಯಂತೆ.
ಈ ಕಾರಣಗಳಿಂದ, ಕತ್ತೆ ಒಂದು ಅಪ್ರಯೋಜಕ ಪ್ರಾಣಿಯಲ್ಲ. ಈ ಮಾತಿಗೆ ಬಂದಾಗ, ಯಾವುದೇ ವಸ್ತು, ವಿಷಯ, ಪ್ರಾಣಿ, ಅಪ್ರಯೋಜಕ ಎನ್ನುವದು ಸರಿಯಲ್ಲ. ಏಕೆಂದರೆ ದೇವರ ಈ ಸೃಷ್ಟಿಯಲ್ಲಿ ಎಲ್ಲವೂ ಪ್ರಯೋಜನಕರವೇ ಆಗಿದ್ದು, ಅವುಗಳ ಉಪಯೋಗ, ವ್ಯಕ್ತಿ, ಕಾಲಗಳನ್ನು ಅವಲಂಭಿಸಿ ಇದು ಉಪಯೋಗಕರ, ಎನ್ನುವವರು ಮನುಷ್ಯರು. ಸೂಜಿಯಿಂದ ಆಗುವ ಕೆಲಸಕ್ಕೆ ದಬ್ಬಳ ತೆಗೆದುಕೊಂಡರು ಎಂಬ ಗಾದೆಯನ್ನೇ ಗಮನಿ ಸೋಣ. ದಬ್ಬಳದಿಂದಾಗುವ ಕೆಲಸಕ್ಕೆ ಅದು ಸೂಜಿ ಕೊಟ್ಟರೆ ಅದು ಅಪ್ರಯೋಜಕ ಹಾಗೇನೇ, ಸೂಜಿಯ ಕೆಲಸಕ್ಕೆ ದಬ್ಬಳ ತಂದಿಟ್ಟರೆ ಇದು ಯಾರಿಗೆ ಬೇಕಯ್ಯಾ ! ಬೇಡ ವಾದ್ದೇ ತಂದಿದೀಯ, ಎನ್ನುತ್ತೇವೆ. ಹೀಗೇನೇ ಕತ್ತೆಯ ವಿಚಾರ. ಕತ್ತೆಯಿಂದA ಮನುಷ್ಯ ಕಲಿಯಬೇಕಾದ ಹಲವಾರು ಗುಣಗಳಿವೆ. “ನ ವಿಶ್ರಾಂತೋ ವಹೇದ್ಭಾರಂ ಶೀತೋಷ್ಣಂಚ ಅನಿಂದತಿ \ ಸಂತುಷ್ಟಶ್ಚರAತೇ ನಿತ್ಯಂ ತ್ರೀಣಿ ಶಿಕ್ಷೇತ ಗಾರ್ದಭಾತ್\\ ತನ್ನನ್ನು ಸಾಕುತ್ತಿರುವ ಯಜಮಾನನಿ ಗೋಸ್ಕರ ಸದಾ ನಿಷ್ಠೆಯಿಂದ ದುಡಿಯುವ ಸಾಧು ಪ್ರಾಣಿ, ಕತ್ತೆ, ಅದು ಅªನಿಂದ ಯಾವ ಪುಷ್ಟಿಕರ ಆಹಾರವನ್ನೂ ನಿರೀಕ್ಷಿಸುವುದಿಲ್ಲ. ಅದಕ್ಕಾಗಿ ಅವನಿಗೆ ತೊಂದರೆ ಕೊಡುವುದಿಲ್ಲ ಬದಲಿಗೆ, ಬೀದಿ, ತಿಪ್ಪೆಗಳಲ್ಲಿ ಬಿದ್ದಿರುವ ಕಸ, ಕಾಗದ, ಹುಲ್ಲು ಮೊದಲಾದುವನ್ನು ಸೇವಿಸಿ, ಎಲ್ಲೋ ಸಿಕ್ಕಿದ ಕೊಳಕು ನೀರನ್ನೇ ಕುಡಿದು ಹೊಟ್ಟೆ ತುಂಬಿಸಿಕೊಳುತ್ತದೆ. ಯಜಮಾನ ತನಗೆ ಯಾವ ಸವಲತ್ತು ಸೌಕರ್ಯವನ್ನೂ ನೀಡದಿದ್ದರೂ, ಬೆನ್ನಿನ ಮೇಲೆ ಬಡಿತಗಳ ಬಹುಮಾನ ದೊರೆತರೂ, ಯಾರ ಬಳಿಯೂ ದೂರದೆ, ಹೀಗೆಲ್ಲಾ ಬಡಿದರೆ, ಗದರಿದರೆ, ನಾ ಕೆಲಸ ಮಾಡುವುದಿಲ್ಲ ಎಂದು ಮನುಷ್ಯರಂತೆ ಮುಷ್ಕರÀ ಹೂಡದೆ, ಚಳಿ ಗಾಳಿ ಬಿಸಿಲೆನ್ನದೆ ಅವನ ಆಜ್ಞೆಯಂತೆ ಸದಾ ಕೆಲಸ ನಿರ್ವಹಿಸುತ್ತಿರುತ್ತದೆ.
ಹಿಂದೊಂದು ಕಾಲಕ್ಕೆ ಹಸುವಿನ ಹಾಲು ಅರೋಗ್ಯಕರ, ಬೇಗ, ಸುಲಭವಾಗಿ ಜೀರ್ಣ ವಾಗುತ್ತದೆ ಎನ್ನುತ್ತಿದ್ದ ಜನ ಇಂದು ಕತ್ತೆಯ ಹಾಲಿಗೆ ಂಊಘಿ ಬೀಳುತ್ತಿರುವುದು ನಿಮಗೆ ಗೊತ್ತೇ ! ಹಿಗೆಂದಾಗ ಹಾ ! ಕತ್ತೆಯ ಹಾಲು ಕುಡಿಯುವದೇ ! ಅಸಹ್ಯ ಎಂದಿರಾ ! ಶತಮಾನಗಳಿಂದಲೂ ಕತ್ತೆಯ ಹಾಲಿನ ಬಳಕೆ ಇದ್ದು ಅದಕ್ಕೆ ದುಭಾರಿ ಬೆಲೆಯೂ ಇದೆ ಇದು ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾಹಿತಿ ಪತ್ರಿಕೆಗಳಲ್ಲಿ ಕಾಣಿಸಿದೆ. “ಅಪ್ರತಿಮ ಸುಂದರಿ” ಎಂಬ ಹೆಸರುಗಳಿಸಿದ್ದ ಕ್ಲಿಯೋಪಾತ್ರ, ನೀರೋನ ಎರಡನೆಯ ಪತ್ನಿ ಪೊಪ್ಟಾವ ಸಬೀನ, ವೈದ್ಯ ಪಿತಾಮಹಾ ಎನಿಸಿಕೊಂಡ ಹಿಪೋಕ್ರೇಟ್ಸ್ ಕತ್ತೆ ಹಾಲಿನ ಮಹತ್ವ ತಿಳಿದು ಬಳಸುತ್ತಿದ್ದರಂತೆ.
ಸಂಶೋಧಕರ ತಂಡದ ಪ್ರಕಾರ : ಹಸುವಿನ ಹಾಲನ್ನು ಕುಡಿದ ಇಲಿ ಹೆಚ್ಚು ಭಾರವಿದ್ದು, ಕತ್ತೆಯ ಹಾಲು ಕುಡಿದ ಮತ್ತೊಂದು ಇಲಿ ಕಡಿಮೆ ಭಾರ ತೂಗಿದ್ದನ್ನು ಕಂಡ ಸಂಶೋಧಕರು, ಆರೋಗ್ಯ ದೃಷ್ಟಿಯಿಂದ ಗಮನಿಸಿದರೆ ಹಸುವಿನ ಹಾಲಿನಲ್ಲಿ ಹೆಚ್ಚು ಕ್ಯಾಲೊರಿ ಇರುತ್ತದೆ ಇದರಿಂದ ಕೆಲವರಿಗೆ ಅಲರ್ಜಿ, ಮತ್ತೆ ಕೆಲವರು ದಪ್ಪ ಆಗಿದ್ದು ಕಂಡು ಬಂದಿದೆ ಎಂದಿದ್ದಾರೆ. ಕತ್ತೆಯ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಸಣ್ಣ ಮಕ್ಕಳಿಗೆ ಕೆಮ್ಮು ಶೀತ ಕಫ ನಿವಾರಣೆಗಾಗಿ ಕತ್ತೆಯ ಹಾಲು ದೇಹಕ್ಕೆ ಒಳ್ಳೆಯದು, ಇದರಲ್ಲಿ ಕಡಿಮೆ ಕ್ಯಾಲೊರಿ ಇದ್ದು, ರಕ್ತನಾಳಗಳಲ್ಲಿ ರಕ್ತ ಸಂಚಾರ ಸುಗಮವಾಗುತ್ತದೆ.(ಕನ್ನಡ ಪ್ರಭಾ 31 8 2014 ವರದಿ) ಆರೋಗ್ಯ, ಮೈ ಮಾಟ ಚೆನ್ನಾಗಿರಬೇಕು ಎಂದು ಇಚ್ಛಿಸುವವರು ಕತ್ತೆಯ ಹಾಲನ್ನು ಕುಡಿಯಬೇಕು ಎಂದಿದೆ ವಾರ್ತಾ ಪತ್ರಿಕೆಯ ವರದಿಯೊಂದು.
‘ಹೊತ್ತು ಬಂದಾಗ ಕತ್ತೆ ಕಾಲು ಕಟ್ಟು’ ಎಂಬ ಹಳೆಯ ಗಾದೆಯಂತೆ, ನಮ್ಮ ಕೆಲಸ ಗಳು ಆಗಬೇಕಾದಾಗ, ಅದಕ್ಕೆ ನೆರವಾಗುವವನು ಶತ್ರುವೋ ದಾಯಾದಿಯೋ ಯಾರಾ ದರೂ ಸರಿ, ಅವನ ಕೈ ಕಾಲು ಕಟ್ಟಿಯಾದರೂ ಕೆಲಸ ಮಾಡಿಸಿಕೊಳ್ಳುವ ಜಾಣರು ಬಳಸುವ ಗಾದೆ ಇದು. ಗ್ರಾಮೀಣ ಪ್ರದೇಗಳಲ್ಲಿ, ಮಳೆ ಸಕಾಲದಲ್ಲಿ ಬರದೆ ಆಕಾಶದ ಕಡೆಗೆ ದಿಟ್ಟಿಸಿ ನೋಡಿ ನಿಟ್ಟುಸಿರಿಟ್ಟ ರೈತರು, ಕತ್ತೆಗಳ ಮದುವೆ ನಡೆಸಿ, ತಮ್ಮ ಪೂರ್ವಜರ ಹಾದಿ ಯಲ್ಲಿ ನಡೆದು ಮಳೆ ಪಡೆಯಲು ಮುಂದಾಗಿದ್ದಾರೆ,
ಚಿಕೋಡಿಯಿಂದ ಬಂದ ಒಂದು ವರದಿಯನುಸಾರ :
ಊರಿನವರೆಲ್ಲಾ ಒಟ್ಟಾಗಿ, ಸಹಸ್ರಾರು ರೂಪಾಯಿ ಖರ್ಚು ಮಾಡಿ ಅಲಂಕೃತ ಕತ್ತೆಗಳಿಗೆ ಮದುವೆ ಮಾಡಿದ ಕೆಲ ದಿನಗಳಲ್ಲೇ ವರುಣ ದೇವ ಹಿಂದೆಂದಿಗಿಂತಾ ಹೆಚ್ಚು ಮಳೆ ಸುರಿಸಿ ರೈತರ ಮುಖದಲ್ಲೆ ನಗೆ ತಂದನAತೆ. (ಆಧಾರ – ಕನ್ನಡ ಪ್ರಭಾ ಬೈ ಕಾಫಿ ಅಂಕಣ 24. 7. 2014) ಈ ಕಾಲದಲ್ಲೂ ಇಂತಹಾ ಮೌಢ್ಯವೇ ಎಂದು ಮೂಗು ಮುರಿಯುವರಿಗೆ ಇಲ್ಲಿದೆ ಒಂದು ಪೌರಾಣಿಕ ಪ್ರಸಂಗ :
ಹಿಂದೊಮ್ಮೆ ಶಿವನ ಮಡದಿಯರಾದ ಪಾರ್ವತಿ-ಗಂಗೆಯ ನಡುವೆ ನಾ ಹೆಚ್ಚು ನಾ ಹೆಚ್ಚು ಎಂಬ ಕಿತ್ತಾಟ ಶುರುವಾಯಿತಂತೆ. ನೀವಿಬ್ಬರೂ ಪರಸ್ಪರರ ಸಹಾಯ ಪಡೆಯದೆ 8 ದಿನಗಳ ಕಾಲ ದೂರ ಇರಿ. ಆನಂತರ ನಾ ತೀರ್ಮಾನ ಹೇಳುವೆ ಎಂದನAತೆ ಶಿವ. ನೀರಿಲ್ಲದೆ ಯಾರಾದರೂ ಬದುಕಲು ಸಾಧ್ಯವೇ ? ಬಾಯಾರಿಕೆಯಿಂದ ಬಳಲಿ ಬೆಂಡಾದ ಪಾರ್ವತಿಯು ಪತಿ ಶಿವನ ನೆರವು ಕೇಳಿದಳಂತೆ. ಗಂಗೆ ಅಡಗಿ ಕುಳಿತಿದ್ದ ತಾಣವನ್ನು ಹುಡುಕುತ್ತಾ ಹೊರಟ ಶಿವನಿಗೆ ಕತ್ತೆಯು ಗಂಗಮ್ಮನಿದ್ದ ಸ್ಥಳ ತೋರಿಸಿತಂತೆ. ಅಂದಿನಿಂದ ಕತ್ತೆಗಳಿಗೆ ತಿಳಿಯುತ್ತೆ ಗಂಗೆಯ ತಾಣ, ಕತ್ತೆಗಳಿಗೆ ಮದುವೆ ಮಾಡಿದರೆ ಕೂಡಲೇ ಮಳೆ ಕಾಣಿಸಿಕೊಳ್ಳುತ್ತೆ ಎಂಬ ನಂಬಿಕೆ ಜನರಲ್ಲಿದೆೆ.
ಕತ್ತೆ ಮದುವೆ ಆಚರಣೆಯಲ್ಲಿ :
ಬಾಲಕ ಬಾಲಕಿಯ ತಲೆಯ ಮೇಲೆ ಹಂಚನ್ನು ಬೋರಲು ಹಾಕಿ ಅದರ ಮೇಲೆ ಸಗಣಿ : ಮಣ್ಣಿನಿಂದ ಮಾಡಿದ ಮೂರ್ತಿ ಇಟ್ಟು, ಅದಕ್ಕೆ ಹುಲ್ಲು : ಗರಿಕೆ ಚುಚ್ಚುತ್ತಾರೆ. “ಗುರ್ಜಿ ಗುರ್ಜಿ ಎಲ್ಲಾಡಿ ಬಂದಿ, ಹಳ್ಳ ಕೊಳ್ಳ ತಿರುಗ್ಯಾಡಿ ಬಂದಿ, ಕಾರ ಮಳೆಯ ಕಪಾಟು, ಮಳೆಯೇ ಬೇಗನೆ ಬಾ, ಸುರಿ ಮಳೆಯೆ” ಎಂದು ಹಾಡುತ್ತಾ ಮನೆ ಮನೆ ತಿರುಗುವ ಗುರ್ಜಿಗಳಿಗೆ, ಆ ಮನೆಗಳವರು ಎತ್ತರದ ಜಾಗ : ಮೇಲೆ ನಿಂತು ನೀರು ಸುರಿಯುತ್ತಾರೆ. ಇದರ ಪರಿಣಾಮವಾಗಿ, ಹಂಚಿನ ಮೇಲೆ ಬಿದ್ದ ನೀರು ಸುತ್ತಲೂ ಮಳೆಯ ಹನಿಯಂತೆ ಚೆಲ್ಲುವುವು. ಇದು ಮಳೆ ಬರುವ ಸೂಚನೆ ಎಂಬುದು ನಂಬಿಕೆ. ಗುರ್ಜಿ ಊರಲ್ಲಿ ಬಂದ ರೇನೇ ಸಾಕು ಊರಿಗೆ ಸಮೃದ್ಧಿ ಎಂದು ನಂಬಿರುವ ಜನ, ಗುರ್ಜಿಗಳಿಗೆ ಧನ, ಧಾನ್ಯ, ಉಡುಪು ಕೊಟ್ಟು ಕಳುಹಿಸುವರು (ಉ ವಾ -166)
ಯಜಮಾನ ತನಗೆ ಯಾವ ಸವಲತ್ತು ಸೌಕರ್ಯವನ್ನೂ ನೀಡದಿದ್ದರೂ, ಚಳಿ ಗಾಳಿ ಬಿಸಿಲೆನ್ನದೆ ಅವನ ಆಜ್ಞೆಯಂತೆ ಸದಾ ಕೆಲಸ ನಿರ್ವಹಿಸುತ್ತಿರುತ್ತದೆ ಕತ್ತೆ.…ಯಜಮಾನನ ಏಟುಗಳಿಗೋ, ಬೀದಿಯ ಪುಂಡರ ಹೊಡೆತದ ಪರಿಣಾಮವಾಗೋ ಮೈ ಮೇಲೆ ಬಾಸುಂಡೆ, ಗಾಯ, ರಕ್ತ ಕಾಣಿಸಿ ಅದು ಬಳಲಿ, ನರಳುತ್ತಿದ್ದರೂ ಅದಕ್ಕೆ ಕೆಲಸದದಿಂದ ವಿಶ್ರಾಂತಿ ಕೊಡದೆ ಅದರ ಕೊನೆಯುಸಿರಿರುವವರೆಗೂ ದುಡಿಸಿಕೊಂಡು, ಸತ್ತ ಮೇಲೆ ಅದನ್ನು ರಸ್ತೆಗೋ ತಿಪ್ಪೆಗೋ ಎಸೆಯುವ ಮನುಷ್ಯ, “ಕೃತಘ್ನ” ಎಂದರೆ ತಪ್ಪಾದೀತೇ ?
ಯಾರೇ ಹೋರಾಡಲಿ, ಏನೇ ಕೂಗಾಡಲಿ, ಅದೆಷ್ಟೇ ಕಷ್ಟದ ಕೆಲದ ಯಜಮಾನ ಕೊಡಲಿ, ಕ್ರೂರಿ, ನಿಷ್ಕರುಣಿಗಳು ವಾಸವಾಗಿರುವ ಈ ಹೃದಯಹೀನರ ಜಗತ್ತಿನಲ್ಲಿ ತಾನು ಬದುಕಲೇ ಬೇಕೆಂಬ ಛಲ ಕತ್ತೆಯದಾಗಿದ್ದು, ಈ ಛಲ ಮನುಷ್ಯನಿಗೆ ನೀತಿ ಪಾಠವಾಗದೆ ? ಕತ್ತೆಗಾಗುತ್ತಿರುವಷ್ಟು ಕಷ್ಟ, ಹಿಂಸೆ, ಅವಹೆಳನ, ಮನಷ್ಯರಿಗೆ ಆಗಿದ್ದರೆ ಅದೆಷ್ಟು ಮಾನವರು ಈ ಹೊತ್ತಿಗೆ ಆತ್ಮಹತ್ಯೆ ಮಾಡಿಕೊಳುತ್ತಿದ್ದರೋ ಎಂಬ ಕಟು ಸತ್ಯವನ್ನು ನಾವು ಊಹಿಸ ಬೇಕು. ತನ್ನ ಪೂರ್ತಿ ಆಯುಸ್ಸನ್ನು ನಿಷ್ಠೆಯಿಂದ ಬೆಳಗಿನಿಂದ ಸಂಜೆಯವರೆಗೂ ಮನು ಷ್ಯರ ಸೇವೆಯಲ್ಲೇ ನಿರತವಾಗುವ ಕತ್ತೆ, ಮೈಗಳ್ಳ, ಕಾಮ್ ಚೋರ್ ಗಳಿಗೆ ಸರಿಯಾದ ಗುರು, ಮಾರ್ಗದರ್ಶನವಾಗಬಲ್ಲದು. (ಪ್ರಜಾವಾಣಿ 2000 ಪುಟ 135) ಯಜಮಾನಿಂದ ಸಿಗುವ ಇಂತಹಾ ಬಹುಮಾನದ ಜೊತೆಗೆ, ಬೀದಿ ಹುಡುಗರ ಕೀಟಲೆ, ಕಲ್ಲೆಸೆತ, ಅದರ ಬಾ¯ಕ್ಕೊಂದು ಡಬ್ಬ ಕಟ್ಟಿ ಪಟಾಕಿ ಹಚ್ಚಿ, ಶಬ್ಧಕ್ಕೆ ಹೆದರಿ ದಿಕ್ಕಾ ಪಾಲಾಗಿ ಓಡಿಸುವ, ಇತ್ಯಾದಿ ಹಿಂಸೆಗಳನ್ನೂ ಅದು ಎದುರಿಸಿದರೂ ತನ್ನನ್ನು ದಂಡಿಸಿವವರಿಗಾಗಿಯೇ ತನ್ನ ದೇಹವನ್ನು ದುಡಿಮೆಯಲ್ಲಿ ಸವೆಸುವ ಈ ನತ ದೃಷ್ಟ ಪ್ರಾಣಿ, ಕತ್ತೆ, ನಿಸ್ವಾರ್ಥ ಜೀವಿ ಎನಿಸಲಾರನೇ ! ? ಕತ್ತೆಯ ಸಹಿಷ್ಣುತೆ, ನಿಷ್ಕಾಮ ಕರ್ಮ, ನಿಷ್ಠೆಯ ಕಷ್ಟದ ಸೇವೆ, ಅದೆಷ್ಟು ಜನರಲ್ಲಿ ಕಾಣಲು ಸಾಧ್ಯ ! ?
ಇದೇ ಸಂದರ್ಭದಲ್ಲಿ “ಕತ್ತೆ ಹಿಂಸಕನಲ್ಲ, ಸತ್ಯವಾದಿ, ಹಾಳುಗೊಡೆಯ ದಿಕ್ಕು ಅದರ ಹಾದಿ, ಕಳವು ಗೊತ್ತಿಲ್ಲ, ಸಂಗ್ರಹವು ಇಲ್ಲಾ, ಮನುಷ್ಯ ಬೇಡವೆಂದು ಬೀದಿಯಲ್ಲಿ ಬಿಸಾಡಿರುವ ಅಪ್ರಯೋಜಕ ಪದಾರ್ಥಗಳನ್ನು ತಿಂದೇ ಅತಿ ದುಭಾರಿ ಬೆಲೆಯ ಹಾಲನ್ನು ಮನುಷ್ಯನಿಗೆ ನೀಡುತ್ತಿದೆ ಎಂದರೆ, ಸ್ವಾರ್ಥಿ ಮನುಷ್ಯನಿಗೆ ಅದೊಂದು ‘ಪರೋಪಕಾ ರಾರ್ಥಂ ಇದಂ ಶರೀರಂ’ ಎಂಬ ತತ್ವವನ್ನು ಪೂರ್ತಿಯಾಗಿ ಮೈಗೂಡಿಸಿಕೊಂಡು, ನಿಷ್ಕಾಮ ಕರ್ಮಯೋಗಿಯಾಗಿ ಜೀವಿಸುತ್ತಿರುವ, ನಿರ್ವಿಕಾರ ಮನಸ್ಸಿನ, ನಿಷ್ಠಾವಂತ ಸೇವಕ ಕತ್ತೆ. ಕತ್ತೆಯ ಜೀವನೋತ್ಸಾಹ, ಹುರುಪು ಹುಮ್ಮಸ್ಸು, ಈಸಬೇಕು ಇದ್ದು ಜೈಸಬೇಕು ಎಂಬ ಛಲ, ಕಷ್ಟ ಹೊಡೆತಗಳನ್ನೂ ಸಹಿಸಿ ಬದುಕುವ ಅದರ ತಾಳ್ಮೆ, ಯಾವ ಉನ್ನತ ವ್ಯಕ್ತಿಯಲ್ಲೂ ಕಾಣಲಾರೆವೇನೋ. ಹಾಸಿಗೆ ದಿಂಬಿನ ಸುಪ್ಪತ್ತಿಗೆ ಅದಕ್ಕೆ ದೊರೆಯ ದಿದ್ದರೂ ಬೂದಿಯಲ್ಲಿ ಹೊರಳಿ ದಾಗ ಅದಕ್ಕೆ ಸಿಗುವ ಆನಂದ, ಸಂತಸ, ಸುಖ, ಸುಖದ ಸುಪ್ಪತಿಗೆಯ ಮೇಲೆ ಮಲಗುವ ಎಷ್ಟೋ ಸಿರಿವಂತರಿಗೂ ಸಿಗಲಾರದು. ಅದಕ್ಕೆ ಖುಷಿಯಾಯಿತೋ, ಯಾರ ಅಪ್ಪಣೆಗೂ ಕಾಯದೆ, ಯಾರ ಇಷ್ಟಾ ಇಷ್ಟಗಳನ್ನೂ ಲೆಕ್ಕಿಸದೆ, ಯಾವ ಹಿಮ್ಮೇಳ ಮುಮ್ಮೇಳಕ್ಕೂ ಕಾಯದೆ ತನ್ನ ಪಾಡಿಗೆ ತಾನು ಕಂಠ ಪೂರ್ತಿಯಾಗಿ, ಓತ ಪ್ರೋತವಾಗಿ ಗಾನ ಸುಧೆಯನ್ನು ಹರಿಸಿ ಮುದಗೊಳ್ಳುವ ಕತ್ತೆ ತನ್ನಷ್ಟು ಸುಖಿಗಳಾರಿದ್ದಾರೆ ಈ ಜಗದಲ್ಲಿ ಎಂದು ಬೀಗಿದಾಗ ನಾವದನ್ನು ಶಪಿಸಬಹುದೇ ! ಪರೋಪಕಾರ ಬುದ್ಧಿ, ನಿಸ್ವಾರ್ಥ ಸೇವಾ ಮನೋಭಾವ, ನಿಷ್ಕಾಮ ಕರ್ಮ, ಕಷ್ಟ ಸಹಿಷ್ಣುತೆ, ತಾಳ್ಮೆ, ಅಲ್ಪ ತೃಪ್ತಿ, ಎಂತಹಾ ಕಠಿಣ ಪರಿಸ್ಥಿತಿಯಲ್ಲೂ ತಾನು ಬದುಕಲೇಬೇಕೆಂಬ ಹಠ, ಛಲ, ಜೀವನೋತ್ಸಾಹ, ತನ್ನ ಬಗ್ಗೆ ಜನರ ಮಾತು, ನಡೆತೆಗೆ ದಿಕ್ಕಾರವಿಟ್ಟು ನಿರ್ಲಕ್ಷಿಸುವ ಬುದ್ಧಿ, ಮುಗ್ಧ ಮನಸ್ಸು ಮೊದಲಾದ ಉದಾತ್ತ ಗುಣಗಳುಳ್ಳ ಗಾರ್ದಭ, ಮನುಷ್ಯನಿಗೆ ಮಾರ್ಗದರ್ಶಕವಾಗಲಾರದೇ ! ? “ವರ್ಣಮಾತ್ರಂ ಕಲಿಸಿದಾತಂ ಗುರು “ ಎಂಬ ನಾಣ್ನಿಡಿಯಂತೆ, ಗಾರ್ದಭ, ಮನುಷ್ಯ ನಿಗೆ ಗುರುವಾಗಲಾರದೇ ! ? ಇದೇ ಗಾರ್ದಭ ರಾಯರ ಮತ್ತಷ್ಟು ವಿಚಾರ ಗಳು ಹೇಳುವುದಿದ್ದರೂ ಓದುಗರ ಅಮುಲ್ಯ ಸಮಯ, ಸಹನೆಗೆ ದಕ್ಕೆ ತರುವ ಸಾಹಸ ಮಾಡದೆ .ಪ್ರಸಕ್ತ ಲೇಖನಕ್ಕೆ ಪೂರ್ಣವಿರಾಮವಿಟ್ಟಿದೆ. .

Comments
Post a Comment