ವ.ಶಿ.ಶಿ.ಯ ಸಮಾರೋಪ ಪ್ರಸಂಗವು

 .ಶಿ.ಶಿ. ಸಮಾರೋಪ ಪ್ರಸಂಗವು

ಹಾಸ್ಯ ಲೇಖನ - ಅಣಕು ರಾಮನಾಥ್



ವಯಸ್ಕರ ಶಿಕ್ಷಣ ಶಿಬಿರದ (.ಶಿ.ಶಿ.) ಸಮಾರೋಪ ಸಮಾರಂಭಕ್ಕೆ ಮುಖ್ಯ ಪರೀಕ್ಷಕನಾಗಿ ಹೋಗಿದ್ದೆ. ವಯಸ್ಕರು ಆವರೆಗೆ ಕಲಿತ ವಿಷಯಗಳ ಬಗ್ಗೆ ಒಂದು ಸ್ಯಾಂಪಲ್ ಸರ್ವೇ ನಡೆಸುವುದು ನನ್ನ ಕೆಲಸವಾಗಿತ್ತು.

ಇವರನ್ನ ಸ್ವಲ್ಪ ಟೇಸ್ಟ್ ಮಾಡಿ ಸಾರ್ಎಂದರು ಮುಖ್ಯ ಸಂಘಟಕರು.

ಟೇಸ್ಟು? ಮಾಂಸವಿರಲಿ, ಮೊಟ್ಟೆ ಹಾಕಿದ ಕೇಕನ್ನೂ ತಿನ್ನದ ನಾನು ಮನುಷ್ಯರನ್ನು ಟೇಸ್ಟ್ ಮಾಡುವುದೆ? ಕ್ಷಮಿಸಿ. ನಾನು ನರಭಕ್ಷಕ ಅಲ್ಲಎಂದೆ.

ಟೇಸ್ಟ್ ಅಂದರೆ ಪರೀಕ್ಷೆ ಸಾರ್ಎಂದವರ ಕಣ್ಣಿನಲ್ಲಿಇಷ್ಟೂ ಗೊತ್ತಿಲ್ಲ ಗಮಾರನಿಗೆಎಂಬ ಭಾವ ಮೂಡಿತ್ತು. ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದ್ದು ಗಾಂಧೀಜಿಯ ಛಲಕ್ಕಿಂತಲೂ ಇಂತಹವರ ಭಾಷಾವಧೆಯ ಕಾರಣದಿಂದಲೇ ಇದ್ದೀತು.

ವಾಕ್ಯ ಎಂದರೇನು?” ಮೊದಲ ಪ್ರಶ್ನೆಯನ್ನು ಎಸೆದೆ.

ಪೂರ್ತಿ ಹೇಳಿ ಸಾರ್ಎಂದನೊಬ್ಬ ಮಧ್ಯವಯಸ್ಸಿಗ.

ವಾಕ್ಯ ಅನ್ನೋದು ಪೂರ್ತಿ ಅಲ್ಲವಾ?”

ವಾ ಕ್ಯಾ ಬಾತ್ ಹೈ ಅನ್ನೋದು ಕಂಪ್ಲೇಂಟ್ ಸೆಂಟೆನ್ಸು ಸಾರ್ತೊದಲ್ನುಡಿದನೊಬ್ಬಮದ್ಯವಯಸ್ಸಿಗ. ಅದುಕಂಪ್ಲೇಂಟ್ಅಲ್ಲ, ಕಂಪ್ಲೀಟ್ ಎಂದು ತಿದ್ದಿದರೆ ನನ್ನ ಮೇಲೇ ಕಂಪ್ಲೇಂಟ್ ನೀಡುತ್ತಿದ್ದನೇನೋ!

ಪ್ಯೂರ್ ಕನ್ನಡದಲ್ಲಿ ಕೇಳಿದರೆ ಯಾವಾನ್ಗರ್ಥವಾಗತ್ತೆ ಸಾರ್! ಕನ್ನಡ ಇಂಗ್ಲಿಷ್ ಮಿಕ್ಸ್ ಮಾಡಿ ಕೇಳಿಎಂದರು ಸಂಘಟಕರು.

ಲೆಕ್ಕವನ್ನೂ ಕೇಳಬಹುದೆ?”

! ಹರ್ತ್‍ಮ್ಯಾಟಿಕ್ಸ್, ಜ್ಯಾಮೆಟ್ರಿ, ಹಾಲ್ ಜೀಬ್ರಾ, ಭಯಾಲಜಿ ಏನ್ಬೇಕಾದ್ರೂ ಕೇಳಿ.”

ಲೆಕ್ಕದಿಂದಲೇ ಆರಂಭಿಸುವುದೆಂದು ನಿರ್ಧರಿಸಿಅಂಕಗಣಿತ ಎಂದರೇನು?” ಎಂದೆ.

ಅಂಗ್ ಕೇಳಿ ನನ್ನೊಡೆಯ. ಕೋಳಿಗಳನ್ನ ಜಗಳ ಆಡೋಕ್ಕೆ ಬುಡ್ತೀವಲ್ಲ, ಜಾಗಾನ ನಾವು ಅಂಕ ಅಮ್ತೀವಿ. ಅಲ್ಲಿ ನಡೆಯೋ ಲೆಕ್ಕಾಸಾರಾನೇ ಅಂಕಗಣಿತಎಂದ ಕೋಳಿಜಗಳದ ಪಂಟರ್.

ಬೀಜಗಣಿತ ಎಂದರೇನು?”

ಸರ್ಕಾರದವರು ಸೀಡ್ಸ್ ಸಪ್ಲೈ ಮಾಡ್ದಾಗ ಕೊಟ್ಟಿದ್ದೇ ಒಂದ್ಲೆಕ್ಕ, ತೊಗೊಂಡಿದ್ದೇ ಒಂದ್ಲೆಕ್ಕ ಇರತ್ತಲ್ಲಾ, ಅದೇ ಬೀಜಗಣಿತಎಂದನೊಬ್ಬ ಕೃಷಿಕ.

ರೇಖಾಗಣಿತ ಎಂದರೇನು?”

ಅದು ಹಳೇ ಲೆಕ್ಕ ಸಾರ್. ರೇಖಾ ಓಲ್ಡ್ ಮಾಡಲ್ಲು. ಈಗ ಏನಿದ್ರೂ ಆಲಿಯಾ ಭಟ್, ದೀಪಿಕಾ ಪಡುಕೋಣೆ ಇವರುಗಳದೇ ಲೆಕ್ಕಾಚಾರಎಂದನೊಬ್ಬ ಪಡ್ಡೆಮನದ ವಯಸ್ಕ.

 ಮೂಲ ವ್ಯಾಖ್ಯಾನಗಳಿಂದ ಕೊಂಚ ಆಳಕ್ಕಿಳಿಯಲು ನಿರ್ಧರಿಸಿವರ್ಗ ಎಂದರೇನು?” ಎಂದೆ. ‘ಸಂಖ್ಯೆಯೊಂದನ್ನು ಅದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತವೇ ವರ್ಗಎನ್ನುವುದು ಸರಿಯುತ್ತರ.

ಎಲವೋ ಅಂದರೆ ಸಿಗೋದೇ ವರ್ಗ ಸಾರ್ಎಂದ ಮಲ್ಲಿಕಾರ್ಜುನ.

ಅದು ಹೇಗೆ?”

ಸರ್ಕಾರದ ರೀತಿಯೇ ಹಾಗಿದೆ ಸಾರ್. ನಾವು ನಮ್ಮ ಬಾಸ್‍ಗಳಿಗೆ ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ವರ್ಗಎಂದುತ್ತರಿಸಿದನಾತ. ಪ್ರೊಫೆಸರ್ ಮಿತ್ರರು ತಮ್ಮ ಲೇಖನದಲ್ಲಿ ಬರೆದುದು ಇವನಿಗೆ ಹೇಗೆ ತಿಳಿಯಿತೆಂದು ಅಚ್ಚರಿ ಪಡುತ್ತಲೇ, “ವರ್ಗಮೂಲ ಎಂದರೆ?” ಎಂದೆ.

ಮೂಲ ಅಂದರೆ ಬಂಡವಾಳ ಸಾರ್. ಟ್ರಾನ್ಸ್‍ಫರ್ ಆಗಕ್ಕೆ ಅಥವಾ ಆಗದೇಯಿರಕ್ಕೆ ಹೂಡುವ ಬಂಡವಾಳವೇ ವರ್ಗಮೂಲಎಂದ ತಿಮ್ಮಸೆಟ್ಟಿ.

ವರ್ಗ ಎಂದರೆ ಸ್ಕ್ವೇರ್. ವರ್ಗಮೂಲ ಎಂದರೆ ಸ್ಕ್ವೇರ್ ರೂಟ್. ಈಗ ಹೇಳಿ, ಎರಡರ ಘಾತ ಎಷ್ಟು?” ಕೊಂಚ ಗರಮ್ಮಾಗಿಯೇ ಕೇಳಿದೆ.

ಸೈಕಲ್ಲೋ, ಕಾರೋ, ಲಾರೀನೋ ಸಾರ್?” ಎಂದನೊಬ್ಬ ಆಟೋ ಡ್ರೈವರ್.

ನಿನ್ನ ಪ್ರಶ್ನೆ ನನಗೆ ಅರ್ಥವಾಗಲಿಲ್ಲಎಂದೆ. ರಸ್ತೆಯ ಹೊಂಡಕ್ಕೆ ರಿಕ್ಷಾ ಕುಕ್ಕಿದಾಗ ಮೃದುಮೂಳೆಯ ಪ್ಯಾಸೆಂಜರ್ ಅರಚಿದಾಗ ಅವನತ್ತ ಬೀರುವಏನ್ಮನ್ಸಾನಯ್ಯ ನೀನುಎನ್ನುವ ಭಾವವನ್ನು ಸೂಸುವ ದೃಷ್ಟಿಯನ್ನು ನನ್ನತ್ತ ಬೀರುತ್ತಾಘಾತ ಅಂದರೆ ಆಕ್ಸಿಡೆಂಟ್ ಸಾರ್... ಅದು ಅಪಘಾತ ಅನ್ನೋದರ ಷಾರ್ಟ್ ಫಾರ್ಮ್. ಎರಡದ ಘಾತ ಅಂದರೆ ಎರಡು ವಾಹನಗಳ ಅಪಘಾತ ಅಂತ ಅರ್ಥ. ಎರಡು ಸೈಕಲ್ಲಿನ ಘಾತಕ್ಕೆ ಮೂಳೆ ಮುರಿತ; ಎರಡು ಕಾರಿನ ಘಾತಕ್ಕೆ ಎರ್ಡೋ ಮೂರೋ ಸಾವು; ಎರಡು ಲಾರಿಗಳದಾದರೆ ಹತ್ತೋ ಹನ್ನೆರಡೋ ಸಾವು. ಎರಡು ರೈಲಿನ ಘಾತದ್ದಾದರೆ...”

ತಿಳಿಯಿತು. ನೀವು ಕುಳಿತುಕೊಳ್ಳಿಎಂದು ಅವನಡೆತ್ ಲಿಸ್ಟ್ಅನ್ನು ಅರ್ಧಕ್ಕೇ ತುಂಡರಿಸಿ, ತರಗತಿಯನ್ನುದ್ದೇಶಿಸಿಲಂಬಕೋನ ಎಂದರೇನು?” ಎಂದೆ.

ನನಗೆ ಗೊತ್ತು ಸಾರ್. ರೈಟ್ ಆಂಗಲ್ಎಂದನೊಬ್ಬ. ಒಬ್ಬನಾದರೂ ಸರಿಯುತ್ತರ ನೀಡಿದನಲ್ಲ ಎಂಬ ಸಂತೋಷದಿಂದಯೂ ಆರ್ ರೈಟ್. ರೈಟ್ ಆಂಗಲ್ ಎಂದರೆ ಏನು?” ಎಂದೆ.

ಲೆಫ್ಟಿಸ್ಟುಗಳು ಹೇಳಿದ್ದನ್ನೆಲ್ಲ ಮೈಲಿಗೆ ಎನ್ನುತ್ತಾ ಧರ್ಮ, ಆಚರಣೆಗಳ ಬಗ್ಗೆ ಭಾಷಣ ಮಾಡುವ ರೈಟಿಸ್ಟುಗಳ ದೃಷ್ಟಿಕೋನವನ್ನು ರೈಟ್ ಆಂಗಲ್ ಅಂತ ಕರೀತಾರೆ ಸಾರ್ಎಂದನವ.

ಕೋನದ ಬಗ್ಗೆ ಕೋಣನು ಇತ್ತ ಉತ್ತರದಿಂದ ತತ್ತರಿಸಿ ಕೋನವೇ ಇಲ್ಲದ ಆಕಾರವೊಂದರ ಬಗ್ಗೆ ಪ್ರಶ್ನಿಸುವುದೆಂದು ನಿರ್ಧರಿಸಿವಾಟ್ ಈಸ್ ಸರ್ಕಲ್?” ಎಂದೆ. ಯಾರೆಂದರೆ ಯಾರೂ ಉತ್ತರಿಸಲಿಲ್ಲ. ಕಡೆಗೆ ಅಧ್ಯಾಪಕರೊಬ್ಬರೆದ್ದುಯಾವ ಸರ್ಕಲ್ ಸರ್?” ಎಂದರು.

ಅಂದರೆ?”

ವಿದ್ವಾಂಸರು ಸೇರೋದು ಸ್ಟಡಿ ಸರ್ಕಲ್. ನಮ್ಮವರೇ ಸೇರೋದು ರಿಲೇಟಿವ್ಸ್ ಸರ್ಕಲ್. ಗೆಳೆಯರು ಸೇರೋದು ಫ್ರೆಂಡ್ಸ್ ಸರ್ಕಲ್. ನೀವು ಕೇಳ್ತಿರೋದು ಯಾವ ಸರ್ಕಲ್ ಬಗ್ಗೆ ಸಾರ್?” ಕೊಶ್ಚೆನ್ ಮಾರ್ಕಿನಂತೆ ನಿಂತರು ಮೇಷ್ಟ್ರು.

ಇವಲ್ಲ ರೀ; ವೃತ್ತ ಎಂದರೇನು?” ಕನ್ನಡ ಪದದ ಮೊರೆ ಹೊಕ್ಕೆ.

ವಯಸ್ಕರಲ್ಲೇ ವಯಸ್ಸಾದವರೊಬ್ಬರು ಎದ್ದುನಿಂತುನಾನು ಹೇಳ್ಲೇ ಸಾರ್?” ಎಂದರು. ತಲೆಯಾಡಿಸಿದೆ.

ಯಾವುದೇ ವಸ್ತುವಿನಿಂದ ಸುತ್ತುವರಿದದ್ದು ಸರ್ಎಂದರಾತ.

ಕೊಂಚ ವಿವರಿಸಿ.”

ಈಗಷ್ಟೇ ರಾಯರ ಆರಾಧನೆ ಮುಗಿಯಿತಲ್ಲ ಸರ್. ಆಗ ಅವರು ಕೊಟ್ಟ ಪಂಚಾಮೃತದಲ್ಲಿ ಬಾಳೆಹಣ್ಣಿನ ಹೋಳುಗಳು ಹಾಲಿನಿಂದ ಸುತ್ತುವರಿದಿದ್ದವು. ಅದೇ ಕ್ಷೀರಾವೃತ್ತ. ಮೊನ್ನೆ ಹೊಯ್ದ ಮಳೆಗೆ ಮನೆಗಳ ಸುತ್ತಲೂ ನೀರು ತುಂಬಿತ್ತು. ಅಂತಹ ಮನೆಗಳು ಜಲಾವೃತ್ತಎಂದರಾತ. ವೃತಕ್ಕೂ ವೃತ್ತಕ್ಕೂ ಇರುವ ವ್ಯತ್ಯಾಸವನ್ನು ತಿಳಿಸೋಣವೆಂದರೆ ಅದು ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲದ ಸಭೆ.

ತ್ರಿಜ್ಯ ಎಂದರೇನು?” ರೇಡಿಯಸ್ ಬಗ್ಗೆಯಾದರೂ ತಿಳಿದಿರಬಹುದೆಂಬ ಆಶಯದಿಂದ ಪ್ರಶ್ನಿಸಿದೆ.

ಮೂರುಜ್ಯಗಳು ಸಾರ್ಆಜ್ಯ, ತ್ಯಾಜ್ಯ, ವ್ಯಾಜ್ಯ!” ಸಮಯ ಕಳೆಯಲೆಂದೇ ಶಾಲೆಗೆ ಸೇರಿದ ರಂಗಭಟ್ಟರು ಹೇಳಿದರು.

ಬ್ರಾಕೆಟ್ಟುಗಳ ಬಗ್ಗೆಯಾದರೂ ಕೇಳೋಣವೆನಿಸಿಕಂಸ ಎಂದರೇನು?’ ಎಂದೆ.

ಕಂಸಾಳೆ ಪದದ ಸಾಲುಗಳು ಇರಬಹುದಾ ಸಾರ್?” ಪ್ರಶ್ನೆಗೆ ಪ್ರಶ್ನೆಯನ್ನೆಸೆದನೊಬ್ಬ.

ಎಂಟನೆಯ ಮಗನಿಂದ ತನಗೆ ತೊಂದರೆ ಇದ್ದರೂ ತಂಗಿಗೋ ತಂಗಿಯ ಗಂಡನಿಗೋ ಆಪರೇಷನ್ ಮಾಡಿಸ್ಬೇಕೂಂತ ತೋಚದಿದ್ದ ಶತದಡ್ಡನೇ ಕಂಸ ಸಾರ್ಎಂದನೊಬ್ಬ. ಬ್ರಾಕೆಟ್ಟಿನ ಪ್ರಶ್ನೆಯೂ ಉತ್ತರ ಸಿಗದೆ ನೆಗೆದುಬಿತ್ತು.

ಅಂಕಗಣಿತದ ವರ್ಗ ಅರ್ಥಾತ್ ಸ್ಕ್ವೇರ್ ಅಂತೂ ನಿಮಗೆ ತಿಳಿದಿಲ್ಲ. ರೇಖಾಗಣಿತದಲ್ಲಿ ಬರುವ ಸ್ಕ್ವೇರ್ ಬಗ್ಗೆ ಯಾರಾದರೂ ಹೇಳುತ್ತೀರಾ?”

ನಾನ್ಹೇಳ್ತೀನಿ ಸಾರ್. ಸ್ಕ್ವೇರ್ ಅಂದ್ರೆ ಸಿಗ್ನಲ್ ಲೈಟ್ ಇರೋ ಜಾಗ. ಬೆಂಗಳೂರಲ್ಲಿ ಎರಡು ಫೇಮಸ್ ಸ್ಕ್ವೇರ್‍ಗಳಿವೆಒಂದು ಬಸವನಗುಡಿಯ ರಾಮಕೃಷ್ಣ ಸ್ಕ್ವೇರ್, ಇನ್ನೊಂದು ಚಾಮರಾಜಪೇಟೆಯ ಹತ್ತಿರವಿರುವ ಬ್ರಿಯಾಂಡ್ ಸ್ಕ್ವೇರ್ಉತ್ಸಾಹದಿಂದುಲಿದ ಆಟೋ ಡ್ರೈವರ್.

ಸರಳರೇಖೆ ಎಂದರೇನು?” ಮುಂದಿನ ಪ್ರಶ್ನೆಗೆ ಹಾರಿದೆ.

ಬಿಲ್ಡಿಂಗ್ ಕಟ್ಟೋವಾಗ ಕಂಬಿ ಕಟ್ಟೋವ್ರು ಕಂಬಿ ಕಟ್ ಮಾಡಕ್ಕೇಂತ ಮಾಡ್ಕೊಳೋ ಮಾರ್ಕ್ ಸಾರ್ಎಂದನೊಬ್ಬ ಬಾರ್ ಬೆಂಡರ್.

ಅದು ಹೇಗೆ?”

ಸರಳು ಅಂದರೆ ಕಂಬಿ ಸಾರ್. ಸರಳಜೀವಿ ಅಂದರೆ ಕಂಬಿಗಳ ಹಿಂದೆ ಜೀವನ ನಡೆಸೋ ಕ್ರಿಮಿನಲ್ಲು ಅಂತ ಅಲ್ವಾ ಸಾರ್? ಕಂಬಿಗಳ ಮೇಲೆ ಹಾಕೋ ಲೈನ್ ಅಥವಾ ಮಾರ್ಕೇ ಸರಳರೇಖೆ ಸಾರ್ಎಂದನವ. ಬದುಕು ಕಲಿಸಿಕೊಡುವ ಪಾಠವನ್ನು ಪುಸ್ತಕ ಕಲಿಸಿಕೊಟ್ಟೀತೆ?

 

 

Comments

  1. ವಯಸ್ಕರಿಗೆ ಸಾಮಾನ್ಯ ಜ್ಞಾನ ಇಲ್ಲದಿದ್ದರೂ, ಸೃಜನಶೀಲತೆ ಬೇಕಾದಷ್ಟಿದೆ ಅಲ್ಲವೇ?

    ReplyDelete

Post a Comment