ಮನ ಮರ್ಕಟದೊಡನೆ ಆಟ....

ಮನ ಮರ್ಕಟದೊಡನೆ ಆಟ ಅದೆಷ್ಟು ಸುರಕ್ಷಿತ?

ಲೇಖನ - ರೂಪಾ ಮಹೇಶ್ 



ನಾವು ನಮ್ಮೊಂದಿಗೇ ನಮ್ಮೊಳಗೇ ದೇಹ-ಮನಗಳ ಮದ್ಯೆ ಬೇಧ ಭಾವ ಮಾಡುತ್ತಿದ್ದೇವೆಯೇ?

ಅರೇ , ಅದು ಹೇಗೆ ಸಾಧ್ಯ ಎಂದೆನ್ನಿಸಿತೇ?

ವಿಚಾರ ಮಾಡಬೇಕಾದ ವಿಷಯ (Food For thought)

ಎಂದಾದರೊಮ್ಮೆ ಪ್ರಯತ್ನಿಸಿದ್ದೀರಾ ಒಂದರ ಹಿಂದೊಂದೆಂಬಂತೆ ವೈವಿಧ್ಯಮಯ ದೈಹೀಕ ಚಟುವಟಿಕೆ , ಉಗ್ರ ಕ್ರೀಡೆಗಳನ್ನು ವಿರಾಮ ರಹಿತವಾಗಿ ಮ್ಯಾರಥಾನ್ ರೀತಿಯಲ್ಲಿ ಮಾಡಲು?

ಇದೇನು ಹುಂಬತನ? ಇದ್ಯಾವ ಬಾಲಿಷ ಪ್ರಶ್ನೆ? ದೇಹಕ್ಕೆ ಆಯಾಸವಾಗುವುದಿಲ್ಲವೇ? ದೇಹಕ್ಕೆ ವಿಶ್ರಾಮ ಬೇಕಲ್ಲವೇ? ಅಂದಿರಾ?

ಸಮಂಜಸ ಪ್ರಶ್ನೆಯೇ! .

ನೋವು ಅನುಭವಕ್ಕೆ ತಕ್ಷಣವಾಗಿ, ದೇಹಕ್ಕೆ ತೀಕ್ಷ್ಣವಾಗಿ ಕಾಣುವ ಕಾರಣದಿಂದ ಭೌತಿಕ ದೇಹಕ್ಕೆ ದಂಡನೆ ಕೊಡುವಲ್ಲಿ ಅಷ್ಟು ಅಲೋಚನೆ, ಮನಸ್ಸಿನ ಬಗ್ಗೆ ಯಾಕಿಲ್ಲಾ ಈ ವಿವಚನೆ?

ಇದು ನಾವು ನಮ್ಮೊಳಗೇ ನಮ್ಮಲ್ಲೇ ತೋರುತ್ತಿರುವ ತಾರತಮ್ಯವಲ್ಲದೇ ಮತ್ತೀನ್ನೇನು?

ಮನವೊಂದು ಮರ್ಕಟವೇ ಸರಿ.

ಒಂದು ಘಳಿಗೆ ಆಲೋಚನೆ ಒಂದೆಡೆ ಇದ್ದರೆ  , ಮರುಘಳಿಗೆಯೇ ಹಾರುತ್ತೆ ನಾಗಾಲೋಟದಲ್ಲಿ ಮತ್ತೊಂದೆಡೆ, ಮಗದೊಂದೆಡೆ.

ಬಹುಕಾರ್ಯಕ ಪ್ರವೀಣ ಈ ಮನ ಮರ್ಕಟ!

ಹೆಚ್ಚಾಗಿ ಈ ಅಲೋಚನೆಗಳು ಓಡುವುದೂ ನಕಾರಾತ್ಮಕದೆಡೆ.

ಮನಸ್ಸಿಗೆ ಇಷ್ಟೊಂದು ಕಸರತ್ತು ಕೊಡುವುದರಿಂದ ಆಗುವ ಬಾಧೆ, ಮೇಲೆ ವಿವರಿಸಿದ ದೈಹಿಕ ಶ್ರಮಕ್ಕಿಂತೇನು ಕಡಿಮೆ? ಮಾನಸಿಕ ಒತ್ತಡದಿಂದಾಗುವ ಪರಿಣಾಮ, ದೇಹದಲ್ಲಿ  ನಿಧಾನವಾಗಿ ಹರಡುವ ನಂಜು.

ಭೌತಿಕ ದೇಹದ ಮೇಲೆ ಕರುಣೆ, ಮಾನಸಿಕ ದೇಹದ ಮೇಲೇಕೆ ಶೋಷಣೆ?

ಭೌತಿಕ ದೇಹಕ್ಕೆ ಕೊಡುತ್ತೇವೆ ಆರಾಮ. ಬೇಕಲ್ಲವೆ ಹಾಗೆಯೇ ಮನಸ್ಸಿಗೂ ವಿರಾಮ?

ಹೌದು, ಇದು ಸರಿಯೆಂದೇನೋ ಅನ್ನಿಸುತ್ತಿದೆ, ಆದರೆ ಆಚರಣೆಗೆ ತರುವುದು ಹೇಗೆ, ಎಂಬುದೊಂದು ಸಮಸ್ಯೆ.

ಇದಕ್ಕಿದೆ ಸರಳ ಪರಿಹಾರ.

ಒಳ್ಳೆ ಹವ್ಯಾಸಗಳನ್ನು ಅಳವಡಿಸಿಕೊಂಡು, ಅದರಲ್ಲಿ ಆಸಕ್ತಿಯಿಂದ ಹೆಚ್ಚಿನ ಸಮಯ ಕಳಿದರೆ ಮನಸ್ಸಿನ ಚೆಲ್ಲಟಾ ಹತೋಟಿಗೆ ಬರುವುದು ಖಚಿತ.

ಅತ್ಯುನ್ನತ ಹವ್ಯಾಸ ಬೆಳೆಸಿಕೊಳ್ಳಲು ಹತ್ತು ಹಲವು ಮಾರ್ಗ - ಓದುವುದರಲ್ಲೋ, ಬರಹದಲ್ಲೋ, ಯೋಗ-ಧ್ಯಾನಾಭ್ಯಾಸದಲ್ಲೋ, ಸಮಾಜ ಸೇವೆಯಲ್ಲೋ ,ಸಂಗೀತ, ವಾದ್ಯ, ಸಾಹಿತ್ಯದಲ್ಲೋ, ಪಾಕಶಾಸ್ತ್ರದಲ್ಲೋ, ತಕ್ಕುಮೆಯಲ್ಲೋ ಧೃಡಾಸಕ್ತಿ ಬೆಳೆಸಿ ,

ಉಪಯೋಗಿಸಿ ಈ ಹವ್ಯಾಸಗಳ ಉಪಕರಣ ,

ಹಾಕಬಹುದಲ್ಲವೇ ಮನ ಮರ್ಕಟದ ಚಂಚಲಾಟಕ್ಕೆ ಖಡಿವಾಣ ?

Comments

  1. ಒಳ್ಳೆಯ ಸಲಹೆಗಳು! ಮನವೆಂಬ ಮರ್ಕಟವನ್ನು ಹಿಡಿದಿಡುವುದು ಸುಲಭವೇನಲ್ಲ,ನಿರಂತರ ಅಭ್ಯಾಸ ಬೇಕು.

    ReplyDelete

Post a Comment