ದುಡಿಯೋ ಶಕ್ತಿ ಇರೋವರೆಗೂ ಎತ್ತು ಬಸವಣ್ಣ, ದೇವರು, ಪೂಜಾರ್ಹ, ಶಕ್ತಿ ಹೀನವಾದರೆ . . . ?
ಲೇಖಕರು : ಎಂ ಆರ್ ವೆಂಕಟರಾಮಯ್ಯ
ಇದೇನು ! ಎತ್ತಿನ ಬಗ್ಗೆ ಲೇಖನವೇ ! ಎತ್ತಿನ ಬಗ್ಗೆ ಬರೆಯಲೇನಿದೆ ಅಂತಹಾ ಪ್ರಮುಖ ವಿಷಯಗಳು ಎಂದಿರಾ ? ‘ಏ, ಪಾಪ, ಅವನು ಮೂಗೆತ್ತಿನಂತೆ ಮಾತನಾಡದೆ ದುಡೀತಾನೆ’ ಎಂಬ ಗ್ರಾಮೀಣ ಜನರ ನುಡಿಗಟ್ಟನ್ನು ಕೇಳೀಲ್ಲವೇ ? ಹೀಗಿರುವಾಗ ಎತ್ತಿಗೂ ಮನುಷ್ಯನಿಗೂ ಸಾಮ್ಯತೆ ಇಲ್ಲ ಎನ್ನಲಾದೀತೇ ? ಮನುಷ್ಯನ ನಾನಾ ವಿಧದ ಮುಖಗಳ ವರ್ತನೆಯನ್ನು ಚಿತ್ರಿಸುವುದಕ್ಕೆ ಎತ್ತು ಲೇಖನದ ವಸ್ತು ಆಗಬಾರದೇಕೇ !
ಕೆಲಸ ಅದೆಷ್ಟೇ ಕಷ್ಟದ್ದಿರಲಿ, ಎಷ್ಟು ಭಾರವೇ ಎಳೆಯುತ್ತಿದ್ದರೂ ಸವಾರ ಚಾಟಿ ಏಟು ಕೊಟ್ಟಾಗ ನೀ ಏಕೆ ನನ್ನ ಹೊಡೆದೆ ಎಂದು ಎತ್ತು ಮನುಷ್ಯರಂತೆ ತಿರುಗಿಬೀಳುವುದಿಲ್ಲ (ರೇಗುವುದಿಲ್ಲ ಎಂಬ ಅರ್ಥದಲ್ಲಿ) ನೋವಿಗೆ ಅಳುವುದಿಲ್ಲ, ಕೋಪದಿಂದ ಅರಚುವುದಿಲ್ಲ, ಇದೆಲ್ಲಾ ಎನೇ ನಡೆದಿದ್ದರೂ ಯಜಮಾನ ಒಮ್ಮೆ ಎತ್ತಿನ ಬೆನ್ನು ಸವರಿದರೆ ಸಾಕು, ಅದುವರೆಗೂ ನಡೆದದ್ದನ್ನೆಲ್ಲಾ ಮರೆತು ಬಾಲ ಅಲ್ಲಾಡಿಸಿ ತನ್ನ ಸಂತಸ ಸೂಚಿಸುತ್ತದೆ. ಯಜಮಾನನಿಗೆ. ಇದು ಎತ್ತಿನ ಅಮಾಯಕ ಗುಣ.
ಇದು ನಮ್ಮ ಎತ್ತು, ಬಸವಣ್ಣ ದೇವರು ಪೂಜಾರ್ಹ ಅಂತಾ ವಾರಕೊಮ್ಮೆ (ಬಹಳಷ್ಟು ಜನ ಸೋಮ ವಾರಗಳಂದು) ಇದಕ್ಕೆ ಅರಿಶಿನ ಕುಂಕುಮ ಹೂವಿಟ್ಟು ಪೂಜಿಸ್ತಾರೆ. ಗ್ರಾಮೀಣ ಭಾಗದಲ್ಲಿ. ಈವತ್ತು ಇದಕ್ಕೆ ರೆಸ್ಟ್, ಕೆಲಸ ಮಾಡಿಸೋಹಾಗಿಲ್ಲ ಅಂತಾನೆ ಯಜಮಾನ. ಈ ಆದರ, ಉಪಚಾರ ವೆಲ್ಲಾ ಎಷ್ಟು ಕಾಲ ನಡೆಯುತ್ತದೆ ! ಇದೇ ಎತ್ತು ಮುದಿಯಾಗಿ ದುಡಿಯೋ ಶಕ್ತಿ ಕಳಕೊಳ್ಳೋವರೆಗೆಷ್ಟೇ. ಶಕ್ತಿಹೀನವಾಗಿ ಇದು ದುಡಿಯಲಾರದಾಗ ….? …ಇದರಿಂದ ನನಗೇನೂ ಉಪಯೋಗವಾಗ್ತಿಲ್ಲ. ಇದು ಕೆಲಸಕ್ಕೆ ಬಾರದ್ದಾಗಿದೆ, ಇದಕ್ಕೆ ನಾ ಹುಲ್ಲು ನೀರು ಕೊಟ್ಟು ಉಪಚರಿಸೋದು ವ್ಯರ್ಥ. ಅಂತಾ ಇದನ್ನು ಕಸಾಯಿಖಾನೆಗೆ ಸುಮ್ಮನೆ ಅಟ್ಟೋದಿಲ್ಲ. ಇದನ್ನು ಮಾರಿ ಹಣ ಪಡೀತಾರೆ. ಹೊಸ ಎತ್ತನ್ನು ಕೊಂಡು ತಂದು ಇದಕ್ಕೆ ಮಾಲಿಶ್ ಮಾಡಿ ಉಪಚರಿಸ್ತಾÀನೆ ಯಜಮಾನ, ಈ ಮನಃಸ್ಥಿತಿ ಉಳ್ಳವನನ್ನು ಮನುಷ್ಯನೆನ್ನೋಣವೇ ! ಇವನು ಕೃತಜ್ಞನೋ ! ಕೃತಘ್ನನೋ ?
ಇಂತಹುದೇ ಕಾರ್ಯತಂತ್ರ, ನೀತಿಯನ್ನು ತಾಯಿಯ ಬಗ್ಗೆ ಮಗ ಅನುಸರಿಸಿದರೆ . .. ! ಎಂದಾಗ ಏ, ಯಾರಾದರೂ ಹೀಗ್ ಮಾಡ್ತಾರೇನ್ರೀ ಹೆತ್ತ ಅಮ್ಮನ್ನ ಅನ್ನೋ ಸಂಶಯ ನಿಮ್ಮದೇ ! ಇಲ್ಲಿರುವ ಒಂದು ನೈಜ ಪ್ರಸಂಗವನ್ನು ಓದಿದ ಮೇಲೆ ನಿಮಗೇ ಅನ್ನಿಸುತ್ತೆ
ಟ್ರುತ್ ಈಸ್ ಸ್ತೆçÃಂಜರ್ ದ್ಯಾನ್ ಫಿಕ್ಷನ್, ಇದೊಂದ್ ಕೆಟ್ಟ ಪ್ರಪಂಚ ಅಂತಾ.
“ಮಕ್ಕಳಾದರೆ ಕೇಡೇ ಮಳೆ ಬಂದರೆ ಕೇಡೇ! ! ತಿನ್ನೋ ಕೈ ಒಂದಾದರೆ ದುಡಿಯೋದಕ್ಕೆ ಭಗವಂತ ಎರಡು ಕೈಗಳನ್ನು ಕೊಟ್ಟಿದ್ದಾನಲ್ಲಾ” ಎಂ¨ ಸಮಾಧಾನ ಹೊಂದಿದ್ದ ಈ ದಂಪತಿ ಗಳಿಗೆ ಬಹು ಸಂತಾನ, ಒಂದಷ್ಟು ಹೆಣ್ಣು, ಗಂಡು ಮಕ್ಕಳು ಜನಿಸಿದ್ದುವು. ಯಜಮಾನನು ಸರ್ಕಾರದ ಸ್ವಾಮ್ಯದ ಸಂಸ್ಥೆಯಲ್ಲಿ ಉದ್ಯೋಗ. ಮಧ್ಯಮ ವರ್ಗದ ಕುಟುಂಬವಿದು. ಒಂದೆಡರಡು ಹೆಣ್ಣು ಮಕ್ಕಳಿಗೆ ಮದುವೆ ಮುಗಿಸುವ ವೇಳೆಗೆ ಯಜಮಾನ ವಾಸಿಯಾಗದ ರೋಗಕ್ಕೆ ಸಿಕ್ಕಿ ಮಧ್ಯ ವಯಸ್ಸಿನಲ್ಲೇ ಮರಣ ಹೊಂದಿದನು. ಈತನ ಪತ್ನಿ ಅವಿದ್ಯಾವಂತೆಯಾದರೂ ಬುದ್ದಿವಂತಿಕೆಯಿAದ ಪತಿಯ ಪಿಂಚಣಿ ಹಣದಿಂದಲೇ ಎಲ್ಲರ ಹೊಟ್ಟೆ ತುಂಬಿಸಲಾರAಭಿಸಿದಳು. ಜೊತೆಗೆ ಪತಿಯ ನಿಧನದ ಕಾರಣ ಅನುಕಂಪದ ಆಧಾರದ ಮೇಲೆ ತನ್ನ ಮಗನಿಗೊಂದು ಕೆಲಸ ಕೊಡುವಂತೆ ಸಂಸ್ಥೆಯಲ್ಲಿನ ಅಧಿಕಾರಿಗಳ ಕೈ ಕಾಲು ಕಟ್ಟಿದ ಪರಿಣಾಮವಾಗಿ ಮಗನಿಗೆ ಕೆಲಸ ದೊರಕಿತು. ಈಗ ಈ ತಾಯಿ ಸ್ವಲ್ಪ ಸಮಾಧಾನದ ನಿಟ್ಟುಸಿರು ಬಿಟ್ಟಳು,
ನಂತರದ ವರ್ಷಗಳಲ್ಲಿ ತಾಯಿ ತನ್ನಿತರ ಬಂಧುಗಳ ನೆರವಿನಿಂದ ಉಳಿದ ಹೆಣ್ಣು ಮಕ್ಕಳ ವಿವಾಹವನ್ನೂ ಮುಗಿಸಿದಳು. ಈಗ ಈ ಕುಟಂಬದಲ್ಲಿ ತಾಯಿ ಮಗ ಇಬ್ಬರೇ, ಸರ್ಕಾರಿ ಉದ್ಯೋಗವಿದ್ದ ಈ ಮಗನಿಗೆ ಹೆಣ್ಣೂ ದೊರಕಿ ವಿವಾಹ ಮುಗಿಯಿತು, ಮನೆಗೆ ಬಂದ ಸೊಸೆ ವಿದ್ಯಾವಂತಳಾಗಿ ಕೆಲಸದಲ್ಲಿದ್ದ ಕಾರಣ ಗಂಡ ಹೆಂಡತಿಯ ಇಬ್ಬರ ಸಂ ಪಾದನೆ, ಜೊತೆಗೆ ಅಮ್ಮನ ಬಳಿಯಿದ್ದ ಪಿಂಚಣಿ ಹಣ, ಹೀಗೆ ಎಲ್ಲಾ ಸೇರಿದರೆ ಸಂಸಾರ ನಡೆಸಲು ಕಷ್ಟವೇನಿದೇ ? ಎಲ್ಲವನ್ನೂ ಸುಗಮವಾಗೇ ನಡೆಸಿ ಪ್ರತಿ ತಿಂಗಳೂ ಹಣವನ್ನೂ ಉಳಿತಾಯ ಮಾಡಿಕೊಂಡರು ಈ ಮಗ ಸೊಸೆ. ಈ ಮಧ್ಯೆ ಇವರಿಗೆ ಪುತ್ರನೂ ಜನಿಸಿತ್ತು. ಪತಿ ಪತ್ನಿ ಕೆಲ¸ಕ್ಕೆ ಹೊರಟರೆ ಸಣ್ಣ ಮಗುವನ್ನು ನೋಡಿಕೊಳ್ಳುವ ಹೊu ಯಾರದ್ದು ? ಎಂಬ ಪ್ರಶ್ನೆ ಗಂಡ ಹೆಂಡಿರ ನಡುವೆ ಚರ್ಚೆಗೆ ಗ್ರಾಸವಾಯಿತು. ನಿಮ್ ಅಮ್ಮ ಒಬ್ಬರೇ ಮಗನ ಮನೆಯಲ್ಲಿದ್ದಾರಲ್ಲಾ ಅವರನ್ನ ನಮ್ಮ ಮನೆಗೆ ಕರೆಸಿಕೋ, ನಮ್ಮ ಮಗುವನ್ನು ನೋಡಿಕೊಳ್ಳಲಿ, ಅವರಿಗೂ ನಮ್ಮೀ ಮಗು ಮೊಮ್ಮಗನಲ್ಲವೇ ! ಎಂದ ಪತಿರಾಯ ಏ, ಆಗೊಲ್ಲಪ್ಪಾ, ಅಮ್ಮನ್ನ ಅಣ್ಣ ಇಲ್ಲಿಗೆ ಕಳಿಸೊಲ್ಲ. ಕಳಿಸಿದರೆ ಅವನ ಮಗುವನ್ನು ನೋಡಿಕೊಳ್ಳುವವರು ಯಾರು ಎಂಬ ಮರು ಪ್ರಶ್ನೆ ಹಾಕಿದಳು ಪತ್ನಿ. .ತನ್ನ ಮಾತು ಮುಂದುವರಿಸಿದ ಈ ತಾಯಿ, ಅಲ್ರೀ, ನಿಮ್ ಅಮ್ಮ ಇಲ್ಲೇ ಬಿಡುವಾಗಿದ್ದಾರಲ್ಲಾ ಅವರಿಗೂ ನಮ್ಮೀ ಮಗು ಮೊಮ್ಮಗ ಅಲ್ಲವಾ ! ಅವರಿಗೆ ನಾವು ತಿಂಡಿ ಊಟ ಹಾಕಿ ನೋಡಿಕೊಳ್ತಿಲ್ಲವಾ ? ಅದರ ಋಣಕ್ಖಾದರೂ ಅವರೇ ನಮ್ ಪಾಪುನ ನೋಡಿಕೊಳ್ಳಲಿ ಎಂದಳು ಪತ್ನಿ. ಹೌದಲ್ವಾ ! ನೀ ಹೇಳಿದ್ದೂ ಸರಿಯೇ, ಮನೇಲಿ ಅಮ್ಮ ಸುಮ್ಮನೇ ಕಾಲ ಕಳೆಯೋ ಬದಲು ಮೊಮ್ಮಗನನ್ನು ನೋಡಿಕೊಳ್ಳಲಿ ಎಂದು ಪತ್ನಿಯ ಸಲಹೆಗೆ ಗೋಣಾಡಿಸಿದ ಪತಿರಾಯ..
ಯಾವ ಟೈಮ್ ಗೆ ಏನ್ ಸೇವೆ ತನ್ನ ಮಗನಿಗೆ ಸಲ್ಲಿಸಬೇಕು ಎಂಬ ಬಗ್ಗೆ ಈ ಮಗ ತನ್ನ ಅಮ್ಮನಿಗೆ ಡ್ಯೂಟಿ ಚಾರ್ಟ್ ಕೊಟ್ಟು ತನ್ನ ಮಗನ ಉಸ್ತುವಾರಿ ವಹಿಸಿ ನೆಮ್ಮದಿಯಿಂದ ಪತಿ ಪತ್ನಿ ಕೆಲಸಕ್ಕೆ ಹೊರಟರು. ಈ ಅಜ್ಜಿಗೂ ಇದು ಇಷ್ಟವಾಯಿತು ಅನ್ನಿಸುತ್ತೆ.. ಅದೆಷ್ಠೋ ಸಂತಸದಿAದ ಇವನು ನಮ್ಮ ವಂಶ ಉದ್ದರಿಸುವವನು, ಇದು ನನ್ನ ಮೊಮ್ಮಗ ಎಂದು ಹಿರಿ ಹಿಗ್ಗುತ್ತಲೇ ತನಗಾಗುತ್ತಿದ್ದ ಕಷ್ಟಗಳೆಲ್ಲವನ್ನೂ ಮರೆತು ಸಂತಸದಿAದಲೇ ಅವನನ್ನು ಪಾಲಿಸಿ ಪೋಷಿÀಸಿ ದೊಡ್ಡವನನ್ನಾಗಿ ಮಾಡಿದರು ಈ ಅಜಿ.್ಜ
ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಈ ಅಜ್ಜಿಗೂ ವಯಸ್ಸಾಗಿ ಶಕ್ತಿಹೀನಳಾದಳು ಮೈಯಲ್ಲಿ ತ್ರಾಣವಿಲ್ಲದ ಕಾರಣ ಮಗ ಸೊಸೆಗೆ ಯಾವ ರೀತಿಯೂ ನೆರವಾಗಲು ಅಶಕ್ತಳಾದಳು.. ಆಗಾಗ್ಗೆ ಸಣ್ಣ ಪುಟ್ಟ ರೋಗಗಳು ಈಕೆಂiÀiನ್ನು ಕಾಡಿಸಿದ ಪರಿಣಾಮ, ಇದರಿಂದ ಕಿರಿ ಕಿರಿ ಅಜ್ಜಿಗೆ ಮಾತ್ರವಲ್ಲದೆ ಮಗ ಸೊಸೆಗೂ ಆಗಿ ಥೂ ಯಾವಾಗ ನೋಡಿದರೂ ಏನಾದರೊಂದು ರೋಗ ಹೇಳ್ತಾನೇ ಇರತಾಳೆ, ಈವತ್ರತು ಏನೂ ಇಲ್ಲಪ್ಪ ಎಂದ ದಿನವೇ ಇಲ್ಲ ಎಂಬ ಬೇಸರ ಮನದಲ್ಲಿ ನೆಲಸುತ್ತಿದೆ. ಏರಿದ ವಯಸ್ಸಿನ ಪರಿಣಾಮವಾಗಿ ಅಲ್ಪ ಸ್ವಲ್ಪ ಮರೆವು. ಇವೆಲ್ಲಾ ಮಗ ಸೊಸೆಗೆ ಸಹಿಸಲಾಗದ ತೊಂದರೆ ಎನಿಸಿತು, ತಮಗೆ ಯಾವ ರೀತಿಯೂ ಸಹಾಯೆರ ವಾಗದ, ತಮಗೇ ಹೊರೆಯಾದ ಈ ವ್ಯಕ್ತಿ ತಮಗೇಕೆ ಬೇಕು ಎಂ¨ ಅಸಹ್ಯವಾಗಿದೆ. ನಾನು ¥ತ್ನಿ ಬೆಳಗಾದರೆ ಕೆಲಸಕ್ಕೆ ಹೋಗುವವರು, ಮನೆಯಲ್ಲಿ ಒಬ್ಬಳೇ ಇರುವ ಅಮ್ಮನನ್ನು ನೋಡಿ ಕೊಳ್ಳುವವರಿಲ್ಲ. ಎದ್ದ ಬಿದ್ದು ಹೆಚ್ಚು ಕಮ್ಮಿ ಮಾಡಿಕೊಂಡರೆ ! ಅದಕ್ಕೇ ಸ್ವಲ್ಪ ಕಾಲ ನಿಮ್ಮ ಮನೆಗಳಲ್ಲಿ ಅಮ್ಮನನ್ನು ಇಟ್ಟುಕೊಂಡು ಸುಧಾರಿಸಿ ಎಂದು ಮಗ ತನ್ನ ಸೋದರಿಯರಲ್ಲಿ ಮನವಿ ಮಾಡಿದ.
ಆಗೋದೇಯಿಲ್ಲಪ್ಪ, ನಮ್ಮ ಮನೆ ಚಿಕ್ಕದು, ಇದರಲ್ಲೇ ನನ್ನ ಕುಟುಂಬ ಅತ್ತೆ ಮಾವ ಇಲ್ಲಾ ಅಡ್ಜೆಸ್ಟ್ ಮಾಡಿಕೊಂಡಿದ್ದೀವಿ. ಅಮ್ಮನೂ ಬಂದರೆ ಜಾಗ ಸಾಲುವುದಿಲ್ಲ ಎಂದರು ಸೋದರಿಯರು. ಇದನ್ನು ಕೇಳಿದ ಮಗನಿಗೆ ಪಿತ್ತ ನೆತ್ತಿಗೇರಿತು, ಇವರೆಲ್ಲಾ ಅಮ್ಮನ ಮಕ್ಕಳೇ ಅಲ್ಲವಾ ? ನಾನೊಬ್ಬನೇನಾ ಅಮ್ಮನಿಗೆ ಮಗ ! ಅಮ್ಮನ ರಕ್ಷಣೆ ಹೊಣೆ ಈ ಹೆಣ್ಣುಮಕ್ಕಳಿಗೂ ಸೇರಿಲ್ಲವೇ ! ಅಮ್ಮ ಕಣ್ ಮುಚ್ಚಿದರೆ ಆಗ ಈ ಮನೇಲಿ ಪಾಲು ಕೇಳೋಕೆ ಮಾತ್ರ ಇವರು ಅಮ್ಮನ ಮಕ್ಕಳಾ ? ಎಂಬ ಕುತರ್ಕ ದಿನೇ ದಿನೇ ಮಗ ಸೊಸೆಯರ ಮನಸ್ಸಿನಲ್ಲಿ ಕುದಿಯತೊಡಗಿತು.
ನಮಗೆ ಯಾವ ರೀತಿಯೂ ನೆರವಿಗೆ ಬರದ ಈ ಅಮ್ಮನ ಹೊರೆ ನಮಗೇಕೇ ? ಏನಾದರೂ ಮಾಡಿ ಈ ಅಮ್ಮನನ್ನು ನಮ್ಮ ಮನೆಯಿಂದ ಹೊರಗೆ ಸಾಗಿಸಬೇಕು ಎಂಬ ನಿರ್ಧಾರ ಮಾಡಿದರು ಮಗ ಸೊಸೆ. ಅದೊಂದು ದಿನ ಹೊರಗೆ ಹೋಗಿ ಬರೋಣ ಎಂಬ ನೆಪ ಹೇಳಿ ಮಗ ಸೊಸೆ ಅಮ್ಮನನ್ನು ಒಂದು ಆಶ್ರಮಕ್ಕೆ ಕರೆ ತಂದು ಅಮ್ಮಾ ನಾವಿಬ್ಬರೂ ೧ ತಿಂಗಳ ಕಾಲ ಊರಲ್ಲಿರುವುದಿಲ್ಲ. ಮನೆಯಲ್ಲಿ ನೀ ಒಬ್ಬಳೇ ಇದ್ರೆ ನಿನ್ನ ನೋಡೋರು ಯಾರು ? ನೀನೇ ಹೆತ್ತ ಹೆಣ್ಣು ಮಕ್ಕಳಿಗೂ ನೀ ಬೇಡವಾಗಿದ್ದೀಯೆ, ಅದಕ್ಕೇ ಇಲ್ಲಿ ಇರುವ ಜನ ನಿನ್ನ ಜೊತೆಯಾಗರ‍್ತಾರೆ, ನಿನ್ನ ಇವರು ಚೆನ್ನಾಗಿ ನೋಡಿಕೊಳ್ತಾರೆ, ನಾವು ಊರಿಗೆ ವಾಪಸ್ ಬಂದ ಮೇಲೆ ನಿನ್ನ ಮನೆಗೆ ಕರೆದುಕೊಡು ಹೋಗ್ತೀವಿ ಎಂದು ಅಮ್ಮನನ್ನು ಒಪ್ಪಿಸಿ ಅಲ್ಲಿ ಬಿಟ್ಟು ಆಶ್ರಮದವರ ಕೈಲಿ ಮೊದಲೇ ಮಾತುಕತೆಯಾಗಿದ್ದಂತೆ ಅವರÀ ಕೈಲಿ ನಿಗದಿತ ಹಣವಿಟ್ಟರು, ಅ ಅಮ್ಮನತ್ತ ಅಂತಿಮವಾಗಿ ಕೈ ಬೀಸಿ ಹೊರಟವರು, ಹಣ ಖರ್ಚಾದರೂ ಪರವಾಗಿಲ್ಲ, ಸಧ್ಯ ಬಿಡುಗಡೆಯಾಯುತಲ್ಲಾ ಈ ಮುದುಕಿಯಿಂದ ಎಂಬ ನಿಟ್ಟುಸಿರುಬಿಟ್ಟರು.
ಮಗ ಬೇಗ ಬರತಾ£,É ನನ್ನ ಮನೆಗೆ ಕರೆದುಕೊಂಡು ಹೋಗ್ತಾನೆ ಎಂದೇ ನಂಬಿದ್ದ ಆ ಹಿರಿಯ ಜೀವ ಶ್ರೀರಾಮನ ಬರುವಿಕೆಗೆ ಕಾದ ಶಬರಿಯಂತೆ ಮಗ ಸೊಸೆಯ ಬರುವಿಕೆಯನ್ನೇ ಎದುರು ನೋಡುತ್ತಾ ಕೆಲ ತಿಂಗಳುಗಳು ಕಳೆದಳು. ಯಾರೂ ತಿರುಗಿಯೂ ನೋಡದಾಗ ಈ ಅಮ್ಮನಿಗೆ ತನ್ನವರ ಮೇಲೆ ಅನುಮಾನ ಹುಟ್ಟಿತು. ಏನಮ್ಮಾ ನನ್ನ ಮಗ ಯಾವಾಗ ಬರತಾ ನಂತೆ ಎಂದು ಅಲ್ಲಿದ್ದವರನ್ನು ಕೇಳ ತೊಡಗಿದಾಗ, ಅವರಿನ್ ಬರಲ್ಲಾ ಅಜ್ಜಿ, ನೀನು ಕೊನೆಯ ವೆರಗೂ ಇಲ್ಲೇ ಎಂದರು.. ಆ ಮನೆಯಿಂದ ನನ್ನ ಓಡಿಸಿ ಇಲ್ಲಿ ಬಿಡೋದಕ್ಕೆ ಮಗ ಸೊಸೆ ಈ ಸಂಚು ಮಾಡಿದರು ಎಂ¨ ಸತ್ಯ ಅಮ್ಮನಿಗೆ ಈಗ ಖಾತ್ರಿಯಾಯಿತು.
ಪತಿ ಇಲ್ಲದ ಕಷ್ಟ ಕಾಲದಲ್ಲಿ ಇಷ್ಟು ಮಕ್ಕಳನ್ನು ಹೊತ್ತು ಹೆತ್ತು ಪಾಲಿಸಿ ಪೋಷಿಸಿ ದೊಡ್ಡವರನ್ನಾಗಿ ಮಾಡಲು ಇವರಿಗೆ ನಾ ಬೇಕಾಗಿತ್ತು, ಇವರಿಗಾಗಿ ನಾನೆಷ್ಟು ಶ್ರಮಪಟ್ಟೆ, ತ್ಯಾಗಮಾಡಿದೆ ! ಇವರೆಲ್ಲರೂ ನನ್ನವರು, ವೃದ್ಧಾಪ್ಯದಲ್ಲಿ ನನ್ನ ರಕ್ಷಿಸ್ತಾರೆ ಅಂತಾನೇ ನಂಬಿದ್ದೆ, ಆದರೆ ನಾನು ಇರ‍್ಯಾರಿಗೂ ಬೇಡವಾದೆನೆ ! ಸ್ವಂತ ಮನೆ, ಇಷ್ಟು ಮಕ್ಕಳು ಇದ್ದೂ ನಾನು ಅನಾಥಳಾಗಿ ಕೊನೆಯವರೆಗೂ ಈ ಆಶ್ರಮದಲ್ಲೇ ಕಳೆಯಬೇಕೇ ! ನನ್ನ ಯಾಕಪ್ಪಾ ಹೀಗೆ ಮಾಡಿದೆ ಸ್ವಾಮಿ ? ನಿನಗೇÃನು ನಾ ಅನ್ಯಾಯ ಮಾಡಿದೆ ಅಂತಾ ಈ ನೋವ್ ಕೊಟ್ಟೆ ? ಎಂದು ದೇವರನ್ನು ನಿಂದಿಸಿ ಗಳಗಳನೆ ಅತ್ತಳು ಇವ್ಯಾವುವೂ ಪ್ರಯೋಜನವಾಗದು ಎಂದು ತಿಳಿದಾಗ ಆಶ್ರಮದಲ್ಲಿ ಒಂಟಿಯಾಗೇ ಕಾಲ ಕಳೆಯಲಾರಭಿಸಿದಳು. ನಂತರದ ಅವಧಿಯಲ್ಲಿ ಈ ಚಿಂತೆ ನೋವು ಈಕೆಯನ್ನು ಮನೋವ್ಯಾಧಿಯಲ್ಲಿ ಮುಳುಗಿಸಿತು.
ಆಶ್ರಮದವರೂ ತಮ್ಮ ಪೂರ್ವ ನಿರ್ಧರಿತ ಕ್ರಮದಂತೆ ಆಂದಿನಿAದಲೇ ಈ ವೃದ್ದೆಯ ಬಗ್ಗೆ ತಮ್ಮ ಕೆಲಸ ಆರಂಭಿಸಿದರು. ಕೆಲವೇ ತಿಂಗಳುಗಳಲ್ಲೇ ವೃದ್ಧೆಯು ಇಹಲೋಕ ತ್ಯಜಿಸಿದಳು. ನಿಮ್ಮ ಕೆಲಸ ಮಾಡಿ ಮುಗಿಸಿದ್ದೇವೆ. ಇವರಿಗೆ ಸಂಬAಧಿಸಿದ್ದನ್ನು ನಮ್ಮಲ್ಲಿ ಒಂದು ವಾರ ಇಡಲಾಗಿರುತ್ತದೆ, ಅಗತ್ಯವಿದ್ರೆ ಅದನ್ನು ಬಂದು ಪಡೆಯಬಹುದು ಎಂಬ ಸುದ್ದಿಯನ್ನು ಆಶ್ರಮದವರು ಮಗನು ನೀಡಿದ್ದ ವಿಳಾಸಕ್ಕೆ ಕಳುಹಿಸಿದರು. ೨-೩ ದಿನಗಳಲ್ಲಿ ಆ ಕಾಗದ ಆಶ್ರಮಕ್ಕೇ ವಾಪಸ್ ಬಂದಿತು “ವಿಳಾಸದಾರರು ನಾ ಪತ್ತೆ’ ಎಂಬ ಹಿಂಬರಹದೊAದಿಗೆ.
ಈ ಪ್ರಸಂಗದಲ್ಲಿ ತನಗೆ ಜನಿಸಿದ ಮಕ್ಕಳೆಲ್ಲರನ್ನೂ ೯ ತಿಂಗಳೂ ಹೊತ್ತು ಹೆತ್ತು ಇವರೆಲ್ಲರೂ ತÀನ್ನ ರಕ್ತ ಮಾಂಸ ಹಂಚಿಕೊAಡು ಹುಟ್ಟಿದವರು. ಇವರು ತನ್ನ ವಂಶದ ಕುಡಿಗಳು. ಇಂದು ಇವರನ್ನು ತಾನು ಜೋಪಾನ ಪಡಿಸಿ ಪಾಲಿಸಿ ಪೋಷಿಸಿ ದೊಡ್ಡವರನ್ನಾಗಿ ಮಾಡಿದರೆ ಮುಂದೊAದು ದಿನ ಇವರು ತನ್ನನ್ನು ನೋಡಿಕೊಳ್ಳತಾರೆ ಎಂಬ ನಂಬಿಕೆಯಲ್ಲಿ ಆ ಕಷ್ಟದ ದಿನಗಳಲ್ಲೂ ಇವ್ರನ್ನು ಸಾಕುವುದು ಕಷ್ಟ ಎಂದು ಕೊಳ್ಳದೆ ಇವರನ್ನು ದೊಡ್ಡವರನ್ನಾಗಿ ಮಾಢಿ ಇವರಿಗೆ ವಿದ್ಯೆ ಬುದ್ದಿ ಕಲಿಸಿ ವಿವಾಹವನ್ನೂ ಮಾಡಿಸಿ ತಮ್ಮ ಕಾಲ್ ಮೇಲೆ ಇವರು ನಿಲ್ಲುವಂತೆ ಮಾಡಲು ಈ ಪ್ರೇಮಮಯಿ ತಾಯಿ ಅದೆಷ್ಟು ಕಷ್ಟ ಪಟ್ಟಿರಬಹುದು ಎಂಬ ಈಕೆಯ ತ್ಯಾಗವನ್ನು ಇವರು ಮರೆತರಲ್ಲಾ ! ಇಂದು ಈಕೆ ಶಕ್ತಿ ಹೀನೆ, ಈಕೆಯಿಂದೇನೂ ಇವರಿಗೆ ಪ್ರಯೋಜನವಿಲ್ಲ ಎನಿಸಿ ಎತ್ತನ್ನು ಕಸಾಯಿಖಾನೆಗೆ ತಳ್ಳಿದಂತೆ ಈಕೆಯÀನ್ನು ಅನಾಥಳಂತೆ ಮಾಡಿ ಆಶ್ರöಮಕ್ಕೆ ತಳ್ಳಿದ ಇವರು ಮನುಷ್ಯರೇ ! ಇದೇನೇ ಸಭ್ಯತೇ ! ಇದೇನೇ ಸಂಸ್ಕೃತಿ ! ?
*************************
Comments
Post a Comment