ಡಿಮಾಂಡಪ್ಪೋ ಡಿಮಾಂಡು

ಡಿಮಾಂಡಪ್ಪೋ ಡಿಮಾಂಡು   

ಲೇಖಕರು : ಎಂ  ಆರ್ ವೆಂಕಟರಾಮಯ್ಯ               

                             


   ‘ಬೇಡಿಕೆ, ಕೋರಿಕೆ ಇತ್ಯಾದಿ ಪದಗಳೆಲ್ಲಾ ಈ ಇಂಗ್ಲಿಷಿನ ‘ಡಿಮಾಂಡ್’ ಎಂಬ ಪದಕ್ಕೆ ಸಮಾನಾಂತರವಾಗಿದ್ದರೂ ಅದು ಗ್ರಾಮ, ಹಳ್ಳಿ, ತಾಲ್ಲೂಕು, ಪಟ್ಟಣ, ಹೀಗೆ ಯಾವುದೇ ಭಾಗದ ಜನರಾದರೂ ಸರಿ, ಅದು ವಿದ್ಯಾವಂತರೋ ಅವಿದ್ಯಾವಂತರೋ ಯಾರೇ ಆಗಲಿ ಈ ಯಾವ ಭೇದ ಭಾವ ತಾರತಮ್ಯವೂ ಇಲ್ಲದೆ ಇಂಗೀಷಿನ ಈ ಡಿಮಾಂಡ್ ಎಂಬ ಪದವನ್ನು ಬಳಸುತ್ತಾರೆಯೇ ವಿನಹಾ ‘ಬೇಡಿಕೆ, ಕೋರಿಕೆ ಎಂಬ ಅಚ್ಚ ಕನ್ನಡ ಪದಗಳನ್ನು ಉಪಯೋಗಿಸಿದ್ದು  ನಾ ನೋಡಿಲ್ಲ, ಕೇಳಿಯೂ ಇಲ್ಲ.  ಹೀಗೆ ಈ ಇಂಗ್ಲಿಷ್ ಪದ ಇಷ್ಟು ಸಲೀಸಾಗಿ ನಮ್ಮ ಜನರ ಮನದಲ್ಲಿ ಅಡಗಿ ನಾಲಿಗೆಯ ಮೇಲೆ ಸಲೀಸಾಗಿ ನಲಿದಾಡಿ ನಿತ್ಯ ಜೀವನದಲ್ಲಿ ಬಳಕೆಯ ಸಾಧಾರಣ ಪದವಾಗಿಬಿಟ್ಟಿದೆ. ಈ ಕಾರಣಕ್ಕಾಗಿಯೇ ಪ್ರಸಕ್ತ ಲೇಖನಕ್ಕೆ ಈ ‘ಡಿಮ್ಯಾಂಡ್’  ಎಂಬ ಶೀರ್ಷಿಕೆಯನ್ನೇ ಬಳಸಿದ್ದೇನೆ. 

     ಇಷ್ಟಕ್ಕೂ ಯಾವುದಕ್ಕೆ ಡಿಮ್ಯಾಂಡು, ಯಾರಿಗೆ, ಯಾವಾಗ ! ? ಇದೇನೂ ಗೊತ್ತಿಲ್ಲವಲ್ಲ ! ಎಂಬ ಗೊಂದಲಬೇಡ., ಈ ‘ಡಿಮ್ಯಾಂಡು’ ಅನೋ ಪದ ಕೇಳಿದ ಕೂಡಲೇ ನಮಗೆ ತಟ್ಟನೆ  ನೆನಪಾಗುವುದು “ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಫೋ ಡಿಮ್ಯಾಂಡು” ಎಂಬ ಕನ್ನಡ ಚಲನ ಚಿತ್ರದ ಇದೇ ಹೆಸರಿನ ಹಾಡು ನೆನಪಾಗುತ್ತದೆ. ಈ ಚಿತ್ರ, ಚಿತ್ರಗೀತೆ ೧೯೯೯ ರಲ್ಲಿ ರಿಲೀಸ್ ಆಗಿದ್ದು ಎಂಬ ನೆನಪು. ಅಂದು ನಿಜವಾಗಲೂ ಗಂಡು, ಗಂಡಸಿಗೆ ಅಷ್ಟು ಡಿಮಾಂಡ್ ಇದ್ದಿದ್ದು ನಿಜವಾದರೂ, ಅಂದಿನಿಂದ ಒಂದು ದಶಕದ ಕಾಲದ ನಂತರದ ವೇಳೆಗೆ ಅಂದರೆ ಇಂದು ಈ ಮಾತು ಸುಳ್ಳಾಗಿಬಿಟ್ಟಿದೆ ಎಂದರೆ ನೀವು ಒಪ್ಪಲಾರಿರ ! 

     ಮದುವೆ ಮಾರುಕಟ್ಟೆಯಲ್ಲಿ ಯಾರಿಗೆ ಇಂದು ಡಿಮಾಂಡ್ ಎಂಬುದನ್ನು ಕುರಿತ ಒಂದು ಸಮೀಕ್ಷೆ ನಡೆಸಿದರೆ ನಿಮಗೇ ತಿಳಿಯುತ್ತದೆ ಇಂದು ಡಿಮಂಡ್ ಯಾರಿಗಿದೆ ಎಂಬುದು. ಮದುವೆ ವಯಸ್ಸು ತಲುಪಿರುವ, ಆ ವಯಸ್ಸು ಮೀರಿರುವ ಗಂಡು ಹುಡುಗರಿರುವ ಮನೆಗಳನ್ನು ಹೊಕ್ಕು ಇವರ ಮಾತಾ ಪಿತರನ್ನು ಸಂಪರ್ಕಿಸಿ, ‘ಯಾಕೆ ನಿಮ್ಮ ಮಗನಿಗೆ ಮದುವೆ ಆಗಿಲ್ಲೆಂದು ಕೇಳಿ’ ನೋಡಿ. ನಿಮಗೆ ಕೇಳಿಸುತ್ತದೆ ಪ್ರತಿ ಮನೆಯವರಿಂದ ಒಂದೊಂದು ಕಾರಣ, ಅವರ ಮಗನಿಗೆ ಯಾಕೆ ಡಿಮಾಂಡ್ ಇಲ್ಲ, ಈಗ ಡಿಮಾಂಡ್ ಯಾರಿಗಿದೆ ಎಂಬುದು ನಿಮಗೆ ಪ್ರತ್ಯಕ್ಚವಾಗಿ ಅರಿವಾಗುತ್ತದೆ. ಈ ಪೈಕಿ ಗಂಡು ಹೆತ್ತ ಹಲವು ಮಾತಾ ಪಿತರಿಂದ ಕೇಳಿ ಬರುವ ‘ಕಾಮನ್ ಕಾಸ್’ ಎಂದರೆ, ‘ಅಯ್ಯೋ ಯಾಕೆ ಕೇಳ್ತೀರಪ್ಪಾ ನಮ್ಮ ದುಃಖ !  ನಮ್ಮವನಿಗೇನು ಮದುವೆ ಭಾಗ್ಯ ಹಣೇಲಿ ಬರೆದಿದೆಯೋ ಇಲ್ಲವೋ ಎನ್ನುವಷ್ಟು ಬೇಜಾರಾಗಿದೆ.’ ನಮ್ಮದೇನೂ ಡಿಮಾಂಡ್ ಇಲ್ಲ, ನಿಮ್ಮ ಹುಡುಗೀನ ಕೊಟ್ಟು ಸಿಂಪಲ್ ಆಗಿ ಲಗ್ನ ಮಾಡಿಕೊಡಿ ಎಂದರೂ ಒಪ್ಪತಾ ಇಲ್ವಲ್ಲ ಈ ಕನ್ಯಾ ಮಣಿಗಳ ಮನೆಯವರು. “ನೀವು ಡಿಮಾಂಡ್ ಮಾಡದಿದ್ದರೇನಂತೆ ನಾವು ಡಿಮೇಂಡ್ ಮಾಡಿ ಕೇಳ್ತೀವಿ ಅಂತಾರೆ, ಈ ಕನ್ಯಾ, ಇವರ ಪಿತೃಗಳು.” ಹುಡುಗ ಸಾಫ್ಟೋ : ಹಾರ್ಡೋ ?  ಅರ್ಥಾತ್ ಸಾಫ್ಟ್ವೇರ್: ಹಾರ್ಡ್ವೇರ್ ಇಂಜಿನಿಯರೋ, ಪ್ಯಾಕೇಜ್ ಎಷ್ಟು ? ಲಕ್ಷಕ್ಕಿಂತಾ ಕಡಿಮೆಯೋ ಹೆಚ್ಚೋ, ಕಾರ್ ಕೊಂಡಿದ್ದಾನೋ ಮಗ ! ಯಾವ ಮಾಡೆಲ್, ಏನದರ ವೇಲ್ಯು,  ನೀವು (ಮಾತಾ ಪಿತgನ್ನು ಕುರಿತು) ಎಷ್ಟು ಮನೆ, ಸೈಟ್ ಸಂಪಾದಿಸಿದ್ದೀರಿ, ಇಷ್ಟು ಸಣ್ಣ ಮನೇಲಿ ಇದ್ದೀರಾ ? ನನ್ನ ಮಗಳು ಕಾರ್ ತಂದರೆ ನಿಲ್ಲಿಸೋದಕ್ಕೆ ನೀವಿರೋ ಮನೇನೂ ಸಾಕಾಗೊಲ್ಲ ! ಹಾರಿಬಲ್, ಈ ಗೂಡಲ್ಲಿ ನನ್ನ ಮಗಳು ಇರಲಿಕ್ಕಾಗದು. ನಮಗೆ ನಿಮ್ಮ ಸಂಬAಧ ಉಹೂಂ, ಎನ್ನುತ್ತಾ ನಾವು ಕೊಟ್ಟ ಕಾಫಿ ತಿಂಡಿ ಸವಿದು ಎದ್ದು ಹೋಗ್ತಿದ್ದಾರಲ್ಳಾ ಸ್ವಾಮಿ ಅನ್ನೋದು ಇವರೆಲ್ಲರ ಅಳಲು. 

     ಇನ್ನು ಕೆಲವರ ಮಾತಿನ ಪ್ರಕಾರ, ಕನ್ಯಾ ಪಿತೃ ಹೇಳ್ತಾನೆ ಸ್ವಾಮಿ, “ನೋಡ್ರೀ, ನಮ್ಮ ಹುಡುಗೀ ಸ್ವಲ್ಪ ಶಾರ್ಟ್ ಟೆಂಪರ್, ಹುಡುಗ ಅವಳೊಂದಿಗೆ ಅಡ್ಜೆಸ್ಟ್ ಮಾಡಿಕೊಳ್ತಾನಾ !  ಅವಳ ಮಾತಿಗೆ ಅಕಸ್ಮಾತ್ ತದ್ವಿರುದ್ಧವಾಗಿ ಹುಡುಗ ಮಾತಾನಾಡಿದರೆ, ಅವಳಿಗೆ ತಡೆಯಲಾರದಷ್ಟು ವಿಪರೀತ ಕೋಪ, ಅಲ್ಲಿಗೇ ಕಟ್ ಆಗಬಹುದು ಇವರಿಬ್ಬರ ನಡುವಿನ ಸಂಬಂಧ. ಆ ಪುರಾಣ ಕಾಲದಲ್ಲಿ ಆ ಶಂತನು ರಾಜನ ಒಂದು ಕೋರಿಕೆಗೆ ಅವನ ಜೊತೆಯಲ್ಲಿದ್ದ ಗಂಗಾ ದೇವಿ ಕೂಡಲೆ ಅವನ ಮನೆ ಬಿಟ್ಟು ಹೋದಳಂತಲ್ಲಾ ! ಹಾಗೆ ನನ್ನ ಮಗಳು ತೌರಿಗೆ ದೌಡಾಯಿಸುತ್ತಾಳೆ. ಆ ಮೇಲೆ ನಿಮ್ಮಿಷ್ಟ, ಅವಳ್ನ ಹೇಗೆ ಸಮಾಧಾನ ಮಾಡತೀರೋ ನಿಮಗೆ ಬಿಟ್ಟಿದ್ದು “  ಅಂತಾರೆ ಕನ್ಯೆ ಹೆತ್ತವರು.  

     ಇನ್ನು  ತಮ್ಮ ಗಂಡಿಗೆ ಹೆಣ್ಣು ಹುಡುಕುತ್ತಾ ಹಲವು ಮನೆಗಳವರು ದೇಶದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ದಿಕ್ಕುಗಳಿಗೆ ಪಯಣಿಸಿದವರು “ಅಮ್ಮಾ  ನಿಮ್ಮಾ  ಮನೆಗಳಲ್ಲಿ ಮದುವೆಗೆ ಹೆಣ್ಣುಗಳಿವೆಯೇ ? “ ಎಂದು ಮನೆ ಮನೆಯ ಬಾಗಿಲು ತಟ್ಟಿ  ವಿಚಾರಿಸಿ, ನಿಮ್ಮ ಹುಡುಗಿಗೆ ನಮ್ಮ ಭಾಷೆ ಬರದಿದ್ದರೂ ಚಿಂತೆಯಿಲ್ಲ, ಅಡುಗೆ ಕೆಲಸ ಬರದಿದ್ದರೂ : ಮಾಡ ದಿದ್ದರೂ ಪರÀವಾಗಿಲ್ಲ, ನಾವೇ ಸುಧಾರಿಸುತ್ತೇವೆ, ನಮ್ಮವನಿಗೊಂದು ಮದುವೆ ಅಂತಾ ಆದರೆ ಸಾಕಮ್ಮ” ಎಂದು ಗೋಗರೆಯುವ ಸ್ಥಿತಿ ನಡೀತಾ ಇದೆ. ಈಗೆಲ್ಲಾ “ಸೀರೆ ಲಂಗ ಉಟ್ಟವಿಳಿಗೇ  ಡಿಮೇಂಡಪ್ಫೊ ಡಿಮೇಂಡು’ ಅನ್ನೋ ಹಾಡು ಎಲ್ಲರ ಬಾಯಲ್ಲೂ ಕೇಳಿ ರ‍್ತಿದೆ.  ಎಂದರೆ ನಂಬುವುದು ಕಷ್ಟವೇ ! ಟ್ರುತ್ ಈಸ್ ಸ್ಟ್ರೆಂಜರ್  ದ್ಯಾನ್ ಫಿಕ್ಚನ್” ಎಂಬ ಗಾದೆ ಈ ಸಂದರ್ಭದಲ್ಲಿ ಸ್ಮರಿಸಬೇಕು. 



  ಹೀಗೆ ಯಾವ ಕಾಲಕ್ಕೆ, ಯಾರಿಗೆ, ಯಾಕೆ, ಡಿಮಾಂಡ್ ಶುರುವಾಗುತ್ತೋ ಊಹಿಸಲೂ ಸಹಾ ಅಸಾಧ್ಯ. ಕಳೆದ ವµð ಎನಿಸುತ್ತದೆ, ಇದ್ದಕ್ಕಿದ್ದಂತೆ ಕತ್ತೆಯ ಹಾಲಿಗೆ ವಿಪರೀತ ಡಿಮಾಂಡ್ ಶುರುವಾಗಿ, ಅದರ ಸಣ್ಣ ಪ್ರಮಾಣದಷ್ಟು ಹಾಲಿಗೆ ನೂರಾರು ರೂ ಕೊಡಲಿಕ್ಕೆ ಸಿದ್ಧವಾಗಿದ್ದರು ಜನ ಅಂತಾ ವಾರ್ತಾ ಪತ್ರಿಕೆಗಳು ಸುದ್ಧಿ ಬಿತ್ತರಿಸಿತು. ಈ ವಿಷಯ ಯಾವ ಮಟ್ಟದ ಸ್ಥಾನ ಗಳಿಸಿತು ಎಂದರೆ  ಜನ ಪ್ರತಿನಿಧಿ ಸಭೆಯಲ್ಲೂ ಚರ್ಚೆಗೆ ಗ್ರಾಸವಾಯಿತು ಎಂದರು ಕೆಲವರು. ನಮ್ಮ ನಿಮ್ಮನ್ನು ಸ್ಮರಿಸದ ಬಹಳಷ್ಟು ಮಂದಿ ಪ್ರತಿನಿಧಿಗಳು ಈ ಕತ್ತೆಯ ಪ್ರಸ್ತಾಪಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ ಚರ್ಚಿಸುತ್ತಾ, ಕ್ಷೀರ ಭಾಗ್ಯ ಯೋಜನೆಯಡಿ ಮಕ್ಕಳಿಗೆ ಹಾಲು ನೀಡುತ್ತಿದ್ದೇವಲ್ಲಾ ! ಇದರ ಬದಲಿಗೆ ಮಕ್ಕಳಿಗೆ ಕತ್ತೆ ಹಾಲನ್ನೂ ನೀಡಲಿ ಎಂಬ ಸಲಹೆಯನ್ನು ಒಬ್ಬ ಸದಸ್ಯರು ನೀಡಿದರೆ, ಕತ್ತೆ ಹಾಲನ್ನು ಮಕ್ಕಳಿಗೆ ನೀಡಬೇಕಾದರೆ, ಅದರ ಬಳಕೆ ಸರಿಯೇ ಎಂದು ವೈಜ್ಞಾನಿಕವಾಗಿ ತಿಳಿಯಲು ಅಧ್ಯಯನ ನಡೆಸಬೇಕು. ಅದಕ್ಕಾಗಿ ಸದನದ ಸಮಿತಿ ರಚಿಸಬೇಕೆಂಬ ಸಲಹೆ ನೀಡಿದರಂತೆ ಇನ್ನೊಬ್ಬರು. ಅನೇಕ ಕಡೆ ಮಕ್ಕಳು ಹುಟ್ಟಿದ ತಕ್ಷಣ ಕತ್ತೆ ಹಾಲು ಕುಡಿಸ್ತಾರೆ, ಇದು ಮೂಢ ನಂಬಿಕೆಯೋ ವೈಜ್ಞಾನಿಕ  ಕಾರಣವಿದೆಯೋ, ಲಾಭದಾಯಕವೋ ತಿಳಿಯಬೇಕು ಎಂದರಂತೆ ಮತ್ತೊಬ್ಬರು. ಹೀಗಿತ್ತು ಅಂದು ಕತ್ತೆಗೆ ಡಿಮ್ಯಾಂಡ್. 

       ಎಂದಿನ ವಿಚಾರವೋ ಬೇಡ, ಇಂದಿನ ದಸರಾ ಸಂದರ್ಭದಲ್ಲಿ, ಮೈಸೂರಿನಲ್ಲಿ ಹೊರಹೊಮ್ಮಿದ ‘ಬ್ರೇಕಿಂಗ್ ನ್ಯೂಸ್ ‘ ಎಂದರೆ, ಎಲ್ಲೆಲ್ಲೂ ಆನೆ ಲದ್ದಿಗೆ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಅಂತೆ. ಮೈಸೂರಿನ ಮೆರವಣಿಗೆಯಲ್ಲಿದ್ದ ೧೨ ಆನೆಗಳು ದಿನ ಒಂದಕ್ಕೆ ೬೦೦ ಕೆ ಜಿ ಲದ್ದಿ ಹೊರತರುತ್ತಿದ್ದರೆ ಇದಕ್ಕೆ ಡಿಮ್ಯಾಂಡ್ ಹಲವು ಪಟ್ಟು ಹೆಚ್ಚಿತ್ತಂತೆ.  ಬಹಳಷ್ಟು ಜನ ಕ್ಯೂನಲ್ಲಿ ನಿಂತರಂತೆ ಆನೆ ಲದ್ದಿಗೆ ಅಡ್ವಾನ್ಸ್ ಬುಕಿಂಗ್ ಮಾಡಲು ಎಂದಿತು ಒಂದು ಸುದ್ದಿ ಪತ್ರಿಕೆ ಮತ್ತು ಕೆಲವು ವಿದ್ಯುನ್ಮಾನ ಮಾಧ್ಯಮಗಳು. ದಸರಾ ವೇಳೆಯಲ್ಲಿ ಪೂಜಾ ಗೃಹದಲ್ಲಿ ಆನೆ ಲದ್ದಿ ಇಟ್ಟು ಪೂಜಿಸಿದರೆ ಸಿರಿ ಸಿಗುತ್ತದೆ ಎಂಬ ಪ್ರಚಾರ ಹರಡಿ ಬಹಳಷ್ಟು ಜನ ಪ್ಲಾಸ್ಟಿಕ್ ಕವರ್‌ಗಳಲ್ಲಿ ಇದನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ದರAತೆ. ಈ ಲದ್ದಿಯಲ್ಲೂ ಮೇಲು ಕೀಳೆಂಬುದಿತ್ತಂತೆ. ವಿಜಯ ದಶಮಿಯ ದಿನ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಲದ್ದಿ ಬಹಳ ಶ್ರೇಷ್ಠ ಎಂದು ಕೆಲವರೆಂದರೆ. ಮತ್ತೆ ಕೆಲವರು. ಇವೆಲ್ಲಾ ಮೂಢ ನಂಬಿಕೆಗಳು, “ಜನ ಮರುಳೋ ಜಾತ್ರೆ ಮರುಳೋ” ಎಂದು ಕೆಲವು ಬುದ್ದಿ ಜೀವಿಗಳು ಇದನ್ನು ಖಂಡಿಸಿದರAತೆ., ಇದೆಲ್ಲಾ ಒಂದೆಡೆ ಇರಲಿ, ಏನಿದೆ ಅಂತಹಾ ವೇಲ್ಯೂ ಇದರಲ್ಲಿ ಎಂದರೆ :

      ಪೋಸ್ಟ್ ನೆಟಾಲ್ ಕೇರ್, ಮೊಣಕಾಲು ನೋವು, ಹೈ ಟೆಂಪೊರೇಚರ್ ಇತ್ಯಾದಿ ಕಾಯಿಲೆಗಳಿಗೆ ಆನೆಯ ಲದ್ದಿ ಬಳಸುತ್ತಾರಂತೆ ಕೆಲವು ನಾಟಿ ಔಷಧಿ ತಯಾರಕರು,

     ಸೊಳ್ಳೆ ನಿರೋಧಕವಿದು, 

    ಪರಿಸರ ಪ್ರೇಮಿ ಕಾಗದ ತಯಾರಿಕೆ, ಬಯೋ ಗ್ಯಾಸ್ ತಯಾರಿಕೆಗೆ ಇದನ್ನು ಬಳಸುತ್ತಾರಂತೆ, 

   ಆಫ್ರಿಕಾ ದಲ್ಲಿ ಇದನ್ನು ನೋವು ನಿವಾರಕ ಔಷಧಿಯಲ್ಲಿ, ಮೂಗಿನಿಂದ ರಕ್ತ ಸುರಿದಾಗ ಇದರ ಬಳಕೆಯಿದೆಯಂತೆ, 

ಸಿವೆಟ್ ಬೆಕ್ಕಿನ ಬ್ರೂ ನಂತೆಯೇ ಆನೆ ಲದ್ದಿಯಿಂದ ವಿಶೇಷ ಕಾಫಿ ತಯಾರಿಸುತ್ತಾರಂತೆ,

 ಜಪಾನ್ ನಲ್ಲಿ “ಉನ್ ಕೊನೋ ಕುರೋ” ಎಂಬ ಹೆಸರಿನ ವಿಶೇಷ ಬೀರ್ ತಯಾರಿಸುತ್ತಾರಂತೆ. 

     ಆನೆ ಲದ್ದಿಗೆ ಡಿಮ್ಯಾಂಡ್ ಹಿಂದೆ ಸರಿಯುತ್ತಿದ್ದತೆಯೇ ಇದರ ಜಾಗ ಆಕ್ರಮಿಸಿದ್ದು, ಹಲವಾರು ದಿನಗಳು, ಹಲವು ಮಾಧ್ಯಮಗಳಲ್ಲಿ ಡಿಮ್ಯಾಂಡ್ ಕಾಣಿಸಿ, ಚರ್ಚೆಗೆ ಒಳಪಟ್ಟಿದ್ದು “ಮೀ ಟು” ಅಭಿಯಾನ. ಕಾಮನರ್ಸ್, ಅರ್ಥಾತ್ ಸಾಮಾನ್ಯರಿಗೆ ಇದರ ಬಿಸಿ ತಟ್ಟದಿದ್ದರೂ  ಹಲವು ಚಲನ ಚಿತ್ರ ರಂಗದ ಸುಪ್ರಸಿದ್ದ ಸೆಲಿಬ್ರಿಟೀಸ್‌ಗೆ ಬಿಸಿ ತಟ್ಟಿದ್ದೇ ಅಲ್ಲದೆ, “ಹೂ ಈಸ್ ನೆಕ್ಸ್ಟ್  ಮುಂದಿನ ಸರದಿ ಯಾರದು ! ?” ಎಂದು ಬೆಚ್ಚಿ, ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತೆ ಮಾಡಿದ್ದು ಇದರ ವಿಶೇಷ.÷

      ಹೀಗೆ ಯಾವ ಕಾಲಕ್ಕೆ, ಯಾರಿಗೆ, ಯಾವ ವಸ್ತುವಿಗೆ ಡಿಮ್ಯಾಂಡ್ ಬರುತ್ತದೋ ಆ ದೇವನೇ ಬಲ್ಲ. ಆದರೂ ಇಷ್ಟಂತೂ ಹೇಳಬಹುದು, ಈ ಡಿಮ್ಯಾಂಡ್ ಅನ್ನೋದು ಎಲ್ಲಾ ಕಾಲಗಳಲ್ಲೂ ಒಬ್ಬನೇ ವ್ಯಕ್ತಿ, ವಸ್ತು, ವಿಷಯಕ್ಕೆ ಸೀಮಿತವಾಗದೆ, ಚಕ್ರöದಂತೆ ಸದಾ ತಿರುಗುತ್ತಾ ಒಂದೊಂದು ಕಾಲಕ್ಕೆ ಒಂದೊAದರಲ್ಲಿ ಸೇರಿ, ಡಿಮಾಂಡ್ ಅಪ್ಪೋ ಡಿಮಾಂಡು, ನಾನೇ ಮೇಲು, ನೀವೆಲ್ಲಾ ಬೀಳು ಎಂದು ಬೀಳಿಸಿ ಕೀಟಲೆ ಮಾಡಿ ತಾನು ನಕ್ಕು ನಲಿಯುವುದರಲ್ಲಿ ಸಂದೇಹವಿಲ್ಲ. 

                        ************************

Comments