ಬೆನ್ನಿಗೆ ಬ್ಯಾಗೇ ಭೂಷಣ !

ಬೆನ್ನಿಗೆ ಬ್ಯಾಗೇ ಭೂಷಣ ! 

ಲೇಖಕರು : ಎಂ ಆರ್ ವೆಂಕಟರಾಮಯ್ಯ                 

       ಶೀರ್ಷಿಕೆಯಲ್ಲಿರುವ ಸಾಲಿಗೆ “ರವಿ ಆಕಾಶಕೆ ಭೂಷಣಂ” ಎಂಬ ಸೋಮೇಶ್ವರ  ಶತಕದ ಸಾಲು. ಪ್ರೇರಣೆ. ಹೀಗಂದಾಗ ಯಾರೀ ಸೋಮೇಶ್ವರ ! ಎಂಬ ಬಗ್ಗೆ ನಾ ಹೇಳದಿದ್ದರೆ ಯಾವ ಊರೋ, ಕೇರಿಯೋ, ಓಬೀರಾಯನ ಕಾಲದವನೋ ಇವನು ! ಇವನ ಹೆಸರೇ ನಮಗೆ ತಿಳಿಯದ ಮೇಲೆ ಇವನು ಬರೆದಿರುವ ಸಾಲಿನ  ಬಗ್ಗೆ ನಮಗೇನು ಗೊತ್ತಿರುತ್ತೆ ? ಇರಲಿ ಯಾವನೋ ಒಬ್ಬ,  ನಮಗೆ ತಿಳಿಯದ ಸೋಮೇ ಶ್ವರನೋ, ರಾಮೇಶ್ವರನೋ ಎಂಬ ತಾತ್ಸಾರದ ಮಾತನಾಡಿಬಿಡಬಹುದು. ಇಂದಿನ ಕಾಲಘಟ್ಟದ ಹಲವರು. ಹೀಗಾಗುವ ಮೊದಲು ಈತನ ಬಗ್ಗೆ ಸಂಕ್ಷಿಪ್ತ ಪರಿಚಯ ನಾ ಹೇಳಿಬಿಟ್ಟರೆ ಬಹುಶಃ 1950- 51 ಕಾಲದಲ್ಲಿ  ಶಾಲೆಯಲ್ಲಿ ಕನ್ನಡ ಓದಿರಬಹುದಾದ ಕೆಲವು  ಹಿರಿಯ  ನೆರೆತ ತಲೆಗಳಿಗಾದರೂ ನೆನಪಾಗಿ, ಓಹೋ ! ಆ ಸೋಮೇಶ್ವರನೇ ಇವನು !  ಆಹಾ  ! ಅದೆಂತಹಾ ಪ್ರಾಸ ಬದ್ದ  ಸಾಲುಗಳು ಬರೆದನಯ್ಯಾ ! ಅವ ಎಂದು ಅವನಿಗೆ ಕೃತಜ್ಞತೆ ಸಲ್ಲಿಸಬಹುದೇನೋ. ಈ ಉದ್ಧೇಶಕ್ಕಾಗಿ ಇಷ್ಟು ಪೀಠಿಕೆಯಾಗಿದೆ.   

    ಪುಲಿಗೆರೆ ಸೋಮನಾಥನು  ಕ್ರಿ ಶ ಸುಮಾರು  1299 ರಲ್ಲಿ  ಜೀವಿಸಿದ್ದ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ   ಪುಲಿಗೆರೆಯವನು.  ಈತನು  ಪುಲಿಗೆರೆ ಸೋಮನಾಥ, ಸೋಮೇಶ್ವರನೆಂದೇ ಪ್ರಸಿದ್ಧಿಯಾಗಿ ದ್ದಾನೆ. ಕನ್ನಡ  ಹಾಗೂ ಸಂಸ್ಕೃತ ಭಾಷಾ ಪಂಡಿತನಾದ ಈತನ ಅಂಕಿತ “ಹರ ಹರಾ  ಶ್ರೀ ಚೆನ್ನಸೋಮೇ ಶ್ವರಾ”  ಎಂಬುದಾಗಿದೆ. ಈತನು ಕನ್ನಡದಲ್ಲಿ ‘ರತ್ನಕರಂಡಕ”  ಕಾವ್ಯವನ್ನು ಚಂಪೂ ಶೈಲಿಯಲ್ಲಿಯೂ  ಸೋಮೇಶ್ವರ ಶತಕವನ್ನು ವೃತ್ತ ಛಂದಸ್ಸಿನಲ್ಲಿಯೂ ರಚಿಸಿದ್ದಾನೆ,  

    “ರವಿ ಆಕಾಶಕೆ  ಭೂಷಣಂ, ರಜನಿಗಾ ಚಂದ್ರ ಮಹಾ ಭೂಷಣಂ\ ಕುವರಂ ವಂಶಕೆ ಭೂಷಣಂ, ಸರಸಿಗಂಭೋಜಾತಗಳ್ ಭೂಷಣಂ|| ಹವಿ ಯಜ್ಞಾಳಿಗೆ ಭೂಷಣಂ, ಸತಿಗೆ ಪಾತಿ ವ್ರತ್ಯವೇ ಭೂಷಣಂ\ ಕವಿಯಾಸ್ಥಾನಕೆ ಭೂಷಣಂ, ಹರ ಹರಾ ಶ್ರೀ ಚೆನ್ನಸೋಮೇಶ್ವರಾ \\  ಎಂಬುದು ಈತನ  ಪ್ರಸಿದ್ದ ಕೃತಿಯಾಗಿದೆ, ಈ ಚೌಪದಿಯನ್ನು ಕನ್ನಡ ಸಾಹಿತ್ಯ ಪರಿಷತ್ತು  ಸಂಪಾದಿಸಿರುವ “ಸೋಮೇಶ್ವರನಶತಕ” ಕೃತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.  

    ಆಕಾಶಕ್ಕೆ ಸೂರ್ಯನೂ, ಇರುಳಿಗೆ ಚಂದ್ರನೂ, ವಂಶಕ್ಕೆ ಮಗನೂ, ಸರೋವರಕ್ಕೆ ತಾವರೆಯೂ, ಯಜ್ಞಕ್ಕೆ ಹವಿಸ್ಸೂ, ಹೆಂಗಸರಿಂಗೆ ಪಾತಿವ್ರತ್ಯವೂ, ರಾಜರ ಸಭೆಗೆ ಕವಿಯೂ ಅಲಂಕಾರ.   ¸ಸಾಲುಗಳದ್ದು. 

      ಈಗ ಶೀರ್ಷಿಕೆಯಲ್ಲಿರುವ “ಬೆನ್ನು -ಬ್ಯಾಗಿನ ವಿಷಯ”ಕ್ಕೆ ಬರೋಣ. 



  ಬೆನ್ನಿಗೂ ಬ್ಯಾಗಿಗೂ ಬಿಡಿಸಲಾರದ ನಂಟು. ಶಿಶುವು ಶಾಲೆಗೆ ಪ್ರವೇಶಿಸುವ ದಿನದಿಂದ ಪ್ರಾರಂಭವಾಗುವ ಈ ನಂಟು ಮುಕ್ತಾಯವಾಗುವುದು ಬಹುಶಃ ವ್ಯಕ್ತಿ ನಡೆಯಲಾರದ ವಯಸ್ಸು ತಲುಪಿದಾಗ ಎಂದರೆ ಮಾತು ಉತ್ಪೆçÃಕ್ಷೆಯಾಗಲಾರದು. ಹೀಗಂದಾಗ ಇಷ್ಟು ಧೀರ್ಘ ಕಾಲ ಈ ನಂಟು ಮುಂದುವರಿದಿರುತ್ತದೆಯೇ ಎಂಬ ಅಚ್ಚರಿಯೇ ! 

      ಅಚ್ಚರಿ ಪಡಬೇಕಿಲ್ಲ. ಸುಮಾರು 6-7 ದಶಕಗಳ ಹಿಂದೆಲ್ಲಾ ಮಕ್ಕಳನ್ನು ಮೊಟ್ಟ ಮೊದಲಿಗೆ ಶಾಲೆಗೆ, ಅದೂ ಸರ್ಕಾರಿ ಶಾಲೆಗೆ ಸೇರಿಸಬೇಕಾದ ಮಗುವಿಗೆ 5 ವರ್ಷ 10 ತಿಂಗಳು ಮುಗಿದಿರಬೇಕಿತ್ತು. ಅಂದೆಲ್ಲಾ ಮೊದಲ ದಿನ ಮಗು ಶಾಲೆಗೆ ಹೋಗುವಾಗ ತಾಯಿ,  ಬಟ್ಟೆಯೋ, ಸಣುಬಿನಿಂದಲೋ ಸಿದ್ಧಪಡಿಸಿದ ಕೈ ಹಿಡಿಯಿರುವ ಚೀಲದಲ್ಲಿ ಸ್ಲೇಟು, ಬಳಪ ಇಟ್ಟು, ತನ್ನ ಒಂದು ಕೈಲಿ ಆ ಚೀಲ, ಮತ್ತೊಂದು ಕೈಲಿ ಮಗುವಿನ ಕೈ ಹಿಡಿದು ಶಾಲೆಗೆ ಬಿಡುವ, ಮತ್ತೆ ಅಲ್ಲಿಂದ ಮಗುವನ್ನು ಮನೆಗೆ ಕರೆ ತರುವ ತಾಯಿಯರನ್ನು ಹಿಂದಿನ ತಲೆಮಾರಿನವರು ಕಂಡಿದ್ದರು. ಅಂದು ಮಗುವಿನ ಬೆನ್ನಿಗೂ ಬ್ಯಾಗಿಗೂ ನಂಟು ಅಂಟಿರಲಿಲ್ಲ. 

      ನಂತರದ ವರ್ಷಗಳಲ್ಲಿ ಮುಂದಿನ ತರಗತಿಗಳಿಗೆ ಹೋದಾಗಲೂ ಮಗು ಆಯಾ ದಿನದ ವೇಳಾ ಪಟ್ಟಿ (ಟೈಮ್ ಟೇಬಲ್) ಪ್ರಕಾರ, ಪುಸ್ತಕಗಳನ್ನು ಚೀಲದಲ್ಲಿ ಇಟ್ಟು ಚೀಲವನ್ನು ಕೈಲಿ ತೂಗಾಡಿಸಿಕೊಂಡೇ ಶಾಲೆಗೆ ಹೋಗಿ ಬರುವುದನ್ನು ಅಂದಿನ ತಲೆಮಾರಿನವರು ಕಂಡಿದ್ದರು. 

ಅಂದೂ ಮಗುವಿನ ಬೆನ್ನು ಬ್ಯಾಗಿನೊಂದಿಗೆ ಸಂಪರ್ಕ ಹೊಂದಿರಲಿಲ್ಲ. 

     ಇದೆಲ್ಲಾ ಮಕ್ಕಳ ವಿಷಯವಾದರೆ, ದೊಡ್ಡವರೂ ಅಂಗಡಿ, ಪೇಟೆಯಿಂದ ದಿನ  ಸಾಮಾನು, ಪದಾರ್ಥ, ಹಣ್ಣು, ಹೂವು, ತರಕಾರಿ ಮೊದಲಾದುವನ್ನು ತರುವಾಗೂ ಭಾರವಿದ್ದ ಚೀಲವನ್ನು ಒಂದೋ ಎರಡೋ ಕೈಗಳಲ್ಲಿ ತೂಗಿಕೊಂಡು ಬರುತ್ತಿದ್ದದ್ದು ಸಾಮಾನ್ಯ ದೃಶ್ವವಾಗಿತ್ತು. 

      ಇನ್ನು ಮೂಟೆಗಳಲ್ಲಿ ಸಾಮಾನು ತರುತ್ತಿದ್ದ ಕೂಲಿಯಳುಗಳು 1-2 ಮೂಟೆಗಳಾದರೆ ಬೆನ್ನಿನ ಮೇಲೆ ಹೊತ್ತು ತರುವ, ಹೆಚ್ಚಿನ ಸಂಖ್ಯೆಯ ಮೂಟೆಗಳಾದರೆ ಕೈಗಾಡಿ, ಒಂಟಿ ಎತ್ತು, ಜೋಡಿ ಎತ್ತು, ಕುದುರೆಗಳ ಗಾಡಿಗಳಲ್ಲಿ ಸಾಗಿಸಿಕೊಂಡು ಬರುವುದು ಅಂದು ಚಾಲ್ತಿಯಲ್ಲಿದ್ದ ರೂಢಿಯಾಗಿತ್ತು. 

     ಬಹುಶಃ ಅದು 1970 ರ ಕಾಲ ಇರಬಹುದು ಎನಿಸುತ್ತದೆ, ಬೆಂಗಳೂರಿನ ಸುತ್ತ ಮುತ್ತ ಖಾಸಗಿ ಶಾಲೆಗಳು, ಅದೂ ಕ್ರಿಶ್ಚಿಯನ್ ಪಾದ್ರಿಗಳಿಂದ ನಡೆಸಲ್ಪಟ್ಟ ಶಾಲೆಗಳು ಪ್ರಾರಂಭವಾಗಿ, ಸರ್ಕಾರಿ ಶಾಲೆಗಳಿಗಿಂತಾ ಈ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶಿಸ್ತು, ಸಮವಸ್ತç, ಶಿಕ್ಷಣ ಗುಣಮಟ್ಟ ಚೆನ್ನಾಗಿರುತ್ತದೆ, ಇದರಲ್ಲಿ ಓದುವ ಹುಡುಗರು ಅದೆಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡ್ತಾರೆ ಎಂದು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟ  ಹಲವರು ಸಿರಿವಂತ ಜನ ಆ ಶಾಲೆಗಳತ್ತ ಆಕರ್ಷಿತರಾದರು. ಈ ಹಂತದಲ್ಲಿ ಮಾತಾಪಿತೃಗಳು, ಪೋಷಕರು ತಮ್ಮ ಮಕ್ಕಳ 8-10 ಪುಸ್ತಕಗಳು, ಪೆನ್ ಪೆನ್ಸಿಲ್ ಕರವಸ್ತç, ಕುಡಿಯುವ ನೀರಿನ ಬಾಟಲ್, ತಿಂಡಿ ಡಬ್ಬಿ ಹೀಗೆ ಹಲವು ಸಾಮಗ್ರಿಗಳನ್ನು ಹಲವು ಕಂಪಾರ್ಟ್ಮೆAಟ್‌ಗಳಿರುವ ಬ್ಯಾಗ್‌ಗಳಲ್ಲಿ ತುಂಬಿ, ಬ್ಯಾಗನ್ನು ಮಗುವಿನ ಬೆನ್ನಿಗೇರಿಸುವ ಅಭ್ಯಾಸ ಶುರುವಾಯಿತು. ಪರಿಣಾಮ- ಮಗು ತನ್ನ ಬೆನ್ನಿನ ಮೇಲೆ ಸುಮಾರು 1-2 ಕೆ ಜಿ ಭಾರ ಹೊತ್ತು ಬೆನ್ನು ಬಾಗಿಸಿ ನಡೆಯುವ ಆ ದೃಶ್ಯ ಮಗುವಿನ ಪೋಷಕರಿಗೆ ಅದೆಷ್ಟೋ ಮಹದಾನಂದ ತಂದಿತ್ತು ಎನಿಸುತ್ತದೆ.. ಹೀಗೆ ಶುರುವಾಯಿತು, ಬೆನ್ನಿಗೂ ಬ್ಯಾಗಿಗೂ ನಂಟು.

      ಅಂದಿನ ಸಣ್ಣ ತರಗತಿಯ ಸಣ್ಣ ಮಕ್ಕಳು ನಂತರದಲ್ಲಿ  ದೊಡ್ಡ ಮಕ್ಕಳಾಗಿ ಪ್ರೌಢ ಶಾಲೆ, ಕಾಲೇಜಿಗೆ ಬಂದಾಗಲೂ ದಿನದ ಪುಸ್ತಕಗಳು, ಲಂಚ್ ಬ್ಯಾಗ್ ಇತ್ಯಾದಿಗಳನ್ನು ತಮ್ಮ ಹಿಂದಿನ ಅಭ್ಯಾಸದಂತೆ, ಅಂದರೆ, ಬ್ಯಾಗ್‌ನಲ್ಲಿ ತುಂಬಿ ಬೆನ್ನಿನ ಮೇಲೆ ಹೊತ್ತು ಸಾಗಿ, ಬೆನ್ನು ಬ್ಯಾಗಿನ ನಂಟನ್ನು ಮುಂದುವರಿಸಿದ ಕೀರ್ತಿ ಇವರ ಪಾಲಿನದಾಯಿತು..

       ದಿನೇ ದಿನೇ ಈ ಅಭ್ಯಾಸ ಮುಂದುವರಿದ ಪರಿಣಾಮ- ಕೈಲಿ ಚೀಲ ಹಿಡಿದು ನಡೆಯುವುದು ಅವಮಾನ, ಥೂ ಅಸಹ್ಯ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರಿ, ಚೀಲದಲ್ಲಿ ಏನೂ ಇಲ್ಲದಾಗಲೂ ಬೆನ್ನಿನ ಮೇಲೇ ಬ್ಯಾಗ್ ತೂಗಾಡಿಸಿ ‘ಬೆನ್ನಿಗೆ ಬ್ಯಾಗೇ ಭೂಷಣಂ’ ಎಂದು ಬೀಗಲಾರಂಭಿಸಿದರು ಯುವಕರು.

    “ಹ್ಯಾಬಿಟ್ಸ್ ಡೈ ಹಾರ್ಡ್” ಎಂಬುದು ಇಂಗ್ಲಿಷಿನ ಹಳೆಯ ಗಾದೆ. ‘ಗಾದೆ’  ಎಂಬುದು ಯಾರೋ ಒಬ್ಬ ಅಥವಾ ಇಬ್ಬರು ‘ಸ್ಪರ್ ಆಫ್  ದಿ ಮುಮೆಂಟï ‘ ಎಂಬAತೆ ತಮಗೆ ತೋಚಿದಂತೆ ಆಡಿದ ಮಾತುಗಳಲ್ಲ. ಬದಲಿಗೆ ದೊಡ್ಡ ಸಮೂಹದ ಜನ ತಮ್ಮ ನಿತ್ಯ ಜೀವನದಲ್ಲಿ ಆದ ಅನುಭವವನ್ನು ಇತರರೊಂದಿಗೆ ಹಂಚಿಕೊಂಡು, ಅವರೂ ಸಹಾ “ಇವರ ಅನುಭವ ಸರಿ, ನಿತ್ಯ ಕಾಲಿಕ, ಸರ್ವ ಕಾಲಿಕ”ಎಂದು ಒಪ್ಪಿದಂತಹವು ಸರ್ವಸಮ್ಮತವಾಗಿ ‘ಗಾದೆ’ ಎನಿಸಿಕೊಳ್ಳುತ್ತದೆ. ಅಭ್ಯಾಸವೆಂಬುದು ವ್ಯಕ್ತಿಯ ಮೈ ಮನಸ್ಸುಗಳಲ್ಲಿ ಅದೆಷ್ಟು ಬಲವಾಗಿ ಅಂಟಿಕೊAಡಿರುತ್ತದೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಹೀಗಿದೆ : 

     ನಿವೃತ್ತ ಸೈನಿಕನೊಬ್ಬನು ತಲೆಯ ಮೇಲೆ ಹೊರೆಯನ್ನಿಟ್ಟುಕೊಂಡು ಅನ್ಯ ಮನಸ್ಕನಾಗಿ ನಡೆಯುತ್ತಿದ್ದನು. ಬೀದಿಯಲ್ಲಿ ಆಡುತ್ತಿದ್ದ  ಗುಂಪಿನ ಹುಡುಗನೊಬ್ಬ ಇದ್ದಕ್ಕಿದ್ದಂತೆ ‘ಅಟೆನ್ಷನ್’ ಎಂದು ಬೊಬ್ಬೆಯಿಟ್ಟ, ಈ ಶಬ್ಧ ಕಿವಿಯ ಮೇಲೆ ಬಿದ್ದ ಕೂಡಲೇ ಹೊರ ಹೊತ್ತ ಸೈನಿಕನು ತನ್ನ ಧೀರ್ಘ ಕಾಲದ ಅಭ್ಯಾಸದಂತೆ  ಕೈ ಕೆಳಗೆ ಬಿಟ್ಟು ಕಾಲಗಳನ್ನು ಜೋಡಿಸಿ ಸೆಲ್ಯೂಟ್ ಹೊಡೆದ ನಂತೆ. ಅವನ ತಲೆಯ ಮೇಲಿದ್ದ ಹೊರೆ ಕೆಳಗೆ ಬಿದ್ದಾಗಲೇ ಅವನಿಗರಿವಾದದ್ದು, ಶಬ್ಧ ಬಂದಿದ್ದು     ಹುಡುಗರ ಆಟದ ಭಾಗವಾಗಿ ಎಂದು. ಹೀಗೆ  “ಹ್ಯಾಬಿಟ್ಸ್ ಡೈ ಹಾರ್ಡ್” ಎಂಬ ಗಾದೆ ಬಹಳ ಶಕ್ತಿಶಾಲಿಯಾದದ್ದು. ಹೇಗೆಂದರೆ ಈ ಮೂರಕ್ಷರದ ಪದವಾದ   ನಿಂದ ಹೆಚ್ ಅಕ್ಷರ ತೆಗೆದರೆ,  ಉಳಿಯುತ್ತದೆ. ಇದರಿಂದ ಎ ತೆಗೆದರೆ, ಮತ್ತೆ ಬಿಟ್ಸ್ ಉಳಿಯುತ್ತದೆ. ಈಗ ಬಿ ಅಕ್ಷರ ತೆಗೆಯಿರಿ, ಆಗಲೂ ಇಟ್ ಅರ್ಥಾತ್ ಅದು ಎಂಬ ಪದ ಉಳಿದಿರುತ್ತದೆ. ಹೀಗೆ ಅಭ್ಯಾಸ ಎಂಬುದು  ಒಮ್ಮೆ ಬೆನ್ನೇರಿದರೆ  ದಮಯ್ಯ, ನನ್ನ ಬಿಡೋ ಮಾರಾಯಾ ಎಂದು ಗೋಗರೆದರೂ ಅವನು ಬಿಡ. 

     ನಮ್ಮಲ್ಲಿನ ಯಾವುದದರೊಂದು ಅಭ್ಯಾಸ, ಅದು ಒಳಿತೋ, ಕೆಟ್ಟದ್ದೋ, ಅದನ್ನು ನಮ್ಮಿಂದ ಹೊರಗಟ್ಟಲು ಅದೆಷ್ಟು ಪ್ರಯತ್ನಪಟ್ಟಷ್ಟೂ ಅದರ ಬೇರು ಅಷ್ಟೋ ಇಷ್ಟೋ ನಮ್ಮಲ್ಲಿ ಉಳಿದೇ ಇರುತ್ತದೆ. ಹೀಗೇನೇ ಈ ಬೆನ್ನಿಗೆ ಬ್ಯಾಗಿನ ಅಭ್ಯಾಸ ನಮ್ಮಲ್ಲಿ ಬಲವಾಗಿ ಬೇರೂರಿರುವ

    ಇಂದಿನ ದಿನಗಳಲ್ಲಲ್ಲಂತೂ ಮನೆಯಿಂದ ಹೊಗೆ ಹೋಗುವವರು, ಅವರು ಶಾಲಾ, ಕಾಲೇಜು ವಿದ್ಯಾರ್ಥಿಗಳೋ, ಸರ್ಕಾರಿ, ಖಾಸಗಿ ಸಂಸ್ಥೆಯ ಉದ್ಯೋಗಿಯೋ, ಲಾಯರ್, ಬ್ಯಾಂಕರ್, ರಿಯಲ್ ಎಸ್ಟೇಟ್ ಉದ್ಯಮ, ವ್ಯಾಪಾರಿಯೋ ಅಥವಾ ಕೈ ಕಸುಬು ಮಾಡುವವರೋ, ಉದಾಹರಣೆಗೆ ಎಲೆಕ್ಟ್ರೀಷಿಯನ್ , ಕಾರ್‌ಪೆಂಟೆರ್, ಪ್ಲಂಬರ್, ಪೈಂಟರ್, ಟೈಲ್ಸ್ ಲೇಯರ್, ಹೀಗೆ ಯಾವುದೇ ಉದ್ಯೋಗದಲ್ಲಿ ಇರುವವರು, ಇವರಷ್ಟೇ ಯಾಕೆ, ಉದ್ಯೋಗ ವಿಮುಕ್ತರು, ವೃದ್ದರೂ ತಮ್ಮ ಅಗತ್ಯಗಳಾದ ಕನ್ನಡಕ, ಪರ್ಸ್, ಕುಡಿಯುವ ನೀರಿನ ಬಾಟಲ್, ಇತ್ಯಾದಿ ಇಟ್ಟುಕೊಳ್ಳಲು  ಬೆನ್ನು ಖಾಲಿ ಇದೆಯಲ್ಲಾ ! ಬಣ ಬಣ ಅಂತಿದೆ ಬೆನ್ನು. ಅದಕ್ಕೇ ಇರಲಿ, ಖಾಲಿ ಇರುವ ಬೆನ್ನಿಗೆ ಒಂದು ‘ಬ್ಯಾಗ’ ಎಂದು ಬೆನ್ನಿಗೆ ಬ್ಯಾಗ್ ಅಂಟಿಸಿಕೊಂಡು  ಹೊರಟಾಗಲೇ ಇವರಿಗೆ ಸಮಾಧಾನ. ಇದು ಹ್ಯಾಬಿಟ್ ನ ಪರಿಣಾಮ.


    

  ಈ ಎಲ್ಲ ಮಿತ್ರರ ಈ ಅಭ್ಯಾಸದ ಕಾರಣ, ‘ಬೆನ್ನಿಗೆ ಬ್ಯಾಗೇ ಭೂಷಣ’ ಮಾಡಿ ಕೊಂಡು ಹೊರಗೆ ಓಡಾಡುವವರನ್ನು ಕಂಡಾಗ ಇವರು ವಿದ್ಯಾರ್ಥಿಯೋ, ಉದ್ಯೋಗಿಯೋ, ಯಾವುದಿವರ ಕಾರ್ಯ ಕ್ಷೇತ್ರ ಎಂಬುದು ಮೇಲ್ನೋಟಕ್ಕೆ ಖಚಿತವಾಗದು. ಮೊದ ಮೊದಲಿಗೆ ಅತ್ಯ ಅಗತ್ಯವೆನಿಸಿದ ಈ ಬೆನ್ನಿಗೆ ಬ್ಯಾಗು, ಕಾಲ ಕ್ರಮೇಣ, ಇದೊಂದು ಭೂಷಣವಾಗಿ ಉಳಿದಿದೆ. ಹೊರಗೆ ಹೊರಡಲು ಅನುವಾದ ವ್ಯಕ್ತಿಗೆ ಬೆನ್ನಿನ ಮೇಲೆ ಬ್ಯಾಗ್ ಇಲ್ಲದಿದ್ದರೆ ಅಯ್ಯೋ ! ಬೆನ್ನು ಅನಾಥವಾಗಿದೆಯಲ್ಲಾ ಎನಿಸಿ,  ಇಲ್ಲಿರಲಿ ಒಂದ್ ಕಾಲಿ ಬ್ಯಾಗ್ ಎಂದು ಬ್ಯಾಗ್ ಬೆನ್ನೇರಿಸಿದ ತಕ್ಷಣವೇ, “ಆಹಾ ! ಎವೆರಿ ಥಿಂಗ್ ಈಸ್ ಆಲ್ ರೈಟ್” ಎಂಬ ಸಮಾಧಾನ ಇವರ ಪಾಲಿನದಾಗುವುದರಲ್ಲಿ ಸಂದೇಹವಿಲ್ಲ.  

     ಇದೆಲ್ಲಾ ಓದಿದ ಮೇಲೆ,  ‘ರವಿ ಆಕಾಶಕೆ ಭೂಷಣಂ’  ಎಂಬಂತೆ ಇಂದು “ಬೆನ್ನಿಗೆ ಬ್ಯಾಗೇ ಭೂಷಣ” ವಾಗಿರುವುದು ನಿಜ ಎನಿಸುವುದಿಲ್ಲವೇ !`


Comments