ಕಾಲಕ್ಕೆ ತಕ್ಕಂತೆ ನಡೆಯಬೇಕು

  ಕಾಲಕ್ಕೆ ತಕ್ಕಂತೆ ನಡೆಯಬೇಕು

  ಲೇಖಕರು : ಎಂ ಅರ್ ವೆಂಕಟರಾಮಯ್ಯ            


      ‘ಕಾಲ ಎಂಬುದು ಬದಲಾವಣೆಯ ಸೂಚಕ ಪದ. ಇನ್ನು ಶೀರ್ಷಿಕೆಯಲ್ಲಿ ಬಳಸಿರುವ “ಕಾಲಕ್ಕೆ ತಕ್ಕಂತೆ ನಡೆಯಬೇಕು” ಎಂಬ ಸಾಲಿನ ಬಗ್ಗೆ ಪರಿಶೀಲಿಸೋಣ.  “ಮುತ್ತಿನಂತಾ ಮಾತೊಂದು ಗೊತ್ತೇನಮ್ಮ, ನಿನಗೆ ಗೊತ್ತೇನಮ್ಮಾ ! ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ನಾವು ತಾಳಕೆ ತಕ್ಕಂತೆ ಕುಣಿಯಬೇಕು” ಎಂಬೀ ಸಾಲುಗಳು ೧೯೭೬ ರಲ್ಲಿ ತೆರೆ ಕಂಡ ‘ಬಹದ್ದೂರ್ ಗಂಡು” ಕನ್ನಡ ಚಲನ ಚಿತ್ರದ್ದಾಗಿದೆ. ಈ ಗೀತೆಯ ಒಂದು ಸಾಲು ಪ್ರಸಕ್ತ ಲೇಖನಕ್ಕೆ ಸಂಬAಧಪಡುವ ಕಾರಣ ಈ ಸಾಲನ್ನು ಬಳಸಿಕೊಳ್ಳಲಾಗಿದೆ.

     ಇನ್ನು ‘ಕಾಲ’ ಬದಲಾವಣೆ’ ವಿಷಯ ಕುರಿತ ಚಿಂತನೆ. ಅhಚಿಟಿge is ಚಿಟಿ iಟಿಣegಡಿಚಿಟ ಠಿಚಿಡಿಣ oಜಿ ಟiಜಿe’ ಎಂದಿದ್ದಾನೆ ಒಬ್ಬ ಆಂಗ್ಲ ಕವಿ, ಬದಲಾವಣೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಬದಲಾವಣೆಗೆ ನಾವು ಹೇಗೆ ಒಗ್ಗಿಕೊಂಡಿದ್ದೇವೆ ಎಂಬುದಕ್ಕೆ ನಮ್ಮ ಜೀವನದ ಚಕ್ರವನ್ನೇ ಗಮನಿಸೋಣ. ಜನ್ಮ ಕಾಲದಲ್ಲಿ ಶಿಶುವಾಗಿದ್ದ ನಾವು ಹಾಗೇಯೇ ಉಳಿದೆವೇ ? ಇಲ್ಲ, ಬಾಲ್ಯ,  ಗೃಹಸ್ಥಾಶ್ರಮ, ವಾನಪ್ರಸ್ತ ಮತ್ತು ಸಂನ್ಯಾಸ ಎಂಬ ಚತುರಾಶ್ರಮಗಳನ್ನೂ ಹಾದು ಪಯಣಿಸುತ್ತೇವಲ್ಲವೇ ? ಅಂದು ನಮ್ಮ ಕಣ್ಣೆದುರಿಗೆ ಜನಿಸಿದ ಮಕ್ಕಳು ಇಂದು ಮಕ್ಕಳಂತೆಯೇ ಉಳಿದಿದ್ದಾರೆಯೇ ? ಇವರು ಬದಲಾಗುತ್ತಿಲ್ವೇ ? 

     ಸಂಸಾರದಲ್ಲಿ ಸದಸ್ಯರು ಸುಖ ನೆಮ್ಮದಿಯಿಂದ ಬದುಕಬೇಕಾದರೆ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಪರಸ್ಪರರಿಗಾಗಿ ಬದಲಾಗುತ್ತಾ ಇರ ಬೇಕಾಗುತ್ತದೆ. 

      ದಿನಗಳು, ವಾರಗಳಾಗಿ, ಮಾಸಗಳಾಗಿ, ಮಾಸಗಳು ವರ್ಷಗಳಾಗಿ, ವರ್ಷಗಳು ದಶ, ಶತ, ಸಹಸ್ತಾರು ವರ್ಷಗಳಾಗಿ ಮುನ್ನಡೆಯುತ್ತಿವೆ. ಋತುಗಳು ಬದಲಾಗುತ್ತಿವೆ, ಗಾಳಿ, ಚಳಿ, ಮಳೆ ಬಿಸಿಲುಗಳು ಒಂದನ್ನೊಂದು ಚಕ್ರದೋಪಾದಿಯಲ್ಲಿ ಸುತ್ತುತ್ತಿವೆ. ಸಸ್ಯಗಳು ಗಿಡಗಳಾಗಿ, ಮರಗಳಾಗಿ, ಇವುಗಳಲ್ಲಿ  ಜನಿಸಿದ್ದ ಹಸಿರು ಎಲೆಗಳು ಕಾಲಾನಂತರದಲ್ಲಿ ಹಣ್ಣೆಲೆಗಳಾಗಿ ನೆಲಕ್ಕೆ ಉದುರುತ್ತಿವೆ.  ಈ ಬದಲಾವಣೆಗಳೆಲ್ಲವೂ ಕಾಲಕ್ಕೆ ತಕ್ಕಂತೆ ನಡೆಯುತ್ತಿವೆ.      

       ಜಗತ್ತಿನಲ್ಲಿ ಇರುವ ಪ್ರತಿಯೊಂದೂ ಹಿಂದಿದ್ದಂತೆ  ಇಂದಿಲ್ಲ, ಇಂದಿರುವಂತೆ ಕೆಲ ಕಾಲದ ನಂತರ ಹೀಗೇ ಇರುವುದಿಲ್ಲ ಅವು ಬದಲಾಗುತ್ತಿರುತ್ತವೆ,. ಹೀಗೆ ಬದಲಾವಣೆ ಎಂಬುದು ಜಗದ ನಿಯಮ. ಪ್ರಕೃತಿ ಧರ್ಮವಾಗಿದೆ.   

   ಜಗತ್ತಿನಲ್ಲಿನ ಪ್ರತಿಯೊಂದೂ ಪ್ರತಿ ನಿಮಿಷವೂ ಬದಲಾಗುತ್ತಿರುವಾಗ ಈ ಜಗತ್ತಿನೊಳಗೇ ಬದುಕುತ್ತಿರುವ ನಾವು ಇದಕ್ಕೆ ಹೊಂದಿಕೊಂಡು ಬದುಕಲು ಬದಲಾಗಬೇಡವೇ ? ನಾವೂ ಬದಲಾಗಬೇಕು. ಬದಲಾವಣೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. 

    ಬದಲಾವಣೆ ಬಗ್ಗೆ ಇಷ್ಟೆಲ್ಲಾ ಮಾತನಾಡಿದ ಮೇಲೆ ಯಾವುದರ ಬಗ್ಗೆ  ಬದಲಾಗಬೇಕು ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ ಎಂದರೆ ಇಂದಿನ ಕಾಲಕ್ಕೆ ತಕ್ಕಂತೆ ನಮ್ಮ ಆಚಾರ, ವಿಚಾರ, ಆಹಾರ, ವಿಹಾರ, ಸಂಪ್ರದಾಯ, ಪದ್ದತಿಗಳನ್ನು ಬದಲಾಯಿಸಿಕೊಳ್ಳದಿದ್ದರೆ ನೆಮ್ಮದಿಯಿಂದ ಬದುಕಲು ಸಾಧ್ಯವೇ ! ? ಈ ದಿಸೆಯಲ್ಲಿ  ಹಲವಾರು ಹಬ್ಬ, ವ್ರತ, ಪೂಜೆ, ದಾನ, ಷೋಡಶ ಸಂಸ್ಕಾರಗಳ ಆಚರಣೆಗಳಿಗೆ  ಸಂಬಂಧಿಸಿದಂತೆ ನಮ್ಮ ಅನುಕೂಲಕ್ಕೆ ತಕ್ಕಂತೆ ಈಗಾಗಲೇ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ಯಾಕೆ ಹೀಗಾದಿರಿ ? ಎಂದು ನಮ್ಮ ಧಾರ್ಮಿಕರು, ಅಧ್ಯಾತ್ಮಿಗಳು ಪ್ರಶ್ನಿಸಿದರೆ, ಸ್ವಾಮಿ, ನಿಮ್ಮ ಶಾಸ್ತç, ಪದ್ದತಿ, ಸಂಪ್ರದಾಯಗಳನ್ನು ರಚಿಸಿಟ್ಟಿದ್ದು ಸಹಸ್ರಾರು ವರ್ಷಗಳ ಹಿಂದೆ. ಆಗಿನ ಸಾಮಾಜಿಕ ವ್ಯವಸ್ಥೆ, ಜನ ಜೀವನ ಪದ್ದತಿ, ಶೈಲಿ, ಇತ್ಯಾದಿಗಳನ್ನು ಪರಿಗಣಿಸಿ ಅವಕ್ಕೆ ಹೊಂದಿಕೊಳ್ಳುವAತೆ ನೀತಿ, ನಿಯಮಗಳನ್ನು ರಚಿಸಿದ್ದಿರಿ, ಆದರೆ  ಇಂದಿರುವ ಸಾಮಾಜಿಕ ವ್ಯವಸ್ಥೆ, ಜೀವನ ಪದ್ದತಿ, ಶೈಲಿಗೆ ಅಂದೆಂದೋ ರಚಿಸಿದ ಶಾಸ್ತ್ರ  ನಿಯಮಗಳು ಫೀಟ್‌ಇನ್ ಆಗುವುದಿಲ,್ಲ. ಅದಕ್ಕಾಗಿಯೇ  “ಕಾಲಕ್ಕೆ ತಕ್ಕಂತೆ ನಡೆಯಬೇಕು” ಎಂಬ ತತ್ವ ಹೇಳುತ್ತಿದ್ದೇವೆ. ನಮ್ಮ ಜೀವನ ರೀತಿಯನ್ನು ಸಮರ್ಥಿಸಿಕೊಂಡು ನಾ ಮಾಡಿದ್ದು ಸರಿ ಎನ್ನುತ್ತಿದ್ದೇವೆ.      

     ಬಹಳಷ್ಟು ಮನೆಗಳಲ್ಲಿ ಅವರ ಹಿಂದಿನ ಹಿರಿಯರು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದ ಧ್ಯಾನ, ಜಪ, ಪೂಜೆ, ವ್ರತ, ದೈವಾರಾಧನೆಗಳನ್ನು ಇಂದಿನ ಪೀಳಿಗೆಯವರು ತ್ಯಜಿಸಿದ್ದಾರೆ. ಜನನದಿಂದ ಮರಣದವರೆಗೆ ಆಚರಿಸಬೇಕಾಗಿದ್ದ ಬಹಳಷ್ಟು ಸಂಸ್ಕಾರಗಳನ್ನು ಹಲವರು, ಏ, ಅವೆಲ್ಲಾ ಔಟ್‌ಡೇಟೆಡ್, ಅರ್ಥಹೀನ, ಈ ಕಾಲದಲ್ಲಿ ಯಾರ್ ಮಾಡೋಕೆ ಆಗುತ್ತೇ ? ಇವು ಈ ಕಾಲಕ್ಕೆ ತಕ್ಕಂತಿಲ್ಲ ಎಂದು ನಿರ್ಲಕ್ಷಿಸಿ ‘ಮೈಟ್ ಈಸ್ ರೈಟ್’ ಎಂದು ಸಮರ್ಥಿಸಿಕೊಳ್ತಿದ್ದಾರೆ.. 

     ಸಮುದ್ರದಾಚೆಗಿನ ದೇಶಗಳಿಗೆ  ಹೋಗಿ ಬರುವುದನ್ನು ಶತಮಾನಗಳ ಹಿಂದೆ ಸನಾತನ ಧರ್ಮ ಕಟ್ಟುನಿಟ್ಟಾಗಿ ನಿಷೇದಿಸಿತ್ತು.  ಆದರೆ ಈಗೇನಾಗಿದೆ ! ಹೆಚ್ಚಿನ ಸಂಖ್ಯೆಯ ವಿದ್ಯಾವಂತ ಕುಟುಂಬಗಳಲ್ಲಿ ಮಗಳೋ, ಮಗನೋ ಹೆಚ್ಚಿನ ವಿದ್ಯಾಭ್ಯಾಸ, ಉದ್ಯೋಗ, ಇತ್ಯಾದಿಗಳ ಕಾರಣವಿಟ್ಟು ಪರದೇಶಕ್ಕೆ ಪಯಣಿಸುತ್ತಿದ್ದಾರೆ. ಅಲ್ಲಿನ ಅನುಕೂಲಗಳಿಗೆ ಮಾರುಹೋಗಿ ಅಲ್ಲಿಯೇ ನೆಲೆಯೂರುತ್ತಿದ್ದಾರೆ. ಆ ಪರದೇಶಗಳಲ್ಲಿನ ನಮ್ಮವರನ್ನು ಏನಯ್ಯಾ,  ನೀ ಯಾಕೆ ಧರ್ಮಾಚರಣೆ ಮಾಡ್ತಿಲ್ಲಾ ? ಎಂದು ಪ್ರಶ್ನಿಸಿದರೆ ರ‍್ರೀ ಸ್ವಾಮಿ, ಇಲ್ಲಿ ಧರ್ಮಾಚರಣೆ ಮಾಡ್ತಾ ಕೂತ್ಕೊಂಡರೆ ನಮ್ಮ ಕರ್ಮ, ಅರ್ಥಾತ್ ಕೆಲಸ ಮಾಡಲು ಸಾಧ್ಯವಿಲ್ಲ, ಅದಕ್ಕೇ ‘ಬೀ ಏ ರೋಮನ್ ವೈಲ್ ಇನ್ ರೋಮ್ ‘ಎಂಬ ಗಾದೇನೇ ಇದೆಯಲ್ಲಾ ! ಹಾಗೇ ನಾವಿರುವ ಈ ನೆಲಕ್ಕೆ ತಕ್ಕಂತೆ ನಡೆಯುತ್ತಿದ್ದೇವೆ ಅಂತಾರೆ ಇವರು. ಇದನ್ನು ಇಲ್ಲಿ ಧರ್ಮಾಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ನಾವು ಸಂಪ್ರದಾAiÀiವಾದಿಗಳು, ಹೌದು, ಪಾಪ, ನಿಜ, ನಿಜ ಎಂದು ನಾವೂ ಅವರ ಮಾತಿಗೆ ಗೋಣಾಡಿಸುತ್ತೇವೆ.    

     ಹೀಗೆ ನಿತ್ಯ ಜೀವನದಲ್ಲಿ ಹಿಂದಿನವರು ಆಚರಿಸುತ್ತಿದ್ದ ಹಲವಾರು ಆಚಾರ, ಪದ್ದತಿ, ಸಂಪ್ರದಾಯಗಳನ್ನು ಇಂದಿನ  ನಾವು ನಮ್ಮ ಅನುಕೂಲಕ್ಕಾಗಿ ‘ಶಾರ್ಟ್ ಕಟ್’ ಮಾಡಿಯೋ ತ್ಯಜಿಸಿಯೋ ಇದ್ದೇವೆ. ‘ಮನಮೇಮ್ ಚೇಸ್ತೆ ಅದಿ ಘನ ಕಾರ್ಯಮ್’ ಎಂಬ ತೆಲುಗಿನ ರೂಢಿಗತ ಮಾತನಾಡುತ್ತಿದ್ದೇವೆ. ಇದನ್ನೇ ‘ವೀ ಕಾನ್ಟ್ ಹೆಲ್ಪಿಟ್’ ಅಂತೀವಿ ಇಂಗ್ಲೀಷಿನಲ್ಲೂ. 

      ಹೀಗೆ ಯಾವುದೋ ಒಂದು ಕಾರಣ, ನೆಪ, ಸಬೂಬು ಒಡ್ಡಿ ಸಾರಾಸಗಟಾಗಿ ಹಿಂದಿನ ಹಲವು ಧಾರ್ಮಿಕ ಆಚರಣೆಗಳನ್ನೂ ಬಿಟ್ಟಿರುವ ನಾವು, ಹಿಂದಿನ ಒಂದು ಧಾರ್ಮಿಕ ಆಚರಣೆಯನ್ನು  ಮಾತ್ರ ಬಲವಾಗಿ ಹಿಡಿದಿಟ್ಟುಕೊಂಡಿದ್ದೇವೆ.  ಇದು ಮಾತ್ರ ಕಟ್ಟುನಿಟ್ಟಾಗೇ ಆಗಬೇಕು ಅಂತ ಕೂಗಾಡ್ತೇವೆ. ತಪ್ಪಿಸಿದವನ ಬಗ್ಗೆ ಖಂಡಿಸ್ತೇವೆ, ಕಟು ಮಾತುಗಳನ್ನಾಡುತ್ತೇವೆ, ಓ, ಇವರಿಂದ ನಮ್ಮ ಧರ್ಮ ಹಾಳಾಯಿತು, ಇವರೆಲ್ಲಾ ಧರ್ಮಭ್ರಷ್ಟರು, ಕರ್ಮಭ್ರಷ್ಟರು ಅಂತಾ ಕೂಗಾಡ್ತೇವೆ, ಸನಾತನ ಧರ್ಮವನ್ನು ನಾವೇ ಗುತ್ತಿಗೇಗೆ ತಗೊಡಂತೆ ಮಾತಾಡ್ತೇವೆ  ನಮ್ಮ ಮನೆಗಳಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಮರೆತುಬಿಡ್ತೇವೆ, . ಯಾವ್ದಪ್ಪಾ ಅದು ಎಂದು ಗೊತ್ತಾಗಲಿಲ್ಲವೇ ! ಅದೇ ಅಂತ್ಯೇಷ್ಠಿ ವಿಚಾರ. 

   ಹಿಂದೆ ಪುರುಷ ಪ್ರಧಾನ ಸಮಾಜವಿತ್ತು.  ಅಡುಗೆ ಮನೆ, ಸಂಸಾರ ನಿರ್ವಹಣೆ ಹೊರುಪಡಿಸಿ ಉಳಿದೆಲ್ಲಾ ವೃತ್ತಿ ಕರ್ಮ ಕಾಯಕಗಳೆಲ್ಲದರಲ್ಲೂ ಪುರುಷರದೇ ಸಿಂಹ ಪಾಲಿತ್ತು.  ಜನನದಿಂದ ಮರಣದವರೆಗಿನ ಎಲ್ಲಾ ಕಾರ್ಯಗಳೂ (ಅರ್ಚಕ, ಪುರೋಹಿತ ವೃತಿಯೂ ಸೇರಿ) ಪುರುಷರದೇ ಆಗಿತ್ತು. ಇವೆಲ್ಲವೂ ಸ್ತ್ರೀಯರಿಗೆ ನಿಷಿದ್ಧ ಎಂಬ  ಬಹಿಷ್ಕಾರ ಹಾಕಲಾಗಿತ್ತು. 



    ಆದರೆ ಇಂದಿನವರ ಮನಸ್ಥಿತಿ ಪೂರ್ತಿಯಾಗಿ ಬದಲಾಗಿದೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಗಾದೆಯಂತೆ ಇಂದು ಹೆಣ್ಣು ಮಾಡದ ಕಾಯಕ, ಕರ್ಮ, ಕೆಲಸವಿಲ್ಲ. ಗೃಹ ನಿರ್ವಹಣೆಯಿಂದ ಹಿಡಿದು, ವೈದ್ಯರು, ಸಿ. ಎ. ಗಳು, ಐ. ಎ. ಎಸ್. ಐ. ಪಿ. ಎಸ್, ಸಾಫ್ಟ್ ವೇರ್ ಎಂಜಿನಿಯರ್ಸ್, ಐ. ಟಿ, ಬಿ. ಟಿ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳು, ರಾಜ್ಯ ಕೇಂದ್ರ ಸರ್ಕಾರದ ಮಂತ್ರಿ ಮಂಡಲಗಳಲ್ಲಿ ಜವಾಬ್ದಾರಿಯುತ ಖಾತೆಗಳ ಸಚಿವರಾಗಿ, ಇತರ ದೇಶಗಳಲ್ಲಿ ನಮ್ಮ  ದೇಶದ ರಾಯಭಾರಿಗಳಾಗಿ, ವಿಜ್ಞಾನಿ, ವಿಮಾನ ಹಾರಿಕೆ, ಭಾರತೀಯ ಸೈನ್ಯದಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ, ಉಪಗ್ರಹಗಳ ಉಡಾವಣೆ, ಉಪಗ್ರಹಗಳ ಮೇಲೆ ಇಳಿದು ಅಲ್ಲಿನ ಡೇಟಾವನ್ನು ಕೆಮರಾಗಳಲ್ಲಿ ಸೆರೆ ಹಿಡಿದು ಭೂಮಿಗೆ ಕಳುಹಿಸುವಿಕೆ ಹೀಗೆ ಮೇಲು, ಕೀಳು, ಗಂಡು ಹೆಣ್ಣು ಎಂ¨ ಬೇಧ ತೋರದೆ ಮಹಿಳೆಯರು ಸಮರ್ಥರಾಗಿ ಕಾರ್ಯ ನಿರ್ವಹಿಸಿ ಒಳ್ಳೆಯ ಹೆಸರನ್ನು ಗಳಿಸಿ, ಮೇಲುಗೈ ಸಾಧಿಸುತ್ತಿರುವುದನ್ನು ನಾವು ಗಮನಿಸಬೇಕು.       

   ಈಗ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಆಸಕ್ತ ಸ್ತ್ರೀಯರಿಗೆ ಸಂಸ್ಕೃತ ಭಾಷೆ, ವೇದ, ಉಪನಿಷತ್ತು, ದೇವತಾರ್ಚನ, ಹೋಮ, ಹವನ ಯಾಗ, ಯಜ್ಞಗಳ ಪಾಠಗಳನ್ನು ಕಲಿಯಲು ಹಲವಾರು ವೇದಿಕೆಗಳು ಲಭ್ಯವಿವೆ. ಇವುಗಳ ಕಲಿತ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇಂದು ಪೌರೋಹಿತ್ಯ ವೃತ್ತಿ ಕಲಿತು ಶ್ರದ್ಧಾಸಕ್ತಿಯ ಕಾರ್ಯಾಚರಣೆಯಿಂದ ನಿರ್ವಹಿಸಿ ನಾವೂ ಸಬಲರೇ, ಅರ್ಹರೇ ಎಂದು ಪುರುಷರಿಗೆ ಸಮಾನರಾಗಿ ನಿಂತಿದ್ದಾರೆ.  ಈ ಬದಲಾವಣೆಗೆ ನಮ್ಮ ಸಮಾಜ ಅಧ್ಯಾತ್ಮಿಕರು, ಧಾರ್ಮಿಕ ಸಂಸ್ಥೆಗಳೂ ಪ್ರತಿರೋಧ ಒಡ್ಡದೆ ತುಂಬು ಹೃದಯದಿಂದ ಸ್ವಾಗತಿಸಿ ಮಹಿಳಾ ಪುರೋಹಿತರಿಗೆ ಪ್ರೋತ್ಸಾಹ ನೀಡಿ, ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಡುತ್ತಿದ್ದಾರೆ. 

    ಇಂದಿನ ತಾಂತ್ರಿಕ, ಯಾಂತ್ರಿಕ, ಶೈಕ್ಷಣಿಕ ಯುಗದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾವಂತರು ಉನ್ನತ ವಿದ್ಯಾಭ್ಯಾಸಕ್ಕಾಗಿಯೋ, ಉತ್ತಮ ಉದ್ಯೋಗಾವಕಾಶಗಳು ದೊರಕಿವೆ ಎಂದೋ ಕಾರಣ ಯಾವುದೋ ಒಂದಕ್ಕೆ ಭಾರತ ಬಿಟ್ಟು ಧೀರ್ಘಕಾಲ ಪರದೇಶಗಲ್ಲಿ ನೆಲೆಸುತ್ತಿದ್ದಾರೆ. ಇವರ ಪೈಕಿ ಬಹು ಸಂಖ್ಯಾತರು ¥ರದೇಶಗಳಲ್ಲಿನ ಆಕರ್ಷಣೀಯ ಸೌಲಭ್ಯ, ಸವಲತ್ತು, ಸೌಕರ್ಯಗಳ ಕಾರಣ ಅಲ್ಲೇ ಶಾಶ್ವತ ನೆಲೆ ಕಾಣುತ್ತಿರುವುದೂ ಗಮನಾರ್ಹವಾಗಿದೆ . ಈ ಹಿನ್ನೆಲೆಯಲ್ಲಿ  ಭಾರತದಲ್ಲಿನ  ಇವರ ವಯೋವೃದ್ಧ ಮಾತಾ ಪಿತರೋ, ಇತರ ಅವಲಂಭಿತರೋ ಮೃತಪಟ್ಟರೆ ಹೆತ್ತ ಪುತ್ರರು ಹತ್ತಿರವಿಲ್ಲದ ಕಾರಣ ಇವರ ಅಂತ್ಯ ಕ್ರಿಯೆ : ಸಂಸ್ಕಾರಗಳನ್ನು ಮುಗಿಸಲು ಕುಟುಂಬದ ಸದಸ್ಯರು ಬಹಳ ಪರದಾಡುವಂತಾಗಿದೆ, ಬಹಳಷ್ಟು ಪ್ರಸಂಗಗಳಲ್ಲಿ ಪರದೇಶದಲ್ಲಿರುವ ತಮ್ಮ ಪುತ್ರನನ್ನು ಇಲ್ಲಿಗೆ ಬರಲು ಸಂದೇಶ ಕಳುಹಿಸುವುದು, ಅತ್ತಣ ಸದಸ್ಯರಿಗೆ  ಹೆಚ್ಚಿನ ತುರ್ತು ಕೆಲಸಗಳಿವೆ, ರಜೆ ಸಿಗುತ್ತಿಲ್ಲ ಎಂದೋ, ಫ್ಲೈಟ್ ಸಿಗುತ್ತಿಲ್ಲ ಎಂದೋ, ಏನೋ ಒಂದು ಕಾರಣಕ್ಕಾಗಿ ಅವರು ಇಲ್ಲಿಗೆ ಬರಲಾಗದೆ, ಇಲ್ಲಿನವರು, ಮೃತರ ಕಾರ್ಯಗಳನ್ನು ನಡೆಸಲು ೨-೩ ದಿನಗಳು ಕಾದು, ನಂತರ, ಇವರನ್ನು ಹೊರಲು ಆ ಮಗ ಬರಲಿಲ್ಲ,  ಯಾರಾದರೂ ಇವನ ಅಂತ್ಯ ಕ್ರಿಯೆ ಮುಗಿಸರಪ್ಪಾ, ದಮ್ಮಯ್ಯ, ನೀವು ಕೇಳಿದಷ್ಟು ಹಣ ಕೊಡತೇವೆ ಎಂದು ಮೃತರ ಕುಟುಂಬ ತಮ್ಮ ಅತೀವ ದುಃಖದ ನಡುವೆಯೇ ಹಾಜರಿದ್ದ ಬಂಧುಗಳನ್ನು ಗೋಗರೆಯುತ್ತಿರುವ, ಮನ ನೋಯಿಸುವ ನುಡಿಗಳು\ದೃಶ್ಯಗಳು ಹೆಚ್ಚಾಗಿ ಕಂಡುಬರುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. 

      ಇದೇ ಸಮಸ್ಯೆಯ ಮತ್ತೊಂದು ಮುಖ ಎಂದರೆ ಸಂತಾನ ರಹಿತರೋ, ಗಂಡು ಸಂತಾನ ಪಡೆಯದೆ ಹೆಣ್ಣನ್ನೇ ಹೆತ್ತ ಕುಟುಂಬಗಳದ್ದು. ಈ ಕುಟುಂಬಗಳ ಹಿರಿಯರು ‘ಅಪುತ್ರಸ್ಯ ಗತಿ ರ್ನಾಸ್ತಿ ಎಂದಿದೆ ನಮ್ಮ ಶಾಸ್ತ್ರಗಳು. ನಮ್ಮ ಅಂತ್ಯಕಾಲ ಬಂದಾಗ ಯಾರಪ್ಪಾ ನಮ್ಮನ್ನು ಹೊತ್ತು ಹಾಕ್ತಾರೆ ? ನಮಗೆ ಗತಿ ಕಾಣಿಸುವವರು ಯಾರು  ! ಎಂದು ಕೊರಗುತ್ತಿರುವವರು.  ಹೆಣ್ಣು ಸಂತಾನ ಹೊಂದಿದವರು ತಮ್ಮ ಅಳಿಯ ಆತನದೇ ಆದ ಯಾವುದೋ ಕಾರಣಕ್ಕೆ ನಮ್ಮ ಅಂತ್ಯಕ್ರಿಯೆ ನಡೆಸಲು ಮುಂದಾಗುವುದಿಲ್ಲ. ಅಕಸ್ಮಾತ್ ಆತನಿಗೆ ಇದಕ್ಕೆ ಮುಂದಾಗುವ ಮನವಿದ್ದರೂ ಈತನ ಅಪ್ಪ ಅಮ್ಮ ಜೀವಂತವಾಗಿದ್ದಾರೆ. ಕಾರಣ ಅವ ನಮ್ಮನ್ನು ಮುಟ್ಟುವ ಹಾಗಿಲ್ಲ. ಹೋಗ್ಲಿ.  ನಾವು ಹೆತ್ತ ಮಗಳೇ ನಮ್ಮ ಕ್ರಿಯೆಗಳಿಗೆ ಮುಂದಾಗತಾಳೇನೋ ಎಂದರೆ ಅವಳಿಗೆ ಆಸಕ್ತಿ ಇದೆ.  ಆದರೆ ರುದ್ರ ಭೂಮಿಗೆ ಹೆಣ್ಣು ಹೋಗುವಂತಿಲ್ಲ ಎಂದಿದೆಯಲ್ಲಾ ನಮ್ಮ ಶಾಸ್ತçಗಳು, ಶಾಸ್ತಿçಗಳು, ಆಚಾರರು. ಅಕಸ್ಮಾತ್ ಮಗಳು ಶಾಸ್ತç ಉಲ್ಲಂಘಿಸಿದರೂ ಅವರ ಪತಿ, ಅತ್ತೆ ಮನೆಯವರು ಸುಮ್ಮನಿರುತ್ತಾರೆಯೇ  ? ಇವಳನ್ನು ಹುರಿದು ತಿಂದುಬಿಡ್ತಾರಷ್ಟೇ ಎಂಬ ಹೆದರಿಕೆ. ಈ ಹಿನ್ನೆಲೆಯಲ್ಲಿ ಗಂಡು ಸಂತಾನ ಹೊಂದದ ಮಾತಾ ಪಿತೃಗಳು ತಮ್ಮ ಅಂತ್ಯ ಕ್ರಿಯೆ ಯಾರಿಂದ ? ಯಾರಿಂದ ? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ  ತಮ್ಮ ಬಂಧುಗಳತ್ತ ದೈನಾಸಿ ದೃಷ್ಟಿ ಬೀರುವ ದುಸ್ಥಿತಿ ಕಾಣುತ್ತಿದ್ದೇವೆ. ಜೀವಂತವಾಗಿರುವಾಗಲೇ ಮೃತರಾದವರಂತೆ ಕೊರಗುತ್ತಿರುವ ಈ ವರ್ಗದ  ನತದೃಷ್ಟರಿಗೆ ನೆರವು ನೀಡುವವರು ಯಾರು ?.  

     ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಮ್ಮ ಸುತ್ತಲಿರುವ ಜನ, ಸಮಾಜ ಕಾಲಕ್ಕ ತಕ್ಕಂತೆ ಬದಲಾಗಬೇಕಾದದ್ದು ಅನಿವಾರ್ಯವಾಗಿದೆ. ಯುಗಗಳ ಹಿಂದೆ ರಚಿಸಿಟ್ಟ ಶಾಸ್ತç ಸಂಪ್ರದಾಯ ಪದ್ದತಿಗಳನ್ನೇ ಇಂದಿನ ಕಾಲ ಘಟ್ಟದಲ್ಲೂ ವಿದ್ಯಾವಂತ ಜನ ಹಿಡಿದು ನೇತಾಡದೆ, ಮಾನವೀಯತೆಗೆ ಪ್ರಾಮುಖ್ಯತೆ ನೀಡಬೇಕು. ಯಾವುದೇ ಕಾರ್ಯಕ್ಕೂ ಹೆಣ್ಣು ಗಂಡೆಂಬ ಬೇಧ ತೊರೆಯಬೇಕು. ಪುತ್ರನಂತೇನೇ ಎಲ್ಲಾ ಪ್ರೋತ್ಸಾಹ, ಸವಲತ್ತು ಸೌಕರ್ಯ ನೀಡಿ ವಿದ್ಯೆ, ಬುದ್ದಿ, ಆಸ್ತಿ, ಎಲ್ಲಾ ನೀಡಿ ಬೆಳೆಸಿದ ಪುತ್ರಿಗೂ ಪುತ್ರನಷ್ಟೇ ಎಲ್ಲಾ ಕಾರ್ಯಗಳಲ್ಲೂ ಸಂಪೂರ್ಣ, ಸಮಾನ ಹಕ್ಕಿರುವುದನ್ನು ಸಮಾಜ ನೆನಪಿಟ್ಟುಕೊಳ್ಳಬೇಕು.

     ಇದೇ ಸಂಧರ್ಭ ದಲ್ಲಿ ಭಾರತೀಯ ನಾಗರಿಕರಾದ ನಾವು ಪೂರ್ವಗ್ರಹ ಪೀಡಿತರಾಗದೆ  ಮುಕ್ತ ಮನಸ್ಸಿನಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಜಾತಿ, ಧರ್ಮ, ಲಿಂಗ ಬೇಧ : ತಾರತಮ್ಯ  ತರದೆ ಈ ನೆಲದ  ಕಾನೂನಿನ ಅಡಿ ಎಲ್ಲರೂ ಸಮಾನರು ಎಂಬ ಸತ್ಯವನ್ನು ಸಾರಬೇಕು. ನಮ್ಮನ್ನು ಹೊತ್ತು ಹೆತ್ತು ಪಾಲಿಸಿ ಪೋಷಿಸಿದವರನ್ನು ಅವರ ಅಂತ್ಯಕಾಲದಲ್ಲಿ ದುಃಖಿಸಲು ಅವಕಾಶಕೊಡದೆ ನೆರವಿಗೆ ಮುಂದಾಗಬೇಕು. ಇದು ಗಂಡು ಮಾಡುವ ಕೆಲಸ, ಇಲ್ಲಿ ಹೆಣ್ಣೆಗೆ ಅವಕಾಶವಿಲ್ಲ ಎಂದು ಅಡ್ಡಿಪಡಿಸುವವರನ್ನು ಕಾನೂನಿನ ಅನ್ವಯ ಉಗ್ರ ಶಿಕ್ಷೆಗೆ  ಗುರಿಪಡಿಸಬೇಕು.. 

    ಇಷ್ಟೆಲ್ಲಾ ಚರ್ಚೆ ಮಾಡಿದಾಗ್ಯೂ  ನಮ್ಮ ಸಮಾಜದಲ್ಲಿನ ಬಹು ಸಂಕುಚಿತ : ದುಷ್ಟ ಬುದ್ದಿಯ ಜನ ಸ್ತ್ರೀ ಯರು ಅಂತ್ಯೇಷ್ಟಿಯAತಹಾ ಅಶುಭ ಕಾರ್ಯಕ್ಕೆ ಮುಂದಾಗುವ ಹಾಗಿಲ್ಲ ಇದು ಆಕೆಗೇ ಅಶುಭ,  ಇಂದಿನ ಕಾಲದಲ್ಲೇ ಆಗಲಿ ಇಂತಹಾ ಅಮಂಗಳ ಕಾರ್ಯಕ್ಕೆ ಇದುವರೆಗೆ ಯಾರಾದರೂ ಮುಂದಾಗಿದ್ದಾರಾ ? ಇದ್ರೆ ತೋರಿಸಿ ಎಂಬ ಕುತರ್ಕವಾದ ಮಂಡಿಸುವವರ  ಮಾಹಿತಿಗಾಗಿ ಇಲ್ಲಿದೆ ಇತ್ತೀಚಿನ ಕಾಲದಲ್ಲೇ ನಡೆದಿರುವ ಹಲವು ಉದಾಹರಣೆಗಳು :

   ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕೆಲವು ಅಭಾಗ್ಯ  ಸ್ತ್ರೀ ಯರು    ಹಲವು ವರ್ಷಗಳಿಂದಲೂ ರುದ್ರ ಭೂಮಿಗಳಲ್ಲೇ ವಾಸಿಸಿ ಅಲ್ಲಿನ ಕೆಲಸವನ್ನು ನಿರ್ವಹಿಸುತ್ತಾ ತಮ್ಮ ಜೀವನ ನಡೆಸುವ ಜೊತೆಗೆ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನೂ ಕೊಡಿಸಿ ಅವರಿಗೆ ವಿವಾಹ ಮಾಡಿಸಿದ  ಸ್ತ್ರೀಯರಿದ್ದಾರೆ. 

     ನಾವು ಹೆಣ್ಣು ಮಕ್ಕಳಾದರೇನು  ? ಗಂಡು ಮಕ್ಕಳ ಅಮ್ಮ, ಅಪ್ಪ, ನಮಗೂ ಅಮ್ಮ,  ಅಪ್ಪನೇ, ನಮ್ಮ ಪತಿಯ ಹಿರಿಯರು ನಮಗೂ ಹಿರಿಯರೇ ಅಲ್ಲವೇ ? ಎಂಬ ದಿಟ್ಟ ನಿಲುವು ತಳೆದು, ಹಿರಿಯರ ಮೃತ ದೇಹಗಳನ್ನು ರುದ್ರ ಭೂಮಿಗೆ ಹೊತ್ತು  ಅವರ ಅಂತ್ಯ ಕ್ರಿಯೆಗಳನ್ನು ಮುಗಿಸಿದ ದಿಟ್ಟ  ಆದರ್ಶ ಸ್ತ್ರೀಯರಿದ್ದಾರೆ.   

     ಆಂಧ್ರ ಪ್ರದೇಶದ ವಿಶಾಖಪಟ್ಟಣದ ಅನಕಪಲ್ಲಿಯÀ ೪೫ ವರ್ಷ ವಯಸ್ಸಿನ ಮಹಿಳೆಯ (ಗೌಪ್ಯ ಕಾರಣಕ್ಕಾಗಿ ಇಂತಹವರ ಹೆಸರನ್ನು ಉಲ್ಲೇಖಿಸಿಲ್ಲ) ಪತಿ ನಿಧನರಾದ ಮೇಲೆ ನಾಲ್ಕು ಮಕ್ಕಳ ಹೊಟ್ಟ, ಬಟ್ಟೆ ನಿಭಾಯಿಸಬೇಕಾದ ಹೊಣೆ ಹೆಗಲ ಮೇಲಿತ್ತು. ಪತಿ ನಿರ್ವಹಿಸುತ್ತಿದ್ದ ರುದ್ರಭೂಮಿಯಲ್ಲಿನ ಕೆಲಸ ನಿರ್ವಹಣೆಗೆ ಈಕೆ ಮುಂದಾದರು. ಈಕೆಯ ಹಲವು ಬಂಧುಗಳು ಈ ಕೆಲಸಕ್ಕೆ ಈಕೆ ಬರುವುದನ್ನು ತೀವ್ರವಾಗಿ ಆಕ್ಷೇಪಿಸಿ ಖಂಡಿಸಿದ್ದರೂ ಕೆಲಸಗಳಲ್ಲಿ ಇದು ಗಂಡಿನ ಕೆಲಸ, ಇದು ಹೆಣ್ಣಿನ ಕೆಲಸ ಎಂಬ ಯಾವ ಬೇಧವೂ ಇಲ್ಲ, ಯಾರು, ಯಾವ ಕೆಲಸವನ್ನು ಬೇಕಾದರೂ ಮಾಡಬಹುದು, ನಮ್ಮ ಕುಟುಂಬದ ಐವರ ಜೀವನ ನಿರ್ವಹಣೆಗೆ ನೆರವು ನೀಡದವರಿಗೆ ನಮ್ಮನ್ನು ಆಕ್ಷೇಪಿಸಲು ಹಕ್ಕಿಲ್ಲ ಎಂಬ ಮಾತುಗಳಲ್ಲಿ ಜನರ ಬಾಯಿ ಮುಚ್ಚಿಸಿ, ರುದ್ರಭೂಮಿಯಲ್ಲಿನ ಕೆಲಸ ಕೈಗೆತ್ತಿಕೊಂಡರು. ಇದರಿಂದ ಬಂದ ಅಲ್ಪ ಆದಾಯದಿಂದಲೇ ಜೀವನ ನಿರ್ವಹಿಸುವುದರ ಜೊತೆಗೆ ಮಕ್ಕಳನ್ನು ಒಳ್ಳೆಯ ಸ್ಥಿತಿಗೆ ತಂದರು. ಹೆಣ್ಣು ಮಕ್ಕಳಿಗೆ ವಿವಾಹ ಮಾಡಿ ಅವರಿಗೆ ಆಸರೆ ತೋರಿಸಿದ್ದಾರೆ ಎಂದರೆ ಇದೇನು ಸಾಮಾನ್ಯ ಸಾಧನೆಯೇ ! 

    ಉನ್ನತ ವಿದ್ಯಾಭ್ಯಾಸ ಪಡೆದು ಸಾವಿರಗಳ ಗಟ್ಟಲೆ ಸಂಬಳ ಪಡೆಯುತ್ತಿರುವವರೂ ತಮ್ಮ ಹೊಣೆ ನಿಭಾಯಿಸಲು ತಿಣುಕುತ್ತಿರುವ ಈ ಕಾಲದಲ್ಲಿ ಈ ಆದರ್ಶ ಮಹಿಳೆಯ ಈ ಸಾಧನೆ ಅಸಾಮಾನ್ಯ ಎನ್ನಲೇಬೇಕಾಗುತ್ತದೆ. “ಈ ಕೆಲಸ ಗಂಡಿಗೆ, ಈ ಕೆಲಸ ಹೆಣ್ಣಿಗೆ” ಎಂದು ಕಟ್ಟುನಿಟ್ಟಿನ ಗೆರೆ ಎಳೆದ ನಮ್ಮ ಸನಾತನ ಧವið, ಶಾಸ್ತçಗಳಾವುವೂ ಈ ಮಹಿಳೆಯ  ನೆರವಿಗೆ ಬರದೆ ಇದ್ದಿದ್ದು ಮಾತ್ರ ವಿಷಾದನೀಯ.  

       ಈ  ಮಹಿಳೆಯ  ದೈರ್ಯ ದೃಢ ಮಸ್ಸಿನ ಸಂಕಲ್ಪಗಳಿAದ ಪ್ರೇರಿತರಾದ ಮತ್ತಿಬ್ಬರು ಮಹಿಳೆಯರು ಕಳೆದ ೩ ವರ್ಷಗಳಿಂದ ಅರಿಲೋವ ಹಿಂದು ಸ್ಮಶಾನ ವಾಟಿಕದಲ್ಲಿ, ಮತ್ತೊಬ್ಬ ಮಹಿಳೆ ಕಳೆದ ಎರಡು ವರ್ಷಗಳಿಂದ ಸಿಖ್ ಸಿಮೆಟ್ರಿಯಲ್ಲಿ ಕೆಲಸ ನಿಭಾಯಿಸುತ್ತಿದ್ದಾರೆ. 

    ಇವರಿಂದ  ಪ್ರಭಾವಿತರಾದ ಮತ್ತೊಬ್ಬ ಮಹಿಳೆ ಸಹಾ ಗುರುದ್ವಾರದ ಜಂಕ್ಷನ್ ಹತ್ತಿರದ  ರುದ್ರಭೂಮಿಯಲ್ಲಿ ಕೆಲಸ ನಿರ್ವಸುತ್ತಿದ್ದರೆ, 

    ಚೆನ್ನೈ  ನಗರದಲ್ಲಿನ ಅತ್ಯಂತ ಹಳೆಯ ಮತ್ತು ಜನ ನಿಬಿಡವಾದ ಶವಾಗಾರಗಳಲ್ಲಿ ೩೪ ವರ್ಷದ ಮಹಿಳೆ ಕಾರ್ಯ ನಿರ್ವಹಿಸುತ್ತಿರುವುದು ತಿಳಿದುಬಂದಿದೆ. ಈ ಅಭಾಗ್ಯರ ಈ ದುಸ್ಥಿತಿಗೆ ಜೀವಂತವಾಗಿರುವ ಸಮಾಜ ಸಹಾನುಭೂತಿ ತೋರದಿದ್ದರೂ, ಇಲ್ಲಿರುವ ನಿರ್ಜೀವ, ಅಸಹಾಯಕ ಆತ್ಮಗಳು ಇವರ ದುರ್ಗತಿಗಾಗಿ ಮರುಕ ಪಡಬಹುದೇನೋ  ಎನಿಸುತ್ತದೆ.

    ಇವರುಗಳ ನಿತ್ಯದ ಕೆಲಸವೆಂದರೆ ಸಮಾಧಿಗೆ ಗುಣಿ\ ಹಳ್ಳ ತೋಡು\ಅಗೆಯುವುದು, ಸುಡಲು ಸೌದೆ ಮೊದಲಾದ ಇಂಧನ ಸಾಮಗ್ರಿ ಹೊಂದಿಸುವುದು, ಮೃತರ ಬಂಧುಗಳು ಹೊರಟುಹೋದ ಮೇಲೆ ಅವರು ಅಲ್ಲಿ ಬಿಟ್ಟುಹೋದ ಅಪ್ರಯೋಜಕ ವಸ್ತುಗಳನ್ಮು ದೂರಮಾಡುವ, ಇತ್ಯಾದಿ ಕೆಲಸಗಳು ಇವರದಾಗಿರುತ್ತದೆ.    

     “ನಮ್ಮದು ನಾಗರಿಕ ಸಮಾಜ ಎಂದೆಲ್ಲಾ ಎದೆಯುಬ್ಬಿಸಿ ಹೇಳಿಕೊಳ್ಳುವ ಜನ, ಸರ್ಕಾರಗಳೂ ಈ ದುರದೃಷ್ಟ  ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡದಿರುವ ವರ್ತನೆಯನ್ನು ಯಾವ ಮಾತುಗಳಿಂದ ಖಂಡಿಸಬಹುದಾಗಿದೆ !      

    ಇದುವರೆಗಿನ ಪ್ರಸಂಗಗಳು  ಬಹಳ ಹಿಂದೆಯೇ ಮಾಧ್ಯಮಗಳಲ್ಲಿ ವರದಿಯಾಗಿದ್ದು  ಸ್ತ್ರೀ ಯರು ರುದ್ರ ಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಷಯಗಳಿಗೆ ಸಂಬಂಧಿಸಿತ್ತು. ಆದರೆ ಹೆತ್ತವರದೋ ಕೈ ಹಿಡಿದ  ಪತಿಯದೋ ಮೃತ ದೇಹದ ಅಂತ್ಯಕ್ರಿಯೆಯನ್ನು ನಡೆಸಿ ಮಾನವೀಯತೆ ಮೆರೆದ  ದಿಟ್ಟ ಧೀರ ಮಹಿಳೆಯರ ಕೆಲವು ಉದಾಹರಣೆಗಳು ಹೀಗಿವೆ :

    ಭೂಪಾಲ್‌ನಲ್ಲಿ ನಾಲ್ವರು ಪುತ್ರಿಯರು ತಂದೆಯ ಅಂತ್ಯ ಕರ್ಮಗಳನ್ನು ನಡೆಸಿದ್ದು ಮಾಧ್ಯಮಗಳಲ್ಲಿ ವರದಿಯಾಯಿತು. 

    ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂತಹುದೇ ಕಾರ್ಯಕ್ರಮಕ್ಕೆ ಮಹಿಳೆಯರು ಮುಂದಾದಾಗ ಅಲ್ಲಿನ ಪುರೋಹಿತ ವರ್ಗ ಇದಕ್ಕೆ ತಮ್ಮ ನೆರವಿಲ್ಲ ಎಂದಾಗ ಪುತ್ರಿಯರು ಧೈರ್ಯ ವಹಿಸಿ ಬೇರೊಬ್ಬ ಪುರೋಹಿತರ ನೆರವಿನಿಂದ ಕಾರ್ಯ ಮುಗಿಸಿದರಂತೆ. 

     ಪದ್ಮಶ್ರೀ ಪ್ರಶಸ್ತಿ ವಿಜೇತೆ, ಪ್ರಸಿದ್ಧ ನೃತ್ಯ ಪಟು ಎಂದೇ ಹೆಸರು ಗಳಿಸಿದ್ದ ಮೃನಾಳಿನಿ  ಸರಾಭಾಯ್ ನಿಧನರಾದಾಗ,  ದೇಶದ ಉತ್ತಮ ನೃತ್ಯಗಾರ್ತಿ ಎಂದೇ ಪ್ರಖ್ಯಾತರಾದ ಇವರ ಪುತ್ರಿ ಮಲ್ಲಿಕಾ ಸರಾಭಾಯ್ ತಮ್ಮ ಸೋದರ ಕಾರ್ತಿಕೇಯನೊಡನೆ ತಾಯಿಯ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ ಘಟನೆ ಕೆಲವೇ ವರ್ಷಗಳ ಹಿಂದೆ ಮಾಧ್ಯಮದಲ್ಲಿ ವರದಿಯಾಯಿತು. 

     ಮಹಾರಾಷ್ಟç ವಿಧಾನ ಸಭೆಯ ಸದಸ್ಯರಾಗಿದ್ದ  ಮಹನೀಯರೊಬ್ಬರು ನಿಧನರಾದಾಗ ಇವರ ಪುತ್ರಿ ತಂದೆಯ ಪಾರ್ಥಿವ ಶರೀರಕ್ಕೆ ಅಂತ್ಯ  ಕ್ರಿಯಗಳನ್ನು ನಡೆಸಿದ ಸುದ್ಧಿ ಟಿ. ವಿ. ಯಲ್ಲಿ ಭಿತ್ತರಗೊಂಡಿತ್ತು. 

     ಮಾಜಿ ಪ್ರಧಾನಿಯೊಬ್ಬರು ನಿಧನರಾದಾಗ ಇವರ ಸಾಕು ಮಗಳು ಸಮಾಜ ತಮ್ಮನ್ನು ಏನೆಂದು ಆಕ್ಷೇಪಿಸುತ್ತದೆ ಎಂಬುದನ್ನು ಲೆಕ್ಕಿಸದೆ  ತಂದೆಯ ಮೃತ ದೇಹಕ್ಕೆ ತಾವೇ ಅಗ್ನಿ ಸ್ಪರ್ಶ ಮಾಡಿದ್ದು ೨೦೧೮ ರ ಪ್ರಸಂಗ. “ಹಿಂದು ಧವiðದ ರಕ್ಷಕರು ತಾವೇ” ಎಂದು ಬಿಂಬಿಸಿಕೊಳ್ಳುವ ಅಲ್ಲೊಬ್ಬ ಇಲ್ಲೊಬ್ಬ ಗಂಡಸರು, ಇದು ಮಹಿಳೆಯರು ಮಾಡಬಾರದ ಕೆಲಸ ಮಾಡಬಾರದ್ದು ಮಾಡದರೆ ಆಗಬಾರದ್ದು ಆಗುತ್ತೆ’ ಎಂಬೆಲ್ಲಾ ಕಟು ವಾಕ್ಯಗಳಿಂದ ಖಂಡಿಸಿ ಪಿಸುಗಟ್ಟಿಕೊಂಡರೂ,  ಗಟ್ಟಿಯಾಗಿ ಧ್ವನಿ ಎತ್ತಲು ಇವರಿಗೆ ಉಸುರಿರಲಿಲ್ಲ. 

     ಇಂತಹುದೇ  ಮತ್ತೊಂದು ಉದಾಹರಣೆಯಲ್ಲಿ ಮಹಿಳೆಯರು ದಹನ ವಿಧಿಗಳಲ್ಲಿ ಭಾಗವಹಿಸುವುದನ್ನು ಹಿಂದು ಧವið ಶಾಸ್ತçಗಳು ನಿಷೇಧಿಸಿದ್ದರೂ, ನೆರೆಹೊರೆಯವರು ಇದನ್ನು ಆಕ್ಷೇಪಿಸಿದರೂ ಇದ್ಯಾವುದನ್ನೂ ಲೆಕ್ಕಿಸದೆ ಮಹಾರಾಷ್ಟçದಲ್ಲಿನ ಒಂದು ಕುಟುಂಬದಲ್ಲಿ ಅತ್ತೆ ಸತ್ತಾಗ,  ಈಕೆಯ ನಾಲ್ವರು ಸೊಸೆಯರು  ಅತ್ತೆಯ ಅಲಂಕರಿಸಿದ ಶವಪೆಟ್ಟಿಗೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ರುದ್ರ ಭೂಮಿಗೆ ತೆರಳಿ ದಹನ ಕಾರ್ಯಗಳನ್ನು ನೆರವೇರಿಸಿದ್ದು ನಾ ಕೇಳೀದ ಮಾಹಿತಿ..    

     ಆಗಸ್ಟ್ ೮ ರ  ೨೦೨೦ ರ ಲೇಟೆಸ್ಟ್ ಸುದ್ಧಿ- ಬೆಳಗಾವಿಯ  ಒಂದು ಗ್ರಾಮದಲ್ಲಿನ ೮೦ ವರ್ಷದ ಅನಾಥ ವೃದ್ದೆಯ ಅಂತ್ಯ ಸಂಸ್ಕಾರಕ್ಕೆ ಯಾರೂ ಮುಂದೆ ಬರದಾಗ ಮಾಹಿತಿ ತಿಳಿದ ಬೆಳಗಾವಿಯ ಸೇವಾ ಮನೋಭಾವ ಉಳ್ಳ ಪರೋಪಕಾರಿ ಮಹಿಳೆಯರೇ ಇರುವ  ‘ಹೆಲ್ಪ್ ಫಾರ್ ನೀಡ್’ ಹೆಸರಿನ ಸಂಘವು ವೃದ್ದೆಯ ಮೃತ ದೇಹವನ್ನು ಸ್ಮಶಾನಕ್ಕೆ  ಸಾಗಿಸಿದ್ದೇ ಅಲ್ಲದೆ, ಅಂತ್ಯ ಸಂಸ್ಕಾರವನ್ನೂ ಮುಗಿಸಿದ್ದು ಮಹತ್ತರ, ಪ್ರಶಂಸನೀಯ ವಿಷಯವಾಗಿದೆ. ಈ ಸಂಘದ ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿನ ಎಲ್ಲಾ ಮಹಿಳೆಯರ ಪತಿ, ಮಕ್ಕಳು, ಕುಟುಂಬಗಳ  ಎಲ್ಲಾ ಸದಸ್ಯರೂ  ಈ ಮಹಿಳೆಯರ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರಂತೆ. ಮಾನವೀಯತೆಯೇ ಮೂರ್ತಿವೆತ್ತ  ಇಂತಹಾ ಆದರ್ಶ ಸಂಘ ಹಾಗೂ ಇದರ ಮಹಿಳಾ ಸದಸ್ಯರು, ಇವರುಗಳ ಕುಟುಂಬದವರೂ  ನಮ್ಮ ನಡುವೆಯೇ ಇದ್ದಾರೆ ಎಂದರೆ ಇವರ ಘನ ಕಾರ್ಯವನ್ನು ಯಾವ ಮಾತುಗಳಲ್ಲಿ ಪ್ರಶಂಸಿಸೋಣ !  ? ಹ್ಯಾಟ್ಸ್ ಆಫ್ ಟು ದೆಮ್, ಮೇ ದೇರ್ ಟ್ರೆöÊಬ್ ಇನ್ ಕ್ರೀಸ್’ ಎಂಬ ಸ್ತುತ್ಯಾರ್ಹ ಪದಗಳು ಏನೇನೂ ಸಾಲದು ಎನಿಸಬಹುದಲ್ಲವೇ ! 

  ಇದುವರೆಗೂ ತಿಳಸಿದ  ಪ್ರಕರಣಗಳು ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಬಹು ವೇಗವಾಗಿ ಆಗುತ್ತಿರುವ ಕ್ರಾಂತಿಕಾರಿ ಬದಲಾವಣೆಗಳನ್ನು ಸಶಕ್ತವಾಗಿ ಚಿತ್ರಿಸಿವೆ. 

“We love customs, we love creating customs, tying ourselves with them, living in fear of breaking them, not stopping at that, we lace them with egos, power play & rules, setting ourselves up in this matrix of bondage, we  then crave for freedom, BONDAGE THY NAME IS HUMAN”  ಎಂದಿರುವ ಒಬ್ಬ ಪ್ರಸಿದ್ಧ ಬರಹಗಾರರ ಈ ಮಾತುಗಳು ಸರ್ವಕಾಲಿಕ ಸತ್ಯ ಎನಿಸುತ್ತಿಲ್ಲವೇ !  ನಮ್ಮ ಇಂದಿನ ಪಾಡು ಹೇಗಿದೆ ಎಂದರೆ ನಾವು ನವ ನವೀನ ಆಧುನಿಕರೂ ಅಲ್ಲ, ಕಟ್ಟಾ ಸಂಪ್ರ ದಾಯವಾದಿಗಳೂ ಅಲ್ಲ,  ಆಸ್ತಿಕರಲ್ಲ ಎನ್ನಲು ಧೈರ್ಯವಿಲ್ಲ, ನಾಸ್ತಿಕರು ಎನ್ನಲು ಮನ, ಮನೆಯವರು ಒಪೊಲ್ಲ, ಒಂದು ತರಹಾ ಎಡಬಿಡಂಗಿಗಳAತಾಗಿದ್ದೇವೆ ಎಂದರೆ ಮಾತು ತಪ್ಪಾಗಲಾರದೇನೋ ಎನಿಸುತ್ತಿದೆ.  

    ಇದೆಲ್ಲಾ ಹೇಗಿದೆ ಎಂದರೆ ನಮ್ಮ ಕಾಲಿಗೆ ನಾವೇ ಹಗ್ಗ ಬಿಗಿದುಕೊಂಡು ಅಯ್ಯೋ,  ನಮ್ಮನ್ನು ಯಾರೋ  ಬಂಧಿಸಿ ದ್ದಾರೆ, ದಯವಿಟ್ಟು ಬಿಡಿಸಿ, ಸ್ವತಂತ್ರವಾಗಿಸಿ ಎಂದು ಗೊಳಾಡುತ್ತಿರುವಂತಾಗಿದೆ. ನಮ್ಮ ಸ್ವಯಂಕೃತ ಅಪರಾಧಕ್ಕೆ ನಾವೇ ಶಿಕ್ಷೆ. ವಿಧಿಸಿಕೊಳ್ಳುತ್ತಿದ್ದೇವೆ.

    ಕುಟುಂಬಗಳಲ್ಲಿ ಮರಣ ಸಂಭವಿಸಿದಾಗ ಮೃತರ ದಹನ ಕಾರ್ಯಕ್ಕೆ ಮಹಿಳೆಯರೇ ಮುಂದಾಗಲಿ ಎಂಬ ಸಂದೇಶ  ನೀಡುವುದು ಪ್ರಸಕ್ತ ಲೇಖನದ ಉದ್ದೇಶ್ಯವಲ್ಲ. ಬದಲಿಗೆ, ಸಂತಾನವಿಲ್ಲದ ಕುಟುಂಬಗಳು,  ಗಂಡು ಸಂತಾನವಿಲ್ಲದ ಕುಟುಂಬಗಳು, ಗಂಡು ಸಂತಾನವಿದ್ದೂ ಆ ಪುತ್ರರು ದೂರದೇಶಗಳಲ್ಲಿದ್ದು, ಮರಣ ಸಂಭವಿಸಿದ ೨೪-೪೮ ಗಂಟೆಗಳೊಳಗೆ ಸ್ವದೇಶಕ್ಕೆ  ¨ರಲಾಗದಿದ್ದ ಸಂದರ್ಭದಲ್ಲಿ ಮೃತರ ದಹನ ಕಾರ್ಯಗಳನ್ನು ನಡೆಸಲು ಅಯ್ಯಾ, ನೀವು ಬಂದು ನಮಗೆ  ಈ ಸಹಾಯಮಾಡಿ, ಅಪ್ಪಾ, ಸ್ವಾಮಿ, ನೀವು, ನೀವು ಎಂದು ಬಂದಿರುವ ಬಂಧಗಳ ಮುಂದೆ ಗೋಗರೆಯುವ ದೈನೇತಿ  ಸ್ಥಿತಿಗೆ ದುಃಖತಪ್ತ ಕುಟುಂಬಗಳನ್ನು ತಳ್ಳದೆ, ಅಂತ್ಯ ಕಾರ್ಯ ನಡೆಸಲು ಯಾರಾದರೂ  ಸಬಲ, ಆಸಕ್ತ ಮಹಿಳೆಯರಿದ್ದರೆ ಅಕೆಗೆ ಜನ ಅವಕಾಶ ಕೊಟ್ಟು ಬಾಧೆಯಲ್ಲಿರುವ ಕುಟುಂಬಕ್ಕೆ ನೆರವಿನ ಹಸ್ತ ನೀಡಿ ಎಂಬ ವಿನಂತಿ ಇಲ್ಲಿದೆ. 

     ಚಲನೆಯಿಲ್ಲದೆ  ನಿಂತ ನೀರು ಕೊಳೆಯುತ್ತz.É , ಅದಕ್ಕೇ ಯಾವುದೂ ನಿಂತ ನೀರಾಗಬಾರದು, ಎಲ್ಲವೂ ಚಲಿಸುತ್ತಿರಬೇಕು ಎನ್ನುತ್ತೇವೆ. ನಮ್ಮ ಶರೀರ ಸ್ಥಗಿತಗೊಳ್ಳದೆ ದಿನವೂ  ಬೆಳೆಯುತ್ತಲೇಯಿದೆ. ಯೋಚನೆಗಳು ಕ್ಷಣಕ್ಷಣಕ್ಕೂ ಬದಲಾವಣೆ ಹೊಂದುತ್ತಿವೆ. ನಮ್ಮ ಆಹಾರ, ವಿಹಾರ, ಉಡುಗೆ, ತೊಡಗೆ, ಜೀವನ ಶೈಲಿ, ಎಲ್ಲವೂ ಇಂದಿರುವAತೆ ನಾಳೆ ಇರದೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿವೆ. ನಮ್ಮ ದೇಶದ ಕಾನೂನುಗಳು ಈಗಾಗಲೇ ನೂರಾರು ಸಾರಿ ಮಾರ್ಪಾಟಾಗಿವೆ, ಮುಂದೂ ಬದಲಾಗುತ್ತವೆ, ಪರಿಸ್ಥಿತಿ ಹೀಗಿರುವಾಗ, ಕಾಲಕ್ಕೆ ತಕ್ಕಂತೆ ನಮ್ಮ ಆಚಾರ, ವಿಚಾರ, ಪದ್ದತಿ, ಸಂಪ್ರದಾಯ, ಧರ್ಮ, ನೀತಿ, ನಿಯಮಗಳನ್ನೂ ಕಾಲಕ್ಕೆ \ ಅಗತ್ಯತೆಗೆ ತಕ್ಕಂತೆ ಬದಲಿಸಿಕೊಳ್ಳಲೇಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತವನ್ನು  ಒಪ್ಪಿರುವ ನಮಗೆ ಸಂಸತ್ ರಚಿಸಿರುವ ಸಂವಿಧಾನ ನಮ್ಮೆಲ್ಲರಿಗೂ ಪೂಜನೀಯವಾಗಿದೆ. ವ್ಯಕ್ತಿ, ಸಮಾಜ, ರಾಜ್ಯ, ದೇಶ, ಇಲ್ಲಿನ ಪ್ರತಿ ಕಾರ್ಯವನ್ನೂ ಹೇಗೆ ನಡೆಸಬೇಕು ಎಂಬ ಬಗ್ಗೆ ನಾವೇ ರಚಿಸಿಕೊಂಡ ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತಿದೆ,” ಜನರೆಲ್ಲರೂ ಸಮಾನರು, ಇವರ ನಡುವೆ ಗಂಡು ಹೆಣ್ಣು ಬಡವ, ಶ್ರೀಮಂತ, ವಿದ್ಯಾವಂತ, ಅವಿದ್ಯಾವಂತ, ಗಂಡು, ಹೆಣ್ಣು, ಜಾತಿ, ಮತ, ಧರ್ಮ, ಬಾಷೆ, ನೆಲ, ಜಲ ಇತ್ಯಾದಿ ಕಾರಣಗಳೊಡ್ಡಿ ಪರಸ್ಪರರಲ್ಲಿ ಯಾವುದೇ ತಾರತಮ್ಮ  ಮಾಡುವ ಹಾಗಿಲ್ಲ. ಹಾಗೆ ಮಾಡಿದರೆ ಅದು ಸಂವಿಧಾನದ ಉಲ್ಲಂಘನೆಯಾಗಿ ಶಿಕ್ಷಾರ್ಹ ಅಪರಾಧವಾಗುತ್ತದೆ.  ಈ ಹಿನ್ನೆಲೆಯಲ್ಲಿ ನಮ್ಮ  ಧರ್ಮ, ಶಾಸ್ತç, ನೀತಿ, ನಿಯಮ, ಪದ್ದತಿ, ಆಚಾರ, ಸಂಪ್ರದಾಯ ಎಲ್ಲವೂ ಸಂವಿಧಾನದ ಸೂಚನೆಗಳಿಗೆ ಒಳಪಡಬೇಕಾಗಿರುತ್ತದೆ ಮತ್ತು ಬದ್ದವಾಗಿರಬೇಕಾಗುತ್ತದೆ. ಇವನ್ನು  ಸಂವಿಧಾನ ಸೂಚಿಸಿರುವಂತೇನೇ ನಡೆಸ ಬೇಕಾ ಗಿದೆ. ಈ ಹಿನ್ನೆಲೆಯಲ್ಲೂ ಸಮಾಜ, ಜನ, ಆಸಕ್ತ ಮಹಿಳೆಯರಿಗೆ ಆಸಕ್ತ ಕೆಲಸಗಳನ್ನು ನಿರ್ವಹಿಸಲು ಅವಕಾಶ  ನೀಡಲಿ.  ಕಾಲಕ್ಕೆ ತಕ್ಕಂತೆ ನುಡಿದು, ನಡೆದು ವ್ಯಕ್ತಿ, ಸಮಾಜ, ರಾಜ್ಯ, ದೇಶಕ್ಕೆ ಒಳಿತನ್ನು ಮಾಡಿ ‘ಸರ್ವೇ ಜನಾಃ ಸುಖಿನೋ ಭವಂತು”  ‘ಲಿವ್ ಅಂಡ್ ಲೆಟ್ ಲಿವ್’ ಎಂಬ ಸಂದೇಶವನ್ನು ಅಕ್ಷರಶಃ ಪಾಲಿಸಲು ಮುಂದಾಗೋಣ.                           


Comments