ಅಪುತ್ರಸ್ಯ ಗತಿರ್ನಾಸ್ತಿ

 ಅಪುತ್ರಸ್ಯ ಗತಿರ್ನಾಸ್ತಿ

ಲೇಖಕರು :ಎಂ ಆರ್ ವೆಂಕಟರಾಮಯ್ಯ 

“ಪುತ್ರೇಣ ಲೋಕಾನ್ ಜಯತಿ ಅಪುತ್ರಸ್ಯ ಗತಿರ್ನಾಸ್ತಿ ಸ್ವರ್ಗೋ ನೈವ ಚ ನೈವ ಚ “ ಪುತ್ರನಿಂದ ಉತ್ತಮ ಲೋಕವನ್ನು ಪಡೆಯಬಹುದು. ಪುತ್ರನಿಲ್ಲದವನಿಗೆ ಸ್ವರ್ಗವೂ ಇಲ್ಲ, ಮುಂದಿನ ಗತಿಯೂ ಇಲ್ಲ  ಎಂದಿದೆ ಈ ಸಂಸ್ಕೃತ ಶ್ಲೋಕ. 


ಪುತ್ರ, ಅರ್ಥಾತ್, ಗಂಡು ಸಂತಾನ, ಮಗನಿಂದಲೇ ಮಾತಾ ಪಿತರಿಗೆ ಸ್ವರ್ಗ, ಪುಣ್ಯ ಲೋಕ ಪ್ರಾಪ್ತಿ, ಅವನಿಂದಲೇ ಎಲ್ಲವೂ, ಅವನಿಲ್ಲದೆ ಏನೂ ಇಲ್ಲ ಎಂದು ಬಲು ದೃಢವಾಗಿ ನಂಬಿ ಅಂದಿನಿAದ ಇಂದಿನವರೆಗೂ ಕಂಡ ದೈವಗಳಿಗೆಲ್ಲಾ ಕೈ ಮುಗಿದು, ಪ್ರದಕ್ಷಿಣೆ ಹಾಕುತ್ತಿರುವರು ಹಲವಾರು ಗೃಹಸ್ಥರು. ನಮ್ಮದು ಪುರುಷ ಪ್ರಧಾನ ಸಮಾಜ, ಪೇಟ್ರಿಯಾರ್ಕಲ್ ಸೊಸೈಟಿ, ತಂದೆಯೇ ಕುಟುಂಬದ ಯಜಮಾನ, ಪಿತೃ ಯಾಜಮಾನ್ಯ, ತತ್ವ ಮುಂದುವರಿಸಿಕೊಂಡು ಬರಲಾಗಿದೆ. ಪರಿಣಾಮವಾಗಿ, ಸ್ತ್ರೀ ತಾಯಿಗೆ   ಸಮಾಜದಲ್ಲಿ ಎರಡನೆಯ ಸ್ಥಾನ, ಆಕೆ ಸಮಾಜದಲ್ಲಿ ಸೆಕೆಂಡ್ ಕ್ಲಾಸ್ ಸಿಟಿಜನ್ ಎಂಬ ಪಟ್ಟ ಬಂದಿದೆ.  ಇದು ಅನಿವಾರ್ಯ ಎಂಬಂತೆ ಸ್ತ್ರೀ ಸಹಾ ಒಪ್ಪಿ ನಡೆಯುತ್ತಿದ್ದಾಳೆ. (ಇಂದು ಈಕೆ ಜಾಗೃತಳಾಗಿ ತನ್ನ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ). ಇದರಿಂದ ಕುಟುಂಬದಲ್ಲಿ ತಾಯಿ, ಮಗಳು, ಸೊಸೆ ಎಲ್ಲರೂ, ಕುಟುಂಬದ ಪುರುಷರು ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸದೆ ಯಾಂತ್ರಿಕವಾಗಿ ಒಪ್ಪಿ ಪಾಲಿಸುವುದೇ ಇವರ ಹೊಣೆಯಾಗಿದೆ.  ಗಂಡು ಮಗನನ್ನು ಪಡೆದ ಮಾತಾ ಪಿತ್ರರು ಪುಣ್ಯವಂತರು, ಧನ್ಯರು, ಗಂಡು ಸಂತಾನ ಪಡೆವುದೇ ಗೃಹಸ್ಥನ ಪರಮೋಚ್ಚ ಗುರಿ, ಸಾಧನೆ, ತನ್ಮೂಲಕ, ಅವನಿಗೆ ಸ್ವರ್ಗ, ಪುಣ್ಯ ಲೋಕಕ್ಕೆ ಫ್ರೀ ವಿಸಾ, ಪಾಸ್ ಪೋರ್ಟ್ ಸಿಕ್ಕಿದಂತೆ, ಸ್ವರ್ಗದ ಬಾಗಿಲು ಮುಕ್ತವಾಗಿ ತೆರೆದಿಟ್ಟಂತೇನೇ ಎಂಬ ಭಾವನೆ ಇಂದೂ ಹಲವರ ಮನಸ್ಸಿನಲ್ಲಿ ಬಲವಾಗಿ ಬೇರೂರಿದೆ.  

   ಹೀಗೆಂದ ಮಾತ್ರಕ್ಕೆ, ಪುತ್ರನಿಲ್ಲದ ಮಾತಾ ಪಿತರಿಗೆ ಸದ್ಗತಿ ದೊರೆಯದೆ ? ಅವರಿಗೆ ಸಿಗುವುದು ದುರ್ಗತಿಯೇನೇ ?  ಮಗನನ್ನು ಹೊಂದಿರುವ ಮಾತಾ, ಪಿತರು ತಮ್ಮ ಜೀವಿತ ಕಾಲದಲ್ಲಿ ಎಲ್ಲ ತರಹದ ದುಷ್ಕೃತ್ಯಗಳನ್ನು ಮಾಡಿದ್ದರೂ ಇವರ ಮರಣಾ ನಂತರ, ಮಗ ಇವರಿಗೆ ಸದ್ಗತಿ ಗಳಿಸಿಕೊಡಲು ಸಾಧ್ಯವೆ ? ಪ್ರತಿ ಜೀವಿಯೂ ಮಾಡಿದ ಕವiðಕ್ಕೆ ಅನುಸಾರ ಅವನೇ ತಕ್ಕ ಫಲ ಅನುಭವಿಸಬೇಕು ಎಂಬ ಸಿದ್ದಾಂತ, ತತ್ವ ರಚಿಸಿದೆ  ಶಾಸ್ತçಗಳು. ಹೀಗಿರುವಾಗ, ನಾವು ಮಾಡಿದ ದುಷ್ಕೃತ್ಯಗಳನ್ನು ನಮ್ಮ ಮಗ ಅಳಿಸಿ, ಸತ್ ಫಲವನ್ನು ಅವನು ನಮಗೆ ಕೊಡಿಸಲು ಸಾಧ್ಯವೆ ?  ಗಂಡು, ಹೆಣ್ಣು ಸಂತಾನವೇ ಪಡೆಯದ ಸಂತಾನ ರಹಿತ ಮಾತಾ ಪಿತೃಗಳಿಗೆಲ್ಲಾ ಸಿಗುವುದು ದುರ್ಗತಿಯೇನೇ ? ಇಷ್ಟಕ್ಕೂ, “ಗತಿ “ಸದ್ಗತಿ” ಎಂಬ ಪದಗಳ ಸರಿಯಾದ ಅರ್ಥವೇನು ? ಇದನ್ನು ಯಾರು, ಹೇಗೆ ಪಡೆಯಬಹುದು ? “ಅಪುತ್ರಸ್ಯ ಗತಿರ್ನಾಸ್ತಿ” ಎಂಬ ಪದಕೆ ನಾವು ತಿಳಿದಿರುವ ಅರ್ಥಕ್ಕಿಂತಾ ವಿಭಿನ್ನ ಅರ್ಥ ನೀಡಲು ಸಾಧ್ಯವೆ ? ಇತ್ಯಾದಿ ಪ್ರಶ್ನೆಗಳಿಗೆ ಸೂಕ್ತ ಉತ್ತರ ಹುಡುಕುವ ಒಂದು ಕಿರು ಪ್ರಯತ್ನ, ಈ ಲೇಖನದ್ದಾಗಿದೆ.  



ವಿವಾಹದ ಹಲವಾರು ಸದುದ್ದೇಶಗಳಲ್ಲಿ ಸಂತಾನೋತ್ಪತ್ತಿಯೂ ಒಂದಾಗಿದೆ. ‘ಸಂತಾನ ‘ಎಂಬ ಪದ ಬಳಸಿದಾಗ , ಆ ಸಂತಾನ, ಗಂಡು, ಹೆಣ್ಣು  ಈ ಎರಡರ ಪೈಕಿ ಯಾವುದಾದರೊಂದಾಗಬಹುದಲ್ಲವೆ ? ಇನ್ನು, ಜನಿಸುವ ಮಗು ಗಂಡೋ ಹೆಣ್ಣೋ ಎಂದು ನಿರ್ಧರಿಸುವ ಅಂಶ ಯಾವುದು ?  “ಪುಮಾನ್ ಪುಂಸೋಧಿಕೇ ಶುಕ್ರೇ ಸ್ತ್ರೀ ಭವತ್ಯಧಿಕೇ ಸ್ತ್ರೀಯಾ ಃ | ಸಮೇ ಪುಮಾನ್ ಪುಂ ಸ್ತ್ರೀಯೌ ವಾ ಕ್ಷೀಣೇ ಲ್ಪೇ ಚ ವಿಪರ್ಯಯಃ “ ಪುರುಷನ ರೇತಸ್ಸು ಅಧಿಕವಾದರೆ  ವಿಷಮ ರಾತ್ರಿಗಳಲ್ಲೂ ಗಂಡು ಶಿಶುವೇ ಜನಿಸುವುದು. ಹೆಂಗಸಿನ  ಶೋಣಿತವೇ  ಹೆಚ್ಚಾದರೆ ಹೆಣ್ಣು ಶಿಶುವು ಜನಿಸುವುದು.ಸ್ತ್ರೀ ಪುರುಷರ ಶುಕ್ರ ಶೋಣಿತಗಳು ಸಮವಿದ್ದರೆ ಅವಳಿ ಜವಳಿ ಮಕ್ಕಳು ಅಥವಾ ನಪುಂಸಕ ಶಿಶುವು ಹುಟ್ಟುವುದು ಎಂದಿದೆ  ಮನುಸ್ಮೃತಿ. ಇದೇ ರೀತಿ, ಪುರುಷನು ದೃಢಾಂಗನೂ ಬಲಯುಕ್ತನೂ (ವೀರ್ಯಾಣುವಂತನೂ) ಆಗಿದ್ದರೆ, ಆಗ ಗಂಡು ಮಗ, ಸ್ತ್ರೀಯ ರಜಸ್ಸೇ ಹೆಚ್ಚಾಗಿದ್ದರೆ ಹೆಣ್ಣು ಶಿಶುವು ಜನಿಸುವುದು ಎಂದಿದೆ ಅಥರ್ವ ವೇದ ಮಂತ್ರ (೬. ೧೧. ೩ ). ಇಂತಹಾ ಅಭಿಪ್ರಾಯವನ್ನು ವೈದ್ಯ ಶಾಸ್ತ್ರವೂ  ಎತ್ತಿ ಹಿಡಿದಿದೆ. ವಸ್ತು ಸ್ಥಿತಿ ಹೀಗಿರುವಾಗ, ತನಗೆ ಗಂಡು ಸಂತಾನವಾಗದಿದ್ದಕ್ಕೆ ಗಂಡಾದ ತಾನೇ ಕಾರಣ, ಅದಕ್ಕೆ ತನ್ನದೇ ದೋಷ ಎಂಬುದನ್ನು ಪುರುಷ ಮರೆತು, ತನ್ನ ಪತ್ನಿ, ಆಕೆಯ ವಂಶಾವಳಿಯನ್ನೇ ದೋಷಿತರನ್ನಾಗಿ ಮಾಡುವ ಪರಿಪಾಠ ಈ ಮುಂದುವರಿದ ೨೧ ನೇ ಶತಮಾನದಲ್ಲೂ ಮುಂದುವರಿಸಿಕೊಂಡು ಬರುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ

 ಇಂತಹಾ ಮೂಢ ನಂಬಿಕೆಗಳ ಕಾರಣದಿಂದಲೇ ‘ಗಂಡಾದರೆ ಇರಲಿ, ಹೆಣ್ಣಾದರೆ ಕೂಡಲೇ ಮರೆಯಾಗಲಿ’ ಎಂಬ ಘೋಷಣೆ  ಕೇಳಿ ಬರುತ್ತಿದೆ. ದೇಶದಾದ್ಯಂತಾ ಹೆಣ್ಣು ಭ್ರೂಣ ಹತ್ಯೆ ವಿರುದ್ದ ಉಗ್ರ ಕಾನೂನು ಜಾರಿಯಲ್ಲಿದ್ದರೂ ಹೆಣ್ಣು ಶಿಶುವಿನ ಹತ್ಯೆ ಮುಂದುವರಿದೇ ಇದೆ. ತತ್ ಪರಿಣಾಮವಾಗಿ, ಜನನ ಪ್ರಮಾಣದಲ್ಲಿ ಗಂಡಿನ ಸಂಖ್ಯೆ ಹೆಚ್ಚಿ, ಹೆಣ್ಣಿನ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಗಂಡಿನ ವಿವಾಹಕ್ಕೆ ಕನ್ಯೆಯ ತೀವ್ರ ಅಭಾವ ಕಂಡು ಬಂದು, ೩೩- ೩೫ ವರ್ಷ ವಯಸ್ಸು ದಾಟಿದ ಗಂಡುಗಳು, ವಿವಾಹಕ್ಕೆ ಹೆಣ್ಣು ಸಿಗದೆ, ಅಕಸ್ಮಾತ್ ಸಿಕ್ಕಿದ ಹೆಣ್ಣು ಹೇಗೇ ಇರಲಿ ಮದುವೆಯಾಗಿ ಬಿಡೋಣ ಎಂಬಂತಹಾ ದಾರುಣ ಪರಿಸ್ಥಿತಿ ಇಂದು ಕಾಣ ತೊಡಗಿದೆ ಎಂದರೆ ಮಾತು ಉತ್ಪ್ರೇಕ್ಷೆಯಾಗದು.   

ಹೆಣ್ಣು ಹುಟ್ಟಿದಾಗ ಅಯ್ಯೋ, ಹುಟ್ಟಿದ್ದು ಹೆಣ್ಣೇ ! “ಇದು ಹುಣ್ಣು” ಎಂದು ತೆಗಳುವ ಗಂಡು ಜಾತಿಯ ತಂದೆ, ಮಾವ ಮೊದಲಾದ ಸಂಬಂಧಿಗಳು, ಇದೇ ಹೆಣ್ಣು ಬೆಳೆದು ಉದ್ಯೋಗ ಗಳಿಸಿ ಹಣ ತರುವ ಹಂತ ತಲುಪಿದಾಗ, ಹಿಂದೆ ಹೆಣ್ಣೆಂದು ದೂರಿದ್ದ, ಖಂಡಿಸಿದ್ದ , ನಿಂದಿಸಿದ್ದ ಈ ಗಂಡು, ಈ  ಹೆಣ್ ಮುಂದೆಯೇ  ಅವಳ ಸಂಬಳಕ್ಕೆ ಕೈ ಚಾಚಿ ಬೇಡುವಾಗ ಈ ಹೆಣ್ಣು ಇವನಿಗೆ ದೇವತೆಯಂತೆ ಕಾಣಿಸುವುದು ಅದೆಂತಹಾ ವಿಪರ್ಯಾಸ ! ? 

    ಈ ಕಾರಣದಿಂದ, “ಹೆಣ್ಣು ಹೆಣ್ಣು ಎಂದೇಕೆ ಜರಿಯುವಿರಿ, ನಿಮ್ಮನ್ನು ಹೆತ್ತ ತಾಯಿ ಹೆಣ್ಣಲ್ಲವೆ? ಎಂದು ಅಂದೇ ಗರ್ಜಿಸಿದ ಸಂಚಿ ಹೊನ್ನಮ್ಮನ ವಾಣಿ ಇಂದು ಎಲ್ಲರ ಕಿವಿಗಳಲ್ಲೂ ಮೊಳಗಬೇಕು. ವೇದ ಕಾಲದಲ್ಲೂ ಸ್ತಿçà ಪುರುಷರ ನಡುವೆ, ಸಮಾಜ ಭೇದ ಎಣಿಸಿರಲಿಲ್ಲ. ಸ್ತ್ರೀಯರಿಗೆ ಎರಡನೆಯ ದರ್ಜೆ ಪ್ರಜೆಯ ಸ್ಥಾನ ನೀಡಿರಲಿಲ್ಲ. ಬದಲಿಗೆ, ತಾಯಿಗೇ ಪ್ರಥಮ, ಅಗ್ರ ಸ್ಥಾನ ನೀಡಲಾಗಿತ್ತು. ಮಾತೃ ದೇವೋ ಭವ ಎಂದ ನಂತರವೇ ಪಿತೃ ದೇವೋ ಭವ ಎಂಬ ಜಾರಿಯಲ್ಲಿದ್ದ ಉಕ್ತಿ ಈ ದಿಸೆಯಲ್ಲಿ ಒಂದು ಮುಖ್ಯ ಉದಾಹರಣೆಯಾಗಿದೆ. ಮುಂದುವರಿಸುತ್ತಾ, ‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಅರ್ಥಾತ್, ಜನನಿ, ಜನ್ಮ ಭೂಮಿ ಇವೆರಡೂ ಸ್ವರ್ಗಕ್ಕಿಂತಾ ಹೆಚ್ಚು ಪ್ರಿಯ, “ಮಾತಾ ಪೂರ್ವ ರೂಪಂ, ಪಿತಾ ಉತ್ತರ ರೂಪಂ” ಎಂದಿರುವ ಉಪನಿಷತ್ತು, ತಾಯಿ ವಾಕ್ಯ, ದೈವ ವಾಕ್ಯ, ಭೂಮಿಗಿಂತಾ ದೊಡ್ಡವಳು ತಾಯಿ, “ಸಹಸ್ರಾಂತು ಪಿತೃನ್ ಮಾತಾ ಗೌರವೇಣಾತಿ ರಿಚ್ಯತೇ,” ತಂದೆಗಿಂತಾ  ತಾಯಿ ಸಾವಿರ ಪಾಲು ಮೇಲು, “ಮಾತಾ ಸಮಂ ನಾಸ್ತಿ ಶರೀರ ಪೋಷಣಂ”, ಶರೀರದ ಪೋಷಣೆಗೆ ತಾಯಿಗಿಂತಾ ಶ್ರೇಷ್ಠರಿಲ್ಲ ಎಂಬ ವಾಕ್ಯಗಳು ಸ್ತ್ರೀ ಯ ಜ್ಯೇಷ್ಠ, ಸ್ಥಾನ ಮಾನಗಳನ್ನು ಸೂಚಿಸುತ್ತದೆ.  


     ಇಷ್ಟೆಲ್ಲಾ ಏಕೆ ? ವಿದ್ಯೆ, ಬುದ್ಧಿ,ಜ್ಞಾನಗಳಿಗಾಗಿ ನಾವು ಪ್ರಾರ್ಥಿಸಿ ಬೇಡುವ ವಾಗ್ದೇವಿ ಶ್ರೀಮಹಾ ಸರಸ್ವತಿಯೇ ಹೆಣ್ಣಲ್ಲವೆ ? ‘ಹಣವಿಲ್ಲದವನ ಬಾಳು ಹಾಳು’ ಎಂಬ ವಾಕ್ಯ ನಮದಾಗದಿರಲಿ ಎಂದು ಸಿರಿ ಸಂಪತ್ತುಗಳ ನೀಡಿಕೆಗಾಗಿ ನಾವು ಪೂಜಿಸವ ಶ್ರೀ ಮಹಾಲಕ್ಷಿö್ಮಯೂ ಹೆಣ್ಣಲ್ಲವೆ ? ನಮಗೆಲ್ಲರಿಗೂ ಧೀ ಶಕ್ತಿ ಯನ್ನು ಪ್ರಚೋದಿಸುವ ಗಾಯತ್ರೀ ದೇವಿ ಹೆಣ್ಣಲ್ಲವೇ ?  ಇದೇ ರೀತಿ, ಶಕ್ತಿ ದೇವತೆಯರಾದ ಶ್ರೀ ಲಲಿತೆ, ಗೌರಿ, ಪಾರ್ವತಿ, ಕಾಳಿ, ದುರ್ಗಿ, ಇವರೆಲ್ಲರೂ ಹೆಣ್ಣೇ. ಇವರುಗಳ ದಯೆ, ಕರುಣೆ, ಸಹಾನುಭೂತಿ, ಆಶೀರ್ವಾದ ಇಲ್ಲದವನ ಬಾಳು ಹಾಳಲ್ಲವೇ ! ಹೀಗಿರುವಾಗ, ಎಲ್ಲ ಕಾರಣಗಳಿಗಾಗಿ ಸ್ತಿçÃಗೇ ಅಗ್ರ ಪೂಜೆ ಸಲ್ಲಿಸಿ ಗೌರವಿಸುತ್ತಿರುವ ನಾವು, ಗಂಡೇ ಶ್ರೇಷ್ಠ, ಹೆಣ್ಣು ಹೊರೆ, ಆಕೆಯನ್ನು ಹೆತ್ತವರಿಗೆ ದುರ್ಗತಿ ಎಂದು ಅರ್ಥೈಸುವುದು ಅರ್ಥಹೀನವಲ್ಲವೇ ?  

    ಆರ್ಯ ಸಮಾಜದ ದಯಾನಂದ ಸರಸ್ವತಿಯವರು ಸ್ತ್ರೀ ಯನ್ನು ‘ತಲೆಯ ಮೇಲಿನ ಮಕುಟ’ ಎಂದು ಬಣ್ಣಿಸಿದ್ದಾರೆ.  ಪುರುಷರಿಗೆ ಸಮನಾಗಿ ವೇದಾಧ್ಯಯನ, ಉಪನಯನ ಸಂಸ್ಕಾರಗಳನ್ನು ಪಡೆಯುವ ಅವಕಾಶಗಳನ್ನು ಅಂದೇ ಕಲ್ಪಿಸಿದ್ದ ವೇದಗಳು, ಸ್ತ್ರೀ ಯನ್ನು ಸುಮಂಗಲೀ, ಮಂಗಳಕರವಾದ ಆಚರಣೆ ಉಳ್ಳವಳು, ಆಕೆ ಸಮಾಜದ ‘ಕೇತು’ (ಭಾವುಟದ ಮೇಲ್ಭಾಗ) ಎಂದು ಋಗ್ವೇದ ಬಣ್ಣಿಸಿದೆ  ( ೧೩. ೧೫೯. ೨ ).  ನಾರಿಯನ್ನು ಗೌರವಿಸುವುದು ಪ್ರತಿಯೊಬ್ಬ ಮಾನವನ ಕರ್ತವ್ಯ ಎಂದಿದೆ ಮನು ಸ್ಮೃತಿ. “ಗರ್ಭಿಣೀ ಲಭತೇ ಪುತ್ರಂ ಕನ್ಯಾಂ ವಾ ಬಹುಭಾಗಿನೀಮ್” ಮಹಾಭಾರತದ ಶ್ರವಣದಿಂದ ಭಾಗ್ಯವತಿಯಾದ ಕನ್ಯೆಯು ಹುಟ್ಟುತ್ತಾಳೆ ಎಂದಿದೆ ಮಹಾ ಭಾರತದ ಸ್ವರ್ಗಾರೋಹಣ ಪರ್ವ.  (೫. ೫೩ ) ನಾರಿಯನ್ನು ಸೀಮಂತಿನಿ, ಸೌಭಾಗ್ಯವತಿ, ಎಂದೆಲ್ಲಾ ನಮ್ಮ ಶಾಸ್ತç ಪುರಾಣಗಳು ಹೊಗಳಿರುವಾಗ, ಕನ್ಯೆಯ ಜನನ ಶೋಕ ಪ್ರದವಾಗಲು ಸಾಧ್ಯವೇ ?  ನಮ್ಮ ಪೂರ್ವಜರು ಮಗ, ಮಗಳನ್ನು ಯಾವುದೇ ಭೇದವೆಣಿಸದೆ ಇಬ್ಬರನ್ನೂ ಒಂದೇ ಸಮನಾಗಿ ಪಾಲಿಸಿ, ಪೋಷಿಸಿ ಪ್ರೋತ್ಸಾಹ ನೀಡುತ್ತಿದ್ದ ಕಾರಣವೇ, ಅಪ್ರತಿಮ ವಿದುಷಿಗಳಾಗಿದ್ದ ಗಾರ್ಗಿ, ಮೈತ್ರೇಯಿ, ಮುಂತಾದ ಬ್ರಹ್ಮವಾದಿನಿಯರು ಬೆಳೆದು, ಬೆಳಗಲು ಅವಕಾಶವಾಯಿತು. ವೇದ ಕಾಲೀನ ಸಾಹಿತ್ಯದಲ್ಲೂ ಗಂಡು, ಹೆಣ್ಣು, ಪೂರ್ಣತೆಯ ಎರಡು ಮುಖಗಳೆಂಬ ಅಭಿಪ್ರಾಯವನ್ನು ಬಿಂಬಿಸಲಾಗಿದೆ. ಒಂದು ವೇಳೆ ಗಂಡು ಮಗು ಹುಟ್ಟದಿದ್ದರೂ ಹುಟ್ಟಿದ ಹೆಣ್ಣು ಮಗು, ಅವಳ ಸಂತಾನದ ಮೂಲಕವೇ ಪಿತೃ ಋಣ ಸಂದಾಯವೆAದು ಮಹಾ ಭಾರತದಲ್ಲಿ ವ್ಯಾಸರು, ಯಯಾತಿ ಮತ್ತು ಅಷ್ಟಕ ಇವರ ಚರಿತ್ರೆಯ ಮೂಲಕ ತಿಳಿಸಿದ್ದಾರೆ. 

ಇಂದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ರೂಢಿಗತ ಗಾದೆಯಂತೆ, ಸ್ತ್ರೀ ಪಾದಾರ್ಪಣೆ ಮಾಡದ ಕ್ಷೇತ್ರವಿಲ್ಲವಾಗಿದೆ. ಉಪನಯನ ಸಂಸ್ಕಾರ ಪಡೆದ ಸ್ತ್ರೀಯರಿದ್ದಾರೆ, ವೇದಾಧ್ಯಯನ, ಯಜ್ಞ, ಯಾಗ, ಹೋಮ ಹವನ, ವಿವಾಹ ಇತ್ಯಾದಿ ಶುಭ ಕರ್ಮಗಳನ್ನೇ ಅಲ್ಲದೆ, ಹಲವು ಅಪರ ಕರ್ಮಗಳ ನಿರ್ವಹಣೆಯ್ನೂ ಮಾಡಿಸುವಿಕೆ ಕೇವಲ ಪುರುಷರ ಹಕ್ಕಲ್ಲ, ಈ ಕ್ಷೇತ್ರದಲ್ಲಿ ನಾವೂ ಅಡಿ ಇರಿಸಿದ್ದೇವೆ ಎಂದು ಧೈರ್ಯ  ಸಾರಿ, ಪ್ರಕಾಂಡ ಪಂಡಿತರಿಂದ ವೇದ ಶಾಸ್ತçಗಳನ್ನು ಕಲಿತು, ಶ್ರದ್ಧೆ ನಿಯತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪೌರೋಹಿತ್ಯವನ್ನು ವೃತ್ತಿಯನ್ನಾಗಿಟ್ಟುಕೊಂಡಿರುವ ವೇದೋಪಾಸಕಿಯರೂ ಇಂದು ನಮ್ಮ ಮಧ್ಯೆ ಇದ್ಧಾರೆ. ಅಶ್ರದ್ಧೆ, ಕಾಟಾಚಾರದಿಂದ ವೃತ್ತಿಯನ್ನು ನಡೆಸುತ್ತಿರುವ ಹಲವಾರು ಪುರುಷ ಪುರೋಹಿತರಿಗೆ ಇವರು ಸವಾಲಾಗಿದ್ದಾರೆ. ಉಪಗ್ರಹಗಳ ಉಡಾವಣೆ, ವಿಮಾನ ಚಾಲನೆಯಂತಹಾ ವೃತ್ತಿಗಳಿಂದ ಹಿಡಿದು, ವಿಜ್ಞಾನಿ, ವೈದ್ಯರು, ವಕೀಲರು, ನ್ಯಾಯಾಧೀಶರು, ಇಂಜಿನಿಯರ್, ವಿಧಾನ ಸಭೆ, ವಿಧಾನ ಪರಿಷತ್ತು, ಗ್ರಾಮ, ತಾಲ್ಲೂಕು ಪಂಚಾಯತಿ, ದೇಶದ ಸಂಸತ್ ಸದಸ್ಯರಾಗಿ, ರಾಜ್ಯದ ಮುಖ್ಯ ಮಂತ್ರಿ, ರಾಜ್ಯ ಪಾಲರು, ಪ್ರಧಾನ ಮಂತ್ರಿ, ರಾಷ್ಟಾçಧ್ಯಕ್ಷರು, ವಿದೇಶೀ ರಾಯಭಾರಿಗಳು, ಹೀಗೆ ಎಲ್ಲಾ ಕಾರ್ಯ ಕ್ಷೇತ್ರಗಳಿಗೂ ಸ್ತಿçà ಇಂದು ಲಗ್ಗೆ ಹಾಕಿ, ಭೇಷ್ ಎನಿಸಿಕೊಂಡಿದ್ದಾರೆ. 

    ವಸ್ತು  ಸ್ಥಿತಿ ಹೀಗಿರುವಾಗ, ಮಗ, ಮಗಳ ಮಧ್ಯೆ ಭೇದವೆಣಿಸಿ, ಅಯ್ಯೋ, ಮಗ ಜನಿಸಲಿಲ್ಲವಲ್ಲಾ , ನಾವು ಪಾಪಿಗಳು, ಇನ್ನು ನಮಗೆ ಸದ್ಗತಿಯಿಲ್ಲ, ದುರ್ಗತಿ ಬರವುದು ಖಂಡಿತಾ ಎಂದು ಕೊರಗುವವರು, ಇದುವರೆಗೆ ಹುಟ್ಟಿದ್ದೆಲ್ಲಾ ಹೆಣ್ಣು ಮಕ್ಕಳೇ, ನೋಡೋಣ, ಈ ಸಲ, ಮುಂದಿನ ಸಲವಾದರೂ ಗಂಡಾಗಬಹುದು ಎಂದು ಮಕ್ಕಳ ಮೇಲೆ ಮಕ್ಕಳನ್ನು ಹೆರುತ್ತಾ, ದೇಶದ ಜನಸಂಖ್ಯಾ ಸ್ಪೋಟಕ್ಕೆ ‘ಇದು ನಮ್ಮ ಕೊಡುಗೆ ಎಂದು ಹೆಚ್ಚು ಮಕ್ಕಳನ್ನು ಸೇರಿಸುತ್ತಾ , ಕೊನೆಗೆ ಅವರ ಆಸೆ ಫಲಿಸದಾಗ, ದುಃಖಿಸುವವರ ಮೌಢ್ಯವನ್ನು ಕಂಡಾಗ, “ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ” ಎಂಬ ದಾಸರ ಕೀರ್ತನೆ ನೆನಪಿಗೆ ಬರುತ್ತದೆ. 

     ಈ ಸಂದರ್ಭದಲ್ಲಿ, ‘ಮಕ್ಕಳಿಗಾಗಿ ಮಕ್ಕಳು ಪ್ರಿಯರಾಗುವುದಿಲ್ಲ’ ಎಂಬ ಕಟು ಸತ್ಯ ಸಾರಿರುವ ಉಪನಿಷತ್ ವಾಕ್ಯ ನಾವು ಸ್ಮರಿಸಬೇಕು. ಸಂತಾನ ಪ್ರಾಪ್ತಿ ಬಗ್ಗೆ :  “ಅಲಭ್ಯ ಮಾನ ಃ ತನಯ ಃ ಪಿತರಂ ಕ್ಲೇಶಯೋಚ್ಛಿರಃ ಲಬ್ಧೋಹಿ ಗರ್ಭಪಾತ್ರೇನ ಪ್ರಸವೇನ ಚ ಬಾಧತೇ” ಮಕ್ಕಳು ಜನಿಸದಾಗ ಬಂಜೆಯಾದ ಚಿಂತೆ, ಗರ್ಭ ಧರಿಸಿದಾಗ, ಗರ್ಭಪಾತವಾಗಬಹುದೇನೋ ಎಂಬ ಚಿಂತೆ, ನಂತರ ಪ್ರಸವ ವೇದನೆಯ ಚಿಂತೆ, ಹೀಗೆ, ಚಿಂತೆ, ದುಃಖಗಳು ಒಂದರ ಹಿಂದೆ ಒಂದು ಉಂಟಾಗುತ್ತಲೆ ಇರುತ್ತವೆ. ಎಂದಿದೆ ಯಾಜ್ಞವಲ್ಕ್ಯ  ಉಪನಿಷತ್ತು. ನಂತರದ ಕಾಲದಲ್ಲಿ, “ಜಾತಸ್ಯ ಗ್ರಹ ರೋಗಾದಿ ಕುಮಾರಸ್ಯ ಚಧೂರ್ತತಾ  | ಉಪನೀತೇಷ್ಯವಿದ್ಯತ್ವಂ ಅನುದ್ವಾಹೇ ಚ ಪಂಡಿತೇ” ಮಗ ಜನಿಸಿದ ಮೇಲೂ, ಹುಟ್ಟಿದ ಮಗನಿಗೆ ಗ್ರಹ ಬಾಧೆ, ರೋಗ ರುಜಿನಾದಿಗಳು ಬರಬಹುದೆಂಬ ಚಿಂತೆ, ಮಗ ದುಷ್ಟನಾದರೆ ದುಃಖ, ವಿದ್ಯೆ ಕಲಿಯಲಿಲ್ಲ, ಉದ್ಯೋಗ ಸಿಗಲಿಲ್ಲ, ವಿವಾಹ ನಿಧಾನವಾಯ್ತು, ಮಕ್ಕಳಾಗಲಿಲ್ಲಾ, ಹೀಗೆ ಹತ್ತು ಹಲವಾರು ಚಿಂತೆ, ಭಯಗಳು ಒಂದರ ಹಿಂದೊಂದು ಬರುತ್ತಲೇ ಇರುತ್ತವೆ, ಮಗ ಹುಟ್ಟಿದಮೇಲೂ.  ಮುಂದುವರಿಸುತ್ತಾ,  “ಯೂನಶ್ಚಾ ಪರದಾರಾದಿ ದಾರಿದ್ರ್ಯಂಚ ಕುಟುಂಬಿನಃ | ಪುತ್ರ ದುಃಖಸ್ಯ ನಾಸ್ತ್ಯನ್ತೋ ಧನೀ ಚೇತ್ ಮ್ರೀಯತೇ ತದಾ “ ಮಗ, ಪರ ಸ್ತ್ರೀ ಲೋಲನಾಗಬಹುದೆಂಬ ಭಯ, ಸಂಸಾರಿಯಾದರೆ ದಾರಿದ್ರ್ಯಾದಿ ಭಯ,  ಸಿರಿವಂತನಾದರೆ ಕಳ್ಳರ ಭಯ, ಮೃತ್ಯುವಿನ ಭಯ, ಹೀಗೆ, ಮಗನಾದರೂ ಅವನಿಂದ ಅನುವರತವೂ ಚಿಂತೆ, ಭಯ, ದುಃಖವೇ ಮಾತಾ ಪಿತರನ್ನು ಕಾಡುತ್ತಿರುತ್ತದೆ.   

   ದುರಹಂಕಾರದಿAದ ಕೂಡಿದವನೂ ಪರ ಸ್ತಿçà ಅಪಹರಣ, ಮೋಸ, ವಂಚನೆ, ಪರ ಸ್ವತ್ತನ್ನು ಲಪಟಾಯಿಸುವುದು,  ಸಜ್ಜನರನ್ನು ದುರ್ಭಲರನ್ನು ಹಿಂಸಿಸುವುದು, ಗುರು ಹಿರಿಯರನ್ನು ಅಗೌರವಿಸುವುದು, ಮಾತಾ ಪಿತರನ್ನು ನಿರ್ಲಕ್ಷಿಸಿ, ಅವರಿಗೆ ಅಗತ್ಯ ಅನ್ನ ಪಾನಾದಿ ವಸ್ತç ರಕ್ಷಣೆಗಳನ್ನು ನೀಡದೆ, ಶಾರೀರಿಕ, ಮಾನಸಿಕ ಹಿಂಸೆ ನೀಡುವುದು, ಇತ್ಯಾದಿ ಅಸುರೀ ಗುಣಗಳನ್ನು ಬೆಳೆಸಿಕೊಂಡು ದುಷ್ಕಾರ್ಯUಳÀಲ್ಲಿ ತೊಡಗಿರುವವನು ನಮ್ಮ ಮಗನೇ ಆದಾಗ, ಅಂತಹಾ ಮಗನಿಗೇ ಸದ್ಗತಿ ದೊರಕಲುÀ ಅವಕಾಶವಿಲ್ಲದಾಗ, ಇನ್ನು ಈ ಮಗ, ನಮಗೇನು ಸದ್ಗತಿ ದೊರಕಿಸಬಲ್ಲನು ?  ಇಂತಹಾ ಮಗನಿಗೆ, ಅವನ ಕುಟುಂಬದವರಿಗೆ, ಇಹದಲ್ಲೇ ಸುಖ ಶಾಂತಿ ನೆಮ್ಮದಿಗಳು ಸಿಗದಾಗ, ಅವರಿಗೆ ಪರ ದಲ್ಲೆಂತಹಾ ಗತಿ ಸಿಗಬಹುದು ? ಇವೆಲ್ಲಾ ‘ಅಪುತ್ರಸ್ಯ ಗತಿರ್ನಾಸ್ತಿ” ಎನ್ನುವವರು ಯೋಚಿಸಲರ್ಹ ವಿಷಯಗಳಾಗಿವೆ. 

    ಇನ್ನು, ಪುತ್ರರನ್ನು ಪಡೆದ ಮಾತಾ ಪಿತೃಗಳಿಗೆ ಎಂತಹಾ ಸದ್ಗತಿ: ಉತ್ತಮ ಸ್ಥಿತಿ ಸಿಕ್ಕಿತು ಎಂಬ ಬಗ್ಗೆ, ನಾವು ಅತಿ ಭಕ್ತಿ ಗೌರªಗಳಿಂದ ಕಾಣುವ ಪುರಾಣ, ಪುಣ್ಯ ಕಥೆಗಳ ಕಡೆ ದೃಷ್ಟಿ ಹರಿಸೋಣ. ಧೃತರಾಷ್ಟç ಗಾಂಧಾರಿಯರಿಗೆ ೯೯ ಮಂದಿ ಗಂಡು ಮಕ್ಕಳಾದರು. ಅವರಿಗೆಂದೂ ಉಣ್ಣಲು ಹೊದೆಯಲು ಕೊರತೆಯಿರಲಿಲ್ಲಾ, ರೋಗ ರುಜಿನಾದಿ ತಾಪತ್ರಯಗಳು ಅವರನ್ನು ಎಂದೂ ಕಾಡಲಿಲ್ಲಾ, ಇಷ್ಟೆಲ್ಲಾ ಸೌಕರ್ಯಗಳಿದ್ದರೂ, ಈ ಮಕ್ಕಳೆಲ್ಲರೂ ಹೆತ್ತ ಮಾತಾ ಪಿತರಿಗೆ, ಪರ ಲೋಕದ ಮಾತಿರಲಿ, ಇಹದಲ್ಲೇ ಶಾಂತಿ ನೆಮ್ಮದಿಗಳನ್ನು ಕಸಿದುಕೊಂಡು ಜೀವನ ಪೂರ್ತಿ ದು ಃಖಿತರನ್ನಾಗಿ ಮಾಡಿದರು. ದ್ವೇಷಾಸೂಯೆಗಳಿಂದಲೇ ಅಕಾಲ ಮೃತ್ಯುವನ್ನಪ್ಪಿದರು. ಹೀಗೇನೇ, ಶಿಶುಪಾಲ, ಜರಾಸಂಧ, ರಾವಣ ಕುಂಭಕರ್ಣ ಇಂದ್ರಜಿತ್‌ಗಳು ಅವರ ಮಾತಾ ಪಿತರಿಗೆ ಸದ್ಗತಿ ಕೊಡಿಸಿದರೆ ? ಈ ವಿಷಯದ ಸಮರ್ಥನೆಯಾಗಿ ಮತ್ತಷ್ಟು ಉದಾಹರಣೆಗಳನ್ನು ತಿಳಿಸುತ್ತಾ ಹೊರಟರೆ ಪುಟಗಳು ಬೆಳೆಯುತ್ತವೆ. 


ಇದುವರೆಗೂ ಬಳಸಿದ ‘ಸದ್ಗತಿ’ ಎಂಬ ¥ದದ ಸರಿಯಾದ ಅರ್ಥವೇನಿರಬೇಕು ? ಎಂದಿರಾ ? ‘ಸದ್ಗತಿ’ ಎಂಬ ಪದಕ್ಕೆ ಒಳ್ಳೆಯ ಗತಿ, ಮೋಕ್ಷ, ಬಿಡುಗಡೆ, ವಿಮೋಚನೆ, ಕೈವಲ್ಯ, ದಾಸ್ಯ ವಿಮೋಚನೆ, ಆತ್ಮೋದ್ಧಾರ ಇತ್ಯಾದಿ ಕನ್ನಡ ಅರ್ಥಗಳಿದ್ದರೆ, ಇಂಗ್ಲೀಷಿನಲ್ಲಿ, ಸಾಲ್ವೇಶನ್, ಡೆಲಿವರೆನ್ಸ್ , ಲಿಬರೇಶನ್,  ಎಂಬ ವಿವಿಧಾರ್ಥಗಳಿವೆ. ಈ ಎಲ್ಲ ಅರ್ಥಗಳ ಮೂಲಾರ್ಥ ಒಂದೇ ಆಗಿದೆ. ಜನನ ಮರಣಗಳಿಂದ ಸಂಪೂರ್ಣ ಬಿಡುಗಡೆ ಪಡೆಯುವುದೇ ಮಾನವ ಜನ್ಮದ ಮೂಲ ಗುರಿ, ಉದ್ದೇಶವಾಗಿದೆ.  ಜೀವಾತ್ಮ, ಸದಾ ಜನನ ಮರಣಗಳ ಚಕ್ರದಲ್ಲಿಯೇ ಸುತ್ತುತ್ತಿರುತ್ತಾನೆ. ಇದನ್ನು ಕಂಡೇ ಅಂದೇ ಶ್ರೀ ಶ್ರೀ ಶಂಕರಾಚಾರ್ಯರು ಉಚ್ಚರಿಸಿದ್ದು, ‘ಪುನರಪಿ ಜನನಂ ಪುನರಪಿ ಮರಣಂ’ ಎಂದು. ಪೂರ್ವ ಜನ್ಮದ ಕರ್ಮಕ್ಕನುಸಾರವಾಗಿ ಇಂದಿನ ಜನನ, ಜನ್ಮ ಲಭಿಸಿದೆ. ಈ ಜನ್ಮದಲ್ಲಿ ನಾವು ಮಾಡಿದ ಕರ್ಮ (ಪಾಪ. ಪುಣ್ಯ) ಗಳಿಗನುಸಾರವಾಗಿ ಮುಂದಿನ ಜನ್ಮ ನಿರ್ಧರಿತವಾಗುತ್ತದೆ.  ಆದ್ದರಿಂದ ಈ ಶ್ರೇಷ್ಠ ಮನುಷ್ಯ ಜನ್ಮ ಪಡೆದಿರುವಾಗ ಇದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಜನನ ಮರಣಗಳೆಂಬ ಚಕ್ರದಿಂದ ಬಿಡುಗಡೆ ಹೊಂದಲು ಪ್ರಯತ್ನ ಪಡಬೇಕು. ಹೀಗೆಂದಾಗ, “ಮೋಕ್ಷ, ಮುಕ್ತಿ, ಬಿಡುಗಡೆ” ‘ ಈ ಸ್ಥಿತಿಯನ್ನು ಜೀವಾತ್ಮನು ತನ್ನ ಕಠಿಣ ಪರಿಶ್ರಮ, ಪ್ರಯತ್ನ, ಸಾಧನೆಗಳಿಂದ ಪಡೆಯುತ್ತಾನೋ ? ಅಥವಾ ಈ ಸ್ಥಿತಿ ಇವನಿಗೆ ಇತರರಿಂದ (ಅಂದರೆ, ಮಗನಿಂದ) ಕೊಡಲ್ಪಡುತ್ತದೋ ? ಎಂಬ ಪ್ರಶ್ನೆ ಉದ್ಭವಿಸುತ್ತದೆ ಇದಕ್ಕೆ ಉತ್ತರವೆಂದರೆ, ಈ ಬಂಧನದಿAದ ಬಿಡುಗಡೆ, ಮುಕ್ತಿ ನಮಗೆ ಇತರರಿಂದ ಸಿಗುವ, ಪಡೆಯಬಲ್ಲ ಸ್ಥಿತಿಯಲ್ಲ. ಇದು ನಮಗೆ ಇತರಿಂದ ಸಿಗಬಹುದಾದ ಕಾಣಿಕೆ, ಕೊಡುಗೆಯಲ್ಲ. ಬದಲಿಗೆ, ಹುಟ್ಟು ಸಾವುಗಳೆಂಬ ಬಂಧನದಿAದ ಬಿಡುಗಡೆ, ಮುಕ್ತಿ, ಮೋಕ್ಷವನ್ನು ಜೀವಾತ್ಮನು ತನ್ನ ಸ್ವಂತ ಪ್ರಯತ್ನ, ಸಾಧನೆಗಳಿಂದ ಮಾತ್ರವೇ ಸಾಧ್ಯ . ನಾವು ಮಾಡುವ ಕರ್ಮಕ್ಕೆ ತಕ್ಕ ಫಲವನ್ನು ನಾವೇ ಅನುಭವಿಸಬೇಕೇ  ಹೊರತು, ಅನ್ಯತಾ ಅಲ್ಲ. ತಾನು ಕುಕರ್ಮ ಮಾಡಿ, ತನ್ನಿಮಿತ್ತ ಗಳಿಸಿದ ಪಾಪವನ್ನು ಅವನ ಮುಂದಿನ ತಲೆಮಾರಿನವರಾರೋ ಅಳಿಸಿಹಾಕಿ, ಅವರು ಗಳಿಸಿದ ಪುಣ್ಯದ ಭಾಗವನ್ನು ಇವರಿಗೆ ಕೊಡಲು ಅಸಾಧ್ಯ. ಪ್ರತಿಯೊಬ್ಬರೂ ತಾವು ಮಾಡಿದ ಅಡುಗೆಯನ್ನು ತಾವೇ ಭುಂಜಿಸಬೇಕೇ ಹೊರತು ಅನ್ಯರಲ್ಲ, ಇದೇ ಸಂಬAಧದಲ್ಲಿ ಮಾಡಿದ್ದುಣ್ಣೋ ಮಹರಾಯ ಎಂಬ ಅರ್ಥ ಕೊಡುವ  ಗಾದೆ ನೆನಪಿಸಿಕೊಳ್ಳಬೇಕು. “ನ ಕಿಲ್ಬಿಷಮತ್ರ ನಾಧಾರೋ ಅಸ್ತಿ, ನ ಯನ್ಮಿತ್ರೆöÊಃ ಸಮಮಮಾನ ಏತಿ | ಅನೂನಂ ಪಾತ್ರಂ ನಿಹಿತಂ ನ, ಏತತ್ ಪಕ್ತಾರಂ ಪಕ್ವ ಃ ಪುನರಾವಿಶಾತಿ “ ಜನನ ಕಾಲದಲ್ಲೇ ಪ್ರತಿಯೊಬ್ಬ ವ್ಯಕ್ತಿಯ ಒಳಗೂ ಒಂದು ಪಾತ್ರೆ ಇಡಲ್ಪಟ್ಟಿದೆ. ಪಾತ್ರೆಯಲ್ಲಿ ಒಡಕಿಲ್ಲ. ಅದರಲ್ಲಿ ನಾವು ಮಾಡುವ ಕೆಲಸಗಳೆಂಬ ಅಡುಗೆ ಸಿದ್ಧವಾಗುತ್ತಿರುತ್ತದೆ. ನಂತರ ಆ ಅಡುಗೆಯು ತನ್ನನ್ನು ಭುಂಜಿಸಲು ಬೇಯಿಸಿದವನನ್ನೇ ಹುಡುಕಿಕೊಂಡು ಬರುತ್ತದೆ. ಆದ್ದರಿಂದ ನಾವು ಪಾಪ ಕಾರ್ಯಗಳನ್ನು ಮಾಡಿದರೆ ಅದರ ಫಲವನ್ನು ನಾವೇ ಉಣ್ಣ ಬೇಕಾಗುತ್ತದೆ ಎಂದಿದೆ ಈ ಅಥರ್ವ ವೇದದ ಶ್ಲೋಕ (೧೨. ೩. ೪೮ ) . ಹೀಗಿರುವಾಗ ಮಗನಾದವನು ತನ್ನ ಪೂರ್ವಜರಿಗೆ ತನ್ನ ಕರ್ಮಗಳಿಂದ ಸದ್ಗತಿ ಕೊಡಿಸಬಲ್ಲ ಎಂಬುದು ಹೇಗೆ ಸಾಧ್ಯ ? 

     “ಸ್ವಯಂ ವಾಜಿನ್ಸ÷್ತನ್ಯಂ ಕಲ್ಪಯಸ್ವ ಸ್ವಯಂ ಯಜಸ್ವ | ಸ್ವಯಂ ಜುಷಸ್ವ ಮಹಿಮಾ ತೇನ್ಯೇನ ನ ಸನ್ನಶೇ” ನಮ್ಮ ಉನ್ನತಿಯನ್ನು ನಾವೇ ಗಳಿಸಿಕೊಳ್ಳಬೇಕು. ಸ್ವಯಂ ನಮ್ಮ ಶಕ್ತಿ ಸಾಮರ್ಥ್ಯಗಳಿಂದ ನಮ್ಮ ಮಹಿಮೆಯನ್ನು ನಾವೇ ಸಾಧಿಸಿಕೊಳ್ಳಬೇಕು ಎಂದಿರುವ ಈ ವೇದ ಮಂತ್ರವೂ ಮೇಲೆ ಉಲ್ಲೇಖಿಸಿರುÀವ ನಿಲುವು, ಹೇಳಿಕೆಯನ್ನು ಸಮರ್ಥಿಸುತ್ತದೆ. ಇದೇ ರೀತಿ, “ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವ ಸಾಧಯೇತ್ |ಆತ್ಮೆöÊವ ಹ್ಯಾತ್ಮನೋ ಬಂಧುಃ ಆತ್ಮೆöÊವ ರಿಪುರಾತ್ಮನಃ  ಈ ಸಂಸಾರ ಸಾಗರದಿಂದ ನಿನ್ನನ್ನು ನೀನೇ ಉದ್ದಾರ ಮಾಡಿಕೊಳ್ಳಬೇಕೇ ಹೊರತು ನಿನ್ನ ಉದ್ಧಾರವನ್ನು ಬೇರಾರೂ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಮನುಷ್ಯ ತನಗೆ ತಾನೇ ಮಿತ್ರನು, ತನಗೆ ತಾನೇ ಶತ್ರುವು ಆಗಿದ್ದಾನೆ ಎಂದಿದೆ ಭಗವದ್ಗೀತೆ (೬. ೫ ) ನನ್ನ ಪ್ರಾರಭ್ಧ, ವಿಧಿ ಹೀಗಿದ್ದರೆ ನಾನೇನು ಮಾಡಲಿ ಎನಲಾಗದು, ನಮ್ಮ ಉತ್ಥಾನ, ಪತನ ಪ್ರಾರಬ್ಧದ ಅಧೀನದಲ್ಲಿಲ್ಲ. ಇದು ನಮ್ಮ ಕೈಯಲ್ಲೇ ಇದೆ ಎಂದಿದೆ ಗೀತೆ ಸಹಾ. ಈ ಹಿನ್ನೆಲೆಯಲ್ಲೂ ಪ್ರತಿ ವ್ಯಕ್ತಿ  ತನ್ನ ಸದ್ಗತಿ, ದುರ್ಗತಿಗೆ ತಾನೇ ಕಾರಣ. ತನ್ನ ಸತ್ಕರ್ಮಗಳಿಂದ ಉತ್ತಮ ಗತಿ ಪಡೆಯಲು ಪ್ರಯತ್ನಿಸಬೇಕೇ ಹೊರತು ಮಗನಿಂದ ಸದ್ಗತಿ ದೊರಕುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.  

    ಸತ್ಕರ್ಮಗಳ ವಿಚಾರ ಬಂದಾಗ ನೆನಪಿಸಿಕೊಳ್ಳಬೇಕಾದದ್ದು, ಪಂಚ ಮಹಾ ಯಜ್ಞಗಳ ವಿಚಾರ. ಪ್ರತಿ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಬ್ರಹ್ಮ ಯಜ್ಞ  (ಋಷಿ ಯಜ್ಞ), ಹವನ (ದೇವ ಯಜ್ಞ), ಅತಿಥಿ ಯಜ್ಞ (ಮಾನವ ಸೇವೆ) , ಪಿತೃ ಯಜ್ಞ (ಶ್ರಾದ್ಧ ಮತ್ತು ತರ್ಪಣ), ಹಾಗೂ ಭೂತ ಯಜ್ಞ (ಪ್ರಾಣಿಗಳಿಗೆ ಆಹಾರ) ಎಂಬ ಪಂಚ ಮಹಾ ಯಜ್ಞಗಳನ್ನು ಮಾಡಲೇಬೇಕು. ಸೃಷ್ಟಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಮತ್ತು ಸೃಷ್ಟಿಯಲ್ಲಿನ ಜೀವಿಗಳ ಪಾಲನೆ ಪೋಷಣೆಗಾಗಿ ಈ ಐದೂ ಶ್ರೇಣಿಗಳ ಪರಸ್ಪರ ಸಂಬAಧವಿದೆ. ಈ ಐವರ ಸಹಯೋಗದಿಂದಲೇ ಎಲ್ಲರ ಪುಷ್ಠಿಯಾಗುತ್ತದೆ. ದೇವತೆಗಳು ಸಮಸ್ತ  ಪ್ರಪಂಚಕ್ಕೆ ಇಷ್ಟ ಭೋಗವನ್ನು ಕೊಡುತ್ತಾರೆ. ಋಷಿಗಳು ಎಲ್ಲರಿಗೂ ಜ್ಞಾನ ನೀಡುತ್ತಾರೆ. ಪಿತೃಗಳು ತಮ್ಮ ಸಂತಾನದ ಹಿತ ಬಯಸುತ್ತಾರೆ. ಮನುಷ್ಯನು ಈ ಎಲ್ಲ ಕರ್ಮಗಳ ಮೂಲಕ ಎಲ್ಲರ ಸೇವೆ ಮಾಡುತ್ತಾನೆ. “ತಸ್ಮಾದಸಕ್ತ ಃ ಸತತಂ ಕಾರ್ಯಂ ಕರ್ಮ ಸಮಾಚರ | ಆಸಕ್ತೋ ಹ್ಯಾಚರನ್ಕರ್ಮ ಪರಮಾಪ್ನೋತಿ ಪೂರುಷ ಃ”ಯಾವ ಮನುಷ್ಯನು ನಿರಂತರವಾಗಿ, ಆಸಕ್ತ ರಹಿತನಾಗಿ ಸದಾ ಕಾಲ ತನ್ನ ಕರ್ತವ್ಯ, ಕರ್ಮವನ್ನು ಚೆನ್ನಾಗಿ ಮಾಡುತ್ತಿರುತ್ತಾನೋ ಅಂತಹಾ ಮನುಷ್ಯನು ಪರಮಾತ್ಮನನ್ನು ಪಡೆಯುತ್ತಾನೆ. ಅರ್ಥಾತ್ ಕರ್ಮ ಫಲದ ಆಸಕ್ತಿಯನ್ನು ತ್ಯಾಗಮಾಡಿ, ತನ್ನ ಕರ್ತವ್ಯಗಳನ್ನು  ಶ್ರದ್ಧೆ ನಿಷ್ಠೆಗಳಿಂದ ಆಚರಿಸುವ ಮನುಷ್ಯನು  ಕರ್ಮ ಬಂಧನದಿಂದ  ಮುಕ್ತನಾಗಿ ಪರಮ ಪುರುಷ, ಪರಮಾತ್ಮನನ್ನು ಪಡೆಯುತ್ತಾನೆ ಎಂದು ಭಗವದ್ಗೀತೆಯೂ ಸ್ಪಷ್ಟಪಡಿಸಿದೆ (೩. ೧೯ ). ಈ ಗೀತಾ ಬೋಧನೆಯಿಂದಲೂ ಸ್ಪಷ್ಟವಾಗುವ ಅಂಶವೆಂದರೆ, ವ್ಯಕ್ತಿಯೇ ತನ್ನ ದುರ್ಗತಿ, ಸದ್ಗತಿಗಳಿಗೆ ಕಾರಣ, ಅದನ್ನು ಸರಿಪಡಿಸಿಕೊಳ್ಳಬೇಕಾದವನೂ ಆ ವ್ಯಕ್ತಿಯೇ ಹೊರತು, ಅವನ ಮಗ, ಸಂತಾನವಲ್ಲಾ .

    ಕೆಲವರು ದೇವರಲ್ಲಿ ಪ್ರಾರ್ಥಿಸುವಾಗ, ಸ್ವಾಮಿ, ನನಗೆ ಸ್ವರ್ಗ ಪ್ರಾಪ್ತಿಯಾಗುವಂತೆ ಮಾಡಪ್ಪಾ ಎಂದು ಕೇಳಿಕೊಳ್ಳವುದುಂಟು. ಅಂತಹವರು ಗಮನಿಸಬೇಕಾದ ಅಂಶವೆಂದರೆ,  ಆ ಸ್ವರ್ಗ ಪ್ರಾಪ್ತಿ ಸಹಾ ಶಾಶ್ವತವಲ್ಲಾ. ಏಕೆಂದರೆ, “ಕ್ಷೀಣೇ ಪುಣ್ಯೇ ಮರ್ತ್ಯ ಲೋಕ ವಿಶ್ರಾಂತಿ” ಎಂಬಂತೆ ವ್ಯಕ್ತಿಯ ಖಾತೆಯಲ್ಲಿ ಸಂಗ್ರಹವಾದ ಪುಣ್ಯವು ಮುಗಿದ ಕೂಡಲೇ ಸ್ವರ್ಗ ಲೋಕದಿಂದ ಮರ್ತ್ಯ ಲೋಕಕ್ಕೆ ಹಿಂತಿರುಗಬೇಕಾಗುತ್ತದೆ.   

     ಈ ವಿಷಯದ ಬಗ್ಗೆ ವಾದ, ವಿವಾದಗಳೇನೇ ಇರಲಿ, ಮಗ, ಮಗಳಿಂದಲೇ ಸುಖ, ಸಂತಸ, ಸ್ವರ್ಗಪ್ರಾಪ್ತಿ ಇತ್ಯಾದಿಯಾಗಿ ನಂಬುವುದು, ಬಿಡುವುದು ಆಯಾ ವ್ಯಕ್ತಿಗಳ ವೈಯಕ್ತಿಕ ಇಷ್ಟಾ ಇಷ್ಟ, ವಿವೇಕ, ವಿವೇಚನೆಗಳಿಗೆ ಸಂಬಂಧಿಸಿದ್ದು. ನಮ್ಮೀ ವಾದ, ನಿಲುವನ್ನೇ ನಂಬಿ, ಎಂದು ಯಾರು, ಯಾರನ್ನೂ ಬಲವಂತ ಪಡಿಸುವ ಹಕ್ಕಿಲ್ಲ. ಲೋಕೋ ಭಿನ್ನ ರುಚಿ ಃ ಎಂಬ ರೂಢಿಗತ ಗಾದೆ ಇಲ್ಲಿ ನೆನಪಿಸಿಕೊಳ್ಳಬೇಕು. ಏಕೆಂದರೆ, ಇವೆಲ್ಲಾ ಪ್ರಾಪಂಚಿಕ ವಿಷಯಗಳು. ಆದರೆ, ಪಾರಮಾರ್ಥಿಕ ದೃಷ್ಟಿಯಿಂದ ಮಗನೂ ಶಾಶ್ವತವಲ್ಲಾ, ಅವನು ಕೊಡಿಸಬಲ್ಲ ಸ್ವರ್ಗವೂ ಶಾಶ್ವತವಲ್ಲಾ. ಮಾನವನಾಗಿ ಜನಿಸಿದ ಮೇಲೆ ನಮ್ಮ ಪರಮೋಚ್ಛ ಗುರಿಯೆಂದರೆ ಮುಕ್ತಿ, ಮೋಕ್ಷ, ಅಮೃತತ್ವ ಪಡೆಯುವಿಕೆ. ಈ ಸ್ಥಿತಿ, ಅಲ್ಲಿ, ಆ ಮೇಲೆ, ಸತ್ತ ಮೇಲೆ ದೊರೆಯುವುದಲ್ಲಾ. ಮೋಕ್ಷವೆಂದರೆ ಮರಣವಲ್ಲ, ನಮ್ಮಲ್ಲಿರುವುದನ್ನೆಲ್ಲಾ ತ್ಯಾಗ ಮಾಡುವುದಲ್ಲಾ, ಮಗನಿಂದ ಪಡೆಯಬಹುದಾದ ಬಹುಮಾನವೂ ಅಲ್ಲ. ನಮ್ಮ ನಿಗದಿತ ಗುರಿ ಸಾಧಿಸಲು ನಿತ್ಯ, ನೈಮಿತ್ತಿಕ ಕರ್ಮಗಳಲ್ಲಿ ಕ್ರಮೇಣ ಆಸಕ್ತಿ ತ್ಯಜಿಸುತ್ತಾ, ಇಂದ್ರಿಯ ಚಾಪಲ್ಯ ಕಡಿಮೆ ಮಾಡಿ, ಅಂತಃಕರಣ ಶುದ್ಧಿ ಮಾಡಿಕೊಳ್ಳಬೇಕು ನಮ್ಮಲ್ಲಿ ಅವಿದ್ಯೆಯ ನಾಶದೊಂದಿಗೆ ಆತ್ಮ ಜ್ಞಾನ ಗಳಿಸಿದಾಗ ಮೋಕ್ಷ, ಮುಕ್ತಿ ತಾನೇ ಲಭ್ಯವಾಗುತ್ತದೆ ಎಂದಿರುವ ಜ್ಞಾನಿಗಳ ಉಪದೇಶ ನಮಗೆ ಸದಾ ದಾರಿ ದೀಪವಾಗಲಿ. 

    ಇದೆಲ್ಲಾ  ಮಾತನಾಡಿದಷ್ಟು  ಸುಲಭವಲ್ಲ,  ಇದೆಲ್ಲಾ ನಮಗೆ, ಸಾಧಾರಣ ಮನುಷ್ಯರಿಗೆ ಸಾಧ್ಯವೆ, ಎಂದಿರಾ ? ಬುದ್ಧಿ, ವಿವೇಕ ವಿವೇಚನೆ, ಉಳ್ಳ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ. “ನಥಿಂಗ್ ಇಂಪಾಸಿಬಲ್, ವೇರ್ ದೆರೀಸ್ ಎ ವಿಲ್, ದೆರೀಸ್ ಎ ವೇ” ಮನಸ್ಸಿದ್ದೆಡೆ ಮಾರ್ಗ, ಎಂಬ ಆಂಗ್ಲ ಗಾದೆಗಳನ್ನು ಕೇಳಿರುವಿರಲ್ಲವೇ ? ಇದಕ್ಕೆ ಅಗತ್ಯ ವಾದದ್ದು ಮನಸ್ಸು. ಮನಸ್ಸಿದ್ದರೆ ಮಾ ರ್ಗ ತಾನಾಗಿಯೇ ಗೋಚರಿಸುತ್ತದೆ.


Comments