ಆಸ್ತಿ-ವಾದ-ವಿವಾದ

 ಆಸ್ತಿ-ವಾದ-ವಿವಾದ

ಲೇಖಕರು : ಎಂ ಅರ್ ವೆಂಕಟರಾಮಯ್ಯ                                   

ಪ್ರಸಕ್ತ ಲೇಖನದ ಶೀರ್ಷಿಕೆ ಓದಿದೊಡನೇ ಹಲವರ ತತಕ್ಷಣದ ಪ್ರತಿಕ್ರಿಯೆ ಎಂದರೆ ಓಹ್ ! ನೀವು ಹೇಳ ಹೊರಟಿರುವುದು “ಆಸ್ತಿ”, ಅದೇ ಸ್ವಯಾರ್ಜಿತವೋ, ಪಿತ್ರಾರ್ಜಿತವೋ, ಅದರಲ್ಲಿ ಪಾಲು ಕೇಳುವವರ ವಾದ- ಯಾಕೆ ಕೊಡಬೇಕು ? ಎನ್ನುವವರ ವಿವಾದದ ವಿಚಾರ ತಾನೇ ! ನಮಗೆಲ್ಲಾ ಗೊತ್ತು ಬಿಡಿ. ನಮಗೂ ಇದರ ಬಿಸಿ ತಟ್ಟಿದೆ ಎಂಬ ಉದ್ಗಾರ ಎತ್ತಬಹುದು ಹಲವರು. ನಿಜ. ನೀವು ಊಹಿಸಿದಂತೇನೇ ನಾ ಮುಂದೆ ನಾ ಹೇಳ ಹೊರಟಿರುವ ವಿಚಾರಗಳು ಅದರದೇ. ಆದರೆ ಹೀಗೆ ನಾ ಹೇಳಲಿರುವುದು, ಯಾರನ್ನೂ ನಿರ್ದಿಷ್ಟವಾಗಿ ಗಮನದಲ್ಲಿಟ್ಟುಕೊಂಡಾಗಲಿ, ನಿರ್ದಿಷ್ಟ ವ್ಯಕ್ತಿಯನ್ನು ಕುರಿತು ಹಂಗಿಸುವ, ನಿಂದಿಸುವ, ಆಕ್ಷೇಪಿಸುವ ಉದ್ದೇಶ ಲೇಖನದ್ದಲ್ಲ. ಬದಲಿಗೆ ಈ “ಆಸ್ತಿ” ಎಂಬ ಎರಡಕ್ಷರದ ಒಳ ಹೊರಗುಗಳು, ಇತ್ತೀಚಿನ ಕಾಲದಲ್ಲಿ ಇದು ಮಾಡುತ್ತಿರುವ ಅವಾಂತರ, ಪರಿಣಾಮಗಳನ್ನು ಹೆಚ್ಚಾಗಿ ಅರಿಯದವರ ಮಾಹಿತಿಗಾಗಿ ಇಲ್ಲಿ ಪ್ರಸ್ತುತ ಪಡಿಸಿದೆ :



ಸಾಧಾರಣವಾಗಿ, ವ್ಯವಸಾಯ, ವ್ಯವಸಾಯೇತರ ಭೂಮಿ, ಅದಕ್ಕೆ ಬಳಸುವ ಉಪಕರಣಗಳು, ಖಾಲಿ ಸೈಟುಗಳು, ಕಟ್ಟಿದ ಮನೆ ಮೊದಲಾದುವುಗಳನ್ನು ಹಿಂದೊಂದು ಕಾಲದಲ್ಲಿ  “ಆಸ್ತಿ ಎಂದು “ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚಿನ ಕಾಲದಲ್ಲಿ ಈ ಮಣ್ಣಿನ ಜೊತೆಗೆ, ಮನೆಯಲ್ಲಿಟ್ಟಿರುವ ಕ್ಯಾಶ್, ಬ್ಯಾಂಕುಗಳಲ್ಲಿಟ್ಟಿರುವ ವಿವಿಧ ಹೆಸರುಗಳಡಿಯ ಠೇವಣಿಗಳು, ಶೇರುಗಳು, ಡಿಬೆಂರ‍್ಗಳು, ಸರ್ಕಾರದ ಬಾಂಡ್‌ಗಳು, ಅವರಿವರಿಗೆ ಕೊಟ್ಟಿರುವ ಕೈ ಸಾ;ಲಗಳು, ಚಿನ್ನ ಬೆಳ್ಳಿ ವಸ್ತುಗಳು ಅವುಗಳಿಂದ ಮಾಡಿದ ಆಭರಣಗಳು, ವಾಹನಗಳು, ಇಷ್ಟೇ ಏನು !  ವಾಸದ ಮನೆಯಲ್ಲಿ ಬಳಸುವ ಹಿತ್ತಾಳೆಯೋ ತಾಮ್ರವೋ ಎಂತಹುದಾದರೂ ಲೋಹದ ಪಾತ್ರೆ ಪದಾರ್ಥಗಳು, ಹೀಗೆ ಹಿರಿಯರು ಬಳಸುತ್ತಿದ್ದ ಪದಾರ್ಥಗಳೆಲ್ಲವೂ ಅವುಗಳ ಬೆಲೆ ಅದೆಷ್ಟೇ ಕಡಿಮೆ ಇರಲಿ, ಅವೆಲ್ಲವೂ  “ಆಸ್ತಿ” ಎಂಬ ಪದದಡಿ ಸೇರಿರುತ್ತದೆ. ಕೆಲವರ ಮನೆಗಳಲ್ಲಂತೂ ಹಿಂದಿನವರು ಬಳಸುತ್ತಿದ್ದ ವಾಕಿಂಗ್ ಸ್ಟಿಕ್ಕೋ ನಶ್ಯದ ಡಬ್ಬಿಯೋ ಇವ್ಯಾವುದೂ ಸಿಗದಾಗ ಅಪ್ಪ ತಾತ ಬಳಸುತ್ತಿದ್ದ ನಾಮದ ಗಡ್ಡೆಯನ್ನೂ ಬಿಡದೆ ಅವನ್ನೂ ಭಾಗ ಮಾಡಲು ಕೇಳುವವರು ಇದ್ದಾರೆ, ಅವು ನಮಗೆ ಬೇಕು ಹಿರಿಯರ e್ಞÁಪಕಾರ್ತ ಅನ್ನೋ ನೆಪzಲ್ಲಿ. ಹೀಗೆ, “ಆಸ್ತಿ” ಅಡಿ ಬರಬಹುದ್ದಾದ್ದೆಲ್ಲವನ್ನೂ ಪಟ್ಟಿ ಮಾಡುತ್ತಾ ಹೊರಟರೆ ಪುಟಗಳು ಬೆಳೆಯಬಹುದು. ಹೀಗೆ ಹೆಸರಿಸುವ ಬದಲು ಸರಳವಾಗಿ, ವ್ಯಕ್ತಿಯ ಬಳಿ ಇರುವ, ಅವನಿಗೆ ಸಂಬಧಿಸಿದ್ದೆಲ್ಲವೂ ಆಸ್ತಿಯೇ ಎಂದರೆ ಯಾವ ವಸ್ತುವೂ ಆಸ್ತಿಯ ಪಟ್ಟಿ : ವ್ಯಾಪ್ತಿಯಿಂದ ತಪ್ಪಿಸಿಕೊಂಡು ಜಾರಿಹೋಗಲಾಗದೇನೋ ಎನಿಸುತ್ತದೆ. 

ಆಸ್ತಿಯನ್ನು ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಎಂಬೆರಡು ವರ್ಗಗಳಾಗಿ ವಿಂಗಡಿಸಬಹುದು. “ಸ್ವಯಾರ್ಜಿತ” ಎಂದರೆ ವ್ಯಕ್ತಿ ತನ್ನ ಬುದ್ದಿ, ಶಕ್ತಿ, ಸಾಮರ್ಥ್ಯ ಸ್ವಶ್ರಮದಿಂದ ಸಂಪಾದಿಸಿದ್ದು ಎಂದು ಕರೆಯಬಹುದು. ಅಪ್ಪನ ಕಡೆಯ ತಾತ, ಮುತ್ತಾತ ಮೊದಲಾದವರು ಸಂಪಾದಿಸಿದ ಚರಾ ಚರ ವಸ್ತುಗಳೆಲ್ಲವನ್ನೂ ಪಿತೃಗಳ ಅರ್ಜಿತ ಅರ್ಥಾತ್ “ಪಿತ್ರಾರ್ಜಿತ” ಎಂಬ ಹೆಸರಿನಡಿ ಸೇರಿಸಿಕೊಳ್ಳಬಹುದು. ಸ್ವಯಾರ್ಜಿತ ಆಸ್ತಿ ಎನಿಸಿಕೊಳ್ಳುವುದರ ವಿತರಣೆ, ಹಂಚಿಕೆ ಬಗ್ಗೆ ಸಾಮಾನ್ಯವಾಗಿ ಹೆಚ್ಚು ತಂಟೆ ತಕರಾರುಗಳು ಬರಲಾರದು. ಏಕೆಂದರೆ, ಈ ಆಸ್ತಿಯನ್ನು ಹೊಂದಿರುವ ವ್ಯಕ್ತಿ ತಾನು ಜೀವಂತವಾಗಿರುವಾಗಲೇ ತನ್ನ ಆಸ್ತಿಯಲ್ಲಿ ಯಾರು ಯಾರಿಗೆ ಯಾವ್ಯಾವುದು, ಎಷ್ಟೆಷ್ಟು ಭಾಗಗಳು ಸಂದಾಯವಾಗಬೇಕು ಎಂಬುದನ್ನು ಕಾನೂನು ಪ್ರಕಾರ ಬರೆದಿಟ್ಟರೆ ಆತನ ಮರಣಾನಂತರ ಆತ ಇಚ್ಚಿಸಿದಂತೇನೆ ಆಸ್ತಿ ವಿತರಣೆಯಾಗುತ್ತದೆ. ವಿಲ್ ಬರೆಯದೆ ಮರಣಿಸಿದರೆ ಆಸ್ತಿ ಎಲ್ಲ ವಾರಸುದಾರರಿಗೂ ಹಂಚಿಕೆಯಾಗುತ್ತದೆ. ಇದಕ್ಕೆ ಹೆಚ್ಚು ಅಡಚಣೆಗಳು ಬರಲಾರದು. ಆದರೆ ತಂಟೆ ತಕರಾರು ಬರುವುದು ಪಿತ್ರಾರ್ಜಿತ ಆಸ್ತಿಯ ಹಂಚಿಕೆಯಲ್ಲಿ. 

ಕೆಲ ದಶಕಗಳ ಹಿಂದಿನವರೆಗೆ, ಸಾಧಾರಣವಾಗಿ, ಹಿರಿಯರು ಗಳಿಸಿದ್ದ ಆಸ್ತಿಯನ್ನು ತಮ್ಮ ಕೈಯಿಂದಲೇ ಕಣ್ಣೆದುರೇ ಹಂಚಿ, ಛಿದ್ರ ಮಾಡುವ ಮನಸ್ಥಿತಿ ಹೊಂದಿರಲಿಲ್ಲ. ಬದಲಿಗೆ ತಮ್ಮ ಹಿರಿಯರ ಆಸ್ತಿಯನ್ನು ತಾವು ಹೇಗೆ ಜೋಪಾನ ಮಾಡಿ ನಮಗೆ  ಹಸ್ತಾಂತರ ಮಾಡಿದರೋ  ಹಾಗೇ ನಾವೂ ನಮ್ಮ ಕಣ್ಣೆದುರಿಗೆ ಛಿದ್ರ ಮಾಡದೆ ನಮ್ಮ ಗಂಡು ಮಕ್ಕಳಿಗೆ ಹಸ್ಥಾಂತರಿಸಿದರೆ ಮುಂದೆ ಅವರು ಅದನ್ನು ಜೋಪಾನ ಮಾಡ್ತಾರೆ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಹೀಗಾಗಿ ಅಂದೆಲ್ಲಾ ವಿಲ್ ಬರೆಯುವ, ತಮ್ಮ ಜೀವವಿರುವಾಗಲೇ ಆಸ್ತಿಯನ್ನು ಭಾಗ ಮಾಡುವ ಪರಿಪಾಠವಿರಲಿಲ್ಲ. ಪರಿಣಾಮ, ತಂದೆಯಿAದ ಗಂಡು ಮಕ್ಕಳಿಗೆ, ನಂತರ ಅವರಿಂದ ಅವರ ಗಂಡು ಮಕ್ಕಳಿಗೆ ಹಸ್ತಾಂತರತವಾಗಿ ಸಾಗುತ್ತಿತ್ತುಯಾವುದೇ ವಾದ ವಿವಾದಗಳಿಲ್ಲದೆ,

 ಆಯಾ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳು ವಿವಾಹವಾಗಿ ಪತಿಯ ಮನೆಗೆ ಹೋದ ಮೇಲೂ ತಂದೆಯ ಮನೆಯ ಆಸ್ತಿ ಕಡೆ ಆಸಕ್ತಿ ತೋರದೆ, ತಮ್ಮ ಪತಿಯ ಮನೆಯ ಆಸ್ತಿ, ಆತನ ಸಂಪಾದನೆಯೇ ತಮ್ಮ ಆಧಾರ ಎಂದು ನೆಚ್ಚಿಕೊಂಡು ಸಮಾಧಾನವಾಗಿ ಬಾಳ್ವೆ ನಡೆಸುತ್ತಿದ್ದರು. ಇಂತಹಾ ಕುಟುಂಬದ ಹೆಣ್ಣು ಮಕ್ಕಳಿಗೆ ಅಕಸ್ಮಾತ್ ಎಂತಹುದಾದರೂ ಕಷ್ಟ ನಷ್ಟ ತೊಂದರೆಗಳು ಬಂದಾಗ, ಕುಟುಂಬದ ಹಿರಿಯರಾದ ಅಮ್ಮ ಅಪ್ಪನೋ ಒಡಹುಟ್ಟಿದವರೋ ಯಾರಾದರೂ ಇವರ ನೆರವಿಗೆ ಬಂದು ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎಂಬುವುದು ನಮ್ಮ ವiನಸ್ಸಿನಲ್ಲಿಲ್ಲ ಎಂಬುದನ್ನು ಅಮ್ಮ ಅಪ್ಪನ ಆಸ್ತಿ ಹಂಚಿಕೊAಡ ಸೋದರರು ತಮ್ಮ ವರ್ತನೆಯಿಂದ ವ್ಯಕ್ತ ಪಡಿಸುತ್ತಿದ್ದರು. ಹೀಗಾಗಿ ಆ ಹೆಣ್ಣುಗಳಿಗೆ ತೌರಿನ ಪ್ರೀತಿ, ವಿಶ್ವಾಸ, ಆದರ ಎಲ್ಲವೂ ಭದ್ರವಾಗಿತ್ತು. ಸಂತಸ ಸಮಾಧಾನವನ್ನೂ ತಂದಿತ್ತು. ತಮ್ಮ ಸೋದರರು ಎಲ್ಲಿದ್ದರೂ ಹೇಗಿದ್ದರೂ ತಣ್ಣಗಿರಲಿ, ಸುಖ ಸಂತಸದಿAದಿರಲಿ ಎಂದು ಸೋದರಿಯರೂ ಒಡಹುಟ್ಟಿದವರಿಗೆ ಒಳಿತು ಹಾರೈಸುತ್ತಿದ್ದರು. ಇದು ಅಂದಿನ ಕುಟುಂಬಗಳ ಕಿರು ಚಿತ್ರಣ. 

ಯಾವುದೇ ನೀತಿ, ನಿಯಮ ಕಾನೂನೂ ಮಾಡಿದರೂ ಅದು “ಬಹು ಜನ ಹಿತಾಯ ಬಹು ಜನ ಸುಖಾಯ” ಎಂಬ ಗುರಿ ಹೊಂದಿರಬೇಕು. ಅದು ಸಮಾಜದಲ್ಲಿ ಶಾಂತಿ ಕದಡಿ ವೈರತ್ವ ಬೆಳೆಸಿ ನೆಮ್ಮದಿ ದ್ವಂಸ ಮಾಡುವ ಉದ್ದೇಶವನ್ನು ಹೊಂದಿರಬಾರದು ಎಂಬುದು ಸರ್ವ ಸಮ್ಮತವಾದ ಅಭಿಪ್ರಾಯವಾಗಿರುತ್ತದೆ. ಇತ್ತೀಚೆಗೆ ಜಾರಿಗೆ ಬಂದ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿಯ ತಿದ್ದುಪಡಿ, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಂತೇನೇ ಹೆಣ್ಣು ಮಕ್ಕಳಿಗೂ ಸಮನಾದ ಹಕ್ಕಿರುತ್ತದೆ ಎಂಬುದನ್ನು ಕೆಲವು ಷರತ್ತುಗಳೊಂದಿಗೆ ಘೋಷಿಸಿದೆ. ಕಾನೂನಿನಡಿ ಎಲ್ಲರೂ ಸಮ. ಹೆಣ್ಣು ಗಂಡು ಎಂಬ ಬೇಧ, ತಾರತಮ್ಯವಿಲ್ಲ ಎಂಬುದು ಕಾನೂನಿನ ಆಶಯ. ಜೊತೆಗೇನೇ, ಅಪ್ಪನೋ ತಾತನೋ ಸಂಪಾದಿಸಿದ ಆಸ್ತಿ, ಕೇವಲ ಆ ಕುಟುಂಬದ ಗಂಡು ಮಕ್ಕಳಿಗೆ ಮಾತ್ರ ಸೀಮಿತ, ಅದು ಅವರ ಸ್ವತ್ತು, “ವಿವಾಹವಾಗಿ ಕುಟುಂಬದಿAದ ಹೊರಗೆ ಹೋದ ಹೆಣ್ಣು ಮಕ್ಕಳಿಗೆ ಆ ಆಸ್ತಿ ನಾಸ್ತಿ” ಎಂಬ ನಿಲುವು ಸಮ್ಮತವಲ್ಲ ಎಂದಿದೆ ಕಾನೂನು. ಇದೆಲ್ಲಾ ಕಾಗದದ ಮೇಲೆ ಓದಲು ಚಂದವೇ. ಸಮಾನತ್ವ ಬೋಧಿಸುವ ಎಲ್ಲರಿಗೂ ಸಮಾಧಾನವೇ ತರುತ್ತದೆ.

 ವಿವಾಹಿತ ಹೆಣ್ಣುಗಳಿಗೆ ಕಾರಣಾಂತರಗಳಿAದ ಅತ್ತ ಪತಿಯ, ಆ ಮನೆಯ ಆಶ್ರಯ, ನೆರವು ಸಿಗದೆ, ಇತ್ತ ತಾನು ವಿವಾಹವಾಗಿ ಹೊರಗೆ ಬಂದ ಕಾರಣ ತೌರಿನ ಆಶ್ರಯ ನೆರವೂ ಸಿಗದೆ ಜೀವನೋಪಾಯಕ್ಕೆ ತೊಂದರೆಗೊಳಗಾದ ಒಂದಷ್ಟು ಪ್ರಮಾಣದ ದುರದೃಷ್ಟ ಹೆಣ್ಣುಗಳಿಗೆ ಬಹುಶಃ  ಪ್ರಸಕ್ತ ಕಾನೂನು ದೇವರಿತ್ತ ವರವಾಗಿರಬಹುದೇನೋ.  ಆದರೆ ಕೆಲವರಿಗೆ ವರವಾಗಬಹುದಾದದ ಈ ಕಾನೂನು ಮತ್ತೆ ಹಲವರಿಗೆ ತೀವ್ರ ಶಾಪವಾಗಿ ಪರಿಣಮಿಸುತ್ತಿದೆ ಎಂಬ ಸತ್ಯವನ್ನು ಇತ್ತೀಚಿನ ಕಾಲದಲ್ಲಿ ಆಸ್ತಿ ಪಾಲು ಕೇಳಿ ಕೋರ್ಟು ಮೆಟ್ಟಿಲು ಹತ್ತುತ್ತಿರುವ ಹಲವು ಪ್ರಕರಣಗಳು ಪುಷ್ಟೀಕರಿಸುತ್ತಿವೆ. 

“ಈ ಕಾನೂನನ್ನು ಬಳಸಿಕೊಂಡರೆ ಎಂದೋ ಸತ್ತ ತಾತ, ಅಪ್ಪನ ಆಸ್ತಿಯಲ್ಲಿ ವಿವಾಹಿತ ಹೆಣ್ಣು ಮಕ್ಕಳಿಗೂ ಪಾಲು ಸಿಗುವುದಂತೆ, ಆಸ್ತಿಯೋ ಅದಕ್ಕೆ ತಕ್ಕ ಹಣದ ಪರಿಹಾರವೋ ಯಾವುದೇ ಒಂದು ಶ್ರಮವಿಲ್ಲದೆ ನಮಗೆ ಸಿಗುವುದಾದರೆ ನಾವ್ಯಾಕೆ ಸುಮ್ಮನಿರಬೇಕು” ಎಂಬ ಧೋರಣೆ ಹೊಂದಿದ ಹಲವು ವಿವಾಹಿತ ಹೆಣ್ಣು ಮಕ್ಕಳು, ತಮ್ಮ  ಒಡಹುಟ್ಟಿದವರ : ತೌರಿನ ವಿರುದ್ಧ ಎದ್ದು ನಿಂತು ಕೋರ್ಟುಗಳಲ್ಲಿ ಕೇಸುಗಳನ್ನು ದಾಖಲಿಸುತ್ತಿದ್ದಾರೆ,.  ಯಾಕೆ ಹೀಗೆ ಮಾಡಿದಿರಿ ! ಎಂದರೆ , “ಆಹಾ ! ನಾವೇನು ಮಾಡಿದಿವಿ ತಪ್ಪು ? ಕಾನೂನು ಕೊಟ್ಟಿರುವ ಹಕ್ಕಿನ ಫಲವನ್ನು ಉಣ್ಣುವುದು ತಪ್ಪೇ ! ಗಂಡು ಮಕ್ಕಳ ತಾತ, ಅಪ್ಪ, ನಮಗೂ ತಾತ, ಅಪ್ಪನೇ ತಾನೇ ! ಈ ಹಿರಿಯರ ಆಸ್ತಿ ಪೂರ್ತಿ ಕುಟುಂಬದ ಗಂಡುಗಳೇ ನುಂಗಿ ನೀರು ಕುಡಿಯಬೇಕಾ ! ಅದರಲ್ಲಿ ನಮಗೂ ಒಂದಷ್ಟು ತಳ್ಳಿದರೆ ಇವರ ಗಂಟೇನು ಹೋಗತ್ತೇ ? ಗಂಡು ಮಕ್ಕಳಂತೇನೇ ನಮಗೂ ಕಷ್ಟ ತೊಂದರೆಗಳು ಇರುವುದಿಲ್ಲವೇ ?À ಪಿತ್ರಾರ್ಜಿತ ಆಸ್ತಿಯೋ ಹಣವೋ ಒಂದಷ್ಟು ನಮಗೂ ಸಿಕ್ಕಿದರೆ  ಸ್ವಲ್ಪ ಸಹಾಯವಾಗಬಹುದು. 

ಇಷ್ಟಕ್ಕೂ ಕೇಸು ಹಾಕಿರುವುದು ವ್ಯವಹಾರ, ಕಾನೂನಿನ ಬಳಕೆ, ಅಷ್ಟೇ, ಒಡಹುಟ್ಟದವರು ಎಂಬುದು ಸಂಬAಧ. ವ್ಯವಹಾರ ಬೇರೆ, ಸಂಬAಧ ಬೇರೇ, ವ್ಯವಹಾರ ಎಂದು ಕೋರ್ಟಿನಲ್ಲಿ ವಾದ ಮಾಡ್ತೀವಿ, ಅಲ್ಲಿಂದ ಹೊರಗೆ ಬಂದಾಕ್ಷಣ ಇವ್ರು ಸಂಬಂಧ ಅಂತ ತಬ್ಬಿ ಮುದ್ದಾಡ್ತೀವಿ, ವ್ಯವಹಾರ, ಸಂಬAಧ ಇವೆರಡನ್ನೂ ಬೇರೆಯಾಗೇ ನೋಡಬೇಕು. ಕೇಸ್ ಹಾಕಿದರೂ, ಈ ಮೊದಲಿನಂತೇನೇ ಅವರ ಮನೆಗಳಿಗೆ ನಾವು ಹೋಗಿ ಬರುವುದು, ಆವರು ನಮ್ಮಲ್ಲಿಗೆ ಬರುವುದು, ಸಾಂದರ್ಭಿಕ ಕಾಣಿಕೆಗಳನ್ನು ಕೊಡುವುದು, ತೆಗೆದುಕೊಳ್ಳುವುದು ಎಲ್ಲವೂ ಹಿಂದಿನತೇನೇ ನಡೆಯಲಿ ಬಿಡಿ” ಎಂಬುವುದು ಆಸ್ತಿ ಕೇಳ ಹೊರಟಿರುವ ಹೆಣ್ಣುಗಳ ನಿಲುವು.   

ಇನ್ನು ಅತ್ತಣ ಚಿತ್ರಣ. ಅದೇ ಪಿತ್ರಾರ್ಜಿತ ಆಸ್ತಿ ಅನುಭವಿಸುತ್ತಿರುವವರ ವಾದ ಏನು ನೋಡೋಣ. “ನಾವೆಲ್ಲಾ ಎಷ್ಟೋ ಕಷ್ಟಪಟ್ಟು ನಮ್ಮೀ ಸೋದರಿಯರೆಲ್ಲರಿಗೂ ಒಳ್ಳೆಯ ಸಂಬAಧ ಹುಡುಕಿ ಅನುಕೂಲಕರ ಗಂಡುಗಳೊAದಿಗೆ ವಿವಾಹ ಮಾಡಿದ್ದೇವೆ, ಪತಿಯ ಗೃಹದಲ್ಲೂ ಇವರಿಗೆ ಎಲ್ಲ ಅನುಕೂಲಗಳಿವೆ. ಸುಖ ಬಾಳ್ವೆ ನಡಸಲು ಯಾವುದೇ ಕಷ್ಟ , ತೊಂದರೆ ಇಲ್ಲದ ಇವರೇಕೆ ನಮಗೆ ಹಿರಿಯರ ಆಸ್ತಿಯಲ್ಲಿ ಭಾಗ ಕೊಡಿ ಎಂದು ಕೇಳುವುದು ? ಇವರ ಸಾಂಸಾರಿಕ ಜೀವನಕ್ಕೆ ಕಷ್ಟವಾಗಿದ್ದರೆ, ಬಡತನವಿದ್ದರೆ, ಪತಿ ಕೈಲಾಗದವನೋ ಮೂರ್ಖನೋ ದುರಭ್ಯಾಸವುಳ್ಳವನೋ ಆಗಿದ್ದು  ತೊಂದರೆಯಾಗಿದ್ದರೆ ಇವರು ನಮ್ಮ ನೆರವು ಕೇಳುವುದರಲ್ಲಿ ಅರ್ಥವಿದೆ. ಈ ಬಾಧೆಗಳಾವುವೂ ಇಲ್ಲದಾಗ, ಇವರ ಬಳಿ ಇರುವುದನ್ನು ನೆಮ್ಮದಿಯಿಂದ ಅನುಭವಿಸಿ ತೃಪ್ತ ಜೀವನ ನಡೆಸದೆ ತೌರಿನವರ ಮೇಲೆ ದಂಡೆತ್ತಿ ಬರುವುದೇ ! ಇದು ನ್ಯಾಯವೇ ! ಅಣ್ಣ ತಮ್ಮ ತೌರು ಎಂಬ ಪ್ರೀತಿ ವಿಶ್ವಾಸ, ಇಲ್ಲದೆ ಆಸ್ತಿ ಹಣವೇ ಪ್ರಧಾನ ಎನ್ನುವ ಇವರ ಮೇಲೇಕೆ ನಮಗೆ ಪ್ರೀತಿ ವಿಶ್ವಾಸವಿರಬೇಕು ! ಅವರಿಗೂ ನಮಗೂ ಸಂಬAಧ ಕಡಿದುಹೋಯಿತು ಎಂದುಕೊಳ್ಳುತ್ತೇವೆ ಎಂದು ಹಲ್ಲು ಕಡಿಯುವವರು ಹಿರಿಯರ ಆಸ್ತಿ ಇಟ್ಟುಕೊಂಡಿರುವ ಈ ಸೋದರರು. ನಂತರದ ಪರಿಣಾಮ, ಸೋದರರ ಸೋದರಿಯರ ನಡುವೆ ಮಾತು ಕತೆ, ಬಂದ್, ಈ ಕುಟುಂಬಗಳ ನಡುವೆ ಬದ್ಧ ವೈರ ಆರಂಭವಾಗಿ, ಇರ‍್ಯಾರ ಮನೆಗಳಲ್ಲಿ ಶುಭಾಶುಭಗಳೇನೇ ನಡೆದರೂ ಅದು ತಮಗೆ ಸಂಬಂಧಿಸಿಲ್ಲ ಎಂಬ ದೃಢ ನಿಲುವನ್ನು ಆಚರಣೆಗೆ ತಂದು, ರೂಲಿಂಗ್À ಹಾಗೂ ಅಪೋಸಿಶನ್ ಪಾರ್ಟಿಗಳಂತೆ ಆರೋಪ ಪ್ರತ್ಯಾರೋಪ ವರ್ತನೆ ಶುರುವಾಗುತ್ತದೆ. ದೊಡ್ಡವರಿಂದ ಶುರುವಾದ ಈ ಪ್ರತಿಕ್ರಿಯೆ, ನಂತರದ ಕಾಲದಲ್ಲಿ ಇದು ಸಾಂಕ್ರಾಮಿಕ ರೋಗದಂತೆ, “ಹಿರಿಯ ನಾಗನ ನಂಜು ಕಿರಿಯ ನಾಗನ ಪಾಲು” ಎಂಬ ಗಾದೆಯಂತೆ ಕುಟುಂಬಗಳ ಕಿರಿಯರಿಗೂ  ಹರಡಿ, “ಹೊಡಿ ಮಗ ಹೊಡಿ ಮಗ ಬಿಡಬೇಡ ಅವನ್ನ” ಎಂಬ ಚಲನ ಚಿತ್ರ ಗೀತೆಯಂತೆ ಎರಡೂ ಕಡೆಯವರೂ ಮೀಸೆ ತಿರುವಿ, ಪರಸ್ಪರ ವಿರುದ್ಧ ತೊಡೆ ತಟ್ಟಿ ಕತ್ತಿ ಮಸೆಯಲಾರಂಭಿಸುತ್ತಿದ್ದಾರೆ. 

ಈ ಮಧ್ಯೆ, ಈ ಕುಟುಂಬಗಳ ಬಂಧುಗಳ ಪೈಕಿ, ಕೆಲವರು ಕೇಸು ಹಾಕಿದವರ ಪಕ್ಷ, ಮತ್ತೆ ಕೆಲವರು ಕೇಸು ಹಾಕಿಸಿಕೊಂಡವರ ಪಕ್ಷ ಸೇರಿದರೆ,  ಉಳಿದ ಅಲ್ಪ ಸಂಖ್ಯಾತರು ಯಾರ ಪಕ್ಷವನ್ನೂ ಸೇರ ಬಯಸದೆ ನಿರ್ಲಿಪ್ತರಾದರೂ, ಆ ಪಕ್ಷ, ಈ ಪಕ್ಷದವರು, ಈ ಅಲ್ಪ ವರ್ಗದರನ್ನು ಸುಮ್ಮನಿರಲು ಬಿಡದೆ, ತಮ್ಮತ್ತ ಅವರತ್ತ  ಎಳೆದಾಡಿ, ಮಾನಸಿಕವಾಗಿ ಹಿಂಸಿಸಿ, ನಿಷ್ಠೂರಕ್ಕೆ  ಒಳಪಡಿಸುತ್ತಿರುವುದೂ ಕಂಡುಬರುತ್ತಿದೆ. 

ಇನ್ನು ಕೋರ್ಟಿನಲ್ಲಿರುವ ಕೇಸಿನ ಪರಿಣಾಮ ಇವರ ಕಡೆಯೋ, ಅವರ ಕಡೆಯೋ, ಯಾರ ಕಡೆಗಾದರೂ, ಅದರ ಭೀಕರ ಪರಿಣಾಮವನ್ನು ಏನನ್ನೂ ತಿನ್ನದ, ಕುಡಿಯದ, ಯಾವ ಫಲವನ್ನೂ ಅನುಭವಿಸದ, ಇತರ ಬಂಧುಗಳೆಲ್ಲರೂ ಹಂಚಿಕೊಳ್ಳಬೇಕಾದ ದುಸ್ಥಿತಿಯಾಗುತ್ತಿದೆ. 

ಇದುವರೆಗೂ ನಾ ಹೇಳಿದ್ದೆಲ್ಲಾ ನಡೆಯುತ್ತಿರುವುದು ನಾ ಕಂಡು, ಕೇಳಿದ ಒಂದೆರಡು ವಾಸ್ತವ ಪ್ರಸಂಗಗಳಲ್ಲಿ ಮಾತ್ರವೇ ಅಲ್ಲ.. ಬದಲಿಗೆ, ಪಿತ್ರಾರ್ಜಿತ ಆಸ್ತಿ ಸಂಪಾದಿಸಿದ್ದರೂ ವಿಲ್ ಬರೆದಿಡದೆ ನಿಧನರಾದ ಹಿರಿಯರ ಕುಟುಂಬಗಳಲ್ಲಿ ಹೆಣ್ಣು –ಗಂಡು ಮಕ್ಕಳ ನಡುವೆ ಆಸ್ತಿ ಪಾಲಿಗಾಗಿ ನಡೆಸುತ್ತಿರುವ ಹಲವು ಕುಟಂಬಗಳ ತೀವ್ರ ಕಿತ್ತಾಟದ ಪ್ರಕರಣಗಳು ಮುಂದುವರಿಯುತ್ತಿವೆ. ‘ಅವನು ಕೊಡ, ಇವನು ಬಿಡ ‘ಎಂಬAತೆ, ಪಡೆದವರು ಕೊಡುವುದಿಲ್ಲ, ಸಿಗದವರು ಕೇಳದೆ ಸುಮ್ಮನಿರದ (ವಿಲ್ ಬರೆಯದಿದ್ದರೂ ಹಿರಿಯರ ಆಸ್ತಿಯಲ್ಲಿ ಒಂದಷ್ಟು ಚೂರನ್ನೋ : ಅದರ ಪಾಲಿನ ವಾಸನೆಯನ್ನೋ ಒಡಹುಟ್ಟಿದ ಸೋದರಿಯರಿಗೆ ಬಿಡದೆ ಎಲ್ಲವನ್ನೂ ತಾವೇ ಸ್ವಾಹಾ ಮಾಡಿದ ಸೋದರರ) ಹಲವು ಕುಟುಂಬಗಳ ಕತೆಗಳಿವು, “ಇಂಟಿಂಟಿ ರಾಮಾಯಣಂ, ಮನೆ ಮನೆಯ ಕತೆಗಳು” ಇವಾಗಿದೆ. ಹಿಂದೊಮ್ಮೆ ಬಹು ಹೆಸರು ಪಡೆದು ಪ್ರದರ್ಶಿತವಾದ ತೆಲುಗು ನಾಟಕದ ಶೀರ್ಷಿಕೆ “ತಪ್ಪೆವರದಿರಾ ರಾಘವಾ “ ಎಂಬಂತೆ ದಶಕಗಳ ಕಾಲದಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ಸೋದರ ಸೋದರಿಯರ ಕುಟುಂಬಗಳು ಇಂದು ಆಸ್ತಿಗಾಗಿ ವಾದ –ವಿವಾದ ಶುರುಮಾಡಿ ಆಜನ್ಮ ವೈರಿಗಳಂತಾಗಲು ಕಾರಣ, “ಮಣ್ಣು, ಹೊನ್ನಿನ ಆಸೆ, ಅತ್ಯಾಶೆ, ದುರಾಸೆಯೋ ? ನನಗೇ ಎಲ್ಲಾ, ನಿನಗೇನೂ ಇಲ್ಲ ಎಂಬ ಸ್ವಾರ್ಥ ಧೋರಣೆ-ನಿಲುವೋ ! ಅಥವಾ ಸುಮ್ಮನೆ ನೆಮ್ಮದಿಯಾಗಿದ್ದವರನ್ನು ಎಂದೋ ಸತ್ತವರ ಆಸ್ತಿಯಲ್ಲಿ ನೀವೂ ಭಾಗ ಕೇಳಿ, “ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು” ಎಂಬ ಅಂದೆಂದೋ ಮಾಡಿದ ಗಾದೆಯನ್ನು ಇಂದೂ ಅದು ಪ್ರಸ್ತುತ ಎಂದು ಸಾಭಿತು ಪಡಿಸಿ ಎಂದು ಹೊಡೆದೆಬ್ಬಿಸಿದ ಕಾನೂನೋ ! “ ತಪ್ಪು ಯಾರದು ! ಯಾರದು ತಪ್ಪು ! ತಪ್ಯಾರದ್ದು ! ? ಪ್ರಶ್ನೆಗೆ ಸರ್ವ ಸಮ್ಮತ ಉತ್ತರ ಓದುಗರಿಗೇ ಬಿಟ್ಟಿದೆ.

  

Comments