ಧನುರ್ಮಾಸ-ಮಹತ್ವ

ಧನುರ್ಮಾಸ-ಮಹತ್ವ   

                                                                                                                   ಲೇಖಕರು ಎಂಆರ್ವೆಂಕಟರಾಮಯ್ಯ,  ಬೆಂಗಳೂರು 

                                                                                                                                    

            ಧನುಸ್ಸುಎಂದರೆ ಬಿಲ್ಲು. ‘ಮಾಸಎಂದರೆ ತಿಂಗಳು. ಹೀಗೆಂದಾಗ, ಬಿಲ್ಲಿಗೂ ತಿಂಗಳಿಗೂ ಎತ್ತಣ ಸಂಬಂಧ? ಮಾಸ : ತಿಂಗಳಿಗೆ ಹೆಸರೇ ಏಕೆ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ : 

        ಧನುರ್ಮಾಸ ಬರುವುದು ಪ್ರತಿ ವರ್ಷದ ಡಿಸೆಂಬರ್ಜನವರಿ ತಿಂಗಳಿನಲ್ಲಿ. ಅಂದರೆ ಹಿಂದುಗಳ ಚಾಂದ್ರಮಾನ ಸಂವತ್ಸರದ ಮಾರ್ಗಶೀರ್ಷ ಪುಷ್ಯ ಮಾಸಗಳಲ್ಲಿ.

     ತಿಂಗಳಲ್ಲೇ ಏಕೆ ಧನುರ್ಮಾಸ ಬರಬೇಕು ಎಂಬುದಕ್ಕೂ ಕಾರಣವಿದೆ. ಸೂರ್ಯನು ಧನುರ್ ರಾಶಿಗೆ ಯಾವ ದಿನಾಂಕದಂದು ಪ್ರವೇಶ ಮಾಡುತ್ತಾನೋ ಅಂದಿನಿಂದ ಆರಂಭವಾಗಿ, ಸೂರ್ಯನು ಮಕರ ರಾಶಿಗೆ ಬರುವವರೆಗಿನ ಒಂದು ತಿಂಗಳ ಅವಧಿಯನ್ನುಧನುರ್ಮಾಸವೆಂದು ಕರೆಯಲಾಗುತ್ತದೆ.

    ಇದೇ ಧನುರ್ಮಾಸವನ್ನುಶೂನ್ಯ ಮಾಸ, ಚಾಪ ಮಾಸ, ಕೋದಂಡ ಮಾಸ, ಕರ್ಮುಖ ಮಾಸಎಂದೂ ಕರೆಯವ ರೂಢಿಯಿದೆ. ಇದುವರೆಗೆ ಧನುರ್ಮಾಸದ ಅರ್ಥ, ಅದರ ಹಿನ್ನೆಲೆ,  ಅವಧಿಯ ಕುರಿತು ಕೆಲವು ಮಾಹಿತಿಗಳನ್ನು ತಿಳಿದೆವು.


                  
ಧನುರ್ಮಾಸದ ಮಹತ್ವ\ ವಿಶೇಷತೆಗಳು

   ತಿಂಗಳನ್ನು  ಶೂನ್ಯಮಾಸವೆಂದು ಪರಿಗಣಿಸಿರುವುದರಿಂದ  ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು, ಅಂದರೆ ನಾಮಕರಣ, ವಿದ್ಯಾರಂಭ, ಉಪನಯನ, ವಿವಾಹ, ಆಸ್ತಿ ಕೊಳ್ಳುವಿಕೆ, ನೂತನ ಗೃಹ ಪ್ರವೇಶ ಇನ್ನೂ ಅನೇಕ ಶುಭ ಕಾರ್ಯಗಳಿಗೆ ಶುಭ ಸಂದರ್ಭವಲ್ಲ. ಆದರೆ, ಮಾಸ ದಲ್ಲಿ  ಬರುವ ಪಿತೃ ಕಾರ್ಯಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಮುಂದೂಡುವ ಹಾಗಿಲ್ಲ. ಪಿತೃಗಳಿಗೆ ತರ್ಪಣ, ಶ್ರಾದ್ಧಾದಿಗಳನ್ನು ಮಾಡಿ ಭೋಜನ, ದಕ್ಷಿಣೆ ಧಾನಗಳನ್ನು ನೀಡಿದರೆ ಪುಣ್ಯ ಲಭ್ಯ ಎಂದಿದೆ ಶಾಸ್ತ್ರಗಳು. ಧನುರ್ಮಾಸ, ಕೇವಲ ದೈವಾರಾಧನೆಗೆ ಸಂಬಂಧಿಸಿದ ಯಾಗ, ಯಜ್ಞ, ಹೋಮ, ಹವನ, ಪೂಜಾದಿಗಳಿಗೆ ಪವಿತ್ರ ಕಾಲ ಇದಕ್ಕೆ ಕಾರಣ, ತಿಂಗಳಲ್ಲಿ ಮನುಷ್ಯರ ಚಿತ್ತವೆಲ್ಲವೂ ದೇವರ ಕಡೆಗಿರಲಿ, ಆತನ ಪೂಜೆ ಧಾನ ಜಪ ತಪಗಳಿಂದ ಪುಣ್ಯ ಗಳಿಸಲಿ ಎಂಬ ಸದುದ್ದೇಶವಿದೆ.

            ಧನುರ್ಮಾಸದ ಬ್ರಾಹ್ಮಿ ಮುಹೂರ್ತದಲ್ಲಿ ಋಷಿ ಮುನಿಗಳೆಲ್ಲರೂ ಶ್ರೀಹರಿಯನ್ನು ಪ್ರಾರ್ಥಿಸುವುದರಿಂದ, ಇದು ವಿಷ್ಣು ಭಕ್ತರಿಗೆ ಅತಿ ಪವಿತ್ರವಾದ ತಿಂಗಳಾಗಿದೆ. ಮಾಸದ ಬ್ರಾಹ್ಮಿ ಮುಹೂರ್ತದಲ್ಲಿ ಮಾಡುವ ಶ್ರೀಹರಿಯ ಪೂಜೆ, ಧ್ಯಾನ, ಜಪ, ಅರ್ಹರಿಗೆ ಭೋಜನವಸ್ತ್ರ , ಧನ ದಾನ ಮಹಾ ಫಲಪ್ರದ, ಭಕ್ತರಿಗೆ ಮಂಗಳ, ಶುಭವನ್ನು ಉಂಟುಮಾಡುತ್ತದೆ ಎಂದು ಪಂಚರಾತ್ರಾಗಮದ ಬ್ರಹ್ಮ ಸಂವಾದದಲ್ಲಿ ಬರುವ ಧನುರ್ಮಾಸ ಮಹಾತ್ಮೆ ತಿಳಿಸಿದೆ. ಬ್ರಾಹ್ಮಿ ಮುಹೂರ್ತ ಎಂದರೆ ಸೂರ್ಯೋದಯಕ್ಕೆ  ಒಂದೂವರೆ ಗಂಟೆ ಮುಂಚಿನ ಅವಧಿ ಎಂಬ ವಿವರಣೆ  ಶಾಸ್ತ್ರಜ್ಞರದು. ಆದ್ದರಿಂದಲೇ ಭಕ್ತರೂ ಸೂರ್ಯೋದಯಕ್ಕೆ ಮೊದಲೇ ಎದ್ದು ತಿಂಗಳ ಕಾಲ ಎಡಬಿಡದೆ ನದಿ, ಸರೋವರ, ಸಮುದ್ರ ಸ್ನಾನ ಮಾಡಿ ಶ್ರೀಮಹಾವಿಷ್ಣುವನ್ನು ಪೂಜಿಸುವುದರಿಂದ  ಅಶ್ವಮೇಧಯಾಗ ಮಾಡಿದಷ್ಟು ಪುಣ್ಯ, ಸಹಸ್ರ ಕಾಲ ಆತನನ್ನು ಪೂಜಿಸಿದಷ್ಟು ಮಹಾ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ. ಮಾಸದ ಉದಯ ಕಾಲದಲ್ಲೇ ಭಕ್ತರು ಭಗವಂತನ ಸ್ತೋತ್ರಗಳನ್ನು ಪಠಿಸುತ್ತಾ ಬೀದಿಗಳಲ್ಲಿ ಸಂಚರಿಸುವುದು ಸಾಮಾನ್ಯ ದೃಶ್ಯವಾಗಿರುತ್ತದೆ. ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದಲೇ ಅಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಬೆಳಗ್ಗೆ ಬೇಗನೆ ಏಳುವುದು ಒಳಿತು. ಆದ್ದರಿಂದಲೇಅರ್ಲಿ ಟು ಬೆಡ್, ಅಂಡ್ ಅರ್ಲಿ ಟು ರೈಸ್ಎಂಬ ಇಂಗ್ಲಿಷ್ ಗಾದೆ ಬಳಕೆಗೆ ಬಂದಿದೆ. ಉಷಃ ಕಾಲದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ, ಹೊಗೆ, ಧೂಳು, ವಾಹನಗಳ, ಮನುಷ್ಯರ ಗಲಾಟೆ ಇತ್ಯಾದಿಗಳ ಮಾಲಿನ್ಯ ಇರದ ಕಾರಣ, ಉಸಿರಾಡಲು ಶುದ್ಧ ಗಾಳಿ ನೆಮ್ಮದಿಗಳನ್ನು ಪಡೆಯಲು ಸಾಧ್ಯ.

      ಪೂಜಾ ನಂತರದ ವಿಷಯ, ನೈವೇದ್ಯ ಕೊಡುವಿಕೆ. ಧನುರ್ಮಾಸದ ಪೂಜೆಗೆ ಹುಗ್ಗಿ ಅತ್ಯುತ್ತಮ ನೇವೇದ್ಯ, ಇದರಿಂದ ಭಕ್ತರ ಇಷ್ಟಗಳೂ ನೆರವೇರಿ ಮೋಕ್ಷ  ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಮುದ್ಗಾನ್ನ. ಅಂದರೆ, ಹುಗ್ಗಿ. ಅಕ್ಕಿಯ ಎರಡರಷ್ಟು ಪ್ರಮಾಣದ ಹೆಸರು ಬೇಳೆ, ಒಣ ಶುಂಠಿ, ಮೆಣಸು, ಜೀರಿಗೆಪತ್ರೆ ಪತ್ರೆ , ದಾಲ್ಚಿನ್ನಿ, ಜಾಜಿ ಕಾಯಿ, ಲವಂಗ, ಕೊಬ್ಬರಿ, ಉಪ್ಪು, ತುಪ್ಪಗಳ ಇವುಗಳ ಮಿಶ್ರಣವನ್ನು ಬೇಯಿಸಿದ್ದೇ ಹುಗ್ಗಿ. ಇದರ ಜೊತೆಗೆ, ಹುಣಸೇ ಹಣ್ಣಿನಿಂದ ಮಾಡಿದ ಗೊಜ್ಜು, ಮೊಸರನ್ನವನ್ನು ಸಮರ್ಪಿಸಬೇಕು. ಇದಕ್ಕೆ ಹುಗ್ಗಿಯೇ ಏಕಾಗಬೇಕು ?  ಬೇರೆ ಪದಾರ್ಥಗಳೇಕೆ ಆಗಬಾರದು ಎಂಬ ಪ್ರಶ್ನೆಗೆ ಸಕಾರಣಗಳಿವೆ. ಮಾರ್ಗಶೀರ್ಷ -ಪುಷ್ಯ ಮಾಸ, ಮೈ ಕೊರೆಯುವ ಚಳಿಗಾಲ. ಸಮಯದಲ್ಲಿ ಮೈ ಚರ್ಮ ಒಡೆದು ಸಣ್ಣ ಬಿರುಕುಗಳು ಕಾಣಿಸಿಕೊಳ್ಳುವುದು. ಜೊತೆಗೆ, ಶರೀರದಲ್ಲಿ ಕೊಬ್ಬಿನ ಅಂಶ ಕಡಿಮೆಯಿರುತ್ತದೆ. ಕಾರಣಗಳಿಂದ ಚರ್ಮವನ್ನು ಸುಸ್ಥಿತಿಯಲ್ಲಿಡಲು ಹಾಗೂ ಕೊಬ್ಬಿನ ಅಂಶವನ್ನು ಅಗತ್ಯ ಮಟ್ಟಕ್ಕೆ ಹೆಚ್ಚಿಸಿ ಶಾರೀರಿಕ ಸಮತೋಲನವನ್ನು ಕಾಪಾಡಲು ಹುಗ್ಗಿ ಸೂಕ್ತವಾದ ಆಹಾರವಾಗಿರುತ್ತದೆ.

            ನೀವು ಹೇಳಿದ ಪದಾರ್ಥಗಳಿಗೆಲ್ಲಾ  ಹೆಚ್ಚು ಹಣ ಖರ್ಚಾಗುತ್ತದೆ, ನಮಗೆ ಅಷ್ಟು ಶಕ್ತಿಯಿಲ್ಲ ಎನ್ನುವವರು ಅವರ ಶಕ್ತಾö್ಯನುಸಾರ ಮುದ್ಗಾನ್ನ ಸಿದ್ಧಪಡಿಸಿ, ನೈವೇದ್ಯ ಮಾಡಿ ದೇವರ ಕೃಪೆಗೆ ಪಾತ್ರ ರಾಗಬಹುದು. ಮಾಸದಲ್ಲಿ ಹಲವು ದೇವಾಲಯಗಳು ಬೆಳಗ್ಗೆ ಗಂಟೆಯ ವೇಳೆಗೇ ತೆರೆದು ಭಗ ವಂತನ ಪೂಜಾ ಕೈಂಕರ್ಯಗಳನ್ನು ಮುಗಿಸಿ - ಗಂಟೆಯ ವೇಳೆಗೇ ಆಲಯದ ಬಾಗಿಲು ಮುಚ್ಚುವ ವ್ಯವಸ್ಥೆ ಇರುತ್ತದೆ.

     ಧನುರ್ಮಾಸದಲ್ಲಿ ಶ್ರೀಮಹಾಲಕ್ಷ್ಮೀ  ಸಮೇತ ಶ್ರೀಮಹಾ ವಿಷ್ಣುವನ್ನು ಶ್ರದ್ಧಾ ಭಕ್ತಿಗಳಿಂದ ಪೂಜಿಸಿ ದರೆ ಒಳಿತಾಗುತ್ತದೆೆ ಎಂಬುದಕ್ಕೆ ದೇವೇಂದ್ರನ ಪ್ರಸಂಗ ಸೂಕ್ತ ಉದಾಹರಣೆಯಾಗಿದೆ ಕಾರ್ತಿಕ ಮಾಸ ಮುಗಿದ ನಂತರ ದೈತ್ಯರು ಇಂದ್ರನ ಮೇಲೆ ದಂಡೆತ್ತಿ ಹೋಗಿ ಯುದ್ಧದಲ್ಲಿ ಆತನನ್ನು ಸೋಲಿಸಿ, ರಾಜ್ಯ ವನ್ನು ಕಸಿದುಕೊಂಡರು. ರಾಜ್ಯ ಭ್ರಷ್ಟನಾದ ಇಂದ್ರನು ಅತಿ ದುಃಖಿತನಾದನು. ಆಗ ಭಗವದ್ಭಕ್ತಳೂ ಪತಿ ವ್ರತೆಯೂ ಆದ ಈತನ ಪತ್ನಿ ಶಚಿದೇವಿಯು ಧನುರ್ಮಾಸದಲ್ಲಿ ಶ್ರೀಲಕ್ಷ್ಮೀ ನಾರಾಯಣರನ್ನು ಶ್ರದ್ಧಾಸಕ್ತಿ ಭಕ್ತಿ ಗಳಿಂದ ದ್ವಾದಶ ನಾಮಗಳ ಪಠಣದ ಮೂಲಕ ಪೂಜಿಸಿ, ಮುದ್ಗಾನ್ನ (ಹುಗ್ಗಿ)ಯನ್ನು ನೈವೇದ್ಯ ಮಾಡಿದ ¥sಲಿತವಾಗಿ ಮರು ಯುದ್ಧದಲ್ಲಿ ಇಂದ್ರನಿಗೆ ಜಯವಾಗಿ ರಾಜ್ಯ ಪ್ರಾಪ್ತಿಯಾಯಿತು ಎಂದಿದೆ ಪುರಾಣ ಪ್ರಸಂಗ.

     ಮಾಸದಲ್ಲಿ ದಕ್ಷಿಣ ಭಾರತದ ಶ್ರೀರಂಗA, ತಿರುಪತಿ, ಶ್ರಿವಿಲ್ಲಿಪುತ್ತೂರು, ಚಿದಂಬರಮ್, ತಿರುವಣ್ಣಾಮಲೈ ಮೊದಲಾದ ಪುಣ್ಯ ಕ್ಷೇತ್ರಗಳಲ್ಲಿನ ಶ್ರೀವೈಷ್ಣವ ಹಾಗೂ ಶೈವ ದೇವಾಲಯಗಳಲ್ಲಿ, ಉಷಃಕಾಲದ ಪೂಜೆಗಳು, ಅಧ್ಯಾತ್ಮಿಕ ವಿಷಯಗಳಿಗೆ ಸಂಬAಧಿಸಿದ ಭಜನೆ, ಸ್ತೋತ್ರಗಳ ಪಠಣ, ಉಪನ್ಯಾಸಗಳು, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ನಟರಾಜ ಪೂಜೆ, ಶ್ರೀ ಧನಲಕ್ಷ್ಮೀ ಅರ್ಚನೆ, ಶ್ರೀ ಗೋಧಾದೇವಿ ಸ್ಮರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತವೆ. ಭಕ್ತರ ಮನೆ, ದೇವಾಲಯಗಳಲ್ಲಿ ತಿರುಪ್ಪಾವೈ ಮತ್ತು ತಿರುವೆಂಪಾವೈ ಸ್ತೋತ್ರಗಳ ಪಠಣವನ್ನೂ ಏರ್ಪಡಿಸಲಾಗುತ್ತದೆ. ಶ್ರೀರಂಗನಾಥ ಸ್ವಾಮಿ : ಶ್ರೀ ಮಹಾವಿಷ್ಣುವನ್ನು ಸ್ತುತಿಸುವ, ೩೦ ಸ್ತೋತ್ರಗಳುಳ್ಳತಿರುಪ್ಪಾವೈ’. ಹಾಗೂ ೧೪೩ ಪದ್ಯಗಳುಳ್ಳನಾಚಿಯಾರ್ ತಿರುಮೋಲಿಮೊದಲಾದ ಮಹಾನ್ ಕಾವ್ಯಗಳ ಪಠಣವನ್ನೂ ವಿದ್ವಾಂಸರಿಂದ  ನಡೆಸಲಾಗುತ್ತದೆ.

     ಶೈವರ ಆರುದ್ರ ದರ್ಶನ, ವೈಕುಂಠದ ದ್ವಾರಗಳು ತೆರೆಯಲ್ಪಡುವ ವೈಕುಂಠ ಏಕಾದಶಿ, ಶ್ರೀರಾಮ ಭಕ್ತನಾದ ಆಂಜನೇಯನ ಹನುಮ ಜಯಂತಿ, ಶಬರಿಮಲೈನಲ್ಲಿನ  ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ದಿನಗಳೂ ಇದೇ ಧನುರ್ಮಾಸದಲ್ಲಿ ಬರುವ ಮತ್ತೆ ಕೆಲವು ಪುಣ್ಯ ದಿನಗಳಾಗಿರುತ್ತವೆ. ಇವೆಲ್ಲಾ ಹಿಂದುಗಳ ಕಾರ್ಯಕ್ರಮಗಳಾದರೆ, ಕ್ರಿಶ್ಚಿಯನ್ನರ ಕ್ರಿಸ್‌ಮಸ್ ಹಬ್ಬ, ನೂತನ ವರ್ಷ, ಇಸ್ಲಾಮಿಯರ ಹಬ್ಬವೂ ಇದೇ ತಿಂಗಳಲ್ಲಿ ಬರಲಿವೆ. ಇವುಗಳ ಜೊತೆಗೇನೇ, ಬುದ್ಧರು, ಜೈನರು ಮತು ಸಿಖ್ಖರೂ  ಮಾಸವನ್ನು  ಪವಿತ್ರ ಎಂದು ಪರಿಗಣಿಸಿದ್ದಾರೆ.

    ದೇಶದ ಕೆಲವೆಡೆ ಇದು ಸುಗ್ಗಿಯ ಕಾಲವೂ ಆಗಿದ್ದು, ಜನರು ಸಂಭ್ರಮ, ಸಡಗರದಲ್ಲಿರುತ್ತಾರೆ.  ಭಾರತದ ಜೊತೆಗೇನೇ ಇತರೇ ಕೆಲವು ದೇಶಗಳೂ ಮಾಸದಲ್ಲಿ ಕೆಲವು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಚರಿಸುವುದು ಕಂಡುಬAದಿದೆ.

    ಹಿಂದುಗಳಿಗೆ ಬಹು ಪವಿತ್ರವಾಗಿರುವ ಭಗವದ್ಗೀತೆಯ ವಿಭೂತಿ ಯೋಗ- ೧೦ ನೇ ಅಧ್ಯಾಯದ ೩೫ ನೇ ಶ್ಲೋಕಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್\ ಮಾಸಾನಾಂ ಮಾರ್ಗಶೀರ್ಷೋ ಹಮ್ ಋತೂನಾಂ ಕುಸುಮಾಕರಃಸಾಮವೇದ ಶಾಖೆಗಳಲ್ಲಿ ಬೃಹತ್ಸಾಮವು ನಾನು, ಛಂದಸ್ಸುಗಳಲ್ಲಿ ಗಾಯತ್ರಿಯು ನಾನು, ಮಾಸಗಳಲ್ಲಿ ಮಾರ್ಗಶೀರ್ಷವು ನಾನು, ಋತುಗಳಲ್ಲಿ ವಸಂತ ಋತುವು ನಾನು ಎಂದು ಹೇಳಿರುವ ಹಿನ್ನೆಲೆಯಲ್ಲಿ, ಮಾರ್ಗಶೀರ್ಷ ಮಾಸ ಅಂದರೆ ಪ್ರಸಕ್ತ ವರ್ಷದಲ್ಲಿ ೨೦೨೧ ಡಿಸೆಂಬರ್ ೧೬ ರಂದು ಪ್ರಾರಂಭವಾಗಿ ೨೦೨೨ ಜನವರಿ ೧೪ ರಂದು ಬರುವ  ಮಕರ ಸಂಕ್ರಮಣದಂದು ಮುಗಿಯುವ ಧನುರ್ಮಾಸದ ಪವಿತ್ರ ಕಾಲದಲ್ಲಿ ಭಗವಂತನ ಆರಾಧನೆ, ಜಪ ಧ್ಯಾನಗಳಲ್ಲಿ ಭಾಗಿಗಳಾಗಿ ಶ್ರೀಹರಿಯ ಅನುಗ್ರಹಕ್ಕೆ ಪಾತ್ರರಾಗೋಣ.  

Comments

Post a Comment