ದೀಪಗಳ ಹಬ್ಬ ದೀಪಾವಳಿ

 ದೀಪಗಳ ಹಬ್ಬ ದೀಪಾವಳಿ      

  ಲೇಖಕರು  : ಎಂ ಆರ್ ವೆಂಕಟರಾಮಯ್ಯ    


      ‘ಪ್ರಜ್ವಲಿತೋ  ಜ್ಞಾನಮಯ ಪ್ರದೀಪಃ’ ಎಂಬ ವ್ಯಾಸರ ವಾಕ್ಯದಂತೆ ದೀಪವು  ಜ್ಞಾನದ, ಪ್ರಾಣದ ಸಂಕೇತ. ಮಂಗಳ ಪರಂಪರೆ, ಅಭಿವೃದ್ಧಿಯ ಶುಭ ಸಂಕೇತವಾಗಿದೆ,. ಭಾರತೀಯರ ಎಂತಹುದೇ ಕಾರ್ಯಕ್ರಮವಾಗಲಿ ದೀಪವನ್ನು ಬೆಳಗಿಸುವ ಮೂಲಕ ಅದನ್ನು ಪ್ರಾರಂಭಿಸುವುದು ನಮ್ಮ ಸನಾತನ ಧರ್ಮ, ಸಂಪ್ರದಾಯವಾಗಿದೆ. 

  . “ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದಾ, ಸಂಧ್ಯಾ ಜ್ಯೋತಿರ್ನಮೋಸ್ತುತೇ” ಈ ದೀಪ ಲಕ್ಷಿö್ಮ ನಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮಗಳನ್ನು ಹೆಚ್ಚಿಸಲಿ, ಆರೋಗ್ಯ, ಧನ, ಸಂಪತ್ತುಗಳನ್ನು ವೃದ್ಧಿಸಲಿ ಎಂಬ ಶ್ಲೋಕವನ್ನು ಪಠಿಸಿ, ದೀಪ ಹಚ್ಚಿ ಅದಕ್ಕೆ ವಂದಿಸುತ್ತೇವೆ. ಸುಧೀರ್ಘವಾದ ಭೋಗೈಶ್ವರ್ಯ ಆಯುರಾರೋಗ್ಯಗಳನ್ನು ಕೊಟ್ಟು ಸರ್ವ ಅನಿಷ್ಟಗಳನ್ನೂ ದೂರಮಾಡುವ ಕಾರಣ ಇದು ದೀಪ, ದಿವ್ಯ ಜ್ಯೋತಿ ಎನಿಸಿಕೊಂಡಿದೆ. “ಯಃ ಕರ‍್ಯಾದ್ದೀಪ ರಚನಾಂ ನತಸ್ಯ ಪುಣ್ಯಂ ಸಂಖ್ಯಾತುಮ್” ಭಗವಂತನ ಮುಂದೆ ದೀಪ ಹಚ್ಚುವವರ ಪುಣ್ಯ ಎಷ್ಟೆಂದು ವರ್ಣಿಸಲು ಎಷ್ಟು ವರ್ಷಗಳಾದರೂ ಸಾಲದು ಎಂದು ಬೃಹನ್ನಾರದೀಯದಲ್ಲಿ ಉಲ್ಲೇಖೀಸಲಾಗಿದೆ.   

      ಕಾರ್ತಿಕ ಮಾಸಕ್ಕೂ ದೀಪ ಬೆಳಗಿಸುವಿಕೆಗೂ ಅವಿನಾಭಾವ ನಂಟು ಎಂದರೆ ಮಾತು ಉತ್ಪ್ರೇಕ್ಷೆಯಾಗದು. ಆಸ್ತಿಕರು ತಮ್ಮ ಮನೆಗಳ ಮುಂಭಾಗ\ಮೇಲ್ಭಾಗದಲ್ಲಿ ಆಕಾಶ ಬುಟ್ಟಿ (‘ವ್ಯೋಮ ದೀಪ)ಯಲ್ಲಿ  ದೀಪವನ್ನಿಟ್ಟು ನೇತುಹಾಕುವ ವಾಡಿಕೆಯುಂಟು. ಇದರ ಮಹತ್ವ ಕುರಿತಂತೆ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ. ಕಾರ್ತಿಕ ಮಾಸದಲ್ಲಿ ಭಗವಂತನಿಗೆ ಆಕಾಶ ದೀಪವನ್ನು ಬೆಳಗಿದ ಮನೆಯಲ್ಲಿ ಧನ ಲಕ್ಷ್ಮೀ, ಧಾನ್ಯ ಲಕ್ಷ್ಮೀ, ಸೌಭಾಗ್ಯ, ಸಂತಾನ, ವಿದ್ಯಾ, ವಿಜಯ ಲಕ್ಷ್ಮೀ ಮಗಳೊಳಗೊಂಡಂತೆ ಸಕಲ ಸಂಪತ್ತುಗಳೂ ನೆಲಸುತ್ತವೆ ಎನ್ನಲಾಗಿದೆ  

     ದೀಪಗಳ ಹಬ್ಬವೇ ದೀಪಾವಳಿಯಾಗಿದೆ. ದೇಶ, ಭಾಷೆ, ಜಾತಿ, ಮತ, ಬಡವ ಬಲ್ಲಿದಗಳೆಂಬ ಬೇಧ ಭಾವ, ಎಲ್ಲೆಗಳಿಲ್ಲದೆ ವಿಶ್ವದ ಹಲವು ದೇಶಗಳಲ್ಲಿ ಸಂಭ್ರಮ, ಸಡಗರ, ಸಂತಸಗಳಿAದ ಆಚರಿಸುವ ಈ ದೀಪಾವಳಿ ಹಬ್ಬಕ್ಕೆ ವೈದಿಕ, ಪೌರಾಣಿಕ, ಜಾನಪದ, ಸಾಮಾಜಿಕ ಹಿನ್ನೆಲೆ, ವೈಶಿಷ್ಟö್ಯಗಳುಂಟು. 

     ಆಶ್ವಯುಜ ಮಾಸದ ಕೊನೆ, ಕಾರ್ತೀಕ ಮಾಸದ ಪ್ರಾರಂಭದ ಒಟ್ಟು ಐದು ದಿನಗಳಂದು ದೀಪಾವಳಿ ಹಬ್ಬದ ಆಚರಣೆ ನಡೆಯುತ್ತದೆ. ಆಶ್ವಯುಜ ಮಾಸದ ಕೊನೆಯಲ್ಲಿ ಬರುವ ತ್ರಯೋದಶಿಯನ್ನು ‘ಧನ ತ್ರಯೋದಶಿ’ಯಾಗಿದ್ದು ಇಂದಿನ ದಿನವನ್ನು ‘ನೀರು ತುಂಬುವ ಹಬ್ಬ’ವೆಂದು ಆಚರಿಸುವ ಪದ್ದತಿ ಇದೆ.

ದೀಪಾವಳಿಯ ಹಬ್ಬದಂದು ಅಭ್ಯಂಗ ಸ್ನಾನ, ನೂತನ ವಸ್ತç ಧಾರಣೆ, ಇಷ್ಟ ದೈವದ ಆರಾಧನೆ, ಬಂಧು ಮಿತ್ರರೊಡನೆ ಶುಭಾಶಯಗಳ ವಿನಿಮಯ, ಸಿಹಿ ಸೇವನೆ ಪ್ರಮುಖ ಕಾರ್ಯಾಚರಣೆಯಾಗಿರುತ್ತದೆ. ‘ತೈಲೇ  ಲಕ್ಷ್ಮಿಃ ಜಲೇ ಗಂಗಾ’ ಎಂಬ ಉಕ್ತಿಯಂತೆ, ಎಣ್ಣೆಯಲ್ಲಿ ಲಕ್ಷ್ಮಿಯೂ ನೀರಿನಲ್ಲಿ ಗಂಗೆಯೂ ಇರುವರು ಎಂಬ ಕಾರಣ, ಅಭ್ಯಂಗ ಸ್ನಾನದ ಪದ್ಧತಿ ಆಚರಣೆಯಲ್ಲಿದೆ. ಇದರಿಂದ ಆಯುರಾರೋಗ್ಯ ಅಭಿವೃದ್ಧಿ ಲಕ್ಷ್ಮೀ,  ಗಂಗೆಯರ ಕೃಪೆ ನಮ್ಮ ಮೇಲಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಉಂಟು,  

    ಆಶ್ವಯುಜ ಬಹುಳ ಚತುರ್ದಶಿ ‘ನರಕ ಚತುರ್ದಶಿ’ ನರಕನೆಂಬ ಅಸುರ ಉಗ್ರವಾದ ತಪಸ್ಸನ್ನು ಮಾಡಿ ಬ್ರಹ್ಮದೇವನನ್ನು ಮೆಚ್ಚಿಸಿ ಆತನ ವರ ಬಲದಿಂದ ದೇವ ದಾನವರೆಲ್ಲರನ್ನೂ ಜಯಿಸಿ, ಲೋಕಕಂಟಕನಾದನು. ಲೋಕಕಲ್ಯಾಣಕ್ಕಾಗಿ ಸ್ವಾಮಿಯು ಆಶ್ವಯುಜ ಬಹುಳ ಚತುರ್ದಶಿಯಂದು ನರಕನನ್ನು ಸಂಹರಿಸಿ ಲೋಕಕ್ಕೆ ಸುಖ, ಶಾಂತಿ, ನೆಮ್ಮದಿಗಳನ್ನು ನೀಡಿದನು. ನರಕಾಸುರನ ಬಂಧನದಲ್ಲಿದ್ದ ಬ್ರಹ್ಮನ ಪುತ್ರಿ ಚತುರ್ದಶಿಯು ಇಂದೇ ಬಂಧ ಮುಕ್ತಳಾದ ಕಾರಣ, ಆ ದಿನಕ್ಕೆ ನರಕ ಚತುರ್ದಶಿ ಎಂಬ ಹೆಸರು ಬಂದಿತು ಎಂಬುದಾಗಿ ಪದ್ಮ ಪುರಾಣ, ಲಿಂಗಪುರಾಣಗಳಿಂದ ತಿಳಿದುಬರುತ್ತದೆ. ಈ ಚತುರ್ದಶಿಯಂದು ನರಕನ ಬಾಧೆಯಿಂದ ಲೋಕ ಮುಕ್ತವಾದ ಕಾರಣ ಇಂದು ಜನ ಸಂತಸದಿAದ ತಮ್ಮ ಮನೆಗಳ ಮುಂದೆ ದೀಪಗಳನ್ನು ಬೆಳಗಿಸಿ, ದೀಪಾವಳಿ ಹಬ್ಬ ಆಚರಿಸುತ್ತಾರೆ.       

    ಮರುದಿನ ಅಮಾವಾಸ್ಯೆ. ಇಂದು ಶ್ರೀಮಹಾಲಕ್ಷಿö್ಮಯ ಆರಾಧನೆಯ ದಿನ ವಾಗಿದೆ. ಅಮಾವಾಸ್ಯೆಯಂದು ಸಂಪತ್ತಿನ ಅಧಿದೇವತೆಯಾದ ಶ್ರೀಮಹಾಲಕ್ಷಿö್ಮಯ ಪ್ರಸನ್ನಕ್ಕಾಗಿ ಲಕ್ಷ್ಮೀ,  ಪಂಚಾಯತನ ಪೂಜೆಯನ್ನು ಕೆಲವು ಭಕ್ತರು ಆಚರಿಸುವು ದುಂಟು. 

   ಮರು ದಿನ ಕಾರ್ತಿಕ ಮಾಸದ ಮೊದಲ ದಿನ ‘ಬಲಿಪಾಡ್ಯಮಿ’, ಶ್ರೀ ಮಹಾ ವಿಷ್ಣುವಿನ ಮಹಾಭಕ್ತ ಪ್ರಹ್ಲಾದನ ಮೊಮ್ಮಗನೇ ಈ ‘ಬಲಿ’ ಎಂಬ ಅಸುರ. ಇಂದ್ರಾದಿ ದೇವತೆಗಳಿಗೆ ಕಿರುಕುಳ ನೀಡಿ, ಲೋಕಕಂಟಕನಾದ. ಇದರ ಪರಿಹಾರ ಕ್ಕಾಗಿ ದೇವತಗಳು ಶ್ರೀ ಮಹಾವಿಷ್ಣುವನ್ನು ಪ್ರಾರ್ಥಿಸಿದ ಪರಿಣಾಮವಾಗಿ  ಸ್ವಾಮಿ ವಾಮನನಾಗಿ ಅವತರಿಸಿ, ಬಲಿಯ ಬಳಿ ಬಂದಾಗ ತಮ್ಮದೇನಾದರೂ ಕೋರಿಕೆ ಇದ್ದರೆ ತಿಳಿಸಿ. ಎಂದ ಬಲಿ. ತನಗೆ ಬೇಕಾದದ್ದು ಮೂರು ಹೆಜ್ಜೆ ಭೂಮಿ ಮಾತ್ರ. ಅದನ್ನು ನೀನು ನನಗೆ ಕೊಟ್ಟರೆ ಸಾಕು ಎಂದ ವಾಮನ. ಬಲಿಯ ಎರಡು ಹೆಜ್ಜೆಯ ದಾನದಿಂದ ಮೂರು ಲೋಕಗಳನ್ನೂ ಆಕ್ರಮಿಸಿದ ವಾಮನ. ಮೂರನೆಯ ಹೆಜ್ಜೆಗೆ ಜಾಗ ನೀಡಲಾಗದ ಬಲಿಯು, ತನ್ನ ಶಿರಸ್ಸಿನ ಮೇಲೆ ವಿಷ್ಣುವಿನ ಪಾದವನ್ನಿರಿಸಿಕೊಂಡನು. ಬಲಿಯ ಈ ಭಗವದ್ಭಕ್ತಿ, ದಾನಗಳಿಂದ ಸುಪ್ರೀತನಾದ ವಾಮನ ರೂಪಿ ಶ್ರೀ ಮಹಾವಿಷ್ಣುವು ಬಲಿ ರಾಜನ ವಾಸಸ್ಥಾನದಲ್ಲಿ ದ್ವಾರಪಾಲಕನಾಗಿ ನಿಂತು ಭಕ್ತನಿಗೆ ವರಗಳನ್ನು ನೀಡಿ, ‘ಭಕ್ತವತ್ಸಲ’ ಎನಿಸಿಕೊಂಡನು. “ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂರ್ಮಾಂಶ್ಚ ವಿಭೀಷಣಃ\ ಕೃಪಃ  ಪರಶುರಾಮಶ್ಚ ಸಪ್ತೈತೇ ಸ್ಥಿರ ಜೀವಿನಃ” ಎಂಬ ಸ್ತೋತ್ರದಂತೆ ಈ ಬಲಿ ಸಪ್ತ ಸ್ಥಿರ ಜೀವಿಗಳ ಗುಂಪಿಗೆ ಸೇರಿದನು.           

    ಪಾಡ್ಯಮಿಯ ಮರು ದಿನವೇ ದ್ವಿತಿಯ. ತಂಗಿ ಯಮಿಯ ಆತಿಥ್ಯದಿಂದ ಸಂತಸಗೊAಡ ಅಣ್ಣ ಯಮನು ತಂಗಿಯನ್ನು ಹರಸಿ, ಈ ದಿನ ಯಾವ ತಂಗಿ ತನ್ನ ಅಣ್ಣನಿಗೆ ತಿಲಕವನ್ನಿಟ್ಟು ಗೌರವಿಸುವಳೋ ಅವರನ್ನು ನಾನು ಹರಸುತ್ತೇನೆ ಎಂಬ ಅಭಯ ನೀಡಿದನು.

     ಈ ಧಾರ್ಮಿಕ ಆಚರಣೆಗಳೆಲ್ಲಾ ಹಿರಿಯರದಾದರೆ ದೀಪ ಬೆಳಗಿ ಪಟಾಕಿ ಸಿಡಿಸಿ ಸಂತಸಪಡುವ ಸಂಭ್ರಮ ಕಿರಿಯರ ಪಾಲಿನದಾಗಿರುತ್ತದೆ.

    ಹೀಗೆ ಪ್ರತಿ ಕೆಲಸ, ಕಾರ್ಯವಾಗುವುದಕ್ಕೂ ಒಂದು ಕಾರಣವಿರುತ್ತದೆ. ಕಾರಣವಿಲ್ಲದೆ ಯಾವ ಕಾರ್ಯವೂ ಆಗದು. ಈ ಕಾರ್ಯ, ಕಾರಣಗಳ ನಡುವೆ ಅವಿನಾಭಾವ ಸಂಬಂಧವುಂಟು. ನಡೆದ ಕಾರ್ಯಕ್ಕೆ, ಸಂಭವಿಸಿದ ಘಟನೆಗೆ ಕಾರಣ ಹುಡುಕಿ ತಿಳಿಯುವವನು, ತಿಳಿದು ಸೂಕ್ತ ನೀತಿ, ಪಾಠ ಕಲಿಯುವವನು ವಿವೇಕಿಯಾಗುತ್ತಾನೆ.    

   ಇಂತಹಾ  ವೈವಿಧ್ಯಮಯ ಹಾಗೂ ಅರ್ಥಪೂರ್ಣ ದೀಪಾವಳಿ ಹಬ್ಬ ನಾಡಿನ, ಹೊರನಾಡಿನ ಸಮಸ್ತ ಜನರಿಗೂ ಸುಧೀರ್ಘ ಆಯುರಾರೋಗ್ಯಭಾಗ್ಯ, ಸುಖ, ಸಂತಸ, ಸಮಾಧಾನಗಳನ್ನು ತರಲಿ ಎಂಬ ಹಾರೈಕೆಯೊಂದಿಗೆ ಈ ಲೇಖನವನ್ನು ಮುಕ್ತಾಯಗಳಿಸಲಾಗಿದೆ.

                            

                                            

Comments

  1. very nice and informative article. I did not know about ಚತುರ್ದಶಿ was the daughter of Brahma and kept in captive

    ReplyDelete
  2. ಹಬ್ಬ,ಸಂಪ್ರದಾಯ, ಹಿನ್ನೆಲೆ, ಪುರಾಣ ಮಾಹಿತಿಗಳನ್ನು ಒಳಗೊಂಡ ತಮ್ಮ ಲೇಖನ ಸೊಗಸಾಗಿದೆ. ವಿಶೇಷ ಆಚರಣೆಗಳ ಬಗ್ಗೆ ಹೀಗೆ ಬರೆಯುತ್ತಿರಿ. ಧನ್ಯವಾದಗಳು

    ReplyDelete
    Replies
    1. Thamma protsahadayaka matugalige dhanyavadagalu sir

      Delete

Post a Comment