ಬ್ರಿಟನ್ ಪಾರ್ಲಿಮೆಂಟ್ ಇತಿಹಾಸ

 ಬ್ರಿಟನ್ ಪಾರ್ಲಿಮೆಂಟ್ ಇತಿಹಾಸ ಮತ್ತು ಕೆಲವು ಆಸಕ್ತಿದಾಯಕ ಸಂಗತಿಗಳು 

ಲೇಖನ - ಶ್ರೀರಾಮಮೂರ್ತಿ ಬೇಸಿಂಗ್ ಸ್ಟೋಕ್ UK 


 ನಾವೆಲ್ಲಾ ಬಹುಪಾಲು ಲಂಡನ್ ನಲ್ಲಿ ಇರುವ ಪಾರ್ಲಿಮೆಂಟ್ ನೋಡಿದ್ದೀವಿ ಮತ್ತು ಕೆಲವರು ಒಳಗೂ ಹೋಗಿ ಅದರ ಚರಿತ್ರೆ ಮತ್ತು ವಾಸ್ತುಶಿಲ್ಪವನ್ನು ನೋಡಿ ಆಶ್ಚರ್ಯ ಪಟ್ಟಿರಬಹುದು. ಅಂದರೆ ಬಹುಶಃ   ಈ ಬರಹ ನಿಮಗಲ್ಲ. ಆದರೂ ಓದಿ ಪರವಾಗಿಲ್ಲ !



ಬ್ರಿಟಿಷ್ ಪಾರ್ಲಿಮೆಂಟ್ ಈ ದೇಶದ ಸರ್ವೋಚ್ಛವಾದ ಸಂಸ್ಥೆ. ಇಲ್ಲಿ  ಎರಡು ಭಾಗಗಳಿವೆ. ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್  ಕಾಮನ್ಸ್ . ಇಂಡಿಯಾದಲ್ಲಿ ರಾಜ್ಯಸಭಾ ಮತ್ತು ಲೋಕ್ ಸಭಾ ಇದ್ದಹಾಗೆ. ಹೌಸ್ ಆಫ್ ಲಾರ್ಡ್ಸ್ ನಲ್ಲಿ ೭೯೯ ಮತ್ತು ಕಾಮನ್ಸ್ ನಲ್ಲಿ ೬೫೦ ಸದಸ್ಯೆರಿದಾರೆ. ಲಾರ್ಡ್ಸ್ನನ  ಸದಸ್ಯರು ಚುನಾವಣೆಯಿಂದ ಗೆದ್ದವರಲ್ಲ. ಚರ್ಚ್ ಆಫ್ ಇಂಗ್ಲೆಂಡ್ ನ ಬಿಷಪ್ ಗಳು ಮತ್ತು ತಲಾಂತರ  ಅಥವಾ ಅನುವಂಶಿಕ ದಿಂದ (hereditary ) ಬಂದವರು,  ಮಿಕ್ಕದವರು ಪ್ರಧಾನ ಮಂತ್ರಿ ಗಳು ನೇಮಿಸದವರು. ಆದರೆ ಕಾಮನ್ಸ್ ನ ಸದಸ್ಯರು ಚುನಾವಣೆ ಯಲ್ಲಿ ಗೆದ್ದವರು. 

 

 ಪಾರ್ಲಿಮೆಂಟ್  ಮೂಲ ೧೦೬೬ ಅಂದರೆ ತಪ್ಪೇನಿಲ್ಲ. ಆ ವರ್ಷದಲ್ಲಿ  ನಾರ್ಮಂಡಿ ಯ ವಿಲಿಯಮ್ಮ್ಸ್ ಬಂದು ಈ ದೇಶದಲ್ಲಿ  ಯುದ್ಧ ನಡಿಸಿ (ಬ್ಯಾಟಲ್ ಆಫ್ ಹೇಸ್ಟಿಂಗ್ಸ್ ) ತನ್ನ ಆಡಳಿತವನ್ನು ಪ್ರಾರಂಭಿಸಿದ. ಹೊಸ ಕಾನೂನು ಜಾರಿಗೆ ಬರುವ ಮುಂದೆ ತಾನು ನೇಮಿಸಿದ ಸಲಹಾ ಸಮಿತಿ ಜೊತೆ ಚರ್ಚೆ ಮಾಡುತಿದ್ದ .  ಆದರೆ  ಸುಮಾರು ೨೦೦ ವರ್ಷಗಳ ಮೇಲೆ ಬಂದ ಕಿಂಗ್ ಜಾನ್ ತನಗೆ ಬೇಕಾದಹಾಗೆ ರಾಜ್ಯಭಾರ ಮಾಡುವ ರೀತಿ  ಅವನ  ಸಲಹಾ ಸಮಿತೆಗೆ  ತೀರಾ ಅಸಮಾಧಾನ ವಾಗಿ  ೧೨೧೫ ರಲ್ಲಿ ಮಾಗ್ನಾ ಕಾರ್ಟ(Magna Carta ) ಅನ್ನುವ ಕಾನೂನು ಜಾರಿಗೆ ತಂದರು. ಇದರ ಪ್ರಕಾರ ಕಿಂಗ್ ಜಾನ್ ಈ ಸಮಿತದ ಒಪ್ಪಿಗೆ ಇಲ್ಲದೆ ಏನೂ ಮಾಡಲು ಅಧಿಕಾರ ಇರಲಿಲ್ಲ. ನೀವು ಈ ಒಪ್ಪಂದ ದ  ಪತ್ರಗಣನ್ನು  ಸಾಲಿಸ್ಬರಿ ಮತ್ತು  ಲಿಂಕನ್  ಕ್ಯಥೀಡ್ರಲ್  (Salisbury and Lincoln Cathedral ) ನಲ್ಲಿ   ನೋಡಬಹುದು . ಇನ್ನೆರಡು ಪ್ರತಿಗಳು ಬ್ರಿಟಿಷ್ ಲೈಬ್ರರಿನಲ್ಲಿ  ಇವೆ. ಈ ಒಪ್ಪಂದ ಥೇಮ್ಸ್ ನದಿಯ ದಡ ದಲ್ಲಿರುವ  ರನ್ನಿ ಮೀಡ್ ಅನ್ನುವ ಸ್ಥಳ ದಲ್ಲಿ ನಡೆಯಿತು.  (೧೫ ಜೂನ್ ೧೨೧೫)

ಹಿಂದಿನ ಕಾಲದಲ್ಲಿ, ರಾಜರು ಬಹಳ ಬಲಿಶಾಗಳಾಗಿದ್ದರು. ಅವರು ಹೇಳಿದ್ದೆ ವೇದವಾಕ್ಯ. ಆಗಾಗ್ಗೆ ಇವರು ದೇಶದ ಶ್ರೀಮಂತರು ಮತ್ತು ಪ್ರಭಾವಶಾಲಿ ಜನಗಳನ್ನೂ ಸೇರಿಸಿ ಚರ್ಚೆ ನಡೆಸುತ್ತಿದ್ದರು.  ಮುಖ್ಯವಾಗಿ ರಾಜರಿಗೆ ಇತರೆ ದೇಶದಮೇಲೆ ನಡೆಸುವ ಯುದ್ಧಕ್ಕೆ ಧನಸಹಾಯ ಬೇಕಿತ್ತು ಅಷ್ಟೆ. ಜನಗಳ ಕಲ್ಯಾಣ ಅಥವಾ ಯೋಗಕ್ಷೇಮ ಇವರ ಗಮನಕ್ಕೆ ಬರುತ್ತಿರಲಿಲ್ಲ ಇಂತಹ ಸಭೆಗಳಿಗೆ Parliament ಅಂತ  ನಾಮಕರಣ ಮಾಡಿದರು.  

೧೨೬೫ ರಲ್ಲಿ ಸೈಮನ್  ಮಂಟಫರ್ಡ್ ಅನ್ನುವರು ಮೊಟ್ಟ ಮೊದಲನೆಯ ಚುನಾಯಿತ ಸಲಹಾ ಮಂಡಳಿ  Westminster ಪಾರ್ಲಿಮೆಂಟ್

 (ಹೌಸ್ ಆಫ್ ಕಾಮನ್ಸ್) ಆರಂಭಿಸಿದರು. 

೧೫೩೫-೪೨ ರಲ್ಲಿ ವೇಲ್ಸ್ ದೇಶವವನ್ನು ವಶಪಡಿಸಿಕೊಂಡು  ಅಲ್ಲಿನ ಸದಸ್ಯರನ್ನ   ಇಂಗ್ಲೆಂಡ್  ಪಾರ್ಲಿಮೆಂಟ್ಗೆ ಸೇರಿ ಸಿದರು  

೧೫೪೧ ರಲ್ಲಿ ಹೆನ್ರಿ ದಿ ೮ ಐರ್ಲೆಂಡ್ ದೇಶವನ್ನು  ಅವನ ರಾಜ್ಯವೆಂದು ಘೋಷಿಸಿ ಅಲ್ಲಿಂದ ಸದಸ್ಯರನ್ನು ಇಂಗ್ಲೆಂಡ್  ಪಾರ್ಲಿಮೆಂಟ್ ಬರುವುದಕ್ಕೆ ಅಪ್ಪಣೆ ಕೊಟ್ಟ. ಅವನ ಮಗಳು  ರಾಣಿ ಎಲಿಜಬೆತ್ ೧  ತೀರದ ಮೇಲೆ  ೧೬೦೩ನಲ್ಲಿ  ಸ್ಕಾಟ್ಲೆಂಡ್ ನ ಜೇಮ್ಸ್ ೬, ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಗೆ ರಾಜರಾದರೂ ಈ ದೇಶಗಳ  ಪಾರ್ಲಿಮೆಂಟ್ಗಳು ಒಂದಾಗಲಿಲ್ಲ  

೧೬೪೨ ನಡೆದ ಆಂತರಿಕ ಯುದ್ಧ (ಸಿವಿಲ್ ವಾರ್ ) ನಂತರ ಆಲಿವರ್ ಕ್ರಾಮವೆಲ್  ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳನ್ನು ಕೂಡಿಸಿ ಒಂದು ಪಾರ್ಲಿಮೆಂಟ್ ಮಾಡಿದರು. ಆದರೆ ಅನೇಕ ಕಾರಣಗಳಿಂದ ಇದೂ  ಸಾಧ್ಯವಾಗಲಿಲ್ಲ.  ಇವನ ಕಾಲದಲ್ಲಿ  ಪಾರ್ಲಿಮೆಂಟ್ ಮತ್ತು ರಾಜಪ್ರಭುತ್ವ (Monarchy ) ಸಹ ರದ್ದಾಯಿತು ಮತ್ತು ದೇಶದ್ರೋಹದ ಅಪರಾದದ ಮೇಲೆ   ೧೬೪೯ ಜನವರಿ ೩೦ ಚಾರ್ಲ್ಸ್೧ ನ  ಶಿರಚ್ಛೇದನ ಆಯಿತು 

ಬಹಳ ವರ್ಷ ಹೌಸ್ ಆಫ್ ಲಾರ್ಡ್ಸ್ ನವರು ತುಂಬಾ  ಪ್ರಬಲಶೀಲರಾಗಿದ್ದರು.  ಆದರೆ ೧೯ನೇ ಶತಮಾನದಲ್ಲಿ ಹೊಸ ಶಾಸನಗಳು ಬಂದು ಎಲ್ಲಾ ಕ್ಷೇತ್ರದಿಂದ ಸರಿಯಾದ ಚುನಾವಣೆ ನಡೆಸಿದ ಮೇಲೆ  ಹೌಸ್ ಆಫ್ ಕಾಮನ್ಸ್ ಗೆ  ಬಲ ಬಂತು. 

೧೭೦೭ ನಲ್ಲಿ( Act of  Union ) ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳು ಒಂದಾಗಿ  ಪಾರ್ಲಿಮೆಂಟ್  ಆಫ್  ಗ್ರೇಟ್ ಬ್ರಿಟ್ಟನ್  ಪ್ರಾರಂಭವಾಯಿತು. ೧೯ ನೇ ಶತಮಾನದಲ್ಲಿ ಬಲವಂತದಿಂದ  ಐರ್ಲೆಂಡ್ ಸಹ ಸೇರಿಸಿ  ಪಾರ್ಲಿಮೆಂಟ್ ಆಫ್ ಗ್ರೇಟ್ ಬ್ರಿಟ್ಟನ್ ಮತ್ತು ಐರ್ಲೆಂಡ್ ಆಯಿತು. ಆದರೆ ಕ್ಯಾಥೋಲಿಕ್ ಪಂಗಡದ ಐರ್ಲೆಂಡ್ ದೇಶದಲ್ಲಿ ಸ್ವಾತಂತ್ರದ ಹೋರಾಟ ಪ್ರಭಲವಾಗಿ ನಡೆದು ೧೯೨೨ ಈ ದೇಶ ಎರಡು ಭಾಗವಾಗಿ ಉತ್ತರ ಐರ್ಲೆಂಡ್ ಮಾತ್ರ ಬ್ರಿಟಿಷ್ ಸರ್ಕಾರಕ್ಕೆ ಸೇರಿತು. ೧೯೨೭ ರಲ್ಲಿ  ಪಾರ್ಲಿರ್ಮೆಂಟ್ ಆಫ್  ಗ್ರೇಟ್ ಬ್ರಿಟ್ಟನ್ ಮತ್ತು ನಾರ್ದನ್ ಐರ್ಲೆಂಡ್ ಆಗಿ ಮುಂದೆ ವರೆಯಿತು. 


೧೮೩೪ ರಲ್ಲಿ ಭಾರಿ ಅಗ್ನಿ ಅನಾಹುತವಾಗಿ  ಪಾರ್ಲಿಮೆಂಟ್  ಮುಕ್ಕಾಲು ಭಾಗ ನಾಶವಾಯಿತು. ನಂತರ  ಹೊಸ ಕಟ್ಟಡದ  ಕೆಲಸ ಶುರುಮಾಡಿ ಸುಮಾರು ಹತ್ತು ವರ್ಷಗಳ ಮೇಲೆ ಸಂಪೂರ್ಣ ಮಾಡಿದರು. ಆದರೆ ಎರಡನೇ ಮಹಾಯುದ್ಧ ದಲ್ಲಿ ಈ ಕಟ್ಟಡದ ಕೆಲವು ಭಾಗಗಳು ಬಾಂಬ್ ಗಳಿಂದ ಹಾನಿ ಯಾಗಿ ಪುನಃ ನಿರ್ಮಾಣ ಸಂಪೂರ್ಣ ಮಾಡಿದರು  . 

೧೯೧೮ ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬಂತು. ಆದರೆ ೩೦ ವರ್ಷ ಆಗಿದ್ದರೆ ಮಾತ್ರ . ಮೊಟ್ಟ ಮೊದಲನೆಯ ಮಹಿಳಾ ಸದೆಸ್ಯೆ ಐರ್ಲೆಂಡ್ ಇಂದ  ಆಯ್ಕೆಯಾದರೂ ಈಕೆ ಪಾರ್ಲಿಮೆಂಟ್ ನಲ್ಲಿ ಕೂರಲಿಲ್ಲ. ಕಾರಣ ಇವರ ಜಾತಿ ಕ್ಯಾಥೋಲಿಕ್ ಮತ್ತು  ಶಿಂಫೇನ್ ಪಕ್ಷದವರು. ಇವತ್ತಿಗೂ ಉತ್ತರ ಐರ್ಲೆಂಡ್ ನಿಂದ ಚುನಾವಣಾ ಯಲ್ಲಿ ಗೆದ್ದ  ಶಿಂಫೇನ್ ಪಕ್ಷದ  ಸದಸ್ಯರು ಪಾರ್ಲಿಮೆಂಟ್ ಗೆ  

 ಬರುವುದಿಲ್ಲ.  ಕಾರಣ ಬ್ರಿಟಿಷ್ ರಾಣಿಯ ಹೆಸರಿನಲ್ಲಿ  ಅವರ ಪಕ್ಷ ಪ್ರಮಾಣವಚನ ಸ್ವೀಕರಿಸುವುದಿಲ್ಲ . ೧೯೧೯ ರಲ್ಲಿ ಲೇಡಿ ಆಸ್ಟರ್ ಅನ್ನುವರು ಪ್ಲಿಮತ್ ಕ್ಷೇತ್ರದಿಂದ ಆಯ್ಕೆ ಆಗಿ  ಪಾರ್ಲಿಮೆಂಟ್ ಮೊದಲೆಯ ಮಹಿಳಾ ಸದಸ್ಯೆ ಆದರು 


ಭಾರತದಲ್ಲಿ ಹುಟ್ಟಿದ ಮೊದಲನೆಯ ಸದಸ್ಯ ದಾದಾಭಾಯ್ ನವರೋಜಿ ಅವರು. ಲಂಡನ್ ಫಿನ್ಸ್ ಬರಿ ಕ್ಷೇತ್ರದಿಂದ ೧೮೯೨ ಲಿಬರಲ್ ಪಕ್ಷ ದಿಂದ ಆಯ್ಕೆ ಆದರು. ಇವರು ೧೯ನೇ ಶತಮಾನದ ಕೊನೆಗೆ ಭಾರತಕ್ಕೆ ವಾಪಸ್ಸು ಬಂದು ಕೆಲವರ ಜೊತೆ ಸೇರಿ ಕಾಂಗ್ರೆಸ್ ಪಕ್ಷವನ್ನು ಪ್ರಾರಂಭಿದರು

 

ಪಾರ್ಲಿಮೆಂಟ್ ನ  ಕುತೂಲಕಾರಿ ಸಂಗತಿಗಳು 

೫೦೦ ವರ್ಷದಿಂದ ಇದುವರೆಗೆ ಯಾವ ರಾಜ ಅಥವಾ ರಾಣಿ ಹೌಸ್ ಆಫ್  ಕಾಮನ್ಸ್ ಒಳಗೆ ಕಾಲಿಟ್ಟಿಲ್ಲ , ಕಾರಣ, ೧೭ನೇ ಶತಮಾನದಲ್ಲಿ ಚಾರ್ಲ್ಸ್ ೧ ಒಳಗೆ ನುಗ್ಗಿ ೫ ಸದಸ್ಯರನ್ನು ಸೆರೆ ಹಿಡಿಯುವ ಪ್ರಯತ್ನ ಪಟ್ಟ. ನಂತರ ಅವನ ಶಿರಚ್ಛೇದನ ಆಯಿತು !

 ಈಗಿನ ರಾಣಿ ಎಲಿಜಬೆತ್ ಬಕಿಂಗ್ಹ್ಯಾಮ್ ಅರಮನೆಯಿಂದ ವೆಸ್ಟ್ಮಿಮಿ ಸ್ಟರ್ ಗೆ ಬಹಳ ಅದ್ಭುತದ ಕುದರೆ ಗಾಡಿಯಲ್ಲಿ(State Coach ) ತಮ್ಮ ಅಂಗರಕ್ಷಕರ ಜೊತೆಯಲ್ಲಿ ಬಂದು ಹೌಸ್ ಆಫ್ ಲಾರ್ಡ್ಸ್ ನಲ್ಲಿ ಕೂಡಿ ತಮ್ಮ ಪ್ರತಿನಿಧಿ ಯಾದ ಬ್ಲಾಕ್ ರಾಡ್ (Black  Rod) ಎನ್ನುವರನ್ನು ಹೌಸ್ ಆಫ್ ಕಾಮನ್ಸ್ ಸದಸ್ಯರನ್ನು ಕರೆಯಲು ಕಳಿಸುತ್ತಾರೆ. ಈತ  ಹೌಸ್ ಆಫ್  ಕಾಮನ್ಸ್ ಬಂದಾಗ ಅವರ ಮುಖದ ಮೇಲೆ ಬಾಗಲು ಮುಚ್ಚುತ್ತಾರೆ. ನಂತರ ಬ್ಲಾಕ್ ರಾಡ್  ಮೂರು ಸಲಿ ಬಾಗಿಲು ತಟ್ಟಿ ಬಾಗಿಲು ತೆಗದಮೇಲೆ ಒಳಗೆ ಹೋಗಿ ಸಭಾಧಿಪತಿ ಯವರನ್ನು ಮತ್ತು ಸದಸ್ಯರನ್ನು ರಾಣಿ ಅವರು ಬರಮಾಡಲು ಹೇಳಿದ್ದಾರೆ ಅಂತ ಆರ್ಕೆ ಮಾಡುತ್ತಾರೆ. ಆಗ ಎಲ್ಲರೂ ಅವರ ಹಿಂದೆ ಹೋಗಿ ಹೌಸ್ ಆಫ್ ಲಾರ್ಡ್ಸ್ ನಲ್ಲಿ ನಿಲ್ಲುತ್ತಾರೆ. ಇವರಿಗೆ ಅಲ್ಲಿ ಕೂರಲು ಅನುಮತಿ ಇಲ್ಲ. ನಿಂತೇ ರಾಣಿ ಅವರ ಭಾಷಣ ವನ್ನು ಕೇಳಬೇಕು . ಈ ಕ್ವೀನ್ಸ್ ಸ್ಪೀಚ್ (Queen's Speech ) ನಲ್ಲಿ ಅವರ ಸರ್ಕಾರ ಏನೇನು ಕಾನೂನುಗಳು ಜಾರಿಗೆ ಬರುತ್ತೆ ಅನ್ನುವುದನ್ನ ತಿಳಿಸುತ್ತಾರೆ. ಈ ಭಾಷಣ ಪ್ರಧಾನ ಮಂತ್ರಿ ಅವರು ಬರೆದಿದ್ದು  ಆದರೆ ರಾಣಿಯ ವರು ಓದುವುದು ಅಷ್ಟೆ !!

ನಂತರ ಸದಸ್ಯರು ತಮ್ಮ ಸಭೆ ಗೆ ತೆರಳಿ "ರಾಣಿಯವರ ಭಾಷಣ "(ಕ್ವೀನ್ಸ್ ಸ್ಪೀಚ್)" ಮೇಲೆ ಚರ್ಚೆ ನಡೆಸುತ್ತಾರೆ  


ಹೌಸ್ ಆಫ್ ಕಾಮನ್ಸ್ ನಲ್ಲಿ ೬೫೦ ಸದಸ್ಯರಿಗೆ ಕೂಡಲು ಸ್ಥಳ ಇಲ್ಲ

 ೪೨೭ ಮಂದಿಗೆ ಮಾತ್ರ. ಉಳಿದವರು ನಿಂತಿರಬೇಕು. 

ಎರಡು ಪಕ್ಷಗಳು  ಕೂಡುವ ಬೆಂಚ್ ಮುಂದೆ ಎರಡು ಕೆಂಪು ಬಣ್ಣದ ಗೆರೆಗಳು ಕೋಣೆಯಾ ಉದ್ದಕ್ಕೂ ಇವೆ. ಇದರ  ಎರಡು ಕತ್ತಿಗಳ ಅಗಲ  !! ಸದಸ್ಯರು ತಮ್ಮ ಕೋಟುಗಳನ್ನು ನೇತುಹಾಕುವ ಜಾಗದಲ್ಲಿ ಕತ್ತಿಗಳನ್ನು ನೇತುಹಾಕುವುದಕ್ಕೂ ಕೊಗ್ಗೆಗಳು ಇದೆ  (hooks ) ಸದ್ಯ ಈಗಿಲ್ಲ ಆದರೆ ೧೮ನೇ ಶತಮಾನದ ಹಿಂದೆ ಅನೇಕರು ತಮ್ಮ ಕತ್ತಿಯ ಸಮೇತ ಬರುತಿದ್ದರು  ಅಂತ ಕಾಣತ್ತೆ  


ಸುಮಾರು ೨೦೦ ವರ್ಷದ ಹಿಂದೆ ಈ ಕೋಣೆಯಲ್ಲಿ ಧೂಮಪಾನ ನಿಷೇಶಿದೆ. ಆದರೆ  ಸದಸ್ಯರಿಗೆ ತಂಬೂಕ ಬೇಕಾಗಿದ್ದ ರೆ ಬಾಗಿಲನಲ್ಲಿ ಒಂದು ಡಬ್ಬಿ ಯಲ್ಲಿ ನಶ್ಯ ಈಗಲೂ ಇದೆ !

 

ಸಭಾಧಿಪತಿ ಅಂದರೆ Speaker ಚುನಾವಣೆ ಆದಮೇಲೆ ಅವರನ್ನು ಅವರ ಕುರ್ಚಿ ಗೆ ಎಳಕೊಂಡು ಬರುವುದು  ಪದ್ಧತಿ , ಹಿಂದಿನ ಕಾಲದಲ್ಲಿ ರಾಜರು ಅಥವಾ ರಾಣಿಯವರು ಹೇಳಿದನ್ನು ಮಾಡದೆ ಇದ್ದ ರೆ ಇವರನ್ನು ಟವರ್ ನಲ್ಲಿ ಬಂಧಿಸಿ ಶಿಕ್ಷೆ ಕೊಡುತ್ತಿದ್ದರು. ಈ ಕಾರಣ ದಿಂದ ಸಭಾತಿಪತಿ ಸ್ಥಾನಕ್ಕೆ ಬರುವುದಕ್ಕೆ ಹಿಂದೇಟು ಹೊಡೆಯುತ್ತಿದ್ದರು. 

ಈ ದೇಶ ಜಾತ್ಯತೀತ (secular) ಆದರೂ ಸಭೆ ಶುರು ಆಗುವ ಮುಂದೆ ಕ್ರಿಶ್ಚಿಯನ್ ಪ್ರಾರ್ಥನೆ ಉಂಟು ಇದನ್ನು ಸಭಾತಿಪತಿಗಳ Chaplin ನಡೆಸುತ್ತಾರೆ. ಕೆಲವು ಸದ್ಯಸರು ಬೇಗ ಬಂದು ಪ್ರಾರ್ಥನೆ ಆದಮೇಲೆ ತಮ್ಮ ಜಾಗವನ್ನು ರಿಸರ್ವ್ ಮಾಡುವ ಪದ್ಧತಿ ಇದೆ . ತಮ್ಮ ಹೆಸರು ಬರೆದು ಆ ಜಾಗದಲ್ಲಿ ಅಂಟಿಸುತ್ತಾರೆ!!

ಹೌಸ್ ಆಫ್ ಲಾರ್ಡ್ಸ್ ನ ಸಭಾತಿಪತಿಗಳು ಕೂಡುವುದು ಉಣ್ಣೆ (wool ) ತುಂಬಿರುವ ಚೀಲದಮೇಲೆ.  ಈ ಸಂಪ್ರದಾಯ ೧೪ನೇ ಶತಮಾನದಿಂದ ಆಚರಣೆಯಲ್ಲಿದೆ.  ಏತಕ್ಕೆ ಅಂತ ಕೇಳಿದ್ರ? ಆ ಕಾಲದಲ್ಲಿ ವೂಲ್ ಟ್ರೇಡ್ ಬಹಳ ದೊಡ್ಡದಾಗಿತ್ತು ಮತ್ತು ಆ ಕಾಲದ ಜಿಡಿಪಿ

 (G D P ) ಇದರ ಮಾರಾಟದ  ಮೇಲೆ  ಮಾತ್ರ ಇತ್ತು 

ನೀವು  Strangers Gallery ನಿಂದ   ಪಾರ್ಲಿರ್ಮೆಂಟ್ ನಲ್ಲಿ  ನಡೆಯುವ ಚರ್ಚೆ ಯನ್ನು  ನಡೆಯುವುದು ನೋಡಬಹುದು.  ಯಾರು ಅಲ್ಲಿ ಉದ್ಯೋಗದಲ್ಲಿ ಇರುವವರನ್ನು ಬಿಟ್ಟು ಮಿಕ್ಕದವರನ್ನ   Strangers ಅಂತ ಪರಿಗಣಿಸುತ್ತಾರೆ. 

ಈ ಕಟ್ಟಡದ  ವಿಸ್ತರಣೆ  ೮ ಎಕ್ರೆ, ೧೦೦೦ ಕೊ ಹೆಚ್ಚು ಕೊಠಡಿಗಳಿವೆ ಮತ್ತು ೧೦೦ ಮೆಟ್ಟಲುಗಳು (stair case )

ಹೌಸ್ ಆಫ್ ಕಾಮನ್ಸ್ ನ ಸದಸ್ಯರು ಮತ (Vote )ಮಾಡುವುದು ಯೇ (ok ) ನೋ ಇಲ್ಲ ಅಂತ ಕೂಗುವುದು. ಇದು ಸ್ಪಷ್ಟ ವಾಗಿಲ್ಲದಿದ್ದರೆ ಸಭಾತಿಪತಿಗಳು "ಡಿವಿಷನ್" ಅಂತ ಕೂಗುತ್ತಾರೆ ಆಗ ಎರಡು ಪಂಗ್ತಿ ಗಳಲ್ಲಿ ನಿಂತಾಗ ಎಣಿಸುತ್ತಾರೆ.   ಈ ಕಾಲದಲ್ಲಿ  ಈ ಕೆಲಸ ಕೆಲವೇ ಸೆಕಂಡ್ ನಲ್ಲಿ ನಡೆಸಬಹುದು ಆದರೆ ಇಲ್ಲಿ ಹಳೆ ಪದ್ದತಿಗಳು ಹಳೆಸುವುದಿಲ್ಲ  

ಸದಸ್ಯರು ಮಾತನಾಡಬೇಕಾದರೆ ಅವರು ಸಭಾಧಿಪತಿಗಳ ಗಮನಕ್ಕೆ ಬರಬೇಕು ಆಗ ಅವರ ಹೆಸರನ್ನು ಕೂಗುತ್ತಾರೆ .  ಕೆಲವು ಸದಸ್ಯರು ಪ್ರೀವಿ ಕೌನ್ಸಿಲ್ (Privy Council ) ಅನ್ನುವ ಹಿರಿಯ ಸಂಸ್ಥೆಗೆ ಸೇರಿರುತ್ತಾರೆ. ಅಂತಹ  ಸದಸ್ಯರಿಗೆ Right Honourable Gentleman ಅಥವಾ Lady  ಅಂತ ಸಂಭೋದಿಸಬೇಕು.

ಇಂದಿಗೂ ಪಾರ್ಲಿಮೆಂಟ್ ನಲ್ಲಿ ಜಾರಿ ಆದ ಕಾನೂನುಗಳನ್ನು ಬರೆಯುವುದು ಮೇಕೆ ಯ ಚರ್ಮದ ಮೇಲೆ ಅಂದರೆ ನಿಮಗೆ ಆಶ್ಚರ್ಯಾಗಬಹುದು  ಆದರೆ ಇದು ನಿಜ.  ಇವೆಲ್ಲವೂ ನೂರಾರು ವರ್ಷಗಳಿಂದ ಬಂದ ಪದ್ದತಿಗಳು 

 


ಇನ್ನೊಂದು ಆಸಕ್ತಿದಾಯಕ ವಾದ ವಿಚಾರ, ಪಾರ್ಲಿರ್ಮೆಂಟ್ ಅಧಿವೇಶದಲ್ಲಿ  ಇದ್ದಾಗ ಪ್ರತಿ ಬುಧುವಾರ ೧೨ ಗಂಟೆಗೆ ಪಿ ಮ್ ಕ್ಯು ( PMQ) ಅಂದರೆ ಪ್ರಧಾನ ಮಂತ್ರಿಗಗಳು  ಪ್ರಶ್ನೆ ಗಳಿಗೆ ಉತ್ತರಕೊಡುವುದು. ಇದು ಅನೇಕ ಸಲಿ ಎದರು ಪಕ್ಷದ ನಾಯಕರಿಗೂ ಮತ್ತು ಪ್ರಧಾನಿಗಳಿಗೂ ಆಗುವ ಸಂಭಾಷಣೆ ಬಹಳ ಸ್ವಾರಸ್ಯವಾಗಿರುತ್ತೆ . 

ಈ ಪಾರ್ಲಿಮೆಂಟ್ Mother of all  Parliaments  ಅನ್ನುವುದರಲ್ಲಿ ಏನೂ ಆಶ್ಚರ್ಯವಿಲ್ಲ 


 ನಿಮಗೆ ಗೊತ್ತಿರುವ ಹಾಗೆ ಈ ದೇಶದಲ್ಲಿ ಸಂಪ್ರದಾಯ ಮತ್ತು ಐತಿಹಾಸಕ ಸಂಗತಿಗಳಿಗೆ ತುಂಬಾ ಪ್ರಾಮುಖ್ಯತೆ ಇದೆ. ಈ ಒಂದು ಸಣ್ಣ ದೇಶ ಪ್ರಪಂಚದ ನಾನಾ ಭಾಗಗಳಲ್ಲಿ ತನ್ನ ಅಡಿತವನ್ನು ಸ್ಥಾಪನೆ ಮಾಡಿತ್ತು  . ಆದರೆ ಹೇಗೆ ಇದನ್ನು ಗಳಿಸಿದರು ಅನ್ನುವುದು ವಿವಾದಾತ್ಮಕ ದ  ವಿಚಾರ. ಇದನ್ನು ಚರ್ಚಿಸುವ ಅಗತ್ಯ ಇಲ್ಲಿಲ್ಲ. ಆದರೆ ಒಂದು ಶೋಚನೀಯವಾದ ವಿಷಯ - ಶಾಲೆಗಳಲ್ಲಿ ಈಗ  ಚರಿತ್ರೆ ಯನ್ನು ಸರಿಯಾಗಿ ಹೇಳುವುದಿಲ್ಲ ಆದ್ದರಿಂದ ಮಕ್ಕಳಿಗೆ ಈ ದೇಶದ ಅನೇಕ ವಿಚಾರದ ತಿಳುವಳಿಕೆ ಇಲ್ಲ Political Correctness ಕಾರಣ  ಇರಬಹುದೆ ನನಗೆ ಗೊತ್ತಿಲ್ಲ 

ನೀವೇನಂತೀರಾ ? 


ರಾಮಮೂರ್ತಿ 

Basingstoke

England

Comments

  1. Very informative. My earlier information was sketchy Thanks.

    ReplyDelete
  2. thanks for sharing lots of unknown facts

    ReplyDelete

Post a Comment