ಆಸರೆ ಮನೆ - 2

 ಆಸರೆ ಮನೆ - 2

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ

ಹಿಂದಿನ  ಭಾಗ  1 

ಭಾಗ  2    ಮುಂದುವರೆದುದು ....... 

.........ರಾಮನಾಥ ತಾಯಿಯ ಮಾತನ್ನು ಎಂದೂ ಮೀರಿ ನಡೆದವನಲ್ಲ. ಜೊತೆಗೆ ಹಲವು ದೇವರ ಹರಕೆಯಿಂದ ಹುಟ್ಟಿದ ಅಪರೂಪದ ಕೂಸನ್ನು ಅಂಗೈಯಲ್ಲಿಟ್ಟು ಮುಂಗೈಯಲ್ಲಿ ಮುಚ್ಚಿ ಬೆಳೆಸಿದ್ದು ಅಜ್ಜಿ ರಂಗನಾಯಕಮ್ಮನೇ. ಹೀಗಾಗಿ ಮಗಳನ್ನು ಬಿಟ್ಟಿರಲಾರದೆ ತಾಯಿಯ ಮಾತನ್ನು ಮೀರಲಾರದೆ ರಾಮನಾಥ, ಜಾನಕಿಯರು ಒಳಗೊಳಗೆ ಕುದಿದು ಹಣ್ಣಾದರು.


ಜಾತಕ ಒಳ್ಳೆಯ ದಿನ ಬೀರುವಿನಿಂದ ಈಚೆಗೆ ಬಂದಿತು. ಮನೆತನದ ಹೆಸರಾಂತ ಜ್ಯೋತಿಷಿ ಸುಬ್ಬಾಭಟ್ಟರ ಕೈಗೆ ಜಾತಕ ಹೋಗಬೇಕು. ಜಾತಕ ಹಿಡಿದು ಒಳಗೆ ಬಂದ ರಾಮನಾಥನನ್ನು ಆದರ ಗೌರವದಿಂದಲೇ ಒಳಗೆ ಕರೆದರು ಸುಬ್ಬಾಭಟ್ಟರು. "ಏನಪ್ಪ ರಾಮನಾಥ, ಅಪರೂಪವಾಗಿ ಈ ಹಾರವನ ಮನೆಗೆ ಬಂದೆ" ಲೋಕಾಭಿರಾಮವಾಗಿ ಏಕವಚನದಿಂದಲೇ ಆತ್ಮೀಯವಾಗಿ ಮಾತ ನಾಡಿಸಿದರು ಸುಬ್ಬಾಭಟ್ಟರು. ರಾಮನಾಥ ವಿನಯದಿಂದ ತಾನು ತಂದಿದ್ದ ಹಣ್ಣು -ಹೂವುಗಳನ್ನು ದಕ್ಷಿಣೆ ಸಮೇತ ಭಟ್ಟರ ಮುಂದಿಟ್ಟು ನಮಸ್ಕರಿಸಿದ.


"ಭಟ್ಟರೆ ನಮ್ಮ ಕಲ್ಯಾಣಿ ಜಾತಕ ತಂದಿದ್ದೇನೆ. ಅಮ್ಮನ ರಗಳೆ ಹೆಚ್ಚಾಗಿದೆ.  ಮಗು ಮದುವೆಗೆ ಬಂದಿದ್ದಾಳೆ ಎಂದು ಒಂದೇ ಗಲಾಟೆ. ನೀವು ದಯಮಾಡಿ ಜಾತಕ ಪರಿಶೀಲಿಸಿ ಸೂಕ್ತ ವರ ಇದ್ದರೆ ಹೇಳಬೇಕು" ಎಂದರು ರಾಮನಾಥ. ಸುಬ್ಬಾಭಟ್ಟರ ಕನ್ನಡಕ ಮೂಗಿನ ಮೇಲೇರಿತು, "ಅದಕ್ಕೇನು ಪರಿಶೀಲಿಸೋಣ ಬಿಡು ಕಲ್ಯಾಣಿ ನಮ್ಮ ಹುಡುಗಿ ಅಲ್ಲವೇ" ಎಂದ ಭಟ್ಟರು, ತೀಕ್ಷ್ಣವಾಗಿ ಕಣ್ಣು ತಿರುಗಿಸುತ್ತಾ


ಹುಬ್ಬು ಮೇಲೇರಿಸಿ ಬೆರಳುಗಳ ಎಣಿಕೆ ಪ್ರಾರಂಭಿಸಿದರು. ಮುಖದ ಗಂಟು


ಸಡಿಲಿಸಲಿಲ್ಲ. ರಾಮನಾಥನಿಗೆ ಸ್ವಲ್ಪ ಚಿಂತೆಯಾಯಿತು. ಸುಲಲಿತವಾಗಿ ಮಾಡಬಹುದೆಂದೆಣಿಸಿದ್ದ ಕೆಲಸ ಭಟ್ಟರ ಮುಖ ನೋಡುತ್ತಿದ್ದಂತೆ ಏಕೋ ಚಿಂತೆಗೆಡೆಕೊಟ್ಟಿತು. ಭಟ್ಟರು ನಿಧಾನವಾಗಿ ಕಣ್ಣುಬಿಟ್ಟು "ರಾಮನಾಥ ಜಾತಕ ಕೆಲವು ವಿಶಿಷ್ಟ ಗ್ರಹಗತಿಗಳಿಂದ ವಿಚಿತ್ರ ತಿರುವು ಪಡೆದಿದೆಯಪ್ಪ, ಮಗುವಿಗೆ ಎಲ್ಲ ಸೌಖ್ಯವಿದ್ದರೂ ಮಾಂಗಲ್ಯಯೋಗ ಅಷ್ಟೇನೂ ಗಟ್ಟಿಯಾಗಿ ಕಾಣುತ್ತಿಲ್ಲ ಎಂದು ರಾಗ ಎಳೆದಾಗ ರಾಮನಾಥನ ಎದೆ ಕಲಕಿದಂತಾಯಿತು. ಹಾಗೆ ಕುಸಿದು ಬಿದ್ದ ಭಟ್ಟರು, "ರಾಮನಾಥ, ರಾಮು ಏನಾಯಿತಪ್ಪ, ಲೇ ಇವಳೇ ಒಂದು ಲೋಟ ನೀರು ಬೇಗ ತಾ"ಎರಡು.ಭಟ್ಟರ ಮಡದಿ ತಂದ ನೀರನ್ನು ರಾಮನಾಥನ ಮುಖಕ್ಕೆ ಚುಮುಕಿಸಿ ರಾಮು ರಾಮು ಗಾಬರಿ ಏಕಪ್ಪ, ಏಳು ಸ್ವಲ್ಪ ನೀರು ಕುಡಿ, ನಿಧಾನ ನಿಧಾನ" ಎಂದರು. ರಾಮನಾಥ ಕಣ್ಣು ಬಿಟ್ಟ "ಗಾಬರಿಯಾಗಬೇಡ ರಾಮು, ಹುಡುಗಿ ಜಾತಕದ ದೋಷ  ಪ್ರಬಲವಾದ ವರನ ಜಾತಕದಿಂದ ಹೊಡೆದು ಹಾಕಿದರಾಯಿತು ಚಿಂತೆ ಬೇಡಪ್ಪ" ಎಂದ ಮೇಲೆ ರಾಮನಾಥ ಸ್ವಲ್ಪ ಸುಧಾರಿಸಿಕೊಂಡು ಭಟ್ಟರಿಗೆ ನಮಸ್ಕರಿಸಿ ಮನೆಗೆ ತೆರಳಿದ.


ಚಿಂತೆಯೆಂಬ ಕೀಟ ರಾಮನಾಥನ ಮನಸ್ಸನ್ನು ಕೊರೆದು ತೂತು ಮಾಡಲಾರಂಭಿಸಿತು. ಯಾರಿಗೂ ಹೇಳಲಾರದೆ ಒಳಗೇ ಕೊರಗಲಾರಂಭಿಸಿದ. ಗಂಡನ ಕಂಗಾಲು ಸ್ಥಿತಿ ಕಂಡ ಜಾನಕಿ ಎಷ್ಟೇ ಪ್ರಯತ್ನ ಪಟ್ಟರೂ ವಿಷಯದ ಅರಿವಾಗಲಿಲ್ಲ.


ರಂಗನಾಯಕಮ್ಮನು ಮಗನ ಸ್ಥಿತಿ ನೋಡಲಾರದೆ ಹಾಸಿಗೆ ಹಿಡಿದರು. ರಾಮನಾಥನಿಗೂ ಉಭಯ ಸಂಕಟ. ಹೇಳಲಾಗದ ವಿಷಯ, ಒಳಗೆ ಬಚ್ಚಿಡಲಾರದ ವಿಷಯ. 


ಅಂತೂ ಮೊಮ್ಮಗಳ ಮದುವೆ ನೋಡದೆಯೇ ರಂಗನಾಯಕಮ್ಮ ಕಣ್ಮುಚ್ಚಿದರು. ರಾಮನಾಥ ಇನ್ನೂ ಕಂಗಾಲಾದರು. ಜಾನಕಿ, ಕಲ್ಯಾಣಿ ಏನೂ ತೋರದೆ ಪೆಚ್ಚಾಗಿ ದಿನಕಳೆಯ ತೊಡಗಿದರು.


ದಿನಗಳು ಯಾರನ್ನೂ ಕೇಳದೆ ಮುಂದೆ ಸಾಗಲಾರಂಭಿಸಿತು. ಕೊನೆಗೂ ಸುಬ್ಬಾಭಟ್ಟರೇ ಒಂದು ಪ್ರಶಸ್ತವಾದ ಜಾತಕ ಹಿಡಿದು ರಾಮನಾಥನ ಮನೆಗೆ ಬಂದರು. ರಂಗನಾಯಕಮ್ಮನವರಿಲ್ಲದ ಮನೆ ಬಿಕೋ ಎನ್ನುತ್ತಿತ್ತು. ಬಂದ ಭಟ್ಟರನ್ನು ದಂಪತಿಗಳು ಸ್ವಾಗತಿಸಿ ಹಾಲು -ಹಣ್ಣುಗಳನ್ನಿತ್ತು ಸತ್ಕರಿಸಿದರು. ಭಟ್ಟರು ಸತ್ಕಾರ ಸ್ವೀಕರಿಸಿ ಕುಳಿತ ನಂತರ "ರಾಮು ನಿನಗೊಂದು ಶುಭ ಸುದ್ದಿ ಇದೆಯಪ್ಪ" ಎಂದಾಗ ರಾಮನಾಥನಿಗೆ ಏನು ಹೇಳುವರೋ ಭಟ್ಟರು ಎಂದು ಕಟ್ಟಿದ ಉಸಿರು ನಿರಾಳವಾಯಿತು - ಸಧ್ಯ ಎನ್ನುವ ಗೆಲುವಿನ ಸಮಾಧಾನದಲ್ಲಿ ಭಟ್ಟರಿಗೆ ನಮಸ್ಕರಿಸಿದ ದಂಪತಿಗಳು ಅವರ ಮುಂದೆ ಕುಳಿತು ಮೈಯೆಲ್ಲ ಕಿವಿಯಾಗಿ ಏನು ಹೇಳುವರೋ ಎನ್ನುವ ಕಾತುರ ಕಣ್ಣಿನಲ್ಲಿ ತುಳುಕಿಸುತ್ತ ಕುಳಿತರು.


"ರಾಮು ಕಲ್ಯಾಣಿಗೊಂದು ಒಳ್ಳೆಯ ಜಾತಕ ಬಂದಿದೆ. ಒಳ್ಳೆ ಗಟ್ಟಿ ಆಯುಷ್ಯದ ಹುಡುಗ. ಚಿಂತೆಗೆ ಕಾರಣವಿಲ್ಲ. ವಿದ್ಯಾವಂತ, ನೋಡಲು ಲಕ್ಷಣವಾಗಿದ್ದಾನೆ. ಒಳ್ಳೆಯ ಕೆಲಸದಲ್ಲೂ ಇದ್ದಾನೆ. ಇತ್ತೀಚೆಗಷ್ಟೇ ತಂದೆ ತಾಯಿ ಇಬ್ಬರೂ ರೈಲು ಅಪಘಾತದಲ್ಲಿ ಬನಾರಸ್ ಎಕ್ಸ್ಪ್ರೆಸ್ ನಲ್ಲಿ ಬರುವಾಗ ತೀರಿಕೊಂಡಿದ್ದಾರೆ. ಹುಡುಗ ಒಬ್ಬಂಟಿಗನಾಗಿ ಬನಾರಸ್ ಬಿಟ್ಟಿದ್ದಾನೆ. ಅವರು ನಮಗೆ ಪೂರ್ವದ ನೆಂಟರು ಆಗಬೇಕು. ಸುತ್ತಿ ಬಳಸಿ ನೋಡಿದರೆ ನಿಮ್ಮ ತಂದೆಯ ಕಡೆಯ ಬಳಗಾನೂ ಹೌದು" ಎಂದರು.


ರಾಮನಾಥ ಅಂಜುತ್ತಂಜುತ್ತ "ಹುಡುಗ, ಹುಡುಗಿ ಜಾತಕ ಹೊಂದಿಕೆಯಾಗಿ ವರಸಾಮ್ಯ ಸರಿಯಗಿ ಇಬ್ಬರೂ ಒಪ್ಪಿದರೆ, ಹುಡುಗ ಗುಣವಂತನಾಗಿದ್ದರೆ ಸಾಕು ಭಟ್ಟರೆ, ಬಡವನಾದರೂ ಯೋಚನೆಯಿಲ್ಲ" ಎಂದ .ಜಾನಕಿಯದೂ ಸಹಮತವಿತ್ತು ಗಂಡನ ಮಾತಿಗೆ.


ನೋಡು ರಾಮು ವರಸಾಮ್ಯದವನಾಗಿದ್ದು ನಾನು ಇಬ್ಬರನ್ನೂ ನೋಡಿದ್ದೇನೆ. ಮೊನ್ನೆ ನೀನು ಕಲ್ಯಾಣಿಯ ಜಾತಕ ಕೊಟ್ಟಿದ್ದೆಯಲ್ಲ ಅದಕ್ಕೆ ಹೊಂದುವ ಜಾತಕ 32 ಗುಣಗಳೂ ಪ್ರಶಸ್ತವಾಗಿ ಕೂಡಿ ಬಂದಿದೆ. ಕಲ್ಯಾಣಿಯ ಜಾತಕದ ದೋಷ ಹುಡುಗನ


ಜಾತಕದ  ಪ್ರಬಲ ಗ್ರಹಗಳ ಸಂಚಾರದಿಂದ ನಿವಾರಣೆಯಾಗುತ್ತದೆ. ನಿನ್ನ ಸಮಾಧಾನಕ್ಕೆ ಬೇಕಾದರೆ ಒಂದಿಷ್ಟು ಶಾಂತಿ, ಗ್ರಹದೋಷ ನಿವಾರಣೆ ಮಾಡೋಣ. ಬೇಕಾದರೆ ನಿನಗೆ ತಿಳಿದವರು ಯಾರಾದರೂ ಇದ್ದರೆ ನೀನು ಜಾತಕ ತೋರಿಸು. ಹುಡುಗ ಹುಡುಗಿ ಒಪ್ಪಿದರೆ ಏನೂ ತೊಂದರೆ ಇಲ್ಲ" ಎಂದರು ಭಟ್ಟರು ರಾಮನಾಥನಿಗೆ.


ಛೇ ಛೇ ನಿಮ್ಮ ಮಾತು ನಮಗೆ ವೇದ ವಾಕ್ಯ.ಬೇರೊಬ್ಬರ ಬಳಿ ಜಾತಕ ತೋರಿಸುವ ಪ್ರಶ್ನೆ ಇಲ್ಲ. ನೀವು ನಮ್ಮ ಮನೆಯ,ಕಲ್ಯಾಣಿಯ ಹಿತೈಷಿಗಳು. ಕಲ್ಯಾಣಿ ನಮಗಿರುವ ಒಬ್ಬಳೆ ಮಗಳು. ಹುಡುಗ ಬಡವನಾದರೇನು ನಮಗಿರುವುದೆಲ್ಲ ಅವರಿಗೆ  ತಾನೇ ಚಿಂತೆ ಮಾಡಲು ಕಾರಣವೇ ಇಲ್ಲ" ಎಂದ ರಾಮನಾಥ. ಗಲಾಟೆ


''ಸರಿ ರಾಮು ಈ ಬರುವ ಭಾನುವಾರ ದಶಮಿ ದಿನ ಚೆನ್ನಾಗಿದೆ. ೪.ಕ್ಕೆ ರಾಹುಕಾಲ. ಅದಕ್ಕೆ ಮೊದಲೇ ವಧು ವರಾನ್ವೇಷಣೆ ಇಟ್ಟುಕೊಳ್ಳೋಣ.ಏನಂತೀಯ ಜಾನಕಮ್ಮ. ಹುಡುಗ ಶ್ರೀಕಾಂತ ಅವನ ಗೆಳೆಯ ನಿರಂಜನ ನಾನು ಇವಳು ನಾಲ್ಕು ಜನ ಬರೋಣವೇನಪ್ಪ'' ಎಂದರು ಭಟ್ಟರು.


''ಖಂಡಿತ ಭಟ್ಟರೆ ಇಷ್ಟು ಮಾಡಿ ನಮ್ಮನ್ನು ಕೈ ಹಿಡಿದು ಕಾಪಾಡಿ'' ಎಂದಳು ಜಾನಕೀ. ಹೆಚ್ಚು ಕಮ್ಮಿ ಮಾಡುವೆ ನಿಶ್ಚಯವಾದಂತೆಯೇ ಭಟ್ಟರು ಮನೆಯ ಕಡೆ ಮುಖ ಮಾಡಿದರು. ಜಾನಕಿಗಂತು ಮಾಡುವೆ ನಡೆದೇ ಹೋಯಿತೆನ್ನುವ ಸಡಗರ.''ಕಲ್ಯಾಣಿ,  ಕಲ್ಯಾಣಿ'' ಎಂದು ಜೋರಾಗಿ ಕೂಗುತ್ತ ಒಳ ನಡೆದಳು


******


ಭಾನುವಾರ ಬಂದೇ ಬಿಟ್ಟಿತ್ತು. ಕಲ್ಯಾಣಿಯ ಕೈ ಚಳಕದಿಂದ ಮನೆ ಹೊಸ ಬಾಗಿಲು, ಕಿಟಕಿ ಪರದೆಗಳಿಂದ ಸಿಂಗಾರಗೊಂಡಿತು. ನಾಚುತ್ತ ನಲಿಯುತ್ತ ಕಲ್ಯಾಣಿ ಮನೆಯನ್ನು ಶುಚಿ ಮಾಡಿದಳು. ಕೆಲಸದ ಸಿದ್ಧಮ್ಮ ಧೂಳು ಹೊಡೆದು ಗುಡಿಸಿ ಒರೆಸಿ ಬಾಗಿಲು ಮುಂದೆ ದೊಡ್ಡ ರಂಗೋಲೆ ಹಾಕಿ ಸಿಗರಿಸಿದಳು. ಡ್ರೈವರ್ ಮೂರ್ತಿ ಒಂದಿಷ್ಟು ಮಾವಿನ ಸೊಪ್ಪಿನ ತೋರಣದಿಂದ ಮನೆಗೆ ಮದುವೆ ಮನೆ ಕಲೆಯನ್ನು ತಂದ . ಜಾನಕಿ ಅಡುಗೆ ಮನೆಯಲ್ಲಿ ತುಪ್ಪದಿಂದ ಘಮ ಘಮಿಸುವ ಕೇಸರಿಬಾತ್, ಹಿರೇಕಾಯಿ, ಆಲೂಗಡ್ಡೆ ಬೋಂಡಾ ತಯಾರಿಸಿದಳು. ಕಲ್ಯಾಣಿ ಸಣ್ಣಂಚಿನ ಹಸಿರು ಬಣ್ಣದ ಮೈಸೂರು ಕ್ರೇಪ್ ಸೀರೆ ಉಟ್ಟು ನೀಲ ಜಡೆಗೆ ಮಲ್ಲಿಗೆ ಕನಕಾಂಬರ ಮುಡಿದಳು. ಅವಳಿಗೆಂದೇ ರಂಗನಾಯಕಮ್ಮನವರು ಮಾಡಿಸಿದ ಎರಡೆಳೆ ಮುತ್ತಿನ ಸರ, ಎರಡೆರಡು ಮುತ್ತು,ಹಸಿರಿನ ಬಳೆ, ಸೀರೆಗೆ ಮ್ಯಾಚ್ ಆಗುವಂತೆ ಹಸಿರು ಮುತ್ತಿನ ಓಲೆ ಉಂಗುರ ಧರಿಸಿದ್ದಳು ಅಮ್ಮನ ಆಣತಿಯಂತೆ. ರಾಮನಾಥನಂಟುಮಗಳನ್ನು ಕಣ್ತುಂಬ ನೋಡಿದನು. ''ನೋಡಿ ದಣಿಯನು ಬಿರುದ ಹೊಗಳಿಸಿ ಹಾಡಿ ತಣಿಯನು,ನಿಚ್ಚಲುಚಿತವ ಮಾಡಿ ತಣಿಯನು''


 

Comments

  1. looks like a quality dharavaahi type story. nice

    ReplyDelete
    Replies
    1. Thank you. This is written by my mother. Keep reading. 🙂🙏

      Delete

Post a Comment