ಜಾರ್ಜ್ ಎಡಾಲ್ಜಿ ಪ್ರಕರಣ

 ಜಾರ್ಜ್ ಎಡಾಲ್ಜಿ ಪ್ರಕರಣ 

ಲೇಖನ  – ರಾಮಮೂರ್ತಿ,  ಬೇಸಿಂಗ್ ಸ್ಟೋಕ್

 ೧೯ನೇ ಶತಮಾನದಲ್ಲಿ ಈ ದೇಶದಲ್ಲಿ, ಅಂದರೆ ಇಂಗ್ಲೆಂಡ್  ನಲ್ಲಿ ನೆಲಸಿದ ಭಾರತೀಯರ ಬಗ್ಗೆ ಮಾಹಿತಿ ಹೆಚ್ಚಾಗಿಲ್ಲ. ಆದರೆ ಒಂದು ಭಾರತೀಯ ಕುಟುಂಬದಲ್ಲಿ ನಡೆದ ಒಂದು ನಿಜವಾದ ಘಟನೆಯನ್ನು ಸರ್ ಅರ್ಥರ್ ಕಾನಾನ್  ಡೊಯಲ್   ನಮ್ಮ ಗಮನಕ್ಕೆ ತಂದಿದ್ದಾರೆ. 

ಇದು ಜಾರ್ಜ್ ಎಡಾಲ್ಜಿ  (George Edalji ) ಪ್ರಕರಣ. 


ಈತನ ತಂದೆ ಮುಂಬೈನ ಶಪೂರ್ಜಿ ಎಡಾಲ್ಜಿ  ಪಾರ್ಸಿ ಜನಾಂಗದವರು.. ಭಾರತದಿಂದ ಇಲ್ಲಿಗೆ ಬಂದು ಕ್ರೈಸ್ತ ಮತಕ್ಕೆ ಬದಲಾಗಿ ಅನೇಕ ಚರ್ಚ್ ಗಳಲ್ಲಿ ಕೆಲಸಮಾಡಿ ಕೊನೆಗೆ, ೧೮೭೬ ನಲ್ಲಿ ಸ್ಟಾಫರ್ಡ್ ಶೈರ್ ನ Great Wyrley ಸಂತ ಮೇರಿ ಚರ್ಚ್ ನಲ್ಲಿ ಪ್ರದಾನ ಅರ್ಚಕರಾದರು (Vicar ) ಈತನ ಪತ್ನಿ ಚಾರ್ಲೆಟ್ ಇಂಗ್ಲಿಷ್ ನವಳು , ಇವರ ಮಗ ಜಾರ್ಜ್, ಜನನ ೨೨/೧/೧೮೭೬. ವಾಲ್ಸಾಲ್ ಗ್ರಾಮರ್ ಶಾಲೆಯಲ್ಲಿ ಓದಿ ನಂತರ ಬರ್ಮಿಂಗ್ ಹ್ಯಾಮ್ ನಲ್ಲಿ ಕಾನೂನು ಪದವಿ ಪಡೆದು ವಕೀಲರಾಗಿ ಕೆಲಸ ಆರಂಭಿಸಿದ. ಆಗಿನ ಸಮಾಜದಲ್ಲಿ ವರ್ಣ ಭೇದ ವಿಪರೀತವಾಗಿತ್ತು, ಒಬ್ಬ ಭಾರತೀಯ ಚರ್ಚ್ ಆಫ್ ಇಂಗ್ಲೆಂಡ್ ನಲ್ಲಿ vicar ಆಗಿರುವುದು ಬಹಳ ಜನಕ್ಕೆ ಅಸಮಾಧಾನ ಇತ್ತು, ಚರ್ಚ್ ನಲ್ಲಿ ಕೆಲಸ ಮಾಡುತಿದ್ದ ಆಳು ಇವರಿಗೆ ಅನೇಕ ಅನಾಮಧೇಯದ ಅವಮಾನದ ಪತ್ರಗಳನ್ನು ಬರೆದಿದ್ದಳು.  ತನಿಖೆ ಆದ ಮೇಲೆ ತನ್ನ ತಪ್ಪನ್ನ ಒಪ್ಪಿಕೊಂಡು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೋದಳು . ಜಾರ್ಜ್ ೧೬ ವರ್ಷದ ವಿದ್ಯಾರ್ಥಿ ಆಗಿದ್ದಾಗಲೂ ಸಹ ಅನಾಮಧೇಯ ಕಾಗದಗಳು ಅವನ ಶಾಲೆಯಲ್ಲಿ ಹರಡಿ , ಇದಕ್ಕೆ ಜಾರ್ಜ್ ಕಾರಣ ಎನ್ನುವ ಆರೋಪ ಸಹ ತಂದಿದ್ದರು.  ಸುಮಾರು ಐದು  ವರ್ಷಗಳ ಕಾಲ ನಿರಂತರವಾಗಿ ಶರ್ಪೂರ್ಜಿ ಎಡಾಲ್ಜಿ ಅವರಿಗೆ ಅನಾಮಧೇಯ ಬೆದರಿಸುವ ಕಾಗದಗಳು ಬಂದಿದ್ದವು. ಆದರೆ ೧೯೦೩ರಲ್ಲಿ  ನಡೆದ ಪ್ರಸಂಗ ಇವರೆಲ್ಲರ  ಜೀವನವೇ ಬದಲಾಯಿತು.  

ಗ್ರೇಟ್ ವೈರ್ಲಿ ಊರಿನಲ್ಲಿ  ಕುರಿ ಮತ್ತು ಹಸುಗಳ ಕೊಲೆ ಸುದ್ದಿ ಹರಡಿತು. ಯಾರೋ ಮದ್ಯ ರಾತ್ರಿಯಲ್ಲಿ ಈ ಪ್ರಾಣಿಗಳಿಗೆ ಚಾಕುನಿಂದ ಹೊಟ್ಟೆ ಇರುದು ಕೊಂದಿರುವ  ಸುದ್ದಿ ಕಾಡು ಕಿಚ್ಚನಂತೆ ಹರಡಿ ಪೊಲೀಸರಿಗೆ ಈ ಕೆಲಸ ಜಾರ್ಜ್ ಎಡಾಲ್ಜಿ ಮಾಡಿದ್ದಾನೆ ಎಂಬ ಸುಳ್ಳು ಸುದ್ದಿ ಹಬ್ಬಿಸದರು. ಜಾರ್ಜ್ ಆವಾಗ ವಕೀಲನಾಗಿ ಕೆಲಸದಲ್ಲಿದ್ದ, ಆ ಪ್ರದೇಶದ ಪೊಲೀಸ್ ಮುಖ್ಯಸ್ಥ ಕ್ಯಾಪ್ಟನ್  ಅಸ್ಟೋನ್, ಇವನ ತಂದೆ ಲಾರ್ಡ್ ಲಿಚ್ ಫೀಲ್ಡ್, ತುಂಬಾ ದೊಡ್ಡ ಮನೆತನ ದವರು, ಆದರೆ ಈ ಅಸ್ಟೋನ್ ಜನಾಂಗೀಯ (Racist ) , ಸರಿಯಾಗಿ ತನಿಖೆ ನಡಿಸದೆ ಸುಳ್ಳು ಸಾಕ್ಷಿ ಗಳನ್ನೂ  ಕೊಡಿಸಿ ನ್ಯಾಯಾಲಯದಲ್ಲಿ ಏಳು ವರ್ಷ ಶಿಕ್ಷೆ ಜಾರ್ಜ್ ಅನುಭವಿಸುವಂತೆ ಮಾಡಿದ. ಆದರೆ ಅನೇಕರಿಗೆ ಇಲ್ಲಿ   ಬಹಳ ಅನ್ಯಾಯ  ಆಗಿದೆ ಎಂದು ತಿಳಿದು ಹತ್ತು  ಸಾವಿರ ಸಾರ್ವಜನಿಕರ  ಸಹಿ ಮಾಡಿದ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದರು, ಅಂದಿನ ಗೃಹ ಮಂತ್ರಿ (Home Secretary ) ಈ ಅರ್ಜಿಯನ್ನು ಪರಿಶೀಲಿಸಿ, ಆಗಲೇ ಮೂರು ವರ್ಷ ಶಿಕ್ಷೆ ಅನುಭಸಿದ್ದ  ಈತನನ್ನು ಬಿಡುಗಡೆ ಮಾಡಿದರು. ಸ್ವತಂತ್ರವೇನು ಬಂತು ಆದರೆ ಕ್ರಿಮಿನಲ್ ದಾಖಲೆ ಇದ್ದಿದ್ದರಿಂದ ಕಾನೂನಿ ಪ್ರಕಾರ ಅವನ ವಕೀಲ ವೃತ್ತಿಗೆ ವಾಪಸ್ಸು ಬರುವುದು ಸಾಧ್ಯವಿರಲಿಲ್ಲ .   ಹಣ ಪರಿಹಾರದ  ಅರ್ಜಿ ಸಹ ತಿರಸ್ಕರಿಸಲಾಯಿತು. ಬೇರೆ ದಾರಿ ತೋಚದೆ ಅವನಿಗಾಗಿದ್ದ ಅನ್ಯಾಯದ  ಬಗ್ಗೆ ವಿವರವಾಗಿ ವರದಿ ಬರೆದು ದಿ ಅಂಪೈರ್ ಅನ್ನುವ  ಪತ್ರಿಕೆಗೆ ಕಳಿಸಿದ.  ಇದು ಪ್ರಕಟವಾದಮೇಲೆ ಅದರ ಪ್ರತಿಗಳನ್ನು ಸರ್ ಆರ್ಥರ್ ಅವರಿಗೆ  ಕಳಿಸಿ  ಸಹಾಯವನ್ನು ಕೋರಿದ, ಅಗತಾನೇ ಇವರ ಪತ್ನಿ ನಿಧನರಾಗಿದ್ದರು ,  ಆದರೂ ಈ ವಿಷಯವನ್ನು ಕೇಳಿ ಇವರೇ ಖುದ್ದು ವಿಚ್ಚಾರಣೆ ಮಾಡಲು ನಿರ್ಧರಿಸಿ, ಲಂಡನ್ ನಲ್ಲಿ   ಇವರು ಇದ್ದ ಹೋಟೆಲ್ ನಲ್ಲಿ   ಬಂದು ಭೇಟಿಯಾಗುವಂತೆ ಹೇಳಿದರು. ಜಾರ್ಜ್ ಸ್ವಲ್ಪ ಮುಂಚೆ ಬಂದು ಅಲ್ಲಿ ಇದ್ದ ದಿನ ಪತ್ರಿಕೆಯನ್ನು ಓದುತ್ತಿದ್ದ ರೀತಿಯನ್ನು  ಸರ್ ಅರ್ಥರ್ ಗಮನಿಸದರು. ಆತ ಪತ್ರಿಕೆಯನ್ನು ಕಣ್ಣಿಗೆ ತುಂಬಾ ಹತ್ತಿರ ಇಟ್ಟಿಕೊಂಡು  ವಾರೆ ನೋಟದಿಂದ ಓದುತ್ತಿದ್ದನ್ನು ಗಮನಿಸಿಸಿ  ಇವನಿಗೆ ಸಮೀಪ ದೃಷ್ಟಿ (myopia) ಅನ್ನುವುದು ಖಚಿತವಾಯಿತು ಮತ್ತು  "Astigmatism " ಸಹ ಇರುವಂತೆ ಅರಿವಾಯಿತು. ಇಂತವನು ರಾತ್ರಿ ಕತ್ತಲೆಯಲ್ಲಿ ಹಸು ಕುರಿಗಳನ್ನು ಹತ್ಯ ಮಾಡುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ ವಾಯಿತು.   ಅವನಿಂದ ಈ ವಿಚಾರವನ್ನು ಚರ್ಚಿಸಿ ಸರ್ ಅರ್ಥರ್ ಇವನಿಗೆ ಆಗಿರುವ ಅನ್ಯಾಯದ ಬಗ್ಗೆ The Daily Telegraph ಪತ್ರಿಕೆಯಲ್ಲಿ (Jan ೧೯೦೭) ಎರಡು ಲೇಖನಗಳನ್ನು ಬರೆದು ಜಾರ್ಜ್ ನಿರಪರಾಧಿ ,  ಫ್ರಾನ್ಸ್ ದೇಶದಲ್ಲೋ ಡ್ರೇಫಾಸ್ ಅನ್ನುವ ಯಹೂದಿ (Jew ) ಸಹ ಪೊಲೀಸರಿಂದ ಇದೇರೀತಿಯಲ್ಲಿ ಅನ್ಯಾಯ ವಾಗಿತ್ತು, ಇಲ್ಲಿ ಯಹೂದಿ ಬದಲು ಭಾರತೀಯನಿಗೆ ಇದೇ  ಪಾಡು ಬಂದಿದೆ  ಅನ್ನುವುದನ್ನ ಬ್ರಿಟಿಷ್ ಸರಕಾರದ ಗಮನಕ್ಕೆತಂದರು . ಪ್ರಸಿದ್ಧ ಸಾಹಿತಿ  ಜಾರ್ಜ್ ಬರ್ನಾರ್ಡ್ ಶಾ ಮತ್ತು ಜೆ ಎಂ ಬ್ಯಾರಿ ಮುಂತಾದವರು  ಇವರ  ಲೇಖನವನ್ನು  ಓದಿ ಅವರ ಬೆಂಬಲ ನೀಡಿದರು . ಆದರೆ ಆಗಿನ ಕಾನೂನು ಪ್ರಕಾರ   ಮರುಪರಿಶೀಲನೆ ಜಾರಿಯಲ್ಲಿರಲಿಲ್ಲ. ಇದನ್ನು ಓದಿ ಅನೇಕ ರಾಜಕಾರಣಿಗಳಿಗೆ ಬಹಳ ಆತಂಕ ಉಂಟಾಗಿ  ಅಂದಿನ ಗೃಹ ಮಂತ್ರಿ ಹೆರ್ಬರ್ಟ್ ಗ್ಲಾಡ್ ಸ್ಟೋನ್ ನವರಿಗೆ ಈ ವಿಚಾರವನ್ನು ಪುನಃ ಪರಿಶೀಲಸಬೇಕೆಂದು  ಮನವಿ ಮಾಡಿದರು. ನಂತರ ಮೂರು ಸದಸ್ಯರ ಸಮಿತಿ  ನ್ಯಾಯಾಲಯದಲ್ಲಿ ಕೊಟ್ಟ ಸಾಕ್ಷಿಗಳು  ಅತ್ರಿಪ್ತಿಕರ ಮತ್ತು   ಪೊಲೀಸರ  ತನಿಖೆ ಯೋಗ್ಯವಲ್ಲದ್ದು  ಆದ್ದರಿಂದ ಈತ ನಿರಪರಾಧಿ ಎಂಬ ತೀರ್ಮಾನಕ್ಕೆ ಬಂದು ಉಚಿತ ಕ್ಷಮೆ (Free Pardon) ಕೊಟ್ಟರು. ಆದರೆ ಹಣಕಾಸಿನ ( Financial Compensation) ಪರಿಹಾರ ಸಿಗಲಿಲ್ಲ.  




ಸರ್ ಅರ್ಥರ್ ಈ ವಿಷಯವನ್ನು ಇಲ್ಲೇ ಬಿಡಲಿಲ್ಲ, ನಿಜವಾದ ಅಪರಾಧಿ (culprit)  ಯಾರು  ಎಂದು ಪತ್ತೆಮಾಡುವುದು  ಅವರ ಗುರಿಯಾಗಿತ್ತು.   ಪೊಲೀಸ್ ಅಧಿಕಾರಿ ಜಾರ್ಜ್ ಅನ್ಸನ್ ಗಮನಕ್ಕೆ ಅನೇಕ ಕಾಗದಗಳನ್ನು ಬರೆದು ಇದನ್ನು ತಾವೇ ಖುದ್ದಾಗಿ ಅಲ್ಲಿಗೆ ಹೋಗಿ  ವಿಚಾರಣೆ ನಡೆಸುವ ನಿರ್ಧಾರ ಮಾಡಿದರು. 

ಅಲ್ಲಿ ಸಿಕ್ಕಿದ ಸಾಕ್ಷಿಗಳಿಂದ  ಪೊಲೀಸರು ತಮ್ಮ ಕೆಲಸವನ್ನು ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂಬುದು ಸ್ಪಷ್ಟವಾಯಿತು. ಜಾರ್ಜ್ ೯ ೩೦ ಗಂಟೆಗೆ ಮಲಗುತ್ತಿದ್ದ ಬೆಳಗ್ಗೆ ಬೇಗ ಕೆಲಸಕ್ಕೆ ಹೊರುಡುತಿದ್ದ ಪ್ರಾಣಿ ಗಳ  ಕೊಲೆ ನಾಡು ರಾತ್ರಿಯಲ್ಲಿ ಆಗಿತ್ತು,  ಜಾರ್ಜ್  ಮಲಗುತ್ತಿದ್ದು  ಅವನ ತಂದೆ ಕೊಣೆಯಲ್ಲಿ  ಆದ್ದರಿಂದ ಇವನು ಮದ್ಯ ರಾತ್ರಿಯಲ್ಲಿ ಹೊರಗೆ ಹೋಗಿದ್ದಾರೆ ತಂದೆಗೆ ಗೊತ್ತಾಗುತಿತ್ತು .  ಪೋಲೀಸರು  ಜಾರ್ಜ್ ಮನೆಯಿಂದ ವಶಪಡಿಸಿಕೊಂಡಿದ್ದ ರೇಝರ್ ಮೇಲೆ ರಕ್ತದ ಕಲೆಗಳು ಇರಲಿಲ್ಲ, ಅವನ ಬೂಟಿನಲ್ಲಿ  ಇದ್ದ ಮಣ್ಣು ಪ್ರಾಣಿಗಳು ಕೊಲೆಯಾದ್ದ ಜಾಗದಿಂದ ಬಂದಿರಲಿಲ್ಲ. ಜಾರ್ಜ್ ಜೈಲ್ ನಲ್ಲಿ ಇದ್ದಾಗಲೂ ಪ್ರಾಣಿಗಳ ಹತ್ಯೆ ನಡದಿತ್ತು  ಅದಕ್ಕಿಂತ ಆಶ್ಚರ್ಯದ ವಿಷಯ ಸತ್ತ ಪ್ರಾಣಿಯ ಒಂದು ಭಾಗವನ್ನು ಜಾರ್ಜ್ ತೊಡುತ್ತಿದ್ದ  ಬಟ್ಟೆಯಿಂದ ಕಟ್ಟಿ ಇದರಲ್ಲಿ ಪ್ರಾಣಿಗಳ  ಕೂದಲು ಇದೆ ಆದ್ದರಿಂದ ಇವನೇ ಅಪರಾಧಿ ಎಂದು ಹೇಳಿದ್ದ  ಸುಳ್ಳು ಸಾಕ್ಷಿ ಇವರಿಗೆ ಸಿಕ್ಕಿತು. ಇವರ ತನಿಖೆ ನಿಜವಾದ ಕೊಲೆಗಾರನಿಗೆ ತಿಳಿವುಬಂದು ಗಾಬರಿಯಾಗಿ ಅನಾಮಧೇಯದ ಎರಡು ಕಾಗದಗಳನ್ನು ಕಳಿಸಿದ , ಪ್ರಾಣಿಗಳ ಕೊಲೆ ಆದ್ದ ರೀತಿ ನಿಮಗೂ ಈ ಗತಿ ಕಾಣಿಸುತ್ತೇನೆ ಅಂತ ಬೆದರಿಸಿದ , ಆದರೆ ಎರಡನೇ ಕಾಗದಲ್ಲಿ ಇವರಿಗೆ  ಒಂದು ಸುಳಿವು ಸಿಕ್ಕಿತು.  ಇದರಲ್ಲಿ  ತನಗೆ ಅವನು ಓದುತ್ತಿದ್ದ  ವಾಲ್ಸಾಲ್  ಗ್ರಾಮರ್ ಶಾಲೆಯ ( ಜಾರ್ಜ್ ಓದಿದ್ದು ಇಲ್ಲೇ ಅಂದರೆ ಇವನ ಸಹಪಾಠಿ ) ಹೆಡ್ ಮಾಸ್ಟರ್ ರಿಂದ    ಆಗಿದ್ದ ಅವಮಾನವನ್ನು ಬರೆದಿದ್ದ. ಶಾಪೂರ್ಜಿ ಎಡಾಲ್ಜಿ ಗೆ ಬಂದಿದ್ದ ಕಾಗದಲ್ಲೋ ಸಹ ಈ ವಿಚಾರ ಬಗ್ಗೆ ಬರೆದಿದ್ದು ಸರ್ ಅರ್ಥರ್ ಗಮನಕ್ಕೆ  ಬಂದು ಈ ಬೆದರಿಕೆ ಕಾಗದ ಬರೆದವನು ಪ್ರಾಣಿಗಳ ಕೊಲೆಗಾರ ಅನ್ನುವ ಅಭಿಪ್ರಾಯಕ್ಕೆ ಬಂದರು. ಅಂದಿನ ಹೆಡ್ ಮಾಸ್ಟರ್ ಅವರನ್ನು ಸರ್ ಅರ್ಥರ್ ಭೇಟಿಮಾಡಿದಾಗ ಒಬ್ಬ ತುಂಟ ಹುಡುಗನನ್ನು ಹೊರಗೆ ಹಾಕಿದ್ದೆನೆಂದು (expelled )ಹೇಳಿ ಆ ಹುಡಗನ ಹೆಸರು ಕೊಟ್ಟರು. ಇವನು ನಂತರ ಅದೇ ಹಳ್ಳಿಯಲ್ಲಿ butcher ಆಗಿ ಕೆಲಸ ಮಾಡುತಿದ್ದ . ಕೆಲವರು ಇವನನ್ನು ಕೊಲೆಯಾದ ಜಾಗದಲ್ಲಿ  ಆ ರಾತ್ರಿ  ನೋಡಿದ್ದ   ಬಗ್ಗೆ ಮಾಹಿತಿ ಕೊಟ್ಟರು.  ಇದನೆಲ್ಲಾ  ಸಂಗ್ರಹಿಸಿ ಸರ್ ಅರ್ಥರ್ ಗ್ರಹ ಮಂತ್ರಿಗಳಿಗೆ ಕಳಿಸಿ ನಿಜವಾದ ಕೊಲೆಗಾರನನ್ನು ಪತ್ತೆ ಹಚ್ಚಿದ್ದೇನೆ ಇವನ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಮನವಿ ಮಾಡಿದರು. ಆದರೆ ಸರ್ಕಾರದ ಪ್ರತಿಕ್ರಿಯೆ ನಿರಾಶವಾಗಿತ್ತು, ಈ ವಿಷಯದ ಮೇಲೆ ಹೇಳಬೇಕಾಗಿದ್ದೆಲ್ಲಾ  ಹೇಳಲಾಗಿದೆ ಆದ್ದರಿಂದ ಇನ್ನೇನು ಕ್ರಮ ತೆಗೆದುಕೊಳ್ಳುವ ಅಗತ್ಯ ಇಲ್ಲ ಅನ್ನುವ ಹೇಳಿಕೆ ಬಂತು. 



ಇಲ್ಲಿ ಮೇಲೆ  ಬರೆದಿರುವುದು  ಒಂದು ಅನಿಸಿಕೆ (version)

ಇಷ್ಟರಲ್ಲೇ  ಶ್ರಭಾನಿ  ಬೋಸ್ ಬರೆದಿರುವ ಪುಸ್ತಕ ಪ್ರಕಟವಾಗಲಿದೆ, (The Mystery of the  Parsee Lawyer )  . ಈಕೆ Victoria and Abdul ಪುಸ್ತಕ ಬರೆದವರು. ಗ್ರೇಟ್ ವೈರ್ಲಿ ಪ್ರಾಣಿ ಹತ್ಯ ಮತ್ತು ಇದರ ತನಿಖೆಗೆ  ಸಂಭಂದಿಸಿದ ಮತ್ತು  ಸರ್ ಅರ್ಥರ್ ಬರೆದ ಅನೇಕ ಕಾಗದ ಪತ್ರಗಳು ಕೆಲವು ವರ್ಷದ ಹಿಂದೆ ಲಂಡನ್ Bonamans Auction House  ನಲ್ಲಿ ಹರಾಜಿಗಿತ್ತು. ಈ ಸಂಗ್ರಹ ಈಗ Portsmouth ಗ್ರಂಥಾಲಯದಲ್ಲಿ ಇದೆ. ಇದನ್ನು ಶ್ರಭಾನಿ ಅವರು ಓದಿ ಈ ಪುಸ್ತಕವನ್ನು ಬರೆದಿದ್ದಾರೆ , ಇಲ್ಲಿ ಅವರ ನಿರ್ವಚನೆ ಬೇರೆ. ಸರ್ ಅರ್ಥರ್ ಖುದ್ದಾಗಿ Great Wyrely ಹೋಗಿ ತನಿಖೆ ನಡೆಸಿದ್ದು ನಿಜ, ಆದರೆ ಪೊಲೀಸ್ ಅಧಿಕಾರಿ ಕಾಪ್ಟನ್ ಅನ್ಸನ್  ಇವರಿಗೆ ಸಹಕಾರ ನೀಡಿದೆ ಅವರನ್ನು ತಪ್ಪು ದಾರಿಯಲ್ಲಿ ಕಳಿಸಿದ ಅನ್ನುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ .  ಒಬ್ಬ ಸ್ಥಳೀಯ ನಿಂದ  ಇದು ನನ್ನ ಕೆಲಸ ಅಂತ ಹೇಳಿ  ಒಂದು ಅನಾಮಧೇಯ ಕಾಗದವನ್ನು ಇವರಿಗೆ ಬರೆಸಿದ , ಇದನ್ನು ನಂಬಿ  ಸರ್ ಅರ್ಥರ್  ಗೃಹ ಮಂತ್ರಿಗಳಿಗೆ ಒಬ್ಬ ಅಪರಾಧಿಯನ್ನು ಪತ್ತೆಮಾಡಿದ್ದೇನೆಂದು  ತಿಳಿಸಿದರು .  ಜಾರ್ಜ್ ಅನ್ಸನ್ ಇವರನ್ನು ಗೇಲಿ ಮಾಡಿ, ಈ ಕಾಗದ ಬರೆದವನು ಪೊಲೀಸ್ ಇಲಾಖೆಗೆ ಪರಿಚಯದವನು ಸರ್ ಅರ್ಥರ್ ಇವನನ್ನು ನಂಬಿಬಿಟ್ಟರು, ಈತ ಶರ್ಲಾಕ್  ಹೋಮ್ಸ್ ತರ  ಪತ್ತೇದಾರಿ ಅಲ್ಲ ಇದರ ಬಗ್ಗೆ ಹಿಂದೆ ಮುಂದೆ ಗೊತ್ತಿಲ್ಲಲ್ಲವೆಂದು ಹೇಳಿ ಗೃಹ ಮಂತ್ರಿಗಳಿಗೆ ತಿಳಿಸಿದ.    


ಕೆಲವು ವರ್ಷಗಳ  ಹಿಂದೆ Arthur and George  ಅನ್ನುವ ಧಾರಾವಾಹಿನಿ  ಟೆಲಿವಿಷನ್ನಲ್ಲಿ  ಬಂದಿತ್ತು. ಇದನ್ನು ಬರೆದವರು ಜೂಲಿಯನ್ ಬರ್ನ್ಸ್. ಇಲ್ಲೋ ಸಹ ಸ್ವಲ್ಪ ಹೋಲಿಕೆ ಬೇರೆ ಇದೆ. 

೧೯೬೬ರಲ್ಲಿ ಜರ್ಮನ್ ಭಾಷೆಯಲ್ಲಿ ಒಂದು ಚಲನಚಿತ್ರ ಮತ್ತು BBC ರೇಡಿಯೊ ನಲ್ಲೂ ಇದರಬಗ್ಗೆ ಒಂದು ಕಥೆ ಪ್ರಸಾರ ವಾಯಿತು, 

ಮೂಲ ಕಥೆ ಒಂದೇ ಆಗಿದ್ದರೂ ವಿಭನ್ನತೆ ತಮಗೆ ಬೇಕಾದಹಾಗೆ ತೋರಿಸಿದ್ದಾರೆ, 


ಆದರೆ ಒಟ್ಟಿನಲ್ಲಿ ಒಬ್ಬ ನಿರಾಪದಾರಿ ಭಾರತೀಯನಿಗೆ ಅನ್ಯಾಯವಾಗಿದ್ದು ನಿಜ. ಪೊಲೀಸರಿಗೆ ಆಗ ವರ್ಣ ದ್ವೇಷದಿಂದ ನಿಜವಾದ ಅಪರಾಧಿಯನ್ನು ಕಂಡುಹಿಡಿಯುವ ಪ್ರಯತ್ವನ್ನು ಮಾಡಲಿಲ್ಲ. ಈ ಪ್ರಕರಣ ಆದ ನೂರು ವರ್ಷದ ಮೇಲೆ, ೧೯೯೩ರಲ್ಲಿ , ಲಂಡನ್ ನಗರದಲ್ಲಿ ಸ್ಟಿವನ್ ಲಾರೆನ್ಸ್ ಎಂಬ ೧೭ ವರ್ಷದ ಆಫ್ರೋ ಕ್ಯಾರೇಬಿಯಾನ್ ಹುಡಗನ ಕೊಲೆ ಆದಾಗ ಮೆಟ್ರೋಪಾಲಿಟನ್ ಪೊಲೀಸ್ ನಡೆಸಿದ ತನಿಖೆ ಸಹ   ಕ್ಯಾಪ್ಟನ್ ಅನ್ಸನ್ ಮಾಡಿದ  ರೀತಿ ಇತ್ತು ನಿಜವಾದ ಕೊಲೆಗಾರನ್ನು ಹಿಡಿಯುವ ಪ್ರಯತ್ನ ಗಂಭೀರವಾಗಿ ಮಾಡಲಿಲ್ಲ, ಎರಡು ಮೂರು ವರ್ಷದ ನಂತರ ಅಂದಿನ ಲೇಬರ್  ಸರ್ಕಾರ ನೇಮಿಸಿದ ಹೈಕೋರ್ಟ್ ನ್ಯಾಯಾಧಿಶ William Macpherson  ಇದರಬಗ್ಗೆ ವಿಚಾರಣೆ ನಡಿಸಿ, ಪೊಲೀಸ್ ಸಂಸ್ಥೆ “institutionally racist” ಅಂತ ದೂರಿದರು. ನಂತರ ಪೊಲೀಸ ಇಲಾಖೆ ತನಿಖೆ ಸರಿಯಾಗಿ ನಡಿಸಿದ  ಮೇಲೆ  ಕೊಲೆ ಮಾಡಿದ ಐದು ಜನರಲ್ಲಿ ಮೂರು ಜನ ಈಗ ಸೆರೆಯಲ್ಲಿ ಇದ್ದಾರೆ.  


ಎಡಾಲ್ಜಿ ಮನೆತನದವರು ಪಟ್ಟ ಪಾಡು ನಿಜ. ಆ  ಪ್ರಕರಣದ  ನಂತರ ಒಂದು ಕಾನೂನು ಬದಲಾವಣೆ ೧೯೦೭ ರಲ್ಲಿ ಆಯಿತು. ಮೊದಲನೇ ಬಾರಿಗೆ ಈ ದೇಶದಲ್ಲಿ Appeal Court ಸ್ಥಾಪನೆ ಮಾಡಿದರು.  


ಜಾರ್ಜ್ ಎಡಾಲ್ಜಿ ನಂತರ ಲಂಡನ್ನಲ್ಲಿ ವಕೀಲನಾಗಿ ಕೆಲಸಮಾಡಿ  ಕೊನೆ ದಿನಗಳು  Welwyn Garden City  ಊರಿನಲ್ಲಿ ಅವನ ತಂಗಿ ಎಲಿಝಬೆತ್ ಮನೆಯಲ್ಲಿ  ಕಳೆದು ಅವನ ೭೭ ವರ್ಷದಲ್ಲಿ (೧೯೫೩) ನಿಧನನಾದ . 


ರಾಮಮೂರ್ತಿ 

ಬೆಸಿಂಗ್ ಸ್ಟೋಕ್ 


Photos  Acknowledgement : Google Photos 


Comments

  1. Arthur and George ಎಂಬ TV mini series ಅನ್ನು ಆಸ್ಟ್ರೇಲಿಯಾದಲ್ಲೂ ಅನೇಕ ಬಾರಿ ಪ್ರಸಾರ ಮಾಡಿದ್ದಾರೆ. ಒಳ್ಳೆಯ ಸ್ವಾರಸ್ಯಕರವಾದ ಘಟನಾವಳಿ.

    ReplyDelete
  2. Thank you Ramamurthy. Very well written. Arthur and George was a good production as well.

    ReplyDelete
  3. ಈ ಲೇಖನ ಮತ್ತು ಹಿಂದಿನದ್ದೆರೆಡೂ ಬಹಳ ಸ್ವಾರಸ್ಯಕರವಾಗಿ ಬರೆದಿದ್ದೀರಿ. ಧನ್ಯವಾದಗಳು

    ReplyDelete
  4. Interesting article thanks for writing in Kannada and sharing

    ReplyDelete
  5. Interesting subject, looking forward to read more of such articles, thanks for sharing :)

    ReplyDelete

Post a Comment