ಲಕ್ಷ್ಮೀ ನರಸಿಂಹ ದೇವಾಲಯ , ಜಾವಗಲ್ - 3

  ಲಕ್ಷ್ಮೀ ನರಸಿಂಹ ದೇವಾಲಯ , ಜಾವಗಲ್ - 3

ಲೇಖಕರು: ಮೈಸೂರು ಶ್ರೀನಿವಾಸ ಪುಟ್ಟಿ


ಹಿಂದಿನ ಲೇಖನದಲ್ಲಿ ...........

ಹಾಸನ ಜಿಲ್ಲೆಯಲ್ಲಿರುವ ಜಾವಗಲ್, ಜಿಲ್ಲಾ ಕೇಂದ್ರ (ಹಾಸನ)ದಿಂದ ಬಾಣಾವರದ ಮಾರ್ಗದಲ್ಲಿ, ಸುಮಾರು 48 ಕಿ.ಮೀ. ದೂರದಲ್ಲಿದೆ. ಇಲ್ಲಿನ  ಹೊಯ್ಸಳ ತ್ರಿಕೂಟಾಚಲ ಅತ್ಯಂತ ಸುಂದರ ಶಿಲ್ಪಗಳನ್ನು ಹೊಂದಿದೆ. ಈ ತ್ರಿಕೂಟದ ದಕ್ಷಿಣ ಗರ್ಭಗುಡಿಯಲ್ಲಿ ವೇಣುಗೋಪಾಲ ನ ವಿಗ್ರಹವನ್ನೂ, ಪಶ್ಚಿಮದ ಗರ್ಭಗುಡಿಯಲ್ಲಿ ಅತ್ಯಂತ ಅಪರೂಪದ ಶ್ರೀಧರನ ವಿಗ್ರಹವನ್ನೂ,  ಮತ್ತು ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹನ ವಿಗ್ರಹವನ್ನೂ ಕಾಣಬಹುದು.

ಈ ದೇವಾಲಯದಲ್ಲಿ ಮೂರು ಅರ್ಚಾ ಮೂರ್ತಿಗಳಿದ್ದರೂ, ವಾಡಿಕೆಯಲ್ಲಿ ಲಕ್ಷ್ಮೀನರಸಿಂಹ ದೇವಾಲಯವೆಂದೇ  ಪ್ರಸಿದ್ಧವಾಗಿದೆ. ನಕ್ಷತ್ರಾಕಾರದ ಜಗತಿಯ ಮೇಲಿರುವ ಈ ತ್ರಿಕೂಟವು ಸರ್ವಾಲಂಕೃತವಾಗಿದ್ದು ಹೊಯ್ಸಳ ದೇವಾಲಯಗಳ ಎಲ್ಲ ವಿಭಾಗಗಳನ್ನೂ ಹೊಂದಿದೆ. 750 ವರ್ಷಗಳಿಗೂ ಹಿಂದೆ ನಿರ್ಮಾಣವಾದ ಈ ಸುಂದರವಾದ ದೇವಾಲಯವನ್ನು ಕೆಳಗೆ ತಿಳಿಸಿರುವಂತೆ ಏಳು ಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು  ಸೂಕ್ತ. 

ಭಾಗ - 3 ಮುಂದುವರೆದುದು.........

ದಕ್ಷಿಣ ಗರ್ಭಗುಡಿಯ ಪಶ್ಚಿಮ 

ದಕ್ಷಿಣ ಗರ್ಭಗುಡಿಯ ಪಶ್ಚಿಮ


೧೦೫,೧೦೬,೧೦೭. ದೇವಿಯರ ನಡುವೆ ಲಕ್ಷ್ಮೀ ನಾರಾಯನ, ೧೦೮,೧೦೯,೧೧೦. ದೇವಿಯರ ನಡುವೆ ನರಸಿಂಹ‌ (ಪ-ಗ-ಶಂ-ಚ),  ೧೧೧. ಅಷ್ಟಭುಜ ನೃತ್ಯ ವೈಷ್ಣವೀ (ಬಲಗಡೆಯ ಕೆಳಗಿನ ಕೈನಿಂದ ಪ್ರದಕ್ಷಿಣಾಕಾರವಾಗಿ ಅಕ್ಷಮಾಲ,ಲಂಬ ಹಸ್ತ, ಕತ್ತಿ,ಶಂಖ, ಸ್ವರ್ಗ ಹಸ್ತ,ಚಕ್ರ,ಗುರಾಣೆ ಮತ್ತು ಕಳಶ).   


ಉತ್ತರ ಗರ್ಭಗುಡಿಯ ಉತ್ತರ ಭಾಗ

ಉತ್ತರ ಗರ್ಭಗುಡಿಯ ಉತ್ತರ ಭಾಗ

೧೧೨. ಬೇತಾಳಗಳು ಮತ್ತು ನಾಯಿಯ ಪಕ್ಕದಲ್ಲಿ ಸ್ಥಾನಕ ಷಡ್ಭುಜ ಭೈರವಿ (ಕತ್ತಿ , ತ್ರಿಶೂಲ,ಬಾಣ, ಡಮರು,ಪಾತ್ರ), ೧೧೩. ನರ್ತಿಸುತ್ತಾ , ತಾಳಹಾಕುತ್ತಿರುವ ಸ್ತ್ರೀ, ೧೧೪,೧೧೫. ಅಚ್ಯುತ (ಪ-ಚ-ಶಂ-ಗ) ಬಲಗಡೆಯಲ್ಲಿ ದೇವಿ, ೧೧೬,೧೧೭,೧೧೮. ಲಕ್ಷ್ಮೀ ನಾರಾಯಣ - ಇಕ್ಕೆಲಗಳಲ್ಲಿ ದೇವಿಯರು,  ೧೧೯,೧೨೦,೧೨೧. ಜನಾರ್ದನ (ಚ-ಶಂ-ಗ-ಪ), ಇಕ್ಕೆಲಗಳಲ್ಲಿ ದೇವಿಯರು, ೧೨೨. ಯೋಗನರಸಿಂಹ      


 ಉತ್ತರ ಗರ್ಭಗುಡಿಯ ಪೂರ್ವ

 ಉತ್ತರ ಗರ್ಭಗುಡಿಯ ಪೂರ್ವ

                                       

೧೨೩. ವೇಣುಗೋಪಾಲ, ೧೨೪. ನಿಲುವಂಗಿ, ಕುಲಾವಿಗಳನ್ನು ತೊಟ್ಟು, ದಂಡ ಮತ್ತು ಪಾತ್ರ ಗಳನ್ನು ಹಿಡಿದಿರುವ ದಕ್ಷಿಣಾ ಮೂರ್ತಿ,   ೧೨೫,೧೨೬.  ದೇವಿಯೊಡನೆ ಉಪೇಂದ್ರ (ಗ-ಚ-ಪ-ಶ),   ೧೨೭,೧೨೮,೧೨೯. ದೇವಿಯರೊಡಣೆ ಲಕ್ಷ್ಮೀ ನಾರಾಯಣ,    ೧೩೦. ಪದ್ಮ ಮತ್ತು ಫಲವನ್ನು ಹಿಡಿದಿರುವ ಸ್ತ್ರೀ. 

ನವರಂಗದ ಈಶಾನ್ಯ (North- east of Navaranga)

ನವರಂಗದ ಈಶಾನ್ಯ

೧೩೧. ಸ್ಥಾನಕ ಲಕ್ಷ್ಮೀ (ಚಕ್ರ-ಶಂಖ-ಕಳಶ-ಪದ್ಮ), ೧೩೨,೧೩೩,೧೩೪. ದೇವಿಯರೊಡನೆ ಉಪೇಂದ್ರ ( ಗ-ಚ-ಪ-ಶಂ), ೧೩೫. ತಾಂಡವ ಗಣಪತಿ (ಶಿಲ್ಪಿ : ಚಿಕಮಲಿತಂಮ), ೧೩೬. ಆಸೀನ ಸರಸ್ವತೀ, ೧೩೭,೧೩೮.  ದೇವಿಯೊಡನೆ ಶ್ರೀಹರಿ (ಚ-ಪ-ಗ-ಶಂ), ೧೩೯,೧೪೦.  ಶ್ರೀ ಕೃಷ್ಣ (ಗ-ಪ-ಚ-ಶಂ) (ಮಂಟಪದೊಳಗೆ ಸೇರಿದೆ).     


೩ ಮೇಲ್ಚಾವಣಿ ಮತ್ತು ಕೈಪಿಡಿಗೋಡೆ (Eaves and Parapet) 

ಮೇಲ್ಚಾವಣಿ ಮತ್ತು ಕೈಪಿಡಿಗೋಡೆ

ಮೇಲ್ಚಾವಣಿ ಮತ್ತು ಕೈಪಿಡಿಗೋಡೆ


ಮೇಲ್ಚಾವಣಿಯ ಬೋದಿಗೆಗಳಲ್ಲಿ ಮಣಿಸರ ಮತ್ತು ಕೀರ್ತಿ ಮುಖಗಳನ್ನು ಕಾಣಬಹುದು. ಕೈಪಿಡಿ ಗೋಡೆಯು ಶಿಖರಗಳಿಂದ ಅಲಂಕೃತವಾಗಿದೆ 

೪. ಶಿಖರ 

ಶಿಖರ
ಶ್ರೀಧರನ ಗರ್ಭಗುಡಿಯ ಮೇಲೆ ಮೂರಂತಸ್ತಿನ ಶಿಖರವಿದೆ ಇದರ ಮುಂಭಾಗ (ಶುಕನಾಸಿಯ ಮೇಲೆ) ದಲ್ಲಿ ಕೀರ್ತಿ ಮುಖಗಳನ್ನು ಕೆತ್ತಲಾಗಿದೆ. ಇತರ ಮೂರು ಭಾಗಗಳಲ್ಲಿ ಉಪಗೋಪುರಗಳಿವೆ. 


೫. ಮುಖ ಮಂಟಪ

ಮುಖ ಮಂಟಪ



ಮುಖಮಂಟಪದಲ್ಲಿ ಕಲ್ಲಿನ ಜಗತಿ ಮತ್ತು ದುಂಡು ಕಂಬಗಳಿವೆ. ಮೇಲೆ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರನ್ನು ಚಿತ್ರಿಸಲಾಗಿದೆ. ಸುತ್ತಲೂ ಸಿಂಹಗಳ ತೊಲೆಗಳಿವೆ. ಮುಖಮಂಟಪದ ದ್ವಾರಪಾಲಕ ವಿಗ್ರಹಗಳು ಪಾಳೆಯಗಾರರ ಕಾಲದ್ದಾಗಿವೆ.

೬. ನವರಂಗ

ನವರಂಗದ ದ್ವಾರದಲ್ಲಿ ದ್ವಾರಪಾಲಕರು ಮತ್ತು ಮೇಲೆ ಕಾಳಿಂಗಮರ್ದನ ಇವೆ. ನವರಂಗದ ಒಳಗಿನ ಕಂಬಗಳು ದುಂಡಾಗಿವೆ.ಇಲ್ಲಿ ಒಂಬತ್ತು ಭುವನೇಶ್ವರಿಗಳಿದ್ದು ಅವುಗಳಲ್ಲಿ ವಿವಿಧ ಬಗೆಯ ರೇಖಾಚಿತ್ರಗಳಿವೆ. ಪೂರ್ವದ ದ್ವಾರದಿಂದ ಪ್ರಾರಂಭ ಮಾಡಿ, ಪ್ರದಕ್ಷಿಣಾಕಾರವಾಗಿ ಮುಂದುವರೆದಾಗ ಕಾಣುವ ಎರಡನೆಯ ಭುವನೇಶ್ವರಿಯ ಪದ್ಮದ ಕರ್ಣಿಕೆಯಲ್ಲಿ ಅಗ್ನಿ ಯ ವಿಗ್ರಹವಿದೆ.
ನವರಂಗದ ಪಶ್ಚಿಮ ಗೋಡೆಯಲ್ಲಿನ ಎರಡು ಗೂಡುಗಳಲ್ಲಿ ಗಣೇಶ ಮತ್ತು ಚಾಮುಂಡೇಶ್ವರಿಯ ವಿಗ್ರಹಗಳಿವೆ.

೭.ಗರ್ಭಗುಡಿಗಳು

ಈ ದೇವಾಲಯವು ತ್ರಿಕೂಟಾಚಲವಾದ್ದರಿಂದ ಮೂರು ಗರ್ಭಗುಡಿಯನ್ನು ಹೊಂದಿದೆ.ದಕ್ಷಿಣದ ಗರ್ಭಗುಡಿಯಲ್ಲಿ ಆರು‌ ಅಡಿ ಎತ್ತರದ ವೇಣುಗೋಪಾಲ ಮತ್ತು ಉತ್ತರದ ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಲಕ್ಷ್ಮೀ ನರಸಿಂಹರ ವಿಗ್ರಹಗಳಿವೆ. ಪೂರ್ವಾಭಿಮುಖವಾಗಿರುವ ಮುಖ್ಯ ಗರ್ಭಗುಡಿಗೆ ಹೊಂದಿಕೊಂಡಂತೆ ಶುಕನಾಸಿ ಇದೆ. ಶುಕನಾಸಿಯ ದ್ವಾರದಲ್ಲಿ ಜಾಲಂದ್ರ ಮತ್ತು ಮೇಲ್ಚಾವಣಿಯಲ್ಲಿ ಒಂಬತ್ತು ಪದ್ಯಗಳಿವೆ. ಗರ್ಭಗುಡಿಯ ದ್ವಾರದಲ್ಲಿ ದ್ವಾರಪಾಲಕರು ಮತ್ತು ಮೇಲೆ ಗಜಲಕ್ಷ್ಮಿ ಇದೆ. ಗರುಡ ಪೀಠದ ಮೇಲೆ ಶ್ರೀಧರ (ಚ-ಗ-ಶಂ-ಪ) ನ ಸ್ಥಾನಕ ವಿಗ್ರಹವಿದೆ. ಶ್ರೀದರ ಪ್ರಧಾನ ಮುಖ್ಯ ದೇವತೆಯಾಗಿರುವ ದೇವಾಲಯ ಬಹುಶಃ ಭಾರತದಲ್ಲಿ ಇದೊಂದೇ ಎಂದು ತೋರುತ್ತದೆ.


ಮಹಾದ್ವಾರ

ಮಹಾದ್ವಾರ

ದೇವಾಲಯದ ಮಹಾದ್ವಾರವು 18 ಅಡಿ ಎತ್ತರ ಹಾಗೂ 7 ಅಡಿ ಅಗಲವಿದೆ. ಇದು ವಿಜಯನಗರ ಕಾಲದ್ದು. ಈ ದ್ವಾರದ ಮೇಲಿನ ಗೋಪುರ ಈಗ ಮಾಯವಾಗಿದೆ. ಮಹಾದ್ವಾರದ ಮುಂದೆ ಬಳಪದಕಲ್ಲಿನ ಎರಡು ಆನೆಗಳನ್ನು ಕಾಣುತ್ತೇವೆ.

ದೇವಾಲಯದ ಕಾಲ
ಈ ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳು ದೊರೆತಿಲ್ಲವಾಗಿ ಇದು ಯಾವಾಗ ನಿರ್ಮಾಣವಾಯಿತೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ದೇವಾಲಯದ ಹೊರಗೋಡೆಯ ಬಹುತೇಕ ಶಿಲ್ಪಗಳು ಮಲ್ಲಿತಂಮನದಾಗಿದ್ದು ಅವನು ಹಾರನಹಳ್ಳಿ (೧೨೩೪) ನುಗ್ಗಿಹಳ್ಳಿ (೧೨೪೬) ಮತ್ತು ಸೋಮನಾಥಪುರ (೧೨೬೮) ಗಳಲ್ಲಿಯೂ ಶಿಲ್ಪಿಯಾಗಿ ಕಾರ್ಯನಿರ್ವಹಿಸಿರುವುದರಿಂದಲೂ ಮತ್ತು ಜಾವಗಲ್ಲಿನ ದೇವಾಲಯವು ಮೇಲೆ ಹೇಳಿರುವಲ್ಲಿನ ದೇವಾಲಯಗಳನ್ನು ಹೋಲುವುದರಿಂದಲೂ, ಈ ದೇವಾಲಯವು ಬಹುಶಃ ೧೨೫೦ ರಿಂದ ೧೨೬೦ ರ ಮಧ್ಯಭಾಗದಲ್ಲಿ ನಿರ್ಮಾಣವಾಗಿರಬಹುದೆಂದು ಊಹಿಸಲಾಗಿದೆ. 

ಗ್ರಂಥಋಣ
೧.    Mysore Archaeological Report
೨. ಡಾ. ಶ್ರೀಕಂಠ ಶಾಸ್ತ್ರಿ. ಹೊಯ್ಸಳ ವಾಸ್ತುಶಿಲ್ಪ. ಮೈಸೂರು ವಿಶ್ವವಿದ್ಯಾನಿಲಯ

Comments

  1. All three parts of this Javagal was very good with amazing photos. Your passion towards this art and sculptures is impressive sir

    ReplyDelete
  2. ಫೋಟೋಗಳೇ ಬಹಳ ಒಳ್ಳೆಯ ಸಂಗ್ರಹ. ತಮ್ಮ ವಿವರಣೆ ಸಹ ಅದಕ್ಕೆ ಪೂರಕವಾಗಿದೆ. ಜಾವಗಲ್ ದೇವಾಲಯ ಇಷ್ಟು ಚೆಂದವಿದೆ ಎಂದು ತಿಳಿದಿರಲಿಲ್ಲ. ಧನ್ಯವಾದಗಳು

    ReplyDelete

Post a Comment