ಮಾಸ್ತಿ ಅವರ ಸಣ್ಣ ಕಥೆಗಳು -1

 ಮಾಸ್ತಿ ಅವರ ಸಣ್ಣ ಕಥೆಗಳು -1

ಲೇಖನ  – ರಾಮಮೂರ್ತಿ,  ಬೇಸಿಂಗ್ ಸ್ಟೋಕ್


ಕಾಮನಹಬ್ಬದ ಒಂದು ಕಥೆ 

ಮಾಸ್ತಿಯವರ ಮೊದಲನೇ ಸಣ್ಣ ಕಥೆ,  ರಂಗನ ಮದುವೆ,  ಪ್ರಕಟವಾಗಿದ್ದು ೧೯೧೦ ರಲ್ಲಿ ಮತ್ತು ಕೊನೆಯ ಕಥೆ ಮಾತುಗಾರ ರಾಮಣ್ಣ ೧೯೮೩ ರಲ್ಲಿ , ಆದರೆ ಈ ಕಥೆ ಅವರು ತೀರಿದನಂತರ ಪ್ರಕಟವಾಯಿತು.  ೭೫ ವರ್ಷದ ಅವಧಿಯಲ್ಲಿ ನೂರು ಸಣ್ಣ ಕಥೆಗಳನ್ನು ಬರೆದಿದ್ದಲ್ಲದೆ ಅನೇಕ ಕಾದಂಬರಿಗಳನ್ನು  ಮತ್ತು ನಾಟಕ ಗಳನ್ನೂ ರಚಿಸಿದ್ದಾರೆ.  ಒಟ್ಟಿನಲ್ಲಿ ೧೨೩ ಪುಸ್ತಕಗಳು ಕನ್ನಡದಲ್ಲಿ ಮತ್ತು ೧೭ ಇಂಗ್ಲಿಷ್ನನಲ್ಲಿ  ಪ್ರಕವಾಗಿದೆ. ೧೯೮೩ ನಲ್ಲಿ ಅವರು ಬರೆದ ಚಿಕ್ಕವೀರ ರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಬಂತು. ಮಾಸ್ತಿ ನಮ್ಮ ಆಸ್ತಿ ಅನ್ನುವುದು ನಮ್ಮೆಲ್ಲರ ಹೆಮ್ಮೆ . 

ಬೆಂಗಳೂರಿನ ಜೀವನ ಕಾರ್ಯಾಲದವರು ಈ ನೂರು ಸಣ್ಣ ಕಥೆಗಳನ್ನು ಐದು ಸಂಪುಟದಲ್ಲಿ ಸಂಕಲನ ಮಾಡಿ ಪ್ರಕಟಿಸಿದ್ದಾರೆ.  

ಇಲ್ಲಿ ಅವರ ಎರಡು  ಸಣ್ಣ ಕಥೆಗಳ ಕಿರಿ ಪರಿಚಯ ಮಾಡಿಸಿಕೊಡುವುದು ನನ್ನ ಉದ್ದೇಶ. 

ಕಾಮನಹಬ್ಬದ ಒಂದು ಕಥೆ 

ಈ ಕಥೆ ೧೯೩೦ ರಲ್ಲಿ ಪ್ರಕಟವಾಯಿತು . ಅವರ ಹಳ್ಳಿಯಲ್ಲಿ ನಡೆಯುತ್ತಿದ್ದ ಕಾಮನಹಬ್ಬದ ಒಂದು ಪ್ರಸಂಗ.

ಕಾಮನಹಬ್ಬ ಬಂದರೆ ನಮ್ಮೂರ  ಸಾವಿತ್ರಮ್ಮನವರ ಕಥೆ ಜ್ಞಾಪಕಕ್ಕೆ ಬರುತ್ತೆ. ಆ ದಿನ ಮನೆ ಮನೆಗಳಿಗೆ ಹೋಗಿ ಬಾಯಿ ಬಡಿದುಕೊಂಡು ಸೌದೆ ವಸೂಲಿ ಮಾಡುವುದು, ಹಳೆ ಮೊರ , ಮಕ್ಕರಿ,  ಚಾಪೆ ಪರಕೆ ಇತ್ಯಾದಿ ಸಾಮಾನುಗಳನ್ನು ತಂದು ರಾಶಿ ಹಾಕುವುದು , ರಾತ್ರಿ ಅದಕ್ಕೆ ಬೆಂಕಿ ಹಚ್ಚಿ ಬಾಯಿ ಬಡಿದುಕೊಳ್ಳುವುದು, ಮಾರನೇ ದಿನ ವ್ರತ ಮಾಡುತ್ತಿದ್ದ ಸಾವಿತ್ರಮ್ಮನವರ  ಮೇಲೆ ಬೂದಿ ಎರಚಿ ಅವರ ಮುಂದೆ ಬಾಯಿ ಬಡಿದುಕೊಂಡು ಅವರ ಕೊಟ್ಟ ಚರಪನ್ನು ತಿಂದು ಮನೆಗೆ ಹೋಗುವುದು.   ನಮ್ಮ ಹಳ್ಳಿಯ ಒಂದು ಪದ್ದತಿ, ವಿಧವೆಯರ ಮೇಲೆ ಬೂದಿ ಎರಚಿ  ಅವರ ಮುಂದೆ ಬಾಯಿ ಬಡಿಕೊಳ್ಳುವುದು, ಕಾರಣ, ಈಕೆಗೆ  ಮುಂದಿನ ಜನ್ಮದಲ್ಲಿ   ಸುಮಂಗಲಿಯ ಸಾವು  ಬರಲಿ ಅಂತ .  ಇಂಥವರಲ್ಲಿ ಸಾವಿತ್ರಮ್ಮ ಒಬ್ಬರು. ಇವರು ಅವರ ತಂದೆ ತಾಯಿಗೆ ಒಬ್ಬಳೇ ಮಗಳು, ಮನೆಯಲ್ಲಿ ಕಡು  ಬಡತನ, ಚಿಕ್ಕ ವಯಸಿನಲ್ಲೇ  ಅದೇ ಊರಿನ ಅವರ ಒಬ್ಬ ಸಮಂಧಿಕರ  ಮನೆ ಹುಡುಗನಿಗೆ ಕೊಟ್ಟು ಮದುವೆ  ಮಾಡಿದರು. ಇವರ ಗಂಡ  ಶ್ರೀನಿವಾಸ ಶಾಸ್ತ್ರಿ, ಆದರೆ ಇವನು ಎಲ್ಲರಿಗೂ ಶೀನಿ, ಹಳ್ಳಿಯಲ್ಲೇ ಬೆಳೆದವನು, ಓದು ಬರಹ ಜಾಸ್ತಿ ಇರಲಿಲ್ಲ , ಪುಂಡನೂ ಹೌದು ಆದರೆ ಯಾರಿಗೂ ಹಾನಿ ಮಾಡದವನಲ್ಲ. ಹಳ್ಳಿಯಲ್ಲಿ ಬಿಟ್ಟಿದ್ದ ದಾಳಿಂಬರಿ , ಸೀಬೆ ಅಥವಾ ಮಾವಿನಹಣ್ಣು ಶೀನಿಗೇ  ಮೊದಲನೆಯ ಪಾಲು, ದೇವಸ್ಥಾನದಲ್ಲಿ ಉತ್ಸವ ನಡೆದಾಗ ಗಂಟೆ ಬಾರಿಸುವುದು ಮತ್ತು ಓಡಾಡುವುದು ಇವನ ಕೆಲಸ. ಯಾರೂ ಇವನನ್ನು  ಈ ಕೆಲಸಗಳಿಗೆ ನೇಮಿಸರಲಿಲ್ಲ. ಎಲ್ಲೇ ಜಗಳ ನಡೆಯುತ್ತಿದ್ದರೆ ಶೀನಿ ಅಲ್ಲಿರಬೇಕು. ಒಂದು  ಜಗಳದಲ್ಲಿ ಇವನು ಬಾಯಿ ಹಾಕಿ ಮಚ್ಚಿನಿಂದ ಏಟು ಬಿದ್ದು ಹುಬ್ಬಿನ ಹತ್ತಿರ  ಒಂದು ಗಾಯವಾಗಿತ್ತು. ಮದುವೆ  ಆದಮೇಲೆ ಈ ಪುಂಡತನ ಬಿಡುತ್ತಾನೆ ಅಂತ ಇವನ ತಂದೆ ನರಸಿಂಹ ಶಾಸ್ತ್ರಿ ಗಳು ನಂಬಿದ್ದರು ಆದರೆ ಇವನಲ್ಲಿ ಏನೂ  ಬದಲಾವಣೆ ಕಾಣಿಸಲಿಲ್ಲ. 



ಮಾದುವೆ  ಆದ ಎರಡು ವರ್ಷಕ್ಕೆ ಯಾವುದೊ ಜ್ವರ ಬಂದು ಸಾವಿತ್ರಮ್ಮನವರ ತಂದೆ ತಾಯಿ ಇಬ್ಬರು ತೀರಿಕೊಂಡರು,  ಹತ್ತು ಅಥವಾ ಹನ್ನೊಂದು ವರ್ಷದ  ಸಾವಿತ್ರಮ್ಮ ಮಾವನ ಮನೆಗೆ ಬಂದು ಸೇರಿಕೊಂಡಳು, ಶೀನಿಗೆ  ಸುಮಾರು ಹದಿನೈದು.  ಹೀಗಿರುವಾಗ    ಶಿವಗಂಗೆ ಸ್ವಾಮಿಗಳು ಪಕ್ಕದ ಊರಿಗೆ ಬಂದ ಸುದ್ದಿ ನರಸಿಂಹ ಶಾಸ್ತ್ರಿಗಳಿಗೆ   ಬಂತು , ಸಂಸಾರದ ಸಮೇತ ಅವರ ದರ್ಶನ ಪಡೆಯುದಕ್ಕೆ ಅಲ್ಲಿಗೆ ಹೊರಟರು, ಶೀನಿ ಮಠದ ಗುಂಪಿನವರ ಜೊತೆ ಸೇರಿ ಸ್ವಾಮಿಗಳ ಶುಶ್ರೂಷೆ ಮಾಡಿದ ಮೂರು ದಿನಗಳಾದಮೇಲೆ ಸ್ವಾಮಿಗಳು ಮುಂದಿನ ಊರಿಗೆ ಹೊರಟಾಗ ಶೀನಿ ತಾನೂ ಅವರ ಜೊತೆ ಸ್ವಲ್ಪ ದಿನ ಇರುತ್ತೇನೆ ಅಂತ ಹೋದ, ಅಪ್ಪ ಅಮ್ಮ ಬೇಡ ಅಂದರೂ  ಕೇಳಲಿಲ್ಲ.  ಸಾವಿತ್ರಮ್ಮ  ಎಲ್ಲರೊಂದಿಗೆ  ಊರಿಗೆ ಬಂದಳು. ವಾರ ಆಯಿತು, ಒಂದು ತಿಂಗಳಾಯಿತು ನಾಲ್ಕು ತಿಂಗಳಾಯಿತು ಶೀನಿಯ ಸುಳುವೇ   ಇಲ್ಲ. ಸಾವಿತ್ರಮ್ಮ ಗೌರಿ ಪೂಜೆ ಮಾಡಿಕೊಂಡು ಮನಸಿನಲ್ಲೇ ಗಂಡನ ಯೋಚನೆ ಮಾಡಿ ಕೊರಗುತ್ತಿದ್ದಳು .  ವರ್ಷದ ನಂತರ ಮನೆಯವರಿಗೆ  ತುಂಬಾ ಆತಂಕ ಆಯಿತು.  ಶೀನಿ  ಹಿರಿಯಣ್ಣ   ಅಲ್ಲಿ ಇಲ್ಲಿ ವಿಚಾರಿಸಿ ಸ್ವಾಮಿಗಳು ಕಾಶಿಯಲ್ಲಿ ಇರುವರೆಗೆ ಅವರ ಜೊತೆಯಲ್ಲೇ ಇದ್ದು ನಂತರ ಇನ್ನಿಬ್ಬರ ಜೊತೆಯಲ್ಲಿ ಬದರಿಕಾಶ್ರಮಕ್ಕೆ  ಹೋದ ಅನ್ನುವ ವಿಷಯ  ತಿಳಿದು ಬಂತು. ಹಲಾವಾರು  ತಿಂಗಳು ಕಳೆಯಿತು, ಮನೆಯವರು ಇವನ ಆಸೆಯನ್ನು ಬಿಟ್ಟರು, ಸಾವಿತ್ರಮ್ಮ ಚಿಂತೆಯಿಂದ  ದಿನಗಳನ್ನು ಕಳೆದಳು .  ನಾಲ್ಕು ವರ್ಷಗಳಾಯಿತು ಶೀನಿ  ಸುದ್ದಿ ಇಲ್ಲ. ಹೀಗೆ ಇನ್ನೂ  ಕೆಲವು ವರ್ಷಗಳು ಕಳೆದವು. ಮನೆ ಯಜಮಾನರು ನರಸಿಂಹ ಶಾಸ್ತ್ರಿ ಗಳು ತೀರಿಕೊಂಡರು, ಮಿಕ್ಕಿದ ಸೊಸೆಯರಿಗೂ ಮತ್ತು ಅತ್ತೆಗೂ  ಮನಸ್ತಾಪ ಬಂದು ಇದ್ದಿದ್ದ ಆಸ್ತಿಯನ್ನು ಹಂಚಿಕೊಳ್ಳುವ ಮಾತು ಕಥೆ ಆಯಿತು. ಶೀನಿ  ಮುಕ್ಕಾಲು ಪಾಲು ಬದುಕಿಲ್ಲ ಆದರಿಂದ ಸಾವಿತ್ರಮ್ಮನಿಗೆ ಒಂದು  ಪಾಲು ಕೊಡಬೇಕು ಅಂತ ತೀರ್ಮಾನ ಮಾಡಿದರು . ಈ ವಿಚಾರ ಕೇಳಿ ಸಾವಿತ್ರಮ್ಮನಿಗೆ ಹೊಟ್ಟೆಯಲ್ಲಿ ಬೆಂಕಿಹಾಕಿದಾಗಿತ್ತು. ತನ್ನ ಗಂಡ ನಿಜವಾಗಲೂ ತೀರಿದ್ದಾನ ಅಂತ  ನಂಬುವುದು ಕಷ್ಟವಾಯಿತು. ಆಗ ಇವರಿ ಗೆ ಸುಮಾರು ಇಪ್ಪತೈದು ವರ್ಷ. 

ಹಿರಿಯಣ್ಣ ಎಲ್ಲಿಗೋ ಹೋಗಿದ್ದಾಗ ಬದರಿಕಾಶ್ರಮ ಹೋಗಿದ್ದವರು ವಾಪಸ್ಸು ಬಂದಿದ್ದಾರೆ ಆದರೆ ಶೀನಿ ಅವರ ಜೊತೆಯಲ್ಲಿ ಬರದೇ ಕಲಕತ್ತಾ ಗೆ ಹೋಗಿ ಅಲ್ಲಿ ಒಂದು ಖಾಯಲೆಯಿಂದ ತೀರಿಕೊಂಡ ಅಂತ ಸುದ್ದಿ ತಂದ, ತಾನು ಹೆದರಿದ್ದ ಹಾಗೆ ಗಂಡ  ತೀರಿಕೊಂಡ ಇನ್ನು ಮುತ್ತೈದೆ ಹಾಗೆ ಇರುವುದು ಸರಿಯಲ್ಲ ಅಂತ ನಿರ್ಧಾರ ಮಾಡಿ ಕೂದಲು ತೆಗಿಸಿ ಕೆಂಪು ಬಣ್ಣದ ಸೀರೆ ಉಡುವ ನಿರ್ಧಾರಕ್ಕೆ ಬಂದಳು. ಮನೆಯವರು ಬೇಡ ಅಂದರೂ  ಕೇಳಲಿಲ್ಲ. ನಾನು ಕೂದಲಿಟ್ಟುಗೊಂಡು ಅವರೇಕೆ ನರಕ ಕಾಣಬೇಕೆಂದಳು. ಮುಂದಿನ ಜನ್ಮದಲ್ಲಾದರೂ  ಗಂಡನ ಜೊತೆ ಸಂಸಾರ ಮಾಡುವ ಭಾಗ್ಯ ಸಿಗಲಿ ಅಂತ ಒಂದು ವ್ರತವನ್ಳು ಪ್ರಾರಂಭಿಸಿದಳು , ಇದೇ  ಕಾಮನ ಬೂದಿ ಎರಚಿಸಿಕೊಳ್ಳುವುದು. 

ಆ ವರ್ಷ ನಾನು ಲೋಯರ್ ಸೆಕೆಂಡರಿ ಪರೀಕ್ಷೆ ಕಟ್ಟಿ ರಜಕ್ಕೆ ಮನೆಗೆ ಬಂದಿದ್ದೆ. ಇನ್ನು ಮುಂದೆ  ಹೈಸ್ಕೂಲ್ ಸೇರಿದ ಮೇಲೆ ಪ್ರತಿ ವರ್ಷ ಕಾಮನ ಹಬ್ಬಕ್ಕೆ ಊರಿಗೆ ಬರುವುದು ಖಾತರಿ ಇರಲಿಲ್ಲ , ಇದೇ  ಕೊನೆಯದು ಇರಬಹುದು ಅನ್ನುವ ಭಾವನೆ ಇತ್ತು .  ಹಬ್ಬದ ಮಾರನೆ  ದಿನ ಸಾವಿತ್ರಮ್ಮನವರ ಮೇಲೆ ಬೂದಿ ಎರಚುವ ಸಿದ್ಧತೆ ನಡೆದಿತ್ತು. ಸಾವಿತ್ರಮ್ಮ ಸ್ನಾನ ಮಾಡಿ  ಅವರ ವ್ರತಕ್ಕೆ ಕಾಮನ ಸುಟ್ಟ  ಜಾಗಕ್ಕೆ ಬರುತ್ತಿದ್ದರು . ರಸ್ತೆಯಲ್ಲಿ ಸುಮಾರು ಹೋಗಿ ಬರುವರು ಇದ್ದರು ಮತ್ತು ಸ್ವಲ್ಪ ಜನರೂ ಸೇರಿದ್ದರು . ನಾವು ಮೂರು ಹುಡುಗರು ವಾಡಿಕೆಯಂತೆ ಒಂದು ಹಿಡಿ ಬೂದಿ ಯನ್ನು ಹಿಡದು ಬಂದವಿ. ಇನ್ನೇನು ಹಾಕಬೇಕು, ಸಾವಿತ್ರಮ್ಮ ಎದ್ದು ನಿಂತು ಜನಗಳು ಸೇರಿದ್ದ ಕಡೆ ದುರ ದುರ ನೋಡಿ ಶೀನಿ  ಅಂತ ಕೂಗಿ ಕೆಳಗೆ ಬಿದ್ದರು. ನಾವು ಬೂದಿಯನ್ನು ಹಿಡಿದೇ ನಿಂತಿದ್ದವಿ. ಆಗ ಒಬ್ಬ ಮುಂದೆ ಬಂದು, ಇದೇನು ವೇಷ, ಇದೇನು ಅವಸ್ಥೆ, ಸ್ವಲ್ಪ ನೀರು ತನ್ನಿ ಅಂದ, ಅವನು ಹೇಳಿದಾಗೆ ಮಾಡದಿವಿ, ಅವನು ಗುರ್ತು ಯಾರಿಗೂ ಸಿಗಲಿಲ್ಲ , ಮಖದ  ಮೇಲೆ ಒಂದು ಗಾಯ ಇತ್ತು.  ಇವನು ರಸ್ತೆಯಲ್ಲಿ ಬರುತಿದ್ದಾಗ ಕೆಲವು ಜನರು ಸೇರಿದ್ದನ್ನು ನೋಡಿ ಅವನು ನಿಂತು ಇಲ್ಲೇನಾಗುತ್ತಿದೆ ಅಂತ ವಿಚಾರಿಸಿದನಂತೆ . ಒಬ್ಬರು ಸಾವಿತ್ರಮ್ಮನ ವ್ರತವನ್ನು ಹೇಳಿದರು, ಈಕೆ ಯಾರು ಅಂತ ಕೇಳಿದಾಗ ಇವರು ನರಸಿಂಹ ಶಾಸ್ತ್ರಿಗಳ ಸೊಸೆ ಅವರ ಗಂಡ ಎಲ್ಲೊ ತೀರಿಹೋದನಂತೆ ಅಂತ ತಿಳಿಯಿತು.  ಈತ ಹತ್ತಿರ ಬಂದು ಸಾವಿತ್ರಮ್ಮನ  ಮೇಲೆ ನೀರು ಚುಮಕಿಸಿ ಸಾತು  ಅಂತ ಕೂಗಿದ,  ಸಾವಿತ್ರಮ್ಮನಿಗೂ ಜ್ಞಾನ ಬಂತು ಸರಿಯಾಗಿ ಮುಖ ನೋಡಿ ಶೀನು ಅಂತ ಹೇಳಿ ಅತ್ತರು. ಅಲ್ಲಿದ್ದ ಹಿರಿಯರು ಒಬ್ಬರು ಇದು ನೋಡಿ ಆಶ್ಚರ್ಯ ಪಟ್ಟು  ಈತನೇ ಶ್ರೀನಿವಾಸ ಶಾಸ್ತ್ರಿ ಅಥವ  ಶೀನಿ, ಸಾವಿತ್ರಮ್ಮನ ಗಂಡ  ಅಂದರು ಅವನು ತೀರಿದ ಅಂತ ಸುದ್ದಿ ಇತ್ತು ಆದರೆ ಇದು ನೋಡಿ ಸಾವಿತ್ರಮ್ಮನ ಪುಣ್ಯ ಅಂದರು.  

ಈ  ಸಲದ ಹಬ್ಬ ಎಂದಿಗಿಂತ ಹೆಚ್ಚಾಗಿ ಸಂಗವಾಯಿತೆಂದು ನಾವೆಲ್ಲ ಸಂತೋಷದಿಂದ ಕುಣಿದವಿ ಹಿಡದಿದ್ದ ಬೂದಿಯನ್ನು ವಾಪಸ್ಸು ಕಾಮನ ಸುಟ್ಟ ಜಾಗಕ್ಕೆ ಹಾಕಿದಿವಿ;

ಊರಿನಲ್ಲಿ  ಈ ಸುದ್ದಿ ಹರಡಿ ನಿಜವಾಗಿಯೂ ಇವನೇ ಶೀನಿನ ಅಂತ ಕೆಲವರು ಸಂಶಯ ಪಟ್ಟರಂತೆ, ಆದರೆ ಸಾವಿತ್ರಮ್ಮನವರಿಗೆ ಇದರಲ್ಲಿ ಏನೂ ಸಂಶಯ ಇರಲಿಲ್ಲ. 

ಶ್ರೀನಿವಾಸ  ಶಾಸ್ತ್ರೀ ಈಗ ಸಂಸಾರಸ್ಥ ಎರಡು ಮಕ್ಕಳಿದ್ದಾರೆ. ಮುಂದಿನ ವರ್ಷ ರಜಕ್ಕೆ ಊರಿಗೆ ಹೋದಾಗ ಶೀನಿ  ತನ್ನ ಪ್ರವಾಸದ ಬಗ್ಗೆ ಹೇಳಿದ.  ಬದರಿಕಾಶ್ರಮದಿಂದ  ಕಲಕತ್ತಾ ಹೋದಾಗ  ಅಲ್ಲಿ ಒಂದು ಛತ್ರದಲ್ಲಿ ತಂಗಿದ್ದಾಗ  ಪ್ಲೇಗ್ನನಿಂದ ಬದುಕುವುದು ಕಷ್ಟವಾಗಿತ್ತು .  ಜೊತೆಯಲ್ಲಿ ಇದ್ದವರು ಹೆದರಿಕೊಂಡು ಇವನನ್ನು ಮುನಿಸಿಪಾಲಿಟಿ ಯವರಿಗೆ ಒಪ್ಪಿಸಿ  ತೀರದ ಮೇಲೆ  ಅಂತ್ಯ ಕರ್ಮಗಳನ್ನು ಮಾಡಿ ಅಂದು ಅವರವರ  ಊರಿಗೆ ಹಿಂತಿರಿಗಿದರಂತೆ  , ಶೀನಿ  ಕೆಲವು ತಿಂಗಳಲ್ಲಿ ಅರೋಗ್ಯ ಸುಧಾರಿಸಿಕೊಂಡ  

ಮೇಲೆ ಉತ್ತರ ಭಾರತದೆಲ್ಲ ಸುತ್ತಾಡಿ ಯೋಗಾಭ್ಯಾಸ ಮಾಡಿ ಕಲವು  ವರ್ಷಗಳನ್ನು ಕಳೆದು ಕೊನೆಗೆ ಊರಿನ ಕಡೆ ಹೊರಟು  ಬಂದ .

ಈಗ ಸಾವಿತ್ರಮ್ಮ ನಮ್ಮ ಊರಿನ ಹಿರಿಯ ಮುತೈದೆ,  ತಾಯಂದರು  ಹೆಣ್ಣು ಮಕ್ಕಳ ಕೈಯಲ್ಲಿ ಗೌರಿ ಹಬ್ಬದ ಬಾಗಿನ ಕೊಡಿಸುವಾಗ ಮೊದಲು ಸಾವಿತ್ರಮ್ಮ ನವರ ಆಶೀರ್ವಾದ ಪಡೆಯುತ್ತಾ ನಮ್ಮ ಮಕ್ಕಳನ್ನು ಹರಿಸಿ ಎನ್ನುತ್ತಾರೆ.


Comments

  1. ಮಾಸ್ತಿ ಅವರು ನಿಸ್ಸೀಮ ಕತೆಗಾರರು ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಕತೆಗಳನ್ನು ಎಷ್ಟು ಓದಿದರೂ ಮತ್ತೆ ಓದಬೇಕು ಎಂದು ಅನಿಸುತ್ತದೆ. "ಕಾಮನ ಹಬ್ಬದ ಒಂದು ಕತೆ", "ನಮ್ಮ ಮೇಸ್ಟರು", "ವೆಂಕಟಶಾಮಿಯ ಪ್ರಣಯ" ಇಂಥ ಕತೆಗಳನ್ನು ಓದಿದಾಗಲಂತೂ, ಈ ಬಗೆಯ ಒಂದೇ ಒಂದು ಕತೆಯನ್ನು ಬರೆದರೂ ಸಾರ್ಥಕ ಎನಿಸುವುದು. ಶ್ರೀನಿವಾಸ ರ ಒಂದು ಕತೆಯ ಮರು ಪರಿಚಯ ಮಾಡಿಕೊಟ್ಟಿದ್ದಕ್ಕೆ ರಾಮಮೂರ್ತಿ ಅವರಿಗೆ ಧನ್ಯವಾದಗಳು

    ReplyDelete
  2. Thanks for giving the readers the gems of kannada literature. Maasthi`s short stories really nice. awaiting for next one.

    ReplyDelete

Post a Comment