ಲಕ್ಷ್ಮೀ ನರಸಿಂಹ ದೇವಾಲಯ , ಜಾವಗಲ್ -1

ಲಕ್ಷ್ಮೀ ನರಸಿಂಹ ದೇವಾಲಯ , ಜಾವಗಲ್ 

ಲೇಖಕರು: ಮೈಸೂರು ಶ್ರೀನಿವಾಸ ಪುಟ್ಟಿ 

ಹಾಸನ ಜಿಲ್ಲೆಯಲ್ಲಿರುವ ಜಾವಗಲ್, ಜಿಲ್ಲಾ ಕೇಂದ್ರ (ಹಾಸನ)ದಿಂದ ಬಾಣಾವರದ ಮಾರ್ಗದಲ್ಲಿ, ಸುಮಾರು 48 ಕಿ.ಮೀ. ದೂರದಲ್ಲಿದೆ. ಇಲ್ಲಿನ  ಹೊಯ್ಸಳ ತ್ರಿಕೂಟಾಚಲ ಅತ್ಯಂತ ಸುಂದರ ಶಿಲ್ಪಗಳನ್ನು ಹೊಂದಿದೆ. ಈ ತ್ರಿಕೂಟದ ದಕ್ಷಿಣ ಗರ್ಭಗುಡಿಯಲ್ಲಿ ವೇಣುಗೋಪಾಲ ನ ವಿಗ್ರಹವನ್ನೂ, ಪಶ್ಚಿಮದ ಗರ್ಭಗುಡಿಯಲ್ಲಿ ಅತ್ಯಂತ ಅಪರೂಪದ ಶ್ರೀಧರನ ವಿಗ್ರಹವನ್ನೂ,  ಮತ್ತು ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನರಸಿಂಹನ ವಿಗ್ರಹವನ್ನೂ ಕಾಣಬಹುದು.

ಈ ದೇವಾಲಯದಲ್ಲಿ ಮೂರು ಅರ್ಚಾ ಮೂರ್ತಿಗಳಿದ್ದರೂ, ವಾಡಿಕೆಯಲ್ಲಿ ಲಕ್ಷ್ಮೀನರಸಿಂಹ ದೇವಾಲಯವೆಂದೇ  ಪ್ರಸಿದ್ಧವಾಗಿದೆ. ನಕ್ಷತ್ರಾಕಾರದ ಜಗತಿಯ ಮೇಲಿರುವ ಈ ತ್ರಿಕೂಟವು ಸರ್ವಾಲಂಕೃತವಾಗಿದ್ದು ಹೊಯ್ಸಳ ದೇವಾಲಯಗಳ ಎಲ್ಲ ವಿಭಾಗಗಳನ್ನೂ ಹೊಂದಿದೆ. 750 ವರ್ಷಗಳಿಗೂ ಹಿಂದೆ ನಿರ್ಮಾಣವಾದ ಈ ಸುಂದರವಾದ ದೇವಾಲಯವನ್ನು ಕೆಳಗೆ ತಿಳಿಸಿರುವಂತೆ ಏಳು ಭಾಗಗಳಾಗಿ ವಿಂಗಡಿಸಿಕೊಂಡು ನೋಡುವುದು  ಸೂಕ್ತ. 

೧.ಜಗತಿ ಮತ್ತು ಅಧಿಷ್ಠಾನ;

೨.ಹೊರಭಿತ್ತಿಯ ವಿಗ್ರಹಗಳು; 

೩.ಮೇಲ್ಚಾವಣಿ ಮತ್ತು ಕೈಪಿಡಿ ಗೋಡೆ;

೪ ಶಿಖರ (ಶ್ರೀಧರನ ಸನ್ನಿಧಿಯ ಮೇಲಿದೆ); 

೫. ಮುಖ ಮಂಟಪ; 

೬ ನವರಂಗ; ಮತ್ತು

೭ ಗರ್ಭಗುಡಿಗಳು.


೧.ಜಗತಿ ಮತ್ತು ಅಧಿಷ್ಠಾನ


ತ್ರಿಕೂಟಕ್ಕೆ  ಆಸರೆಯಾಗಿರುವ ಜಗತಿಯು ಐದು ಸಾಲುಗಳನ್ನು ಹೊಂದಿದೆ. ಜಗತಿಯು  ದೇವಾಲಯದ ಹಿಂಚಾಚು, ಮುಂಚಾಚುಗಳನ್ನು ಅನುಸರಿಸಿರುವುದರಿಂದ, ನಕ್ಷತ್ರಾಕಾರವನ್ನು ಪಡೆದಿದೆ. ಈ ಜಗತಿಯು ದೇವಾಲಯವನ್ನು ಸಂಪೂರ್ಣವಾಗಿ ಬಳಸಿದ್ದು, ದೇವಾಲಯದ ಪ್ರದಕ್ಷಿಣ ಪಥವೂ ಆಗಿದೆ.

ಈ ದೇವಾಲಯದ ಅಧಿಷ್ಠಾನವು ಆರು ಪಟ್ಟಿಕೆಗಳನ್ನು ಹೊಂದಿದ್ದು ಅವುಗಳಲ್ಲಿ ಕ್ರಮವಾಗಿ (ಕೆಳಗಿನಿಂದ ಮೇಲಕ್ಕೆ) ಕೆಳಗೆ ತಿಳಿಸಿರುವಂತೆ  ಉಬ್ಬು ಶಿಲ್ಪಗಳನ್ನು ಕಾಣಬಹುದು: 

೧.  ಆನೆಗಳು, 

೨.  ಅಶ್ವದಳ (ಅಲ್ಲೊಂದು - ಇಲ್ಲೊಂದು ಒಂಟೆ), 

೩.  ಲತೆಗಳು, 

೪.  ಪೌರಾಣಿಕ ಶಿಲ್ಪಗಳು, 

೫.  ಮಕರ-ಸಿಂಹಗಳು ಮತ್ತು 

೬.   ಹಂಸಗಳು.


ಅಧಿಷ್ಠಾನದಲ್ಲಿನ ಪೌರಾಣಿಕ ಪಟ್ಟಿಕೆಯು, ಬಹಳ ವಿಶಿಷ್ಟವಾಗಿದ್ದು ಇಡೀ ದೇವಾಲಯವನ್ನು ಸುತ್ತುವರೆದಿದೆ. ಆಗ್ನೇಯ (south-east) ದಿಕ್ಕಿನಿಂದ ಪ್ರಾರಂಭಮಾಡಿ, ಪ್ರದಕ್ಷಿಣಾಕಾರವಾಗಿ ಮುಂದುವರೆದರೆ ಕಾಣಬರುವ ಶಿಲ್ಪಗಳು ಇಂತಿವೆ: 

೧. ಯುದ್ಧರಥಗಳು

೨. ಮೆರವಣಿಗೆಯಲ್ಲಿ ಅಷ್ಟ ದಿಕ್ಪಾಲಕರು 

೩. ಸಮುದ್ರ ಮಥನ



೪. ದೇವತೆಗಳಿಂದ ಅಮೃತ ಪಾನ

೫. ಶಿವನಿಂದ ತ್ರಿಪುರ (ಮೂರು ನಗರಗಳ) ಸಂಹಾರ; 



೬. ಗಜಾಸುರ ಸಂಹಾರ.

 

ರಾಮಾಯಣಕ್ಕೆ ಸಂಬಂಧಿಸಿದ ಶಿಲ್ಪಗಳು:

 

. ವಿಶ್ವಾಮಿತ್ರರೊಂದಿಗೆ ರಾಮ, ಲಕ್ಷ್ಮಣರು

. ವಿಶ್ವಾಮಿತ್ರರ ಯಜ್ಞ

. ಮಾರೀಚ ಮತ್ತು ಇತರರನ್ನು ರಾಮನು ಓಡಿಸುತ್ತಿರುವುದು

೧೦. ಅಹಲ್ಯೆಯ ಶಾಪ ವಿಮೋಚನೆ

೧೧. ಶಿವಧನುರ್ಭಂಗ ಮತ್ತು ಸೀತಾ ಕಲ್ಯಾಣ

೧೨. ರಾಮನಿಂದ ಪರಶುರಾಮನ ಸೋಲು

೧೩. ಸೀತೆಯನ್ನು ಹಿಂಸಿಸಿದ ವಿರಾಧನ ಹತ್ಯೆ- ಶ್ರೀ ರಾಮನಿಂದ

೧೪. ಲಕ್ಷ್ಮಣನಿಂದ ಶೂರ್ಪನಖಿಯ ನಾಸಿಕಾಛೇದ.

೧೫. ರಾಮನಿಂದ ಕಬಂಧವಧೆ

೧೬. ರಾವಣನಿಂದ ಸೀತಾಪಹರಣ

೧೭. ರಾವಣ-ಜಟಾಯು.

 

೧೮.ರಾಮ- ಸುಗ್ರೀವರ ಭೇಟಿ

೧೯.ರಾಮನ ಬಾಣ ಏಳು ತಾಳೆ ಮರಗಳನ್ನು ಭೇದಿಸುತ್ತಿರುವುದು



೨೦. ವಾಲಿ ಸಂಹಾರ

೨೧. ಸುಗ್ರೀವನ ಪಟ್ಟಾಭಿಷೇಕ

೨೨. ರಾಮನು ಹನುಮಂತನನ್ನು ಸೀತೆಯ ಅನ್ವೇಷಣೆಗಾಗಿ ಕಳುಹಿಸುವುದು.

೨೩. ವಾನರ ಸ್ಯೆನ್ಯವು ಸ್ವಯಂ ಪ್ರಭೆಯ ಗುಹೆಯ ಮೂಲಕ ಸಮುದ್ರ ತೀರವನ್ನು ಸೇರುವುದು.

೨೪. ಹನುಮಂತನು ದೂರದರ್ಶಕ (telescope) ದ ಮೂಲಕ ಲಂಕೆಯನ್ನು ವೀಕ್ಷಿಸುತ್ತಿರುವುದು.



೨೫. ಸಮುದ್ರ ಲಂಘನ (Hanumanta crossing the ocean) 
೨೬. ಲಂಕೆಯ ಅರಮನೆಯಲ್ಲಿ ಸೀತಾನ್ವೇಷಣೆ
೨೭. ವಾನರ ಸೇನೆಯಿಂದ ಸೇತುಬಂಧ (bridging the ocean)
೨೮. ವಾನರ ಸೇನೆಯೊಡನೆ ರಾಮ- ಲಕ್ಷ್ಮಣರು ಯುದ್ದಕ್ಕೆ ಹೊರಡುವುದು
೨೯.ಯುದ್ಧ
೩೦. ಲಕ್ಷ್ಮಣನಿಂದ ಇಂದ್ರಜಿತ್ ವಧೆ
೩೧. ರಾಮ- ರಾವಣ‌ ಯುದ್ಧ (ರಾಮನ ಧ್ವಜದಲ್ಲಿ ಹಂಸವನ್ನು ಕಾಣಬಹುದು) 
೩೨. ರಾವಣವಧೆ
೩೩.ಸಂಗೀತ-ನೃತ್ಯಗಳಿಂದ ರಾಮನ‌ ವಿಜಯದ ಸಂಭ್ರಮಾಚರಣೆ 
೩೪. ಪುಷ್ಪಕ ವಿಮಾನದಲ್ಲಿ ರಾಮ, ಲಕ್ಷಣ ಮತ್ತು ಸೀತಾ 
೩೫. ರಾಮ, ಲಕ್ಷ್ಮಣ, ಸೀತೆಯರ‌ ಆಗಮನ, ವಿಶ್ವರೂಪ ದರ್ಶನ
೩೬.ರಾಮನ ಆಗಮನದ ಸುದ್ದಿಯನ್ನು, ಹನುಮಂತನು ಭರತನಿಗೆ ತಿಳಿಸುವುದು.
೩೭. ರಾಮ ಪಟ್ಟಾಭಿಷೇಕ
೩೮. ಉತ್ತರ ಗರ್ಭಗುಡಿಯ ಪೂರ್ವದಲ್ಲಿ ಕಿರಾತಾರ್ಜುನೀಯ: ಅರ್ಜುನನು ವರಾಹನನ್ನು ಸಂಹರಿಸಿ, ಶಿವನೊಡನೆ ಯುದ್ಧಮಾಡಿ ಪಾಶುಪತ ಪಡೆಯುವ ದೃಶ್ಯ
೩೯. ನವರಂಗದ ಈಶಾನ್ಯದಲ್ಲಿ (north-east) ನರಸಿಂಹನನ್ನು ಭೇಟಿಮಾಡಲು ಬರುತ್ತಿರುವ ಅಷ್ಟದಿಕ್ಪಾಲಕರು
೪೦. ಮುಖಮಂಟಪದ ಉತ್ತರದಲ್ಲಿ ಪೂರ್ವದಿಂದ: ಹಿರಣ್ಯಕಶಿಪು-ಪ್ರಹ್ಲಾದ
೪೧. ಪ್ರಹ್ಲಾದನಿಗೆ ನೀಡುತ್ತಿರುವ ಹಿಂಸೆ
೪೨. ಕಂಬದಲ್ಲಿ ನರಸಿಂಹನನ್ನು ತೋರಿಸಬೇಕೆಂದು ಹಿರಣ್ಯಕಶುಪುವಿನ ಆಗ್ರಹ
೪೩.ಕಂಬದಲ್ಲಿ ನರಸಿಂಹನ ಅವತಾರ, ಹಿರಣ್ಯಕಶಿಪುವಿನ ಸಂಹಾರ.

ಮುಖಮಂಟಪದ ಸುತ್ತಲೂ, ಪೌರಾಣಿಕ ಪಟ್ಟಿಕೆಯ ಮೇಲೆ ಉಪಗೋಪುರಗಳಿವೆ. ಅದರ ಮೇಲೆ ಕಟಾಂಜನದ ಪಟ್ಟಿಕೆಗಳಲ್ಲಿ ನರ್ತಕ-ಗಾಯಕರ ಚಿತ್ರಗಳಿವೆ. ಉತ್ತರದ ಕಟಾಂಜನದ   ಮೇಲೆ ದರ್ಬಾರಿನಲ್ಲಿ ಕುಳಿತಿರುವ ಅಧಿಕಾರಿಯೊಬ್ಬನನ್ನು ಕಾಣಬಹುದು. (ತಜ್ಞರು ಈ ಶಿಲ್ಪವು ದೇವಸ್ಥಾನವನ್ನು ಕಟ್ಟಿಸಿದವನಿದ್ದಿರಬಹುದು ಎಂದು ಊಹಿಸಿದ್ದಾರೆ)
೨. ಹೊರಭಿತ್ತಿ

ದೇವಾಲಯದ ಹೊರ ಗೋಡೆಯನ್ನು ಪಟ್ಟಿಕೆಯಿಂದ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಹೊರಗೋಡೆಯ ಮೇಲ್ಭಾಗದಲ್ಲಿ ಕೀರ್ತಿ ಮುಖ, ಲತಾಪಟ್ಟಿಕೆ ಮತ್ತು ಮಣಿಸಾಲನ್ನು ಕಾಣಬಹುದು. ಇದರ ಮೇಲ್ಭಾಗದಲ್ಲಿ ಶಿಖರಗಳಿದ್ದು ಅದರಲ್ಲಿ ಯಕ್ಷರು ಮತ್ತು ದೇವತೆಗಳನ್ನು ಕಾಣಬಹುದು.
ಹೊರ ಭಿತ್ತಿಯ ಕೆಳಭಾಗವನ್ನು ದೇವತಾ ವಿಗ್ರಹಗಳಿಗೆ ಮೀಸಲಿಡಲಾಗಿದೆ ಈ ದೇವತಾ ಮೂರ್ತಿಗಳು ಸುಮಾರು ಎರಡು ಅಡಿ ಎತ್ತರವಿದ್ದು, ಸುಂದರವಾಗಿವೆ. ಈ ವಿಗ್ರಹಗಳಲ್ಲಿ ಬಹುತೇಕವನ್ನು ಶಿಲ್ಪಿಗಳಾದ ಮಲ್ಲಿತಮ್ಮ ಮತ್ತು ಚಿಕ್ಕಮಲ್ಲಿತಮ್ಮ ರಚಿಸಿದ್ದು, ಮೂರ್ತಿಗಳ ಕೆಳಗೆ ಶಿಲ್ಪಿಯ  ಹೆಸರುಗಳನ್ನು ಕಾಣಬಹುದು.

ಹೊರಭಿತ್ತಿಯಲ್ಲಿ ಕಂಡುಬರುವ ಮೂರ್ತಿಗಳು

ಪೂರ್ವದಿಂದ ಪ್ರದಕ್ಷಿಣಾಕಾರವಾಗಿ ಮುಂದುವರೆದರೆ ಗುರುತಿಸಬಹುದಾದ ವಿಗ್ರಹಗಳು ಇಂತಿವೆ:
(ಕೆಲವು ವಿಗ್ರಹಳ ಹೆಸರಿನ ಮುಂದೆ ಆವರಣದಲ್ಲಿ ಶಂ - ಚ - ಗ - ಪ ಎಂಬ ಸಂಕೇತಾಕ್ಷರಗನ್ನು ಬಳಸಲಾಗಿದೆ . ಅದರ ವಿಸ್ತೃತ ರೂಪ ಇಂತಿವೆ)
ಶಂ - ಶಂಖ (conch);
ಚ - ಚಕ್ರ (Discus);

ಗ‌ - ಗದಾ (mace);
ಪ - ಪದ್ಮ (lotus)

ಇವು ಆ ಮೂರ್ತಿಯ ಕೈಯ್ಯಲ್ಲಿರುವ  ಆಯುಧಗಳು. ಆಯಾ ಮೂರ್ತಿಯ ಮುಂದೆ ನಿರ್ದೇಶಿಸಲಾಗಿದೆ ಆಯುಧಗಳು ಕ್ರಮವಾಗಿ ಬಲ ಹಿಂದಿನ ಕೈ (upper right hand), ಎಡ ಹಿಂದಿನ ಕೈ (upper left hand), ಎಡ ಮುಂದಿನ ಕೈ (lower left hand) ಮತ್ತು ಬಲ ಮುಂದಿನ ಕೈ (lower right hand) ಗಳಲ್ಲಿ ಸ್ಥಾಪಿತವಾಗಿರುವುದಾಗಿರುತ್ತವೆ. 
೧,೨ನೇ ಮೂರ್ತಿಗಳು.ಮಂಟಪದೊಳಗೆ ಸೇರಿಕೊಂಡಿವೆ.

ನವರಂಗದ ಆಗ್ನೇಯ ಭಾಗ (South- east)



. ಕೇಶವ (ಶಂ-ಚ-ಗ-ಪ), . ಪರಶುರಾಮ, ೫. ಲಕ್ಷ್ಮೀ ನರಸಿಂಹ (ಶಿಲ್ಪಿ ಮಲಿತಂಮ)  



೬. ಕಾಳಿಂಗಮರ್ದನ, ೭. ತಾಳದೊಂದಿಗೆ ಸ್ರೀ,  . ನಾರಾಯಣ (ಪ-ಗ-ಚ-ಶಂ),  . ಪದ್ಮ ಮತ್ತು ಫಲಗಳನ್ನು ಹಿಡಿದಿರುವ ಸ್ತ್ರೀ,  ೧೦. ಹರಿಹರ (ತ್ರಿಶೂಲ-ಚಕ್ರ-ಶಂಖ-ಅಕ್ಷಮಾಲ)  


೧೧. ಪದ್ಮ ಮತ್ತು ಫಲಗಳನ್ನು ಹಿಡಿದಿರುವ ಸ್ತ್ರೀ, ೧೨,೧೩,೧೪,೧೫:  ಎಡ-ಬಲಗಳಲ್ಲಿ ದೇವಿಯರೊಂದಿಗೆ ಧರಣೀ ವರಾಹ., ಎಡಭಾಗದಲ್ಲಿ ಗರುಡ (ಶಿಲ್ಪಿ- ಮಲಿತಂಮ),  ೧೬,೧೭,೧೮:  ಇಕ್ಕೆಲಗಳಲ್ಲಿ ದೇವಿಯರೊಂದಿಗೆ ಮಾಧವ (ಚ-ಶಂ-ಪ-ಗ),  ೧೯.ಬಲಿ ಮತ್ತು ವಾಮನ

 



Comments

  1. Interesting article. It is always helpful if details of who constructed this temple, I.e which king and any related ಸ್ಥಳಪುರಾಣ are mentioned.

    ReplyDelete
    Replies
    1. Thank you Sri Ramamurthy for expressing your views on my article about the temple at Javagal.
      I assure you in particular and the readers in general that your suggestions shall be attended to, to the best of my ability in the future.
      With regard to the temple at Javagal, it is not exactly known as to when it was built as inscriptions relating to the temple have not been found. It is however guessed by experts that it must have been constructed between 1250 and 1260. I have mentioned about it at the end of the article.

      Delete
  2. ಜಾವಗಲ್ ನೋಡಿದ್ವಿ ಆದರೆ ನಿಮ್ಮ ವಿವರಣೆ ಓದಿದ ಮೇಲೆ ಮತ್ತೊಮ್ಮೆ ಸರಿಯಾಗಿ ನೋಡಬೇಕು ಅನ್ನಿಸಿದೆ. ಬಹಳ ಚೆನ್ನಾಗಿದೆ ಸಾರ್ ತಮ್ಮ ಸಂಶೋಧನಾ ಲೇಖನ

    ReplyDelete
  3. wonderful place and very nicely written. the photos gives more colour to the article

    ReplyDelete

Post a Comment