ಮೊಸಳೆಯ ಅವಳಿ ದೇವಾಲಯಗಳು - 2

 ಮೊಸಳೆಯ ಅವಳಿ ದೇವಾಲಯಗಳು -2

ಲೇಖನ - ಮೈಸೂರು ಆರ್ ಶ್ರೀನಿವಾಸ ಪುಟ್ಟಿ


ಚನ್ನಕೇಶವ ದೇವಾಲಯ

ಚನ್ನಕೇಶವ ದೇವಾಲಯವು ಹೊರನೋಟಕ್ಕೆ ಬಹುತೇಕ‌ ನಾಗೇಶ್ವರ ದೇವಾಲಯದಂತೆಯೇ ಇದೆ. ಈ ದೇವಾಲಯದ ಅಧಿಷ್ಠಾನವು ಸಂಪೂರ್ಣವಾಗಿ ನಾಗೇಶ್ವರ ದೇವಾಲಯದ ಅಧಿಷ್ಠಾನದಂತೆಯೇ ಇದೆ. ಇದು ವಿಷ್ಣು ದೇವಾಲಯವಾದ್ದರಿಂದ ಹೊರಗೋಡೆಯ ಮಧ್ಯಭಾಗದ ವಿಗ್ರಹಗಳು ವಿಷ್ಣುವಿಗೆ ಸಂಬಂಧಪಟ್ಟದ್ದಾಗಿದೆ. 


ದೇವಾಲಯದ ಪೂರ್ವದ್ವಾರದ ದಕ್ಷಿಣದಿಂದ ಪ್ರದಕ್ಷಿಣಾ ಕಾರವಾಗಿ ಮುಂದುವರೆದರೆ ಕೆಳಗೆ ಹೆಸರಿಸಿರುವ ವಿಗ್ರಹಗಳನ್ನು ,ಅದೇ ಕ್ರಮದಲ್ಲಿ ಕಾಣಬಹುದು :

೧. ರತಿ - ಮನ್ಮಥ; ಗರುಡ 

೨. ಕೇಶವ 

೩. ಸಂಕರ್ಷಣ 

೪. ಧರಣೀವರಾಹನಿಗೆ ಮಾಲೆಹಾಕಲು ಸಿದ್ಧಳಿರುವ  ಭೂದೇವಿ

೫. ಕಾಳಿಂಗಮರ್ದನ 

೬. ರಾಧೆ ಯಿರಬಹುದೆಂದು ತಜ್ಞರು ಉಹಿಸಿರುವ ಹೂಮಾಲೆ ಹಿಡಿದಿರುವ ಸ್ತ್ರೀ

೭. ವೇಣುಗೋಪಾಲ 

೮. ಚಾಮರಧಾರಿಣಿ 

೯. ಇಕ್ಕೆಲಗಳಲ್ಲಿ ಗಜವನ್ನು ಸಂಹರಿಸುತ್ತಿರುವ‌ ಸಿಂಹಗಳನ್ನು ಹೊಂದಿರುವ ಖಾಲಿ ಗೂಡು 

೧೦. ಚಾಮರ - ಧಾರಿಣಿ 

೧೧. ಹೂವನ್ನು ಹಿಡಿದಿರುವ‌ ಪ್ರಹ್ಲಾದ 

೧೨. ಉಗ್ರನರಸಿಂಹ 

೧೩. ಗರುಡ 

೧೪. ಜನಾರ್ದನ 

೧೫. ಚಾಮರಧಾರಿಣಿ 

೧೬. ಆಸೀನ ಮಾಧವ(ಗದೆ ಭಗ್ನವಾಗಿದೆ)

೧೭. ಆಸೀನ ಕೃಷ್ಣ 

೧೮. ಚಾಮರಧಾರಿಣಿ 

೧೯. ಗೋವರ್ಧನಗಿರಿಧಾರಿ 

೨೦. ಎರಡು ಕೈಗಳು ಭಗ್ನವಾಗಿರುವ ಸ್ಥಾನಕ ವಿಷ್ಣು ವಿಗ್ರಹ (ಬಹುತೇಕ ಕೇಶವ) 

೨೧. ಗರುಡ 

೨೨. ನೃತ್ಯ ಗಾರ್ತಿಗೆ ಮೆಚ್ಚುಗೆ ಸೂಚಿಸುತ್ತಿರುವ ದಕ್ಷಿಣಾಮೂರ್ತಿ 

೨೩. ಬಲದಲ್ಲಿ ಗರುಡ ಹಾಗೂ ಎಡದಲ್ಲಿ ಲಕ್ಷ್ಮಿಯ ನಡುವೆ ಸ್ಥಾನಕ ವಿಷ್ಣು

೨೪. ಬಲದಲ್ಲಿ ಶ್ರೀದೇವಿ ಹಾಗೂ ಪರಿಚಾರಿಕೆ ಮತ್ತು ಎಡದಲ್ಲಿ ಭೂದೇವಿ ಹಾಗೂ ಪರಿಚಾರಿಕೆಯ ನಡುವೆ ಯೋಗಾನರಸಿಂಹ 

೨೫. ಹಲ್ಲುಕಿರಿಯುತ್ತಿರುವ ಹನುಮಂತ‌ 

೨೬. ಸ್ಥಾನಕ ಅನಿರುದ್ಧ 

೨೭. ಸ್ಥಾನಕ ಮಾಧವ 

೨೮. ಗರುಡ 

೨೯. ಇಬ್ಬರು ಪರಿಚಾರಿಕೆಯರು ಹಾಗೂ ಇಬ್ಬರು ದೇವಿಯರ ನಡುವೆ ಆಸೀನ ವರದರಾಜ‌ 

೩೦. ಗರುಡ 

೩೧. ಆಸೀನ ಮಾಧವ 

೩೨. ಆಸೀನ ಶ್ರೀಧರ 

೩೩. ಗರುಡ 

೩೪. ಪರಿಚಾರಿಕೆ ಮತ್ತು ದೇವಿಯ ನಡುವೆ ನಾರಾಯಣ 

೩೫. ವಿಗ್ರಹ ಮಾಯವಾಗಿದೆ 

೩೬. ಸ್ಥಾನಕ ಮಾಧವ  

೩೭. ಪರಿಚಾರಕರ ನಡುವೆ ಗೋವಿಂದ 

೩೮. ಗರುಡ 

೩೯. ಸಂಕರ್ಷಣ 

೪೦. ಪರಿಚಾರಕರು ತ್ರಿವಿಕ್ರಮ 

೪೧. ಬಲಿ ಮತ್ತು ವಾಮನ 

೪೨. ಗರುಡ, ಆಸೀನ ಹರಿ 

೪೩. ದಕ್ಷಿಣಾಮೂರ್ತಿ - ಮೊಹಿನಿ 

೪೪. ಸ್ಥಾನಕ ಅಚ್ಯುತ 

೪೫. ಇಕ್ಕೆಲಗಳಲ್ಲಿ ಸ್ತ್ರೀ ಪರಿಚಾರಿಕೆಯರ ನಡುವೆ ಉತ್ತರದ ಗೂಡು 

೪೬. ಭಗ್ನವಾದ ಮೂರು ವಿಗ್ರಹಗಳು 

೪೭. ಆಸೀನ ಪಾರ್ವತೀ, ಬ್ರಹ್ಮ ಆಸೀನ ಲಕ್ಷ್ಮೀನಾರಾಯಣ, ಜನಾರ್ದನ

೪೮. ಲಕ್ಷ್ಮೀ 

೪೯. ಕಾಳಿಂಗಮರ್ದನ ಮತ್ತು 

೫೦. ವಾಮನ.


ಮೇಲ್ಚಾವಣಿಯ ಬೋದಿಗೆ ಕೈಪಿಡಿಗೋಡೆಗಳು ನಾಗೇಶ್ವರ ದೇವಾಲಯ ದಲ್ಲಿ ಇರುವಂತೆಯೇ ಇದೆ; ಆದರೆ ಬಹುತೇಕ ವಿಗ್ರಹಗಳು ವೈಷ್ಣವ ಪಂಥಕ್ಕೆ ಸೇರಿದುವಾಗಿವೆ. ಈ ದೇವಾಲಯದ ಶಿಖರವೂ ಸಹಾ ನಾಗೇಶ್ವರ ದೇವಾಲಯದ  ಮಾದರಿಯಲ್ಲೇ ಇದ್ದು ವೈಷ್ಣವ ವಿಗ್ರಹಗಳನ್ನು ಹೊಂದಿವೆ. ಮುಖಮಂಟಪದ ಮೇಲ್ಚಾವಣಿಯಲ್ಲಿ ಅಷ್ಟಕೋಣಾಕೃತಿಯ ನಡುವೆ ವೃತ್ತವಿದೆ.


ನವರಂಗದ ದ್ವಾರವು ಅಪೂರ್ಣವಾಗಿದೆ. ಒಳಗಡೆಯ ಮಂಟಪಗಳಿಗೆ ಮೂರು ಅಥವಾ ಐದು ಹಂತಗಳ ಗೋಪುರಗಳಿವೆ. ಈ ಮಂಟಪಗಳಲ್ಲಿ ಲಕ್ಷ್ಮೀ ನಾರಾಯಣ, ಜನಾರ್ದನ, ಆಸೀನ ಅನಿರುದ್ಧ, ಆಸೀನ ಸರಸ್ವತಿ, ಗಣೇಶ, ಸ್ಥಾನಕ ಲಕ್ಷ್ಮೀ ಮತ್ತು ಯೋಗನರಸಿಂಹ ವಿಗ್ರಹಗಳಿವೆ. ಮೇಲೆ ಒಂಬತ್ತು ಭುವನೇಶ್ವರಿಗಳಿದ್ದು, ಒಂದೊಂದೂ ಬೇರೆ ರೇಖಾ ಕೃತಿಗಳನ್ನು ಹೊಂದಿದೆ. ಮಧ್ಯದ ಭುವನೇಶ್ವರಿಯು ಅತ್ಯಂತ ಸುಂದರವಾಗಿದ್ದು ಲಾಳಾಕಾರದ ಕಮಾನುಗಳನ್ನು ಹೊಂದಿದ್ದು , ಪದ್ಮ ಹಾಗೂ ತೂಗಾಡುವ ಕರ್ಣಿಕೆಯಿದೆ.

ಶುಕನಾಸಿದ್ವಾರದಲ್ಲಿ ಜಾಲಂದ್ರವಿದೆ. ಬಾಗಿಲ ಇಕ್ಕೆಲಗಳಲ್ಲಿ ದ್ವಾರಪಾಲಕರ ಬದಲಾಗಿ ಶಂಖ ಊದುತ್ತಿರುವ ಬಾಲಕರನ್ನು ಕಾಣಬಹುದು. ಈ ಬಾಲಕರ ಹಿಂದೆ ಚಾಮರಧಾರಿಣಿಯರಿದ್ದಾರೆ. ದ್ವಾರದ ಮೇಲ್ಭಾಗದಲ್ಲಿ ಆಸೀನ ತ್ರಿವಿಕ್ರಮನ ವಿಗ್ರಹವಿದೆ. ಮೇಲ್ಚಾವಣಿಯಲ್ಲಿ ನರ್ತಕರ ಮಧ್ಯದಲ್ಲಿ ಉಗ್ರನರಸಿಂಹ ಇದೆ.


ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಆರು ಅಡಿ ಎತ್ತರದ ಕೇಶವ ವಿಗ್ರಹವಿದೆ. ಕೇಶವನ ಪಕ್ಕದಲ್ಲಿ ದೇವಿಯರಿದ್ದಾರೆ. ತೋರಣದಲ್ಲಿ ವಿಷ್ಣುವಿನ ದಶಾವತಾರ ಇದೆ. ಗರ್ಭಗುಡಿಯ ಭುವನೇಶ್ವರಿಯಲ್ಲಿ ಪದ್ಮವಿದೆ.

ಮೊಸಳೆಯು ಪುಟ್ಟ ಗ್ರಾಮವಾಗಿದ್ದು ಉಪಹಾರಗೃಹಗಳಾಗಲೀ ಅಥವಾ ಇತರೇ ಯಾವ ಸೌಕರ್ಯಗಳಾಗಲೀ ಇಲ್ಲ. ಇಲ್ಲಿರುವ ಎರಡು ದೇವಾಲಯಗಳನ್ನು ಸುಮಾರಾಗಿ ನೋಡಲು ಒಂದು ದಿನವಾದರೂ ಬೇಕಾಗುತ್ತದೆ. ದೇವಾಲಯದ ಒಳಭಾಗಗಳನ್ನು ನೋಡಲು ಒಂದು ಉತ್ತಮ ಟಾರ್ಚ್ ತೆಗೆದುಕೊಂಡು ಹೋಗುವುದು ಒಳಿತು.


ಗ್ರಂಥಋಣ

1. Mysore Archaeological Report

2. ಡಾ. ಶ್ರೀಕಂಠ ಶಾಸ್ತ್ರಿ. ಹೊಯ್ಸಳ ವಾಸ್ತುಶಿಲ್ಪ. ಮೈಸೂರು ವಿಶ್ವವಿದ್ಯಾನಿಲಯ.


ಲೇಖಕರು

ಮೈಸೂರು ಶ್ರೀನಿವಾಸ ಪುಟ್ಟಿ

ಇಲ್ಲಿನ ದೇವಾಲಯಗಳ ಹೆಚ್ಚಿನ ಮಾಹಿತಿಗಾಗಿ ಲೇಖಕರ ಬ್ಲಾಗ್ ಗೆ ಭೇಟಿ ನೀಡಬಹುದ. 

ಬ್ಲಾಗ್ ನ ಲಿಂಕ್ :

https://thetwintemplesatmosale.blogspot.com/

Comments

  1. ತಮ್ಮದು ಅಮೋಘ ಸಂಗ್ರಹ ಮತ್ತು ಅದ್ಭುತ ವಿವರಣೆ, ಈ ವಿಷಯದಲ್ಲಿ ಆಸಕ್ತಿಯಿದ್ದವರಿಗೆ ಒಮ್ಮೆ ನೋಡಲೇ ಬೇಕು ಎನಿಸುತ್ತದೆ.

    ReplyDelete
  2. Looks like lots of work done on your research. One of the excellent article about our sculptures and designs.

    ReplyDelete

Post a Comment