ಹೈಕು, ಹಾಯ್ಕು, ಹಾಯಿಕು


ಹೈಕು, ಹಾಯ್ಕು, ಹಾಯಿಕು
ಲೇಖನ -  ಶಿವಶಂಕರ ಕಡದಿನ್ನಿ ,ರಾಯಚೂರು.


                      ಮೊನ್ನೆ , ಕಾಲೇಜು ಗೆಳತಿ ವನಿತಾಳೊಂದಿಗೆ  ಮಾತನಾಡುತ್ತ ಮಾತನಾಡುತ್ತ ನಗರದ ಸೆಂಟ್ರಲ್ ಲೈಬ್ರರಿ ಕಡೆ ಇಬ್ಬರು ಹೋಗಿದ್ದೆವು. ಓದಿನ ಸುಖ ತಲೆಗೆ ಹಚ್ಚಿಕೊಳ್ಳುವುದರ ಜೊತೆಗೆ ಲೋಕದ ಚಿಂತನೆಯ ಪರಿಪಾಠವು ನಡೆಯಿತು

ಅವಳು ಸ್ತ್ರೀ‌ವಾದಿಯೊ,ಮನುವಾದಿಯೊ, ಒಂದು ತಿಳಿಯದೆ ಅವಳ ಮನದೋಳಗಿನ‌ ವಾಸ್ತವ ಜಗತ್ತಿನ ತಲ್ಲಣಗಳು ಕಾಡುವಂತೆ ಕನವರಿಸಿದಳು.ನಾನು ಪರವಾಗಿಯೇ ಅನೇಕ ವಿಷಯ ಪ್ರಸ್ತಾಪ ಪಡಿಸಿದೆ. ಆದರೂ ಅವಳು ತನ್ನ ಹಠವನ್ನು ಬಿಡದೆ ಮತ್ತೆ ಮತ್ತೆ ಆರ್ಭಟಿಸುತ್ತ ಪುರುಷ ಸಂಕುಲವೆ ಹೀಗೆ ಎಂದು  ನಾಲ್ಕು ಮಾತು ದಬಾಯಿಸಿದಳು.
ಕೈಯಲ್ಲಿ ಅಷ್ಟೊಂದು ಪುಸ್ತಕ ಹಿಡಿದಿಯಾ ಯಾಕೆ?.. ಲೈಬ್ರರಿಯಲ್ಲಿ ಪುಸ್ತಕ ಸಿಗುವುದಿಲ್ವಾ...
..ಸಿಗುತ್ತವೆ ಬಟ್ ಹೊಸ ಕಾವ್ಯ ಅಲ್ವೆ, ಸೋ ಎಲ್ಲೋ ಒಂದು ಕಡೆ ಹೊಸ ಕಾವ್ಯದ 'ಇಂಟ್ರೋಡಕ್ಷನ್  ಟೈಪ್ಸ್ ಆಫ್ ಹೈಕು ಪೋಯೆಟ್' ಒಂದೊ ಎರಡೊ ಬುಕ್ಸ್ ನಲ್ಲಿ ಸಿಗಬಹುದು,
ಇಂತಹ "ಹೊಸ ಕಾವ್ಯಕ್ಕೆ ವಾಲಬೇಕಾಗಿದೆ ಜನ", ವಾಲಿದ್ದಾರೆ ನೂರಕ್ಕೆ ಮೂವತೈದರಷ್ಟು ಅನ್ನುವಾಗೆ. ಎಂದಳು...

ಏನು? ಬರೀ ಮೂವತೈದರಷ್ಟು ನೋ..ನೋ..ನೀನು ಈಗ ತಾನೆ ಹೈಕು ಕಾವ್ಯದ ಸ್ಟಡಿ ಮಾಡ್ತಾದ್ದಿಯಾ ತಾನೇ..
ನೀನಾದರೆ ಅರೆದು ಕುಡಿದಿದ್ದೀಯಾ!...
ಇಲ್ಲ ಕಣೆ, ಯಾವುದೇ ಭಾಷೆಯ ಸಾಹಿತ್ಯ ಪ್ರಕಾರ ಅಷ್ಟು ಬೇಗ ಅಧ್ಯಯನ ಮಾಡಿ ತಿಳಿದುಕೊಳ್ಳುವುದು ಸುಲಭದ ಮಾತಲ್ಲ....
""" ಹೈಕು ಕಾವ್ಯಕ್ಕೆ ಹಿರಿಯರಿಂದ ನವತರುಣರವರೆಗೆ ಆಕರ್ಷಿತರಾಗಿ ಹೈಕುಗಳ ರಚನೆಯಲ್ಲಿ ಉತ್ಸಾಹದಿಂದ ಬರೆಯುತ್ತಿದ್ದಾರೆಯಂತೆ ಕಣೆ"""...
ಹೌದ, ಸರಿ ನನಗೆ... "ಹೈಕು  ಹುಟ್ಟು ಸ್ವರೂಪ ಮತ್ತು ವಿಕಾಸ
ತಿಳಿಸಿಕೊಡೊ"...
ಮೊದಲಿಗೆ ಮಾನ್ಯೋಶು ಕವಿತಾ ಸಂಕಲನ ಜಪಾನಿನಲ್ಲಿ ಇದೆಯಂತೆ, ಮಾನ್ಯೋಶ ಕವಿತಾ ಸಂಕಲನದಲ್ಲಿ ಮೂರು ರೀತಿಯ ರೂಪದ ಕಾವ್ಯಗಳು ಇವೆ.ಅವುಗಳ ಹೆಸರು "ಚೋಕಾ ಸೇದೋಕಾ ತಾಂಕಾ". ಚೋಕಾ ದೀರ್ಘವಂತೆ ತಾಂಕಾಕ್ಕೆ ಲಘು ಗೀತೆಗಳು ಎಂದರ್ಥವಂತೆ ಇವುಗಳ ಒಂದು ರೂಪದಲ್ಲೆ ಹುಟ್ಟಿದ ಹೊಸ ರೂಪ "ಹಾಯಿಕು" ...
ರಿಯಲ್...
ಹೌದೂ...ತದನಂತರದಲಿ..
ಹೈಕು, ಹಾಯ್ಕು, ಹಾಯಿಕು, ಎಂದೆಲ್ಲಾ ಪ್ರಯೋಗಗೊಂಡಿದೆಯಂತೆ. ಇದು ಜಪಾನಿನ ನೆಲದ ಭಾಷೆಯ ಒಂದು ಸಾಹಿತ್ಯ ರೂಪವಾಗಿದ್ದು ಜಪಾನಿನ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಹೈಕು ಕಾವ್ಯ ಪ್ರಾರಂಭದಲ್ಲಿ ಜೈನ, ಬೌದ್ದರು ತಮ್ಮ ತತ್ವಗಳನ್ನು ಪ್ರಸಾರ ಮಾಡಲು ಹೈಕು ರೂಪಗಳನ್ನು ಬಳಸಿಕೊಂಡು ತದನಂತರದಲಿ ಹೈಕು ಇತರ ವಿಷಯಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುತ್ತ ವಿಸ್ತಾರಗೊಳ್ಳತೊಡಗಿತು.
17 ನೇ ಶತಮಾನದಲ್ಲಿ ದಾರ್ಶನಿಕ ' ಮಾತ್ಸು ಬಾಶೋ' ಹೈಕು ಕಾವ್ಯ ರೂಪಕ್ಕೆ ಒಂದು ಚೌಕಟ್ಟನ್ನು ರೂಪಿಸಿದನಂತೆ. ಇಂದಿಗೂ ಸಹ ಪ್ರಚಲಿತದಲ್ಲಿದೆ.
"ಎಂತಹ ಚೌಕಟ್ಟು ಕಣೋ"...
5+7+5=17, ಅಕ್ಷರಗಳ  ಮೂರು ಸಾಲಿನ ಪದ್ಯ ಅಂದರೆ( ಸಿಲೆಬಲ್ಸ್) ಇರಬೇಕು.
"ವಾಟ್ , ಸಿಲೆಬಲ್ಸ್"?..
ಅಂದರೆ ಇಂದ್ರಿಯಗಳ ಗ್ರಹಣದಿಂದ ಚೈತನ್ಯ ಮೂಡಿಬರುವ ಕಾಲ 17 ಚಿತ್  ಕ್ಷಣ ಎಂದು ಭಾವಿಸುತ್ತಾರೆಹೀಗಾಗಿ 17 ಅಕ್ಷರಗಳ ಹೈಕುವಿನಲ್ಲಿ ನಿಗದಿಪಡಿಸಲಾಗಿದೆ...
"ಜಪಾನ್ ನಿಂದ ಹೈಕು ಕಾವ್ಯ ಕನ್ನಡಕ್ಕೆ ಬಂದಿದ್ದು ಹೇಗೆ"?.....
ಜಪಾನ್ ಭಾಷೆಯಿಂದ ಮೊದಲಿಗೆ ಹಿಂದಿ ಭಾಷೆಯ ಕವಿಗಳು ಹೈಕು ಕಾವ್ಯ ಹಿಂದಿಯಲ್ಲಿ ಪರಿಚಯಿಸಿದರಂತೆ.
ತದನಂತರದಲಿ ಹಲವು ಭಾಷೆಯ ಪರಿಣಿತರಾದಂತಹ ಕನ್ನಡ ಭಾಷೆಯ ಕವಿಗಳಾದ ಹೈಕು ಕಾವ್ಯ ಕನ್ನಡಕ್ಕೆ ಪರಿಚಯ ಮಾಡಿದವರಲ್ಲಿ ಡಾ.ಚಂದ್ರಕಾಂತ ಕುಸನೂರು ಎಂದು ಓದಿದ್ದು ನೆಪ್ಪು ಕಣೆ...
ಅವರ ಹಾದಿಯಲ್ಲೆ ಕನ್ನಡ ಹೈಕು ಕಾವ್ಯಕ್ಕೆ ಜನ ವಾಲಿದ್ದಾರೆ , ಇದು ಸಂತೋಷವೆನಿಸುತ್ತದೆ.
"ಇದುವರೆಗೆ ಕನ್ನಡದಲ್ಲಿ ಹೈಕು ಸಂಕಲನಗಳು ತಂದವರಲ್ಲಿ ಎಷ್ಟು ಕವಿಗಳು?...
ಹೈಕು ಕಾವ್ಯ ಪರಿಚಯ ಮಾಡಿದವರೆ ಹೈಕು ಸಂಕಲನ ಇದುವರೆಗೆ ತಂದಿಲ್ಲ ಅಂತ ಹಿರಿಯರು ಹೇಳುತ್ತಾರೆ , ಬಟ್, ಬಿಡಿ ಬಿಡಿಯಾಗಿ ಹೈಕು ಬರೆದು ಪತ್ರಿಕೆಯಲ್ಲಿ ಪ್ರಕಟಗೊಂಡಿವೆಯಂತೆ.
ಅದು ಯಾರೋ.ಒಬ್ಬ ಹಿರಿಯ ಕವಿಗಳು ಹೇಳಿದ್ದು. ಇನ್ನು ಕೆಲವರು ಹೈಕು ಸಂಕಲನಗಳು ಬಂದಿವೆ.ರಾಯಚೂರಿನ ವೀರಹನುಮಾನ, ಡಾ.ಕೆ ಬಿ ಬ್ಯಾಳಿಡಾ.ಸರಜೂ ಕಾಟ್ಕರ್ಡಾ.ಸಿ ರವೀಂದ್ರ ನಾಥ್. ಶರಣಪ್ಪ ತಳ್ಳಿಡಾ.ಜಯದೇವಿ ಗಾಯಕವಾಡ, ಸಿದ್ದರಾಮ ಹಿರೇಮಠ ಕೂಡ್ಲಿಗಿ,ಈರಣ್ಣ ಬೆಂಗಾಲಿ, ಅರುಣಾ ನರೇಂದ್ರಜಿ ಎಸ್ ಕಮತರ್ಆಂಜನೇಯ್ಯ ಜಾಲಿಬೆಂಚಿಜಂಬುನಾಥ್ ಕಂಚ್ಯಾಣಿಹೊ ಪರಮೇಶ್, ಹೀಗೆ ಸುಮರಾಗಿ 15 ರಿಂದ 20 ಕವಿಗಳು ತಮ್ಮ ಸಂಕಲನಗಳನ್ನು  ಹೋರ  ತಂದಿದ್ದಾರೆ. ಎಂದು ಹೇಳಬಹುದು...
"ಮುಂದಿನ ದಿನ ಹೈಕು ಕಾವ್ಯದ ಮೇಲೆ ಪಿ ಎಚ್ ಡಿ ಮಾಡಬಹುದಾ"?...
ಈಗಾಗಲೇ ಕನ್ನಡ ಹೈಕು ಕಾವ್ಯದ ಮೇಲೆ ರೇಣುಕಾ ಕಮತರ್ ರವರು ಎಂ ಫೀಲ್  ಮಾಡಿದ್ದಾರೆ. ಆದರೆ ಯಾವ ? ವಿಶ್ವವಿದ್ಯಾಲಯದಲ್ಲಿ ಸಲ್ಲಿಸಿದ್ದಾರೆ ಎಂದು ತಿಳಿದುಕೊಂಡಿಲ್ಲ.
ಅಬ್ಬಾಬ್ಬ.. ಯಾರಾದಾರು ನಿನ್ನ ಜೋಡಿ ನಿಂತು ಮಾತನಾಡಬಹುದಾ?.ಎದುರು ನಿಂತು ಮಾತನಾಡವುದಕ್ಕೆ ಸಾಧ್ಯವಿಲ್ಲ ಕಣೋ..
ನೀನು ಮಾತನಾಡುತ್ತಿದ್ದಿಯಲ್ಲ ನನ್ನ ಎದುರಿಗೆ...
ನಾನು ನಿನ್ನ ಗರ್ಲ್ ಫ್ರೇಂಡ್ ಕಣೋ...
ಹೌದಾ..
.. ಥೂ.. ಅದೇಲ್ಲ ಬೇಡ ಮೊದಲು ಹೈಕುವಿನ ಬಗ್ಗೆ ಬಿತ್ತರಿಸು...ಹೌದು ....ಹೌದು...ಎಂದೆ..
"ಬೇರೆ ಬೇರೆ ಭಾಷೆಗಳಿಂದ ಹೈಕುಗಳು ಅನುವಾದ ಮಾಡಿದ್ದಾರೆನೊ.....
ಗುಡ್ ಕ್ವೊಶ್ಚನ್..
ಹಲವು ಭಾಷೆಯ ಕವಿಗಳು ಹಿಂದಿಯಿಂದ ಕನ್ನಡಕ್ಕೆ ತೆಲುಗಿಗೆ, ಮರಾಠಿಗೆ ಹೀಗೆ ಹೈಕುಗಳು ಅನುವಾದ ಮಾಡಿದ್ದಾರೆ.
ಅಂಥವರ ಪಟ್ಟಿಯಲ್ಲಿ ನೋಡಿದಾಗ. ಡಾ.ಚಂದ್ರಕಾಂತ ಕುಸನೂರು, ಡಾ.ಕೆ ಬಿ ಬ್ಯಾಳಿ, ಡಾ.ಸಿ ರವೀಂದ್ರನಾಥ್, ವೀರಹನುಮಾನ. ಹೀಗೆ ಮುಂತಾದವರ ಹೆಸರು ಹೇಳಬಹುದು. ಆದರೆ ಇದುವರೆಗೆ ನಮ್ಮ ಕನ್ನಡದಲ್ಲಿ ಹೈಕು ಕುರಿತು "ಚರ್ಚಾ ಗೋಷ್ಠಿ, ಹೈಕು ಕವಿ ಗೋಷ್ಠಿಹೈಕು ಕಾವ್ಯ ಕಮ್ಮಟ, ನಡೆದಿಲ್ಲ ಮುಂದೆ ನಡೆಯಬೇಕಾಗಿದೆ.. ಅನ್ನುವ ವಿಚಾರದ ಮಾತು.
ನನ್ನ ಜೋಡಿ ನಡೆಸಿದ್ದೆ ತಾನೆ ಎಂದಳು...
ಹೌದು..ಇಷ್ಟೇಲ್ಲ ಹೇಳಿದ ಮೇಲೆ ನೀನು ಕನ್ನಡ ಹೈಕುಗಳನ್ನು ಬರೆದಿರುವೆ  ಅಂತ ನನ್ನ ಒಡಲು ಹೇಳುತ್ತದೆ...
ನೀನು ಕೇಳಲು ಇಚ್ಚಿಸಿದರೆ ನಾನು ಹೈಕುಗಳು  ನಿನ್ನ ಮುಂದೆ ಬಿತ್ತರಿಸುವೆ..
ಕೇಳುವ ಇಚ್ಛೆ ಇದೆಯಲ್ಲ  ಕೇಳಬೇಕಾದ್ದೇ ......ಹೇಳು.
" ಹರೆಯ ಮನ
  ಒಲುಮೆ ತಮಟೆಗೆ
  ಚಚ್ಚಿಕೊಂಡಿದೆ"
" ನಲ್ಲೆಯ ಜೊತೆ
  ಹಲವು ಕಥೆಗಳು
  ಕಟ್ಟುತ್ತಿಹೆನು"
"ಸುಂದರ ಸ್ನೇಹ
ದುಃಖದ ಭಾವದಲಿ
ಅಗಲುವಾಗ"
ಸೂಪರ್ ಕಣೋ...ನಿನ್ನ ಹೈಕುಗಳು ಮತ್ತೆ ಯಾವಾಗ ಕೇಳೊ ಭಾಗ್ಯ. ದಿನ ನೆನಪು ಇಡುವ ಬಹು ಅಪರೂಪದ ಭೇಟಿ...ಎಂದಳು...
ಮತ್ತೆ ನಾಳೆ ಲೈಬ್ರರಿಯಲ್ಲಿ ಎಂದು ಹೇಳಿದೆ ಅವಳು ಗುಡ್ ಬಾಯ್...ಎಂದು ಹೊರಟೆ ಹೋದಳು......


Comments

  1. ಹೊಸ ವಿಷಯ. ಇದರ ಬಗ್ಗೆ ತಿಳಿದಿರಲಿಲ್ಲ.

    ReplyDelete
  2. ಹೈಕು ಎಂಬ ಜಪಾನ್ ಮೂಲದ ಕಾವ್ಯಶೈಲಿಯನ್ನು ಓದುಗರಿಗೆ ಪರಿಚಯ ಮಾಡಿಕೊಟ್ಟ ಲೇಖಕರಿಗೆ ಧನ್ಯವಾದಗಳು. ಕೆಲವೊಮ್ಮೆ ಹೈಕು ಕವನಗಳು ತಮ್ಮ ತೀವ್ರ ಸಂಕ್ಷಿಪ್ತತೆಯಿಂದ ಅರ್ಥವಾಗುವುದು ಕಷ್ಟ. ಎಂದಮೇಲೆ ಈ ಬಗೆಯ ಕವನಗಳು ಎಷ್ಟು ಮಟ್ಟಿಗೆ ಜನಪ್ರಿಯವಾಗುವುವೋ ಹೇಳಲಾಗದು.
    ಲೇಖನದಲ್ಲಿ ಹಲವು ಮುದ್ರಣ ದೋಷಗಳಿವೆ. ಇವನ್ನು ಸರಿಪಡಿಸಬೇಕು.

    ReplyDelete

Post a Comment