ನಾ ಕಸ್ತೂರಿ

ನಾ ಕಸ್ತೂರಿ (ನಾರಾಯಣ ಕಸ್ತೂರಿ)
೨೫/೧೨/೧೭೯೭-೧೪/೦೮/೧೯೮೭

ಲೇಖನ - ರಾಮಮೂರ್ತಿ, ಬೇಸಿಂಗ್ ಸ್ಟೋಕ್
ಇವರ ಮಾತೃಭಾಷೆ  ಕನ್ನಡ ಅಲ್ಲ

ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು - 4





ಕರ್ನಾಟಕದಲ್ಲಿ ಮಾತ್ರವೋ ಅಥವಾ ಹೊರಗೂ ಈ ವಿಚಾರ ಬಹಳ ಸಾಮಾನ್ಯವೋ ಗೊತ್ತಿಲ್ಲ.  ಉದಾಹರಣೆಗೆ,  ತಮಿಳು ನಾಡಿನಲ್ಲಿ  ನೆಲಸಿರುವ  ಕನ್ನಡ ದವರು  ತಮಿಳಿನಲ್ಲಿನಲ್ಲಿ ಬರೆಯುವ ಪ್ರಸಿದ್ಧ ಲೇಖಕರು ಇದ್ದಾರೋ  ನನಗೆ ಗೊತ್ತಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಈ  ವಿಚಾರ ನಮ್ಮ ಮನಸ್ಸಿಗೂ  ಬರುವುದಿಲ್ಲ  ಅಲ್ಲವೇ?  ಇಲ್ಲಿ ಇಂತಹ ಕೆಲವರನ್ನು  ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ. 


ನಿಮಗೆ ಆಲ್ ಇಂಡಿಯ ರೇಡಿಯೊ ಗೆ (A I R )   ಆಕಾಶವಾಣಿ ಅಂತ ಹೆಸರಿಟ್ಟವರು ನಾ ಕಸ್ತೂರಿ ಅನ್ನುವುದು ಗೊತ್ತಿತ್ತಾ ? ಇದರ ವಿಚಾರ ಮುಂದೆ  ಕಸ್ತೂರಿ ಅವರ ಹುಟ್ಟಿದ್ದು ಈಗಿನ ಕೇರಳ, ಆಗ ಇದು ಟ್ರಾವಾಂಕೂರ್  ಪ್ರಾಂತ್ಯ, ಮಾತೃ ಭಾಷೆ ಮಲಯಾಳಮ್.  ಅಲ್ಲೇ ಕಾನೂನು ಪದವಿ  ನಂತರ M A  ಪಡೆದು ಕೆಲಸಕ್ಕೆ ಹುಡುಕುತ್ತಿದ್ದಾಗ ಅಕಸ್ಮಾತು ಮೈಸೂರಿನಲ್ಲಿ ಕೆಲಸ ಖಾಲಿ ಇದೆ ಅಂತ ಒಂದು ಪ್ರತ್ರಿಕೆಯ ಜಾಹೀರಾತಿನಿಂದ ತಿಳಿದು ಬನುಮಯ್ಯ ಹೈಸ್ಕೂಲ್ ನಲ್ಲಿ ಉಪಾಧ್ಯಾಯರಾದರು. ನಂತರ, ೧೯೨೮ ರಲ್ಲಿ  ಮೈಸೂರು ಮಹಾರಾಜಾ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಸೇರಿ ಕನ್ನಡ ಭಾಷೆಯನ್ನು ಕಲಿತು ಮಲಯಾಸ್ವಪ್ನಳಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಹೆಸರು
ಸಂಪಾದಿಸಿದರು. ೧೯೪೯ರಲ್ಲಿ ದಾವಣಗೆರೆ ಫಸ್ಟ್ ಗ್ರೇಡ್ ಕಾಲೇಜ್ ಪ್ರಿನ್ಸಿಪಾಲ್  ಆಗಿ ೧೯೫೪ ರಲ್ಲಿ ನಿವೃತ್ತಿ ಪಡೆದು ಧಾರ್ಮಿಕ ಸಂಸ್ಥೆಗಳ ಆಡಳಿತಕ್ಕೆ ಸಹಾಯ ಮಾಡಿದರು. ಮೈಸೂರಿನ ರಾಮಕೃಷ್ಣ ಆಶ್ರಮಕ್ಕೆ ಕಾರ್ಯದರ್ಶಿ ಮತ್ತು ಸತ್ಯ ಸಾಯಿಬಾಬಾ ಅವರ ಸಂಸ್ಥೆಗೆ ದುಡಿದರು. ಕನ್ನಡ  ಹಾಸ್ಯ ಸಾಹಿತ್ಯದಲ್ಲಿ ಹೊಸದೊಂದು ಪರಂಪರೆಯನ್ನು ಹಾಕಿದವರಲ್ಲಿ ಕಸ್ತೂರಿ ಒಬ್ಬರು.   
ಆ ಕಾಲ, ಅಂದರೆ ೧೯೨೦ ರಿಂದ ಆಧುನಿಕ ಕನ್ನಡ ಸಾಹಿತ್ಯದ ಸುವರ್ಣ ಯುಗ ಅನ್ನಬಹುದು. ೧೯೪೨ ರಲ್ಲಿ ಡಾಕ್ಟರ್ ಶಿವರಾಂ (ರಾ ಶಿ ) ಅವರ ಜೊತೆಯಲ್ಲಿ ಸೇರಿ ಕನ್ನಡದ ಮೊದಲೆಯದ  ಹಾಸ್ಯ ಮಾಸಿಕ ಪತ್ರಿಕೆ ಕೊರವಂಜಿ  ಆರಂಬಿಸಿವುದಕ್ಕೆ ಸಹಾಯ ಇವರಿಂದಲೇ.ಆಗತಾನೆ
ಮೈಸೂರಿನಲ್ಲಿ ಆರ್. ಕೆ.  ಲಕ್ಷ್ಮಣ್   ವ್ಯಂಗ ಚಿತ್ರಗಾರನಾಗಿ ಹೆಸರುಮಾಡಿದ್ದರು. ಇವರು ಪ್ರಸಿದ್ಧ ಸಾಹಿತಿ ಆರ್. ಕೆ ನಾರಾಯಣ್ ಅವರ ತಮ್ಮ.  ಲಕ್ಷ್ಮಣ್ ಅವರನ್ನು ಕೊರವಂಜಿಯಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಿ ಮುಂದೆ ಬರುವುದಕ್ಕೆ ಕಸ್ತೂರಿ ಅವರೇ  ಕಾರಣ.  ಕಸ್ತೂರಿ ಅನೇಕ  ಕಾದಂಬರಿಗಳು, ನಾಟಕಗಳು, ಅನುವಾದಗಳು, ಜೀವನಚರಿತ್ರೆ, ಕಥೆಗಳು ಮತ್ತು ಹಾಸ್ಯ ಪ್ರಬಂಧ ಗಳನ್ನೂ ರಚಿಸಿದ್ದಾರೆ.
ಇಂಗ್ಲಿಷ್ ನಲ್ಲಿ ಬರೆದ History of the British Occupation of  India  ಮುನ್ನೂರು ವರ್ಷದ ಇತಿಹಾಸದ ದಾಖಲೆ.  ಕಾದಂಬರಿಗಳಲ್ಲಿ ಅಲ್ಲೋಲ ಕಲ್ಲೋಲ, ಉಪಾಯ ವೇದಾಂತ, ಡೊಂಕುಬಾಲ ಮುಂತಾದವು. ನಾಟಕದಲ್ಲಿ ಗಗ್ಗಯ್ಯನ ಗಡಿಬಿಡಿ, ಕಾಡಾನೆ ಮತ್ತು ವರಪರೀಕ್ಷೆ ಇತ್ಯಾದಿ ನಿವೃತಿ ಆದಮೇಲೆ ಸಾಯಿಬಾಬ ಭಕ್ತರಾಗಿ ಪುಟ್ಟಪರ್ತಿಯಲ್ಲಿ ಅವರು ಪತ್ರಿಕೆಯ ಸಂಪಾದಕರಾಗಿ ಬಹಳ ವರ್ಷ ದುಡಿದರು. ಬಾಬಾ ಅವರ ಜೀವನಚರಿತ್ರೆಯನ್ನು ಬರೆದರು  ಈಗ ಕೆಲವು ವರ್ಷದ ಕೆಳಗೆ ಸ್ವಪ್ನ ಪುಸ್ತಕ ಪ್ರಕಾಶಕರು ಕಸ್ತೂರಿ ಬರೆದಿದ್ದ ಸುಮಾರು ನೂರು ಹಾಸ್ಯ ಪ್ರಭಂದಗಳನ್ನು ಸಮಗ್ರ ಹಾಸ್ಯ ಸಾಹಿತ್ಯ ಎಂದು  ಪ್ರಕಟಿಸಿದ್ದಾರೆ.  


                                              ನೋಡಿ, ಕಸ್ತೂರಿ ಅಂಥವರು ಕನ್ನಡನಾಡಿಗೆ ಬಂದು ಕನ್ನಡ ಕಲಿತು ನಮ್ಮೊಂದಿಗೆ ಬೆಳದಿದ್ದು ನಮ್ಮ ಭಾಗ್ಯ ಅಲ್ಲವೇ ? ಆಕಾಶವಾಣಿಗೆ ಹೆಸರು ಕೊಟ್ಟವರು ಇವರೇ ಅಂತ ಹೇಳಿದ್ದೆ.  ಡಾಕ್ಟರ್ ಗೋವಿಂದಸ್ವಾಮಿ ಮನೋವಿಜ್ಞಾನ ತಜ್ಞ. ೧೯೩೬ ನಲ್ಲಿ ಇವರು ಇಂಗ್ಲೆಂಡ್ ನಿಂದ ರೇಡಿಯೋ ಮೈಸೂರಿಗೆ ತಂದರು. ಇಡೀ ಮೈಸೂರಿನಲ್ಲಿ ಮೊದಲನ ರೇಡಿಯೋ ಇವರ ಮನೆಯಲ್ಲಿ. ಕಸ್ತೂರಿ ರೇಡಿಯೋ ಪ್ರಚಾರ ಕೇಳಿ ಇದು ಆಕಾಶವಾಣಿ ಅಂದರಂತೆ. ಆಗಿನಿಂದ ಈ ಹೆಸರು ಶಾಶ್ವತ  ಆಯಿತು. ಕಸ್ತೂರಿ ಅವರು ಬೆಂಗಳೂರಿನ ಆಕಾಶವಾಣಿ ಕೇಂದ್ರದಲ್ಲಿ Producer ಆಗಿ ಕೆಲವು ವರ್ಷ ಕೆಲಸವೂ ಮಾಡಿದರು,

೧೯೮೧ರಲ್ಲಿ ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಕಸ್ತೂರಿಯವರನ್ನು ಪುರಸ್ಕರಿಸಿತು.
ನಾ ಕಸ್ತೂರಿ ಕನ್ನಡದ ಕಸ್ತೂರಿ ಮತ್ತು ಇವರ ಸೇವೆ ನಮ್ಮ ಸಾಹಿತ್ಯಕ್ಕೆ ಅಪಾರ.

Comments

  1. ಕಸ್ತೂರಿಯವರ ಕಂಪು ಪರಿಚಯಸಿದ್ದಕ್ಕೆ ದನ್ಯವಾದಗಳು.

    ReplyDelete
  2. Adu Kasturiyavara Photo Alla Anisutte

    ReplyDelete
  3. Many thanks to ಶ್ರೀ ರಾಮಮೂರ್ತಿ for reminding us the greatness of Kasturi who was a shining star in Kannada humorous literature. The number of people whom he helped as a teacher and colleague is legion. Kuvempu was deeply grateful to him when, as a student, he was very sick and Kasturi was instrumental in his recovery back to health. There are numerous well written essays about Kasturi. Some of them are by: 1. Professor L..S. Sheshagiri Rao, who was Kasturi's junior colleague; 2. Professor Prabhushankar, who was a student of Kasturi, and 3. Professor A.R. Mitra.
    The present article, as printed, has numerous typographical mistakes. This includes Kasturi's date of birth. I hope the editors will look into this.

    ReplyDelete
    Replies
    1. Thanks Dr Madhusudana Few typing mistakes have been edited. Thanks for letting know.

      Delete

Post a Comment