ಕನ್ನಡಕ್ಕೆ ಒಬ್ಬರೇ ಕೈಲಾಸಂ



ಇವರ ಮಾತೃಭಾಷೆ  ಕನ್ನಡ ಅಲ್ಲ ಆದರೆ ಇವರು ಕನ್ನಡನಾಡಿನ ಧ್ರುವ ತಾರೆಗಳು -1

ಕರ್ನಾಟಕದಲ್ಲಿ ಮಾತ್ರವೋ ಅಥವಾ ಹೊರಗೂ ಈ ವಿಚಾರ ಬಹಳ ಸಾಮಾನ್ಯವೋ ಗೊತ್ತಿಲ್ಲ.  ಉದಾಹರಣೆಗೆ,  ತಮಿಳು ನಾಡಿನಲ್ಲಿ  ನೆಲಸಿರುವ  ಕನ್ನಡ ದವರು  ತಮಿಳಿನಲ್ಲಿನಲ್ಲಿ ಬರೆಯುವ ಪ್ರಸಿದ್ಧ ಲೇಖಕರು ಇದ್ದಾರೋ  ನನಗೆ ಗೊತ್ತಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಈ  ವಿಚಾರ ನಮ್ಮ ಮನಸ್ಸಿಗೂ  ಬರುವುದಿಲ್ಲ  ಅಲ್ಲವೇ?  ಇಲ್ಲಿ ಇಂತಹ ಕೆಲವರನ್ನು  ಪರಿಚಯ ಮಾಡಿಕೊಡುವುದು ಈ ಲೇಖನದ ಉದ್ದೇಶ.   

ಕನ್ನಡಕ್ಕೆ ಒಬ್ಬರೇ ಕೈಲಾಸಂ  ಮತ್ತು ಪ್ರಹಾಸನ ಪ್ರಪಿತಾಮಹ (೧೮೮೪-೧೯೪೬)
                                                               
"ಕಾರಣವಿರಲಿ ಇಲ್ಲದೇ ಇರಲಿ ನಗಿಆಗ ನಿಮ್ಮನ್ನು ನೋಡಿ ಇತರರೂ ನಗುತ್ತಾರೆ"
 ನಾವಿರುವ White House ನಲ್ಲಿ ನಾನು Black Sheep ,  
ಹನುಮಂತ ಹೇಗೆ ಲಂಕೆಗೆ ಹಾರಿದ ಸರ್ ?  ಉತ್ತರ ಅವನು ಹಾರ್ಲಿಕ್ಸ್ (ಹಾರ್ ಲಿಕ್ಸ್ )  ಕುಡೀತಾನೆ!

ಇಂತಹ ಅನೇಕ ಹಾಸ್ಯದ ತುಂಡುಗಳನ್ನು ನಮಗೆ ಪರಿಚಯ ಮಾಡಿದವರು ಕೈಲಾಸಂ ನೂರು ವರ್ಷದ ಹಿಂದೆ. ತಂಜಾವೂರು ಪರಮಶಿವ ಕೈಲಾಸಂ ತಮಿಳು ಭಾಷೆ ಮಾತನಾಡುವ ಮನೆತನೆದವರುಅವರ ತಂದೆ ಪರಮಶಿವ ಐಯ್ಯರ್.  ಆಗಿನ ಮೈಸೂರು ಪ್ರಾಂತ್ಯದಲ್ಲಿ ಮುನಿಸೀಫ್ ರಾಗಿ ಸೇರಿ ಕೊನೆಗೆ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನಿವೃತಿ ಆದರು. ಕೈಲಾಸಂ ೧೮೮೪ (೨೯ ಜುಲೈ ) ಬೆಂಗಳೂರಿನಲ್ಲಿ ಜನಿಸಿದರು.

ಇವರ ವಿಧ್ಯಾಭ್ಯಾಸ ಡಿಗ್ರೀ ವರಗೆ ಮದ್ರಾಸ್ ನಗರದಲ್ಲಿ ನಡೆಯಿತು. ಇವರ ಹೈಸ್ಕೂಲ್ ಮುಖ್ಯೋಪಾಧ್ಯಯರು ಪ್ರಸಿದ್ಧ Rt. Hon ಶ್ರೀನಿವಾಸ ಶಾಸ್ತ್ರಿಗಳು. (ಕೈಲಾಸಂ ಪ್ರಕಾರ  ಆಗ Rt Hon ಆಗಿರಲಿಲ್ಲ  Honourable ಲೆಫ್ಟ್ ಔಟ್ !)   ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಇವರು ಬಿ ಎ ಪದವಿ ಯಲ್ಲಿ ಮೊದಲನೆ  ಸ್ಥಾನ ಗಳಿಸಿದ್ದರಿಂದ  ಆಗಿನ ಮೈಸೂರು ಮಹಾರಾಜರು ಇವರನ್ನ ಲಂಡನ್ ನಲ್ಲಿ ಇರುವ  Royal School of Mines ನಲ್ಲಿ ಭೂವಿಜ್ಞಾನ (Geology)  ಓದಲು ವಿದ್ಯಾರ್ಥಿವೇತನ ಕೊಟ್ಟು ೧೯೦೯ ನಲ್ಲಿ ಕಳಿಸಿದರು. ಅಲ್ಲಿ ಓದುವುದು ಒಂದೇ ಅಲ್ಲ ಲಂಡನ್ ನ ಪ್ರಸಿದ್ಧ ರಂಗಮಂದಿರ ಮತ್ತು Music Hall ಗಳ ಪರಿಚಯ ಮಾಡಿಕೊಂಡು  ಆರು  ವರ್ಷದ ನಂತರ (  ಮೂರು ವರ್ಷದ  ಪದವಿ ಇದು ಆದರೆ ಇವರು ಇವರು ಅಲ್ಲೇ ಇರುವುದಕ್ಕೆ ಇಷ್ಟವಾಗಿ ಆರು ವರ್ಷ ಆಯಿತು)೧೯೧೫ ಇಂಡಿಯಾ ಗೆ ವಾಪಸ್ಸು ಬಂದು ಮೈಸೂರು ಗಣಿಗಳ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದರು. ಇನ್ನೂಇಂಗ್ಲೆಂಡ್ನಲ್ಲಿ ಇರುವುದಕ್ಕೆ  ಬಹಳ ಪ್ರಯತ್ನ ಪಟ್ಟರಂತೆ ಆದರೆ ಮೊದಲನೆಯ ಮಹಾಯುದ್ಧ ಶುರುವಾದಾಗ ಭಾರತ ಪ್ರಜೆಗಳನ್ನು ಸರ್ಕಾರ ವಾಪಸ್ಸು ಕಳಿಸಿಬಿಟ್ಟರು. 

   ಇವರ ಕೆಲಸ ಕೋಲಾರದಲ್ಲಿ KGF ನಲ್ಲಿ ಇತ್ತು ಆದರೆ ಇವರು ಕೆಲಸದಮೇಲೆ ಅಷ್ಟೇನು ಗಮನ ಕೊಟ್ಟಿದಹಾಗೆ ಇಲ್ಲ. ಸಾಯಂಕಾಲ ಕೆಲವು ಕೆಲಸದವರನ್ನು ಸೇರಿಸಿ ನಾಟಕ ಮತ್ತು ಸಂಗೀತಸಭೆಗಳನ್ನೂ ನಡೆಸುತಿದ್ದರಂತೆ. ಇಂತಹ ನಡವಳಿಕೆ ಮೇಲಿನ ಅಧಿಕಾರಿಗಳಿಗೆ ಹಿಡಿಸಲಿಲ್ಲ. ಒಬ್ಬ ಹಿರಿಯ ಅಧಿಕಾರಿ ಸಾಮಾನ್ಯ ಜನರೊಂದಿಗೆ ಸೇರಿ ನಾಟಕ ಮಾಡುವುದು ಎಲ್ಲಾದರೂ ಉಂಟೆ ! ನಂತರ ಈ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೆಂಗಳೂರಿಗೆ ಬಂದು ನೆಲಸಿದರು.  ಮುಂದೆ ಅವರ ಜೀವಮಾನ ಪೂರ್ತಿ " unemployed ಅಂಡ್ unemployable " ಅಂತ ಅವರೇ ಹೇಳಿಕೊಂಡರು. ಇವರ ತಂದೆ ತುಂಬಾ ದೊಡ್ಡ ಕೆಲಸದಲ್ಲಿ ಇದ್ದರೂ ಅಪ್ಪ ಮಗನ ಮನಸ್ತಾಪ ಇದ್ದೇ ಇತ್ತು. ಮಗ ಅಷ್ಟೆಲ್ಲ ವಿದೇಶದಲ್ಲಿ ಓದಿ ಕೆಲಸ ಇಲ್ಲದೆ ಮನೇಲಿ ಕೂತಿರುವುದು ತಂದೆ ಪರಮಶಿವ ಐಯ್ಯರ್  ಅವರಿಗೆ ಸಹಜವಾಗಿ  ಹಿಡಿಸಲಿಲ್ಲ . ಸರಿಯಾಗಿ ಮನೆಯಲ್ಲೇ  ಇರುವುದೂ  ಕಷ್ಟ ಆಯಿತು. ಆದರೆ ಬೇರೆ ಆದಾಯ ಇಲ್ಲ ಹೊರಗೆ ಬಾಡಿಗೆ ಮನೆಯಲ್ಲಿ ಇರುವುದಕ್ಕೆ. ಆದ್ದರಿಂದ ಅವರ ತಂದೆ ಮನೆಯ ಗ್ಯಾರೇಜ್ ನಲ್ಲಿ ವಾಸ ಪ್ರಾರಂಭ. ಈ ಮನೆ ಹೆಸರು white House ಇದು ಈಗಿನ ಬೆಂಗಳೂರಿನ ಮಿಂಟೋ ಆಸ್ಪತ್ರೆ ಎದುರಿಗೆ ಇತ್ತು. ಇವರಿಗೆ ಕಮಲ ಅನ್ನುವರ ಜೊತೆ ಮದುವೆ  ಆಗಿತ್ತು ಆದರೆ ಒಟ್ಟಿಗೆ ಸಂಸಾರ ಮಾಡಿದ್ದ ಹಾಗೆ ಏನೂ ಇಲ್ಲ.    ವಾಸವಾಗಿದ್ದ ಬಹಳ ಗಲೀಜಾಗಿ ಇದ್ದ ಕೊಠಡಿಗೆ Nookಅಂತ ಹೆಸರು ಕೊಟ್ಟಿದ್ದರು. ಬರೀ  ಸಿಗರೇಟ್ ತುಂಡುಗಳು ಖಾಲಿ ಬೀರ್ ಬಾಟಲ್ ಗಳು ಮತ್ತು ಅರ್ದ ತಿಂದ ಊಟ ಮುಂತಾದವು ಇಲ್ಲಿ ಸಾಮಾನ್ಯ. ಇವರ "ದಿನ" ಶುರು ಆಗುವುದು ಸುಮಾರು ರಾತ್ರಿ ಹತ್ತು ಗಂಟೆ ಮೇಲೆ. ಬಂದ  ಸ್ನೇಹಿತರನ್ನು ಸೇರಿಸಿ ಹರಟೆ. 

        ನಾಟಕಗಳನ್ನ ಕೈಲಾಸಂ dictate ಮಾಡಿದಾಗ ಬಿ ಸ್ ರಾಮರಾಯರುಈ ರ್ ಸೇತುರಾಂ ಇಂತಹ ಸ್ನೇಹಿತರು ಬರೆಯುತ್ತಿದ್ದರು. ಅವರೇ ಯಾವತ್ತೂ ಕೂತು ಏನೂ ಬರೆಯಲ್ಲಿಲ್ಲ ಅಂತ ಪ್ರತೀತಿ.  ೧೯೧೮ ರಲ್ಲಿ ಇವರ ಮೊದಲನೆಯ ಕನ್ನಡ ನಾಟಕ ಟೊಳ್ಳು-ಗಟ್ಟಿ. ಇಲ್ಲಿಯವರೆಗೆ ಕನ್ನಡದಲ್ಲಿ ನಾಟಕಗಳು ಬರಿ ಇತಿಹಾಸ ಅಥವಾ ಪೌರಾಣಿಕ ಸಂಭಂದಿಸಿದ್ದು. ಆಧುನಿಕ ಸಮಾಜದ ಸಮಸ್ಯೆಗಳ ಬಗ್ಗೆ ಯಾರೂ ಬರದಿರಲಿಲ್ಲ. 
ಕೈಲಾಸಂ ಮೊದಲನೆಯವರುಇದಲ್ಲದೆ ಸಂಭಾಷಣೆ ಸಹಕನ್ನಡ ಮತ್ತು ಇಂಗ್ಲಿಷ್ ಮಿಶ್ರಣ. ಇದು ಕೆಲವರಿಗೆ ಬಹಳ ವಿಚಿತ್ರವಾಗಿ ಕಾಣಿಸಿತು ಆದರೆ ಈ ನಾಟಕಗಳು ಪ್ರದರ್ಶನ ಆದಮೇಲೆ ಕೈಲಾಸಂ ಹೆಸರು ನಾಡಿನಲ್ಲಿ ಹರಡಿತು. ಇವರಿಗೆ ರಂಗಭೂಮಿಯಲ್ಲಿ ಆಸಕ್ತಿ ಇದ್ದರಿಂದ ೧೯೨೮ ವಸಂತಸೇನ ಅನ್ನುವ ಮೊಟ್ಟ  ಮೊದಲನೆಯ ಕನ್ನಡ ಚಲನಚಿತ್ರ (silent )ನಟಿಸಿದರು. ನಂತರ ೧೯೩೮ರಲ್ಲಿ ವೀರ ಜಗದೀಶ ಅನ್ನುವ ತಮಿಳ್ ಚಿತ್ರದ ನಿರ್ದೇಶನ. ಇದರ ಮಧ್ಯೆ ಕೈಲಾಸಂ ಇಂಗ್ಲಿಷ್ ನಲ್ಲಿThe Burden (೧೯೩೩), Fulfilment (೧೯೩೩) ಮತ್ತು Purpose  ಮುಂತಾದವು ಇವರು ಬರೆದ ಪೌರಾಣಿಕ ನಾಟಕಗಳು ಮತ್ತು  ಕನ್ನಡದಲ್ಲಿ ಬರೆದ ನಾಟಕಗಳು ೨೦ ಇದಲ್ಲದೆ ೧೭ ಇಂಗ್ಲಿಷ್ ಕವನಗಳು ಮತ್ತು ಹಾಸ್ಯದ  ಪದಗಳು ಇವರ ರಚನೆ .   

ಲಂಡನ್ ನಲ್ಲಿ ಕೈಲಾಸಂ ತಪ್ಪದೆ ಮ್ಯೂಸಿಕ್ ಹಾಲ್ ಗಳಿಗೆ ಹೋಗುತಿದ್ದರು. "ಇಟ್ ಐಸ್ ಏ ಲಾಂಗ್ ವೆ ಟು ತಿಪ್ಪೆರಾರಿ (it is a long way to Tipperary ) ಅನ್ನುವ ಇಂಗ್ಲಿಷ್ ಪದ್ಯಕ್ಕೆ ಇವರು ಕನ್ನಡದಲ್ಲಿ "ನಮ್ಮ ತಿಪ್ಪಾರಹಳ್ಳಿ ಬಲೂ ದೂರ " ಅಂತ ಅಲ್ಲೇ ಕಟ್ಟಿ ಹಾಡಿ ಒಂದು ಪೌಂಡ್ ಸಂಭಾವನೆ ಪಡೆದರಂತೆ.  ಕೈಲಾಸಂ ಹಾಸ್ಯ ಮಾತ್ರವಲ್ಲ ಗಂಭೀರವಾದ ಅಂದರೆ serious ನಾಟಕಗಳನ್ನೂ ಬರೆದಿದ್ದಾರೆ.  ಸೂಳೆ ಮತ್ತು ಬಹಿಷ್ಕಾರ ನಾಟಕಗಳು ಸಮಾಜದ ಸಮಸ್ಯೆಗಳ ಬಗ್ಗೆ. ಆಗಿನ ಕಾಲದ ರಂಗಭೂಮಿಯ ಅನೇಕ ನಾಟಕಗಳಲ್ಲಿ ಏನೂ ತಿರುಳಿಲ್ಲ ಅಂತ ತೋರಿಸುವುದಕ್ಕೆ "ನಮ್ಕಂಪಿನಿ " ನಾಟಕದಲ್ಲಿ ಗೇಲಿ ಮಾಡಿದ್ದಾರೆ . ಇದೆ ರೀತಿ "ನಮ್ ಬ್ರಾಹ್ಮಣಿಕೆ " ಯಲ್ಲಿ  ಸಿಗರೇಟು ಸೇದುವುದು ಹೇಗೆ ಅನ್ನುವ ಮಂತ್ರದಲ್ಲಿ  ರೂಪಿಸಿದ್ದು ಆನೇಕರಿಗೆ ಇದು ಅನಾವೃಷ್ಟಿ ಅನ್ನಿಸರಬೇಕು. ಆದರೆ ಕೈಲಾಸಂ ತಮ್ಮನ್ನೇ ತಮಾಷಿ ಮಾಡಿಕೊಂಡು I am a "typical ass" ಅಂತ ಗೇಲಿ ಮಾಡುಕೊಳ್ಳುತ್ತಿದ್ದರು.   ಇವರ ನಾಟಕದಲ್ಲಿ  ಸೃಷ್ಟಿಸಿರುವ ಪಾತ್ರಗಳು ಅನೇಕಪಾತುಸಾತು ನಾಗತ್ತೆ ಇತ್ಯಾದಿ. ಶ್ರೀ M G ಶ್ರೀನಿವಾಸ್ ಅವರ ಚಿತ್ರ Simply kailawesome (https://youtu.be/oH8hVrBwbS8ದಲ್ಲಿ ಇವರೆಲ್ಲ ಬಂದು ಕೈಲಾಸಂ ಅವರನ್ನು ಅವರವರ  ಪಾತ್ರದ ಬಗ್ಗೆ ಪ್ರಶ್ನೆ ಮಾಡುವ ಸನ್ನಿವೇಶಗಳು  ಬಹಳ ಚೆನ್ನಾಗಿದೆ. ಇದರಲ್ಲಿ ಶ್ರೀನಿವಾಸ್ ಅವರೇ ಕೈಲಾಸಂ ಮತ್ತು ಸುಜನಾಸಿಂಗ್  ಮಹಿಳೆಯರ ಪಾತ್ರಗಳು 


ಕೈಲಾಸಂ ಅವರ ಒಂದು ಸಾಲಿನ ಚುಟಕಗಳು ಅನೇಕ. ಇವರ ವಿಶೇಷತೆ ತಕ್ಷಣ ಹೇಳುವ ಚಾತುರ್ಯಇಲ್ಲಿ ಹಲವು ಉದಾಹರಣೆಗಳು

ಮಹಾತ್ಮಾ ಗಾಂಧಿಯವರು   ೧೯೩೬ರಲ್ಲಿ ವಿಶ್ರಾಂತಿ ಗೆ ನಂದಿಬೆಟ್ಟದಲ್ಲಿ  ತಂಗಿದ್ದರು. ಪ್ರಸಿದ್ಧ ಸಂಗಸಂಗೀತಗಾರ ಚೌಡಯ್ಯ ನವರು ಅವರ ಮುಂದೆ ಪಿಟೀಲು ನುಡಿಸಿದರು. ಮಹಾತ್ಮರು ಪಕ್ಕದಲ್ಲಿ ಕೂತಿದ್ದ ಕೈಲಾಸಂ ಅವರನ್ನು ಈ ಸಂಗೀತಗಾರ ಯಾರು ಅಂತ ಕೇಳಿದರುಕೈಲಾಸಂ ಹೇಳಿದರು " Gandhiji you are a non violinist (nonviolence ) but Chowdaiah is a violinist "
ಜೇನುತುಪ್ಪ ದಲ್ಲಿ ಏನು ವಿಟಮಿನ್ ಇರುತ್ತೆ ಕೈಲಾಸಂ ಹೇಳಿದರು "ಇದರಲ್ಲಿ ವಿಟಮಿನ್ ಬಿ ತಿಂದರೆ ಸಿಹಾಗೆ ಬಿಟ್ಟಿದ್ದಾರೆ ವಿಟಮಿನ್ ಇ  ಬರತ್ತೆ (ಈ ಅಂದರೆ ತಮಿಳ್ ನಲ್ಲಿ ನೊಣ )
ಹಾಸ್ಯ ಲೇಖಕ  ನಾ ಕಸ್ತೂರಿ ಇವರ ಮುಂದೆ ಬಂದಾಗ ಕೈಲಾಸಂ ಇವರನ್ನ ಗಮನಸಿಲಿಲ್ಲಆಗ ಕಸ್ತೂರಿ "ನಾನು ಯಾರು ಅಂತ ಗೊತ್ತಾಗಲಿಲ್ಲವೇ" ಅಂದರಂತೆ ಕೈಲಾಸಂ ಅವರಕಡೆ ನೋಡಿ ಹೌದು ಹೌದು ವಾಸನೆ ಬಂತು !!
ಮನೆ ಹೆಸರು ಜ್ಞಾನ Villa ವಂತೆಅದು ಸರಿ ಎಲ್ಲರಿಗೂ ಇವರಿಗೆ ಜ್ಞಾನ ಇಲ್ಲ ಅಂತ  ಏಕೆ ಗೊತ್ತಾಗಬೇಕು !
 .... ಇತ್ಯಾದಿ ಅನೇಕ ಚುಟಕಗಳು 
ಇವರುಕನ್ನಡ  ಹಾಸ್ಯ ಸಾಹಿತ್ಯಕ್ಕೆ ಒಂದು ಘನತೆ ಕೊಟ್ಟಿದ್ದಾರೆ ಅಂದರೆ ಏನೂ ಉತ್ಪ್ರೇಕ್ಷೆ ಇಲ್ಲ. ಕೈಲಾಸಂ ಬರಹದಲ್ಲಿ ಹಾಸ್ಯವಿದ್ದರೂ ಇದರ ಹಿನ್ನಲೆ ಆಗಿನ ಸಮಾಜ ಮತ್ತು ಸಂಸಾರಗಳ ಅನೇಕ ಸಮಸ್ಯೆಗಳ ಬಗ್ಗೆ ಕಾಳಜಿ. ಟೊಳ್ಳು ಗಟ್ಟಿ,ಹೋಮ್ ರೂಲ್ ಅಮ್ಮವರ ಗಂಡ. ಪೋಲಿಕಿಟ್ಟಿ ಮುಂತಾದ ನಾಟಕಗಳ್ಳನ್ನ ಇಂದಿಗೂ ನೋಡಬಹುದು. ಇವರ ನೈತಿಕ ಸಂದೇಶ  ಸಮಾಜದ ಕೆಲವು ಬಿರಕುಗಳನ್ನು ಗಮನಕ್ಕೆ ತರುವುದು ಅವರ ಉದ್ದೇಶ ಅನ್ನಬಹುದು. 
ಅವರ ಕಾಲದಲ್ಲಿ ಪ್ರಶಸ್ತಿಗಳೇನೂ ಇರಲಿಲ್ಲ. ೧೯೪೫ ರಲ್ಲಿ ಮದ್ರಾಸ್ ನಲ್ಲಿ ನಡೆದ ಕನ್ನಡ ಸಮ್ಮೇಳನ ಅಧ್ಯಕ್ಯರಾಗಿ ಚಿಕ್ಕದಾದ ಆದರೆ ಬಹಳ ಪರಿಣಾಮಕಾರಿ ಭಾಷಣ ಮಾಡಿದರು 
ಇವರ ನಿಧನದ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.  ಎರಡು ದಿನಗಳ ಹಿಂದೆ ಡಾ. ಶಿವರಾಂ (ರಾ . ಶಿ ) ಕೈಲಾಸಂ ಅವರನ್ನು ತಮ್ಮ  ಮನೆಯಲ್ಲಿ  ಕೆಲವು ದಿನ ಇರಿ ಎಂದು ಕರೆದಿದ್ದರು. ಆಗ ಕೈಲಾಸಂ ಇವರ ಹತ್ತಿರ ಸಂಭಂದಿಕರಾದ ವಿ ಟಿ ಶ್ರೀನಿವಾಸನ್ ಮನೆಯಲ್ಲಿ ಇದ್ದರುಬೆಳಗ್ಗೆ ಶ್ರೀನಿವಾಸನ್ ಕಾಫಿ ಕೊಡುವುದಕ್ಕೆ ಹೋದರೆ ಕೈಲಾಸಂ ನಿಧನರಾಗಿದ್ದರು. ೧೯೪೬ ನಲ್ಲಿ ನಿಧನರಾದಾಗ ಯಾವ ಖಾಯಿಲೆ ಇರಲಿಲ್ಲ. 
 ಈ ಮಹಾನುಭಾವ ಕನ್ನಡ ನಾಡಿನಲ್ಲಿ ರಂಗಭೂಮಿಯ ಕ್ರಾಂತಿ ಯನ್ನೇ ಆರಂಭಿಸಿದರು ಎಂದರೆ ಏನೂ ಸಂಶಯವಿಲ್ಲ

Comments

  1. I am the only black spot in this white house ಎಂದರು ಕೈಲಾಸಂ. ಅವರು ಬರೆದದ್ದು 17 ನಾಟಕಗಳು, ಒಂದು ಕಥಾಗುಚ್ಛ (ತಾವರೆಕೆರೆ), 7 ಕನ್ನಡ ಕವನಗಳು, 15 ಇಂಗ್ಲಿಷ್ ಕವನಗಳು, 4 ಇಂಗ್ಲಿಷ್ ನಾಟಕಗಳು (Burden, Fulfillment, Purpose, Brahmin's Curse). ಕೋಳಿಕೆ ರಂಗವನ್ನೂ ಇಲ್ಲಿ ಸ್ಮರಿಸಬಹುದಿತ್ತು.
    ಮರಣ 23-11-1946. 23 ಮತ್ತು 24ರ ಮಧ್ಯದ ರಾತ್ರಿಯಲ್ಲಿ ಯಾವಾಗಲೋ ಪ್ರಾಣ ಹೋಗಿದೆ.

    ReplyDelete
    Replies
    1. Ramnath sir, ತಾವು ಇಲ್ಲಿಗೆ ಬಂದಾಗ ಹೇಳಿದ ಸಿಗರೇಟ್ ಬಗ್ಗೆ ಕೈಲಾಸಂ ಸಂಸ್ಕೃತ ಪದಗಳು ಮರೆಯಲಾಗದು ಮತ್ತಷ್ಟು ಕೇಳಬೇಕು ಎನಿಸುತ್ತದೆ

      Delete
  2. ಹೌದು ನಿಜ ರಮಾನಾಥ್ ಅವರೇ. ಈ ನನ್ನ ಲೇಖನದಲ್ಲಿ ಅನೇಕರನ್ನು ಪರಿಚಯ ಮಾಡಿದ್ದೇನೆ. ಉದಾಹರಣೆಗೆ ಮಾಸ್ತಿ, ರಾಜರತ್ನಂ ಮತ್ತು ನ.ಕಸ್ತೂರಿ. ನಿಮ್ಮ ಸಂಪಾದಕರು ಈ ಸಲಿ ಕೈಲಾಸಂ ಬಗ್ಗೆ ಮಾತ್ರ ಪ್ರಕಟಿಸಿದ್ದಾರೆ ಇನ್ನೂ ಮುಂದೆ ಇದೆ, ಆದ್ದರಿಂದ ಆದಷ್ಟು ಮಿತವಾಗಿದೆ

    ReplyDelete
  3. ಕೈಲಾಸಂ ಅವರಿಗೆ ಎರಡು ಹೆಣ್ಣು ಮಕ್ಕಳು . ದೊಡ್ಡ ಮಗಳು ಕಮಲಾ (ವಿವಾಹದ ನಂತರ ಕಮಲಾ ಸುಬ್ರಮಣ್ಯಂ). ಈಕೆಯೂ ಉದ್ದಾಮ ಸಾಹಿತಿ. ಇಂಗ್ಲೀಷಿನಲ್ಲಿ ಭಾಗವತ, ರಾಮಾಯಣ ಮತ್ತು ಮಹಾಭಾರತಗಳನ್ನು ರಚಿಸಿದ್ದಾರೆ. ಕೈಲಾಸಂ ಅವರ ಮಾತೃಶ್ರೀ ಅವರ ಹೆಸರೂ ಕಮಲಮ್ಮ. ಪತ್ನಿಯ ಹೆಸರೂ ಕಮಲಾ ಎಂದಿರಬಹುದೇ? ಒಟ್ಟಿನಲ್ಲಿ "ಇವರಿಗೆ ಕಮಲ ಅನ್ನುವರ ಜೊತೆ ಮದುವೆ ಆಗಿತ್ತು ಆದರೆ ಒಟ್ಟಿಗೆ ಸಂಸಾರ ಮಾಡಿದ್ದ ಹಾಗೆ ಏನೂ ಇಲ್ಲ. " ಎಂಬ ವಾಕ್ಯ ಎರಡು ವಿಧದಲ್ಲಿ ಸರಿಯಲ್ಲ ಎಂದು ತೋರುತ್ತದೆ.
    ಕೈಲಾಸಂ ಅವರು ತಮ್ಮ ಕಾಲೇಜುವರೆಗಿನ ವಿದ್ಯಾಭ್ಯಾಸ ಮಾಡಿದ್ದು ಹಳೆಯ ಮೈಸೂರು ಸಂಸ್ಥಾನದಲ್ಲೇ. ಡಿಗ್ರಿ ಪದವಿ ಮಾತ್ರ ಮದ್ರಾಸು ವಿಶ್ವವಿದ್ಯಾನಿಲಯದಿಂದ.
    ಕೈಲಾಸಂ ಅವರಿಗೆ ಇಬ್ಬರು ತಮ್ಮಂದಿರು. ಒಬ್ಬ ತಮ್ಮ ತ್ಯಾಗರಾಜನ್ ಅತ್ಯಂತ ಪ್ರತಿಭಾವಂತ. ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸಂಸ್ಥಾನದಲ್ಲೇ ಮೊದಲ ಸ್ಥಾನ ಗಳಿಸಿದ ಕೆಲವು ದಿನಗಳಲ್ಲೇ ಈಜಿನ ಆಕಸ್ಮಿಕದಲ್ಲಿ ಮೃತರಾದರು. ಇನ್ನೊಬ್ಬ ತಮ್ಮ ಕೃಷ್ಣಸ್ವಾಮಿ, ಪ್ರೊ. ವಿ. ಸೀತಾರಾಮಯ್ಯನವರ ಸಹಪಾಠಿ.
    ಬಾಪೂಜಿ ಅವರ ಮೇಲೆ ರಚಿಸಿದ "The Recipe" ಎಂಬ English Sonnet ತುಂಬ ಚಮತ್ಕಾರವಾಗಿದೆ.
    ಕೈಲಾಸಂ ಮತ್ತು ಅವರ ಕೃತಿಗಳನ್ನು ಮರುನೆನಪು ಮಾಡಿಕೊಟ್ಟ ಶ್ರೀ ರಾಮಮೂರ್ತಿ ಅವರಿಗೆ ಕೃತಜ್ಞತೆಗಳು.

    ReplyDelete
    Replies
    1. ಡಾ ಮಧುಸೂದನ್ ಸಾರ್ ಮತ್ತಷ್ಟು ಮಹತ್ವದ ಮಾಹಿತಿಗಾಗಿ ಧನ್ಯವಾದಗಳು

      Delete
  4. ಕನ್ನಡದಲ್ಲಿ ಹಾಸ್ಯ ಗ೦ಗೆ ಹರಿಸಿದ ಕನ್ನಡಕ್ಕೊಬ್ಬರೆ ಕಡಲ ಸವಿವರ ಪರಿಚಯ ಮಾಡಿ ಪರಿಚಯ ತುಂಬಾ ಚೆನ್ನಾಗಿತ್ತು.ಉಳಿದ ಸಾಹಿತಿಗಳ ಪರಿಚಯಕ್ಕಾಗಿ ಕಾಯುತ್ತಿದ್ದೇವೆ 🙏

    ReplyDelete
  5. please excuse the spelling mistakes. Cant edit my comment.🙏

    ReplyDelete
  6. ನಮ್ಮ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕಾದ ಎಷ್ಟೊಂದು ಮಾಹಿತಿಗಳಿವೆ ...ಧನ್ಯವಾದಗಳು ಹೀಗೆ ಮತ್ತಷ್ಟು ಬರಲಿ ಬರವಣಿಗೆಗೆಗಳು

    ReplyDelete

Post a Comment