ಹಾಲುಂಡ ತವರನು ಏನೆಂದು ಹರಸಲಿ?
ಅನುಭವ - -ಅನು ಶಿವರಾಂ
"ಯಾಕಮ್ಮ ಇಷ್ಟು ಬೇಗ ಎದ್ದು ಬಿಟ್ಟೆ? ಇನ್ನಷ್ಟು ಹೊತ್ತು ಹಾಯಾಗಿ ಮಲಗಿರಬಾರದಾ ? " ಹಾಸಿಗೆಯೆಲ್ಲೆ ಮಲಗಿ ಬೆಂಗಳೂರು ಆಕಾಶವಾಣಿಯಿಂದ ಬರುತ್ತಿದ್ದ ಗೀತಾರಾಧನದ ಹಾಡುಗಳನ್ನು ಏಳು ಘಂಟೆಯವರೆಗೂ ಕೇಳಿ, ಫಿಲ್ಟರ್ ಕಾಫಿಯ ಪರಿಮಳದ ಆಸೆಗೆ ಎದ್ದು ಬಂದಿದ್ದವಳಿಗೆ ಅಪ್ಪನ ಅಕ್ಕರೆಯ ಧ್ವನಿ ಕೇಳಿ ಸಂಕೋಚವಾಯ್ತು. ಸ್ನಾನ ಮಾಡಿ ಶುಭ್ರ ಧೋತ್ರ ಉಟ್ಟು ದೇವರ ಪೂಜೆಗೆ ತಯಾರಾಗಿ ನಿಂತಿದ್ದ ಅಪ್ಪನ ಕಣ್ಣುಗಳಲ್ಲಿ ವಾತ್ಸಲ್ಯ ,ಸ್ನೇಹಗಳು ದೀಪಗಳಂತೆ ಹೊಳೆಯುತ್ತಿದ್ದವು
"ಇವತ್ತು ಎಣ್ಣೆ ನೀರು ಹಾಕಿಕೋ ಎಲ್ಲೂ ಬಿಸಿಲಲ್ಲಿ ಅಲೆಯೋಕ್ಕೆ ಹೋಗಬೇಡ"ಕೈಗೆ ಕಾಫಿ ಕೊಡ್ಡುತ್ತ ಅಕ್ಕರೆಯಿಂದ ಗದರಿದರು ಅಮ್ಮ.
ಇದು ಪ್ರತಿ ವರುಷವೂ ನಾನು ಊರಿಗೆ ಹೋದಾಗ ನಡೆಯುವ ಸಂಭಾಷಣೆಗಳು.. ಮದುವೆಯಾಗಿ ದಶಕಗಳೇ ಕಳೆದು, ನಡು ವಯಸ್ಸು ಮುಟ್ಟಿದ್ದರೂ ಪ್ರೀತಿಯ ತವರಿನಲ್ಲಿ ನಾನು ಎಂದಿಗೂ, ಎಂದೆಂದಿಗೂ ಚಿಕ್ಕ ಹುಡುಗಿಯೇ. ಯಾವುದೇ ಚಿಂತೆ, ಆತಂಕಗಳಿಲ್ಲದ ಬಾಲ್ಯದ ಸುಂದರ ಲೋಕಕ್ಕೆ ಕೊಂಡೈಯುವುದು ತವರಿನಲ್ಲಿ ಕಳೆಯುವ ಆ ದಿನಗಳು.
ತವರಿನೊಡನೆ ಹೆಣ್ಣು ಮಕ್ಕಳಿಗೆ ಇರುವ ಅಪೂರ್ವ ಸಂಬಂಧವನ್ನು ಪುರಾಣ, ಇತಿಹಾಸ, ಜಾನಪದ ಎಲ್ಲದರಲ್ಲೂ ಹತ್ತು ಹಲವಾರು ತರದಲ್ಲಿ ಬಣ್ಣಿಸಿದ್ದರೂ ಪ್ರತಿ ಹೆಣ್ಣಿಗೂ ಅದೊಂದು ಪ್ರತ್ಯೇಕ, ವಿಶೇಷ, ವಿಶಿಷ್ಟ ಅನುಭವ ತಂದೆ ತಾಯಿಯರಲ್ಲದೆ ಒಡ ಹುಟ್ಟಿದವರ ಪ್ರೀತಿ, ವಿಶ್ವಾಸಗಳ ನೆರಳಿದ್ದರಂತೂ ಆ ತಂಪಿನ ತವರು ಸ್ವರ್ಗ ಸಮಾನವೇ ಸರಿ.
ಯಾವ ಜನ್ಮದ ಪುಣ್ಯವೋ, ಯಾವ ದೇವರ ಕೃಪೆಯೋ, ಅಂಥ ಒಂದು ಸುಂದರ, 'ಸೌಜನ್ಯ'ಪೂರಿತ ತವರಿನಲ್ಲಿ ಮಗಳಾಗಿ ಹುಟ್ಟಿದೆ. ಗಂಡು ಮಕ್ಕಳು ಬೇಕೆಂದು ವ್ರತ, ಪೂಜೆ, ಉಪವಾಸ ಮಾಡುತ್ತಿದ್ದ ಕಾಲದಲ್ಲಿ, ಹೆಣ್ಣು ಹುಟ್ಟಿತೆಂದು ಸಿಹಿ ಹಂಚಿದ ತಾಯಿ ತಂದೆಯರ ಮುದ್ದಿನ ಮಗುವಾಗಿ ಬೆಳೆದೆ. ಅಪ್ಪನ ಸೈಕ್ಕಲ್ಲಿನ ಮುಂದಿನ ಪುಟ್ಟ ಸೀಟಿನಲ್ಲಿ ಕುಳಿತು ಮೈಸೂರಿನ ರಾಜ ಬೀದಿಗಳಲ್ಲಿ ದಿನಾ ಸಂಜೆ ಮೆರವಣಿಗೆ ಹೋಗುತ್ತಿದ್ದ ನಾನು ಯಾವ ರಾಜಕುಮಾರಿಗೂ ಕಡಿಮೆ ಇರಲಿಲ್ಲ!
ಅಂದಿನ ದಿನಗಳಲ್ಲಿ ಹೆಚ್ಚು ಹೆಂಗಸರು ಕೆಲಸಕ್ಕೆ ಹೋಗುತ್ತಿರಲಿಲ್ಲ ಹಾಗಾಗಿ ಡೇ ಕೇರ್ ಸೌಲಭ್ಯಗಳೂ ಇರಲಿಲ್ಲ. ಎರಡು ವರ್ಷದ ನನ್ನನ್ನು ಕಾನ್ವೆಂಟ್ ಸ್ಕೂಲಿಗೆ ಸೇರಿಸಿ, ನನ್ನನೂ , ಮನೆಯನ್ನೂ, ತಮ್ಮ ಶಾಲೆಯ ಕೆಲಸವನ್ನೂ ನಿಭಾಯಿಸಿದ ಜಾಣೆ ನನ್ನಮ್ಮ.
ನಾಲ್ಕು ವರ್ಷದ ನನಗೆ ನನ್ನ ಜೀವನದ ಅತ್ಯಮೂಲ್ಯ ಉಡುಗೊರೆ ದೊರಕಿದ್ದು, ಕೆಂಪಗೆ, ಮುದ್ದಾಗಿದ್ದ ಪುಟ್ಟ ತಂಗಿಯನ್ನು ನನ್ನ ತೊಡೆಯ ಮೇಲೆ ಮಲಗಿಸಿದಾಗ.
ಇಬ್ಬರು ಹೆಣ್ಣು ಮಕ್ಕಳಿಗೂ ಅಂಗಡಿ ಅಂಗಡಿ ಹುಡುಕಿ, ಬಣ್ಣ,ಬಣ್ಣದ ಬಟ್ಟೆಗಳನ್ನು ಖುದ್ದಾಗಿ ಆರಿಸಿ, ಹೊಲಿಸಿ ಹಾಕಿ ನೋಡಿ ಹಿಗ್ಗುತ್ತಿದ್ದರು ಅಪ್ಪ. ಆ ಅಭ್ಯಾಸ ಇಂದಿಗೂ ನಡೆದು ಬಂದಿದೆ; ಮೊನ್ನೆ ಮೊನ್ನೆ ಅಪ್ಪ ನಮ್ಮಿಬ್ಬರನ್ನೂ ಕರೆದುಕೊಂಡು ಹೋಗಿ , ತಾವೇ ಒಪ್ಪಿ ಆರಿಸಿ ಸೀರೆ ಕೊಡಿಸಿದಾಗ ಮೈ ತುಂಬಾ ಅವರ ವಾತ್ಸಲ್ಯವನ್ನು ಹೊದ್ದ ಧನ್ಯತಾ ಭಾವ. ಇಬ್ಬರು ಹೆಣ್ಣುಮಕ್ಕಳ ಮದುವೆಯ ಶಾಪಿಂಗ್ ಮೇಲೆ ಅಪ್ಪನ ಮುತುವರ್ಜಿಯ ಛಾಪು! ನಮ್ಮ ಮನೆಯ ಅದೆಷ್ಟೋ ಸಾಮಾನುಗಳು ಅವರ ಅಕ್ಕರೆಯ ಆಯ್ಕೆಯ ಪ್ರತಿರೂಪ.
ಅಮ್ಮನಿಗೆ ಮಗ್ಗಿ, ಲೆಕ್ಕ ಕಲಿಸುವ ಸಂಭ್ರಮ. ಇಡೀ ಪ್ರಪಂಚದ ಪರಿಚಯ ಮಾಡಿ ಕೊಟ್ಟಿತ್ತು ಅಮ್ಮ ನಮಗೆಂದೇ ಮಾಡುತ್ತಿದ್ದ ಚಿತ್ರ ತುಂಬಿದ ಆಲ್ಬಂಗಳು! ಅಡಿಗೆ ಮನೆಯಲ್ಲಿ ಕೂರಿಸಿಕೊಂಡು ಉಕ್ತಲೇಖನ ಹೇಳಿ ಅಮ್ಮ ಬೆಳೆಸಿದ ಭಾಷೆ,ಭಾಷಾಪ್ರೇಮ ಇಂದಿಗೂ ಮಿಡಿಯುತ್ತಿದೆ ನಮ್ಮಿಬ್ಬರೊಳಗೆ. ಜೀವನದ ಪ್ರಾಕ್ಟಿಕಲ್ ಪಾಠಗಳನ್ನು ಕಲಿಸಿ, ಸಮಯಸ್ಫೂರ್ತಿ, ಧೈರ್ಯದಿಂದ ಬದುಕನ್ನು ಎದುರಿಸುವ ಶಕ್ತಿ ಕೊಟ್ಟಿದ್ದು ಅಮ್ಮನ ಬದುಕಿನ ಉದಾಹರಣೆ. ಹೊಸ ಊರು, ದೇಶಗಳಿಗೆ ಹೊಂದಿಕೊಳ್ಳುವ ಅಡಾಪ್ಟಬಿಲಿಟಿ ಬಂದಿದ್ದು ಅಮ್ಮನಿಂದಲೇ.
ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅವರು ಕೊಟ್ಟ ಪ್ರಾಮುಖ್ಯತೆ, ಸೌಲಭ್ಯ ಅಂದಿನ ದಿನಗಳಲ್ಲಿ ಅತಿ ಅಪರೂಪ. ಹಡಗು ನೋಡಲೆಂದು ಮಂಗಳೂರು, ಬೆಟ್ಟ , ಕಾಡು ನೋಡಲೆಂದು ಊಟಿ. ಚಿಕ್ಕಮಂಗಳೂರು ಎಂದರೆ ಬರೀ ಅಜ್ಜಿ ಮನೆಯಲ್ಲ ಇತಿಹಾಸ, ಬೂಗೋಳಗಳ ಪಠ್ಯ ಪುಸ್ತಕವೇ ತೆರೆದಿಟ್ಟಂತೆ.ನದಿ, ಕಾಡು, ಬೆಟ್ಟ, ಪ್ರಕೃತಿಯ ಚೆಲುವನ್ನು ಪರಿಚಯಿಸಿದರು ಅಮ್ಮ. ತ್ರೆಪ್ಟಿನ್ ಬಿಸ್ಕಿಟ್, ಬೌರ್ನ್ವಿಟಾ, ಹಾರ್ಲಿಕ್ಸ್ ಆರೈಕೆ ಧಾರಾಳವಾಗಿ ಮಾಡಿದರು ಅಪ್ಪ
ಅಪ್ಪನ ಹೆಚ್ಚಿನ ವಿದ್ಯಾಭ್ಯಾಸ,ಅಮ್ಮನ ಸ್ನಾತಕೋತರ ಪದವಿ, ಕೆಲಸ, ವರ್ಗ ಇತ್ಯಾದಿ ಬದುಕಿನ ಏರು ಪೇರುಗಳಲ್ಲಿ ನಮ್ಮ ಪುಟ್ಟ ಕುಟುಂಬ ತೇಲಿದರೂ ನಮ್ಮ ಅಕ್ಕ ತಂಗಿಯರ ಕೂದಲೂ ಕೊಂಕದಂತೆ ನಮ್ಮ ಬಾಲ್ಯ ಸಾಗಿತ್ತು. ಪುಟ್ಟ ಕುಟುಂಬ ಎಂದೆನೇ ? ನಮ್ಮ ಕುಟುಂಬ ಎಂದೂ ಪುಟ್ಟದಾಗಿರಲಿಲ್ಲ. ಅಮ್ಮನ ಅಣ್ಣ, ಅಕ್ಕಂದಿರ ಮಕ್ಕಳು , ಅಪ್ಪನ ಅಕ್ಕಂದಿರು,ಪರೀಕ್ಷೆಗೆ ಓದಲೆಂದು ಬಂದ ವಿದ್ಯಾರ್ಥಿಗಳು , ಒಟ್ಟಿನಲ್ಲಿ ಮನೆಯಲ್ಲಿ ಯಾರಾದರೂ ಇದ್ದೆ ಇರುತ್ತಿದ್ದರು. ಹಾಗಾಗಿ ಒಟ್ಟು ಕುಟುಂಬವಲ್ಲದಿದ್ದರೂ ಸಹ ಕುಟುಂಬ, ಸಹ ಬಾಳ್ವೆಯ ಅನುಭವ ಇಬ್ಬರಿಗೂ ದೊರಕಿತು. ಬಹುಶ ಅದೇ ಮುಂದೆ ಒಟ್ಟು ಕುಟುಂಬದಲ್ಲಿ ಹೊಂದಿಕೊಂಡು ಸಂಸಾರ ಮಾಡುವ ಕಲಿಸಿತೇನೊ?
ಕಾಲೇಜಿನಲ್ಲಿ, ಪ್ರವಾಸ, ಸ್ಪರ್ಧೆ, ನಾಟಕ, ಇತ್ಯಾದಿ ಇತ್ಯಾದಿ ಹತ್ತು ಹಲವು ಹವ್ಯಾಸಗಳನ್ನುಹಚ್ಚಿಕೊಂಡಾಗಲು ಅವರ ಪ್ರೋತ್ಸಾಹ ಇದ್ದೆ ಇರುತಿತ್ತು ನಮ್ಮ ಅಕ್ಕ ತಂಗಿಯರಿಬ್ಬರಿಗೂ. ಓದಿನ ವಿಷಯದಲ್ಲಿ ಕಟ್ಟು-ನಿಟ್ಟಿದ್ದರೂ, ಶಾಲಾ ಕಾಲೇಜಿನ ಪ್ರವಾಸ,ಸಿನೆಮಾ, ನಾಟಕ, ಗಣೇಶನ ಹಬ್ಬದ ಆರ್ಕೆಸ್ಟ್ರಾ,ರಾಮನವಮಿಯ ಸಂಗೀತೋತ್ಸವ,ಗೆಳೆತಿಯೊರಡನೆ ಒಡನಾಟ ಎಲ್ಲ ವಿಷಯಕ್ಕೂ ಹುಮ್ಮಸಿನಿಂದಲೇ ಪ್ರೋತ್ಸಾಹಿಸುತ್ತಿದ್ದರು. ಒಂದು ಕಾಲದಲ್ಲಿ ನಮ್ಮ ಮನೆಗೆ ಬಂದು ಹೋಗುತ್ತಿದ್ದ ಗೆಳತಿಯರ ಹಿಂಡನ್ನು ನೋಡಿ ಯಾರೋ ಇದು ಲೇಡಿಸ್ ಹಾಸ್ಟೆಲ್ ಇರಬಹುದು ಎಂದು ಹುಡುಕಿಕೊಂಡು ಬಂದಿದ್ದರು!
ಇಬ್ಬರು ಸುಸಂಕೃತ, ಸುಶಿಕ್ಷಿತ , ಸಭ್ಯ, ಸುಂದರ (?)ಅಳಿಯಂದಿರು ಸಿಕ್ಕಿರುವುದು ಅವರ ಪೂಜೆಯ ಫಲವೆಂದೇ ನನ್ನ ನಂಬಿಕೆ. ಎಲ್ಲರಿಗೂ ಸಿಗುವುದಿಲ್ಲ ಬಿಡಿ ಸೌಮ್ಯ ಸ್ವಭಾವದ ರೆಡಿ ಮೇಡ್ ಗಂಡು ಮಕ್ಕಳು!
ಹಾಗೆಂದು ನಮ್ಮ ಕುಟುಂಬ ಬರಿ ಸಿಹಿ - ಸಪ್ಪೆಯೆಲ್ಲ. ಅಪ್ಪನ ಅಕಾರಣ, ಸಕಾರಣ ಮುಂಗೋಪ, ಅಮ್ಮನ ದುಡುಕು ಮಾತು, ನನ್ನ ಮೊದ್ದುತನ, ತಂಗಿಯ ಚಂಚಲತೆಯ ಒಗ್ಗರಣೆ ಸೇರಿ ನಮ್ಮ ಮನೆಯ ಅಡಿಗೆಯೂ ಒಂಥರಾ ರುಚಿ. ನವರಸಗಳಿಂದ ಸೊಗಸಲ್ಲವೇ ಜೀವನ?
ಈ ಅಜ್ಜಿ ತಾತ ತಮ್ಮ ಮೂರು ಮೊಮ್ಮಕ್ಕಳ ಮೇಲೆ ಸುರಿಸುವ ಪ್ರೀತಿ ಗಿನ್ನಿಸ್ ದಾಖಲೆ ಆಗಬಹುದೇನೋ,ಅಷ್ಟು ಪ್ರೀತಿ, ಅಷ್ಟು ಮುದ್ದು!! ಎಷ್ಟೇ ದೊಡ್ಡವರಾದರೂ ಮಕ್ಕಳ ಮೇಲೆ, ಮೊಮ್ಮಕ್ಕಳ ಮೇಲಿನ ಕಾಳಜಿ ಸ್ವಲ್ಪವೂ ಕಡಿಮೆಯಾಗಿಲ್ಲ. ಆಧುನಿಕ ಬದುಕಿನ ಸಂಘರ್ಷಗಳನ್ನು ಅರ್ಥಮಾಡಿಕೊಂಡು ಮೊಮ್ಮಕ್ಕಳ ಓದು, ಕೆಲಸ, ಹವ್ಯಾಸಗಳಿಗೆ ಸ್ಪಂದಿಸುವ ಮನೋಭಾವ, ಇಳಿ ವಯಸಿನಲ್ಲಿ ತಂತ್ರಜ್ಞಾನ ಕಲಿತು ಅವರೊಡನೆ ವಿಚಾರ ವಿನಿಮಯ ಮಾಡುವ ದಕ್ಷತೆ!
ವರಪ್ರದ ವೆಂಕಟೇಶ ಹಾಗೂ ಕುಲದೈವ ಶ್ರೀಕಂಠೇಶ್ವರನ ಸಂಪೂರ್ಣ ಅನುಗ್ರಹಕ್ಕೆ ಪಾತ್ರಾರಾಗಿದ್ದಾರೆ ಈ ಹಿರಿಯ ದಂಪತಿಗಳು. ಬೆಂಗಳೂರಿನ ದೇವಗಿರಿಯ ವೆಂಕಟೇಶ ದೇವಾಲಯ ಹಾಗೂ ಬೆಂಗಳೂರಿನ ಸಮೀಪನಾರಾಯಣ ಹೃದಯಾಲಯದ ಬಳಿಯ ನಾರಾಯಣಘಟ್ಟದಲ್ಲಿ ಹೊಸದಾಗಿ ಜೀರ್ಣೋದ್ದಾರವಾಗಿರುವ ನಂಜುಂಡೇಶ್ವರನ ದೇವಾಲಯ, ಈ ಎರಡೂ ದೇವಾಲಯಗಳಲ್ಲಿ ಸೇವೆ ಸಲ್ಲಿಸುವ ಸದವಕಾಶ, ದೇವಗಿರಿಯ ಪದತಲದಲ್ಲಿ ಸುಯೋಗದ ವಾಸ. ದೊಡ್ಡ ಪರಿವಾರದ ಪ್ರೀತಿಯ ಬಂಧು -ಭಾಂದವರು, ಅಕ್ಕರೆಯ ನೆರೆ ಹೊರೆ, ಅಪಾರ ಸ್ನೇಹಿತ ಬಳಗ - ಇವರೆಲ್ಲರ ಸ್ನೇಹ ವಿಶ್ವಾಸಗಳಿಂದ ತುಂಬಿ ಕಂಗೊಳಿಸುತ್ತಿದೆ ನಮ್ಮ ಮನೆ 'ಸೌಜನ್ಯ'ದ ಅಂಗಳ. ಅಪ್ಪ- ಅಮ್ಮ ಇಬ್ಬರ ಸಾಮಾಜಿಕ ಕಳಕಳಿ, ದೇಶ ಪ್ರೇಮ, ಕರ್ತವ್ಯ ಪ್ರಜ್ಞೆ,ಪರಿಸರ ಪ್ರೀತಿ , ನೈತಿಕತೆ, ಉದಾರತೆ ಇದನ್ನು ನೋಡಿ ಬೆಳೆದೆವು. ಈ ಗುಣಗಳು ನಮ್ಮಲ್ಲೂ ಬೆಳೆದು ಮುಂದುವರಿಯಲಿ , ಮುಂದಿನ ಪೀಳಿಗೆಗೆ ಹರಿಯಲಿ ಎಂಬ ಆಸೆ.
ಈ ಮಮತೆಯ ಮಡಿಲನ್ನು ಬಿಟ್ಟು, ಅಪಾರ ವಾತ್ಸಲ್ಯವನ್ನು ಮಡಿಲಕ್ಕಿಯಲ್ಲಿ ಕಟ್ಟಿಕೊಂಡು, ಅಶ್ರು ಬಿಂದುಗಳ ಆಶೀರ್ವಾದ ಪಡೆದು, ಸವಿ ನೆನಪುಗಳ ಬುತ್ತಿ ಕಟ್ಟಿಕೊಂಡು ಹೊರಟವಳು, ಹಾಲುಂಡ ತವರನ್ನು ಏನೆಂದು ಹರಸಲಿ?
ಈಗ ತಾನೇ ಬೇಸಿಗೆಯ ರಜ ಮುಗಿಸಿ, ತವರಿನ ತಂಪನ್ನು ಬಿಟ್ಟು ವಾಪಸ್ ಬರುತ್ತಿರುವ ಎಲ್ಲ ಹೆಣ್ಣು ಮಕ್ಕಳದ್ದೂ ಇಂತಹದ್ದೇ ಅನುಭವ ಇರಬಹುದಲ್ಲವೇ?

Heartfelt recollections - beautifully written.
ReplyDeleteThank you for your remark. Thoughit is limited to one family,I think it is a universal experience for many women.
Deleteತುಂಬಾ ಚೆನ್ನಾಗಿ ಇದೆ ಅನು. ಕಣ್ಣ ಮುಂದೆ ಚಿತ್ರಿಸಿದಂತಿದೆ ನಿನ್ನ ಆ ಬರವಣಿಗೆ. ನಿನ್ನ ಜೀವನದ ಪ್ರತಿಯೊಂದು ಅನುಭವಗಳನ್ನು ಅಕ್ಷರದಲ್ಲಿ ಮೂಡಿಸುತ್ತಿರುವೆ. ಇದಕ್ಕೂ ನಿಮ್ಮ ಅಮ್ಮನೆ ಪ್ರೇರಣೆ ಇರಬೇಕು. ಹೀಗೆ ಮುಂದುವರೆಯಲಿ. ನಮಗೂ ಓದುವ ಸೌಲಭ್ಯ ದೊರಕಲಿ
ReplyDeleteತುಂಬು ಮನದ ಧನ್ಯವಾದಗಳು. ನಿಮ್ಮ ಹೆಸರು ತಿಳಿದರೆ ಚೆನ್ನ 😊
DeleteVery beautifully written...
ReplyDeleteGood job Anu
Nicely written Anuavare. Got me reminising my past as an only child of doting parents
ReplyDeleteKeep writing please!
This is Sowmya btw.
DeleteThanks so much for your response Soumya.These words of encouragement mean a lot to me.
Deleteನಮಸ್ತೆ ಅನುವರೇ,
ReplyDeleteಒಳ್ಳೆಯ ಲೇಖನ.ಸುಲಲಿತವಾದ ಬರವಣಿಗೆ.
ಮೈಸೂರಿನ ತುಂಬಾ ಜನ ,ಚೆನ್ನಾಗಿ ಬರೀತಾರೆ.ಅಲ್ಲಿಯ ಗಾಳಿಯೇ ಅಂತಹದೇ?
ತಮ್ಮ ಲೇಖನ ತುಂಬಾ ಸೊಗಸಾಗಿದೆ. ಅನುಭವಗಳನ್ನು ಓದುತ್ತಿರಲು ಕಣ್ಣಿನ ಮುಂದೆ ಭಾಸವಾಗುವಂತಿದೆ. ಕರುಣೆ, ಪ್ರೀತಿ ಎಲ್ಲವೂ ಮನಮುಟ್ಟುವ ಸನ್ನಿವೇಶ ಮತ್ತು ಅವುಗಳ ವಿವರಣೆ ಓದಲು ಖುಷಿ ಆಗುತ್ತದೆ.
ReplyDeleteಲೇಖನಕ್ಕೆ ಪ್ರತಿಕ್ರಿಯಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ,🙏
ReplyDelete