ಬರುವಿರಾ ನನ್ನೊಡನೆ ನೀವೆಲ್ಲ ಉತ್ತರದ ಆ ದೇವ ಭೂಮಿಗೆ ?
ನಾಲ್ಕು ಧಾಮಗಳಲ್ಲೂ ಹರಿವ ಪುಣ್ಯ ನದಿಗಳ ತವರಿಗೆ?
ಹಿಮವಂತನ ಭವ್ಯ, ಶ್ವೇತ ಅರಮನೆಯಲಿ ಬೆಳೆಯುತಿಹ
ಸುಂದರ ಬಾಲಿಕೆಯರ ಕತೆ ಹೇಳುವೆ ಇಂದು ನಾ ನಿಮಗೆ .
ಅರಮನೆಯ ಬಲ ಕೋಣೆಯಲ್ಲಿ ಅಕ್ಕ ಭಾಗೀರಥಿ, ಎಡಬದಿಯಲ್ಲಿ ತಂಗಿ ಯಮುನೆ
ಮಧ್ಯದ ಅಂಗಳದಲ್ಲಿ ನಲಿದಿಹರು ಮಂದಾಕಿನಿ, ಸರಸ್ವತಿ, ಅಲಕನಂದೆಯರು
ಅರಮನೆಯ ತುಂಬೆಲ್ಲ ಇವರ ಕಾಲ್ಗೆಜ್ಜೆಯ ಝೇಂಕಾರ, ನಗುವಿನ ಕಲಕಲ ನಿನಾದ.
2.ಋತು ಚಕ್ರ ಉರುಳಿ, ಬೆಳೆದಿಹರು ಈ ಎಳೆ ಬಾಲೆಯರು,
ಹಿಮವಂತ – ಮೈನೆಯರ ಮಮತೆ ಮೈದುಂಬಿ
ಕಣ್ಣಿಗೆ ಸೊಗಸು, ಮನಕ್ಕೆ ಮುದ ನೋಡಲು ಇವರ ಆಟ ಪಾಟ
ಬಂಡೆಯಿಂದ ಬಂಡೆಗೆ ಹಾರಿ, ಧುಮುಕ್ಕುತ್ತಾ ಭೋರ್ಗರೆದು
ಮುಗಿಲ ಮುಟ್ಟುವ ಮರಗಳ ನಡುವೆ ನುಸುಳಿ
ಗುಹೆಗಳ ಕೊರೆದು, ಕಂದರಗಳ ದಾಟಿ, ಗವಿಯೊಳು ಹೊಕ್ಕು
ಆಡಿದ ಕಣ್ಣಾಮುಚ್ಚಾಲೆ ಆಟದಲಿ ಕಳದೇ ಹೋದಳು ಸರಸ್ವತಿ
ಮುಂದೆ, ಬಹು ದೂರ, ಪ್ರಯಾಗದಲಿ, ಗಂಗ ಯಮುನೆಯರ ಅವಳು ಸೇರಿದಾಗ
ಹಿಮರಾಜನಂತೆ ನಮ್ಮ ಮನಕ್ಕೂ ಮುದ, ನೆಮ್ಮದಿಯ ನಿಟ್ಟುಸಿರು.
ತರುಣಿ ಭಾಗೀರಥಿಯೋ ಬಲು ಜೋರು ಹುಡುಗಿ
ಯಾರಿಗೂ ಬಗ್ಗದ ಹಟಮಾರಿ ಬೆಡಗಿ;
ದುಡುಕಿ ಓಡುವಳು, ರಭಸದಿಂ ಮುನ್ನುಗಿ ,
ಗಿರಿ ಶಿಖರಗಳ ಮೇಲಿನಿಂದ ಬೀಳುವಳು ಜಲಪಾತವಾಗಿ.
ಇವಳ ಹಟ್ಟದ ಸ್ವಭಾವಕ್ಕೆ ಹೆದರಿ,ಕರೆಸಿದರು ಶಿವನನ್ನು
ಮಹಾದೇವನೊಬ್ಬನೇ ಮಣಿಸಬಲ್ಲ ಈ ತುಂಟಿಯನ್ನು
ತನ್ನ ಜಟೆಯೊಳಗೆ ಕಟ್ಟಿ ಹಿಡಿದಿಟ್ಟನು ಶಿವ
ಅಲುಗಾಡದಂತೆ ಚಂಚಲೆ ಭಾಗೀರಥಿಯನ್ನು.
ಪ್ರಕೃತಿ, ಪುರುಷರ ಸಮಾಗಮ, ಹೊಸ ಸೃಷ್ಟಿಯ ಸಂಭ್ರಮ.
ಶಿವನ ಸ್ಪರ್ಷಕೆ ಕರಗಿದಳು ನವ ಯುವತಿ ಭಾಗೀರತಿ.
ನಾಚಿ, ನಗುತ್ತಾ, ಮೆಲ್ಲನೆ ಇಳಿದಳು ಹರನ ಮುಡಿಯಿಂದ,
ಸಂಭ್ರಮದಿ ಸಾಗಿದಳು ಸೇರುತ್ತಾ ತನ್ನ ಸೋದರಿಯರ ,
ಪ್ರತಿ ಪ್ರಯಾಗದಲ್ಲೂ ಮತ್ತಷ್ಟು ಹಿರಿದಾಗಿ ಬೆಳೆದು;
ಎಳೆತನದ ತುಂಟಾಟ ಮೀರಿ ಭಾಗೀರಥಿ--ಗೃಹಿಣಿ ಗಂಗೆಯಾದಳು, ಹರಿದ್ವಾರದಲ್ಲಿ .
ರಭಸ ಕಳೆದು ಶಾಂತಳಾಗಿ , ಹರಸಿ ಜನರ ಹರಿದಳು,
ಪುಣ್ಯ ಕ್ಷೇತ್ರ ಕಾಶಿಯಲ್ಲಿ, ಜನರ ಪಾಪ ತೊಳೆದಳು.
ಬಡವ, ಬಲ್ಲಿದ ಭೇದವಿಲ್ಲದೆ ಎಲ್ಲರಿಗೂ ಒಲಿದಳು,
ನೆಲವ ಹನಿಸಿ, ಫಸಲ ಬೆಳಸಿ ಅನ್ನದಾತೆಯಾದಳು,
ಕೋಟಿ ಜನರ ತಾಪ ಕಳೆದು ಗಂಗಾ ಮಾತೆಯಾದಳು .
ಬಾ ತಾಯಿ ಎನ್ನೊಳಗೂ, ಎನ್ನ ಅಂತರಂಗದ ಗಂಗೆಯಾಗು
ತೊಳೆ ಮನದ ಕಲ್ಮಶವ , ಕಳೆ ಅದರ ಸಂತಾಪವ.
ಹರಸು ತಾಯೇ ನಿನ್ನಂತೆಯೇ ಸಮಚಿತ್ತ ಪ್ರವೃತಿಯ,
ಬಂಧ ಕಳಚಿ , ಪಡೆಯಲಿ ಜೀವ ನಿನ್ನ ಸಾಯುಜ್ಯವ .
ರಚನೆ: ಜೆ.
ಎಸ್. ಗಾಂಜೇಕರ, ಕುಮಟಾ (ಉ. ಕನ್ನಡ.)
1
ಏಕೀ ಬೇಕು
ಈ ವೇದನೆ
ನೀ ನನ್ನ
ತಿದ್ದದೇ
ನಾ ನಿನ್ನ
ತಿದ್ದದೇ
2
ರಾತ್ರಿ ನಿನಗಾಗಿ
ಸುರಿಸಿದ್ದ ಕಂಬನಿಯ
ಮುಂಜಾನೆಯಲಿ
ಎಲೆಗಳು ಹೊತ್ತಿದ್ದವು
3
ವಿರಹಿಯ ಕವನದ
ಅಳಿದುಳಿದ
ಕೊನೆಯ ಸಾಲುಗಳಂತಿದ್ದವು
ಬೀಳ್ಕೊಡುವಾಗ
ಅವಳ
ಹೆಜ್ಜೆಗಳು
4)
ಕೇಳುತ್ತಿರಲಿಲ್ಲನಾ ಮಾತನಾಡುವುದನ್ನುನನ್ನ ಕಂಗಳಲ್ಲಿನಿಜವ ಹುಡುಕುತ್ತಿದ್ದಳು*****5)ಹೆದರಿಕೆಯೆಂಬಹೆಣವಭುಜದಿಂದಿಳಿಸಿಹಾರಲು ಬಯಸಿದೆರೆಕ್ಕೆಗಳುಮೂಡತೊಡಗಿದವು*****6)ಎಷ್ಟು ಚೆನ್ನಕಡಲೊಳು ನದಿಮಾಯವಾದಂತೆಅಳುನಗೆಗಡಲಲ್ಲಿಕಣ್ಮರೆಯಾದೊಡೆ****7)ಪೆದ್ದುತನದಗಡಿಯ ದಾಟಿನೋಡತೊಡಗೆಕಾಣ ಹತ್ತಿತುಹುಸಿಯಉಡುಗೆ ತೊಡುಗೆ
1)ನನಗೆ ನಿನ್ನ ನೋಡಿದಾಗನೆನಪಾಗುವುದುಅದೇ ಸಿಂಬಳ ತುಂಬಿದನಾಸಿಕಅದೇ ನಿಷ್ಕಲ್ಮಶ ನಗುನಾವಿಬ್ಬರುಎಷ್ಟು ದೂರವಿದ್ದರೇನುನಮಗೆ ಎಷ್ಟುವಯಸಾದರೇನುನೀ ನನಗೆ ಇನ್ನೂಲಂಗ ತೊಡುವ ಸಹೋದರಿನಾ ನಿನಗೆ ಇನ್ನೂಚಡ್ಡಿ ಹಾಕಿರುವ ಸಹೋದರ2)ಹೊಟ್ಟೆಕಿಚ್ಚಿನಕೆನ್ನಾಲಿಗೆಗಳುತಾಕಬಾರದೆಂದೇಸಂತೋಷದ ರೆಕ್ಕೆಗಳ ಅರಳಿಸಿದೆತಾಳ್ಮೆಯ ಹಂಸದಂತೆಎಲ್ಲೆ ಮೀರಿಎಲ್ಲವನು ಮೀರಿಗುರಿಯ ಕಡೆ ಸಾಗಿದೆ3)ಜೊತೆಗೆ ಬಂದವರೊಡನೆಲ್ಲಮನಸ ಹಂಚಿಕೊಳ್ಳಬೇಡಅಂಬಿಗನಿನ್ನೊಡನೆ ಅವರಸಂಬಂಧ ದಡತಲುಪಿಸುವವರೆಗಷ್ಟೆ
- ವಿನೋದ್ ಕುಮಾರ್ ಬೆಂಗಳೂರು
ಮುನಿಸಿನ ಬಿರುಕುಗಳು
ಕಾಣತೊಡಗಿದವು
ನಾ ಮುಗುಳುನಗೆಯ
ಮಲ್ಲಿಗೆ ಗಿಡಗಳ
ನೆಡತೊಡಗಿದೆ ಅಲ್ಲೆಲ್ಲಾ
*******
ಬಾ
ಒಬ್ಬರಿಗೊಬ್ಬರ
ವ್ಯಸನಿಗಳಾಗೋಣ
*******
ಕಳೆದುಕೊಂಡೆ
ನನ್ನೆರಡು ಮುತ್ತುಗಳ
ನಿನ್ನೊದೊಂದು ಮುತ್ತ
ಕದಿಯುವ ದೆಸೆಯಿಂದ
*******
ಅಭಯ ಹಸ್ತ ನೀಡಲಾಗದೆ
ಬರೀ ವ್ಯಥೆ ಕೇಳುವ ಕಿವಿಯಾದೆ
******
ಎಷ್ಟು ಬರೆದರೂ ಮುಗಿಯದ ಕಥೆ
ಸಾಲುಗಳ ಸರಮಾಲೆಯಾಗಿ
ಪುಟಗಳ ತಿರುವಂತಾಗಿದೆ
ಪುಟಗಳಿಗೆ ಎಣೆಯಿರದೆ
ಕೊನೆಗೊಂದು ಮುಕ್ತಾಯವಿಟ್ಟು
ಸುಮಾರಾದ ಪುಸ್ತಕವಾಗಿದೆ
ಆ ಕಥೆಗೊಂದು ಶೀರ್ಷಿಕೆ
ಅದ ನೋಡಿ ಅರಿಯಬೇಕು
ಕಥೆಯ ಒಳಅರ್ಥ
ಪಾತ್ರಗಳು ಕಾಲ್ಪನಿಕ
ನೀಡಿವೆ ನಿಜ ಜೀವನದ
ಹಲವು ಕುರುಹ
ಇದು ಎಲ್ಲರ ಜೀವನದ ಕಥೆ
ಮುಗಿವುದು ಪುಟಗಳ ತಿರುವಿದಂತೆ
ಓದುಗರು ಓದುವರು ನಾವು ಬರೆದಾಗ
ಮಾತ್ರ ಅವರು ಮೆಚ್ಚುವಂತೆ.
ಬಂದಿದ್ದಾಯ್ತು ಬಿಡಿ
ಆ ಮಾತು ಬೇರೆ
ನಮ್ಮವರು
ಸನ್ಮಿತ್ರರೂ
ಇನ್ನಿಹರು
ಮನೆ ಮಠ
ಮಕ್ಕಳು ಮರಿ
ಸಂಸಾರವೇ
ಇಲ್ಲಿಹುದೀಗ
ಆದರೂ
ಎದೆಯೊಳಗಿನ
ದಿಕ್ಸೂಚಿ ಏಕೋ
ಇನ್ನೂ ಪಶ್ಚಿಮ ಮುಖಿ
ಸಿಹಿ ಕಹಿ ನೋವು ನಲಿವುಗಳನ್ನು ಒಳಗೊಂಡ ಪಯಣ
ಸಿಹಿ ಕಹಿ ನೋವು ನಲಿವುಗಳನ್ನು ಒಳಗೊಂಡ ಪಯಣ
ನೌಕೆಯ ನಾವಿಕನಾರೋ ತಿಳಿಯಬೇಕೆಂಬ ತಲ್ಲಣ
ಕಣ್ಣಾಡಿಸದಷ್ಟೂ ದೂರ ಕಾಣುವ ಅಲೆಗಳು ಮತ್ತವುಗಳ ರಿಂಗಣ
ದೊರೆತಿರೆ ಮಾರ್ಗಸೂಚಿ ಸಾಗಲಿದೆ ನಿರಂತರ ಯಾನ
ತೋರಲು ದಿಕ್ಸೂಚಿ ಇನ್ನೀಗ ಆದೀತು ಅಡೆತಡೆಗಳ ನಿರ್ಗಮನ
ಹೆಣ್ಣನ್ನು ಹೆಣ್ಣಾಗಿ ಬದುಕಲು ಬಿಡು
ತಿಳಿ ನೀನು
ಹೆಣ್ಣೆ ಸೃಷ್ಟಿಯ ಮೂಲ
ದೇವರ ರೂಪ
ಸಂಸಾರದ ಕಣ್ಣು
ಜನ್ಮ ನೀಡಿದ ತಾಯಿ
ಒಡ ಹುಟ್ಟಿದ ಸಹೋದರಿ
ಪ್ರೀತಿಯ ಸ್ವರೂಪದ ಮಗಳು
ಈ ಎಲ್ಲಾ ರೂಪವ ಹೊತ್ತು
ಗಂಡಿನ ಸಮನಾಗಿ ಬದುಕುವವಳು
ಈ ದೇವತಾ ಸ್ವರೂಪದ ಹೆಣ್ಣನ್ನು
ಬಲತ್ಕರಿಸಿ ನೀನು ಉಳಿಯುವೆಯ
ಅಪ್ರಾಪ್ಥೆಯೆನ್ನದೆ ಅರಳುವ ಹೂವನ್ನು
ಹೊಸಕಿ ಕೊಲ್ಲುವೆಯಾದರೆ
ನಿನ್ನ ಇರಹುಗೆ ಬೆಲೆಯಿಲ್ಲ
ನಿನ್ನ ವಿನಾಶ ನಿಸ್ಸಂಶಯ
ಹೆಣ್ಣನ್ನು ನಿನ್ನ ತಾಯಿಯಾಗಿ ಆದರಿಸು
ಸಹೋದರಿಯಂತೆ ರಕ್ಷಿಸು
ಮಗಳಂತೆ ಪ್ರೀತಿಸು
ನಿನ್ನ ಕಾಮದ ಕಣ್ಣನ್ನು ಸುಟ್ಟು ಬಿಡು
ಹೆಣ್ಣನ್ನು ಸಮಾಜದ ಶಕ್ತಿಯಾಗಿ ನೋಡು
ಎಲ್ಲರಂತೆ ಸಮನಾಗಿ ಸ್ವೀಕರಿಸು
ಇನ್ನಾದರೂ
ಹೆಣ್ಣನ್ನು ಹೆಣ್ಣಾಗಿ ಬದುಕಲು ಬಿಡು
ಸಮಯವೊಂದೇ ತಾನೇ ನಿಜದಲ್ಲಿ ಮರೀಚಿಕೆ
ಭೌಗೋಳಿಕ ಸೂಚ್ಯಾಂಕ ಯಾವುದಿದ್ದರೇನು
ಪ್ರಾಂತ ಜಾತಿ ಭಾಷೆ ಬಣ್ಣ ಭಾವ ಯಾವುದಾದರೇನು
ಹಸಿರನ್ನು ಸಂಭ್ರಮಿಸುವ ಮಲೆನಾಡಿನಲ್ಲೂ
ಬಿರು ಶಾಖವನ್ನುಣಿಸುವ ಬಯಲುಸೀಮೆಯಲ್ಲೂ
ಜಾರಿ ಹೋದ ಈ ಕ್ಷಣ ಮತ್ತೆ ಕಾಣದಾಯಿತಲ್ಲ ನಿನ್ನೀ ವೀಕ್ಷಣ
ಸದುಪಯೋಗದಿಂದ ತಾನೇ ಸಮಯದ ನಿಶ್ಚಿತ ಪರಿಪೂರ್ಣ
ಸಮಯವೊಂದೇ ತಾನೇ ನಿಜ ಅರ್ಥದಲಿ ಮರೀಚಿಕೆ!!!
ಪ್ರಬಲನಾದ ಪೃಥ್ವಿರಾಜನ ಶೌರ್ಯ ದೇಶಪ್ರೇಮಗಳು ಕ್ಷೀಣಿಸಿತ್ತು
ಧೀರನಾಗಿ ಶತ್ರುಗಳ ನಾಶಪಡಿಸಿದ
ಸಮರಸಿಂಹನ ಧೈರ್ಯ ನಿಶ್ಕ್ರಿಯವಾಗಿತ್ತು
ಪ್ರಾತಸ್ಮರಿತನೂ ಆದ ವೀರಪ್ರತಾಪನ
ಪರಾಕ್ರಮಗಳೂ ಲುಪ್ತವಾಗಿತ್ತು
ಕಾಲ ಮರುಗಿತ್ತು!!
ಕಾಲ ಜರುಗಿತ್ತು!!
ಪಶ್ಚಿಮ ಮಹಾರಾಷ್ಟ್ರದಲ್ಲಿ
ಉದಯಿಸಿತೊಂದು ಬೆಳಕು
ವಿಂಧ್ಯೆಯಿಂದ ಕನ್ಯಾಕುಮಾರಿಯ ತನಕ
ಹರಡಿರಲು ಹಿಂದೂ ಸಾಮ್ರಾಜ್ಯದ ಧ್ಯೋತಕ
ಆರ್ಯ ಕೀರ್ತಿ ಎಂದೇ ಮೂಡಿಸಿತು ಪ್ರಖ್ಯಾತಿ
ಶಿವಾಜಿ ಮಹಾರಾಜರೇ ನಿಮಗಲ್ಲದೇ ಮತ್ತಾರಿಗಿದೆ ಇಂತಹ ಕೀರುತಿ
ಕಾಲ ಹರ್ಷಿಸಿತ್ತು!!
ಅಷ್ಟಿಲ್ಲದೇ ನೆನೆವುದೇ ಪ್ರಕೃತಿ ತಾ ವರ್ಷ ಋತುವಿನಲ್ಲಿ
ಒಣಗುವುದು ಬೇಸಿಗೆಯಲ್ಲಿ ಮತ್ತೆ ತಾ
ಚಿಗುರುವುದು ಚೈತ್ರಮಾಸದಲ್ಲಿ
ಸರಿಸಾಟಿಯೇನಿದೆ ಪ್ರಕೃತಿಯ ಓಕುಳಿಗೆ
ಹರಸಿಹನು ದೈವನು
ಕೃತಯುಗದಲ್ಲಿ ವಾಮನನಾಗಿ
ತ್ರೇತಾಯುಗದಲ್ಲೇನೋ ರಾಮನಾಗಿ
ದ್ವಾಪರದಲ್ಲಿ ಶ್ರೀಕೃಷ್ಣನಾಗಿ
ಸರಿಸಾಟಿಯಿದೆಯೇ ಪ್ರಕೃತಿಯ ಅವತಾರಕ್ಕೆ
ಮತ್ತೆ ಬದಲಾವಣೆ ಯಾಕಿನ್ನು ಕಂಡಿಲ್ಲ ಈ ಮನುಜನಲ್ಲಿ
ಇನ್ನೆಷ್ಟು ದೃಷ್ಟಾಂತಗಳು ಬೇಕು ನಿನಗೆ ತಿಳಿಯಲು
ಸ್ಥಾವರಕ್ಕಳಿವುಂಟು
ಬದಲಾವಣೆ ಎಂಬೋದೇ ಪ್ರಕೃತಿಯ ಪ್ರಕೃತಿ
ಶಬ್ದ ಸ್ಪರ್ಶ ರೂಪ ರಸ ಗಂಧಗಳ
ಸಂವಹನ ವಾಹಿನಿ
ಮನಸ್ಸಿಗೆ ಗ್ರಹಿಸಲ್ಪಡುವ ಆಲೋಚನೆಗಳ
ಮುಖ್ಯವಾಹಿನಿ
ಬಹುರ್ಮುಖಿಯಾಗಿರುವ ಮನಸ್ಸನ್ನು
ಅಂತರ್ಮುಖಿಯಾಗಿಸಲು
ಆಲೋಚನೆಗಳನ್ನು ಏಕಾಂತದೆಡೆಗೆ
ನಾಟಿಸಲು ಇರುವ ಸಾಧನ
ಇರಲಿ ಸದಾ ಸಭ್ಯ ಸದಭಿರುಚಿ
ಶಾಂತ ತೃಪ್ತವಾದ ಜೀವನ
ಕೃತಜ್ಞತೆ
ಸಲ್ಲಬೇಕು ಕೃತಜ್ಞತೆ ಇಂತೀರ್ವರಿಗೆ
ಜನುಮದಾತರಾದ ತಂದೆತಾಯಿಗೆ
ಸಂಸ್ಕಾರವಿತ್ತು ಪೋಷಿಸಿದ ಗುರುವೃಂದಕ್ಕೆ
ಔದರ್ಯ ತೋರಿದ ಕುಟುಂಬಕ್ಕೆ
ಆಶ್ರಯ ಮತ್ತು ಆಶಯಗಳೊಂದಿಗೆ
ಅಪ್ಪಿಕೊಂಡಿರುವ ಸಮಾಜಕ್ಕೆ
ಇತಿ ಹೇಳಲು ಅಸಾಧ್ಯ ಇಷ್ಟಕ್ಕೆ
ಸಲ್ಲಬೇಕಲ್ಲವೇ ಕೃತಜ್ಞತೆ ಸ್ವ ಆತ್ಮಕ್ಕೆ
ಸಹಪಯಣಿಗನಾಗಿರಲು ಸದಾ ಜೀವನಯಾನಕ್ಕೆ























Comments
Post a Comment