ಕಥೆ

ಸ್ಥಳೀಯರ ಕಥೆಗಳಿಗೆ ಈ ಪುಟ ಮೀಸಲು.
ತಮ್ಮ ಕಥೆ ಕವನಗಳನ್ನು horanadachilume@gmail.com ಗೆ ಕಳಿಸಿ.


ಪ್ರಶ್ನೆಗೆ ತಕ್ಕ ಉತ್ತರ(ಹಾಸ್ಯ)
-ಕನಕಾಪುರ ನಾರಾಯಣ 


ತಿಮ್ಮ ದನ ಕಾಯುತ್ತಿದ್ದ. ಅಲ್ಲಿಗೆ ಒಬ್ಬ ಬೇಟೆಗಾರನು ತನ್ನ ಕುದುರೆಯ ಮೇಲೆ ಸವಾರಿ ಮಾಡುತ್ತಾ ವೇಗದಿಂದ ಬಂದು ಅವಸರದಿಂದ "ಏಯ್ ಗೊಲ್ಲ, ಈ ಕಡೆ ಯಾವ್ದಾದ್ರೂ ಕಾಡುಪಾಣಿ ಹೋಗಿತ್ತಾ?" ಎಂದ.ಅದಕ್ಕೆ ತಿಮ್ಮ "ಹಾ! ಹೌದು ಒಂದು ಕಾಡು ಹಂದಿ ಹೋಗಿತ್ತು"ಎಂದ.ಬೇಟೆಗಾರ ಅದೇ ದಿಕ್ಕಿನಲ್ಲಿ ಪ್ರಯಾಣಿಸಿ ಸ್ವಲ್ಪ ಹೊತ್ತಿನ ಬಳಿಕ ಮರಳಿ ಬಂದು"ಎಲ್ಲಿ ಕಾಡುಹಂದಿ? ಯಾವ ಗುರುತೂ ಕಾಣ್ತಿಲ್ಲ? ನಿಜವಾಗಿಯೂ ನೀನು ನೋಡಿದ್ಯಾ?"ಎಂದು ಪ್ರಶ್ನಿಸಿದ." ಹೌದೂ ನನ್ನ ಕಣ್ಣಾರೆ ನೋಡೀವ್ನಿ ಇದೇ ದಿಕ್ಕಿನಲ್ಲಿ ಹೋಯ್ತು ಸುಮಾರು ಎರಡು ವರ್ಷದ ಹಿಂದೆ" ಎನ್ನಬೇಕೇ.



ಅಪಾಯ!
-ಕನಕಾಪುರ ನಾರಾಯಣ  


ದೂರದ ಹಳ್ಳಿಯ ರೈತನ ತೋಟದ ಮನೆಯಲ್ಲಿ ಹತ್ತಾರು ಸಾಕು ಪ್ರಾಣಿಗಳು ಇದ್ದವು.ಅದರಲ್ಲಿ ಹಸು,ಹಂದಿ,ಕೋಳಿ,ಇಲಿ ಆತ್ಮೀಯ ಗೆಳೆಯರು.ಒಮ್ಮೆ ಮನೆಯ ಯಜಮಾನ ಹೆಂಡತಿಯೊಡನೆ ತನ್ನ ಕೋಣೆಯಲ್ಲಿ ಮಲಗುವ ಮೊದಲು ಪಿಸುಗುಡುತ್ತಾ ಒಂದು ಪೊಟ್ಟಣ ತೆಗೆದ.ಅದರಲ್ಲಿ ಒಂದು ಇಲಿ ಹಿಡಿಯುವ ಬೋನ್ ಇತ್ತು.ಮಂಚದಡಿಯಿಂದ ಇಲಿ ಎಲ್ಲವನ್ನೂ ಗಮನಿಸಿತು ಅವರಾಡಿದ ಮಾತನ್ನೂ ಆಲಿಸಿತು.ತಕ್ಷಣ ಗಾಬರಿಯಿಂದ ಓಡಿಹೋಗಿ ಕೋಳಿಗೆ "ಅಯ್ಯೋ ಅಪಾಯ ಅಪಾಯ ಇಲಿ ಬೋನ್ ತಂದಿದ್ದಾರೆ"ಹೇಳಿತು.ಆದರೆ ಕೋಳಿ"ಅಯ್ಯೋ ಅಷ್ಟೇ ತಾನೆ ನಾನೇನೋ ಅಂತಿದ್ದೆ"ಎಂದು ಕಾಳು ಹೆಕ್ಕುತಾ ಮುಂದೆ ಸಾಗಿತು.ಆನಂತರ ಇಲಿ ಹಂದಿಗೆ ವಿಷಯ ತಿಳಿಸಿತು.ಹಂದಿಯೂ ಅಷ್ಟು ಆಸಕ್ತಿ ತೋರಿಸಲಿಲ್ಲದ ಕಾರಣ ಇಲಿ ಹಸುವಿನ ಬಳಿ ಹೋಗಿ ಹೇಳಿತು.ಅದೂ ಸಹ "ಅರೆ ಬಿಡು ಅದೇನೂ ಅಂಥಾ ಅಪಾಯ ಅಲ್ಲ,ಏನೂ ಆಗಲ್ಲ"ಎಂದಿತು.ಆರಾತ್ರಿ ಎಲ್ಲರೂ ಮಲಗಿರಲು ಇದ್ದಕ್ಕಿದ್ದ ಹಾಗೆ ಪಟಾರ್ ಎಂದು ಶಬ್ದ.ಇಲಿ ಸಿಕ್ಕಿಬಿದ್ದಿದೆಯೇನೋ ಎಂದು ರೈತಹ ಹೆಂಡತಿ ಎದ್ದು ಬೋನಿನ ಬಳಿ ಬಂದು ನೋಡಲು ವಿಷದ ಹಾವೊಂದು ಅದಕ್ಕೆ ಸಿಕ್ಕು ನರಳಾಡುತ್ತಿತ್ತು. ಆಕೆ ದೀಪ ಹಿಡಿದು ನೋಡುವಷ್ಟರಲ್ಲಿ ಆ ಬೋನನ್ನೇ ಎಳೆದಾಡುತ್ತಾ ಆಕೆಗೆ ಹಾವು ಕಚ್ಚಿತು.ಜೋರಾಗಿ ಕಿರುಚಿದಳು.ಅಕ್ಕಪಕ್ಕದ ಮನೆಯವರೆಲ್ಲಾ ಎದ್ದರು.ರೈತ ಓಡಿ ಹೋಗಿ ವೈದ್ಯರನ್ನು ಕರೆತಂದನು.ಚಿಕಿತ್ಸೆ ನಡೆಯಿತು.ರಾತ್ರಿಯಿಡೀ ಎದ್ದಿರಲು ಹೇಳಿದರು ವದ್ಯರು.ಸರಿ ಬಂದ ನೆರೆಹೊರೆಯವರು ಜೊತೆಯಲ್ಲೇ ಕುಳೀತರು.ರೈತನಿಗೆ ಅವರಿಗೆಲ್ಲಾ ಉಪಚಾರ ಮಾಡಬೇಕಾಯಿತು.ತನ್ನಲ್ಲಿದ್ದ ಕೋಳಿಯನ್ನು ಕೊಂದು ಅವರಿಗೆಲ್ಲಾ ಸಾರು/ಸೂಪ್ ಮಾಡಿಕೊಟ್ಟ.ಮರುದಿನದಿಂದ ಹಳ್ಳಿಯವರೆಲ್ಲಾ ಆಕೆಯನ್ನು ನೋದಲು ಬರತೊಡಗಿದರು.ತನ್ನಲ್ಲಿದ್ದ ಹಂದಿಯನ್ನು ಕೊಂದು ಬಂದ ನಂಟಿಷ್ಟರಿಗೆ ಅಡುಗೆ ಮಾಡಿ ಬಡಿಸಿದ.ಆದರೆ ವಿಷದ ಹಾವಿನ ಕಡಿತದಿಂದ ರೈತನ ಹೆಂಡೈ ಹೆಚ್ಚುದಿನ ಬದುಕುಳಿಯಲಿಲ್ಲ.ಅಸುನೀಗಿದಳು.ಶವ ಸಂಸ್ಕಾರ ಹನ್ನೊಂದು ದಿನದ ನಂತರ ಸಮಾರಾಧನೆಗೆ ತನ್ನಲ್ಲಿದ್ದ ಒಂದು ಹಸುವನ್ನೂ ಕಡಿದು ಬಂದ ನಂಟಿಷ್ಟರಿಗೆ ಬೇಯಿಸಿ ಬಡಿಸಿದ.ಇಲಿ ತಾನು ಮೊದಲೇ ಎಚ್ಚರಿಕೆ ಕೊಟ್ಟಾಗ ಏನಾದರೂ ಸಹಾಯ/ಉಪಾಯ ಮಾಡಿದ್ದರೆ ಇಷ್ಟು ಅನಾಹುತ ನಡೆಯುವಷ್ಟೇ ಇರಲಿಲ್ಲವೇ ಎಂದು ಪಶ್ಚಾತ್ತಾಪ ಪಟ್ಟಿತು.ಕಾಲ ಮಿಂಚಿತ್ತು. ನೀತಿ:ಸ್ನೇಹಿತ/ಸಂಸಾರದಲ್ಲಿ ಒಬ್ಬರಿಗೆ ತೊಂದರೆಯಾದರೂ ಎಲ್ಲರಿಗೂ ಅದರ ಪರಿಣಾಮವಾಗುತ್ತದೆ.


ಆರನೇ ಮಹಡಿ?
-ಕನಕಾಪುರ ನಾರಾಯಣ  


ಆರು ಜನ ಹುಡುಗಿಯರು ಒಮ್ಮೆ ತಮ್ಮ ಗೆಳೆಯರನ್ನು ಬಿಟ್ಟು ತಾವೇ ಒಂದು ಹೋಟೆಲ್ ಗೆ ಹೋದರು.ಅದೂ ಸಹ ಆರು ಮಹಡಿಯುಳ್ಳ ಕಟ್ಟಡವೇ ಆಗಿತ್ತು.ಅಲ್ಲಿಗೆ ತಲುಪಿದ ಕೂಡಲೇ ಲಿಫ್ಟ್ ಏರಿ ಮೊದಲ ಮಹಡಿಗೆ ಹೋದರು.

 ಅಲ್ಲಿ ಗೋಡೆಗೆ ಒಂದು ಫಲಕ ತೂಗಿ ಬಿಡಲಾಗಿತ್ತು.ಅದರ ಮೇಲೆ "ಇಲ್ಲಿರುವ ಹುಡುಗರೆಲ್ಲಾ ಕುಳ್ಳರು ಮತ್ತು ಬಡವರು"ಎಂದಿತ್ತು.ತಕ್ಷಣ ಆ ಹುಡುಗಿಯರು ಎರಡನೇ ಮಹಡಿಗೆ ಲಿಫ್ಟ್ ಚಲಾಯಿಸಿದರು ಅಲ್ಲಿಯೂ ಒಂದು ಫಲಕವಿತ್ತು.ಅದರ ಮೇಲೆ "ಇಲ್ಲಿರುವ ಹುಡುಗರೆಲ್ಲಾ ಎತ್ತರದವರು ಆದರೆ ಹಣವಂತರಲ್ಲ"ಎಂದಿತ್ತು.ಸರಿ ಮುಂದಿನ ಮಹಡಿಗೆ ಏರಿದರು.ಅಲ್ಲಿನ ಫಲಕದ ಮೇಲೆ "ಇಲ್ಲಿನ ಹುಡುಗರು ಸಿರಿವಂತರು ಆದರೆ ಬಹಳ ಕುಳ್ಳರು"ಎಂದಿತ್ತು.ನಾಲ್ಕನೇ ಮಹಡಿಗೆ ತೆರಳಲು ಅಲ್ಲಿ"ಇಲ್ಲಿನ ಹುಡುಗರು ಎತ್ತರವಾಗಿಯೂ ಹಣವಂತರಾಗಿಯೂ ಇದ್ದಾರೆ,ಆದರೆ ಅವರುಗಳು ಕುರೂಪಿಗಳು"ಎಂದಿತ್ತು.ಐದನೆಯ ಮಹಡಿಗೆ ಬಂದಿಳಿಯಲು ಅಲ್ಲಿನ ಫಲಕದ ಮೇಲೆ"ಇಲ್ಲಿನ ಹುಡುಗರು ಎತ್ತರವಾಗಿಯೂ, ಹಣವಂತರಾಗಿಯೂ ಸುಂದರವಾಗಿಯೂ ಇದ್ದಾರೆ"ಎಂದಿತ್ತು.ಹುಡುಗಿಯರು ಮುಂದೆ ಇನ್ನೂ ಉತ್ತಮ ಹುಡುಗರು ಸಿಗುವರು ಎನ್ನುವ ಭರವಸೆಯೊಂದಿಗೆ  ಕುತೂಹಲ ತಡೆಯಲಾಗದೆ  ಆರನೆಯ ಮಹಡಿಯೂ ಹತ್ತಿದರು.ಅಲ್ಲಿನ ಫಲಕದ ಮೇಲೆ ಹೀಗೆ ಬರೆದಿತ್ತು - "ಇಲ್ಲಿ ಯಾವ ಹುಡುಗರೂ ಇಲ್ಲ ಈ ಮಹಡಿ ಕಟ್ಟಿರುವ ಉದ್ದೇಶವೇನೆಂದರೆ ಹುಡುಗಿಯರಿಗೆ ತೃಪ್ತಿ ಅನ್ನುವುದೇ ಇಲ್ಲ ಎಂದು ಸಾಬೀತು ಮಾಡಲು"ಎಂದಿತ್ತು.



ಕುಸ್ತಿ ಬರತ್ತಾ? (ಹಾಸ್ಯ)
-ಕನಕಾಪುರ ನಾರಾಯಣ  


ತಿಮ್ಮ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಅದೇ ಸಮಯಕ್ಕೆ ಗುಂಡ ಪಕ್ಕದಲ್ಲಿ ಬಂದು ಕುಳಿತ.ಹೊಸ ಮುಖ ಪರಿಚಯ ಇಲ್ಲ ಇಬ್ಬರೂ ಮಾತನಾಡದೇ ಕುಡಿಯುತ್ತಾ ಕುಳಿತಿದ್ದರು.ಅಮಲು ಏರುತ್ತಿದ್ದಂತೆ ಆಗಿಂದಾಗ್ಗೆ ಅನುಮಾನವಾಗಿ ಒಬ್ಬರನ್ನೊಬ್ಬರು ಮುಖ ನೋಡಿಕೊಳ್ಳುತ್ತಿದ್ದರು.ಸ್ವಲ್ಪ ಸಮಯದ ನಂತರ ತಿಮ್ಮ ಕೇಳಿದ"ರೀ ನಿಮಗೆ ಕುಸ್ತಿ ಮಾಡಕ್ಕೆ ಬರತ್ತಾ? ಕರಾಟೆ ಕುಂಗ್ಫೂ ಬರತ್ತಾ?ಕಿಕ್ ಬಾಕ್ಸಿಂಗ್ ಬರತ್ತಾ?ನಿಮ್ ಹತ್ರ ಚಾಕೂ, ಚೂರಿ, ಪಿಸ್ತೂಲ್,ಸಿರಿಂಜ್ ಏನಾದ್ರೂ ಇದೆಯಾ?" ಎಲ್ಲಕ್ಕೂ ಗುಂಡ "ಇಲ್ಲ " ಅಂದ....."ಅದ್ಸರೀ ಅಲ್ಲಾ ಇದೆಲ್ಲಾ ಯಾಕೆ ಕೇಳ್ತಾ ಇದ್ದೀರಾ?" ಎಂದು ಪ್ರಶ್ನಿಸಿದ. ತಿಮ್ಮ "ಏನಿಲ್ಲಾ ಆವಾಗ್ಲಿಂದ ನನ್ನ ಸೀಸೆ ತಗೊಂಡು ಗುಂಡ್ ಏರಿಸ್ತಾ ಇದ್ದೀರಾ ಅದಕ್ಕೆ,ಖಾತ್ರಿ ಮಾಡ್ಕೋತಾ ಇದ್ದೆ"ಎಂದು ಗುಂಡನಿಗೊಂದು ಸರಿಯಾಗಿ ಗೂಸಾ ಕೊಟ್ಟ.ಗುಂಡನಿಗೆ ಎಲ್ಲಾ ಎರೆಡೆರಡು ಕಾಣುತ್ತಿದ್ದುದು ಗುದ್ದು ಬಿದ್ದಮೇಲೆ ನಾಲ್ಕಾಯಿತು.



ಬೆಕ್ಕಿಗೊಂದು ಹೆಸರು
-ಕನಕಾಪುರ ನಾರಾಯಣ  



ವಿದೇಶದಿಂದ ವಲಸೆ/ವ್ಯಾಪಾರಕ್ಕೆ ಬಂದವರು ಚೀನಾದೇಶದ ರಾಜನಿಗೆ ಒಂದು ಬೆಕ್ಕನ್ನು ಉಡುಗೊರೆಯಾಗಿ ಕೊಟ್ಟರು.ನೋಡಲು ಮುದ್ದಾಗಿದ್ದ ಮರಿಯನ್ನು ರಾಜ ಸದಾ ತನ್ನೊಂದಿಗೇ ಇಟ್ಟುಕೊಂಡು ಇರುತ್ತಿದ್ದ.ಎಲ್ಲರೂ ಅದರ ಹೆಸರು ಏನು ಇಟ್ಟಿದ್ದೀರಿ? ಎಂದು ಕೇಳಲು,ತನ್ನ ಆಸ್ಥಾನದಲ್ಲಿ ಸಾರ್ವಜನಿಕರ ಸಭೆ ಸೇರಿಸಿ ಸಲಹೆ ಕೇಳಿದ.ಒಬ್ಬ ಹೇಳಿದ "ಹುಲಿ"ಎಂದೇಕೆ ಇಡಬಾರದು?" ಎನ್ನುವಷ್ಟರಲ್ಲಿ "ಹುಲಿ? ಇಲ್ಲ "ಡ್ರಾಗನ್" ಹೆಚ್ಚು ಸೂಕ್ತ ಅನ್ನಿಸುತ್ತದೆ ಏಕೆಂದರೆ ಡ್ರಾಗನ್ ಹಾರಲೂ ಬಲ್ಲದು" ಎಂದ ಒಬ್ಬ.ಅರೆ ಡ್ರಾಗನ್ ಗಿಂತ ಮೇಲೆ ಹಾರಬಲ್ಲದೂ ಹಾಗೂ ಬೆಕ್ಕಿನ ಹಾಗೇ ಬಣ್ಣವೂ ಇರುವ "ಮೇಘ" ಎಂಬುದೇ ಸರಿಯಾದ ಹೆಸರು ಎಂದನು ಇನ್ನೊಬ್ಬ.ಗಾಳಿ ಮೇಘವನ್ನೇ ತಳ್ಳಿಬಿಡುತ್ತದೆ ಆದ್ದರಿಂದ"ಗಾಳಿ"ಎನ್ನುವ ಹೆಸರೇ ಸೂಕ್ತ ಎಂದ ಮತ್ತೊಬ್ಬ."ಗೋಡೆ"ಗಾಳಿಯನ್ನೇ ತಡೆಯಬಲ್ಲದ್ದು ಆದ್ದರಿಂದ "ಕಲ್ಲಿನ ಗೋಡೆ"ಯೇ ಒಳ್ಳೆಯ ಹೆಸರು ಎಂದ ಮೊಗದೊಬ್ಬ."ಅದು ಸ್ವಲ್ಪ ಉದ್ದವೆನಿಸುತ್ತದೆ ಅಲ್ಲವೇ" ಎಂದು ರಾಜನು ಹೇಳುವಷ್ಟರಲ್ಲಿ ಮತ್ತೊಬ್ಬ "ಇಲಿ"ಎಂದು ಇಟ್ಟರೆ ಹೇಗೆ? ಇಲಿ ಗೋಡೆಯನ್ನೇ ಕೊರೆದು ಬಿಲ ಮಾಡುತ್ತದೆ,ಆದರಿಂದ ಅದು ಹುಲಿ,ಡ್ರಾಗನ್,ಮೋಡ,ಗಾಳಿ,ಗೋಡೆ ಎಲ್ಲಕ್ಕಿಂತ ಬಲಶಾಲಿ ಎಂದ."ಆದರೆ ಬೆಕ್ಕನ್ನು ಇಲಿ ಎಂದು ಕರೆಯಲು ಸಾಧ್ಯವೇ?ಅದು ಎಲ್ಲದಕ್ಕಿಂತ ಬಲಶಾಲಿ ಇರಬಹುದು ಆದರೆ ಬೆಕ್ಕು ಅದಕ್ಕಿಂತ ಹೆಚ್ಚು ಶಕ್ತಿಶಾಲಿ ಆದ್ದರಿಂದ ಬೆಕ್ಕನ್ನು ಬೆಕ್ಕು ಎಂದೇ ಕರೆಯಬೇಕು ಪ್ರಭು" ಎಂದ ಒಬ್ಬ ಬುದ್ಧಿವಂತ ಯುವಕ.ಕಡೆಗೆ ಹೆಸರೇ ಇಲ್ಲದೆ ರಾಜನ ಬಳಿ ತನ್ನ ಜೀವನವಿಡೀ ಕಾಲ ಕಳೆಯಿತು ಆ ಬೆಕ್ಕು!

ಕರುಳ ಮಿಡಿತ
-ಕನಕಾಪುರ ನಾರಾಯಣ  


ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ರೈತನೊಬ್ಬ ತನ್ನ ಮನೆಯ ಮುಂದಿನ ಅಂಗಳದಲ್ಲಿ ಸೌದೆಯನ್ನು ಸೀಳುವ ಕೆಲಸದಲ್ಲಿ ತೊಡಗಿದ್ದ.ಕೊಡಲಿಯ ಏಟು ಮರದ ದಿಮ್ಮಿಗೆ ಪ್ರತಿಬಾರಿ ಬೀಳುವಾಗಲೂ ಅವನ ಮೈಯಲ್ಲಿ ಬೆವರು ತೊಟ್ಟಿಕ್ಕುತ್ತಿತ್ತು,ದಣಿದು ಬಾಯಾರಿದ್ದರೂ ಲೆಕ್ಕಿಸದೆ ಒಂದೇ ಸಮನೆ ದುಡಿಯುತ್ತಿದ್ದ ಮಗನನ್ನು ಕಂಡು ಅವನ ತಾಯಿ" ಮಗ ಶಾಖ ಜಾಸ್ತಿ ಅಗ್ತಿದೆ ಮನೆ ಒಳಕ್ಕೆ ಬಾ,ಆಮೇಲೆ ಸೌದೆ ಹೊಡೆದರೆ ಆಯ್ತು" ಅಂದಳು.ಆದರೆ ಅದನ್ನು ಲೆಕ್ಕಿಸದೆ ಸುಡು ಸುಡು ಬಿಸಲಿನಲ್ಲಿ ತನ್ನ ಕೆಲಸ ಮುಂದುವರೆಸಿದ ಮಗ ಪದೇ ಪದೇ ತಾಯಿಯ ಕೂಗನ್ನು ಕೇಳಿ ತಾಳ್ಮೆ ಕಳೆದು ಒಮ್ಮೆ ರೇಗಿದ"ಏ ನೀನು ಒಳಕ್ಕೆ ಹೋಗಮ್ಮಾ,ಹೋಗಿ ಬೇರೆ ಕೆಲಸ ನೋಡು"ಎಂದು ಬೈದ.

ಒಳಕ್ಕೆಹೋದ ತಾಯಿ ವರುಶವೂ ತುಂಬದ ತನ್ನ ಮೊಮ್ಮಗನನ್ನು ಎತ್ತು ತಂದು ಸುಡುಬಿಸಿಲಿನಲ್ಲಿ ಮಲಗಿಸಿದಳು.ಇದನ್ನು ಕಂಡು ಮಗನಿಗೆ ಬಹಳ ಕೋಪ ಬಂದಿತು"ನಿಂಗೇನ್ ಬುದ್ಧಿಗಿದ್ಧಿ ಇದ್ದೀಯಾ? ಅಲ್ಲಾ ಮಗೂನ ಬಿಸಿಲಿನಲ್ಲಿ ಮಲಗಿಸಿದ್ದೀಯಲ್ಲಾ ಮೈ ಸುಡಲ್ವಾ?" ಎಂದು ಗದರಿದ.ಅದಕ್ಕೆ ತಾಯಿ "ಸುಟ್ಟರೆ ನಿಂಗೇನಾಗುತ್ತೆ?" ಎಂದು ಪ್ರಶ್ನಿಸಿದಳು.ಅದಕ್ಕೆ ಆ ರೈತ "ಅದು ನನ್ನ ಮಗು, ಕರಳು ಚುಳ್ ಅನ್ನಲ್ವಾ" ಎಂದ.ತಕ್ಷಣ ತಾಯಿ "ನೀನು ಬಿಸಿಲಿನಲ್ಲಿ ಸುಡ್ತಾ ಇದ್ದರೆ ನನ್ನ ಕರಳು ಏನು ಆಗಬೇಕು?" ಎಂದಳು.ಕೂಡಲೇ ತಾಯಿಯ ಮಮತೆ ಅರಿತು ಮನೆಯೊಳಕ್ಕೆ ಹೊರಟ ಮಗ.


ನಾಲ್ವರು ಕಳ್ಳರು
-ಕನಕಾಪುರ ನಾರಾಯಣ 


ನಾಲ್ಕು ಜನ ವಿದ್ಯಾವಂತ ಹುಡುಗರು ದುಡಿಯಲು ಸರಿಯಾದ ಕೆಲಸ ಸಿಗದೆ ಕೆಟ್ಟ ದಾರಿ ಹಿಡಿಯಲು ನಿರ್ಧರಿಸಿದರು. ಒಬ್ಬ ಶ್ರೀಮಂತನ ಮನೆಗೆ ಲಗ್ಗೆ ಹಾಕಿ ಬೇಕಾದಷ್ಟು ಹಣ ದೋಚಿದರು. ಊರೆಲ್ಲಾ ಕಳ್ಳರನ್ನು ಹುಡುಕುತ್ತಿರಲು ಕಾಡಿನಲ್ಲಿ ಅವಿತು ಕುಳಿತರು.ದಿನಗಳು,ವಾರಗಳು ಕಳೆದ ನಂತರ ಬೇರೊಂದು ಊರಿಗೆ ಬಂದರು. ಎಲ್ಲಾ ಹಣ ಒಮ್ಮೆಲೇ ಖರ್ಚು ಮಾಡುವ ಬದಲು ಎಲ್ಲಾದರೂ ಸಣ್ಣ ಕೆಲಸಕ್ಕೆ ಸೇರಿ ನಂತರ ನಿಧಾನವಾಗಿ ಸಂಸಾರಿಗಳಾಗಿ ಜೀವನ ಆರಂಭಿಸುವ ಯೋಜನೆ ಹಾಕಿದರು.

 ಅದರಂತೆ ಒಬ್ಬ ಮುದುಕಿಯ ಬಳಿ ಒಂದು ಮನೆ ಬಾಡಿಗೆಗೆ ಪಡೆದರು. ತಮ್ಮಲ್ಲಿದ್ದ ಹಣವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಆಕೆಯ ಮನೆಯಲ್ಲಿ ಇಟ್ಟುಕೊಳ್ಳಲು ಹೇಳಿದರು.ಆ ಮುದುಕಿ ಒಪ್ಪಿದಳು. ಸ್ವಲ್ಪ ದಿನಗಳ ನಂತರ ಎಲ್ಲರೂ ಸಣ್ಣ ಪುಟ್ಟ ಕೆಲಸ ಹುಡುಕಿಕೊಂಡರು, ಅದರಲ್ಲಿ ಮಾದ ಎನ್ನುವವನಿಗೆ ಮಾತ್ರ ಕೆಲಸ ಸಿಕ್ಕಲಿಲ್ಲ.ಆತನಿಗೆ ಆ ಪೆಟ್ಟಿಗೆಯ ಮೇಲೆ ಕಣ್ಣು ಬಿತ್ತು. ಆ ನಾಲ್ವರು ಮುದುಕಿಗೆ ಅದರಲ್ಲಿ ಬಟ್ಟೆ ಬರೆ,ಹಳೇಯ ಸಾಮಾನು ಇದೆ ಎಂದು ಹೇಳಿದ್ದರು.ಒಂದು ದಿನ ಮಾದ ಅಜ್ಜಿಗೆ ಆ ಪೆಟ್ಟಿಗೆಯಲ್ಲಿ ಏನೋ ನೋಡಬೇಕಾಗಿದೆ ಎಂದು ಅದನ್ನು ಹೊತ್ತು ಪರಾರಿಯಾದ.ಉಳಿದವರಿಗೆ ವಿಷಯ ತಿಳಿದು ಮಾದ ಎಲ್ಲೂ ಕಾಣದೆ ಅಜ್ಜಿಯ ಮೇಲೆ ಅಪವಾದ ಹೊರಿಸಿದರು.

ಅಜ್ಜಿ ಆ ಊರಿನಲ್ಲಿ ಜಾಣ ವಕೀಲನ ಮೊರೆ ಹೊಕ್ಕಳು. ಆ ವಕೀಲ ಚಾಣಕ್ಯನಷ್ಟು ಚಾಣಕ್ಷನೂ, ತೆನಾಲಿ ರಾಮನಂತೆ ಜಾಣನೂ ಆಗಿದ್ದನು.ನಡೆದ ವಿಷಯವೆಲ್ಲಾ ಕೂಲಂಕುಶವಾಗಿ ಪರಿಗಣಿಸಿದನು. ಮೂರು ಜನರನ್ನೂ ಕರೆದು ಅವರ ಹೇಳಿಕೆ ಕೇಳಿದನು.ಅವರು “ನಾವು ನಾಲ್ವರು ಆಕೆಗೆ ಒಂದು ಪೆಟ್ಟಿಗೆ ಕೊಟ್ಟಿದ್ದೆವು. ನಾವು ಎಲ್ಲಾರೂ ಒಟ್ಟಿಗೆ ಬಂದಾಗ ಮಾತ್ರ ಪೆಟ್ಟಿಗೆ ಕೊಡು ಎಂದಿದ್ದೆವು. ಆದರೆ ಈಗ ಇವಳು ಪೆಟ್ಟಿಗೆ ಇಲ್ಲ ಎನ್ನುತ್ತಿದ್ದಾಳೆ "ಎಂದರು. ತಕ್ಷಣ ವಕೀಲ ಎಲ್ಲರೂ ಅಂದರೆ? ನಿಮ್ಮ ಗುಂಪಿನಲ್ಲಿ ನಾಲ್ಕುಜನ ಇದ್ದರಲ್ಲವೇ ? ಹಾಗಿದ್ದರೆ ಎಲ್ಲರೂ ಬನ್ನಿ ಆಕೆ ಪೆಟ್ಟಿಗೆ ಕೊಡುತ್ತಾಳೆ ಎಂದನು. ತಮ್ಮ ಕುತಂತ್ರ ನಡೆಯದೆ ಮಾದನನ್ನು ಹುಡುಕುತ್ತಾ ಇದ್ದ ಕೆಲಸವನ್ನೂ ಕಳೆದುಕೊಂಡು ಊರೂರು ಅಲೆದರು.
 

ಮುದ್ದು ರವಿ 

-ಕನಕಾಪುರ ನಾರಾಯಣ

ರವಿ ಒಬ್ಬ ಒಳ್ಳೆಯ ಹುಡುಗ.ಎಲ್ಲರಿಗೂ ಆತನನ್ನು ಕಂಡರೆ ಬಹಳ ಪ್ರೀತಿ.ಆತನನ್ನು ಅತಿ ಮುದ್ದು ಮಾಡಿ ಆತನಿಗೆ ಸ್ವಲ್ಪವೂ ನೋವಾಗದಂತೆ ಜಾಗರೂಕತೆಯಿಂದ ಕಾಣುತ್ತಿದ್ದರು.ಕೇಳುವ ಮೊದಲೇ ಆತನಿಗೆ ಎಲ್ಲಾ ವಸ್ತುಗಳು ಸಿಗುತ್ತಿದ್ದವು.ಅತಿ ಮುದ್ದಿನಿಂದಾಗಿ ಅವನು ಚಿಕ್ಕಪುಟ್ಟ ಕಾರಣಕ್ಕೆ ಅಳುವುದು,ಸಣ್ಣ ವಿಶಯಕ್ಕೆ ಬೇಸರ ಮಾಡಿಕೊಳ್ಳುವುದು, ತನ್ನ ಪಾದರಕ್ಷೆಯಲ್ಲಿ ಚಿಕ್ಕ ಕಲ್ಲು ನುಸುಳಿದರೆ ಪ್ರಾಣವೆ ಹೋದಂತೆ ಆಡುವುದು ಹಾಗೂ ಬಿಸಿಲು ನೆತ್ತಿಗೆ ಒಂದು ನಿಮಿಷ ತಾಕಿದರೆ ಸಾಕು ತಲೆ ಸುತ್ತಿ ಬೀಳುತ್ತಿದ್ದ.ಹೀಗೆಯೇ ಆತ ಅತಿ ನಾಜೂಕು ಆಗಿಹೋದ. 

ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ಒಬ್ಬ ತಾಯಿ ತನ್ನ ಮಗುವಿಗೆ "ಸಾಕು ಅತ್ತಿದ್ದು ಏಳೊ, ನೀನೇನು ಅಳುಬುರುಕ ರವೀನಾ? ಏನೂ ಆಗಿಲ್ಲ ಏಳು,ಸುಮ್ಮನೆ ತರಚಿದೆ ಅಷ್ಟೆ ರಕ್ತ ಕೂಡಾ ಬರಲಿಲ್ಲ ಸಾಕು ನಿನ್ನ ನಾಟಕ ನಡಿ"ಎನ್ನುತ್ತಿದ್ದಳು.ಅದನ್ನು ಕೇಳಿ ರವಿಗೆ ಬಹಳ ಬೇಸರವಾಯಿತು. ತನ್ನ ಶಾಲೆಗೆ ಬಂದಾಗ ತನ್ನ ಟೀಚರ್ ಬಳಿ ಹೇಳಿಕೊಂಡ.ಸಂಜೆ ಮನೆಗೆ ಬಂದೊಡನೆಯೆ ತಂದೆಯ ಬಳಿಯೂ ಹೇಳಿಕೊಂಡ ಇಬ್ಬರೂ ಒಂದೇ ಉಪಾಯ ಹೇಳಿಕೊಟ್ಟರು.ಮರುದಿನದಿಂದಲೇ ಅಳವಡಿಸಿಕೊಂಡ.ಮುಂದಕ್ಕೆ ಅಳುಬುರುಕನಾಗದೆ ಸ್ವಶಕ್ತಿ ಅರಿತು ಧೈರ್ಯದಿಂದ ಬಾಳಿದ. ಉಪಾಯ ಇದಾಗಿತ್ತು "ದಿನಕ್ಕೆ ಒಂದು ಮಿಠಾಯಿ ಕಡಿಮೆ ತಿನ್ನು,ದಿನಕ್ಕೆ ಐದು ನಿಮಿಷ ಹೆಚ್ಚಿಗೆ ಓದು, ಅಳುವ ಮೊದಲು ಒಂದರಿಂದ-ಹತ್ತು ಎಣಿಸು" ಇದೇ ಅವನರಿತ ಪಾಠ.




ಕಿಲಾಡಿ ! ಮಹಾ ಕಿಲಾಡಿ !(ಹಾಸ್ಯ)
-ಕನಕಾಪುರ ನಾರಾಯಣ


ಒಬ್ಬ ಕಳ್ಳ ಊರಿಂದೂರಿಗೆ ಪ್ರಯಾಣ ಮಾಡುತ್ತಾ ತನ್ನ ಕೆಲಸ ಸಾಧಿಸಿಕೊಳ್ಳುತ್ತಿದ್ದ. ಒಮ್ಮೆ ಆತ ತಿಮ್ಮನಹಳ್ಳಿ ಎನ್ನುವ ಹಳ್ಳಿಗೆ ಬಂದ. ಹೆಸರಿಗೆ ತಕ್ಕ ಹಾಗೆ ಊರಿನಲ್ಲಿ ಬಹಳಷ್ಟು ತಿಮ್ಮಂದಿರು ಇರುತ್ತಾರೆ, ಅವರನ್ನು ಚೆನ್ನಾಗಿ ಮೋಸ ಮಾಡಿ ಇಲ್ಲಿಂದಲೂ ಪರಾರಿಯಾಗಬಹುದು ಎಂದು ಯೋಜನೆ ಹಾಕಿ ನಡೆದ.ಆ ಕೂಡಲೇ ಆತನಿಗೆ ಒಬ್ಬ ಡೊಳ್ಳು ಹೊಟ್ಟೆಯ ಪುರೋಹಿತ ತನ್ನ ಅಂಗಳದ ಉಯ್ಯಾಲೆಯಲ್ಲಿ ವಿಶ್ರಮಿಸುತ್ತಾ ಕುಳಿತಿರುವುದು ಕಾಣಿಸಿತು.ಆತನ ಬಳಿಗೆ ಓಡಿ ಹೋಗಿ"ಸ್ವಾಮೀ ನಿಮ್ಮ ಮುಖದಲ್ಲಿ ಏನು ಖಳೆ ಇದೆ"ಎಂದ.ಅದಕ್ಕೆ ಆ ಪುರೋಹಿತ ತನ್ನ ಮನೆಯ ಬಾಗಿಲಕಡೆಗೆ ನೋಡುತ್ತಾ "ಲೇ ಒಂದ್ ಮೂರು ಸೇರು ಅಕ್ಕಿ ತಾರೇ" ಎಂದು ಕೂಗಿದ. ಕಳ್ಳ ಅಷ್ಟಕ್ಕೆ ಸುಮ್ಮನಾಗಲಿಲ್ಲ " ಸ್ವಾಮೀ, ನಿಮ್ಮ ಮುಖದಲ್ಲಿ ಖಳೆಮಾತ್ರವಲ್ಲ ನೀವು ಮಹಾ ದಯಾಳು,ಕರುನಾಳು"ಎಂದ. ತಕ್ಷಣ ಪುರೋಹಿತ "ಲೇ ಹತ್ತು ಸೇರು ಅಕ್ಕಿ ತಾ,ಹಾಗೇ ಹಣ್ಣು ಕಾಯಿಯನ್ನೂ ತಾ" ಎಂದ. ಕಳ್ಳನ ಸಂತೋಷಕ್ಕೆ ಪಾರವೆ ಇಲ್ಲದಂತಾಯ್ತು, ‘ಇಷ್ಟೊಂದು ಸುಲಭವಾಗಿ ಈ ಊರಿನವರನ್ನು ಮೋಸಮಾಡಬಹುದೂ!ಇನ್ನು ನಾನು ಧಿಡೀರ್ ಶ್ರೀಮಂತನೇ ಆಗುವೆ’ ಅಂದುಕೊಂಡ. 

"ಸ್ವಾಮೀ ನಿಮ್ಮಂತಹವರು ಇರೋದ್ಲಿಂದ್ಲೇ ಮಳೆ-ಬೆಳೆ ಊರಿಗೆ ತುಂಬಿ ಹರಿಯುವ ಹೊಳೆ......"ಎಂದು ಪಟ್ಟಿ ಸುತ್ತಿದ. ಪುರೋಹಿತ ಈಗ ಮತ್ತೂ ಜೋರಾಗಿ "ಹಾಗೇ ಒಂದೆರೆಡು ಒಳ್ಳೆ ಪಂಚೆ,ವಸ್ತ್ರ,ನೂರು ರೂಪಾಯಿ ಎಲ್ಲಾ ತಾ"ಎಂದ. ಕಳ್ಳನಿಗೆ ಅನುಮಾನ ಶುರುವಾಯ್ತು "ಅಲ್ಲಾ ಸ್ವಾಮೀ ನೀವು ಆವಾಗ್ಗಿನಿಂದ ಅಕ್ಕಿ ತಾ, ವಸ್ತ್ರ ತಾ, ಹಣ್ಣು ತಾ ಅಂತಿದ್ದೀರಿ ಆದರೆ ಒಳಗಿನಿಂದ ಏನೂ ಬರ್ತಾನೇ ಇಲ್ಲವಲ್ಲಾ?" ಎಂದು ಕೇಳಿದ.ಅದಕ್ಕೆ ಉತ್ತರವಾಗಿ ಆ ಪುರೋಹಿತ "ಅರೇ ಬರೇ ಹೊಗಳಿಕೆಯಿಂದ ನನಗೇನು ಲಾಭ ಮುಂದಕ್ಕೆ ಹೋಗು"ಎಂದ. ಅದಕ್ಕೆ ಉತ್ತರವಾಗಿ ಕಳ್ಳ "ನಾನು ನಿಮ್ಮನ್ನು ಸಂತೋಷ ಪಡಿಸಲಿಲ್ಲವೇ" ಅನ್ನಲು "ನಾನೂ ನಿನ್ನನ್ನು ಸಂತೋಷ ಪಡಿಸಿದ್ದೀನಿ,ಬರೀ ಮಾತಿನ ಹೊಗಳಿಗೆಗೆ,ಬರೀ ಮಾತಿನ ಬಹುಮಾನ !" ಎಂದ ಪುರೋಹಿತ. ನಂತರ ತಿಮ್ಮನಹಳ್ಳಿಯಲ್ಲಿ ಮತ್ತಾರನ್ನೂ ಮಾತಾಡಿಸುವ ಗೋಜಿಗೇ ಹೋಗದೆ ಮುಂದಿನ ಊರಿನ ಕಡೆ ಹೆಜ್ಜೆ ಹಾಕಿದ ಆ ಕಳ್ಳ.


ಯಾರು ಮೊದಲು?
-ಕನಕಾಪುರ ನಾರಾಯಣ


ಮನೆಯೊಡತಿ ಬಾಗಿಲು ತೆರೆದು ಹೊರಗೆ ಬರಲು ಅಂಗಳದಲ್ಲಿ ಬಿಳಿಕೂದಲು ಬೆಳೆಸಿಕೊಂಡಿದ್ದ 3 ಬಡ ಮುದುಕರು ಕುಳಿತಿದ್ದರು.ಅವರನ್ನು ಕಂಡು ಮರುಕದಿಂದ "ತಾವು ಯಾರೋ ನನಗೆ ತಿಳಿಯದು,ಹಸಿದಂತೆ ಕಾಣುತ್ತೀರಿ,ಒಳಗೆ ಬನ್ನಿ ತಿನ್ನಲು ಏನಾದರು ಕೊಡುವೆ ಎಂದಳು.ಅದಕ್ಕೆ ಅವರಲ್ಲೊಬ್ಬನು "ನಿಮ್ಮ ಮನೆಯ ಯಜಮನ ಮನೆಯಲ್ಲಿರುವನೋ? ಆತನನ್ನು ಕೇಳು ನಂತರ ಬರುವೆವು"ಎಂದ. ಮನೆಯ ಯಜಮಾನ ಇಲ್ಲವೆಂದು ಕೇಳಿ, ಆತನು ಬಂದಮೇಲೆ ಒಳಕ್ಕೆ ಬರುತ್ತೇವೆ ಎಂದರು. ಯಜಮಾನ ಬಂದಾಗ ಅವರನ್ನು ಕಂಡು, ಹೆಂಡತಿಯನ್ನು ವಿಚಾರಿಸಿ ವಿವರವಾಗಿ ವಿಷಯವೇನೆಂದು ತಿಳಿದ,ಒಳಗೆ ಕರೆಯಲು ಒಪ್ಪಿಗೆ ಕೊಟ್ಟ.

ಆದರೆ ಆ ಮೂವರೂ ಒಟ್ಟಿಗೆ ಒಳಗೆ ಬರಲು ಸಿದ್ಧವಿರಲಿಲ್ಲ.ಅವರಲ್ಲಿ ಒಬ್ಬ "ನನ್ನ ಹೆಸರು ಸಂಪತ್ತು, ಈತನ ಹೆಸರು ಯಶಸ್ಸು, ಆತನ ಹೆಸರು ಪ್ರೀತಿ" ಎಂದು ಹೇಳಿದ."ನಮ್ಮಲ್ಲಿ ಯಾರಾದರೂ ಒಬ್ಬನನ್ನು ಮಾತ್ರ ಒಳಗೆ ಕರೆಯಬಹುದು.ನೀವು ಯಾರನ್ನು ಆರಿಸುವಿರೋ ಯೋಚಿಸಿ ಬನ್ನಿ" ಎಂದ.ಒಳಗೆ ಹೊರಟ ಯಜಮಾನಿ ಗಂಡನ ಜೊತೆ ತುಸುಹೊತ್ತು ವಿಚಾರಣೆ ಮಾಡಿ "ಪ್ರೀತಿಯನ್ನು ಒಳಗೆ ಕರೆದರು.ಆಗ ಉಳಿದ ಇನ್ನಿಬ್ಬರೂ ಅವನ ಜೊತೆ ಒಳಗೆ ಬಂದರು.ಬೇರೆ ಆಯ್ಕೆ ಮಾಡಿದ್ದರೆ ಏನಾಗುತ್ತಿತ್ತೆಂದು ನೀವೇ ಯೋಚಿಸಿ....



ವ್ಯಾಪಾರಬುದ್ಧಿ
-ಕನಕಾಪುರ ನಾರಾಯಣ 



ಚೀನಾದ ನಗರದಲ್ಲಿ ಚಾಂಗ್ ಮತ್ತು ವಾಂಗ್ ಎಂಬ ಇಬ್ಬರು ಯುವಕರು ವ್ಯಾಪಾರ ಸೇಲ್ಸ್ಮನ್ ಆಗಿ ಕೆಲಸಕ್ಕೆ ಸೇರಿದರು.ಸ್ವಲ್ಪ ದಿನಕ್ಕೆ ವಾಂಗ್ ತನ್ನ ಅಧಿಕಾರಿಯಿಂದ ಮೆಚ್ಚುಗೆ ಪಡೆದು ಪ್ರಗತಿ/ಪ್ರಮೋಶನ್ ಕೂಡಾ ಗಿಟ್ಟಿಸಿಕೊಂಡನು.ಚಾಂಗ್ ಅದನ್ನು ಕಂಡು ಸಹಿಸದೆ ತನ್ನ ಅಧಿಕಾರಿಯನ್ನು ವಿಚಾರಿಸಿದನು. ಅದಕ್ಕೆ ಇಬ್ಬರಿಗೂ ಒಂದು ಪುಟ್ಟ ಪರೀಕ್ಷೆ ಕೊಟ್ಟನು.ಇಬ್ಬರೂ ಹೋಗಿ ಹಲನಿನ ಹಣ್ಣಿನ ವ್ಯಾಪಾರದ ಬಗ್ಗೆ ಮಾಹಿತಿ ಪಡೆದು ಬರಲು ಹೇಳಿದ.ಚಾಂಗ್ ಮೊದಲು ಹೋಗಿ ಕಿಲೋಗೆ 12 ಡಾಲರ್ ಎಂದು ತಿಳಿದು ಬಂದ.ಆಗ ಅಧಿಕಾರಿ ವಾಂಗ್ ನನ್ನು ಕಳುಹಿಸಿ ಅವನ ವಿಚಾರಣೆ ಹೇಗಿದೆ ಎಂದು ತಿಳಿಯುವಾಗ ಚಾಂಗ್ ನನ್ನೂ ಪಕ್ಕದಲ್ಲಿರಲು ಹೇಳಿದ.

ವಾಂಗ್ ವ್ಯವಹಾರದ ವಿವರ ಹೀಗೆ ನೀಡಿದ "ಬಾಸ್ ಮಾರುಕಟ್ಟೆಯಲ್ಲಿ ಇಬ್ಬರು ಮಾತ್ರ ಹಲಸಿನ ಹಣ್ಣು ಮಾರುತ್ತಿದ್ದಾರೆ, ಕಿಲೋಗೆ 12ಡಾಲರ್, 10ಕ್ಕೆ 100ಡಾಲರ್,ಒಬ್ಬೊಬ್ಬರೂ 300 ಹಣ್ಣು ತಂದಿದ್ದಾರೆ,ಮೇಜಿನ ಮೇಲೆ 30 ಹಣ್ಣು ಜೋಡಿಸಿದ್ದಾರೆ,ಒಂದೊಂದು ಹಣ್ಣು 15 ಕಿಲೋ ತೂಕವಿದೆ,ಅವರು ದಕ್ಷಿಣದ ರಾಜ್ಯದಿಂದ ಅವನ್ನು ತಂದಿದ್ದಾರೆ.ತಂದು ಎರಡು ದಿನ ಆಗಿದೆ.ಹಣ್ಣುಗಳು ಒಂದು ವಾರ ಕೆಡುವುದಿಲ್ಲ.ದಿನಕ್ಕೆ40 ರಿಂದ 50 ಹಣ್ಣು ಮಾರಾಟ ಮಾಡುತ್ತಾರೆ. ಇದನ್ನು ಕೇಳಿ ಚಾಂಗ್ ಗೆ ನಾಚಿಕೆಯಾಯಿತು ರಾಜಿನಾಮೆ ಕೊಡುವುದರ ಬದಲು ವಾಂಗ್ ನಿಂದ ಬುದ್ಧಿ ಕಲಿತು ಮುನ್ನಡೆದ.



ಅಹಂ
-ಕನಕಾಪುರ ನಾರಾಯಣ 


ಇಬ್ಬರು ಬಾಲ್ಯ ಸ್ನೇಹಿತರು ಇದ್ದರು. ಬೆಳೆದು ದೊಡ್ಡವರಾದ ಮೇಲೆ ಒಬ್ಬನು ಮಹಾ ತಪಸ್ವಿಯೂ ಮತ್ತೊಬ್ಬನು ಬಹಳ ಸಿರಿವಂತನಾಗಿ ರಾಜನಾದನು. ತಪಸ್ವಿಯು ಊರ ಹೊರಗಿನ ಬೆಟ್ಟಗುಡ್ಡಗಳಲ್ಲಿ ವಾಸವಾಗಿದ್ದನು.ಒಮ್ಮೆ ರಾಜನಾದವನು ತನ್ನ ಗೆಳೆಯನನ್ನು ನೋಡಲು ಬಯಸಿ ಅವನಿಗಾಗಿ ಹುಡುಕಾಡಿ,ಕಾಡು ಮೇಡು ಅಲೆದು ಕಡೆಗೂ ಆತನನ್ನು ಕಂಡು ತನ್ನ ಗೆಳೆಯನು ಮಹಾ ಜ್ಞಾನಿಯಾಗಿರುವುದನ್ನು ಕಂಡು ಸಂತೋಷದಿಂದ ತನ್ನ ಮನೆಗೆ ಔತಣಕ್ಕೆ ಆಹ್ವಾನವಿತ್ತನು.

ಔತಣಕ್ಕೆ ಗೆಳೆಯ ಬರುವದಿನವನ್ನೇ ಕಾದಿದ್ದು ಭಾರೀ ವಿಜೃಂಭಣೆಯ ಅಲಂಕಾರಗಳೊಂದಿಗೆ ಬರಮಾಡಿಕೊಳ್ಳಲು ಸಜ್ಜಾಗಿದ್ದನು. ಅರಮನೆಯ ಮುಂದೆ ಕೆಂಪಾದ ಕಂಬಳಿ ಹಾಸಿತ್ತು.ತಪಸ್ವಿ ಗೆಳೆಯ ಅರಮನೆಯ ಹೆಬ್ಬಾಗಿಲ ಮುಂದೆ ಬಂದನು. ಅಲ್ಲೊಬ್ಬ ಕಾವಲುಗಾರ ತಪಸ್ವಿಯನ್ನು ನೋಡಿ"ಅಯ್ಯಾ ನೋಡಿದೆಯಾ ನಿನ್ನ ಗೆಳೆಯನ ಶ್ರೀಮಂತಿಕೆಯನ್ನ, ನಿನ್ನಲ್ಲಿ ಏನೂ ಇಲ್ಲ ಎಂದು ನಿನಗೆ ತೋರಿಸಲೆಂದೇ ಹೀಗೆ ಮಾಡಿದ್ದಾನೆ"ಎಂದ, ತಪಸ್ವಿಗೆ ತಾಳ್ಮೆ ಕರಗಿತು ಸ್ವಲ್ಪದೂರಕ್ಕೆ ಓಡಿಹೋಗಿ ಮಣ್ಣಿನ ರಾಡಿ(ಕೊಚ್ಚೆ)ಯಲ್ಲು ತನ್ನ ಕಾಲನ್ನು ಅದ್ದಿ ಆ ಕಂಬಳಿಯಮೇಲೆಲ್ಲಾ ಕೊಳೆ ಮಾಡಿ ಒಳಗೆ ನಡೆದ, ಅಷ್ಟರಲ್ಲಿ ಅಲ್ಲಿಗೆ ಬಂದ ರಾಜನು "ಯಾರಲ್ಲಿ? ಯಾರು ಈ ಸೊಗಸಾದ ಕಂಬಳಿಯನ್ನು ಹೀಗೆ ಮಾಡಿದ್ದು?" ಎಂದು ಕೂಗಿದ.ಅದಕ್ಕೆ ಆತನ ಗೆಳೆಯ ತಪಸ್ವಿಯು "ನಾನೇ ಗೆಳೆಯ ಹಾಗೆ ಮಾಡಿದ್ದು, ನಿನ್ನ ಸಿರಿವಂತಿಕೆಯ ಅಮಲನ್ನು ಮುರಿಯಲು ಹಾಗೆ ಮಾಡಿದೆ, ನಿನ್ನ ಶ್ರಿಮಂತಿಕೆಯನ್ನು ತೋರಿಸಲು ಹೀಗೆ ಅಲಂಕಾರಗಳನ್ನು ಮಾಡಿದ್ದೀಯಾ?"ಎಂದನು. ಅದಕ್ಕೆ ರಾಜನು "ಅಯ್ಯಾ ಗೆಳೆಯ ನಾನೇನೋ ನೀನು ಜೀವನದಲ್ಲಿ ಎಲ್ಲವನ್ನೂ ತ್ಯಜಿಸಿದ ವೈರಾಗಿ, ತಪಸ್ವಿ, ಮಹಾ ಜ್ಞಾನಿ ಎಂದುಕೊಂಡಿದ್ದೆ ಆದರೆ ಈ ಅಹಂ ಎನ್ನುವುದು  ನಿನಗೆ ಇನ್ನೂ ಅಂಟಿಕೊಂಡಿದೆ. ಈಗ ನನಗೂ ನಿನಗೂ ಏನೂ ಅಂತರವೇ ಇಲ್ಲ. ನನಗೆ ಹಣದ ಅಹಂ ಇದ್ದರೆ ನಿನಗೆ ಗುಣದ ಅಹಂ ಇದೆ."ಎಂದು ಬೇಸರದಿಂದ ನುಡಿದ. 

ನೀತಿ: ಹಣವಾಗಲಿ, ಗುಣವಾಗಲಿ ಎಲ್ಲವೂ ಆಭಗವಂತನಿಂದಲೇ ಪ್ರಾಪ್ತಿಯಾದವುಗಳು,ಆಕಸ್ಮಾತ್ ಅಪಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟರೆ ಯಾವುದೂ ನಮ್ಮಜೊತೆ ಬರಲಾರವು.ಇದ್ದಷ್ಟು ಕಾಲ ಇತರರಿಗೆ ಒಳಿತು ಮಾಡಿದಲ್ಲಿ ಮುಂದೆ ಇದೇ ಜನ್ಮದಲ್ಲೇ ಅದರ ಪ್ರತಿಫಲ ಸಿಗಿವುದು ಖಚಿತ.
 

ಕುಸ್ತಿ ಬರತ್ತಾ?(ಹಾಸ್ಯ)
-ಕನಕಾಪುರ ನಾರಾಯಣ 



ತಿಮ್ಮ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಅದೇ ಸಮಯಕ್ಕೆ ಗುಂಡ ಪಕ್ಕದಲ್ಲಿ ಬಂದು ಕುಳಿತ.ಹೊಸ ಮುಖ ಪರಿಚಯ ಇಲ್ಲ ಇಬ್ಬರೂ ಮಾತನಾಡದೇ ಕುಡಿಯುತ್ತಾ ಕುಳಿತಿದ್ದರು.ಅಮಲು ಏರುತ್ತಿದ್ದಂತೆ ಆಗಿಂದಾಗ್ಗೆ ಅನುಮಾನವಾಗಿ ಒಬ್ಬರನ್ನೊಬ್ಬರು ಮುಖ ನೋಡಿಕೊಳ್ಳುತ್ತಿದ್ದರು.ಸ್ವಲ್ಪ ಸಮಯದ ನಂತರ ತಿಮ್ಮ ಕೇಳಿದ"ರೀ ನಿಮಗೆ ಕುಸ್ತಿ ಮಾಡಕ್ಕೆ ಬರತ್ತಾ? ಕರಾಟೆ ಕುಂಗ್ಫೂ ಬರತ್ತಾ?ಕಿಕ್ ಬಾಕ್ಸಿಂಗ್ ಬರತ್ತಾ?ನಿಮ್ ಹತ್ರ ಚಾಕೂ, ಚೂರಿ, ಪಿಸ್ತೂಲ್,ಸಿರಿಂಜ್ ಏನಾದ್ರೂ ಇದೆಯಾ?" ಎಲ್ಲಕ್ಕೂ ಗುಂಡ "ಇಲ್ಲ " ಅಂದ....."ಅದ್ಸರೀ ಅಲ್ಲಾ ಇದೆಲ್ಲಾ ಯಾಕೆ ಕೇಳ್ತಾ ಇದ್ದೀರಾ?" ಎಂದು ಪ್ರಶ್ನಿಸಿದ. ತಿಮ್ಮ "ಏನಿಲ್ಲಾ ಆವಾಗ್ಲಿಂದ ನನ್ನ ಸೀಸೆ ತಗೊಂಡು ಗುಂಡ್ ಏರಿಸ್ತಾ ಇದ್ದೀರಾ ಅದಕ್ಕೆ,ಖಾತ್ರಿ ಮಾಡ್ಕೋತಾ ಇದ್ದೆ"ಎಂದು ಗುಂಡನಿಗೊಂದು ಸರಿಯಾಗಿ ಗೂಸಾ ಕೊಟ್ಟ.ಗುಂಡನಿಗೆ ಎಲ್ಲಾ ಎರೆಡೆರಡು ಕಾಣುತ್ತಿದ್ದುದು ಗುದ್ದು ಬಿದ್ದಮೇಲೆ ನಾಲ್ಕಾಯಿತು.
 


ಬಹುಮಾನ (ಹಾಸ್ಯ)
-ಕನಕಾಪುರ ನಾರಾಯಣ 


ರೈತನಾದ ತಿಮ್ಮ ಒಂದು ದಿನ ತನ್ನ ತೋಟದಲ್ಲಿ ನಡೆದು ಹೋಗುತ್ತಿರಲು ಒಂದು ಆಷ್ಚರ್ಯವೇ ಗೋಚರವಾಯಿತು.ಆತನ ಹೊಲದಲ್ಲಿ ಆತನಿಗೇ ಕಾಣದಂತೆ ಬೆಳೆದ ಒಂದು ಅತಿ ದೊಡ್ಡ ಕುಂಬಳಕಾಯಿ ಅಂದು ಕಾಣಿಸಿತು.ಅದನ್ನು ಎತ್ತಲೂ ಸಹ ಆಗದಷ್ಟು ದೊಡ್ದದಾಗಿತ್ತು.ತನ್ನ ಮಕ್ಕಳ ಸಹಾಯ ಪಡೆದು ಅದನ್ನು ಆ ಊರಿನ ರಾಜನಿಗೆ ಒಪ್ಪಿಸಿದ. ರಾಜ ಅಪರೂಪದ ಆ ಅತಿ ದೊಡ್ದ ಕುಂಬಳಕಾಯನ್ನು ಕಂಡು ಸಂತೋಷಗೊಂಡು ಆತನಿಗೆ ಬೆಲೆಬಾಳುವ ರತ್ನದ ಸರವೊಂದನ್ನು ಕೊಟ್ಟ.

 ಈ ಸುದ್ದಿ ಎಲ್ಲೆಡೆ ಹರಡಿತು ಗುಂಡಣ್ಣನ ಕಿವಿಗೂ ಬಿತ್ತು. "ಅರೆ ಕುಂಬಳ ಕಾಯಿಗೇ ಅಷ್ಟು ಬೆಲೆ ಬಾಳುವ ಸರ ಕೊಟ್ಟ ರಾಜನು ತನ್ನಲ್ಲಿರುವ ಅಪರೂಪದ ಕಲ್ಲಿಗೆ (ವಜ್ರ) ಏನು ಕೊಡಬಹುದು?"ಎಂದು ಅದನ್ನು ರಾಜನಲ್ಲಿಗೆ ಹೋಗಿ ಅವನ ಕೈಗಿಟ್ಟ.ರಾಜನಿಗೆ ಅದನ್ನು ಕಂಡು ಸಂತೋಷವಾಯಿತು ಆದರೆ ಅದಕ್ಕೆ ಪ್ರತಿಯಾಗಿ ಏನು ಕೊಡಲು ತೋಚದೆ "ಆ ಅಪರೂಪದ ದೊಡ್ದ ಕುಂಬಳಕಾಯನ್ನು ಈತನಿಗೆ ನೀಡಿ ಎಂದು ಆಜ್ಞೆ ಮಾಡಿದ"ಗುಂಡ ಅದನ್ನು ತನ್ನ ಎತ್ತಿನ ಗಾಡಿಯ ಮೇಲೆ ಹೊತ್ತು ತೆಪ್ಪಗೆ ಮನೆಯ ಕಡೆ ಹೊರಟ.


ಅನುಕೂಲ
-ಕನಕಾಪುರ ನಾರಾಯಣ 


ಬೆಸ್ತನೊಬ್ಬ ಪ್ರತಿದಿನವೂ ತಾನು ಹಿಡಿದ ಮೀನುಗಳನ್ನು ಒಂದು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದ.ದಾರಿಯಲ್ಲಿ ಒಂದು ನರಿಗೆ ಅಷ್ಟೊಂದು ಮೀನುಗಳನ್ನು ನೋಡಿ ಬಾಯಿಯಲ್ಲಿ ನೀರೂರಿ ಬಂದಿತು.ಹೇಗಾದರೂ ಮಾಡಿ ಮೀನುಗಳನ್ನು ತಿನ್ನಬೇಕೆಂದು ಉಪಾಯದಿಂದ ಬೆಸ್ತ ಬರುವ ದಾರಿಯಲ್ಲಿ ಸತ್ತಂತೆ ಮಲಗಿತು,ಬೆಸ್ತನು ಇರಲಿ ಈ ಸತ್ತ ನರಿಯ ಚರ್ಮವನ್ನು ಮಾರಿ ಹಣವನ್ನು ಪಡೆಯಬಹುದು ಎಂದು ಆಲೋಚಿಸಿ ನರಿಯನ್ನು ಎತ್ತಿ ಗಾಡಿಯಲ್ಲಿ ಮೀನುಗಳಿದ್ದ ಕಡೆ ಹಾಕಿದನು. ದಾರಿಯುದ್ದಕ್ಕೂ ನರಿ ಹೊಟ್ಟೆತುಂಬುವಷ್ಟು ಮೀನುಗಳನ್ನು ಕಬಳಿಸಿತು.ಬೆಸ್ತನಿಗೆ ತಿಳಿಯದ ಹಾಗೆ ಕೆಳಕ್ಕೆ ಜಿಗಿದು ಕಾಡಿಗೆ ಓಡಿತು.

ಇದನ್ನು ಕಂಡ ತೋಳವೊಂದು "ಆ ಗಾಡಿಯಲ್ಲಿ ನೀನೇನು ಮಾಡುತ್ತಿದ್ದೆ?"ಎಂದು ವಿಚಾರಿಸಲು,ನರಿ ನಡೆದದ್ದೆಲ್ಲಾ ವಿವರಿಸಿತು.ತೋಳವೂ ಥಟ್ಟನೆ ಓಡಿ ತಾನೂ ಆ ಬೆಸ್ತನ ಗಾಡಿಯ ಮುಂದೆ ಸತ್ತಂತೆ ಮಲಗಿತು.ಬೆಸ್ತನಿಗೆ ಮತ್ತಷ್ಟು ಸಂತೋಷವಾಗಿ ಆ ತೋಳದ ಚರ್ಮವನ್ನು ಮಾರಿ ಹಣ ಮಾಡಬಹುದೆಂದು ಅದನ್ನು ಎತ್ತಲು ಹೋದನು ತೋಳವು ಭಾರವಾಗಿದ್ದ ಕಾರಣ ಒಂದು ಗೋಣಿ ಚೀಲದಲ್ಲಿ ಅದನ್ನು ತಳ್ಳಿ ಬಿಗಿಯಾಗಿ ಕಟ್ಟಿ ಗಾಡಿಯೊಳಕ್ಕೆ ಧೊಪ್ಪೆಂದು ಎಸೆದು ಮುಂದೆ ಸಾಗಿದನು.ತೋಳಕ್ಕೆ ಒಂದು ಮೀನನ್ನೂ ತಿನ್ನಲಾಗಲಿಲ್ಲ.ಮನೆಗೆ ಬಂದಾಗ ಬೆಸ್ತನು ಚೀಲವನ್ನು ಬಿಚ್ಚಿದಕೂಡಲೇ ಪ್ರಾಣ ಭೀತಿಯಿಂದ ಕಾಡಿನ ಕಡೆ ಓಡಿತು 
ನೀತಿ: ಒಬ್ಬರಿಗಾದ ಅನುಕೂಲ ಮತ್ತೊಬ್ಬರಿಗೂ ಆಗದೇ ಇರಬಹುದು



ಆನೆಯ ತೂಕ

-ಕನಕಾಪುರ ನಾರಾಯಣ 

ಹಿಂದೆ ಲಂಡನ್ನಿನಲ್ಲಿ ಪೀಟರ್ ಎಂಬುವವನಿದ್ದ. ಆತ ಮಹಾ ಬುದ್ಧಿವಂತ. ಆದರೆ ಆ ಬುದ್ಧಿ ತುಂಬಾ ವಿಚಿತ್ರವಾಗಿತ್ತು. ಚಿಟ್ಟೆಗಳನ್ನು ಹಿಡಿಯುವುದು, ಅವುಗಳ ರೆಕ್ಕೆ ಪುಕ್ಕಗಳನ್ನು ಕೀಳುವುದು ಎಂದರೆ ಅವನಿಗೆ ಬಹಳ ಇಷ್ಟ. ಗಿಡಗಳನ್ನು ಕಿತ್ತುನೋಡುವುದು, ಮುರಿಯುವುದು, ಇತ್ಯಾದಿ ಅವನಿಗೆ ಹವ್ಯಾಸಗಳು. ಅದೇ ಲಂಡನ್ನಿನ ಒಂದು ಚಿಕ್ಕ ತೋಟದಲ್ಲಿ ಒಬ್ಬ ಕವಿ ಇದ್ದನು. ಅವನಿಗೆ ಚಿಟ್ಟೆ, ಗಿಡ, ಮರ ಎಂದರೆ ತುಂಬಾ ಪ್ರೀತಿ. ಒಂದು ದಿನ ಪೀಟರ್ ಕವಿಯ ಹತ್ತಿರ ಬಂದು, "ಆನೆಯನ್ನು ತೂಕ ಮಾಡಿ ನೋಡೋಣವಾ?" ಎಂದು ಕೇಳಿದ. ಮಾಡೋಣ ಆದರೆ ಆನೆ ತೂಕ ಮಾಡುವಷ್ಟು ದೊಡ್ಡ ತಕ್ಕಡಿ ಬೇಕಲ್ಲಾ" ಎಂದನು ಕವಿ. 
ಅದಕ್ಕೆ ಪೀಟರ್ ಅದೇನು ಸುಲಭ, ಆನೆಯನ್ನು ಕೊಯ್ದು ಚೂರು ಚೂರು ಮಾಡಿ ಆ ಚೂರುಗಳನ್ನೆಲ್ಲಾ ತಕ್ಕಡಿಯಲ್ಲಿ ತೂಗಿ, ಕೊನೆಗೆ ಎಲ್ಲವನ್ನೂ ಕೂಡಿದರೆ ಆನೆ ತೂಕ ಸಿಗುತ್ತೆ" ಎಂದ ಪೀಟರ್. ಅದಕ್ಕೆ ಕವಿ  ಆನೆ ಕುಯ್ಯುವುದು ನನಗೆ ಇಷ್ಟವಿಲ್ಲ ಆದರೆ ಆನೆಯನ್ನು ಒಂದು ಮಾತು ಕೇಳೋಣ ಎಂದನು. 

ಇಬ್ಬರೂ ಆನೆಯ ಹತ್ತಿರ ಬಂದರು. ಪೀಟರ್ ತನ್ನ ತೂಕ ಮಾಡುವ ರೀತಿಯ ಬಗ್ಗೆ ಆನೆಗೆ ತಿಳಿಸಿದ. ಇದರಿಂದ ಆನೆಗೆ ಸಿಟ್ಟು ಬಂದಿತು. ಕವಿ ಆನೆ ಹತ್ತಿರ ಹೋಗಿ ಅದರ ಕಿವಿಯಲ್ಲಿ ಏನೋ ಹೇಳಿದ. ಆನೆ ಖುಷಿಯಿಂದ ತಲೆಯಾಡಿಸಿ ಒಪ್ಪಿಗೆ ನೀಡಿತು.ಕವಿ ಆನೆಯನ್ನು ನೀರಮೇಲೆ ತೇಲುವ ದೋಣಿಯಲ್ಲಿ ನಿಲ್ಲಿಸಿದ. ದೋಣಿ ನೀರಿನಲ್ಲಿ ಮುಳುಗಿದ ಮಟ್ಟವನ್ನು ಗುರುತು ಮಾಡಿಕೊಂಡ. ಅನಂತರ ಆನೆಯನ್ನು ಇಳಿಸಿ ಆ ಗುರುತಿನ ತನಕ ಮುಳುಗುವ ಹಾಗೆ ದೋಣಿಗೆ ಕಲ್ಲು ತುಂಬಿಸಿದ. ಆಮೇಲೆ ಆಕಲ್ಲುಗಳನ್ನು ತೆಗೆದು ಪೀಟರನ ಮುಂದೆ ಸುರಿದು "ಈ ಕಲ್ಲುಗಳನ್ನು ತೂಕ ಮಾಡು,ಆನೆಯ ತೂಕ ಸಿಗುತ್ತೆ" ಅಂದ. ಆನೆ ಕವಿಯ ಕಡೆಗೆ ಅಕ್ಕರೆಯಿಂದ ನೋಡಿ ತಲೆಯಾಡಿಸಿತು.


ಗುರಿ ಸೇರು
-ಕನಕಾಪುರ ನಾರಾಯಣ



ಹಿಂದೊಮ್ಮೆ, ಬಸ್ಸು, ಟ್ರಕ್ಕು ಇಲ್ಲದ ಕಾಲ, ಆಗ ತೆಂಗಿನಕಾಯಿ ಮೂಟೆಗಳನ್ನು ಕುದುರೆಯ ಮೇಲೆ ಹೊತ್ತ ವ್ಯಾಪಾರಿ ತಿಳಿಯದ ಊರಿಗೆ ಹೊರಟಿದ್ದ. ಸಾಗುತ್ತಿದ್ದ ದಾರಿಯಲ್ಲಿ ಹುಡುಗನೊಬ್ಬನನ್ನು ತಾನು ಸೇರಬೇಕಿರುವ ಊರಿಗೆ ದಾರಿ ಕೇಳಿದ ಹಾಗೇ ಅಲ್ಲಿಗೆ ತಲುಪಲು ಎಷ್ಟು ಸಮಯ ಬೇಕಾಗಬಹುದು ಎಂದೂ ಕೇಳಿದ. ಆಗ ಆ ಹುಡುಗ ಒಮ್ಮೆ ಆತನ ಕುದುರೆಯ ಕಡೆ ನೋಡಿ ಹೇಳಿದ “ ನೀವು ನಿಧಾನವಾಗಿ ನಡೆದು ಹೋದರೆ ಸಂಜೆಯಾಗುವ ಒಳಗೇ ತಲುಪುತ್ತೀರಿ, ಒಂದು ವೇಳೆ ವೇಗವಾಗಿ ಓಡಿಹೋದರೆ ಗುರಿ ಸೇರುವ ಮೊದಲೇ ಕತ್ತಲಾಗಿರಬಹುದು” ಎಂದ. 

ಹುಡುಗನ ಮಾತು ವ್ಯಾಪಾರಿಗೆ ಅರ್ಥವಾಗಲಿಲ್ಲ. ಅವನ ಮಾತಿಗೆ ಬೆಲೆ ಕೊಡದೇ ತನ್ನ ಕುದುರೆ ಏರಿ ವೇಗವಾಗಿ ಹೊರಟ. ತಲುಪಬೇಕಿದ್ದ ಊರು ದೂರದಿಂದ ಕಂಡಿತು. ಕುದುರೆ ವೇಗವಾಗಿ ಹೆಜ್ಜೆ ಹಾಕಿತು. ಪರವಾಗಿಲ್ಲವೇ ಕತ್ತಲಾಗಲು ಇನ್ನೂ ಮೂರು ನಾಲ್ಕು ತಾಸು ಇರುವಾಗಲೇ ಊರು ಬಂದೇ ಬಿಟ್ಟಿತು ಅಂದುಕೊಂಡು ಒಮ್ಮೆ ತೆಂಗಿನಾಕಾಯಿ ಮೂಟೆಗೆ ಕಾಲಿನಿಂದ ಒದ್ದನು, ಮೂಟೆಯಲ್ಲಿ ಕೆಲವೇ ಕಾಯಿಗಳು ಇದ್ದಂತೆ ಭಾಸವಾಯಿತು. ಕುದುರೆ ನಿಲ್ಲಿಸಿ ಹಿಂದೆ ತಿರುಗಿ ನೋಡಲು ದಾರಿಯುದ್ದಾಕ್ಕೂ ತೆಂಗಿನಕಾಯಿ ಬಿದ್ದಿದ್ದವು, ಮತ್ತೆ ಅದನ್ನೆಲ್ಲಾ ಎತ್ತಿ ಮೂಟೆಗೆ ಹಾಕುವುದು ಸುಲಭವೇ? ಹುಡುಗನು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು.ನಿಧಾನ ವಾಗಿ ನಡೆದು ಬಂದಿದ್ದರೆ ಮೂಟೆಯಿಂದ ಕಾಯಿಗಳು ಉದುರುತ್ತಿರಲಿಲ್ಲ, ಇಂಥಾ ಸಣ್ಣ ವಿಷಯ ಪುಟ್ಟ ಹುಡುಗ ಹೇಳಿದಾಗಲೂ ಅರಿವಾಗಲಿಲ್ಲವಲ್ಲಾ ಎಂದು ವ್ಯಥೆಯಾಯಿತು. ಕಾಯಿಗಳೆಲ್ಲಾ ಆಯ್ದು ಹಿಂತಿರುವ ವೇಳೆಗೆ ಕತ್ತಲು ಕವಿಯಿತು.
*****************************************************

ನಾಲ್ವರು ಕಳ್ಳರು
-ಕನಕಾಪುರ ನಾರಾಯಣ  


ನಾಲ್ಕು ಜನ ವಿದ್ಯಾವಂತ ಹುಡುಗರು ದುಡಿಯಲು ಸರಿಯಾದ ಕೆಲಸ ಸಿಗದೆ ಕೆಟ್ಟ ದಾರಿ ಹಿಡಿಯಲು ನಿರ್ಧರಿಸಿದರು. ಒಬ್ಬ ಶ್ರೀಮಂತನ ಮನೆಗೆ ಲಗ್ಗೆ ಹಾಕಿ ಬೇಕಾದಷ್ಟು ಹಣ ದೋಚಿದರು. ಊರೆಲ್ಲಾ ಕಳ್ಳರನ್ನು ಹುಡುಕುತ್ತಿರಲು ಕಾಡಿನಲ್ಲಿ ಅವಿತು ಕುಳಿತರು.ದಿನಗಳು,ವಾರಗಳು ಕಳೆದ ನಂತರ ಬೇರೊಂದು ಊರಿಗೆ ಬಂದರು. ಎಲ್ಲಾ ಹಣ ಒಮ್ಮೆಲೇ ಖರ್ಚು ಮಾಡುವ ಬದಲು ಎಲ್ಲಾದರೂ ಸಣ್ಣ ಕೆಲಸಕ್ಕೆ ಸೇರಿ ನಂತರ ನಿಧಾನವಾಗಿ ಸಂಸಾರಿಗಳಾಗಿ ಜೀವನ ಆರಂಭಿಸುವ ಯೋಜನೆ ಹಾಕಿದರು.

 ಅದರಂತೆ ಒಬ್ಬ ಮುದುಕಿಯ ಬಳಿ ಒಂದು ಮನೆ ಬಾಡಿಗೆಗೆ ಪಡೆದರು. ತಮ್ಮಲ್ಲಿದ್ದ ಹಣವನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಆಕೆಯ ಮನೆಯಲ್ಲಿ ಇಟ್ಟುಕೊಳ್ಳಲು ಹೇಳಿದರು.ಆ ಮುದುಕಿ ಒಪ್ಪಿದಳು. ಸ್ವಲ್ಪ ದಿನಗಳ ನಂತರ ಎಲ್ಲರೂ ಸಣ್ಣ ಪುಟ್ಟ ಕೆಲಸ ಹುಡುಕಿಕೊಂಡರು, ಅದರಲ್ಲಿ ಮಾದ ಎನ್ನುವವನಿಗೆ ಮಾತ್ರ ಕೆಲಸ ಸಿಕ್ಕಲಿಲ್ಲ. ಆತನಿಗೆ ಆ ಪೆಟ್ಟಿಗೆಯ ಮೇಲೆ ಕಣ್ಣು ಬಿತ್ತು. ಮುದುಕಿಗೆ ಅದರಲ್ಲಿ ಬಟ್ಟೆ ಬರೆ,ಹಳೇಯ ಸಾಮಾನು ಇದೆ ಎಂದು ಹೇಳಿದ್ದರು, ಆ ನಾಲ್ವರು.  ಒಂದು ದಿನ ಮಾದ ಅಜ್ಜಿಗೆ ಆ ಪೆಟ್ಟಿಗೆಯಲ್ಲಿ ಏನೋ ನೋಡಬೇಕಾಗಿದೆ ಎಂದು ಅದನ್ನು ಹೊತ್ತು ಪರಾರಿಯಾದ. ಉಳಿದವರಿಗೆ ವಿಷಯ ತಿಳಿದು ಮಾದ ಎಲ್ಲೂ ಕಾಣದೆ ಅಜ್ಜಿಯ ಮೇಲೆ ಅಪವಾದ ಹೊರಿಸಿದರು.ಅಜ್ಜಿ ಆ ಊರಿನಲ್ಲಿ ಜಾಣ ವಕೀಲನ ಮೊರೆ ಹೊಕ್ಕಳು. 

ಆ ವಕೀಲ ಚಾಣಕ್ಯನಷ್ಟು ಚಾಣಕ್ಷನೂ ತೆನಾಲಿ ರಾಮನಂತೆ ಜಾಣನೂ ಆಗಿದ್ದನು.ನಡೆದ ವಿಷಯವೆಲ್ಲಾ ಕೂಲಂಕುಶವಾಗಿ ಪರಿಗಣಿಸಿದನು. ಮೂರು ಜನರನ್ನೂ ಕರೆದು ಅವರ ಹೇಳಿಕೆ ಕೇಳಿದನು.ಅವರು “ನಾವು ನಾಲ್ವರು ಆಕೆಗೆ ಒಂದು ಪೆಟ್ಟಿಗೆ ಕೊಟ್ಟಿದೆವು. ನಾವು ಎಲ್ಲಾರೂ ಬಂದಾಗ ಮಾತ್ರ ಪೆಟ್ಟಿಗೆ ಕೊಡು ಎಂದಿದ್ದೆವು ಆದರೆ ಈಗ ಇವಳು ಪೆಟ್ಟಿಗೆ ಇಲ್ಲ ಎನ್ನುತ್ತಿದ್ದಾಳೆ “ ಎಂದರು.ತಕ್ಷಣ ವಕೀಲ ಎಲ್ಲರೂ ಅಂದರೆ ನಾಲ್ಕುಜನ ಇದ್ದರಲ್ಲವೇ ನಿಮ್ಮ ಗುಂಪಿನಲ್ಲಿ? ಹಾಗಿದ್ದರೆ ಎಲ್ಲರೂ ಬನ್ನಿ ಆಕೆ ಪೆಟ್ಟಿಗೆ ಕೊಡುತ್ತಾಳೆ ಎಂದನು. ತಮ್ಮ ಕುತಂತ್ರ ನಡೆಯದೆ ಮಾದನನ್ನು ಹುಡುಕುತ್ತಾ ಇದ್ದ ಕೆಲಸವನ್ನೂ ಕಳೆದುಕೊಂಡು ಊರೂರು ಅಲೆದರು.


ತಪ್ಪುಗಳ ಪಟ್ಟಿ 
-ಕನಕಾಪುರ ನಾರಾಯಣ  

 
ಗಂಡ-ಹೆಂಡಿರಂದಮೇಲೆ ಸಣ್ಣ ಪುಟ್ಟ ಜಗಳ, ವಾದ-ವಿವಾದ, ಸಿಟ್ಟು ಸಿಡುಕು ಮುನಿಸು ಇದ್ದದ್ದೇ. ಈ ಕಥೆಯ ಗಂಡ-ಹೆಂಡತಿ, ಮದುವೆಯಾಗಿ ನಾಲ್ಕಾರು ವರ್ಷ ಕಳೆದಿತ್ತು. ನವ ದಂಪತಿಗಳು ಒಮ್ಮೆ ಪ್ರವಚನ ಕೇಳಿ ಮನೆಗೆ ಬಂದ ದಿನ ಇಬ್ಬರೂ ಕುಳಿತು ನಿರ್ಧಾರಕ್ಕೆ ಬಂದು ತಮ್ಮಿಬ್ಬರಲ್ಲಿ ಪರಸ್ಪರ ಯಾವ ಯಾವ ವಿಷಯಗಳು / ಗುಣಗಳು ಬದಲಾಯಿಸಿಕೊಳ್ಳಬೇಕಾಗಿದೆ? ಎಂದು ಒಂದು ಪಟ್ಟಿ ಮಾಡೋಣ, ಆಗ ಇಬ್ಬರಲ್ಲೂ ವೈಮನಸ್ಯ ಕಡಿಮೆ ಆಗುವುದು ಎಂದು ನಿರ್ಧಾರ ಮಾಡಿ ಎರಡು ಕೋಣೆಗಳಲ್ಲಿ ಪ್ರತ್ಯೇಕ ಕುಳಿತರು. 
                                                   ಕೆಲವು ಹೊತ್ತಿನ ಬಳಿಕ ಎರಡು ಕಾಫಿ ಬಿಸಿ ಮಾಡಿ ಗಂಡ ಊಟದ ಮೇಜಿನ ಬಳಿಗೆ ಬಂದ, ತಡವಾಗಿ ಬಂದ ಹೆಂಡತಿಗೆ ಕಾಫಿಕೊಟ್ಟ. ಇಬ್ಬರೂ ತಮ್ಮ ಪಟ್ಟಿ ಸಿದ್ಧಪಡಿಸಿದ್ದರು ಮುಖದಲ್ಲಿ ಕಿರುನಗೆ ಚೆಲ್ಲಿತ್ತು. ನಾನು ಮೊದಲು ಆನ್ನುವುದು ಸದಾ ಕೇಳಿಬರುತ್ತಿದ್ದ ಸಂಸಾರದಲ್ಲಿ ಅಂದು ನೀನು ಮೊದಲು ಎಂದು ಇಬ್ಬರೂ ಹೇಳಿದರು ಹೆಣ್ಣಿನ ಜೋರು ದ್ವನಿಗೆ ಗಂಡ ಸೋಲಲಿಲ್ಲ, ಆಕೆಯೂ ಒಪ್ಪಿದಳು, ಸರಿ ಹೆಂಡತಿ ತನ್ನ ಪಟ್ಟಿ ಓದಿದಳು. ತನ್ನ ನಲ್ಲನ ಸಾಕಷ್ಟು ತಪ್ಪು ಗುಣಗಳನ್ನು ಗುರುತಿಸಿ ಓದುತ್ತಾ ಹೋದಳು.ನೀನು ಹೀಗೆ,ಈ ವಿಷಯದಲ್ಲಿ ಹೀಗೆ,ಇಲ್ಲಿ ನೀನ್ನ ನಡತೆ ಬದಲಾಗಬೇಕು, ಇದು ನನಗೆ ಕಷ್ಟ, ಈ ಸಮಯ ನನಗೆ ಸಹಿಸಲಾಗದು ಹೀಗೇ ಸುಮಾರು ಪುಟಗಳೇ ಇದ್ದವು ಆಕೆಯ ಪಟ್ಟಿಯಲ್ಲಿ. ಸರಿ ಎಲ್ಲವನ್ನೂ ಕೇಳಿದ ಗಂಡ ಸುಮ್ಮನೆ ಕುಳಿತಿದ್ದ. “ಸರಿ ನಾನೇನೋ ಎಲ್ಲಾ ವಿಷಯ ಓದಿದೆ, ನಿನ್ನ ಪಟ್ಟಿ ತೆಗಿ ನೋಡೋಣ ಏನೇನು ಬರೆದಿರುವೆ ಅಂತ” ಎಂದಳು. 
  
                                                                                               ಗಂಡ ನಿಧಾನವಾಗಿ ಒಂದು ಪುಸ್ತಕ ಮೇಜಿನಡಿಯಿಂದ ತೆಗೆದು ಮೇಲಿಟ್ಟ. ಇಡೀ ಪುಸ್ತಕ ತುಂಬುವಷ್ಟು ಬರೆದಿರಬಹುದು ಎಂದು ಊಹಿಸುವಷ್ಟರಲ್ಲೇ ಪುಸ್ತಕದ ಒಳಗಿನಿಂದ ಮಡಚಿಟ್ಟ ಪಟ್ಟಿ ಹೊರಕ್ಕೆ ಬಂದಿತು. ಆಕೆ ತಕ್ಷಣ ಅದನ್ನು ಕಸಿದು ಬಿಚ್ಚಿ ನೋಡಿದಳು “ಖಾಲಿ!” ಅರೆ ಏನೂ ಇಲ್ಲ. ಯಾಕೆ ಎಂದು ಪ್ರಶ್ನಿಸಿದಳು. ಆಗ ಆತ “ನಿನ್ನಲ್ಲಿ ಯಾವುದೇ ನ್ಯೂನತೆ ನನಗೆ ಕಂಡಿಲ್ಲ, ನೀನು ಹೇಗಿದ್ದೀಯೋ ಹಾಗೇ ಬಹಳ ಚೆನ್ನಾಗಿದ್ದೀಯಾ ನೀಹೀಗಿರುವುದೇ ನನಗೆ ಇಷ್ಟ” ಎಂದ. ಆಕೆಯ ಮುಖ ಮುದುಡಿತು.ತನ್ನ ತಪ್ಪು ಅರಿವಾಯಿತು. ಪ್ರೀತಿಯ ಮುಂದೆ ಎಲ್ಲವೂ ಕ್ಷುಲ್ಲಕ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು.





ಸಗ್ಗದ ದಾರಿ 
-ಕನಕಾಪುರ ನಾರಾಯಣ  


ಅದೊಂದು ಕ್ರೈಸ್ತರ ಶಾಲೆ. ಮುಂಜಾನೆ  ಪಾಠಗಳು ಆರಂಭವಾಗುವ ಮುನ್ನ ಒಂದು ಘಂಟೆ ನೀತಿ ಪಾಠ ಹೇಳುವ moral ಸೈನ್ಸ್ ತರಗತಿಗೆ ಎಲ್ಲರೂ ಕಡ್ಡಾಯವಾಗಿ ಬರಲೇಬೇಕಿತ್ತು. ಮಿಕ್ಕೆಲ್ಲ ಪಾಠಕ್ಕಿಂತ  ಮಕ್ಕಳಿಗೆ ಇದು ಪ್ರಿಯವಾಗಿತ್ತು. ಏಕೆಂದರೆ ಪಾಠದ ನಂತರ ಅವರೆಲ್ಲರಿಗೂ ಮಿಠಾಯಿ ಹಂಚಲಾಗುತ್ತಿತ್ತು. ಅದೂ ಅಲ್ಲದೇ ನೋಟ್ಸ್ ಬರೆಯುವ ಅವಶ್ಯವಿರಲಿಲ್ಲ ಮನೆಕೊಲಸವೂ ಇರುತ್ತಿರಲಿಲ್ಲ. ಮಕ್ಕಳಿಗೆ ಬಲು ಖುಷಿ ಕೊಟ್ಟಿತ್ತು. 

ಆದರೆ ಒಬ್ಬ ವಿದ್ಯಾರ್ಥಿ ರಾಜು ಎಂಬಾತ ಅಂದಿನ ತರಗತಿಗೆ ಹದಿನೈದು ನಿಮಿಷ ತಡವಾಗಿ ಓಡೋಡಿ ಬಂದ.ಮಾಸ್ತರರಿಗೆ ಕೋಪ ಬಂದಿತು. ಗದರಿದರು, ಎಲ್ಲ ಮಕ್ಕಳಮುಂದೆ ಅವಮಾನಿಸಿದರು. ರಾಜು ತಲೆತಗ್ಗಿಸಿದ, ಕೈಚಾಚಲು ಹೇಳಿದರು ಮಾಸ್ತರು. ಕಣ್ಮುಚ್ಚಿ ಕೈ ಚಾಚಿದ ರಾಜು. ಬಿದಿರುಕಡ್ಡಿಯಿಂದ ಎರಡು ಏಟು ಬಿದ್ದವು ಆ ಮುದ್ದಾದ ಮಗುವಿನ ಮೃದುವಾದ ಕೈಗಳಲ್ಲಿ ಕೆಂಪು ಬರೆಯು ಎದ್ದು ಕಾಣಿಸಿತು. ಕೆಲವು ಮಕ್ಕಳು ಈ ದೃಶ್ಯ ನೋಡಲಾಗದೆ ಬಲವಂತವಾಗಿ ಕಣ್ಮುಚ್ಚಿಕೊಂಡರು. 

ಮಾಸ್ತರರು ಬೈಗುಳದ ದನಿಯಲ್ಲೇ ಹೇಳಿದರು" ಈ ದಿನ ಮುಖ್ಯವಾದ ಪಾಠ ಮಾಡುತ್ತಿದ್ದೆ, ಹೆಸರು "ಸಗ್ಗಕ್ಕೆ ದಾರಿ" ಎಂದು. ನಿನಗೆ ಅರ್ಧ ಪಾಠ ಕೇಳಲು ಅದೃಷ್ಟವಿಲ್ಲ, ಹಾಳಾಗಿ ಹೋಗು. ಹೋಗಲಿ ತಡವಾಗಿ ಬಂದದ್ದಾದರೂ  ಏಕೆ ಹೇಳು ? ಎಂದು ಗದರಿದರು. ರಾಜು ಅಳುತ್ತಾ ತುಟಿ ಕಂಪಿಸುತ್ತಾ  "ಅಮ್ಮ ಕೊಟ್ಟಿಗೆಯಲ್ಲಿ ಜಾರಿ ಬಿದ್ದಳು, ಅವಳನ್ನು ಹಾಸಿಗೆ ಮೇಲೆ ಮಲಗಲು ಸಹಾಯ ಮಾಡಿ ಮುಲಾಮು ಹಚ್ಚಿ ಬರಲು ತಡವಾಯಿತು" ಎಂದ. ಅದನ್ನು ಕೇಳಿದ ಮಾಸ್ತರಿಗೆ ತುಂಬಾ ಬೇಸರವಾಯಿತು.  ಮನದಲ್ಲೆ ನೊಂದು ಬಾಲಕ ಈಗಾಗಲೇ ಸ್ವರ್ಗಕ್ಕೆ ದಾರಿ ಕಂಡುಕೊಂಡಿದ್ದಾನೆ  ಅವನಿಗೆ ಪಾಠದ ಅವಶ್ಯವಿಲ್ಲ ಎಂದೆನಿಸಿತು.  ವಿಚಾರಿಸದೆ ಬೆತ್ತದೇಟು ಕೊಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟರೂ ಮನಸ್ಸಿನಲ್ಲಿ ವ್ಯಥೆ  ಕಾಡಿತ್ತು. 


ಅತಿಥಿ ಸತ್ಕಾರ (ಹಾಸ್ಯ) 
-ಕನಕಾಪುರ ನಾರಾಯಣ  

 
ಬಡವ ರಾಮಯ್ಯ ತನ್ನ ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದ.ಆತನಿಗೆ ಅತಿಥಿ ಎಂದರೆ ದೇವರ ಸಮಾನ. ಆತನ ಮನೆಗೆ ಬಂದವರಿಗೆ ಊಟ ಉಪಚಾರಕ್ಕೆ ಎಂದಿಗೂ ಮೋಸವಿರಲಿಲ್ಲ. ಇದನ್ನು ಅರಿತ ಕೆಲವು ನಂಟರು ಮತ್ತೆ ಮತ್ತೆ ಆತನ ಮನೆಗೆ ಊಟಕ್ಕೆ ಬರತೊಡಗಿದರು.ಆತನ ಹೆಂಡತಿಗೆ ಅಡುಗೆ ಮಾಡಿಹಾಕಿ ರೋಸಿ ಹೋಗಿತ್ತು.ಒಂದು ದಿನ ಮತ್ತದೇ ನಂಟರು ಮನೆಗೆ ಬಂದರು.ಆ ದಿನ ರಾಮಯ್ಯ ಮನೆಯಲ್ಲಿರಲಿಲ್ಲ.ಅವರ ಮನೆಯಲ್ಲಿ ಒಂದು ದೊಡ್ದ ಒರಳು ಮತ್ತು ಒನಕೆ ಇತ್ತು.ಅದಕ್ಕೆ ಹೂವು,ಅರಿಶಿನ ಕುಂಕುಮ ಅಲಂಕಾರ ಮಾಡಲಾಗಿತ್ತು.ಅವರು "ಇದೇನಿದು?" ಎಂದರು.ಅದಕ್ಕೆ ರಾಮಯ್ಯನ ಹೆಂಡತಿ "ನಮ್ಮೆಜಮಾನರು ಈಗ ಒನಕೆ ವ್ರತ ಮಾಡುತ್ತಿದ್ದಾರೆ,ಮನೆಗೆ ಬಂದವರಿಗೆ ಊಟದ ನಂತರ ಎರಡೆರೆಡು ಲಾತ ಕೊಡುತ್ತಾರೆ"ಎಂದಳು. ಕೂಡಲೇ ಎಲ್ಲಾ ನಂಟರು ಓಡತೊಡಗಿದರು.
                               ಅದೇವೇಳೆಗೆ ಮನೆಗೆ ಬಂದ ರಾಮಯ್ಯ ನಂಟರು ಓಡುತ್ತಿರುವುದನ್ನು ಕಂಡು ಏಕೆಂದು ಹೆಂಡತಿಯನ್ನು ಕೇಳಿದನು.ಅದಕ್ಕೆ ಆತನ ಹೆಂಡತಿ"ಅವರಿಗೆ ಈ ಒನಕೆ ಬೇಕಂತೆ,ಕೊಡಲ್ಲ ಎಂದದಕ್ಕೆ ಓಡಿ ಹೋಗ್ತಿದ್ದಾರೆ"ಎಂದಳು.ರಾಮಯ್ಯ ಒನಕೆ ಹಿಡಿದು ಅವರ ಹಿಂದೆ ತಾನೂ ಓಡಿದ. ನಂಟರು"ಅಯ್ಯೋ ರಾಮಯ್ಯ ಒನಕೆ ಹಿಡಿದು ಬರ್ತಿದ್ದಾನೆ ಓಡಿ, ಜೋರಾಗಿ ಓಡಿ"ಎಂದು ರಾಮಯ್ಯನ ಕಣ್ಣು ತಪ್ಪಿಸಿ ದೂರ ಸಾಗಿದರು.ಮತ್ತೆ ಆತನ ಮನೆಯಕಡೆ ತಲೆ ಹಾಕುವ ಸಾಹಸ ಮಾಡಲಿಲ್ಲ.
 


ಯಕ್ಷನ ಎರಡು ವರಗಳು
-ಕನಕಾಪುರ ನಾರಾಯಣ  


ದೂರದ ಹಳ್ಲಿಯಲ್ಲಿ ಒಬ್ಬ ಬಟ್ಟೆ ನೇಕಾರ ವಾಸವಾಗಿದ್ದ.ಬಟ್ಟೆ ನೇಯುವುದು ಅವನ ಕಸುಬು.ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ದೊಡ್ಡದೊಂದು ಮರವನ್ನು ನೋಡಿ ಈ ಮರವನ್ನು ಕಡಿದರೆ ಒಲೆಗೆ,ಮನೆಗೆ ಉಪಯೋಗಕ್ಕೆ ಬರುತ್ತದೆ" ಎಂದು ನಿರ್ಧರಿಸಿ ಮರುದಿನ ಮರ ಕತ್ತರಿಸಲು ಬೇಕಾದ ಮಚ್ಚು,ಕೊಡಲಿ,ಗರಗಸ ಎಲ್ಲಾ ತಂದು ಕೆಲಸ ಶುರುಮಾಡಿದ.ಕೂಡಲೇ ಮರದಲ್ಲಿ ವಾಸವಾಗಿದ್ದ ಯಕ್ಷನೊಬ್ಬ "ಅಯ್ಯಾ ಈ ಮರದಲ್ಲಿ ನಾನು ವಾಸವಾಗಿದ್ದೇನೆ ದಯವಿಟ್ಟು ಕಡಿಯಬೇಡ"ಎಂದು ನುಡಿದ.ಆದರೆ ನೇಕಾರ ಕೇಳಲಿಲ್ಲ"ಬೇಕಿದ್ದರೆ ಬೇರೆ ಮರದಲ್ಲಿ ಹೋಗಿರು"ಎಂದು ಹೇಳಿದ."ಹಾಗಿದ್ದಲ್ಲಿ ನಿನಗೆ ಎರಡು ವರ ಕೊಡುವೆ ಏನು ಬೇಕಾದರೂ ಕೇಳಿಕೋ,ಆದರೆ ಮರವನ್ನು ಮುಟ್ಟಬೇಡ"ಎಂದು ಬೇಡಿದ. ಸರಿ ವರವನ್ನು ಏನು ಬೇಕೆಂದು ಕೇಳುವುದು? "ಇರು ನನ್ನ ಹೆಂಡತಿಯನ್ನು ಕೇಳಿ ಬರುತ್ತೇನೆ" ಎಂದು ಹೊರಟ.
                       ದಾರಿಯಲ್ಲಿ ಆತಂಕ ತಡೆಯಲಾರದೆ ಒಬ್ಬ ಕುಂಬಾರನಿಗೆ ಹೇಳಿದ "ಅದಕ್ಕೆ ಆ ಕುಂಬಾರ "ಹೆಚ್ಚು ಆಸ್ತಿ,ಮತ್ತು ದೊಡ್ಡ ಮನೆಯನ್ನು ಕೇಳಿಕೋ" ಎಂದ. ನೇಕಾರ ತನ್ನ ದಡ್ಡ ಹೆಂಡತಿ ಬಳಿ ಎಲ್ಲವನ್ನೂ ಹೇಳಿದ. ಆಕೆ "ಆಸ್ತಿ ಅಂತಸ್ತು ಬೇಡ, ನೇಯಲು ಇನ್ನೆರಡು ಕೈಗಳು ಮತ್ತೊಂದು ತಲೆಯನ್ನು ಪಡೆದುಕೊಳ್ಳಿ,ಹೆಚ್ಚುಹೆಚ್ಚು ನೇಯ್ದು ಹೆಚ್ಚು ಸಂಪಾದಿಸಬಹುದು!"ಎಂದು ಸಲಹೆ ಇತ್ತಳು.ಅದರಂತೆಯೇ "ನನಗೆ ನಾಲ್ಕು ಕೈಗಳೂ ಎರಡು ತಲೆಗಳೂ ಇರಲಿ"ಎಂದು ಕೇಳಿದ.ಯಕ್ಷ "ಅಸ್ತು" ಎಂದ. ನಂತರ ಮನೆಯ ಕಡೆಗೆ ನಡೆದು ಹೊರಟಿರಲು ಜನರು ಯಾವುದೂ ಭೂತವೋ,ಪ್ರೇತವೋ ಊರಿನೊಳಗೆ ಬರುತ್ತಿದೆ ಎಂದು ಕಲ್ಲು,ಕೋಲಿನಿಂದ ಬಾರಿಸಿದರು.ನೇಕಾರ ಕೈಕಾಲು ಮುರಿದುಕೊಂಡು ಕೆಲವೇ ದಿನಗಳಲ್ಲಿ ಪ್ರಾಣ ಬಿಟ್ಟ.



ವಸೂಲಿ(ಹಾಸ್ಯ)
-ಕನಕಾಪುರ ನಾರಾಯಣ  


ಒಂಟಿಯಾಗಿ ಕಾಲ್ನಡಿಗೆ ಪ್ರಯಾಣ ಬಳಸಿದ್ದ ಗುಂಡನ ದಾರಿಗೆ ಅಡ್ಡವಾಗಿ ಒಬ್ಬ ಸಣಕಲು ದರೋಡೆಗಾರ ಪಿಸ್ತೂಲ್ ಹಿಡಿದು ನಿಂತ "ಎತ್ತೋ ದುಡ್ಡು, ಬಿಚ್ಚೋ ವಾಚು" ಅಂದ.ಅದಕ್ಕೆ ಗುಂಡ "ತಗೋಳಪ್ಪ ದುಡ್ಡು,ಆದರೆ ನನಗೊಂದು ಉಪಕಾರ ಆಗಬೇಕಲ್ಲಾ." ಎಂದ.ಅದಕ್ಕೆ ಕಳ್ಳ ರೇಗಿ ಹೇಳಿದ"ಏನದು ನನ್ನಿಂದ ಉಪಕಾರ?" ಎನ್ನಲು ಗುಂಡ "ನನ್ನ ಹೆಂಡತಿಗೆ ನನ್ನಲ್ಲಿದ್ದ ದುಡ್ಡು ಕಳ್ಳತನ ಆಯ್ತು ಅಂದರೆ ನನ್ನ ಮೇಲೆ ನಂಬಿಕೇನೇ ಇಲ್ಲ, ಅದಕ್ಕೆ ನನ್ನ ಟೊಪ್ಪಿಗೆ ನಿನ್ನ ಪಿಸ್ತೂಲ್ ನಿಂದ ಒಮ್ಮೆ ಶೂಟ್ ಮಾಡು" ಅಂದ. ಅದಕ್ಕೆ ಆ ದರೋಡೆಕಾರ "ಅಷ್ಟೇ ತಾನೆ"ಎಂದು, ಢಂ! ಎಂದು ಟೋಪಿಗೊಂದು ಗುಂಡು ಹಾರಿಸಿದ.ಗುಂಡ ಅಷ್ಟಕ್ಕೇ ಸುಮ್ಮನಾಗಲಿಲ್ಲ "ಅರೆರೆ ಹಾಗೇ ಈ ನನ್ನ ಕೋಟಿಗೂ ನಾಲ್ಕಾರು ಗುಂಡು ಹಾರಿಸು" ಎಂದ. ಆದರೆ ಆ ಕಳ್ಳ ಎರಡು ಗುಂಡು ಹಾರಿಸಿ ಸುಮ್ಮನಾದ.ಗುಂಡ "ಹೂ ಇನ್ನೂ ಒಂದೆರೆಡು ತೂತುಗಳು ಬೀಳಲೀ" ಎಂದ. ಅದಕ್ಕೆ ಕಳ್ಳ "ನನ್ನಲ್ಲಿ ಇದ್ದ ಬುಲೆಟ್ ಎಲ್ಲಾ ಖಾಲಿ ಆಗಿದ" ಅಂದ.  ತಕ್ಷಣ ಗುಂಡ "ನನಗೂ ಅದೇ ಬೇಕಿತ್ತು , ಎಲ್ಲಿ ಕೊಡು ನನ್ನ ದುಡ್ಡು, ಜೊತೆಗೆ ಈ ಟೊಪಿ ಕೋಟಿಗೂ ನಿನ್ನ ಹತ್ರ ಇರೋದನ್ನು ಕೊಡು ಇಲ್ಲದಿದ್ದ್ರೆ ಇಲ್ಲೇ ಈ ಛತ್ರಿಯಲ್ಲೇ ನಿನ್ನ ಚುಚ್ಚಿಚುಚ್ಚಿ ಸಾಯಿಸಿ ಬಿಡ್ತೀನಿ" ಎಂದು ಹೆದರಿಸಿ ಎಲ್ಲಾ ವಸೂಲಿ ಮಾಡಿಕೊಂಡೇ ಮನೆಗೆ ಹೊರಟ.




ಮದರ್ಸ್ ಡೇ 
-ಕನಕಾಪುರ ನಾರಾಯಣ  



ತಾಯಿಗೆ ಅವಳ ಮಮತೆ, ಮಹತ್ವಕ್ಕೆ ಗೌರವ ಸೂಚಿಸುವ ದಿನವೆಂದು ಮಗನೊಬ್ಬ ನೂರಾರು ಮೈಲು ದೂರದಲ್ಲಿದ್ದ ಅಮ್ಮನಿಗೆ ಹೂವಿನಗುಚ್ಚವನ್ನು ಪಾರ್ಸಲ್ ಮಾಡಲೆಂದು ಹೂವಿನ ಅಂಗಡಿಗೆ ತನ್ನ ಹೊಸ ಕಾರಿನಲ್ಲಿ ಬಂದ. ಅಲ್ಲೊಬ್ಬ ಪುಟ್ಟ ನಿರ್ಗತಿಕ ಬಾಲಕಿ ಈ ಮಗನಿಗೆ ಕೈಚಾಚಿ ಒಂದು ಡಾಲರ್ ಗಾಗಿ ಭಿಕ್ಷೆ ಬೇಡಿದಳು,ಕಾರಣವೇನೆಂದು ಕೇಳಲು ಆಕೆ ತನ್ನ ತಾಯಿಗೆ ಒಂದು ಹೂ ಕೊಂಡು ಕೊಡಬೇಕು ಎಂದಳು.ಒಂದೇ ಡಾಲರ್ ಸಾಕೆ? ಎಂದುಕೊಳ್ಳುತ್ತಾ ಅನುಮಾನದಿಂದ ಡಾಲರನ್ನು ಕೊಡದೆ ಮಗನು ಒಂದು ಹೂವನ್ನೇ ಕೊಡಿಸಿದ.ಆ ಬಾಲಕಿ "ದಯಮಾಡಿ ಸ್ವಲ್ಪ ದೂರ ಡ್ರಾಪ್ ಮಾಡ್ತೀರಾ ಎರಡುಮೈಲಿ ನಡೆದು ಹೋಗಬೇಕು ಅಮ್ಮನಿಗೆ ಹೂ ಕೊಡಲು"ಎಂದಳು.ಸರಿ ಬಂದ ಕೆಲಸ ತಾಯಿಗೆ ಹೂ ಪಾರ್ಸೆಲ್ ಮಾಡಿದ್ದಾಗಿದೆ ವಾಪಸ್ಸಾಗುವ ದಾರಿಯಕಡೆಯೇ ಕೈತೋರಿಸುತ್ತಿದ್ದಾಳೆ "ಸರಿ ನಡಿ ಡ್ರಾಪ್ ಮಾಡ್ತೀನಿ" ಕಾರಿನಲ್ಲಿ ಎರಡುಮೈಲಿ ತಲುಪಲು ಹೆಚ್ಚು ಸಮಯವಾಗಲಿಲ್ಲ"ಹಾ ಇಲ್ಲೇ ಇಲ್ಲೇ" ಎಂದು ತಡೆದು, ಕಾರ್ ನಿಂತ ತಕ್ಷಣವೇ ಬಾಗಿಲು ತೆರೆದು ಒಡಿದಳು,...ಎಲ್ಲಿಗೆ ?... ಪ್ರಶಾಂತ ಸ್ಥಳದಲ್ಲಿ ಶಾಂತವಾಗಿ ಮಲಗಿದ್ದ ತಾಯಿಯ ಸಮಾಧಿಯ ಕಡೆಗೆ!,ಮಗನಿಗೆ ಮೈ ಛುಳ್ ಎಂದಿತು,ಥಟ್ಟನೆ ಕಾರನ್ನು ಅಂಗಡಿಯ ಕಡೆ ಓಡಿಸಿ,ತಾನು ಮಾಡಿದ್ದ ಪಾರ್ಸೆಲ್ ರದ್ದುಮಾಡಿ,ಒಂದು ಹೂಗುಚ್ಚವನ್ನು ಕೊಂಡು ತಾನೇ ಖುದ್ದಾಗಿ ಅಮ್ಮನನ್ನು ಕಾಣಲು ಹೊರಟ.
 
ಓಟ 
-ಕನಕಾಪುರ ನಾರಾಯಣ  


ಆಫ್ರಿಕಾ ದೇಶದಲ್ಲಿ ಆಗ ಬಿಳಿಯರು ಆಳುತ್ತಿದ್ದ ಕಾಲ.ಇಬ್ಬರು ಕರಿಯರು "ಬಿಳಿಯರಿಗೆ ಮಾತ್ರ" ಎನ್ನುವ ಸ್ಥಳದಲ್ಲಿ ಭೇಟಿಯಾದರು ಒಬ್ಬನಿಗೆ ಅಲ್ಲಿ ಕೆಲಸ ಮಾಡಲು ಅನುಮತಿ ಇತ್ತು, ಮತ್ತೊಬ್ಬನಿಗೆ ಅದಿರಲಿಲ್ಲ.ಸಿಕ್ಕಿಬಿದ್ದರೆ ಜೈಲು! ಅದೇ ವೇಳೆಗೆ ಒಬ್ಬ ಪೋಲೀಸ್ ಅವರ ಬಳಿಗೇ ಬರುವುದನ್ನು ಕಂಡು ಕೆಲಸ ಮಾಡಲು ಅನುಮತಿ ಇದ್ದ ಕರಿಯ ಮತ್ತೊಬ್ಬನಿಗೆ ನೀನು ಓಡು ನಾನು ಹಿಂದೆಯೇ ಬರುವೆ ಎಂದ.ಇಬ್ಬರೂ ಓಡತೊಡಗಿದರು.ಪೋಲೀಸ್ ಇನ್ನೂ ಯುವಕ ಹಾಗೂ ಗಟ್ಟಿ ಆಳಾದ್ದರಿಂದ ಹಿಂದೆ ಓಡುತ್ತಿದ್ದವನನ್ನು ಹಿಡಿದ."ತೋರಿಸು ನಿನ್ನ ಪೆರ್ಮಿಟ್ " ಅಂದ. ಜೇಬುಗಳೆಲ್ಲಾ ತಡಕಾಡಿ ತಡಮಾಡಿ ಪರ್ಮಿಟ್ ತೋರಿಸಿದ ಆ ಕರಿಯ.ಅಷ್ಟರಲ್ಲಿ ಪರ್ಮಿಟ್ ಇಲ್ಲದವ ಕೈಗೆ ಸಿಗದಷ್ಟು ದೂರ ಓಡಿದ್ದ."ಪರ್ಮಿಟ್ ಇದ್ದರೂ ನೀನು ಏಕೆ ಓಡಿದೆ" ಎಂದು ಪೋಲೀಸ್ ಪ್ರಶ್ನಿಸಿದ."ಡಾಕ್ಟರ್ ನನಗೆ ದಿನಾ ನಾಲ್ಕು ಮೈಲಿ ಓಡಲು ಹೇಳಿದ್ದಾರೆ" ಅಂದ."ಹಾಗಾದರೆ ನಿನ್ನ ಗೆಳೆಯ ಏಕೆ ಓಡುತ್ತಿದ್ದ?"ಪೋಲೀಸ್ ಮತ್ತೆ ಪ್ರಶ್ನಿಸಿದ."ಆತನಿಗೂ ಡಾಕ್ಟರ್ ಓಡಲು ಸಲಹೆ ನೀಡಿದ್ದಾರೆ"ಎಂದ.ಅದಕ್ಕೆ ಪೋಲೀಸ್ "ನನ್ನನ್ನು ಅಷ್ಟು ಪೆದ್ದನೆಂದು ತಿಳಿದಿರುವೆಯಾ, ನೀವು ಆರೋಗ್ಯಕ್ಕಾಗಿ ಓಡುತ್ತಿದ್ದರೆ ನಾನು ಹಿಂಬಾಲಿಸಿದರೂ ನಿಲ್ಲದೆ ಏಕೆ ಓಡಿದಿರಿ?"ಎಂದ ಅದಕ್ಕೆ ಆ ಜಾಣ ಕರಿಯ"ಅರೆ ನಿಮಗೂ ಡಾಕ್ಟರ್ ಓಡಲು ಹೇಳಿರಬಹುದೇನೋ ಅಂತ ತಿಳಿದು ಹಾಗೆ ಮಾಡಿದ್ವಿ"ಎಂದು ತಪ್ಪಿಸಿಕೊಂಡು ಹೊರಟೇಬಿಟ್ಟ.


ನಂದಾ ದೀಪ
-ಕನಕಾಪುರ ನಾರಾಯಣ 


ಪುಟ್ಟ ಎಣ್ಣೆಯ ದೀಪವೊಂದನ್ನು ರವಿ ಮುಳುಗುವ ಹೊತ್ತಿಗೆ ಮನೆಯ ಯಜಮನ ಅದರ ಹತ್ತಿಯ ಬತ್ತಿಗೆ ಕಡ್ಡಿಗೀರಿ ಸೋಕಿಸಲು ಆ ನಂದಾದೀಪವು ಆನಂದದಿಂದ ತನ್ನಲ್ಲೇ ಹೆಮ್ಮೆ ಪಟ್ಟಿತು. "ಆಹಾ !ಸಂಜೆ ಕಳೆದು ಕತ್ತಲು ಕವಿಯುವ ಹೊತ್ತಿಗೆ ನನ್ನದೇ ದರ್ಬಾರು ಸೂರ್ಯನಿಗಿಂತ ನಾನೇನು ಕಡಿಮೆ, ರಾತ್ರಿಯ ಹೊತ್ತೂ ಬೆಳಕು ಚೆಲ್ಲುವ ಹಿರಿಮೆ ನನ್ನದು" ಎಂದು ಜಂಭದಿಂದ ನುಡಿಯಿತು.ತಕ್ಷಣ ರಭಸವಾಗಿ ಬೀಸಿದ ಗಾಳಿಯ ಪ್ರಭಾವದಿಂದ ದೀಪ ಆರಿಹೋಯಿತು.ಕೂಡಲೇ ಯಜಮಾನ ಮತ್ತೊಮ್ಮೆ ಅದನ್ನು ಹೊತ್ತಿಸಿ ಗೋಡೆಯ ಬದಿಗೆ ಸರಿಸಿದನು.ಹಿಗ್ಗಿದ್ದ ದೀಪಕ್ಕೆ ಸ್ವಲ್ಪ ಬೇಸರವಾಯಿತು.ಆ ಕೂಡಲೇ "ಅರೆ! ನೀನೇನೂ ಕಡಿಮೆ ಇಲ್ಲಾ, ಆದರೆ ಸೂರ್ಯನಿಗೆ ಮತ್ತೆ ಮತ್ತೆ ಹೊತ್ತಿಸುವ ಗೋಜಿಲ್ಲವಲ್ಲಾ"ಎಂದು ಯಾರೋ ಹೇಳಿದಂತಾಯಿತು. ತನ್ನೊಳಗಿನ ಮನಸ್ಸೇ ಬುದ್ದಿ ಹೇಳಿದುದು ಅರಿವಾಗಿ ನಾಚಿಕೆಯಾಯಿತು.  
 

ಕುಂಟ ನಾಯಿ ಮರಿ 
-ಕನಕಾಪುರ ನಾರಾಯಣ 


ದೂರದ ಫಾರ್ಮ್ ಹೌಸ್ ಬಳಿಯಲ್ಲಿ "ನಾಯಿ ಮರಿಗಳು ಮಾರಾಟಕ್ಕಿವೆ " ಎಂದು ಫಲಕವೊಂದು ತೂಗಾಡುತ್ತಿತ್ತು. ಡ್ರೈವರ್ ಗೆ ಕಾರ್ ನಿಲ್ಲಿಸಲು ಹೇಳಿ ಪುಟ್ಟ ಬಾಲಕ ಕಾರಿನಿಂದಿಳಿದು ಅಲ್ಲಿದ್ದ ಮಾಲೀಕನನ್ನು ಕಂಡು "ನನಗೆ ಒಂದು ನಾಯಿಮರಿ ಬೇಕಿದೆ ಕೊಳ್ಳಬಹುದೇ" ಎಂದ, ಬೋರ್ಡ ಹಾಕಿರುವುದೇ ಉಂಟಂತೆ ಸರಿ  "ಒಂದು ನಾಯಿಮರಿಗೆ ಹತ್ತು ಡಾಲರ್ ಆಗುತ್ತದೆ" ಎಂದ ಮಾಲೀಕ, ಬಾಲಕ ತನ್ನ ಜೇಬಿನಡಿಗೆ ಕೈ ಹಾಕಿ ಹುಡುಕಿ ತಡಕಿ "ನನ್ನ ಬಳಿ ಇರುವುದೇ ಎಂಟು ಡಾಲರ್ ಮಾತ್ರ, ಆಗಬಹುದಾ" ಎಂದು ಮುಖ ಪೆಚ್ಚಗೆ ಮಾಡಿ ಹೇಳಿದ. ಹೋಗಲಿ ಮಕ್ಕಳಿಗೆ ತಾನೆ ಎಂದು ಮಾಲೀಕ ನಾಯಿ ಗೂಡಿನ ಕಡೆ ಜೋರಾಗಿ ಶಿಳ್ಳೆ ಹೊಡೆದ, ಉಣ್ಣೆಯ ಉಂಡೆಗಳಂತೆ ಗುಂಡುಗುಂಡಾದ ನಾಯಿ ಮರಿಗಳು ಗುಡುಗುಡು ಓಡಿ ಬಂದವು,"ನಿನಗೆ ಯಾವುದು ಬೇಕೇ ಅರಿಸಿಕೋ" ಎಂದ ಮಾಲೀಕ, 

ಅಷ್ಟರಲ್ಲಿ ಗೂಡಿನ ಕಡೆಯಿಂದ ಮತ್ತೊಂದು ಮರಿ ನಿಧಾನವಾಗಿ ಬೇರೆ ಮರಿಗಳ ಗುಂಪನ್ನು ಸೇರಲು ಕಷ್ಟಪಟ್ಟು ಓಡುತ್ತಾ ಬರುವುದನ್ನು ಕಂಡು ಬಾಲಕ "ನನಗೆ ಆ ಮರಿ ಬೇಕು" ಎಂದ, "ಅಯ್ಯೋ ಅದು ಬೇಡ ಮಗು ನಿನಗೆ ಅದರ ಜೊತೆ ಆಡಲು ಅಷ್ಟು ಸೂಕ್ತವಲ್ಲ ನೋಡು ಅದು ಕುಂಟ ನಾಯಿ ಮರಿ" ಎಂದ. ತಕ್ಷಣ ಬಾಲಕ ತನ್ನ ಬಲಗಾಲಿನ ಪ್ಯಾಂಟನ್ನು ಮೇಲಕ್ಕೆ ಸರಿಸಿ ಸ್ಟೀಲ್ ನಿಂದ ಮಾಡಿದ ತನ್ನ ಕೃತಕವಾದ ಕಾಲನ್ನು ತೋರಿಸಿ "ಇರಲಿ ನನಗೂ ಅಷ್ಟೇನು ಜೋರಾಗಿ ಓಡಲು ಸಾಧ್ಯವಿಲ್ಲ ಅದರ ಕಷ್ಟವನ್ನು ನಾನೊಬ್ಬನೇ ಅರ್ಥಮಾಡಿಕೊಳ್ಳಬಲ್ಲೆ" ಎಂದು ಓಡಿಬಂದು ಬಾಗಿ ಬಾಚಿ ತಬ್ಬಿ ಆ ಮರಿಯನ್ನು ಮನೆಗೆ ಕರೆದುಕೊಂಡು ಹೋದ


ತಪ್ಪುಗಳ ಪಟ್ಟಿ 

-ಕನಕಾಪುರ ನಾರಾಯಣ 

                          ಗಂಡ-ಹೆಂಡಿರಂದಮೇಲೆ ಸಣ್ಣ ಪುಟ್ಟ ಜಗಳ, ವಾದ-ವಿವಾದ, ಸಿಟ್ಟು ಸಿಡುಕು ಮುನಿಸು ಇದ್ದದ್ದೇ. ಈ ಕಥೆಯ ಗಂಡ-ಹೆಂಡತಿ, ಮದುವೆಯಾಗಿ ನಾಲ್ಕಾರು ವರ್ಷ ಕಳೆದಿತ್ತು. ನವ ದಂಪತಿಗಳು ಒಮ್ಮೆ ಪ್ರವಚನ ಕೇಳಿ ಮನೆಗೆ ಬಂದ ದಿನ ಇಬ್ಬರೂ ಕುಳಿತು ನಿರ್ಧಾರಕ್ಕೆ ಬಂದು ತಮ್ಮಿಬ್ಬರಲ್ಲಿ ಪರಸ್ಪರ ಯಾವ ಯಾವ ವಿಷಯಗಳು / ಗುಣಗಳು ಬದಲಾಯಿಸಿಕೊಳ್ಳಬೇಕಾಗಿದೆ? ಎಂದು ಒಂದು ಪಟ್ಟಿ ಮಾಡೋಣ, ಆಗ ಇಬ್ಬರಲ್ಲೂ ವೈಮನಸ್ಯ ಕಡಿಮೆ ಆಗುವುದು ಎಂದು ನಿರ್ಧಾರ ಮಾಡಿ ಎರಡು ಕೋಣೆಗಳಲ್ಲಿ ಪ್ರತ್ಯೇಕ ಕುಳಿತರು. ಕೆಲವು ಹೊತ್ತಿನ ಬಳಿಕ ಎರಡು ಕಾಫಿ ಬಿಸಿ ಮಾಡಿ ಗಂಡ ಊಟದ ಮೇಜಿನ ಬಳಿಗೆ ಬಂದ, ತಡವಾಗಿ ಬಂದ ಹೆಂಡತಿಗೆ ಕಾಫಿಕೊಟ್ಟ. ಇಬ್ಬರೂ ತಮ್ಮ ಪಟ್ಟಿ ಸಿದ್ಧಪಡಿಸಿದ್ದರು ಮುಖದಲ್ಲಿ ಕಿರುನಗೆ ಚೆಲ್ಲಿತ್ತು. ನಾನು ಮೊದಲು ಆನ್ನುವುದು ಸದಾ ಕೇಳಿಬರುತ್ತಿದ್ದ ಸಂಸಾರದಲ್ಲಿ ಅಂದು ನೀನು ಮೊದಲು ಎಂದು ಇಬ್ಬರೂ ಹೇಳಿದರು ಹೆಣ್ಣಿನ ಜೋರು ದ್ವನಿಗೆ ಗಂಡ ಸೋಲಲಿಲ್ಲ, ಆಕೆಯೂ ಒಪ್ಪಿದಳು.
                         ಸರಿ ಹೆಂಡತಿ ತನ್ನ ಪಟ್ಟಿ ಓದಿದಳು. ತನ್ನ ನಲ್ಲನ ಸಾಕಷ್ಟು ತಪ್ಪು ಗುಣಗಳನ್ನು ಗುರುತಿಸಿ ಓದುತ್ತಾ ಹೋದಳು.ನೀನು ಹೀಗೆ,ಈ ವಿಷಯದಲ್ಲಿ ಹೀಗೆ,ಇಲ್ಲಿ ನೀನ್ನ ನಡತೆ ಬದಲಾಗಬೇಕು, ಇದು ನನಗೆ ಕಷ್ಟ, ಈ ಸಮಯ ನನಗೆ ಸಹಿಸಲಾಗದು ಹೀಗೇ ಸುಮಾರು ಪುಟಗಳೇ ಇದ್ದವು ಆಕೆಯ ಪಟ್ಟಿಯಲ್ಲಿ. ಸರಿ ಎಲ್ಲವನ್ನೂ ಕೇಳಿದ ಗಂಡ ಸುಮ್ಮನೆ ಕುಳಿತಿದ್ದ. “ಸರಿ ನಾನೇನೋ ಎಲ್ಲಾ ವಿಷಯ ಓದಿದೆ, ನಿನ್ನ ಪಟ್ಟಿ ತೆಗಿ ನೋಡೋಣ ಏನೇನು ಬರೆದಿರುವೆ ಅಂತ” ಎಂದಳು. ಗಂಡ ನಿಧಾನವಾಗಿ ಒಂದು ಪುಸ್ತಕ ಮೇಜಿನಡಿಯಿಂದ ತೆಗೆದು ಮೇಲಿಟ್ಟ. ಇಡೀ ಪುಸ್ತಕ ತುಂಬುವಷ್ಟು ಬರೆದಿರಬಹುದು ಎಂದು ಊಹಿಸುವಷ್ಟರಲ್ಲೇ ಪುಸ್ತಕದ ಒಳಗಿನಿಂದ ಮಡಚಿಟ್ಟ ಪಟ್ಟಿ ಹೊರಕ್ಕೆ ಬಂದಿತು. ಆಕೆ ತಕ್ಷಣ ಅದನ್ನು ಕಸಿದು ಬಿಚ್ಚಿ ನೋಡಿದಳು “ಖಾಲಿ!” ಅರೆ ಏನೂ ಇಲ್ಲ. ಯಾಕೆ ಎಂದು ಪ್ರಶ್ನಿಸಿದಳು. ಆಗ ಆತ “ನಿನ್ನಲ್ಲಿ ಯಾವುದೇ ನ್ಯೂನತೆ ನನಗೆ ಕಂಡಿಲ್ಲ, ನೀನು ಹೇಗಿದ್ದೀಯೋ ಹಾಗೇ ಬಹಳ ಚೆನ್ನಾಗಿದ್ದೀಯಾ ನೀಹೀಗಿರುವುದೇ ನನಗೆ ಇಷ್ಟ” ಎಂದ. ಆಕೆಯ ಮುಖ ಮುದುಡಿತು.ತನ್ನ ತಪ್ಪು ಅರಿವಾಯಿತು. ಪ್ರೀತಿಯ ಮುಂದೆ ಎಲ್ಲವೂ ಕ್ಷುಲ್ಲಕ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು.
 



ಬೆಕ್ಕಿಗೊಂದು ಹೆಸರು
 -- ಕನಕಾಪುರ ನಾರಾಯಣ  


ವಿದೇಶದಿಂದ ವಲಸೆ/ವ್ಯಾಪಾರಕ್ಕೆ ಬಂದವರು ಚೀನಾದೇಶದ ರಾಜನಿಗೆ ಒಂದು ಬೆಕ್ಕನ್ನು ಉಡುಗೊರೆಯಾಗಿ ಕೊಟ್ಟರು.ನೋಡಲು ಮುದ್ದಾಗಿದ್ದ ಮರಿಯನ್ನು ರಾಜ ಸದಾ ತನ್ನೊಂದಿಗೇ ಇಟ್ಟುಕೊಂಡು ಇರುತ್ತಿದ್ದ.ಎಲ್ಲರೂ ಅದರ ಹೆಸರು ಏನು ಇಟ್ಟಿದ್ದೀರಿ? ಎಂದು ಕೇಳಲು,ತನ್ನ ಆಸ್ಥಾನದಲ್ಲಿ ಸಾರ್ವಜನಿಕರ ಸಭೆ ಸೇರಿಸಿ ಸಲಹೆ ಕೇಳಿದ.ಒಬ್ಬ ಹೇಳಿದ "ಹುಲಿ"ಎಂದೇಕೆ ಇಡಬಾರದು?" ಎನ್ನುವಷ್ಟರಲ್ಲಿ "ಹುಲಿ? ಇಲ್ಲ "ಡ್ರಾಗನ್" ಹೆಚ್ಚು ಸೂಕ್ತ ಅನ್ನಿಸುತ್ತದೆ ಏಕೆಂದರೆ ಡ್ರಾಗನ್ ಹಾರಲೂ ಬಲ್ಲದು" ಎಂದ ಒಬ್ಬ.ಅರೆ ಡ್ರಾಗನ್ ಗಿಂತ ಮೇಲೆ ಹಾರಬಲ್ಲದೂ ಹಾಗೂ ಬೆಕ್ಕಿನ ಹಾಗೇ ಬಣ್ಣವೂ ಇರುವ "ಮೇಘ" ಎಂಬುದೇ ಸರಿಯಾದ ಹೆಸರು ಎಂದನು ಇನ್ನೊಬ್ಬ.ಗಾಳಿ ಮೇಘವನ್ನೇ ತಳ್ಳಿಬಿಡುತ್ತದೆ ಆದ್ದರಿಂದ"ಗಾಳಿ"ಎನ್ನುವ ಹೆಸರೇ ಸೂಕ್ತ ಎಂದ.

 ಮತ್ತೊಬ್ಬ."ಗೋಡೆ"ಗಾಳಿಯನ್ನೇ ತಡೆಯಬಲ್ಲದ್ದು ಆದ್ದರಿಂದ "ಕಲ್ಲಿನ ಗೋಡೆ"ಯೇ ಒಳ್ಳೆಯ ಹೆಸರು ಎಂದ ಮೊಗದೊಬ್ಬ."ಅದು ಸ್ವಲ್ಪ ಉದ್ದವೆನಿಸುತ್ತದೆ ಅಲ್ಲವೇ" ಎಂದು ರಾಜನು ಹೇಳುವಷ್ಟರಲ್ಲಿ ಮತ್ತೊಬ್ಬ "ಇಲಿ"ಎಂದು ಇಟ್ಟರೆ ಹೇಗೆ? ಇಲಿ ಗೋಡೆಯನ್ನೇ ಕೊರೆದು ಬಿಲ ಮಾಡುತ್ತದೆ,ಆದರಿಂದ ಅದು ಹುಲಿ,ಡ್ರಾಗನ್,ಮೋಡ,ಗಾಳಿ,ಗೋಡೆ ಎಲ್ಲಕ್ಕಿಂತ ಬಲಶಾಲಿ ಎಂದ."ಆದರೆ ಬೆಕ್ಕನ್ನು ಇಲಿ ಎಂದು ಕರೆಯಲು ಸಾಧ್ಯವೇ?ಅದು ಎಲ್ಲದಕ್ಕಿಂತ ಬಲಶಾಲಿ ಇರಬಹುದು ಆದರೆ ಬೆಕ್ಕು ಅದಕ್ಕಿಂತ ಹೆಚ್ಚು ಶಕ್ತಿಶಾಲಿ ಆದ್ದರಿಂದ ಬೆಕ್ಕನ್ನು ಬೆಕ್ಕು ಎಂದೇ ಕರೆಯಬೇಕು ಪ್ರಭು" ಎಂದ ಒಬ್ಬ ಬುದ್ಧಿವಂತ ಯುವಕ.ಕಡೆಗೆ ಹೆಸರೇ ಇಲ್ಲದೆ ರಾಜನ ಬಳಿ ತನ್ನ ಜೀವನವಿಡೀ ಕಾಲ ಕಳೆಯಿತು ಆ ಬೆಕ್ಕು!

ಚೋರ ಬಾಲಕ
 -- ಕನಕಾಪುರ ನಾರಾಯಣ  


ಆಶ್ರಮವೊಂದರಲ್ಲಿ ಹತ್ತಾರು ವಿಧ್ಯಾರ್ಥಿಗಳು ಕಲಿಯುತ್ತಿದ್ದರು.ಅವರಲ್ಲಿ ಒಬ್ಬ ಹುಡುಗ ಬೇರೊಬ್ಬರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ.ಗುರುಗಳಿಗೆ ದೂರು ಕೊಟ್ಟರೂ ಅವರು ಸುಮ್ಮನೆ ಇದ್ದರು.ಒಂದು ದಿನ ಅವನ ಕಳ್ಳತನ ಮಿತಿಮೀರಿ ದೂರು ಕೊಟ್ಟರೂ ತಮ್ಮ ಗುರುಗಳೂ ಆತನಿಗೆ ಏನೂ ಕ್ರಮ ತೆಗೆದುಕೊಳ್ಳದಿರುವುದನ್ನು ಕಂಡು ಬೇರೆ ವಿದ್ಯಾರ್ಥಿಗಳೆಲ್ಲಾ ಆ ಶ್ರಮವನ್ನೇ ತ್ಯಜಿಸಿ ಹೋಗಲು ನಿರ್ಧರಿಸಿದರು.
ಆಗ ಗುರುಗಳು ವಿಷಯ ತಿಳಿದು ಎಲ್ಲರನ್ನೂ ಕರೆದು"ಮಕ್ಕಳೇ ನೀವೆಲ್ಲಾ ಒಳ್ಳೆಯ ಮಕ್ಕಳು ಇಲ್ಲಿಂದ ಹೊರಟರೂ ನಿಮಗೆ ಬೇರೆ ಆಶ್ರಮ ಸೇರುವುದು ಕಷ್ಟವಿಲ್ಲ,ಆದರೆ ನಿಮ್ಮ ಸಹೋದರನಿಗೆ ಎಲ್ಲಿ ಆಶ್ರಯ ಸಿಗುತ್ತದೆ ಹೇಳಿ,ಅವನಿಗಿನ್ನೂ ತಪ್ಪು-ಸರಿಗಳ ಅರಿವೇ ಇಲ್ಲ,ನೀವೆಲ್ಲಾ ಹೋದರೂ ಆತನನ್ನು ಕೈಬಿಡುವಹಾಗಿಲ್ಲ ನಾನು" ಎಂದರು. ತುಂಟ ಹುಡುಗನ ಕಣ್ಣಿನಿಂದ ಕೆನ್ನೆಯ ಮೇಲೆ ನೀರು ಹರಿಯಿತು.ತನ್ನ ತಪ್ಪನ್ನರಿತು ಕ್ಷಮೆ ಯಾಚಿಸಿದ.



ಕೃತಜ್ಞತೆ ಇಲ್ಲದ ಮಾನವ  
-- ಕನಕಾಪುರ ನಾರಾಯಣ 


ಹಿಂದೊಮ್ಮೆ ಇಬ್ಬರು ವ್ಯಾಪಾರಿಗಳು ಕಾಲ್ನಡಿಗೆಯಲ್ಲೇ ಊರೂರು ಅಲೆಯುತ್ತಾ ತಮ್ಮಕೆಲಸ ಮಾಡುತ್ತಿರಲು, ಮಧ್ಯಾಹ್ನದ ಉರಿಬಿಸಿಲನ್ನು ತಡೆಯಲಾರದೆ ಒಂದು ಮರದ ಬಳಿ ದಣಿವು ಆರಿಸಿಕೊಳ್ಳಲು ಕುಳಿತರು. ತಂಪಾದ ನೆರಳಿನಲ್ಲಿ ಕುಳಿತಲ್ಲೇ ತಾವು ತಂದ ಬುತ್ತಿ ಬಿಚ್ಚಿ ಹಸಿವನ್ನೂ ನಿವಾರಿಸಿಕೊಂಡರು. ಹಾಗೇ ಮರಕ್ಕೆ ಒರಗಿ ಸ್ವಲ್ಪ ವಿಶ್ರಾಂತಿ ಪಡೆದರು. ಸ್ವಲ್ಪ ಸಮಯದ ನಂತರ ಒಬ್ಬ ಮರದ ಕಡೆ ನೋಡುತ್ತಾ "ಅರೆ ಇದೇನು ಮರವಯ್ಯಾ ಒಂದು ಹಣ್ಣೂ ಬಿಡುವುದಿಲ್ಲ' ಅಂದ.ಅದಕ್ಕೆ ಮತ್ತೊಬ್ಬ `ಹಣ್ಣು ಬಿಡುವುದಿರಲಿ ಮರ ಕೂಡಾ ಗಟ್ಟಿ ಇಲ್ಲ, ಯಾವ ಕೆಲಸಕ್ಕೂ ಉಪಯೋಗಿಸಲು ಯೋಗ್ಯವಿಲ್ಲ, ಶುದ್ಧ ಅಪ್ರಯೋಜಕ ಮರ' ಎಂದ. 

ತಕ್ಷಣ ಆ ಮರಕ್ಕೆ ಕೋಪ ಬಂದು 'ಎಲೈ ಮಾನವರೇ ಈಗ ನನ್ನ ನೆರಳನ್ನಾದರೂ ಅನುಭವಿಸುತ್ತಿದ್ದೀರಲ್ಲಾ,ಅದಕ್ಕಾದರೂ ಕೃತಜ್ಞತೆ ಬೇಡವೆ ?'ಎಂದುಕೊಂಡು ತನ್ನ ಒಂದು ಒಣಗಿದ್ದ ಟೊಂಗೆಯನ್ನು ಕಳಚಿ ಬಿಟ್ಟಿತು.ಅದು ಆವ್ಯಾಪಾರಿಗಳ ಮೇಲೆ ಬಿದ್ದಿತು,ಕೂಡಲೇ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು.
 

ಕರುಳ ಮಿಡಿತ 
-- ಕನಕಾಪುರ ನಾರಾಯಣ  
ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ರೈತನೊಬ್ಬ ತನ್ನ ಮನೆಯ ಮುಂದಿನ ಅಂಗಳದಲ್ಲಿ ಸೌದೆಯನ್ನು ಸೀಳುವ ಕೆಲಸದಲ್ಲಿ ತೊಡಗಿದ್ದ.ಕೊಡಲಿಯ ಏಟು ಮರದ ದಿಮ್ಮಿಗೆ ಪ್ರತಿಬಾರಿ ಬೀಳುವಾಗಲೂ ಅವನ ಮೈಯಲ್ಲಿ ಬೆವರು ತೊಟ್ಟಿಕ್ಕುತ್ತಿತ್ತು, ದಣಿದು ಬಾಯಾರಿದ್ದರೂ ಲೆಕ್ಕಿಸದೆ ಒಂದೇ ಸಮನೆ ದುಡಿಯುತ್ತಿದ್ದ ಮಗನನ್ನು ಕಂಡು ಅವನ ತಾಯಿ "ಮಗ ಶಾಖ ಜಾಸ್ತಿ ಅಗ್ತಿದೆ ಮನೆ ಒಳಕ್ಕೆ ಬಾ,ಆಮೇಲೆ ಸೌದೆ ಹೊಡೆದರೆ ಆಯ್ತು" ಎಂದಳು. ಆದರೆ ಅದನ್ನು ಲೆಕ್ಕಿಸದೆ ಸುಡು ಸುಡು ಬಿಸಲಿನಲ್ಲಿ ತನ್ನ ಕೆಲಸ ಮುಂದುವರೆಸಿದ ಮಗ ಪದೇ ಪದೇ ತಾಯಿಯ ಕೂಗನ್ನು ಕೇಳಿ ತಾಳ್ಮೆ ಕಳೆದು ಒಮ್ಮೆ ರೇಗಿದ "ಏ ನೀನು ಒಳಕ್ಕೆ ಹೋಗಮ್ಮಾ, ಹೋಗಿ ಬೇರೆ ಕೆಲಸ ನೋಡು"ಎಂದು ಬೈದ.

ಮನೆಯ  ಒಳಕ್ಕೆ ಹೋದ ತಾಯಿ ವರುಶವೂ ತುಂಬದ ತನ್ನ ಮೊಮ್ಮಗನನ್ನು ಎತ್ತು ತಂದು ಸುಡುಬಿಸಿಲಿನಲ್ಲಿ ಮಲಗಿಸಿದಳು. ಇದನ್ನು ಕಂಡು ಮಗನಿಗೆ ಬಹಳ ಕೋಪ ಬಂದಿತು "ನಿಂಗೇನ್ ಬುದ್ಧಿಗಿದ್ಧಿ ಇದೆಯಾ? ಅಲ್ಲಾ ಮಗೂನ ಬಿಸಿಲಿನಲ್ಲಿ ಮಲಗಿಸಿದ್ದೀಯಲ್ಲಾ ಮೈ ಸುಡಲ್ವಾ?" ಎಂದು ಗದರಿದ. ಅದಕ್ಕೆ ತಾಯಿ "ಸುಟ್ಟರೆ ನಿಂಗೇನಾಗುತ್ತೆ?" ಎಂದು ಪ್ರಶ್ನಿಸಿದಳು. ಅದಕ್ಕೆ ಆ ರೈತ "ಅದು ನನ್ನ ಮಗು, ಕರಳು ಚುಳ್ ಅನ್ನಲ್ವಾ" ಎಂದ. ತಕ್ಷಣ ತಾಯಿ "ನೀನು ಬಿಸಿಲಿನಲ್ಲಿ ಸುಡ್ತಾ ಇದ್ದರೆ ನನ್ನ ಕರಳು ಏನು ಆಗಬೇಕು?" ಎಂದಳು. ಕೂಡಲೇ ತಾಯಿಯ ಕರುಳ ಮಿಡಿತ  ಅರಿತು ಮನೆಯೊಳಕ್ಕೆ ಹೊರಟ ಮಗ.
 


ಲಕ್ಷ್ಮೀಪತಿ
-- ಕನಕಾಪುರ ನಾರಾಯಣ  


ಚಿಕ್ಕ ಊರೊಂದರಲ್ಲಿ ಒಬ್ಬ ವ್ಯಾಪಾರಿ ಇದ್ದ.ವ್ಯಾಪಾರ ಚೆನ್ನಾಗೇ ನಡೆಯುತ್ತಿತ್ತು,ಆದರೆ ಆತನಿಗೆ ಕಡಿಮೆ ಅವಧಿಯಲ್ಲೇ ಅತಿ ಹೆಚ್ಚು ಮಾಡಬೇಕೆಂಬ ಆಸೆಯಾಯಿತು. ಎಷ್ಟು ದುಡಿದರೂ ಹೆಚ್ಚು ಹಣ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ.ಕಡೆಗೆ ಒಂದು ದಿನ ತನ್ನ ಮನೆಯಲ್ಲೇ ಧನಲಕ್ಷ್ಮಿಯನ್ನು ಕುರಿತು ಧ್ಯಾನಕ್ಕೆ ಕುಳಿತ.ಬಹಳ ನಿಷ್ಟೆಯಿಂದ ದಿನ ವಾರ ತಿಂಗಳುಗಳ ಪರಿವೇ ಇಲ್ಲದೆ ಧ್ಯಾನಿಸಿದ.ಒಂದುದಿನ ಅವನ ಕಣ್ಮುಂದೆ ಲಕ್ಶ್ಮಿ ಪ್ರತ್ಯಕ್ಷವಾದಳು,ಏನು ವರ ಬೇಕೆಂದು ಕೇಳಲು ಆಸ್ತಿ ಅಂತಸ್ತು ಹಣ ಬಂಗಾರ ಎಲ್ಲವನ್ನೂ ಕೇಳತೊಡಗಿದ.ಅದಕ್ಕೆ ಲಕ್ಷ್ಮಿಯು "ಅಯ್ಯಾ ನಾನು ವರ ಕೊಡುವುದಾದರೆ ಈ ಊರಿನವರಿಗೆಲ್ಲಾ ಕೊಡುವೆ,ನಿನಗೊಬ್ಬನಿಗೇ ಕೊಡಲಾಗದು"ಎಂದಳು.ವ್ಯಾಪಾರಿ ಯಾರಿಗೆ ವರಕರುಣಿಸಿದರೇನು ನನಗೆ ಸಿಕ್ಕರೆ ಸಾಕು ಎಂದು "ಹೂ"ಎಂದ.ಲಕ್ಷ್ಮೀಪತಿ ಆದ. 

ಮರುದಿನ ಮನೆಯಲ್ಲೆಲ್ಲಾ ಚಿನ್ನದ ಆಭರಣಗಳು!ನಾಣ್ಯಗಳು!ವಜ್ರ !ವೈಡೂರ್ಯಗಳು! ಅಪಾರ ಸಂತೋಷವಾಯಿತು ವ್ಯಾಪಾರಿಗೆ.ಸರಿ ಬಹಳ ದಿವಸಗಳಿಂದ ತಪಸ್ಸಿನ ಹಸಿವಿನಲ್ಲಿದ್ದ ಕಾರಣ ಏನಾದರೂ ದಿನಸಿ ತರಕಾರಿಗಳನ್ನು ತರಲು ಅಂಗಡಿಗೆ ಹೋದ.ಅಂಗಡಿ ಬಾಗಿಲು ಮುಚ್ಚಿತ್ತು,ಕಾರಣ ಕೇಳಲು ಅವರ ಬಳಿಯೂ ಸಾಕಷ್ಟು ಆಸ್ತಿ ಬಂದಾದ ಕಾರಣ ಅವರು ಚಿಲ್ಲರೆ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದರು,ಸರಿ ಫಲಹಾರ ಮಂದಿರಕ್ಕೆ ಹೋದರೂ ಅದೇ ಮಾತೆ,ಹೀಗೇ ಎಲ್ಲರೂ ವ್ಯಾಪಾರ ಮಾಡುವುದನ್ನು ಬಿಟ್ಟು ಚಿನ್ನದ ನಾಣ್ಯಗಳನ್ನು ಹಿಡಿದು ಓಡಾಡ ತೊಡಗಿದರು.ಕಡೆಗೆ ಆ ವ್ಯಾಪಾರಿಗೆ ತನ್ನ ತಪ್ಪು ಅರಿವಾಗಿ ಮತ್ತೆ ಲಕ್ಷ್ಮಿಯನ್ನು ಕುರಿತು ಧ್ಯಾನ ಮಾಡಿ ಎಲ್ಲವನ್ನೂ ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿದ.ಮೊದಲಿನಂತೆ ಕಷ್ಟಪಟ್ಟು ದುಡಿದು ತೃಪ್ತಿಯಿಂದ ಜೀವನ ಮಾಡಿದ








ಜಾಡಿ
- ಕನಕಾಪುರ ನಾರಾಯಣ  


                  ಫಿಲಾಸಫಿ ಪ್ರೊಫೆಸರ್ ಒಬ್ಬ ತನ್ನ ತರಗತಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ,ತನ್ನ ಬಳಿಯಿದ್ದ ಗಾಜಿನ ಜಾಡಿಯಲ್ಲಿ ದಪ್ಪ ಹಾಗೂ ನುಣುಪಾದ ನದಿಯಲ್ಲಿ ಸಿಗುವ ಕಲ್ಲುಗಳನ್ನು ತುಂಬಿದ."ಮಕ್ಕಳೇ, ಈಗ ನೋಡಿ ಜಾಡಿ ತುಂಬಿದೆಯಲ್ಲವೇ?" ಮಕ್ಕಳು ಹೂ ಎಂದು ತಲೆ ಆಡಿಸಿದರು. 
                  ನಂತರ ಕಡಲೆ ಗಾತ್ರದ ಸಣ್ಣ ಸಣ್ಣ ಕಲ್ಲುಗಳನ್ನು ಅದೇ ಜಾಡಿಗೆ ಸುರಿದ,ಜಾಡಿ ಅಲ್ಲಾಡಿಸಲು ಸಣ್ಣ ಕಲ್ಲುಗಳು ದೊಡ್ಡಕಲ್ಲುಗಳ ಸಂಧಿಯಲ್ಲಿ ನುಸುಳಿದವು."ಮಕ್ಕಳೇ, ಈಗ ನೋಡಿ ಜಾಡಿ ತುಂಬಿದೆಯಲ್ಲವೇ?"ಅಂದ.ಮಕ್ಕಳು ಒಪ್ಪಿದರು. 
                  ನಂತರ ಪ್ರೊಫೆಸರ್ ಒಂದು ಚೀಲದಲ್ಲಿ ಇದ್ದ ಮರಳನ್ನು ಆ ಜಾಡಿಗೆ ಸುರಿದನು.ಮರಳು ಕಲ್ಲುಗಳ ಸಂದುಗೊಂದುಗಳನ್ನು ಹೊಕ್ಕು ಜಾಡಿ ಭರ್ತಿಯಾಯಿತು.ಮತ್ತದೇ ಪ್ರಶ್ನೆ "ಈಗ ನೋಡಿ ಜಾಡಿ ತುಂಬಿದೆಯಲ್ಲವೇ?" ಮಕ್ಕಳು "ಹೂ ಹೌದು" ಎಂದರು. 

ಆಗ ಪ್ರೊಫೆಸರ್ ಹೇಳಿದ "ಮಕ್ಕಳೇ ಗಮನವಿಟ್ಟು ಕೇಳಿ ಈ ಜಾಡಿಯೇ ನಿಮ್ಮ ಜೀವನ ಅಂದುಕೊಳ್ಳಿ, ಕಲ್ಲುಗಳೇ ಬಹು ಮುಖ್ಯವಾದ ಸಂಸಾರ,ಸಂಗಾತಿ,ಆರೋಗ್ಯ,ಮಕ್ಕಳು ಇದ್ದಹಾಗೆ.ನೀವು ಎಲ್ಲಾ ಕಳೆದುಕೊಂಡರೂ ಇವರು ನಿಮ್ಮೊಡನೇ ಇರುತ್ತಾರೆ ಆಗಲೂ ನಿಮ್ಮ ಜೀವನ(ಜಾಡಿ)ಪೂರ್ತಿಯಾಗೇ ಇರುತ್ತದೆ.ಇನ್ನು ಸಣ್ಣ ಕಲ್ಲುಗಳು ನಿಮ್ಮ ಭೋಗ-ಭಾಗ್ಯಗಳು, ಆಸ್ತಿ-ಅಂತಸ್ತುಗಳು,ಇನ್ನು ಮರಳು ಅತಿ ಸಣ್ಣ ವಿಷಯ/ವಸ್ತುಗಳು.ನೀವು ಮರಳನ್ನೇ ಜಾಡಿಗೆ ತುಂಬಿಕೊಂಡರೆ ಬೇರೆ ಯಾವುದಕ್ಕೂ ಸ್ಥಳವೇ ಇಲ್ಲದಂತಾಗುತ್ತದೆ" ಎಂದ.


ಲೋಕದ ಡೊಂಕು
- ಕನಕಾಪುರ ನಾರಾಯಣ  


ಒಬ್ಬ ರಾಜನು ದೊಡ್ಡದಾದ ತನ್ನ ಸಾಮ್ರಾಜ್ಯವನ್ನು ನೋಡಲು ರಥವನ್ನೇರಿ ಹೊರಟನು. ಊರುಗಳೆಲ್ಲಾ ಸುತ್ತಿ ಬಂದ ನಂತರ ಸಭೆ ಕರೆದನು.   "ರಾಜ್ಯದ ಹಾದಿ ಬಹು ಕೆಟ್ಟದಾಗಿದೆ ಅಲ್ಲಿ ನನಗೆ ನಡೆಯಲು ಸಾಧ್ಯವಿಲ್ಲ,ಅದಕ್ಕಾಗಿ ಎಲ್ಲಾ ರಸ್ತೆಗೂ ಚರ್ಮದ ಕಂಬಳಿ ಹಾಸಿಬಿಡಿ"ಎಂದು ಆಜ್ಞೆ ಮಾಡಿದ. 
ಅಷ್ಟು ದೊಡ್ಡ ಊರಿನ ಎಲ್ಲಾ ದಾರಿಗೂ ಚರ್ಮವನ್ನು ಒದಗಿಸಲು ಅದೆಷ್ಟು ಪ್ರಾಣಿಗಳು ಬೇಕು? ಅವುಗಳ ಹತ್ಯೆ ಆಗಬೇಕು? ಎಂದು ಜಾಣತನದಿಂದ ಚಿಂತಿಸಿದ  ಸಭೆಯಲ್ಲಿದ್ದ  ಒಬ್ಬ  ಬುದ್ಧಿವಂತನು" ಸ್ವಾಮೀ ತಾವೇ ಏಕೆ ಒಂದು ಮೆತ್ತನೆಯ ಚರ್ಮದ ಪಾದರಕ್ಷೆಯನ್ನು ಮಾಡಿಸಿಕೊಳ್ಳಬಾರದು? ನೀವು ನಡೆದಲ್ಲೆಲ್ಲಾ ನೆಲ  ಮೆತ್ತಗೆ ಇರುತ್ತದೆ ಅಲ್ಲವೇ ?"ಎಂದು ಕೇಳಿದ. ಅವನ ಸಲಹೆ ಎಲ್ಲರಿಗೂ ಹಿಡಿಸಿತು.ರಾಜನೂ ಒಪ್ಪಿದ. ಮೆಚ್ಚಿ ಉಡುಗೊರೆಯಿತ್ತ. 
ನೀತಿ: ಪ್ರಪಂಚವನ್ನು ಬದಲಾಯಿಸುವ ಮೊದಲು ನಮ್ಮನ್ನು ನಾವೇ ಏಕೆ ಬದಲಾಯಿಸಿಕೊಳ್ಳಬಾರದು?
 


ಮೂರು ವಿಗ್ರಹಗಳು
- ಕನಕಾಪುರ ನಾರಾಯಣ  


ಭಾರತದಲ್ಲಿ ಹಿಂದಿನ ಕಾಲದಲ್ಲಿ ಋಷಿಮುನಿಗಳು ರಾಜರನ್ನು ಆಗಿಂದಾಗ್ಗೆ ಭೇಟಿ ಮಾಡುತ್ತಿದ್ದರು.ಸಲಹೆ ಸೂಚನೆಗಳನ್ನೂ ನೀಡುತ್ತಿದ್ದರು.ಹಾಗೆ ಮುನಿಯೊಬ್ಬನು ಬೇರೆಡೆ ಹಾದು ಹೋಗುವಾಗ ರಾಜನನ್ನು ನೋಡಲು ಅರಮನೆಗೆ ಬಂದನು.ಅಲ್ಲಿ ಯುವರಾಜನ ಭೇಟಿಯಾಯಿತು.ಯುವರಾಜನು ಪೂಜ್ಯ ಗುರುಗಳ ಸೇವೆಮಾಡಿ ಸಂಜೆ ವಿಹಾರಕ್ಕೆಂದು ಉದ್ಯಾನವನದಲ್ಲಿ ವಿಹರಿಸುತ್ತಿರಲು ಆ ಋಷಿಯು "ಯುವರಾಜಾ ನೋಡು, ನಿನಗಾಗಿ 3 ವಿಗ್ರಹಗಳನ್ನು ತಂದಿರುವೆ ನೀನು ಈಗ ಅದರಿಂದ ಒಂದು ಮುಖ್ಯ ವಿಷಯವನ್ನು ತಿಳಿಯಲು ಬೇಕಾದರೆ ಆ ಪ್ರತಿಮೆಯ ಕಿವಿಯಲ್ಲಿ ಈ ತಂತಿಯನ್ನು ತೂರಿಸು"ಎಂದು ಒಂದು ತಂತಿಯನ್ನು ಅವನ ಕೈಗಿಟ್ಟ. ಅದರಂತೆ ಯುವರಾಜ ಮೊದಲನೆಯ ವಿಗ್ರಹದ ಬಲ ಕಿವಿಯಲ್ಲಿ ತಂತಿಯನ್ನು ತೂರಿಸಿದ ತಂತಿಯು ಮತ್ತೊಂದು ಕಡೆಯ ಎದ ಕಿವಿಯಲ್ಲಿ ಹೊರಬಂದಿತು,ಎರಡನೆಯ ವಿಗ್ರಹದ ಬಲ ಕಿವಿಯಲ್ಲಿ ತಂತಿಯನ್ನು ತೂರಿಸಿದ ತಂತಿಯು ಅದರ ಬಾಕಿಯಿಂದ ಹೊರಕ್ಕೆ ಬಂದಿತು.ಇನ್ನು 3ನೆಯ ವಿಗ್ರಹದ ಕಿವಿಯಲ್ಲಿ ತಂತಿಯನ್ನು ತೂರಿಸಿದ, ತಂತಿಯು ಯಾವಕಡೆಯಿಂದಲೂ ಹೊರಬರಲಿಲ್ಲ. ಆಗ ಋಷಿ ಹೇಳಿದ "ಮಗೂ ಯುವರಾಜ, ಈ 3 ವಿಗ್ರಹಗಳೂ 3 ಮಾದರಿಯ ಜನರನ್ನು ಹೋಲುತ್ತದೆ. ಮೊದಲನೆಯ ಮಾದರಿಯ ಜನ ಒಂದು ಕಿವಿಯಲ್ಲಿ ಏನು ಹೇಳಿದರೂ ಮತ್ತೊಂದು ಕಿವಿಯಲ್ಲಿ ಬಿಟ್ಟು ಬಿಡುವವರು, ಎರಡನೆಯವರು ಏನು ಕೇಳಿದರೂ ಮತ್ತೊಬ್ಬರಿಗೆ ಹೇಳುವ ಅಭ್ಯಾಸ ಇರುವವರು.ಇನ್ನು ಕಡೇಯ ಮಾದರಿಯ ಜನರೇ ಉತ್ತಮರು, ಏಕೆಂದರೆ ತಾವು ಕೇಳಿದ್ದನ್ನು ಚಿಂತಿಸಿ ತಮ್ಮಲ್ಲೇ ಇಟ್ಟು ಜ್ಞಾನವನ್ನು ಬೆಳೆಸಿಕೊಳ್ಳುವವರು.


ಹಗಲು - ಕನಸು (ಹಾಸ್ಯ)
- ಕನಕಾಪುರ ನಾರಾಯಣ  


ಬಡ ರೈತನೊಬ್ಬ ಬೇಸಿಗೆಯಲ್ಲಿ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ ಅವರಿವರ ಮನೆಯಮುಂದೆ ಕೈಚಾಚಿ ಬೇಡುತ್ತಾ ಪಾಲಿಗೆ ಬಂದದನ್ನು ತಿಂದು ಕಾಲ ಕಳೆಯುತ್ತಿದ್ದ.ಒಮ್ಮೆ ಆತನಿಗೆ ಮೊಸರು ತಿನ್ನುವ ಆಸೆಯಾಯಿತು ಭಿಕ್ಷೆ ಬೇಡುವಾಗ ಕೇಳಿಕೊಂಡ ಆದರೆ ಪುಟ್ಟ ಮಡಿಕೆಯಲ್ಲಿ ಸ್ವಲ್ಪವೇ ಹಾಲು ದಕ್ಕಿತು, ಅದಕ್ಕೆ ಚಿಟಿಕೆ ಹುಳಿ ಹಿಂಡಿ ಒಂದು ಮರದ ಬಳಿ ಕಿಳಿತು ಹಾಲು ಮೊಸರು ಆಗುವುದನ್ನೇ ವಿಶ್ರಾಂತಿ ಪಡೆಯುತ್ತಾ ಹಾಗೇ ಕಾಯುತ್ತಾ, ದಣಿದ ದೇಹಕ್ಕೆ ಕೂಡಲೇ ನಿದ್ರೆ ಬಂದಿತು.ಆಳವಾದ ನಿದ್ರೆ ..............ಹಾಲು ಹೆಪ್ಪಾಗಿ ಮೊಸರಾಯಿತು,ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಕಡೆದೂ ಕಡೆದೂ ಹೆಚ್ಚುಹೆಚ್ಚು ಬೆಣ್ಣೆ ತೆಗೆದ,ಬೆಣ್ಣೆಯಿಂದ ತುಪ್ಪ,ತುಪ್ಪಮಾರಿ ನಾಲ್ಕಾರು ಮೊಟ್ಟೆ ತಂದ ಮೊಟ್ಟೆ ಮರಿಯಾಯಿತು, ಮರಿ ದೊಡ್ಡದಾಗಿ ಮತ್ತೆ ಮೊಟ್ಟೆಗಳಿಟ್ಟಿತು ಹತ್ತು, ನೂರು ಸಾವಿರ ಕೋಳಿಗಳು! ಎಲ್ಲವನ್ನೂ ಮಾರಿ ಚಿನ್ನ ಖರೀದಿಸಿದ,ಚಿನ್ನವನ್ನು ರಾಜನಿಗೆ ಒಂದಕ್ಕೆ ಎರಡರಷ್ಟು ಬೆಲೆಗೆ ಮಾರಿದ,ಮನೆ ಕೊಂಡುಕೊಂಡ ಸರಿ ಸುಂದರ ಮಡದಿಯೂ ಬಂದಳು ಮತ್ತಿನ್ನೇನು ಗಂಡು ಮಗುವೂ ಆಯಿತು.ಮಗ ಬೆಳೆದ,ತುಂಟ ಮಗನ ಚೇಷ್ಟ ನೋಡಲಾರದೆ ತನ್ನಂತೆ ಬುದ್ಧಿವಂತ ವ್ಯಾಪಾರಿಯನ್ನಾಗಿ ಮಾಡಬೇಗೆಂಬ ಆಸೆ ಮಗನನ್ನು ಕುರಿತು ಬುದ್ಧಿ ಹೇಳಿದ,ಬೈದ ಕಡೆಗೆ ಬೆತ್ತದಿಂದ ಫಟಾರ್ ಫಟಾರ್ ಎಂದು ಬಾರಿಸತೊಡಗಿದ, ಕೂಡಲೇ ಪಕ್ಕದಲ್ಲಿದ್ದ ಮಡಿಕೆಗೆ ಕೋಲಿನಿಂದ ಫ್ಹಳಾರ್ ಎಂದು ಹೊಡೆದ, ಕನಸೂ ಮುಗಿದಿತ್ತು ಮಡಿಕೆಯೂ ಚೂರಾಯಿತು ಹಾಲು ಮಣ್ಪಾಲಾಯಿತು.


ಸರ್ಪ - ಸನ್ಯಾಸಿ
- ಕನಕಾಪುರ ನಾರಾಯಣ   


ಊರಿನ ಹೊರಗೆ ಒಂದು ಎತ್ತರದ ಹುತ್ತ, ಅದರಲ್ಲಿ ದೊಡ್ಡದಾದ ಹಾವೊಂದಿತ್ತು, ಆಗಾಗ್ಗೆ ಅದರ ಕಡಿತಕ್ಕೆ ಕೋಳಿ, ಕುರಿ, ಕರುಗಳು ಬಲಿಯಾಗುತ್ತಿದ್ದವು.ಇದರ ಭೀತಿಯಿಂದ ಊರಿನವರು ಆದಷ್ಟು ಹೊರಗೆ ಓಡಾಡುವುದನ್ನು ನಿಲ್ಲಿಸಿದ್ದರು.ಅಲ್ಲಿಗೆ ಒಬ್ಬ ಸನ್ಯಾಸಿ ಭಿಕ್ಷೆಗೆ ಬಂದ, ಬಿಕೋ ಎನ್ನುವ ಊರಿನ ವಿಷಯ ತಿಳಿದು, ಹುತ್ತದ ಬಳಿ ನಡೆದ ಹಾವು ಹೊರಗೆ ಬಂದು ತಲೆಬಾಗಿ ವಂದಿಸಿತು, ತನ್ನ ಗೆಳೆಯನನ್ನು(ಮತ್ತೊಂದು ಹಾವು) ಹಿಂದೊಮ್ಮೆ ಜನರು ಕೋಲಿನಿಂದ ಚಚ್ಚಿ ಕೊಂದ ಕಥೆ ವಿವರಿಸಿತು.ಸನ್ಯಾಸಿ ಸಂತಾಪ ಸೂಚಿಸಿ,ಮುಂದೆ ಯಾರನ್ನೂ ಕಚ್ಚುವುದಿಲ್ಲಾ ಎಂದು ಆಣೆ ಮಾಡಲು ಹೇಳಿದ. ಅದರಂತೆ ಆ ಹಾವು ಮುಂದೆ ಯಾರನ್ನೂ ಕಡಿಯಲಿಲ್ಲ.

ಸುಮ್ಮನೆ ಹರಿದಾಡುವುದನ್ನು ಕಂಡ ಮಕ್ಕಳು ನೋಡೋಣವೆಂದು ಪುಟ್ಟ ಕಡ್ಡಿಯನ್ನು ಅದರ ಮೇಲೆ ಎಸೆದರು,ಕಲ್ಲನೇ ಎಸೆದರು,ಬಾಲ ಹಿಡಿದರು,ಎಳೆದರು,ಹಗ್ಗದಂತೆ ಎಳೆದಾಡಿದರು ಕೊಟ್ಟ ಮಾತಿಗೆ ತಪ್ಪದಂತೆ ಹಾವು ಸುಮ್ಮನಿತ್ತು, ಯಾರನ್ನೂ ಕಡಿಯಲಿಲ್ಲ. ಸುಮಾರು ದಿವಸಗಳ ಬಳಿಕ ಸನ್ಯಾಸಿ ಅದೇ ಊರಿಗೆ ಮತ್ತೆ ಬಂದ.ಮೈಯಲ್ಲಾ ಗಾಯಗೊಂಡ ಹಾವು ನಿಧಾನವಾಗಿ ಹರಿದು ರಸ್ತೆ ದಾಟುತ್ತಿತ್ತು. ಸನ್ಯಾಸಿ ಅದರ ಬಳಿಗೆ ಹೋಗಿ ಅರೆ ಇದೇನಿದು ನೀನು ಹೀಗಾಗಿರುವೆ? ಎಂದ."ಎಲ್ಲಾ ನಿಮ್ಮಿಂದ ಸ್ವಾಮಿ..ನೀವು ಯಾರನ್ನೂ ಕಡಿಯಕೂಡದೆಂದು ಆಣೆ ಇಡಿಸಿದಿರಿ...ಎಲ್ಲಾ ಅದರ ಪರಿಣಾಮ".ಅದಕ್ಕೆ ಸನ್ಯಾಸಿ "ಅಯ್ಯೋ ಸಾಧುವೇ ನಾನು ಯಾರನ್ನೂ ಕಡಿಯಬೇಡಾ ಎಂದೆ ಅಷ್ಟೇ ಹೊರತು,ಬುಸ್ ಎನ್ನಬೇಡಾ ಅನ್ನಲಿಲ್ಲವಲ್ಲಾ" ಎಂದ.ಅಂದಿನಿಂದ ಹಾವು ಬದುಕುವ ರೀತಿ ಕಲಿಯಿತು.



ನ್ಯಾಯ-ನಾಣ್ಯ
- ಕನಕಾಪುರ ನಾರಾಯಣ   


ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಿದ್ದ.ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟ ಕಟ್ಟಲು ನಿರ್ಧರಿಸಿದರು.ಒಮ್ಮೆ ಬೀರಬಲ್ ಸಭೆಗೆ ಬಂದಾಗ ರಾಜ ಅಕ್ಬರ್ ಎಲ್ಲರ ಸಲಹೆಯಂತೆ "ಬೀರಬಲ್ ನಿನಗೆ ನ್ಯಾಯ ಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ"ಎಂದ.  ಬೀರಬಲ್ "ನನಗೆ ನಾಣ್ಯ ಬೇಕು" ಎಂದ.  ಅದಕ್ಕೆ ಎಲ್ಲರೂ ತಾವು ಹೂಡಿದ್ದ ಸಂಚು ಸಾರ್ಥಕವಾಯಿತು ಎಂದು ಸಂತೋಷದಿಂದ ನಕ್ಕರು.  ಅಕ್ಬರ್ ಹೇಳಿದ "ಬೀರಬಲ್ ನಾನೇನೋ ನೀನು ಹಣದಾಸೆ ಪಡುವವನಲ್ಲ ಎಂದು ಕೊಂಡಿದ್ದೆ, ಆದರೆ ನೀನು ನನಗೆ ನಿರಾಸೆ ಮಾಡಿದೆ.ಎಲ್ಲರೂ ನೆನೆಸಿದಂತೆಯೇ ನೀನು ನಡೆದೆ". ಅದಕ್ಕೆ ಬೀರಬಲ್ "ಸ್ವಾಮಿ ಯಾರಲ್ಲಿ ಏನಿಲ್ಲವೋ ಅದನ್ನೇ ಬಯಸುತ್ತಾರೆ,ನನಗೆ ನಿಮ್ಮ ರಾಜ್ಯದಲ್ಲಿ ನ್ಯಾಯ ಸಿಕ್ಕಿದ್ದೆ,ಹಣದ ಅಭಾವ ಇರುವುದರಿಂದ ನಾಣ್ಯ ಕೇಳಿದೆ"ಎಂದು ಉತ್ತರಿಸಿದ.ಅಕ್ಬರನಿಗೆ ವಿನಾಕಾರಣ ಬೀರಬಲ್ಲನನ್ನು ಪರೀಕ್ಷಿಸಿದ್ದಕ್ಕಾಗಿ ನಾಚಿಕೆಯಾಯಿತು.


ಓಟ
- ಕನಕಾಪುರ ನಾರಾಯಣ

ಆಫ್ರಿಕಾ ದೇಶದಲ್ಲಿ ಆಗ ಬಿಳಿಯರು ಆಳುತ್ತಿದ್ದ ಕಾಲ.ಇಬ್ಬರು ಕರಿಯರು "ಬಿಳಿಯರಿಗೆ ಮಾತ್ರ" ಎನ್ನುವ ಸ್ಥಳದಲ್ಲಿ ಭೇಟಿಯಾದರು ಒಬ್ಬನಿಗೆ ಅಲ್ಲಿ ಕೆಲಸ ಮಾಡಲು ಅನುಮತಿ ಇತ್ತು, ಮತ್ತೊಬ್ಬನಿಗೆ ಅದಿರಲಿಲ್ಲ.ಸಿಕ್ಕಿಬಿದ್ದರೆ ಜೈಲು! ಅದೇ ವೇಳೆಗೆ ಒಬ್ಬ ಪೋಲೀಸ್ ಅವರ ಬಳಿಗೇ ಬರುವುದನ್ನು ಕಂಡು ಕೆಲಸ ಮಾಡಲು ಅನುಮತಿ ಇದ್ದ ಕರಿಯ ಮತ್ತೊಬ್ಬನಿಗೆ ನೀನು ಓಡು ನಾನು ಹಿಂದೆಯೇ ಬರುವೆ ಎಂದ.ಇಬ್ಬರೂ ಓಡತೊಡಗಿದರು.

ಪೋಲೀಸ್ ಇನ್ನೂ ಯುವಕನಾಗಿದ್ದ ಹಾಗೂ ಗಟ್ಟಿ ಆಳಾದ್ದರಿಂದ ಹಿಂದೆ ಓಡುತ್ತಿದ್ದವನನ್ನು ಹಿಡಿದ. "ತೋರಿಸು ನಿನ್ನ ಪೆರ್ಮಿಟ್ " ಅಂದ. ಜೇಬುಗಳೆಲ್ಲಾ ತಡಕಾಡಿ ತಡಮಾಡಿ ಪರ್ಮಿಟ್ ತೋರಿಸಿದ ಆ ಕರಿಯ. ಅಷ್ಟರಲ್ಲಿ ಪರ್ಮಿಟ್ ಇಲ್ಲದವ ಕೈಗೆ ಸಿಗದಷ್ಟು ದೂರ ಓಡಿದ್ದ."ಪರ್ಮಿಟ್ ಇದ್ದರೂ ನೀನು ಏಕೆ ಓಡಿದೆ" ಎಂದು ಪೋಲೀಸ್ ಪ್ರಶ್ನಿಸಿದ."ಡಾಕ್ಟರ್ ನನಗೆ ದಿನಾ ನಾಲ್ಕು ಮೈಲಿ ಓಡಲು ಹೇಳಿದ್ದಾರೆ" ಅಂದ."ಹಾಗಾದರೆ ನಿನ್ನ ಗೆಳೆಯ ಏಕೆ ಓಡುತ್ತಿದ್ದ?"ಪೋಲೀಸ್ ಮತ್ತೆ ಪ್ರಶ್ನಿಸಿದ."ಆತನಿಗೂ ಡಾಕ್ಟರ್ ಓಡಲು ಸಲಹೆ ನೀಡಿದ್ದಾರೆ"ಎಂದ.ಅದಕ್ಕೆ ಪೋಲೀಸ್ "ನನ್ನನ್ನು ಅಷ್ಟು ಪೆದ್ದನೆಂದು ತಿಳಿದಿರುವೆಯಾ, ನೀವು ಆರೋಗ್ಯಕ್ಕಾಗಿ ಓಡುತ್ತಿದ್ದರೆ ನಾನು ಹಿಂಬಾಲಿಸಿದರೂ ನಿಲ್ಲದೆ ಏಕೆ ಓಡಿದಿರಿ?"ಎಂದ ಅದಕ್ಕೆ ಆ ಜಾಣ ಕರಿಯ"ಅರೆ ನಿಮಗೂ ಡಾಕ್ಟರ್ ಓಡಲು ಹೇಳಿರಬಹುದೇನೋ ಅಂತ ತಿಳಿದು ಹಾಗೆ ಮಾಡಿದ್ವಿ"ಎಂದು ತಪ್ಪಿಸಿಕೊಂಡು ಹೊರಟೇಬಿಟ್ಟ.



ದೇವರು ಎಲ್ಲಿದ್ದಾನೆ?
- ಕನಕಾಪುರ ನಾರಾಯಣ



ಗಿರಾಕಿಯೊಬ್ಬ ಹಜಾಮರ ಅಂಗಡಿಗೆ ಹೋಗಿ ತಲೆ ಕೂದಲನ್ನು ತುಂಡರಿಸಿಕೊಳ್ಳಲು ಕುಳಿತ.ಎಂದಿನಂತೆ ಹಜಾಮ ಏನಾದರೊಂದು ವಿಷಯ ತೆಗೆದು ಗಿರಾಕಿಗಳನ್ನು ಮಾತನಾಡಿಸುವುದು ರೂಢಿ. ಅಂದು"ಏss ದೇವರೆಲ್ಲಿದ್ದಾನೆ ಸ್ವಾಮಿ,? ಇಲ್ಲ,ಇದ್ದಿದ್ದ್ರೆ ಪ್ರಪಂಚದಲ್ಲಿ ಇಷ್ಟೊಂದು ಬಡವರು, ರೋಗಿಗಳು ಯಾಕೆ ಇರ್ತಿದ್ರು?"ಅಂದ.

ಸರಿ ಕೆಲಸ ಮುಗಿದ ಮೇಲೆ ಗಿರಾಕಿ ಬಾಗಿಲು ತೆರೆದು ಹೊರಗೆ ಹೊರಟ. ಎದುರುರಿನಲ್ಲೇ ಒಬ್ಬ ಗಡ್ಡಧಾರಿ ನಡೆದು ಹೋಗುತ್ತಿದ್ದ.ಅದನ್ನು ಕಂಡು ಹಜಾಮನನ್ನು ಕರೆದು"ನೋಡು ಈ ಪ್ರಪಂಚದಲ್ಲಿ ಹಜಾಮರೇ ಇಲ್ಲ" ಎಂದ. ಅದಕ್ಕೆ ಅವನು"ಅರೆ ಏನ್ ಸ್ವಾಮಿ ಇಲ್ಲೇ ಇದ್ದೀನಿ ಏನು ಹೀಗಂತೀರಾ?" ಎಂದ."ಇದ್ದಿದ್ದ್ರೆ ಅವನು ಯಾಕೆ ಗಡ್ಡ ಬಿಟ್ಟುಕೊಂಡು ಓಡಾಡ್ತಿದ್ದಾನೆ?" ಎಂದು ಪ್ರಶ್ನಿಸಿದ". ಅದಕ್ಕೆ ಆ ಹಜಾಮ "ಅರೆ ಅವರಿಗೆ ಹಜಾಮ ಬೇಕಿದ್ದರೆ ನನ್ನ ಬಳಿ ಬರಬೇಕಪ್ಪಾ" ಎಂದು ಹೇಳುವಾಗಲಷ್ಟರಲ್ಲೇ ದೇವರ ಬಗ್ಗೆಯೂ ತಾನು ಹೇಳಿದ್ದ ನಂಬಿಕೆಯ ಮಾತು ಅರಿಯಾಯಿತು.ನಕ್ಕು ಕೆಲಸ ಮುಂದುವರೆಸಿದ.


ತಂದೆಯ ಶ್ರಮ
- ಕನಕಾಪುರ ನಾರಾಯಣ

ತಂದೆಯೊಬ್ಬನು ತನ್ನ ಸಂಸಾರ ಸಾಗಿಸಲು ದಿನವಿಡೀ ರೊಟ್ಟಿಯನ್ನು ಮಾರುತ್ತಿದ್ದ, ಸಂಜೆಯ ವೇಳೆ ಉಳಿದ ಸಮಯದಲ್ಲಿ ವೃತ್ತಿ ಶಿಕ್ಷಣವನ್ನೂ ಮಾಡುತ್ತಿದ್ದ.ಮನೆಯ ಮಡದಿ ಮಕ್ಕಳ ಜೊತೆ ಕಾಲ ಕಳೆಯಲು ಸಾಧ್ಯವೇ ಇರುತ್ತಿರಲಿಲ್ಲ.ವರುಷಗಳು ಕಳೆದವು, ಶಿಕ್ಷಣ ಮುಗಿಯಿತು, ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನೂ ಆದ. ಸರಿ ಅದಕ್ಕೆ ತಕ್ಕ ಪ್ರತಿಫಲದಂತೆ ಒಳ್ಳೆಯ ಕೆಲಸವೂ ದಕ್ಕಿತು.ಕೆಲಸದಲ್ಲಿ ಒಳ್ಳೆಯ ಹೆಸರು, ಹಣ ಸಂಪಾದಿಸತೊಡಗಿದ.ಉತ್ತಮ ಅಧಿಕಾರಿಯಾಗುವ ಸಂಭವ ಇದ್ದುದರಿಂದ ಇನ್ನೂ ಹೆಚ್ಚು ಹೆಚ್ಚು ಓದಲು ಮನಸ್ಸು ಮಾಡಿದ.ಇದರಿಂದ ಮನೆಯವರೊಡನೆ ಕಾಲ ಕಳೆಯುವುದನ್ನೇ ಮರೆತ.ಅಧಿಕಾರಿಯೂ ಆದ,ಕಂಪನಿಯ ಮಾಲೀಕನೂ ಆದ ದೊಡ್ಡ ಬಂಗಲೆ ಕಾರುಗಳು ಕೈಕಾಲಿಗೆಲ್ಲಾ ಆಳುಗಳು.  

ಒಂದು ದಿನ ಮನೆಗೆ ಬಂದು ಹೆಂಡತಿ ಮಕ್ಕಳನ್ನು ಕರೆದು ಹೇಳಿದ ಇನ್ನು ದುಡಿದದ್ದು ಸಾಕಾಯ್ತು ಮುಂದೆ ಮನೆಯವರ ಜೊತೆ ನೆಮ್ಮದಿಯಿಂದ ಇರುವೆ ಎಂದ.ಮಡದಿ ಮಕ್ಕಳಿಗೆ ಹೇಳತೀರದಷ್ಟು ಸಂತೋಷವಾಯಿತು.ಆದಿನ ಆನಂದಿಂದ ಔತಣವನ್ನೇ ಏರ್ಪಡಿಸಿದರು .ನಾಳೆಯಿಂದ ನಮ್ಮವರೆಲ್ಲಾ ಒಟ್ಟಿಗೆ ಇರುವ ಸಂಭ್ರಮದ ಕನಸು ಕಂಡರು,ಕುಡಿದರು,ಕುಣಿದರು, ರಾತ್ರಿ ಕಣ್ತುಂಬ ನಿದ್ರೆ ಮಾಡಿದರು.ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ತಂದೆಯ ಜೊತೆ ಸಂತೋಷದಿ ಕಳೆಯುವ ದಿನಗಳ ನನಸನ್ನು ನಾಂದಿಯಾಡುವ ಭರದಲ್ಲಿ ಇದ್ದರು.ಆದರೆ ತಂದೆ ರಾತ್ರಿ ಮಲಗಿದವನು ಬೆಳಿಗ್ಗೆ ಏಳಲೇ ಇಲ್ಲ. ಹೃದಯ ಅಘಾತದಿಂದ ಯಾವಾಗ ಅವನ ಪ್ರಾಣ ಹಾರಿತ್ತೋ ಯಾರಿಗೂ ತಿಳಿಯದಾಗಿತ್ತು. ನೀತಿ: ಮಡದಿ, ಮಕ್ಕಳ ಜೊತೆ ಕಾಲ ಕಳೆಯುವುದು ಸಂಸಾರಿಯ ಮೊದಲ ಧರ್ಮ

ಎರಡು ಕಪ್ಪೆಗಳು
- ಕನಕಾಪುರ ನಾರಾಯಣ

ಮಳೆಗಾಲದ ಸಮಯ ರಾತ್ರಿ ಸಮಯ ಭೀಕರ ಸಿಡಿಲು ಗುಡುಗು ಧಾರಾಕಾರವಾಗಿ ಸುರಿಯುವ ಮಳೆ ಝರಿ ಪ್ರವಾಹದಿಂದುಕ್ಕಿ ಹರಿಯುವುದನ್ನು ಅರಿತ ಕಪ್ಪೆಗಳು ಛಂಗನೆ ನೆಗೆಯುತ್ತಾ ನೆಗೆಯುತ್ತಾ ವಲಸೆ ಹೋಗುತ್ತಿದ್ದವು, ಆಗ ಎರಡು ಕಪ್ಪೆಗಳು ಕತ್ತಲೆಯ ಕಾನನದಿ ಕಣ್ಕಾಣದೆ ಆಳವಾದ ಕಂದರದಲ್ಲಿ ಕಾಲುಜಾರಿ ಬಿದ್ದುಬಿಟ್ಟವು.ಎಷ್ಟು ಪ್ರಯತ್ನಿಸಿದರೂ ಮೇಲಕ್ಕೆ ಎಟುಕದಷ್ಟು ಆಳ, ಎರಡೂ ಕಪ್ಪೆಗಳು ಎಡಬಿಡದೆ ಜಿಗಿಯಲೆತ್ನಿಸಿದವು. 

ಉಳಿದ ಕಪ್ಪೆಗಳು ಇದನ್ನು ಕಂಡು  " ಅಯ್ಯೋ ಬಿದ್ದುಬಿಟ್ಟಿರಾ, ಅಷ್ಟೇ ಬಿಡಿ ಅಲ್ಲಿದ್ದರೆ ನೀವು ಬದುಕಿದ್ದರೂ ಸತ್ತಂತೆ,ಇನ್ನೇನು ನಿಮ್ಮ ಕಥೆ ಅಷ್ಟೇ" ಎಂದು ಹಾಸ್ಯ ಮಾಡುತ್ತ ನಗಲಾರಂಭಿಸಿದವು, ಈ ಎರಡೂ ಕಪ್ಪೆಗಳು ಬಿಡದೆ ಪ್ರಯತ್ನ ಮಾಡುತ್ತಿದ್ದವು, ಉಳಿದವು ಕೂಗುತ್ತಲೇ ಇದ್ದವು "ಏ ಕೇಳಿಸಲಿಲ್ಲವೇ ನಿಮಗೆ, ನೀವಿನ್ನು ಸತ್ತಂತೆ,..ಸತ್ತಂತೆ," ಅಷ್ಟರಲ್ಲಿ ಒಂದು ಕಪ್ಪೆ ನೆಗೆದೂ ನೆಗೆದೂ ಸುಸ್ತಾಗಿ ತಲೆಕೆಳಗಾಗಿ ಬಿದ್ದು ಪ್ರಾಣ ಬಿಟ್ಟಿತು, ಇನ್ನೊಂದು ಮಾತ್ರ ತನ್ನ ಪ್ರಯತ್ನವನ್ನು ಬಿಡದೇ ಮಾಡಿತ್ತು. ಮೇಲಿದ್ದ ಕಪ್ಪೆಗಳು ತಮ್ಮ ಪಾಡಿಗೆ  ಕೈಚಾಚಿ ಆಡಿಕೊಳ್ಳುತ್ತಾ ಅರಚುತ್ತಲೇ ಇದ್ದವು ಆದರೆ ಉಳಿದಿದ್ದ ಒಂದೇ ಕಪ್ಪೆ. ಎಗರೀ ಎಗರೀ ಸುಸ್ತಾದರೂ ಶಕ್ತಿಮೀರಿ ಮೇಲಕ್ಕೆ ಜಿಗಿದೇ ಬಿಟ್ಟಿತು!! 

ಮೇಲಿದ್ದ ಕಪ್ಪೆಗಳು ಅಚ್ಚರಿಯಿಂದ ಬೆಪ್ಪಾಗಿ ಮುಂದೆಬಂದು ಅದನ್ನು ಅಭಿನಂದಿಸಿದವು,"ನಾವೆಲ್ಲಾ ನಿನ್ನನ್ನು ಕಂಡು ನಗಾಡುತ್ತಿದ್ದರೂ ನೀನು ಮಾತ್ರ ಉತ್ಸಾಹ ಕಳೆದುಕೊಳ್ಳದೆ ಜೀವಂತವಾಗಿ ಮೇಲೇರಿ ಬಂದೆ,ನಮ್ಮನು ಕ್ಷಮಿಸು ನಿನ್ನ ಸಾಹಸ ಮೆಚ್ಚುವಂಥದ್ದು" ಎಂದು ಪ್ರಶಂಸಿಸಿದವು. ಅದಕ್ಕೆ ಆ ಕಪ್ಪೆ "ಅಯ್ಯಾ ನೀವೇನು ಹೇಳುತ್ತಿದ್ದೀರೋ ನನಗೊಂದೂ ತಿಳಿಯದು ನನಗೆ ಹುಟ್ಟು ಕಿವುಡು, ನೀವೆಲ್ಲಾ ನನ್ನ ಕಡೆ ನೋಡಿಕೊಂಡು,ಕೈ ಬೀಸುತ್ತಾ ಅಷ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು" ಎಂದಿತು. 


ಈ ಕಥೆಯಲ್ಲಿ ಎರಡು ನೀತಿಗಳಿವೆ. 
೧.ಮಾತಿನ ಶಕ್ತಿ ಬಿದ್ದವರನ್ನು ಮೇಲಕ್ಕೂ ಎತ್ತಬಹುದು. 
೨. ಕೆಳಕ್ಕೆ ಬಿದ್ದವರನ್ನು ಅದೇ ಮಾತಿನಿಂದ ಧೈರ್ಯಗೆಡಿಸಿದರೆ ಮತ್ತೂ ಪಾತಾಳಕ್ಕೆ ತಳ್ಳಿದಂತಾಗಿ ಮೃತ್ಯುವೇ ಬರಬಹುದು

 

ಕುಕ್ಕೂಬರಾ ಮತ್ತು ಗೂಲಾಗೂಲ್ ಮರ  
(ಆಸ್ಟ್ರೇಲಿಯಾದ ನೂಂಗಾಬುರಾ ಜನರ ಜಾನಪದ ಕತೆ) 

ಸಿಡ್ನಿ  ಶ್ರೀನಿವಾಸ್

ಹಲ್ಲಿ ಗೂಗ್ರಾಗೆ ( Googarh ) ಇಬ್ಬರು ಹೆಂಡಿರು. ಮೊದಲನೆಯವಳು ಪೋಸಮ್ (opposum ) ಆದ ಮೂದೈ (Moodai ) ಮತ್ತು ಎರಡನೆಯವಳು ನಗುವ ಜಾಕಾಸ್ ( laughing jackass) ಆದ  ಕುಕ್ಕೂಬರಾ ( Cookooburrah). ಕುಕ್ಕೂಬರಾಳಿಗೆ ಮೂರು ಗಂಡು ಮಕ್ಕ
ಳು. ಮೊದಲನೆಯವನು ದೊಡ್ದವನಾಗಿದ್ದು ತಾನಾಗಿಯೇ ದೂರ ವಾಸಿಸುತ್ತಿದ್ದ. ಮಿಕ್ಕ ಇಬ್ಬರೂ ಇನ್ನೂ ಚಿಕ್ಕವರು, ತಾಯಿಯ ಜೊತೆಗೇ ಇದ್ದರು. ಅವರ ಬಿಡಾರ ಒಂದು ಗೂಲಾಗೂಲ್ (Goolahgool) ಮರದ ಬಳಿ ಇತ್ತು. ಅವರು ತಮಗೆ ಬೇಕಾದ ನೀರನ್ನು ಆ ಮರದಿಂದಲೇ ಪಡೆಯುತ್ತಿದ್ದರು. ಗೂಲಾಗೂಲ್ ಮರ ಗಟ್ಟಿ ತೊಗಟೆಯಿಂದ ಮಾಡಲ್ಪಟ್ಟಿದ್ದು ಅದಕ್ಕೆ ನೀರನ್ನು ಶೇಕರಿಸಿ ಇಟ್ಟುಕೊಳ್ಳುವ ಸಾಮರ್ಥ್ಯವಿತ್ತು. ಕೆಳಗೆ ಮರದ ಕಾಂಡ. ಮೇಲೆ ಅದು ಎರಡು ಕವಲಾಗಿ  ಬೆಳೆದಿತ್ತು. ಕವಲಿನ ಕೆಳಗೆ ಕಾಂಡ ಪೊಳ್ಳಾಗಿದ್ದು,  ಮಳೆ ಬಂದಾಗ ನೀರು ಕವಲಿನಲ್ಲಿರುವ ಬಿರುಕಿನ ಮೂಲಕ ಕಾಂಡವನ್ನು ಪ್ರವೇಶಿಸುತ್ತಿತ್ತು. ಆ ನೀರು ಅಲ್ಲಿಯೇ ಬಹುಕಾಲದ ವರೆಗೂ ಇರುತ್ತಿತ್ತು. ಅಲ್ಲಿದ್ದ ಕರಿಜನರಿಗೆ ಯಾವ ಯಾವ ಗೂಲಾಗೂಲ್ ಮರದಲ್ಲಿ ಎಷ್ಟೆಷ್ಟು ನೀರು ಸಂಗ್ರಹವಾಗಿದೆ ಎಂಬುದನ್ನು ತಿಳಿಯುವುದು ರೂಢಿಯಾಗಿತ್ತು. ನೀರಿದ್ದ ಕಾಂಡದ ಬಣ್ಣವೇ ಬೇರೆ ಅಲ್ಲವೇ?

ಒಂದು ದಿನ ಗೂಗ್ರಾ ಮತ್ತು ಅವನ ಹೆಂಡತಿಯರು ಬೇಟೆಗೆ ಹೊರಟರು. ತಮ್ಮ ಇಬ್ಬರು ಎಳೆಯ ಮಕ್ಕಳನ್ನು ಗೂಡಿನಲ್ಲಿಯೇ ಬಿಟ್ಟರು. ಹೊರಟಾಗ ಅವರು ತಮಗೆ ಬೇಕಾಗಿದ್ದಷ್ಟು  ನೀರನ್ನು ತಮ್ಮ ಪೋಸಮ್ ಚರ್ಮದ ಚೀಲಗಳಲ್ಲಿ ಇಟ್ಟುಕೊಂಡಿದ್ದರು. ಆದರೆ ಮಕ್ಕಳಿಗೆ ನೀರನ್ನು ಇಡುವುದನ್ನು ಮರೆತರು. ಮಕ್ಕಳೋ ಇನ್ನೂ ಚಿಕ್ಕವರು. ಅವರಿಗೆ ಗೂಲಾಗೂಲಿಗೆ ಹೋಗಿ ನೀರನ್ನು ಪಡೆಯುದು ಹೇಗೆ ಎಂಬುದು ತಿಳಿದಿರಲಿಲ್ಲ. ಹೀಗಾಗಿ ಅವರಿಬ್ಬರೂ ಬಾಯಾರಿಕೆಯಿಂದ ನಶಿಸಿ ಹೋಗುವ ಮಟ್ಟಕ್ಕೆ ಬಂದಿದ್ದರು. ಅವರ ನಾಲಿಗೆಗಳು ಊದಿಕೊಂಡು ಅವರಿಗೆ ಮಾತನಾಡುವುದು ಅಸಾಧ್ಯವಾಯಿತು. ಆಗ ಅಲ್ಲಿಗೆ ಓರ್ವ ವ್ಯಕ್ತಿ ನಡೆದುಬಂದ. ಅವನು ಹತ್ತಿರವಾದಾಗ ಮಕ್ಕಳಿಗೆ ಅರಿವಾಯಿತು- ಅವನು ಅವರಿಬ್ಬರ ದೊಡ್ದ ಅಣ್ಣ ಕುಕ್ಕೂಬರಾ. ಅವರಿಗೆ ಅವನೊಡನೆ ಮಾತನಾಡುವುದು ಆಗಲೇ ಇಲ್ಲ. ಅವನು
 “ಅಮ್ಮ ಎಲ್ಲಿ?” ಎಂದು ಕೇಳಿತ್ತಿದ್ದ. ಇವರಿಗೆ ಉತ್ತರಕೊಡುವುದು ಸಾಧ್ಯವಾಗಲಿಲ್ಲ. ಆಗ ಅವನು ಕೇಳಿದ,
”ಏನಾಗಿದೆ ನಿಮಗೆ?” 
ಇಬ್ಬರೂ ಗೂಲಾಗೂಲ್ ಮರದತ್ತ ಕೈಮಾಡಿ ತೋರಿಸಿದರು. ಅವನು ಮರದತ್ತ ನೋಡಿ ಪರಿಸ್ಥಿತಿ ಏನಿರಬಹುದು ಎಂಬುದನ್ನು ಊಹಿಸಿದ.
 “ಅಮ್ಮಾ ನಿಮಗೆ ನೀರನ್ನು ಇಟ್ಟು ಹೋಗಿಲ್ಲವೇ?” 
ಇಬ್ಬರೂ ತಲೆ ಅಲ್ಲಾಡಿಸಿದರು. 
“ನೀವಿಬ್ಬರೂ ನೀರಿಲ್ಲದೇ ಸಾಯುತ್ತಿದ್ದೀರಾ ಹಾಗಾದರೆ?”
ಮತ್ತೆ ಇಬ್ಬರೂ ತಲೆ ಅಲ್ಲಾಡಿಸಿದರು. 
“ತಡೆಯಿರಿ. ನನ್ನ ತಮ್ಮಂದಿರನ್ನು ನೀರಿಲ್ಲದೇ ಸಾಯುವಂತೆ ಮಾಡಿರುವರಿಗೆ ನಾನು ತಕ್ಕ ಶಾಸ್ತಿಮಾಡುತ್ತೇನೆ.”
ಕೂಡಲೇ ಕುಕ್ಕೂಬರಾ ಮರದ ಬಳಿಗೆ ನಡೆದು, ಅದನ್ನು ಹತ್ತಿ, ಅದನ್ನು ಕೆಳಗಿನ ವರೆಗೂ ಸೀಳಿದ. ಕ್ಷಣಮಾತ್ರದಲ್ಲಿ ಅಲ್ಲಿದ್ದ ನೀರೆಲ್ಲಾ ವೇಗದ ತೊರೆಯಂತೆ ಹರಿಯಲಾರಂಭಿಸಿತು. ಚಿಕ್ಕ ಮಕ್ಕಳಿಬ್ಬರೂ ಅಲ್ಲಿಗೆ ಹೋಗಿ ಮನಸಾರೆ ನೀರು ಕುಡಿದರು. ನೀರಿನಲ್ಲಿ ಆಟವಾಡಿದರು, ಸ್ನಾನ ಮಾಡಿದರು. ನೀರು ಹೆಚ್ಚಾಗುತ್ತಾ ಹೋಗಿ ಅದರ ಮಟ್ಟ ಏರುತ್ತಲೇ ಇತ್ತು. 
ಅತ್ತ ಬೇಟೆಹೋಗಿದ್ದವರು ತಮ್ಮ ಕೆಲಸ ಮುಗಿಸಿ ಹಿಂತಿರುಗುತ್ತಿದ್ದರು. ದಾರಿಯಲ್ಲಿ ಮಹಾ ಪ್ರವಾಹದಂತೆ ನೀರು ಹರಿಯುತ್ತಿತ್ತು. 
“ಏನಿದು? ನಮ್ಮ ಗೂಲಾಗೂಲ್ ಒಡೆದು ಹೋಗಿದೆಯೇ?”
ನೀರನ್ನು ನಿಲ್ಲಿಸ ಹೋದರು. ಆದರೆ ಅದರ ರಭಸ ವಿಪರೀತವಾಗಿತ್ತು. ನಿಲ್ಲಿಸುವ ಪ್ರಯತ್ನವನ್ನು ಬಿಟ್ಟು ತಮ್ಮ ಮನೆಯತ್ತ ಹೊರಟರು. ಆದರೆ ಮನೆಯ ಮುಂದೆ ದೊಡ್ದ ತೊರೆಯ ನಿರ್ಮಾಣವಾಗಿತ್ತು. ತೊರೆಯ ಮತ್ತೊಂದು ಪಕ್ಕದಲ್ಲಿ ತಮ್ಮ ಮೂರೂ ಮಕ್ಕಳು ನಿಂತಿದ್ದರು. ಹಿರಿಯ ಮಗ ತಮ್ಮಂದಿರಿಗೆ ಹೇಳಿದ,
“ಅವರಿಗೆ ಕೂಗಿ ಹೇಳಿ. ಅತ್ತ ಆಳ ಕಡಿಮೆ ಇದೆ. ಅಲ್ಲಿ ಅವರು ಸುಲಭವಾಗಿ ದಾಟಬಹುದು.” 
ತಮ್ಮಂದಿರು ಹಾಗೆಯೇ ಮಾಡಿದರು. ಗೂಗ್ರಾ ಮತ್ತು ಅವನ ಹೆಂಡಿರಿಬ್ಬರೂ ಮಕ್ಕಳು ಹೇಳಿದ ಸ್ಥಳಕ್ಕೆ ಹೋಗಿ, ದಾಟಲು ನೀರಿಗಿಳಿದರು. ಕಷ್ಟವಾಯಿತು. ಮೂದೈ ನೀರಿನಿಂದ ಏಳಲು ಯತ್ನಿಸುತ್ತಿದ್ದಂತೆ  ಅದನ್ನು ನೋಡಿದ ಜಾಕಾಸ್ ಕುಕ್ಕೂಬರಾ ಕೂಗಿಕೊಂಡಳು.
“ಗುಗ್ ಗೂರ್ ಗಾ ಗಾ,  ಗುಗ್ ಗೂರ್ ಗಾ ಗಾ, ನನಗೊಂದು ಕೋಲನ್ನು ತಂದುಕೊಡು.” 
ಆದರೆ ದಡದಿಂದ ಅವಳ ಮೂರೂ ಮಕ್ಕಳು ಒಕ್ಕಂಠದಿಂದ ಉತ್ತರಿಸಿದರು,
“ಗುಗ್ ಗೂರ್ ಗಾ ಗಾ. ಗುಗ್ ಗೂರ್ ಗಾ ಗಾ.”
ಮೂರು ಬೇಟೆಗಾರರ ಸುತ್ತಲೂ ನೀರು ಆವರಿಸಿತು. ನೀರೊಳಗಿನ ಸುಳಿ ಅವರನ್ನು ಸೆಳೆದುಕೊಂಡು ಮುಳುಗಿಸಿತು. ಅಂತೂ ಹಿರಿಯಮಗ ಸೆಡು ತೀರಿಸಿಕೊಂಡ. 
(ಆಧಾರ -  K, Langloh Parker, Australian Legendary Tales, David Nutt, 270-271 Strand, Melbourne, Melville, Mullen & Slade, 1896 .)

ಟಿಪ್ಪಣಿ : 
ಗೂಗ್ರಾ: ( Googarh )  ಇಗ್ವಾನಾ, ದೊಡ್ದ ಅಳಿಲಿನಂತಹ ಪ್ರಾಣಿ, ಮರಗಳ ಮೇಲೆ ಮತ್ತು ಭೂಮಿಯ ಮೇಲೆ ವಾಸಿಸುತ್ತವೆ. 
ಪೋಸಮ್ : (opposum ): 
ಕುಕ್ಕೂಬರಾ : ( laughing jackass)  ನಗುವ ಜಾಕಾಸ್ 
ಗೂಲಾಗೂಲ್ ( Goolahgool): ನೀರನ್ನು ಶೇಕರಿಸಿ ಹಿಡಿಯುವ ಮರ 

ಗಲಾ ಮತ್ತು ಹಲ್ಲಿ ಉಲಾ 

(ಆಸ್ಟ್ರೇಲಿಯಾದ ನೂಂಗಾಬುರಾ ಜನರ ಜಾನಪದ ಕತೆ)  


- ಸಿಡ್ನಿ  ಶ್ರೀನಿವಾಸ್

                                     ಬಿಸಿಲಲ್ಲಿ ಸದಾ ಕಾಲ ಮಲಗಿದ್ದ ಹಲ್ಲಿ ಉಲಾಗೆ (Oolah) ಬೇಸರವಾಗಿತ್ತು ಮತ್ತು ಹಾಗೇ ಸುಸ್ತಾಗಿತ್ತು. ಎದ್ದು ಏನಾದರೂ ಆಟವಾಡೋಣ ಎಂದುಕೊಂಡ. ತನ್ನ ಬೂಮೆರಾಂಗುಗಳನ್ನು (Boomerang ) ತೆಗೆದುಕೊಂಡು ಒಂದೆಡೆ ನಿಂತು ಎಸೆಯಲಾರಂಭಿಸಿದ. ಇವನು ಹೀಗೆ ತನ್ನ ಕ್ರೀಡೆಯಲ್ಲಿ ತೊಡಗಿದ್ದನ್ನು ಅಲ್ಲಿಯೇ ಇದ್ದ ಒಂದು ಗಲಾ (Galah, Cockatoo) ಮೆಚ್ಚಿ ಅಲ್ಲಿಯೇ ನಿಂತು ನೋಡುತ್ತಿದ್ದಳು. ಬೂಮೆರಾಂಗುಗಳು ಉಲಾನ ಬಳಿಗೇ ಹಿಂತಿರುಗಿ ಬರುತ್ತಿದ್ದವು. ಅವನು ಬಳಸುತ್ತಿದ್ದದ್ದು ಬುಬೆರಾ (Bubberah ) ಜಾತಿಯವು ಆಗಿದ್ದವು.  ಅವು ಗಾತ್ರದಲ್ಲಿ ಚಿಕ್ಕವಾಗಿದ್ದು, ಹೆಚ್ಚು ಡೊಂಕಾಗಿದ್ದವು. ಸದಾ ಅವನಲ್ಲಿಗೇ ವಾಪಸ್ ಬರುತ್ತಿದ್ದವು. ಎಲ್ಲಾ ಬೂಮೆರಾಂಗುಗಳೂ ಹೀಗೆ ಹಿಂತಿರುಗಿ ಬರುವುದಿಲ್ಲ.

                                ಪಕ್ಕದಲ್ಲಿ ಗಲಾ ತನ್ನ ಪ್ರದರ್ಶನವನ್ನು ನೋಡುತ್ತಿದುದನ್ನು ಕಂಡು ಉಲಾಗೆ ಮತ್ತಷ್ತು ಉತ್ಸಾಹ ಮತ್ತು ಜಂಭ ಬಂದವು. ಇರಲಿ ಎಂದು ಮುಂದಿನ ಬುಬೇರಾಗೆ ಮತ್ತಷ್ಟು ತಿರುವನ್ನು ಕೊಟ್ಟು, ತನ್ನ ಬಲವನ್ನೆಲ್ಲಾ ಬಿಟ್ಟು ಎಸೆದ. ಗಾಳಿಯಲ್ಲಿ ಬುಸುಗುಟ್ಟುತ್ತಾ ಅದು ಹಿಂತಿರುಗುವಾಗ ಗಲಾಳ ಬಳಿ ಬಂತು. ಬಂದದ್ದೇ ಅವಳ ತಲೆಯ ಮೇಲಿದ್ದ ಗರಿಗಳನ್ನು ಕತ್ತರಿಸಿ, ಅವಳ ತಲೆಯ ಮೇಲಿನ ಚರ್ಮವನ್ನು ತರಿದು ಹಾಕಿತು. ದೊಡ್ದ ಚೀತ್ಕಾರ ಹಾಕುತ್ತಾ ಗಲಾ ಒದ್ದಾಡುತ್ತಾ ಓಡಲಾರಂಭಿಸಿದಳು. ಹುಚ್ಚು ಹಕ್ಕಿಯಂತೆ ಪ್ರತಿ ನಿಮಿಷಕ್ಕೂ ನೆಲಕ್ಕೆ ತನ್ನ ತಲೆಯನ್ನು ಹೊಡೆದುಕೊಳ್ಳುತ್ತಿದ್ದಳು.   ಇದನ್ನು ನೋಡಿದ ಉಲಾಗೆ ವಿಪರೀತ ಗಾಬರಿಯಾಗಿ ಅವನು ಅಲ್ಲಿಂದ ಓಡಿ ಒಂದು ಬಿಂಡಿ (Bindeah)ಯ ಪೊದೆಯೊಂದರಲ್ಲಿ ಅವಿತುಕೊಂಡ. ಅವನನ್ನು ನೋಡಿದ ಗಲಾ  ಮುಂಚಿನ ಹಾಗೆಯೇ ಕಿರುಚಾಡುತ್ತಾ ಅವನನ್ನು ಹಿಂಬಾಲಿಸಿದಳು. ಪೊದೆಯಲ್ಲಿ ಅವನು ನೋಡಿದ ಕೂಡಲೇ ಅಲ್ಲಿಗೆ ಧಾವಿಸಿ ತನ್ನ ಕೊಕ್ಕಿನಿಂದ ಅವನನ್ನು ಹಿಡಿದು ಹೊರಗೆಳೆದಳು. ಆಗ ಅಲ್ಲಿದ್ದ ಮುಳ್ಳುಗಳೆಲ್ಲಾ ಉಲಾನ ಮೈಯ್ಯಿಗೆ ಚುಚ್ಚಿಕೊಂಡವು. ಅವನ ಚರ್ಮದಲ್ಲಿ ಅಪಾರ ತೂತುಗಳಾದವು. ಇದು ಸಾಲದು ಎಂಬಂತೆ ನಂತರ ಅವಳು ಅವನ ಮೈಯ್ಯ ಮೇಲೆಲ್ಲಾ ತನ್ನ ರಕ್ತ ಸಿಕಿತ ತಲೆಯನ್ನು ಸವರಿದಳು.   ನಂತರ ನುಡಿದಳು,

“ ನಿನ್ನ ಮೈಯ್ಯ ಮೇಲೆಲ್ಲಾ ಬಿಂಡಿ ಮುಳ್ಳು ಚುಚ್ಚಿರಲಿ ಮತ್ತು ನನ್ನ ರಕ್ತದ ಕಲೆ ಕೂಡ ಅಲ್ಲಿರಲಿ”

ಮುಳ್ಳು ಚುಚ್ಚಿದ ಗಾಯವನ್ನು ತಡೆಯಲಾರದೇ ಗೋಳಿಡುತ್ತಾ ಉಲಾ ಹೇಳಿದ

“ನಾನು ಕೆಂಪು ಮುಳ್ಳು ಹಲ್ಲಿಯಾಗಿರುವವರೆಗೂ ನೀನು ಬೋಡುತಲೆಯ ಹಕ್ಕಿಯಾಗಿರುತ್ತೀಯ.”

ಇಂದಿಗೂ ಗಲಾಳ ತಲೆಯ ಮೇಲೆ ಶಿಖರದ ಕೆಳಗೆ ನೀವು ಉಲಾ ಮಾಡಿದ ಒಂದು ಬೋಡನ್ನು ನೋಡಬಹುದು. ಗಲಾ ಇರುವ ಪ್ರದೇಶದಲ್ಲಿ ಹಲ್ಲಿಗಳು ಕೆಂಪಾಗಿರುತ್ತವೆ ಮತ್ತು ಬಿಂಡಿ ತರಹ ಮುಳ್ಳು ದೇಹವನ್ನು ಹೊಂದಿರುತ್ತವೆ. 

(ಆಧಾರ -  K, Langloh Parker, Australian Legendary Tales, David Nutt, 270-271 Strand, Melbourne, Melville, Mullen & Slade, 1896 .)





ಕಾಗಕ್ಕನ ಶಕ್ತಿ
- ಕನಕಾಪುರ ನಾರಾಯಣ


ಅದೊಂದು ಸಮುದ್ರತೀರ. ಮೀನುಗಾರರ ಜೊತೆಗೆ ಕೊಕ್ಕರೆ, ಕಾಗೆ,ಕಡಲ ಹಕ್ಕಿ ಹಾಗೂ ಇನ್ನೂ ಅನೇಕ ಪಕ್ಷಿಗಳು ಮೀನು ಹಂಚಿಕೊಂಡು ತಿನ್ನುತ್ತಾ ವಾಸವಾಗಿದ್ದವು. ಹೀಗೇ ಬಲೆ ಬೀಸಲು ದೂರ ಸಾಗಿದ ಮೀನುಗಾರರನ್ನೇ ಕಾಯುತ್ತಾ ಕುಳಿತಿರಲು ಕುಚೇಷ್ಟೆ ಮಾಡಲೆಂದು ಕಾಗೆಯೊಂದು ಮುದಿ ಕೊಕ್ಕರೆಯೊಂದಕ್ಕೆ ಹೇಳಿತು"ಅಯ್ಯಾ ನಿನ್ನ ರೆಕ್ಕೆಗಳೇಕೆ ಅಷ್ಟು ಬಡಕಲಾಗಿವೆ ನೋಡು ನನ್ನ ರೆಕ್ಕೆ ಪುಕ್ಕಗಳು ಎಂಥಾ ಬಲಶಾಲಿಯಾಗಿವೆ, ಅದಕ್ಕೇ ಇರಬೇಕು ನೀನು ಯಾವಾಗಲೂ ತಲೆ ತಗ್ಗಿಸಿ ನೀರಿನಲ್ಲಿ ಮೀನನ್ನು ಕಾಯುತ್ತಾ ನಿಂತಿರುವೆ,ಅದೇ ನನ್ನನು ನೋಡು"ಎಂದು ಪುರ್ ಎಂದು ಹಾರಿ ನಾಲ್ಕುಬಾರಿ ಗಾಳಿಯಲ್ಲೇ ಲಾಗ ಹಾಕಿ ವೇಗವಾಗಿ ಬಂದು ಕೊಕ್ಕರೆಯ ಪಕ್ಕಕ್ಕೆ ಕುಳಿತು "ನಿನ್ನಿಂದ ಇದು ಈ ಜನುಮದಲ್ಲಿ ಸಾಧ್ಯವಿಲ್ಲ ಬಿಡು,ಹೀಗೆ ಹಾರಿದರೆ ಮಾತ್ರ ಮೀನುಗಾರರ ಬಲೆಯಿಂದ ನಾವು ಒಂದೆರೆಡು ಮೀನುಗಳನ್ನು ಕಸಿದುಕೊಳ್ಳಲು ಸಾಧ್ಯ."ಎಂದು ಜಂಭದಿಂದ ನುಡಿಯಿತು.ಅದಕ್ಕೆ ಕೊಕ್ಕರೆ "ಅರೆರೆ ಕಾಗಕ್ಕಾ ನನಗೂ ಹಾರಲು ಬರದೇ ಏನಿಲ್ಲ,ನಾನೂ ಚೆನ್ನಾಗೇ ಹಾರಬಲ್ಲೆ"ಎಂದಿತು. ಈ ಮಾತನ್ನು ಕೇಳಿ ಕಾಗೆ ಪಕ್ಕನೆ ನಕ್ಕಿತು"ಸರಿ ಹಾಗಾದರೆ ದೂರಕ್ಕೆ ಹಾರುವ ಸ್ಪರ್ಧೆ, ನಿನ್ನಲ್ಲಿ ಗುಂಡಿಗೆ ಇದ್ದಲ್ಲಿ ಬಾ"ಎಂದು ಸವಾಲೆಸೆಯಿತು. ಸರಿ ಕೊಕ್ಕರೆ ಅದಕ್ಕೆ ಒಪ್ಪಿ ಮುದುಡಿದ್ದ ತನ್ನ ರೆಕ್ಕೆ ಬಿಚ್ಚಿ, ಒಮ್ಮೆ ಪಟಪಟನ ಒದರಿ ನಿಧಾನವಾಗಿ ಹಾರಲು ಆರಾಂಭ ಮಾಡಿತು,ಕಾಗೆ ಭರ್ರನೆ ಅದರ ಪಕ್ಕಕ್ಕೇ ಹಾರಿ ಬಂದು"ಇಷ್ಟೇನಾ ನಿನ್ನ ವೇಗ? ಅಯ್ಯಾ ನಾನೇನೋ ನಿನ್ನ ರೆಕ್ಕೆ ಅಗಲ ನೋಡಿ ಭಾರೀ !.........."ಎನ್ನುತ್ತಾ ಎಡಬಿಡದೆ ಆಡಿಕೊಳ್ಳುತ್ತಾ ಜೊತೆಯಲ್ಲೇ ಹಾರುತ್ತಾ ಬಂದಿತು.ಸ್ವಲ್ಪ ಸಮಯದ ನಂತರ ಕಾಗೆ ಒಂದೇ ಸಮನೆ ಮಾತನಾಡಿ ಸುಸ್ತಾಗಿ ಬಾಯಾರಿದಂತಾಗಿ ಒಮ್ಮೆ ಬಂದ ದಾರಿಯ ಕಡೆಗೆ ತಿರುಗಿ ನೋಡಿತು. ದಡ ಕಾಣದಷ್ಟು ದೂರ ತಲುಪಿದ್ದರು. ಕಾಗೆಗೆ ರೆಕ್ಕೆಗಳಲ್ಲಿ ಶಕ್ತಿ ಕಡಿಮೆಯಾಗತೊಡಗಿತು,ಆದರೂ ಸ್ಪರ್ಧೆಯಲ್ಲವೇ, ಧೈರ್ಯದಿಂದ ಕೊಕ್ಕರೆಯನ್ನು ಕೇಳಿತು"ಇನ್ನೂ ಎಷ್ಟು ಹೊತ್ತು ಹೀಗೇ ಹಾರುವುದು?" ಅದಕ್ಕೆ ಕೊಕ್ಕರೆ ಶಾಂತವಾಗಿ ಉತ್ತರಿಸಿತು "ಎನ್ನೇನು 2-3 ದಿನ ಅಷ್ಟೇ"....."ಹಾ! 2-3 ದಿನ! ನನ್ನ ಕೈಲಾಗದು,ಈಗಲೇ ನನ್ನಲ್ಲಿ ತಿರುಗಿ ತೀರಕ್ಕೆ ಹೋಗುವಷ್ಟೂ ಶಕ್ತಿಯಿಲ್ಲ ಇನ್ನು 2-3 ದಿನ! ಅಯ್ಯಾ ನನ್ನನು ಕಾಪಾಡು ನನಗೆ ನಿನ್ನಂತೆ ನೀರಿನ ಮೇಲೆ ತೇಲಲೂ ಬಾರದು"ಎಂದು ಗೋಗರೆಯಿತು. ಅದಕ್ಕೆ ಕೊಕ್ಕರೆ "ಬಾ ನನ್ನ ಅಗಲವಾದ ಬೆನ್ನಿನ ಮೇಲೆ ಕೂಡು ನಾವು ಹೊರಟ ತೀರಕ್ಕೆ ಕರೆದೊಯ್ಯುವೆ "ಎಂದು ಹೇಳಿ ಕಾಗೆಯನ್ನು ಕೂಡಿಸಿಕೊಂಡು ವಾಪಸ್ ತಂದು ತೀರಕ್ಕೆ ಬಿಟ್ಟಿತು.ಕಾಗೆ ತನ್ನ ತನ್ನ ತಪ್ಪರಿತು,ಕ್ಷಮೆ ಕೋರಿ,ತಲೆ ತಾಗಿಸಿತು.

ಮಾತನಾಡುವ ಮರ
- ಕನಕಾಪುರ ನಾರಾಯಣ


ಪುಟ್ಟ ಬಾಲಕನೊಬ್ಬ ದಿನಾ ಒಂದು ಮರದ ಬಳಿ ಆಡುತ್ತಿದ್ದ, ಅದರ ಮೇಲೆ ಹತ್ತುತ್ತಿದ್ದ, ಅದರ ಟೊಂಗೆ ಹಿಡಿದು ಜೋತಾಡುತ್ತಿದ್ದ. ಆ ಮರಕ್ಕೂ ಬಾಲಕನಿಗೂ ನಂಟೇ ಬೆಳೆಯಿತು.ಒಂದು ದಿನ ಬಾಲಕ ಪ್ರತಿನಿತ್ಯದಂತೆ ಆಡದೆ ಸುಮ್ಮನೆ ಮರದಡಿ ಕುಳಿತ.ಅದನ್ನು ಕಂಡ ಮರ ಮಾತನಾಡಿತು "ಮಗು ಏನಾಯಿತು?"ಎಂದಿತು, ಆಗ ಬಾಲಕ "ನನಗೆ ಹಸಿವಾಗಿದೆ ತಿನ್ನಲು ಮನೆಯಲ್ಲಿ ಏನೂ ಇಲ್ಲ"ಎಂದ.ತಕ್ಷಣ ಆ ಮರ ತನ್ನ ಎಲೆಗಳ ಮರೆಯಲ್ಲಿದ್ದ ಹಣ್ಣನ್ನು ಬೀಳಿಸಿತು.ಅದನ್ನು ತಿಂದು ಸಂತೋಷದಿಂದ ದಿನಾ ಅಲ್ಲೇ ಆಡಲು ಬರುತ್ತಿದ್ದ.ಸ್ವಲ್ಪ ವರ್ಷಗಳ ಕಾಲ ಬಾಲಕ ಮರಳಿ ಮರದ ಬಳಿ ಬರಲಿಲ್ಲ,ಮರಕ್ಕೆ ಬೇಸರವಾಗಿತ್ತು.ಒಂದು ದಿನ ಎದುರಿಗೆ ಕಾಣಿಸಿಕೊಂಡು ಬೇಸರದ ಮುಖ ಮಾಡಿಕೊಂಡಿರಲು ಮರವು ಕಾರಣ ಕೇಳಿತು."ಮಗೂ ನನ್ನಬಳಿ ಆಡಲು ಬಾ"ಎಂದಿತು.
ಅದಕ್ಕೆ ಆ ಹುಡುಗ ನಾನೀಗ ದೊಡ್ಡವನಾಗಿದ್ದೇನೆ,ಆದರೆ ವ್ಯಾಪಾರ ಮಾಡುವ ಬಯಕೆ ಆದರೆ ನನ್ನಲ್ಲಿ ಹಣವಿಲ್ಲ"ಎಂದ.ತಕ್ಷಣ ಆಮರ ತನ್ನಲ್ಲಿದ್ದ ಎಲ್ಲಾ ಹಣ್ಣುಗಳನ್ನು ಆತನಿಗೆ ಕೊಟ್ಟಿತು.ಅದಲ್ಲು ಮಾರಿ ವ್ಯಾಪಾರದಲ್ಲಿ ಚೆನ್ನಾಗೇ ಹಣ ಮಾಡಿದ.ಸ್ವಲ್ಪಕಾಲ ಮರವನ್ನು ಭೇಟಿ ಮಾಡಲು ಬರಲೇ ಇಲ್ಲ.ಮರಕ್ಕೆ ಮತ್ತೆ ಬೇಸರವಾಗಿತ್ತು.ಕೆಲವು ದಿನಗಳ ಬಳಿಕ ಮತ್ತೆ ಬಾಲಕ ಹಿಂತಿರುಗಿದ.ಮರ ಮತ್ತದೇ ಆಸೆಯಿಂದ "ನನ್ನೊಡನೆ ಆಡಲು ಬಾ"ಎಂದಿತು.ಹುಡುಗನಿಂದ ಅದೇ ಉತ್ತರ"ನನಗೀಗ ಆಡಲು ಸಮಯವಿಲ್ಲ,ನಾನು ಬಹಳ ಕಷ್ಟದಲ್ಲಿದ್ದೇನೆ ನನಗೆ ಆಶ್ರಯಕ್ಕೊಂದು ಮನೆ ಕಟ್ಟಿಕೊಳ್ಳಬೇಕಾಗಿದೆ,ಆದರೆ ಕಟ್ಟಿಗೆ,ಮರ ಕೊಳ್ಳುವಷ್ಟು ಹಣವಿಲ್ಲ"ಎಂದ.ಹಿಂದೂ ಮುಂದು ನೋಡದೆ ಮರ"ಮಗೂ ನನ್ನ ಈ ದೊಡ್ಡ ಮರದ ಟೊಂಗೆಗಳನ್ನು ಕತ್ತರಿಸಿ ಉಪಯೋಗಿಸಿಕೋ"ಎಂದಿತು.ಅಂತೆಯೇ ಅವನು ಅದನ್ನು ಉಪಯೋಗಿಸಿ ಮನೆಯನ್ನೂ ಕಟ್ಟಿದ.ವರ್ಷ ಕಳೆದರೂ ಮರಳಿಬಾರದ ಹುಡುಗನನ್ನು ಕಾಯುತ್ತಾ ಮರ ಬೇಸರದಲ್ಲಿತ್ತು.ಒಂದು ದಿನ ಆತ ಮತ್ತೆ ಬಂದ.ಎಂದಿನಂತೆ "ನನ್ನ ಬಳಿ ಆಡಲು ಬಾ"ಎಂದು ಮರ ಕರೆಯಿತು.ಹುಡುಗನೂ ಎಂದಿನಂತೆ "ನನಗೀಗ ಆಡಲು ಸಮಯವಿಲ್ಲ,ನನಗೀಗ ಮದುವೆಯಾಗಿದೆ,ನಾನು ಕೆಲಸಕ್ಕೆ ದೂರದೂರಿಗೆ ನದಿ ದಾಟಿ ಹೋಗಬೇಕಾಗಿದೆ ಈಜು ಬಾರದು,ದೋಣಿ ಮಾಡಿಕೊಳ್ಳಲು ಮರದ ಹಲಗೆ ಬೇಕು"ಎಂದ.ಕೂಡಲೇ ಆ ಮರ"ಮಗೂ ನನ್ನ ಕಾಂಡದಲ್ಲಿ ಹೆಚ್ಚು ಹಲಗೆಗಳನ್ನು ಮಾಡಿಕೊಳ್ಳಬಹುದು,ಉಪಯೋಗಿಸಿಕೋ" ಎಂದಿತು.ಅಂತೆಯೇ ಉಳಿದ ಮರವನ್ನು ಕಡಿದು ದೋಣಿ ಮಾಡಿಕೊಂಡು ಸಂಗಾತಿಯೊಡನೆ ಹೊರಟುಹೋದ.ದಶಕಗಳು ಕಳೆದರೂ ಮರ ಆತನಿಗೆ ಕಾಯುತ್ತಲೇ ಇತ್ತು. ಒಮ್ಮೆ ಮರಳಿ ಬಂದ ಆತ ಮುದುಕನಾಗಿದ್ದ.ಮರವು ಅದೇ ಭಾವನೆಯಿಂದ"ಮಗೂ ಹೇಗಿದ್ದೀಯಾ" ಎಂದಿತು.ಆಗ ಅವನು "ನನಗೆ ಬಹಳ ದಣಿವಾಗಿದೆ"ಸ್ವಲ್ಪ ವಿಶ್ರಾಂತಿ ಬೇಕು"ಎಂದ. ಆತನಿಗೆ ಕೊಡಲು ಮರದ ಬಳಿ ಏನೂ ಉಳಿದಿರಲಿಲ್ಲ"ಮಗೂ ನನ್ನಲ್ಲಿ ಉಳಿದಿರುವುದು ಈ ಬುಡ ಮತ್ತು ಬೇರು, ಮಾತ್ರ ,ಬಾ ಈ ಬುಡದಿಮ್ಮಿಯ ಮೇಲೆ ಕುಳಿತು ವಿಶ್ರಮಿಸು"ಎಂದಿತು.ಅವನು ಅದರ ಮೇಲೆ ಕುಳಿತ.ಮರಕ್ಕೆ ಇದರಿಂದ ಆನಂದವಾಯಿತು.ಮನಸ್ಸಿನಲ್ಲೇ ಖುಷಿ ಅನುಭವಿಸಿತು.
ನೀತಿ:ಇಲ್ಲಿ ಬರುವ ಮರವೇ ನಮ್ಮ ತಂದೆ-ತಾಯಿಯರ ಹಾಗೆ,ಅವರು ಬಯಸುವುದೇ ನಮ್ಮ ಸಹಬಾಳ್ವೆ.

ಆಳು
- ಕನಕಾಪುರ ನಾರಾಯಣ


 ಹಿಂದೊಮ್ಮೆ ಆಫ್ರಿಕಾ ದೇಶದಲ್ಲಿ ಕಮೇರಾ ಎಂಬ ರಾಜ ದರ್ಪದಿಂದ ಆಳುತ್ತಿದ್ದ.ಆತನನ್ನು ಕಂಡರೆ ಪ್ರಜೆಗಳು ಹೆದರಿ ನಡುಗುತ್ತಿದ್ದರು.ಸಭೆಯಲ್ಲಿ ಎಲ್ಲರನ್ನೂ ಕರೆಸಿ "ಈ ನಾಡಿಗೆ ನಾನೇ ರಾಜ,ಎಲ್ಲರೂ ನನ್ನ ಆಳುಗಳು" ಎಂದು ಗರ್ವದಿಂದ ಘೋಶಿಸಿದ.

 ಅದೇ ವೇಳೆಗೆ ಒಬ್ಬ ಮುದುಕ ಅಲ್ಲಿಗೆ ಬಂದು"ಸಾಧ್ಯವಿಲ್ಲ, ಎಲ್ಲರೂ ಈ ಭೂಮಿಯಲ್ಲಿ ಆಳುಗಳೇ"ಎಂದ.ಅದನ್ನು ಕೇಳಿ ಕುಪಿತನಾದ ರಾಜ ಆತನನ್ನು ಹತ್ತಿರಕ್ಕೆ ಕರೆದು "ಎಷ್ಟು ಧೈರ್ಯ ನಿನಗೆ ಈ ಮಾತನ್ನು ಹೇಳಲು,ಯಾರುನೀನು?"ಎಂದು ಕೇಳಿದ.ಅದಕ್ಕೆ ಮುದುಕ "ಅಯ್ಯಾ ದೊರೆ,ಕುಡಿಯಲು ನೀರಿಲ್ಲದೆ ಬಳಲುತ್ತಿರುವ ಪಕ್ಕದ ಊರಿಂದ ಬಂದವನು ನಾನು,ಒಂದು ಬಾವಿಯನ್ನು ತೋಡಿಸಿಕೊಡಿ ಎಂದು ಬೇಡಲು ಬಂದಿರುವೆ"ಎಂದ."ಓಹೋ ಹಾಗಾದರೆ ನೀನೊಬ್ಬ ಭಿಕ್ಷುಕ!ನನ್ನನ್ನೂ ಆಳು ಎಂದ ನಿನಗದೆಷ್ಟು ಸೊಕ್ಕು"ಎಂದು ಗದರಿದ.ಅದಕ್ಕೆ ಮುದುಕ ಶಾಂತಿಯಿಂದ ಉತ್ತರಿಸಿದ "ದೊರೆ ಬೇಕಿದ್ದರೆ ಸಾಯಂಕಾಲದ ಓಳಗೆ ಸಾಬೀತು ಮಾಡಿ ತೋರಿಸುತ್ತೇನೆ" ಎಂದ."ಸರಿ ನಿನ್ನ ಮಾತು ನಿಜವಾದರೆ ಬಾವಿಯನ್ನು ತೋಡಿಸಿ ಕೊಡುತ್ತೇನೆ"ಎಂದ.ತಕ್ಷಣ ಮುದುಕ ನಮ್ರತೆಯಿಂದ ತಲೆ ತಗ್ಗಿಸಿ ಕೈಯಲ್ಲಿದ್ದ ಊರುಗೋಲನ್ನು ರಾಜನಿಗೆ ಹಿಡಿಯಲು ಹೇಳಿ ಆತನ ಪಾದ ಸ್ಪರ್ಷ್ಸಿಸಿ ನಮಸ್ಕರಿಸಿದ,ನಂತರ ತನ್ನ ಕೋಲನ್ನು ವಾಪಸ್ ಕೇಳಿ ಪಡೆದ."ಇನ್ನು ಇದಕ್ಕಿಂತಾ ಮತ್ತೇನು ಪುರಾವೆ ಬೇಕು ಪ್ರಭು?" ಎಂದ ಮುದುಕ."ಪುರಾವೆ?" ರಾಜ ಕಣ್ಣರಳಿಸಿ ಕೇಳಿದ.ನಾನು ಕೋಲನ್ನು ಹಿಡಿಯಲು ಹೇಳಿದಾಗ ನೀವು ಹಿಡಿದಿರಲಿಲ್ಲವೇ? ಮತ್ತೆ ಕೊಡಿ ಎಂದಾಗ ಕೊಡಲಿಲ್ಲವೇ? ನಾನು ಹೇಳಿದ್ದನು ನೀವು ಮಾಡಿದಿರಿ"ಎಂದ.ರಾಜನ ಮುಖ ಮುದುಡಿತು.ಮುದುಕನ ಊರಿನಲ್ಲಿ ಒಂದಲ್ಲ ಎರಡು ಬಾವಿ ತೋಡಿಸಿಕೊಟ್ಟ.ರಾಜನ ಅಟ್ಟಹಾಸವೂ ಅಡಗಿತು.


ಕರುಳ ಮಿಡಿತ
- ಕನಕಾಪುರ ನಾರಾಯಣ


ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ರೈತನೊಬ್ಬ ತನ್ನ ಮನೆಯ ಮುಂದಿನ ಅಂಗಳದಲ್ಲಿ ಸೌದೆಯನ್ನು ಸೀಳುವ ಕೆಲಸದಲ್ಲಿ ತೊಡಗಿದ್ದ.ಕೊಡಲಿಯ ಏಟು ಮರದ ದಿಮ್ಮಿಗೆ ಪ್ರತಿಬಾರಿ ಬೀಳುವಾಗಲೂ ಅವನ ಮೈಯಲ್ಲಿ ಬೆವರು ತೊಟ್ಟಿಕ್ಕುತ್ತಿತ್ತು,ದಣಿದು ಬಾಯಾರಿದ್ದರೂ ಲೆಕ್ಕಿಸದೆ ಒಂದೇ ಸಮನೆ ದುಡಿಯುತ್ತಿದ್ದ ಮಗನನ್ನು ಕಂಡು ಅವನ ತಾಯಿ" ಮಗ ಶಾಖ ಜಾಸ್ತಿ ಅಗ್ತಿದೆ ಮನೆ ಒಳಕ್ಕೆ ಬಾ,ಆಮೇಲೆ ಸೌದೆ ಹೊಡೆದರೆ ಆಯ್ತು" ಅಂದಳು.ಆದರೆ ಅದನ್ನು ಲೆಕ್ಕಿಸದೆ ಸುಡು ಸುಡು ಬಿಸಲಿನಲ್ಲಿ ತನ್ನ ಕೆಲಸ ಮುಂದುವರೆಸಿದ ಮಗ ಪದೇ ಪದೇ ತಾಯಿಯ ಕೂಗನ್ನು ಕೇಳಿ ತಾಳ್ಮೆ ಕಳೆದು ಒಮ್ಮೆ ರೇಗಿದ"ಏ ನೀನು ಒಳಕ್ಕೆ ಹೋಗಮ್ಮಾ,ಹೋಗಿ ಬೇರೆ ಕೆಲಸ ನೋಡು"ಎಂದು ಬೈದ.

ಒಳಕ್ಕೆಹೋದ ತಾಯಿ ವರುಶವೂ ತುಂಬದ ತನ್ನ ಮೊಮ್ಮಗನನ್ನು ಎತ್ತು ತಂದು ಸುಡುಬಿಸಿಲಿನಲ್ಲಿ ಮಲಗಿಸಿದಳು.ಇದನ್ನು ಕಂಡು ಮಗನಿಗೆ ಬಹಳ ಕೋಪ ಬಂದಿತು"ನಿಂಗೇನ್ ಬುದ್ಧಿಗಿದ್ಧಿ ಇದ್ದೀಯಾ? ಅಲ್ಲಾ ಮಗೂನ ಬಿಸಿಲಿನಲ್ಲಿ ಮಲಗಿಸಿದ್ದೀಯಲ್ಲಾ ಮೈ ಸುಡಲ್ವಾ?" ಎಂದು ಗದರಿದ.ಅದಕ್ಕೆ ತಾಯಿ "ಸುಟ್ಟರೆ ನಿಂಗೇನಾಗುತ್ತೆ?" ಎಂದು ಪ್ರಶ್ನಿಸಿದಳು.ಅದಕ್ಕೆ ಆ ರೈತ "ಅದು ನನ್ನ ಮಗು, ಕರಳು ಚುಳ್ ಅನ್ನಲ್ವಾ" ಎಂದ.ತಕ್ಷಣ ತಾಯಿ "ನೀನು ಬಿಸಿಲಿನಲ್ಲಿ ಸುಡ್ತಾ ಇದ್ದರೆ ನನ್ನ ಕರಳು ಏನು ಆಗಬೇಕು?" ಎಂದಳು.ಕೂಡಲೇ ತಾಯಿಯ ಮಮತೆ ಅರಿತು ಮನೆಯೊಳಕ್ಕೆ ಹೊರಟ ಮಗ.

ಅನುಕೂಲ
- ಕನಕಾಪುರ ನಾರಾಯಣ

                                                  ಬೆಸ್ತನೊಬ್ಬ ಪ್ರತಿದಿನವೂ ತಾನು ಹಿಡಿದ ಮೀನುಗಳನ್ನು ಒಂದು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದ.ದಾರಿಯಲ್ಲಿ ಒಂದು ನರಿಗೆ ಅಷ್ಟೊಂದು ಮೀನುಗಳನ್ನು ನೋಡಿ ಬಾಯಿಯಲ್ಲಿ ನೀರೂರಿ ಬಂದಿತು.ಹೇಗಾದರೂ ಮಾಡಿ ಮೀನುಗಳನ್ನು ತಿನ್ನಬೇಕೆಂದು ಉಪಾಯದಿಂದ ಬೆಸ್ತ ಬರುವ ದಾರಿಯಲ್ಲಿ ಸತ್ತಂತೆ ಮಲಗಿತು,ಬೆಸ್ತನು ಇರಲಿ ಈ ಸತ್ತ ನರಿಯ ಚರ್ಮವನ್ನು ಮಾರಿ ಹಣವನ್ನು ಪಡೆಯಬಹುದು ಎಂದು ಆಲೋಚಿಸಿ ನರಿಯನ್ನು ಎತ್ತಿ ಗಾಡಿಯಲ್ಲಿ ಮೀನುಗಳಿದ್ದ ಕಡೆ ಹಾಕಿದನು. ದಾರಿಯುದ್ದಕ್ಕೂ ನರಿ ಹೊಟ್ಟೆತುಂಬುವಷ್ಟು ಮೀನುಗಳನ್ನು ಕಬಳಿಸಿತು.ಬೆಸ್ತನಿಗೆ ತಿಳಿಯದ ಹಾಗೆ ಕೆಳಕ್ಕೆ ಜಿಗಿದು ಕಾಡಿಗೆ ಓಡಿತು,ಇದನ್ನು ಕಂಡ ತೋಳವೊಂದು "ಆ ಗಾಡಿಯಲ್ಲಿ ನೀನೇನು ಮಾಡುತ್ತಿದ್ದೆ?"ಎಂದು ವಿಚಾರಿಸಲು,ನರಿ ನಡೆದದ್ದೆಲ್ಲಾ ವಿವರಿಸಿತು.

                                           ತೋಳವೂ ಥಟ್ಟನೆ ಓಡಿ ತಾನೂ ಆ ಬೆಸ್ತನ ಗಾಡಿಯ ಮುಂದೆ ಸತ್ತಂತೆ ಮಲಗಿತು.ಬೆಸ್ತನಿಗೆ ಮತ್ತಷ್ಟು ಸಂತೋಷವಾಗಿ ಆ ತೋಳದ ಚರ್ಮವನ್ನು ಮಾರಿ ಹಣ ಮಾಡಬಹುದೆಂದು ಅದನ್ನು ಎತ್ತಲು ಹೋದನು ತೋಳವು ಭಾರವಾಗಿದ್ದ ಕಾರಣ ಒಂದು ಗೋಣಿ ಚೀಲದಲ್ಲಿ ಅದನ್ನು ತಳ್ಳಿ ಬಿಗಿಯಾಗಿ ಕಟ್ಟಿ ಗಾಡಿಯೊಳಕ್ಕೆ ಧೊಪ್ಪೆಂದು ಎಸೆದು ಮುಂದೆ ಸಾಗಿದನು.ತೋಳಕ್ಕೆ ಒಂದು ಮೀನನ್ನೂ ತಿನ್ನಲಾಗಲಿಲ್ಲ.ಮನೆಗೆ ಬಂದಾಗ ಬೆಸ್ತನು ಚೀಲವನ್ನು ಬಿಚ್ಚಿದಕೂಡಲೇ ಪ್ರಾಣ ಭೀತಿಯಿಂದ ಕಾಡಿನ ಕಡೆ ಓಡಿತು
ನೀತಿ: ಒಬ್ಬರಿಗಾದ ಅನುಕೂಲ ಮತ್ತೊಬ್ಬರಿಗೂ ಆಗದೇ ಇರಬಹುದು


ಸರ್ಪ - ಸನ್ಯಾಸಿ
- ಕನಕಾಪುರ ನಾರಾಯಣ

                                         ಊರಿನ ಹೊರಗೆ ಒಂದು ಎತ್ತರದ ಹುತ್ತ, ಅದರಲ್ಲಿ ದೊಡ್ಡದಾದ ಹಾವೊಂದಿತ್ತು, ಆಗಾಗ್ಗೆ ಅದರ ಕಡಿತಕ್ಕೆ ನಾಯಿ, ಕೋಳಿ, ಕುರಿ, ಕರುಗಳು ಬಲಿಯಾಗುತ್ತಿದ್ದವು.ಇದರ ಭೀತಿಯಿಂದ ಊರಿನವರು ಹೊರಗೆ ಓಡಾಡುವುದನ್ನು ಆದಷ್ಟು ನಿಲ್ಲಿಸಿದ್ದರು. 

                                    
ಆಗ  ಅಲ್ಲಿಗೆ ಒಬ್ಬ ಸನ್ಯಾಸಿ ಭಿಕ್ಷೆಗೆ ಬಂದನು, ಬಿಕೋ ಎನ್ನುವ ಊರಿನಲ್ಲಿ ಹಾವಿನ ವಿಷಯ ತಿಳಿದು, ಹುತ್ತದ ಬಳಿ ನಡೆದನು. ಹಾವು ಹೊರಗೆ ಬಂದು ತಲೆಬಾಗಿ ವಂದಿಸಿತು. ಹಾವಿನೊಡನೆ ಸನ್ಯಾಸಿ ಮಾತುಕತೆ ನಡೆಸಿದನು. ಹಾವು ತನ್ನ ಪರ ಕಾರಣ ಹೇಳಿಕೊಂಡಿತು. ಹಿಂದೊಮ್ಮೆತನ್ನ ಗೆಳೆಯನನ್ನು (ಮತ್ತೊಂದು ಹಾವು) ಜನರು ಕೋಲಿನಿಂದ ಚಚ್ಚಿ ಕೊಂದ ಕಥೆ ವಿವರಿಸಿತು. ಸನ್ಯಾಸಿ ಸಂತಾಪ ಸೂಚಿಸಿ, ಮುಂದೆ ಯಾರನ್ನೂ ಕಚ್ಚುವುದಿಲ್ಲಾ ಎಂದು ಆಣೆ ಮಾಡಲು ಹೇಳಿದ. ಹಾವನ್ನೂ ಯಾರೂ ಕೊಲ್ಲುವಂತಿಲ್ಲ ಎಂದು ಭರವಸೆ ಇತ್ತು ಮುಂದೆ ನಡೆದ. 
                                 ಅದರಂತೆ ಆ ಹಾವು ಮುಂದೆ ಯಾರನ್ನೂ ಕಡಿಯಲಿಲ್ಲ. ಸುಮ್ಮನೆ ಹರಿದಾಡುವುದನ್ನು ಕಂಡ ಮಕ್ಕಳು ನೋಡೋಣವೆಂದು ಪುಟ್ಟ ಕಡ್ಡಿಯನ್ನು ಅದರ ಮೇಲೆ ಎಸೆದರು, ಕಲ್ಲನೇ ಎಸೆದರು, ಬಾಲ ಹಿಡಿದರು, ಎಳೆದರು, ಹಗ್ಗದಂತೆ ಎಳೆದಾಡಿದರು ಕೊಟ್ಟ ಮಾತಿಗೆ ತಪ್ಪದಂತೆ ಹಾವು ಸುಮ್ಮನಿತ್ತು, ಯಾರನ್ನೂ ಕಡಿಯಲಿಲ್ಲ. 
                                                               ಸುಮಾರು ದಿವಸಗಳ ಬಳಿಕ ಸನ್ಯಾಸಿ ಅದೇ ಊರಿಗೆ ಮತ್ತೆ ಬಂದ. ಮೈಯಲ್ಲಾ ಗಾಯಗೊಂಡ ಹಾವು ನಿಧಾನವಾಗಿ ಹರಿದು ರಸ್ತೆ ದಾಟುತ್ತಿತ್ತು. ಸನ್ಯಾಸಿ ಅದರ ಬಳಿಗೆ ಹೋಗಿ ಅರೆ ಇದೇನಿದು ನೀನು ಹೀಗಾಗಿರುವೆ? ಎಂದ."ಎಲ್ಲಾ ನಿಮ್ಮಿಂದ ಸ್ವಾಮಿ..ನೀವು ಯಾರನ್ನೂ ಕಡಿಯಕೂಡದೆಂದು ಆಣೆ ಇಡಿಸಿದಿರಿ...ಎಲ್ಲಾ ಅದರ ಪರಿಣಾಮ" .ಅದಕ್ಕೆ ಸನ್ಯಾಸಿ "ಅಯ್ಯೋ ಸಾಧುವೇ ನಾನು ಯಾರನ್ನೂ ಕಡಿಯಬೇಡಾ ಎಂದೆ ಅಷ್ಟೇ ಹೊರತು, ಬುಸ್ ಎನ್ನಬೇಡಾ ಅನ್ನಲಿಲ್ಲವಲ್ಲಾ" ಎಂದ. ಅಂದಿನಿಂದ ಹಾವು ಬದುಕುವ ರೀತಿ ಕಲಿಯಿತು.


ಚೋರ ಬಾಲಕ 
- ಕನಕಾಪುರ ನಾರಾಯಣ

ಆಶ್ರಮವೊಂದರಲ್ಲಿ ಹತ್ತಾರು ವಿಧ್ಯಾರ್ಥಿಗಳು ಕಲಿಯುತ್ತಿದ್ದರು.ಅವರಲ್ಲಿ ಒಬ್ಬ ಹುಡುಗ ಬೇರೊಬ್ಬರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ಗುರುಗಳಿಗೆ ದೂರು ಕೊಟ್ಟರೂ ಅವರು ಸುಮ್ಮನೆ ಇದ್ದರು.ಒಂದು ದಿನ ಅವನ ಕಳ್ಳತನ ಮಿತಿಮೀರಿ ದೂರು ಕೊಟ್ಟರೂ ತಮ್ಮ ಗುರುಗಳೂ ಆತನಿಗೆ ಏನೂ ಕ್ರಮ ತೆಗೆದುಕೊಳ್ಳದಿರುವುದನ್ನು ಕಂಡು ಬೇರೆ ವಿದ್ಯಾರ್ಥಿಗಳೆಲ್ಲಾ  ಆಶ್ರಮವನ್ನೇ ತ್ಯಜಿಸಿ ಹೋಗಲು ನಿರ್ಧರಿಸಿದರು. ಆಗ ಗುರುಗಳಿಗೆ  ವಿಷಯ ತಿಳಿದು ಎಲ್ಲರನ್ನೂ ಕರೆದು "ಮಕ್ಕಳೇ ನೀವೆಲ್ಲಾ ಒಳ್ಳೆಯ ಮಕ್ಕಳು ಇಲ್ಲಿಂದ ಹೊರಟರೂ ನಿಮಗೆ ಬೇರೆ ಆಶ್ರಮ ಸೇರುವುದು ಕಷ್ಟವಿಲ್ಲ, ಆದರೆ ನಿಮ್ಮ ಸಹೋದರನಿಗೆ ಎಲ್ಲಿ ಆಶ್ರಯ ಸಿಗುತ್ತದೆ ಹೇಳಿ, ಅವನಿಗಿನ್ನೂ ತಪ್ಪು-ಸರಿಗಳ ಅರಿವೇ ಇಲ್ಲ, ನೀವೆಲ್ಲಾ ಹೋದರೂ ಆತನನ್ನು ಕೈಬಿಡುವಹಾಗಿಲ್ಲ ನಾನು" ಎಂದರು. ತುಂಟ ಹುಡುಗನ ಕಣ್ಣಿನಿಂದ ಕೆನ್ನೆಯ ಮೇಲೆ ನೀರು ಹರಿಯಿತು. ತನ್ನ ತಪ್ಪನ್ನರಿತು ಕ್ಷಮೆ ಯಾಚಿಸಿದ.


ಧರ್ಮ
ಕನಕಾಪುರ ನಾರಾಯಣ

ಒಮ್ಮೆ ಋಷಿಯೊಬ್ಬನು ತಪಸ್ಸಿಗೆ ಕುಳಿತಿರಲು ಪಕ್ಷಿಯೊಂದು ಅವನ ತಲೆಯ ಮೇಲೆ ಗಲೀಜು ಮಾಡಿತು, ಋಷಿ ಕೋಪದಿಂದ ಆ ಪಕ್ಷಿಗೆ ಶಪಿಸಿ ಕೇವಲ ನೋಟದಿಂದಲೇ ಅದನ್ನು ಭಸ್ಮ ಮಾಡಿದನು.
ಆದಿನ ದೂರ ಪ್ರಯಾಣ ಹೊರಟಿದ್ದ ಋಷಿಯು ಸ್ವಲ್ಪ ಆಹಾರ ಭಿಕ್ಷೆಗಾಗಿ ಅಲ್ಲೇ ಒಂದು ಮನೆಯ ಮುಂದೆ ಬಂದು ನಿಂತು "ಭವತಿ ಭಿಕ್ಷಾಂದೇಹಿ"ಎಂದು ಕೂಗಿದ. ಆ ಮನೆಯಾಕೆ ಬಹಳ ತಡಮಾಡಿ ಹೊರಗೆ ಬಂದಳು, ಋಷಿಗೆ ತಾಳ್ಮೆ ಕಳೆದಿತ್ತು, ಕಮಂಡಲದಿಂದ ನೀರು ತೆಗೆದು ಶಪಿಸಿಬಿಡುವ ಆತುರವಾಗಿತ್ತು. ಆ ಮನೆಯಾಕೆ ಕುಪಿತ ಋಷಿಯನ್ನು ಕುರಿತು ಹೀಗೆಂದಳು "ಋಷಿವರ್ಯಾ ಸ್ವಲ್ಪ ತಾಳು ನೀನು ನನ್ನನು ಪಕ್ಷಿಯಂತೆ ಸುಡಬೇಡ, ಈ ಮನೆಯ ಗೃಹಿಣಿಯಾದ ನಾನು ಮೊದಲು ನನ್ನ ಮನೆವರ ಕೆಲಸ ಮಾಡುವುದು ನನ್ನ ಧರ್ಮ" ಎಂದಳು, ಋಷಿಗೆ ತನ್ನ ತಪ್ಪಿನರಿವಾಯಿತು.ಧರ್ಮವನ್ನು ತಾನೂ ಪಾಲಿಸಬೇಕೆಂದು ಆಕೆಯನ್ನು "ನಾನೂ ಧರ್ಮದ ಪಾಠವನ್ನು ಕಲಿಯಬೇಕಿದೆ"ಎಂದ. ಅದಕ್ಕವಳು ಧರ್ಮವ್ಯಾದನನ್ನು ಕಾಣಲು ಸೂಚಿಸಿದಳು. ಧರ್ಮವ್ಯಾದ ಮಾಂಸದ ವ್ಯಾಪಾರಿ, ಋಷಿ ಆತನ ಬಳಿ ಹೋಗಲು ಆತ ತನ್ನೆಲ್ಲಾ ಗಿರಾಕಿ ಹೋಗುವವರೆಗೂ ಕಾಯಿಸಿದ, ನಂತರ ತನ್ನ ತಂದೆ ತಾಯಿಯರನ್ನು ವಿಚಾರಿಸಿ ನಂತರ ಋಷಿಯನ್ನು ಬಂದ ವಿಚಾರವಾಗಿ ಕೇಳಿದ, ಅಷ್ಟರಲ್ಲಿ ಋಷಿಗೆ ಸಾಕಷ್ಟು ಅರಿವುಮೂಡಿತ್ತು. ಆ ಕೂಡಲೇ ಅಲ್ಲಿಂದ ಹೊರಟು ಅಗಲಿದ್ದ ತನ್ನ ತಾಯಿತಂದೆಯರನ್ನು ಕಂಡು ಕ್ಷಮೆ ಯಾಚಿಸಿ,ಆಶೀರ್ವಾದ ಪಡೆದು ಧರ್ಮ ಪಾಲಿಸಿದ.


ಮೃಗರಾಜ (ಹಾಸ್ಯ)
ಕನಕಾಪುರ ನಾರಾಯಣ 

ಕಾಡಿನ ರಾಜನಾದ ಸಿಂಹವು ಆಗಿಂದಾಗ್ಗೆ ಸಭೆ ಸೇರಿ ಎಲ್ಲ ಪ್ರಾಣಿಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಹೆದರಿಸುತ್ತಾ ಕಾಲಕಳೆದಿತ್ತು.ಒಮ್ಮೆ ಆನೆಯ ಮಾತು ಕೇಳಿ ಕೆಲವು ಪ್ರಾಣಿಗಳು ಬೇರೆ ಪ್ರಾಂತ್ಯಕ್ಕೆ ಕಾಲಿಟ್ಟವು.ಇದನ್ನು ಕೇಳಿದ ಸಿಂಹವು ಕೋಪಗೊಂಡು ಮತ್ತೆ ಸಭೆ ಸೇರಿಸಿ ಒಂದೊಂದು ಪ್ರಾಣಿಯಮೇಲೂ ಎರಗಿ "ಯಾರು ಈ ಕಾಡಿಗೆ ರಾಜ?"ಎಂದು
ಘರ್ಜಿಸಿತು,ಚೂಪಾದ ಉಗುರು,ಕೆರಳಿದ ಕೇಸರನನ್ನು ಕಂಡು ಬೆದರಿ ಎಲ್ಲವೂ"ನೀನೇ,ನೀನೇ"ಎಂದವು, ಸಿಂಹವು ಆನೆಯ ಮೇಲೂ ಎರಗಿತು,ಜೋರಾಗಿ ಘರ್ಜಿಸಿ "ಯಾರು ಈ ಕಾಡಿಗೆ ರಾಜ?"ಎಂದಿತು, ಆನೆ ಒಮ್ಮೆಲೇ ತನ್ನ ಸೊಂಡಿಲಿನಿಂದ ಸಿಂಹವನ್ನು ತನ್ನ ಹಣೆಯ ಮೇಲಿಂದ ಕಿತ್ತು ದೂರಕ್ಕೆ ಎಸೆಯಿತು,ಕಾಲು ಮುರಿದು ತಲೆ ತಿರುಗುತ್ತಿದ್ದರೂ ಸಿಂಹ "ನಿನಗೆ ಉತ್ತರ ಗೊತ್ತಿಲ್ಲದಿದ್ದರೆ ಕೋಪ ಮಾಡಿಕೊಳ್ಳಬೇಡ ಗಜರಾಜ"ಎಂದು ಗೊಣಗುತ್ತಾ ಗುಹೆ ಸೇರಿತು.

ಕೋಪಕ್ಕೊಂದು ಮೊಳೆ
ಸಣ್ಣ ಕಥೆ - ಕನಕಾಪುರ ನಾರಾಯಣ

                           ಯುವಕನೊಬ್ಬನಿಗೆ ಬಹಳ ಮುಂಗೋಪದ ಸ್ವಭಾವ. ಇದರಿಂದಾಗಿ ಅವನಿಗೂ ಅವನ
ಕುಟುಂಬದವರಿಗೂ ಆಗಿಂದಾಗ್ಗೆ ಕೆಟ್ಟ ಆಪಾದನೆಗಳು ಕೇಳಿ ಬರುತ್ತಿದ್ದವು. ಅದನ್ನರಿತ ಯುವಕ ತನ್ನ ಕೋಪವನ್ನು ತಡೆಯಲಾಗದೆ ಸಂಕಟಕ್ಕೊಳಗಾಗುತ್ತಲೇ ಇದ್ದ.ಒಮ್ಮೆ ಅವನ ತಂದೆ ಮಗನ್ನನ್ನು ಕರೆದು "ಮಗು ನೀನು ನಿಜವಾಗಿಯೂ ನಿನ್ನ ಕೋಪವನ್ನು ಹತೋಟಿಯಲ್ಲಿ ಇಡಬೇಕಿದ್ದಲ್ಲಿ ನಿನಗೆ ಕೋಪಬಂದಾಗಲೆಲ್ಲ ತೋಟದಲ್ಲಿನ ಬೇಲಿಯ ಮರದ ಮೇಲೆ ಒಂದು ಮೊಳೆಯನ್ನು ಹೊಡಿ"ಎಂದ. ಯುವಕ ಮೊದಲ ದಿನವೇ 37 ಮೊಳೆ ಹೊಡೆದ,ನಂತರ 21,13,8,3,2,1 ಹೀಗೇ ಬರುಬರುತ್ತಾ ಕೋಪ ಬರುವುದು ತಾನಾಗೇ ಕಡಿಮೆಯಾಯಿತು. ಅಪ್ಪನಿಗೆ ವಿಷಯ ತಿಳಿಸಿದ.ತಂದೆ "ಬಹಳ ಸಂತೋಷ ಮಗೂ ಇನ್ನು ಮುಂದೆ ನೀನು ಕೋಪಬರುವುದನ್ನು ತಡೆಯಬೇಕು,ಹಾಗೆ ಮಾಡಿದಾಗಲೆಲ್ಲಾ ಅಲ್ಲಿಂದ ಒಂದೊಂದು ಮೊಳೆಯನ್ನು ತೆಗೆಯುತ್ತಾ ಬಾ" ಅಂದ.
                                                ಹಾಗೇ ದಿನಗಳು,ವಾರಗಳು ತಿಂಗಳುಗಳೇ ಕಳೆದವು.ತನ್ನ ಕೋಪವನ್ನು ತಡೆಯಲು ಶಕ್ತನಾದಾಗಲೆಲ್ಲಾ ಒಂದೊಂದಾಗಿ ಮೊಳೆಗಳನ್ನು ತೆಗೆದ"ಎಲ್ಲಾ ಕಳಚಿದ ನಂತರ ಸಂತಸದಿಂದ ಮತ್ತೆ ತನ್ನ ತಂದೆಗೆ ತಿಳಿಸಿದ. ತಂದೆ "ನನಗೆ ಬಹಳ ಖುಷಿಯಾಗುತ್ತಿದೆ ಮಗೂ,ನಿನ್ನ ಗುರಿಯನ್ನು ನೀನು ಮುಟ್ಟಿದೆ ಆದರೆ ನೋಡು ಮೊಳೆಯಿಂದ ಆ ಮರಕ್ಕೆ ತಾಗಿದ ಏಟುಗಳು ಮಾತ್ರ ಹೋಗಲಿಲ್ಲ. ಕೋಪದಿಂದಾಗುವ ಅನಾಹುತವೂ ಹಾಗೇ ಶಾಶ್ವತವಾಗಿ ಉಳಿದು ಬಿಡುತ್ತದೆ". ತಂದೆಯ ಮಾತಿನ ಅರ್ಥ ಮಗನಿಗರಿವಾಯಿತು.








Comments

  1. Hosa Swaroopada Patrike tumbaa channaagide. Nanna Eradu Mooru Kiru Lekhanagalu Irabeku nodi. Ellarigoo Shubha Haaraikegalu. Nimma Kannaadaabhimaana Mugilu muttali mattu itara anivaasi kannadigarige maadariyaagali

    ReplyDelete
  2. Tumba chennagi moodi baruttide horanada chilume

    ReplyDelete
  3. Very interesting short stories Mr Kanakapura Narayana keep writing

    ReplyDelete

Post a Comment