ಆತ್ಮಶಾಂತಿ

 ಆತ್ಮಶಾಂತಿ 

 ಲೇಖಕರು : ಎಂ ಆರ್ ವೆಂಕಟರಾಮಯ್ಯ


 ಶೀರ್ಷಿಕೆಯಲ್ಲಿ ‘ಆತ್ಮ’ ಮತ್ತು ‘ಶಾಂತಿ’ ಎಂಬ ಎರಡು ಪದಗಳನ್ನು ಓದಿದ ಹಲವರು ಈ ಎರಡು ಪದಗಳಿಗೂ ಎತ್ತಣ ಸಂಬಂಧ! ಎಂಬ ಪ್ರಶ್ನೆ ಎತ್ತಬಹುದು. ಇವೆರಡಕ್ಕೆ ಪರಸ್ಪರ ಸಂಬಂಧ ಇದೆಯೋ, ಇಲ್ಲವೋ, ಬಹಳಷ್ಟು ಜನವಂತೂ ಈ ಪದಗಳನ್ನು ಬಳಸುತ್ತಿದ್ದಾರಲ್ಲಾ ! ಯಾರ ಮನೆಯಲ್ಲಾದರೂ ಮೃತ್ಯುವಾದರೆ ಸಂಬಂಧಿಸಿದ ಬಂಧುUಳು ‘ಪಾಪ, ಒಳ್ಳೆಯ ಮನುಷ್ಯ, ಇನ್ನೂ ಸ್ವಲ್ಪ ಕಾಲ ಇರಬೇಕಾಗಿತ್ತು ಎಂದು ಸಹಾನು ಭೂತಿಯ ಮಾತನಾಡಬಹುದು. ನಿಧನ ಹೊಂದಿದವನು ವಯಸ್ಸಾದವನೋ, ಕಾಯಿಲೆಯಿಂದ ನರಳುತ್ತಿರುವವನೋ ಆಗಿದ್ದರೆ, ಪಾಪ, ಬಹಳ ಕಾಲದಿಂದ ನರಳಾಡುತ್ತಿದ್ದವರಿಗೆ ದೇವರು ಪರಿಹಾರ ನೀಡಿದ ಎನ್ನಬಹುದು. ಇನ್ನು ಮರಣಹೊಂದಿದ್ದು ಸಣ್ಣ ವಯಸ್ಸಿನವರಾದರೆ ಪಾಪ, ಈ ವಯಸ್ಸಿಗೇ ಮೃತ್ಯು ಬರ ಬಾರದತ್ತು. ಧೀರ್ಘ ಕಾಲ ಬದುಕಿ ಬಾಳಬೇಕಾದ ಎಳೆ ಪೈರು ಅಕಾಲಿಕವಾಗಿ ಬಾಡಿ ಹೋಯಿತೇ ? ಬಹಳ ಅನ್ಯಾಯವಾಯಿತು, ಹೀಗೆ ಆಗಬಾರದಿತ್ತು ಎಂಬ ಮರುಕ ತೋರುವ ಮಾತನಾಡಬಹುದು. ಈ ಮಾತುಗಳೆಲ್ಲಾ ಸಹಜವೇ, ಸಮಯೋಚಿತ ಎನಿಸುತ್ತದೆ. 

 ಇದುವರೆಗೂ ಪ್ರಸ್ತಾಪಿಸಿದ್ದು ಮೃತನ ಬಂಧುಗಳ ಬಾಯಿಂದ ಹೊರಬಹುದಾದ ಸಂದರ್ಭಕ್ಕೆ ತಕ್ಕಂತಹಾ ಮಾತುಗಳಾಗಿರುತ್ತವೆ. ಈ ಮಾತುಗಳ ಬಗ್ಗೆ ಯಾರ, ಯಾವ ಆಕ್ಷೇಣೆಯೂ ಇರಲಾರದು. 

 ಆದರೆ ಮೃತನಾದ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವವನಾದರೆ ಇವರ ನಿಧನದ ವಾರ್ತೆ ಕೇಳಿದ ಜನರು ಮರಣಿಸಿದವನ ಗುಣಗಾನ ಮಾಡಿ “ಈತನ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತ  ಈತನ\ಈಕೆಯ ಆತ್ಮಕೆ ಶಾಂತಿ ನೀಡಲಿ” “ ಮೇ ಹಿಸ್ ಸೋಲ್ ರೆಸ್ಟ್ ಇನ್ ಪಿಸ್” ಎಂಬ ಮಾತುಗಳನ್ನಾಡುವುದನ್ನು ನಾವೆಲ್ಲರೂ ಕೇಳಿರುತ್ತೇವಲ್ಲವೇ! ಈ ಮಾತುಗಳು ಆತ್ಮಕ್ಕೂ ಶಾಂತಿಗೂ ನಂಟು ಗಂಟು ಹಾಕಿದಂತಾಗಲಿಲ್ಲವೇ ! ? ವಾಸ್ತವವಾಗಿ ಆತ್ಮಕ್ಕೂ ಶಾಂತಿಗೂ ಸಂಬಂಧ ಉಂಟೇ ? ಶಾಂತಿ ಸಿಗಲಿ ಎಂದಾಗ ಇದುವರೆಗೂ ಮೃತನ ಆತ್ಮ ಅಶಾಂತಿ ಅನುಭವಿಸಿತ್ತು ಎಂಬ ಅರ್ಥವೇ ? ಮೃತನಿಗೂ ಅವನ ಆತ್ಮಕೂ ಇಬ್ಬರಿಗೂ ಶಾಂತಿ ಸಿಗಲಿ ಎಂಬ ಆಶಯವೇ ಈ ಮಾತುಗಳದು ? ಎಂಬೆಲ್ಲಾ ಪ್ರಶ್ನೆಗಳೂ ಉದ್ಭವಿಸುವುದಿಲ್ಲವೇ ? ಈ ಮಾತುಗಳನ್ನಾಡುವವರು ತಾವಾಡುತ್ತಿರುವ ಮಾತಿನ ಅರ್ಥತಿಳಿಯದ ಅವಿದ್ಯಾವಂತರಲ್ಲ. ssಸುಶಿಕ್ಷಿತರೇ,. ಬಹುಶಃ ಈ ಮಾತುಗಳನ್ನಾಡುವರ ದೃಷ್ಟಿಯಲ್ಲಿ ‘ಆತ್ಮ’ ಎಂಬುದು ಜೀವ ಹೊಂದಿರುವ ಒಬ್ಬ ಜೀವಿ, ಇವನಿಗೆ ಇದುವರೆಗೆ ಶಾಂತಿಯಿರದೆ ಅಶಾಂತಿಯಿಂದ ಇದ್ದ, ಈಗ ಮೃತ್ಯುವಿನ ಕಾರಣದಿಂದಾರೂ ಇವನಿಗೆ ಶಾಂತಿ ಸಿಗಲಿ ಎಂಬ ಉದ್ದೇಶ್ಯವಿರಬಹುದೇ ? ಒಬ್ಬೊಬ್ಬ ವ್ಯಕ್ತಿಯಲ್ಲೂ ಒಬ್ಬೊಬ್ಬ ಆತ್ಮನಿರುತ್ತಾನೆ ಎಂಬ ಅರ್ಥವೇ ? 

 ಆತ್ಮನ ವಿಷಯ ಚರ್ಚೆಗೆ ಬಂದಾಗ ನೆನಪಾಗುವ ಶೀರ್ಷಿಕೆಗಳೆಂದರೆ ಆತ್ಮ ಜ್ಞಾನ, ಆತ್ಮವಿಶ್ವಾಸ, ಆತ್ಮಾವಲೋಕನ, ಆತ್ಮವಿಮರ್ಶೆ, ಆತ್ಮವಂಚನೆ, ಆತ್ಮಶೋಧನೆ, ಆತ್ಮ ಚಿಂತನೆ ಆತ್ಮ, ಜೀವಾತ್ಮ, ಪರಮಾತ್ಮ, ಆತ್ಮೋದ್ಧಾರ, , ಆತ್ಮ ಶುದ್ಧಿ, ಅನಾತ್ಮ ಮುಂತಾದ ಆತ್ಮ ಸಂಬಂಧಿ ಪದಗಳನ್ನು ಗ್ರಂಥಗಳ ಅಧ್ಯಯನ ಕಾಲದಲ್ಲಿ, ನಿತ್ಯದ ಲೌಕಿಕ, ಅಧ್ಯಾತ್ಮಿಕ ವಿಚಾರಗಳ ವಿನಿಮಯ, ಚರ್ಚೆ ಸಮಯಗಳಲ್ಲಿ ಲೀಲಾ ಜಾ¯ವಾಗಿ ಬಳಸುತ್ತಿರುವುದನ್ನು ನಾವು ಕಾಣುತ್ತಿರುತ್ತೇವೆ. ಆದರೂ ಯಾರಾದರೂ ವ್ಯಕ್ತಿ, ತಾನು ತಿಳಿದುಕೊಳ್ಳಬೇಕೆಂಬ ಕುತೂಹಲದಿಂದಲೋ, ಈ ಪದಗಳ ಅರ್ಥ, ವ್ಯಾಪ್ತಿಗಳ ಬಗ್ಗೆ ನಮಗಿರುವ ತಿಳಿವಳಿಕೆಯನ್ನು ಪರೀಕ್ಷಿಸಲೋ, ‘ಆತ್ಮ ಎಂದರೇನು ? ಅದರ ಗುಣ, ಸ್ವಭಾವಗಳ ಬಗ್ಗೆ ನನಗೊಂದಿಷ್ಟು ತಿಳಿಹೇಳಿ’ ಎಂದಾಗ, ಶುರುವಾಗುತ್ತದೆ, ನಮ್ಮ ಮನಸ್ಸಿನಲಿ ಗಲಿಬಿಲಿ, ತೊಳಲಾಟಗಳು. ಆದರೂ ನಮ್ಮ ಬಿಗುಮಾನ ಬಿಡದೆ, ಏ, ಆತ್ಮ ಪರಮಾತ್ಮರು ಒಂದೇ ಅಲ್ವೇನಯ್ಯಾ ! ಇವರಿಬ್ಬರೂ ಬೇರೆ ಬೇರೆಯವರಲ್ಲವಲ್ಲ, ಇದೇ ತಾನೇ ನಮ್ಮ ಅದ್ವೈತ ಸಿದ್ದಾಂತ, ಶ್ರೀ ಶ್ರೀ ಶಂಕರಾಚಾರ್ಯರು ಅಂದು ಬೋಧಿಸಿದ ಸಿದ್ಧಾಂತ, ಎಂಬ ಸರಳ ವಿವರಣೆ ನೀಡಿ, ಪ್ರಶ್ನಿಸಿದವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತೇವೆ, ನಮ್ಮಲ್ಲಿ ಹಲವರು. ಹೀಗೆ, ಜಾರಿಕೊಳ್ಳುವ, ವಿಷಯದಿಂದ ಪಲಾಯನ ಮಾಡುವ ಮಾರ್ಗ ಹಿಡಿಯುವ ಬದಲು, ಆತ್ಮದ ಬಗ್ಗೆ ಕನಿಷ್ಠ ಕೆಲವು ಮುಖ್ಯ ಮಾಹಿತಿಗಳನ್ನಾದರೂ ತಿಳಿಯುವ, ತಿಳಿದು ಇತgರಿಗೆ ತಿಳೀಹೇಳುವುದು ಸೂಕ್ತವಲ್ಲವೇ ? ಈ ಹಿನ್ನೆಲೆಯಲ್ಲಿ, ಧರ್ಮ, ಶಾಸ್ತç ಗ್ರಂಥಗಳಲ್ಲಿ ಆತ್ಮನನ್ನು ಕುರಿತಂತೆ ಉಲ್ಲೇಖಿಸಿರುವ ಕೆಲವು ಮುಖ್ಯ ಮಾಹಿತಿಗಳನ್ನು ತಿಳಿಸುವ ಒಂದು ಸಾಹಸ : ಪ್ರಯತ್ನ ಈ ಲೇಖನದ್ದು.

 ‘ನಾನು’ ಎಂಬುದನ್ನೇ ಸಂಸ್ಕೃತ ಭಾಷೆಯಲ್ಲಿ ಆತ್ಮ ಎನ್ನಲಾಗುತ್ತದೆ. ಸರಳ ವಾಕ್ಯದಲ್ಲಿ ಹೇಳಬೇಕೆಂದರೆ ‘ಆತ್ಮ ಎಂದರೆ ನಾನೇ ಎಂಬ ಅರ್ಥವಿದೆ. ಅಧ್ಯಾತ್ಮವು ಆತ್ಮನ ಬಗೆಗಿನ e್ಞÁನವನ್ನು ತಿಳಿಸುತ್ತದೆ. ‘ಅಧ್ಯಾತ್ಮ’ ಎಂದರೇನು ? ಯಾವುದು ಆತ್ಮನಲ್ಲಿ ನೆಲೆಸಿರುತ್ತದೆಯೋ ಅದು ಅಧ್ಯಾತ್ಮ. ಅಧ್ಯಾತ್ಮಕ್ಕೆ ಸಂಬAಧಿಸಿದ್ದು ‘ಅಧ್ಯಾತ್ಮಿಕ. ‘ಆತ್ಮ’ ಎಂದರೆ ಪ್ರತಿ ಜೀವಿಯ ನಿಜ ಸ್ವರೂಪ. ಅಧ್ಯಾತ್ಮಕ್ಕೆ ಸಂಬAಧಿಸಿದ್ದು ‘ಅಧ್ಯಾತ್ಮಿಕ’ 

 ಆತ್ಮನನ್ನು ತಿಳಿದುಕೊಳ್ಳುವುದು ಹೇಗೇ ? ಎಂದರೆ ‘ಮನ ನೈವೇದ ಮಾಪ್ತವ್ಯಂ’ ಮನಸ್ಸಿನಿಂದಲೇ ಆತ್ಮನನ್ನು ತಿಳಿದುಕೊಳ್ಳಬೇಕು ಎಂದಿದೆ ಶ್ರುತಿ. ‘ಶಾಸ್ತಾçಚರ್ಯೋಪ ದೇಶಾದಿ ಸಂಸ್ಕೃತA ಮನಃ ಆತ್ಮದರ್ಶನೇ ಕಾÀರಣಂ” ಅಂದರೆ ಶಾಸ್ತಾçಚಾರ್ಯರ ದಿವ್ಯ ಉಪದೇಶ, ಶುದ್ಧವಾದ ಮನಸ್ಸೇ ಆತ್ಮ ದರ್ಶನಕ್ಕೆ ಕಾರಣ, ಸಾಧ್ಯ.

 ಆತ್ಮ, ಪರಮಾತ್ಮರು ಬೇರೆಯಲ್ಲ, ಆತ್ಮನೇ ಪರಮಾತ್ಮ ಎಂದು ಘೋಷಿಸಿ ಅದ್ವೆöÊತ ತತ್ವವನ್ನು ಪ್ರತಿಪಾದಿಸಿದವರು ಶ್ರೀ ಶ್ರೀ ಶಂಕರರು. ಭಗವಂತ, ಪರಮಾತ್ಮ, ದೇವರೆಂದರೆ ಎಲ್ಲೋ ದೂರದಲ್ಲಿರುವ ಅಸ್ಪಷ್ಟ, ಅಮೂರ್ತ ಶಕ್ತಿಯಲ್ಲ, ಬದಲಿಗೆ, ಅದು ನಮ್ಮಲ್ಲೇ ಇರುವ ಆತ್ಮೀಯ ಪರಮ ಆತ್ಮ ಶಕ್ತಿ, ಅದು ನಮ್ಮದೇ ಭಾಗ, ನಾವೇ ಆ ದೇವರ ಭಾಗ, ಅದು ನಮ್ಮೊಳಗೇ ಇರುವ ಶಕ್ತಿ ಎಂಬ ವಾಸ್ತವ ತಿಳಿವಳಿಕೆಯನ್ನು ಜನ ಸಾಮಾನ್ಯರಿಗೆ ತಲುಪಿಸಿದವರು ಶ್ರೀ ಶ್ರೀ ಶಂಕರರು. ಐತ್ತರೇಯೋಪನಿಷತ್ತಿನಲ್ಲಿ ಆತ್ಮವು ಜಗತ್ತಿನ ಮೂಲ ತತ್ವ, ಅದೇ ಬ್ರಹ್ಮ, ‘ಬ್ರಹ್ಮಭಾವಾಶ್ಚಾಯಮಾತ್ಮ ಬ್ರಹ್ಮ’ ಎಂದಿದೆ. 

 ನಮ್ಮ ಒಂದೊAದು ದೇಹಕ್ಕೂ ಒಬ್ಬೊಬ್ಬ ಬೇರೆ ಬೇರೆ ಆತ್ಮನಿರುವನು ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಲೋಕದಲ್ಲಿರುವ ಶರೀರಗಳಲ್ಲೆಲ್ಲಾ ಒಬ್ಬನೇ ಆತ್ಮನು ಇರುವನು. ಸಕಲ ಪ್ರಾಣಿಗಳಲ್ಲಿರುವ ಆತ್ಮನಿÀಗೂ ಮನುಷ್ಯರಲ್ಲಿರುವ ಆತ್ಮನಿಗೂ ಯಾವ ಬೇಧವೂ ಇಲ್ಲ. ’ಏಕೋ ದೇವಃ ಸರ್ವ ಭೂತೇಷು ಗೂಢಃ’ ಇರುವುದು ಒಬ್ಬನೇ ದೇವರು, ನಮ್ಮೆಲ್ಲರ ದೇಹದಲ್ಲೂ ಆತನೇ ಇರುವುದು ಆತನು ನಿತ್ಯ ಶುದ್ಧ, ಬುದ್ಧ, ಮುಕ್ತ ಸ್ವಭಾವದವನು ಎಂಬ ಸತ್ಯವನ್ನು ಅರಿಯಬೇಕಾಗಿದೆ. ಇಂತಹಾ ಅರಿವು e್ಞÁನ, ಸಾತ್ವಿಕ ಗುಣದ ಬೆಳವಣಿಗೆಯಿಂದ ಸಾಧ್ಯ. ಆತ್ಮನಿಗಿಂತಾ ಬೇರೆಯಾಗಿರುವ ಮತ್ತೊಂದು ಯಾವುದೂ ಇಲ್ಲ. ಈ ಸಕಲವೂ ವಾಸುದೇವನೇ. ಆತನೇ ಪರಮಾತ್ಮ ಎಂಬ ಅರಿವು ಪರಮಾರ್ಥ e್ಞÁನ ಎನಿಸುತ್ತದೆ

 . ಆತ್ಮ ಶರೀರದ ಪರಸ್ಪರ ಸಂಬAಧ ಎಂತಹುದು ಎಂದÀರೆ ಈ ದೇಹ ರೂಪಿ ರಥಕ್ಕೆ ಆತ್ಮನು ಸಾರಥಿ. ಆತ್ಮನು ಶುದ್ಧ, ಶಾಂತ, ಸ್ಥಿರ, ಶಾಶ್ವತ ಮತ್ತು ಸ್ವತಂತ್ರ. ಶರೀರದ ಸರ್ವತ್ರ ಚಟುವಟಿಕೆಗಳಿಗೆ ಈತ ಅಧಿಪತಿ ಮಾತ್ರ

 ಆತ್ಮನನ್ನು ಕುರಿತ ಮತ್ತಷ್ಟು ವಿವರಣೆಗಳು ಹೀಗಿವೆ : 

 ಶರೀರದಲ್ಲಿರುವ ಚೇತನಾ ಶಕ್ತಿಯೇ ಆತ್ಮ. ಜೀವದ ಅಂತಃ ಸತ್ವವೇ ಆತ್ಮ. ನಮ್ಮ ದೇಹದಲ್ಲಿ ವಾಸಿಸುವ ಒಂದು ಸ್ವತಂತ್ರವಾದ ಅಸ್ತಿತ್ವ ಆತ್ಮ.. ಇಂದ್ರಿಯ ಮನೋಬುದ್ಧಿಗಳೆಲ್ಲಾ ಕ್ರಿಯಾಶೀಲತೆಯಿಂದ ಕೂಡಿ ಬೆಳಗು ವಂತೆ ಮಾಡುವ ಒಂದೇ ಚೇತನ ಎಂದರೆ ಅದೇ ಆತ್ಮ, ನಾನು ಎಂಬುದರ ಪರ್ಯಯ ಶಬ್ಧ ಎನ್ನಲಾ ಗಿದೆ. ‘ಆತ್ಮಾ ಹಿ ವ್ಯವಹಾರಸ್ಯ ಸಾಕ್ಷೀ’ ನಮ್ಮೆಲ್ಲಾ ವ್ಯವಹಾರಗಳಿಗೂ ಆತ್ಮನೇ ಸಾಕ್ಷಿ ಎಂದಿದ್ದಾನೆ ಚಾಣಕ್ಯ. 

 ಆತ್ಮನ ಸ್ವರೂಪ ಕುರಿತಂತೆ, ಮಹಾಂತನೂ ಜನ್ಮ ರಹಿತನೂ ಜರಾಶೂನ್ಯನೂ ಮೃತ್ಯು ರಹಿತನೂ ಅಮೃತನೂ ಭಯ ಶೂನ್ಯನೂ ಆದ ಈ ಆತ್ಮನೇ ಬ್ರಹ್ಮ, ಬ್ರಹ್ಮವೇ ಅಭಯವು. ಯಾರು ಹೀಗೆ ಅರಿತು ಕೊಂಡಿರುವರೋ ಅವರು ಅಭಯವಾÀದ ಬ್ರಹ್ಮವೇ ಆಗುತ್ತಾರೆ ಎಂದಿದೆ ಬೃಹದಾರಣ್ಯಕೋಪನಿಷತ್ತು. ಆತ್ಮನು ವಾಸ್ತವವಾಗಿ ಯಾರನ್ನೂ ಕೊಲ್ಲುವುದೂ ಇಲ್ಲ, ಯಾರಿಂದಲೂ ಕೊಲ್ಲಲ್ಪಡುವುದೂ ಇಲ್ಲ. ವ್ಯಕ್ತಿಯ ಸ್ಥೂಲ ಶರೀರದಿಂದ ಸೂಕ್ಷö್ಮ ಶರೀರದ ವಿಯೋಗವಾದಾಗ ಅದಕ್ಕೆ ಮರಣ ಎನ್ನಲಾಗುವುದು. ಇಲ್ಲಿ ಸಾಯುವುದು ಸ್ಥೂಲ ಶರೀರವಾಗಿದೆ. “ನ ಜಾಯತೇ ಮ್ರೀಯತೇ ವಾ ಕದಾಚಿನ್ನಾಯಂ ಭೂತ್ವಾ ಭವಿತಾ ವಾ ನ ಭೂಯಃ | ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ” ಅಂದರೆ ಆತ್ಮನು ಯಾವ ಕಾಲದಲ್ಲಿಯೂ ಹುಟ್ಟುವುದಿಲ್ಲ, ಸಾಯುವುದಿಲ್ಲ, ಉತ್ಪತ್ತಿಯಾಗಿ ಮತ್ತೆ ಇರುತ್ತಾನೆಂಬುದೂ ಇಲ್ಲ. ಆತ್ಮನು ಜನ್ಮ ರಹಿತನೂ ನಿತ್ಯನೂ ಸನಾತನನೂ ಆಗಿದ್ದಾನೆ. ಶರೀರವು ಕೊಲ್ಲಲ್ಪಟ್ಟರೂ ಆತ್ಮನು ಕೊಲ್ಲಲ್ಪಡುವುದಿಲ್ಲ ಎಂದಿದೆ ಭ ಗೀ (2. 20). ಜೀವಿಗಳು ಗುರಿಯಾಗುವ ಅನುಭವಿಸುವ ಷಟ್ ವಿಕಾರಗಳು, ಅಂದರೆ, ಉತ್ಪತ್ತಿ (ಹುಟ್ಟುವಿಕೆ), ಅಸ್ತಿತ್ವ ( ಹುಟ್ಟಿ ಅಸ್ತಿತ್ವÀದಲ್ಲಿ ಇರುವುದು), ವೃದ್ಧಿ (ಬೆಳೆಯುವುದು), ವಿಪರಿಣಾಮ (ರೂಪಾಂತರ ಹೊಂದುವುದು), ಅಪಕ್ಷಯ( ಕ್ಷೀಣಿಸುವ, ಕುಗ್ಗುವ), ಮತ್ತು ವಿನಾÀಶ (ಸಾಯುವಿಕೆ) ಎಂಬ ಆರು ವಿಕಾರಗಳು ಆತ್ಮನಿಗಿರುವುದಿಲ್ಲ. “ನೈನಂ ಛಿಂದAತಿ ಶಸ್ತಾçಣಿ ನೈನಂ ದಹತಿ ಪಾವಕಃ | ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ “ (ಭ.ಗೀ 2. 23). ಈ ಆತ್ಮನನ್ನು ಶಸ್ತçಗಳು ಕತ್ತರಿಸಲಾರವು. ಇದನ್ನು ಬೆಂಕಿಯು ಸುಡಲಾರದು., ಜಲವು ನೆನಯಿಸಲಾರದು, ಗಾಳಿಯು ಒಣಗಿಸಲಾರದು. ಅಂದರೆ ಶರೀರವನ್ನು ಸುಟ್ಟರೂ ಆತ್ಮ ಸುಟ್ಟುಹೋಗುವುದಿಲ್ಲ. ಈ ಕಾರಣದಿಂದ ಶರೀರವು ಅನಿತ್ಯ, ಸಾಕಾರ ವಸ್ತು ವಾಗಿದ್ದು, ಆತ್ಮವು ಮಾತ್ರ ನಿತ್ಯ ನಿರಾಕಾರವಾಗಿದೆ ಎಂದಿದೆ ಭ, ಗೀ  

 ಆತ್ನನನ್ನು ಕುರಿತಂತೆ ಇದುವರೆಗೆ ಉಲ್ಲೇಖಿಸಲಾದ ಅಂಶಗಳ ಹಿನ್ನೆಲೆಯಲ್ಲಿ ‘ಯಾರಾದರೂ ಮೃತರಾದ ಸಂದರ್ಭದಲ್ಲಿ ‘ಅವರ ಆತ್ಮಕ್ಕೆ ಶಾಂತಿ ಸಿಗಲಿ, ಮೇ ಹಿಸ್\ಹರ್ ಸೋಲ್ ರೆಸ್ಟ್ ಇನ್ ಪೀಸ್” ಎಂದು ಹಾರೈಸುವ ಕ್ರಮ ಸರಿ ಎನಿಸುವುದೇ ! ? ಈ ಮಾತುಗಳು ಅರ್ಥಪೂuð ಎನಿಸುವುದೇ ? ಉತ್ತರ ವ್ಯಕ್ತಿಗಳ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಡಿದ್ದಾಗಿದೆ.

Comments