ವಿವಾಹದಲ್ಲಿನ ಹಾಸ್ಯಾಸ್ಪದ ಪದ್ದತಿಗಳು

ವಿವಾಹದಲ್ಲಿನ ಕೆಲವು ಅಪ್ರಸ್ತುತ : ಹಾಸ್ಯಾಸ್ಪದ ಪದ್ದತಿಗಳು

 ಲೇಖಕರು : ಎಂ ಆರ್ ವೆಂಟರಾಮಯ್ಯ



 ”ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು” ಕೆಲ ವರ್ಷಗಳ ಹಿಂದೆ ಪ್ರದರ್ಶನಗೊಂಢ ಬಹದ್ದೂರ್ ಗಂಡು ಕನ್ನಡ ಚಲನ ಚಿತ್ರದಲ್ಲಿ ಡಾ ರಾಜ್ ಕುಮಾರ್ ರವರು ಹಾಡಿದ ಹಾಡಿನ ಸಾಲುಗಳಿವು. ಇವು ಚಲನ ಚಿತ್ರದ ಗೀತೆ ಎಂಬ ಮಡಿವಂತಿಕೆಯನ್ನು ಇಟ್ಟು ನಿರ್ಲಕ್ಷಿಸಬಾರದು, ಈ ಎರಡು ಸಾಲುಗಳು ಅದೆಷ್ಟು ಅರ್ಥ ಪೂರ್ಣ, ಸರ್ವ ಕಾಲಿಕ ಸತ್ಯ ಎಂಬುದನ್ನು ‘ಬಲ್ಲವನೇ ಬಲ್ಲ ಬೆಲ್ಲದ ಸವಿಯ’ ಎಂಬAತೆ ಕನ್ನಡ ಸಾಹಿತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಬಲ್ಲವರೇ ಬಲ್ಲರು.

 ಪ್ರವಾಹದ ಎದುರು ಯಾರಾದರೂ ಈಜಿ ಬದುಕುವುದುಂಟೇ ? ಗಾಳಿಗೆ ಎದುರಾಗಿ ನಡೆಯುವವರುಂಟೇ ? ಹೀಗೇನೆ ಕಾಲಕ್ಕೆ ವಿರುದ್ದವಾಗಿ ನಡೆಯುವರುಂಟೇ ? ಹೀಗೆ ನಡೆದರೆ ಪರಿಣಾಮ ಏನಾಗುತ್ತದೆ ? ನಮ್ನ ನಿರೀಕ್ಷಿಗೆ ವಿರುದ್ಧವಾಧ ಫಲ, ಪಲಿತಾಂಶ ಸಿಗುವುದೋ ಹಾಸ್ಯಾಸ್ಪದ ಎಂದು ನಗೆಪಾಟಲಿಗೆ ಗುರಿಯಾಗುವುದೋ ಆಗಬಹುದು.

 ತಾಳಕ್ಕೆ ತಕ್ಕಂತೆ ಕುಣಿಯದಿದ್ದರೆ ಏನಾಗುತ್ತದೆ ಕುಣಿತ ತಾಳದ ಲೆಕ್ಕದೊಂದಿಗೆ ಹೊಂದಣಿಕೆಯಾಗದೆ ತಾಳದ ಲೆಕ್ಕ ತಪ್ಪುತ್ತದೆ, ಕುಣಿತ ಅಶಾಸ್ತಿçಯ, ಅಸಹ್ಯ, ಎನಿಸುತ್ತದೆ ಅಲ್ವೇ ! 

 ಹೀಗೇನೆ ನಮ್ಮ ಜೀವನಾನೂ ಕಾಲಕ್ಕೆ ತಕ್ಕಂತೆ ನಡೆಸಬೇಕು ಇಲ್ಲವಾದಲ್ಲಿ ನಡಿಗೆ ಮುಗ್ಗರಿಸಬಹುದು ಅಥವಾ, ಅದು ಅರ್ಥಹೀನ ಎನಿಸಿ ಜನರಿಂದ ಠೀಕೆಗೆ ಗುರುಯಾಗುವುದೋ ಕಷ್ಟ ನಷ್ಡಗಳಿಗೆ ಗುರಿಯಾಗುವುದೋ ಆಗಬಹುದೇನೋ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಲೇಖನಕ್ಕೆ ಆಯ್ಕೆ ಮಾಡಿಕೊಂಡಿರುವ ವಿಷಯ “ವಿವಾಹದಲ್ಲಿ ಅಪ್ರಸ್ತುತ : ಹಾಸ್ಯಾಸ್ಪದ ಆಚರಣೆಗಳು”. ‘ವಿವಾಹ’ ಎಂದ ಕೂಡಲೇ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುವುದು ಮೂರು ದಿನಗಳ ಸಡಗರ ಸಂಭ್ರಮದ ಓಡಾಟ, ಸಾವಿರಾರು ಸಂಖ್ಯೆಯ ಜನರ 5-6 ಹೊತ್ತಿನ ರುಚಿ ರುಚಿಯಾದ ತಿಂಡಿ ಊಟ ರಂಗು ರಂಗಿನ ಉಡುಗೆ ತೊಡಿಗೆ ಉಟ್ಟು ಓಡಾಡುವ ಸುಂದರ ಸುಂದರಿಯರ ನೋಟ. ಈ ವಿವಾಹದ ಇದೊಂದು ಮುಖ ಏಂದರೆ ಹೆಣ್ಣು ಹೆತ್ತವರ ದಯನೀಯ ಪಾಡು ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ”ಏAಬAತೆ ಶರೀರ ಭಾವ. ಘಳಿಗೆ ಘಳಿಗೆಗೂ ಗಂಡಿನವರು ಮುಂದಿಡುವ ಡಿಮಂಡ್‌ಗಳ ಪಾಲನೆಗೆ ಟೊಂಕ ಕಟ್ಟಿ ಶಿರ ಬಾಗಿ ನಡು ಬಗ್ಗಿಸಿ ಘೋಣಾಡಿಸುವ ಹೆಣ್ಣಿನ ಮನೆಯವರ ಅಸಹಾಯಕತೆ. ಗಂಡಿನ ಕಡೆಯವರು ಎಂಬ ಹೆಸರಿನಲ್ಲಿ ಬಂದು ಉಂಡುಹೋಗುವವರು ಲೆಕ್ಕವಿಲ್ಲದಷ್ಟು ಜನ. ಇದಕ್ಜೆ ವಿರುದ್ದವಾಗಿ ಹೆಣ್ಣಿನ ಕಡೆಯವರಿಗೆ ಬಹಳ ಆಪ್ತರಾÀದವರನ್ನೂ ಕರೆಯಲಾಗದ ದುಸ್ಥಿತಿ ಹೆಣ್ಣಿನ ಕಡೆಯವರದು. 

 ಇಂದು ನಡೆಯುತ್ತಿರುವ ಬಹುತೇಕ ವಿವಾಹದಲ್ಲಿನ ಬಹಳಷ್ಟು ಆಚರಣೆ\ಪದ್ದತಿಗಳು ಸಹಸ್ರಾರು ವರ್ಷಗಳ ಹಿಂದೆ ಬಾಲ್ಯ ವಿವಾಹ ನಡೆಸುತ್ತಿದ್ದ ಕಾಲದ್ದು. ಅಂದು ವರ ವಧುಗಳಿಬ್ಬರೂ ಅಪ್ರಾಪ್ತ ವಯಸ್ಕರಾಗಿದ್ದು ಅದೊಂದು ಹುಡುಗರ ಆಟದಂತಿತ್ತು. ತಾವು ಮಾಡುತ್ತಿರುವುದು ಅಗತ್ಯವೋ ಅನಗತ್ಯವೋ ಸರಿಯೋ ತಪ್ಪೋ ಎನು ಅರಿಯದ ವಯಸ್ಸ್ಸಿನವರವರು. ಆದರೆ ಅವನ್ನೇ ಇಂದಿನ ನಾವು ಕಾಪಿ ಪೇಸ್ಟ್ ಮಾಡಿಟ್ಟುಕೊಂಡು ಹೀಗೆ ಮಾಡಿದರೇನೇ ವಿವಾಹ ಎನಿಸಿಕೊಳ್ಳುವುದು, ಇದರಲ್ಲಿ ಚಾ ಚೂ ವ್ಯತ್ಯಾಸವಾದರೂ ಕಾರ್ಯ ಕ್ರಮ ನಡೆಸುತ್ತಿರುವ ಯಜಮಾನ: ಯಜಮಾನತಿಗೆ ಬಹು ಗಾಭರಿ. ಹಿಂದಿನ ಪದ್ದತಿ ಆಚರಣೆ ಕ್ರಮದಂತೆ ನಡೆಸಲಾಗಲಿಲ್ಲವಲ್ಲಾ ! ಇದಕ್ಕೆ ದೈವ ಮುನಿಸಿಕೊಂಡರೆ ! ಕೆಡುಕು ಮಾಡಿಬಿಟ್ಟರೆ , , , ? ಎಂ¨ ಭಯಕ್ಕೆ ಸಿಲುಕಿಕೊಳ್ಳುತ್ತಿರುವುದನ್ನು ನಾವೆಲ್ಲಾ ಬಹಳಷ್ಟು ವಿವಾಹಗಳಲ್ಲಿ ನೋಡಿದ್ಧೇವಲ್ಲವೇ ? ಅಂದರೆ ಇಷ್ಟು ಆಚಾರ, ಪದ್ದತಿ ಬದ್ಧರು. ಇವರು. ಆದರೆ ವಿವಾಹದ ಹಸೆ ಮಣೆಯ ಮೇಲಿರುವ ವಧು ವರರಿಗೆ ಇಲ್ಲಿನ ಹಿರಿಯರಿಗಿರುವಷ್ಟು ಭಯ, ಗೊಂದಲ ಇರುವುದೇ ಇಲ್ಲ. ಏಕೆಂದರೆ ಇವರಿಗೆ ಗೊತ್ತು, ವಿವಾಹ ಎಂಬುದೊAದು ಸಾಮಾಜಿಕ ಕಾರ್ಯಕ್ರಮ. ತಾವಿರುವ ಸಮಾಜದ ಎದುರು ಮಾಂಗಲ್ಯ ಧಾರಣೆಯಾಗಿ ಗಂಡು ಹೆಣ್ಣು ಪತಿ ಪತ್ನಿಯರಾದರೇನೇ ನಮ್ಮ ವಿವಾಹ ಮುಗಿದಂತೆ ಎಂಬುದು ಇವರ ಅನಿಸಿಕೆ. ಇಲ್ಲಿ ಯಾವ ಕ್ರಮ ಪದ್ದತಿ, ಆಚರಣೆ ನಡೆಯಿತು, ನಡೆಯಲಿಲ್ಲ ಎಂಬ ಅನುಮಾನ, ಸಂಶಯ, ಭಯ, ಗೊಂದಲ ಇವರಲ್ಲಿ ಇರದು. ಏಕೆಂದರೆ ಇವು ಇವರಿಗೆ ಅನವಶ್ಯಕ. ಇವರು ಆಗ್ಗೆ ಮಾನಸಿಕವಾಗಿ ಬೇರೊಂದು ಲೋಕದಲ್ಲೇ ವಿಹರಿಸುತ್ತಿರುತ್ತಾರೆ. 

 ಇಂದಿನ ಕಾಲದಲ್ಲಿ ವಿವಾಹಕ್ಕೆ ಸಿದ್ದವಾಗುತ್ತಿರುವ ಗಂಡು ಹೆಣ್ಣಿನಲ್ಲಿ ಬಹಳಷ್ಟು ಮಂದಿ 25-32 ಹಾಗೂ ಹೆಚ್ಚಿನ ವಯೋಮಾನದವರು. ವಿದ್ಯಾವಂತರು, ಹಲವರು ಉನ್ನತ ಯಂತ್ತ ತಂತ್ರ ಜ್ಞಾನ ಕಲಿತವರು, ಇಂಟರ್ ನೆಟ್ ಚಾಲನೆ ಚೆನ್ನಾಗಿ ಬಲ್ಲವರು, ಯಾವಾಗ ಏನು ಮಾಡಿದರೆ ಒಳಿತು ಕೆಡುಕಾಗುತ್ತೆ ಎಂಬದರ ಅರಿವಿರುವವರು, ಲಕ್ಷಗಳಷ್ಟು ಆದಾಯ ಪಡೆಯುತ್ತಿರುವವರು, ಈ ವಯಸ್ಸು ಮುಟ್ಟುವ ವೇಳೆಗೇ ವಿವಾಹ, ಇದು ಪೂರ್ಣವಾಗಲು ಆಚರಿಸುತ್ತಿರುವ ಹಳೆಯ ಪದ್ದತಿ, ಆಚರಣೆ ಈ ಪೈಕಿ ಯಾವುದು ಅಗತ್ಯ, ಅನಗತ್ಯ, ಯಾವುದು ಅರ್ಥ ಪೂರ್ಣ, ಯಾವುದು ಅಪ್ರಸ್ತುತ, ದಾಂಪತ್ಯ ಸಂತಾನ ಪಡೆಯಿವಿಕೆ, ಮುಂದೂಡುವಿಕೆ ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ಪಡೆದಿರುತ್ತಾರೆ ಹೀಗಾಗಿ ಇಂದು ವಿವಾಹಕ್ಕೆ ಹಸೆ ಮಣೆ ಏರುತ್ತಿರುವ ಯುವಕ ಯುವತಿಯರು ಹಿಂದಿನ ಬಾಲ್ಯ ವಿವಾಹ ಪದ್ದತಿಗೆ ಸಿದ್ದವಾಗುತ್ತಿದ್ದ ಮಕ್ಕಳಷ್ಟು ಅಮಾಯಕರಲ್ಲ

 ಈ ಹಿನ್ನೆಲೆಯಲ್ಲಿ ಈ ವರ್ಗದ ಯುವಕರನ್ನು ನಾವು ಯುಗಗಳ ಹಿಂದಿನ ಯುವ ಜನಕ್ಕೆ ಹೋಲಿಸಿ ಅಂದು ವಿವಾಹದಲ್ಲಿ ಅವರು ಆಚರಿಸುತ್ತಿದ್ದ ಪದ್ದತಿ ಆಚರಣೆಗಳೆಲ್ಲಾ ಇಂದೂ ಪ್ರಸ್ತುತವೇ ? ಇವುಗಳನ್ನೆಲ್ಲಾ ಇಂದಿನ ಈ ಇವರೂ ಆಚರಿಸಬೇಕು ಎಂದು ಒತ್ತಾಯಿಸುವುದು ಸರಿಯೇ ! ? 

 ಹೀಗಂದಾಗ ತಿಳಿವಳಿಕೆ ವಿದ್ಯೆ ಬುದ್ದಿ ಪ್ರಸ್ತುತ ಅಪ್ರಸ್ತುತಗಳ ವ್ಯತ್ಯಾಸ ಬಲ್ಲ ಇಂದಿನ ಬಹಳಷ್ಟು ಹಿರಿಯರಾದವರೂ ಹಿಂದಿನ ಯುಗಗಳ ಆಚರಣೆಗಳಿಗೇ ಬದ್ದರಾಗಿ, ಇವು ನಡೆಯಲೇ ಬೇಕು, ಇವನ್ನು ಪಾಲಿಸದೆ ವಿವಾಹ ಪೂರ್ಣವಾಗದು ಎನ್ನುವ ಕಟ್ಟಾ ಸಂಪ್ರದಾಯವಾದಿಗಳಾಗೆ ಉಳಿದಿರುವುದು ದುರದೃಷ್ಟಕರ. ಬೆಳವಣಿಗೆಯಾಗಿದೆ.. ಹಿಂದಿನ ಹಲವು ಪದ್ದತಿಗಳ ಪೈಕಿ, ನನ್ನ ಅನಿಸಿಕೆ ಪ್ರಕಾರ ಇಂದು ಅಪ್ರಸ್ತುತ, ಔಟ್ ಡೇಟೆಡ್ ಎನ್ನಬಹುದಾದ ಕೆಲವು ಪದ್ದತಿಗಳು ಹೀಗಿವೆ : 

 ಕಾಶಿ ಯಾತ್ರೆ_ ಹಿಂದಿನ ಯುಗಗಳಿಂದ ಈ ಯುಗಕ್ಕೂ ಎಳೆದು ತಂದು ಈ ಶಾಸ್ತç ನಡೆಯಬೇಕಾದ್ದೇ ಎಂ¨ ಆಚರಣೆ-ಅಂದಿನ ಯುಗಗಳಲ್ಲಿ ಈ ಪದ್ದತಿಯು ಏಕೆ ಪ್ರಸ್ತುತವಾಗಿತ್ತು ಎಂದರೆ ಬಹಳಷ್ಟು ಜನರ ಅಭಿಪ್ರಾಯ ಹೀಗಿದೆ : 

 ಹಿಂದಿನ ಯುಗಗಳಲ್ಲಿ ವಟುವಿಗೆ ಉಪನಯನ ಆದ ಕೂಡಲೇ ಆತನನ್ನು ವಿದ್ಯಾಭ್ಯಾಸಕ್ಕಾಗಿ ಗುರು ಕುಲಕ್ಕೆ ಕಳುಹಿಸುತ್ತಿದ್ದರು. ಅಲ್ಲಿ ಸುಮಾರು 8 ವರ್ಷ ವಯಸ್ಸಿನ ವಟುವು ತನ್ನನ ಸಾಮರ್ಥ್ಯಕ್ಕೆ ಅನುಗುಣವಾಗಿ 8-10-12 ವರ್ಷ ಅವಧಿಯವರೆಗೆ ವೇದ ಶಾಸ್ತç ಧರ್ಮ ಇತ್ಯಾದಿ ವಿದ್ಯಾಭ್ಯಾಸ ಮುಗಿಸುವ ವೇಳೆಗೆ 16-18-20 ರ ವಯಸ್ಸಿನ ಫ್ರೌಢನಾಗಿರುತ್ತಿದ್ದ. ಜೀವನದ ಮುಂದಿನ ಹಂತಕ್ಕೆ ಪಾದಾರ್ಪಣೆ ಮಾಡುವ ಮುನ್ನ ಆತ ಎಷ್ಟು ಕಲಿತಿದ್ದಾನೆ ಎನ್ನುವುದರ ಪರೀಕ್ಷೆಯಾಗಬೇಕಲ್ಲವೇ ? 

 ಆಗಿನ ಕಾಲದಲ್ಲಿ ಕಾಶಿನಗರ ಮಹಾ ಪಂಡಿತರಿದ್ದ ನಗರವಾಗಿತ್ತು ಇದಕ್ಕಾಗಿ ತನ್ನ ಕಲಿಕೆಯ ಪರೀಕ್ಷೆಗಾಗಿ ಕಾಶಿಯಲ್ಲಿನ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಇವನು’ಸ್ನಾತಕ’ ಎನಿಸಿಕೊಂಡು ಗೃಹಸ್ಥ ನಾಗಲು ಅರ್ಹತೆ ಎಂಬ ಅಭಿಪ್ರಾಯ ಅಂದಿನವರಲ್ಲಿ ಇದ್ದ ಕಾರಣ, ನಮ್ಮೀ ವಟುವು ಕಾಶಿಗೆ ಪಯಣಿ ಸಲು ಸಿದ್ದನಾಗುತ್ತಿದ್ದ.

 ಹೆಣ್ಣಿಗೆ ಸೂಕ್ತ ಗಂಡು ಸಿಗುವುದೇ ಕಷ್ಟ ಎನಿಸಿದ್ದ ಅಂದು, ಹೆಣ್ಣು ಹೆತ್ತಿದ್ದವರು ಇಂತಹಾ ಯುವಕನನ್ನು ಗುರ್ತಿಸಿ, ಸಂಪರ್ಕಿಸಿ, ಅಪ್ಪಾ, ನಾನೊಬ್ಬ ಕನ್ಯಾ ಪಿತೃ, ನನ್ನ ಮಗ¼ನ್ನು ನೀನು ವಿವಾಹವಾಗಿ ನನ್ನ ಕನ್ಯಾ ಸೆರೆಯಿಂದ ಬಿಡಿಸಪ್ಪಾ, ನನ್ನ ಮಗಳನ್ನು ವಿವಾಹವಾದ ಮೇಲೆ ನೀ ಬೇಕಾದರೆ ಕಾಶಿಗೆ ಹೋಗಬಹುದು ಎಂದೆಲ್ಲಾ ಆ ಯುವಕನನ್ನು ಕಾಡಿ, ಬೇಡುತ್ತಾ, ಬಾಪ್ಪಾ, ನನ್ನ ಮಗಳನ್ನು ತೋರಿಸುತ್ತೇನೆ ಎನ್ನುತ್ತಾ ಅವನನ್ನು ತನ್ನ ಮನೆಗೆ ಕರೆ ತಂದು, ಹೆಣ್ಣಿನ ದರ್ಶನ ಮಾಡಿಸಿ, ಕಾಶಿಗೆ ಅವನು ಹೋಗದಂತೆ ಮನವೊಲಿಸುತ್ತಿದ್ದ ಅಂದಿನ ಪ್ರಯತ್ನವೇ “ಕಾಶೀಯಾತ್ರೆ” ಶಾಸ್ತç. ಈ ಶಾಸ್ತçದ ಹಿನ್ನೆಲೆ ಹೀಗಿದ್ದಾಗ, ಈ ಕಾಶಿಯಾತ್ರೆ ಶಾಸ್ತç ಇಂದಿನ ಮದು ಮಕ್ಕಳಿಗೆ ಅತ್ಯಗತ್ಯವೇ ? ಪ್ರಸ್ತುತವೇ ! ಯೋಚಿಸಿ ಹೇಳಿ,

 ಕನ್ಯಾದಾನ- ಈ ಪದವನ್ನು ಕನ್ಯಾ + ಅದಾನ ಎಂದು ಓದಬೇಕು, ಆದರೆ ಹಿಂದಿನ ಜನರು ಮೌಢ್ಯದಿಂದ ಇದನ್ನು ಕನ್ಯಾ ದಾನವಾಗಿಸಿಬಿಟ್ಟೆರು. ಇಲ್ಲಿ ಕನ್ಯಾದಾನದ ವಿಷಯವೇ ಇರುವುsದಿಲ್ಲ ಏಕೆಂದರೆ ಇಲ್ಲಿ ದಾನ ಮಾಡಲು ಕನ್ಯೆಯೇನು ನಿರ್ಜೀವ, ಜಡ, ವಸ್ತು, ಮೂಗ ಪ್ರಾಣಿಗಳಲ್ಲ. 

 ಇದೇ ಸಂ¨Aðಧವಾಗಿ ಸೀತಾ ದೇವಿಯ ಕಲ್ಯಾಣ ಪ್ರಸಂಗವನ್ನು ಗಮನಿಸೋಣ. ಬಹಳ ಜನ ಇದನ್ನು ಸೀತಾ ಸ್ವಯಂವರ ಎಂ¨À ಪದ ಬಳಸುವುದು ಕೇಳಿಸಿದೆ. ಆದರೆ ಅಂದು ನಡೆದಿದ್ದು ಕಲ್ಯಾಣ ವಷ್ಟೇ. ಸೀತೆಯ ತಂದೆ ಜನಕ ಮಹಾರಾಜನು ಸೀತಾ ರಾಮರ ಕಲ್ಯಾಣದ ಮುನ್ನ ಶ್ರೀರಾಮ ನೊಂದಿಗೆ ಹೀಗೆ ಹೇಳುತ್ತಾನೆ : “ ಇಯಂ ಸೀತಾ ಮಮ ಸುತಾ, ಹ ಧರ್ಮಚಾರಿಣಿ ತವಪ್ರತೀಕ್ಷ ಚೈನಾಂ ಭದ್ರಂ ತೇ ಪಾಣೀ ಗೃಹ್ಣಿಷ್ಟ ಪಾಣೀನಾ\ ( ಶ್ರೀಮದ್ ರಾಮಾಯಣದ ಬಾಲಕಾಂಡ ಸೀತಾರಾಮ ಕಲ್ಯಾಣ 73 ನೇ ಸರ್ಗ)_ ಎಂಬ ಸಾಲುಗಳು.ಇದರ ಅರ್ಥ : 

 “ನನ್ನ ಮಗಳು ಸೀತೆ ನಿನಗೆ ಸಹ ಧರ್ಮಚಾರಿಣಿಯಾಗಿರುತ್ತಾಳೆ. ಇವಳನ್ನು ಸ್ವೀಕರಿಸು. ನಿನಗೆ ಶುಭವಾಗಲಿ. ಈಕೆಯ ಪಾಣಿಗ್ರಹಣ ಮಾಡು. ಈ ನನ್ನ ಪುತ್ರಿಯು ಪತಿವ್ರತೆಯೂ ಭಾಗ್ಯಶಾಲಿಯೂ ಆಗಿ ಅನುಗಾಲವೂ ನಿನ್ನನ್ನು ನೆರಳಿನಂತೆ ಅನುಸರಿಸುವಳು. “ ಈ ಯಾವ ಮಾತುಗಳಲ್ಲೂ ಕನ್ಯಾದಾನದ ಮಾತೇ ಇಲ್ಲದ ಕಾರಣ ಅಂದು ಕನ್ಯಾದಾನದ ಪದ್ದತಿಯೇ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

 ಯಾವುದೇ ದಾನ ಕೊಡುವಾಗ. “ನ ಮವi “ ಅಥವಾ ಸ್ವಾಹಾಃ ನ ಮಮ” ಎನ್ನುತ್ತೇವೆ. ಇದರ ಅರ್ಥ ನಾನು ದಾನ ಮಾಡುತ್ತಿದ್ದೇನೆ. ಇನ್ನು ಮುಂದೆ ಇದು ನನ್ನದಲ್ಲ. ಸೀತಾ ಕಲ್ಯಾಣದಲ್ಲಿ ಈ ಪದಗಳನ್ನು ಹೇಳಿರದ ಕಾರಣ ಜನಕ ಮಹಾರಾಜನು ಶ್ರೀರಾಮನಿಗೆ ಕನ್ಯಾದಾನ ಮಾಡಲಿಲ್ಲ ಎಂಬುದು ತಿಳಿಯುತ್ತದೆ. 

 ಕನ್ಯಾದಾನ ಎಂಬ ಪದದಲ್ಲಿ ‘ಅಧಾನ’ ಎಂಬ ಪದದ ಅರ್ಥ‘ನ್ಯಾಸ’ವಾಗಿಡುವುದು..ದಾನ 

 ಒಮ್ಮೆ ಕೊಟ್ಟ ಮೇಲೆ ಮುಗಿಯಿತು. ಅದು ಎಂದಿಗೂ ನಮ್ಮದಾಗುವುದಿಲ್ಲ. ದಾನ ಪಡೆದವನು ಅದನ್ನು ಹೇಗಾದರೂ ಬಳಸಬಹುದು ಆದರೆ ನ್ಯಾಸದಲ್ಲಿ ಹಾಗಾಗುವುದಿಲ್ಲ. ನ್ಯಾಸ ಮಾಡಿದರೆ ಆಕೆ ಎಂದೆAದಿಗೂ ನನ್ನ ಮಗಳೇ ಆಗಿರುತ್ತಾಳೆ. ನಮ್ಮಿಬ್ಬರ ಸಂಬAಧವನ್ನು ಯಾರಿಂದಲೂ ಕಸಿದುಕೊಳ್ಳಲಾಗದು ಎಂಬುದಾಗುತ್ತದೆ. 

 ಸನಾತನ ಧರ್ಮದ ವಿವಾಹ ಆಚರಣೆಯಲ್ಲಿ ಮಗಳನ್ನು ಧಾರೆಯೆರೆದು ಕೊಡುವಾಗ ಕನ್ಯಾ ಪಿತೃ ಅಳಿಯನಿಂದ ಕೆಲವು ಭರವಸೆಗಳನ್ನು ಅಪೇಕ್ಷಿಸುತ್ತಾನೆ, ಇವೆಂದರೆ “ನೀನು ಇವಳನ್ನು ಯಾವ ರೀತಿ ಪೋಷಿಸಬೇಕು, ಈವರೆಗೆ ನಾನು ಹೇಗೆ ಇವಳನ್ನು ಪೋಷಿಸಿದ್ದೇನೆ, ಇವಳ ಅಪೇಕ್ಷೆ ಆಸಕ್ತಿ ಅಭಿರುಚಿ ತಿಳಿದು ಪೋಷಿಸಬೇಕು, ಇವಳಿಗೆ ನೀ ಅನುರೂಪನಾಗಿ ಇವಳೊಂದಿಗೆ ಸಹಕರಿಸಬೇಕು, ಇವಳು ಈಗ ನಿನ್ನ ಪತ್ನಿಯೇ ಆಗಿದ್ದರೂ ನನ್ನ ಮಗಳೂ ಆಗಿದ್ದಾಳೆ ಇತ್ಯಾದಿಯಾಗಿ ವಿವಾಹದ ಮಂತ್ರಗಳಲ್ಲಿ ಕನ್ಯೆಯ ತಂದೆ ವರನಿಗೆ ತಿಳಿಸಿ ಆತನಿಂದ ಭರವಸೆ ಪಡೆಯುತ್ತಾನೆ. ಆದರೆ ಕನ್ಯಾದಾನದಲ್ಲಿ ಇವುಗಳ್ಯಾವುವೂ ಇರುವುದಿಲ್ಲ. ಹೀಗಾಗಿ ಧಾರೆಯೆರೆದು ಕೊಡುವುದು ಕನ್ಯಾದಾನವಲ್ಲ. 

 ಕನ್ಯಾದಾನದ ಶಾಸ್ತçದ ವಿರುದ್ದದ ವಿಷಯದಲ್ಲಿ ಮೇಲೆ ತಿಳಿಸಿರುವ ಸಮರ್ಥನೆಗಳ ಜೊತೆಗೆ ಹೇಳಲೇಬೇಕಾದ ಮತ್ತೆ ಕೆಲವು ಪ್ರಮುಖ ಅಂಶಗಳು ಎಂದರೆ- ಹಿಂದಿನ ಯುಗಗಳಲ್ಲೂ ಎಂದೂ ಯಾರೂ ಜೀವವಿದ್ದ ಮನುಷ್ಯನನ್ನು ದಾನ ಕೊಡುತ್ತಿರಲಿಲ್ಲ. ಹೀಗೆ ಕೊಟ್ಟ ಯಾವ ಪ್ರಸಂಗವೂ ಎಲ್ಲೂ ಕೇಳಿ ಬಂದಿಲ್ಲ. ಹೀಗಿರುವಾಗ ವಿದ್ಯಾವಂತರ ಸಂಖ್ಯೆ ಭಾರಿ ವೇಗದಲ್ಲಿ ಹೆಚ್ವುತ್ತಿರುವ ಈ ಕಾಲದಲ್ಲಿ, ಎಲ್ಲಾ ಕ್ಷೇತ್ರಗಳಲ್ಲೂ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿರುವ ಇಂದಿನ ಕಾಲ ಘಟ್ಟದಲ್ಲಿ, ಜೀವಂತನಾಗಿರುವ ವಯಸ್ಕ ಮನುಷ್ಯನನ್ನು ದಾನ ಕೊಡುವ ಪದ್ದತಿ ಅಮಾನವೀಯವಲ್ಲವೇ ?

 ಇಂದಿನ ಕಾನೂನಿನಂತೆ 18-21 ವಯಸ್ಸು ತಲುಪಿದ ವ್ಯಕ್ತಿಯನ್ನು “ವಯಸ್ಕ,” ಮೇಜರ್ ಎಂದು ಕರೆಯಲಾಗಿದೆ. ಈ ವಯಸ್ಸಿನವನು ತನ್ನ ಸ್ವ ಇಚ್ಚೆಯಂತೆ ತನಗೆ ಬೇಕಾದ ನಿರ್ಣಯಗಳನ್ನು ತೆಗೆದು ಕೊಳ್ಳುವ ಹಕ್ಕನ್ನು ಪಡೆದಿರುತ್ತಾರೆೆ ಇವನು ಯಾರಿಗೂ ಅಧೀನ ಅಲ್ಲ,. ಇವನ ಮೇಲೆ ಯಾರೂ ಸ್ವಾಮ್ಯ’\ಯಾಜಮಾನಿಕೆ\ ಹಕ್ಕು ಚಲಾಯಿಸಲಾಗದು. ವಿಷಯ ಹೀಗಿರುವಾಗ, 18-21 ವಯಸ್ಸು ದಾಟಿದ ಹೆಣ್ಣು, ಅಮ್ಮ ಅಪ್ಪರಿಗೆ ಅಧೀನಳೇ ? ವಯಸ್ಕ, ಮೇಜರ್ ಆದ ಮಗಳನ್ನು ಮತ್ತೊಬ್ಬರಿಗೆ ದಾನ ಕೊಡಲು ಈ ಹೆತ್ತವರಿಗೆ ಅಧಿಕಾರ ಇದೆಯೇ ? ಉತ್ತರ -ಇಲ್ಲವೇ ಇಲ್ಲ. ಇದು ಕಾನೂನಿನಂತೆ ಶಿಕ್ಷಾರ್ಹ ಅಪರಾಧ.ವಲ್ಲವೇ !

 ಇಂದು ನಮ್ಮ ದೇಶದಲ್ಲಿ “ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ ಅಂದರೆ Human Rights protection Act” ಜಾರಿಯಲ್ಲಿದೆ. ಇದರನ್ವಯ ಪ್ರತಿ ವಯಸ್ಕನಿಗೂ ತನ್ನ ಇಚ್ಚೆಗೆ ಅನುಗುಣವಾಗಿ, ಸ್ವತಂತ್ರವಾಗಿ, ಗೌರವಯುತವಾಗಿ ಬಾಳ್ವೆ ಮಾಡುವ ಮೂಲಭೂತ ಹಕ್ಕಿದೆ. ಇವನ ಈ ಹಕ್ಕನ್ನು ಯಾರೂ ಕಸಿಯುವಂತಿಲ್ಲ. ಹೀಗಿರುವಾಗ ಒಬ್ಬ ವಯಸ್ಕನನ್ನು, ಅವನು ಮಗನೇ ಆಗಲಿ, ಮಗಳೇ ಆಗಲಿ, ಹೆತ್ತವರು ಮತ್ತೊಬ್ಬರಿಗೆ ದಾನ ಕೊಡುವ ಹಕ್ಕೇ ಇಲ್ಲ. ಹೀಗೆ ಮಾಡಿದರೆ ಈ ಕೆಲಸ À Humans Rights Violation ಎಂದು ಪರಿಗಣಿಸಲ್ಪಟ್ಟು ಕಾನೂನಿನ ಅನ್ವಯ ಶಿಕ್ಷೆಗೆ ಗುರಿಯಾಗುತ್ತಾನೆ. 

 ಇಂದು ಆಚರಿಸುತ್ತಿರುವ ಕನ್ಯಾದಾನ ಪದ್ದತಿಯಲ್ಲಿ “ನಾ ನನ್ನ ಮಗಳನ್ನು ನಿನಗೆ ದಾನ ಕೊಡುತ್ತಿದ್ದೇನೆ ಎಂಬುದನ್ನು ಮಂತ್ರ ಪಠಿಸಿ ಹೇಳುವುದೊಂದೇ ಅಲ್ಲ. ಹೆಣ್ಣಿನ ಕೈಯಲ್ಲಿ ದೇವರ ವಿಗ್ರಹವನ್ನಿಟ್ಟು ರೂಪಾಯಿ ನಾಣ್ಯವಿಟ್ಟು “ಇದಂ ನಮಮ” ಎಂದು ಹೇಳಿ ಮಗಳ ಕೈ ಮೇಲೆ ಹಾಕಿದ ನೀರು ಗಂಡಿನ ಕೈ ಸೇರುವಂತೆ ಮಾಡಲಾಗುತ್ತಿದೆ, ನಿಮಗೆ ಇಲ್ಲದಿರುವ ಹಕ್ಕನ್ನು ನನಗಿದೆ ಎಂದು ಸುಳ್ಳು ಹೇಳುತ್ತಿರುವುದರ ಜೊತೆಗೆ, ದೇವರ ಹೆಸರಿನಲ್ಲಿ ಪ್ರಮಾಣಮಾಡಿ ದಾನ ಕೊಡತಾ ಇರುವ ಈ ಪದ್ದತಿ ಅಮಾನವೀಯವಲ್ಲವೇ ! ಶಿಕ್ಞಾರ್ಹ ಅಪರಾಧವಲ್ಲವೇ ? ಇಂದು ಇದು ಅಪ್ರಸ್ತುತ ಅಲ್ಲವೇ ? 

 ಇದೇ ಕನ್ಯಾದಾನದ ಅನಿಷ್ಟ ಪದ್ದತಿ ಬಗ್ಗೆ ಹೇಳಲೇಬೇಕಾದ, ಇಂದಿನ ಹಲವು ಸಂಪ್ರದಾಯ ವಾದಿಗಳು ತಿಳಿಯಲೇ ಬೇಕಾದ ಮತ್ತೊಂದು ಎಂದರೆ ಈ ವರ್ಗದವರು ತಪ್ಪು ಕಲ್ಪನೆಯಿಂದ ಮಾಡುತ್ತಿರುವ ತಪ್ಪು ಕೆಲಸ. 18-21 ವಯಸ್ಸು ದಾಟಿದ ಹೆಣ್ಣು “ಕನ್ಯೆ” ಎನಿಸಿಕೊಳ್ಳುತ್ತಾಳೆಯೇ ?ಏನ್ರೀ ? ‘ಕನ್ಯಾ’ ಅಲ್ಲದ ಹೆಣ್ಣನ್ನು ಕನ್ಯಾ ಅಂತಾ ಅಗ್ನಿಯ ಮುಂದೆ ಪ್ರಮಾಣ ಮಾಡಿ ಸುಳ್ಳು ಹೇಳುವುದೂ ಅಕ್ಷಮ್ಯ ಅಪರಾಧವಲ್ಲವಾ ? 

 ಇದೇ ಕನ್ಯಾದಾನದ ಬಗ್ಗೆ ಇದುವರೆಗೆ ಹಲವಾರು ವಿವಾಹಗಳನ್ನು ಮಾಡಿಸಿರುವ Parama Devi      Founder and Director at Jagannatha Vallabha Vedic Research Centre  ಹಾಗೂ ಒಬ್ಬ ವಕೀಲರ ಜಂಟಿ ಅಭಿಪ್ರಾಯ ಹೀಗಿದೆ :

“Kanya-dān is illegal in all countries of the world except some of the Islamic republics.

A kanya is a technical term defined as follows:–

daśa varśa bhavet kanyā - ata urdhvam rajasvalā. (Parāśara Smriti 7:4)

A girl is considered as a “kanya” from the age of 10 till menstruation thereafter she is known as a “rajasvalā”.

The ritual of kanya-dāna harks back to the days of child marriage which is now thankfully illegal.

Women are not commodities or possessions to be given and received. Women are independent individuals and should not be infantilized through ritual.

Is it an essential part of the Hindu marriage ceremony?

No, it is not - many of the Grihya sūtras (the Vedic manuals which are the source of most of our sacraments) do not mention it at all.

Another factor to consider is that marriage is a contract, confirmed and ratified in the presence of Agni. Making a false statement by calling the bride a “kanyā” renders the contract null and void A girl is considered as a “kanya” from the age of 10 till menstruation thereafter she is known as a “rajasvalā”.’

   Kanyaadaan is not to be split as kanya+daan It’s meant to be split as kanya+aadaan.

Aadaan is a word which is the complete opposite of daan; it means receiving or accepting. Our rituals would NEVER view a woman as a commodity or a gift to be given

 ಗಮನಕ್ಕಾಗಿ : ಪ್ರಸಕ್ತ ಲೇಖನದಲ್ಲಿ ಲೇಖಕ ತನ್ನ ಮನದಾಳದ, ವ್ಯಕ್ತಿಗತÀ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಳ್ಳಲು ಹೇಳಿದ್ದಾಗಿದೆಯೇ ಹೊರತಾಗಿ ಯಾರನ್ನೂ ಯಾವುದರ ಬಗ್ಗೆಯೂ ಠೀಕೆ ಆಕ್ಷೇಪಣೆ ಖಂಡನೆ ಮಾಡುವ ಉದ್ದೇಶ್ಯವಿಲ್ಲ..

Comments