ಕೀರ್ತಿ ಮನ್ನಣೆಗಳ ದಾಹ
ಲೇಖಕರು : ಎಂ ಆರ್ ವೆಂಕಟರಾಮಯ್ಯ
‘ದಾಹ’ ಎಂಬ ಪದಕ್ಕೆ, ಉರಿ, ಕಿಚ್ಚು, ತಾಪ, ಬೇಗೆ, ಬಾಯಾರಿಕೆ, ನೀರಡಿಕೆ, ತೀಕ್ಷ÷್ಣವಾದ ಆಕಾಂಕ್ಷೆ, ತೀವ್ರ ಅಭೀಷ್ಟೆ ಮೊದಲಾದ ರೂಪ\ಮುಖಗಳುಂಟು. ಪ್ರಸಕ್ತ ಲೇಖನದಲ್ಲಿ ‘ದಾಹ’ ಪದವನ್ನು ತಾಪ, ಬೇಗೆ, ಬಾಯಾರಿಕೆ, ತೀಕ್ಷ÷್ಣವಾದ ಆಕಾಂಕ್ಷೆ ಎಂಬ ಅರ್ಥಗಳಲ್ಲಿ ಬಳಸಲಾಗಿದೆ. ಕೀರ್ತಿ ಮನ್ನಣೆಗಳು ಸಿಗಬೇಕಾದರೆ ಅದನ್ನು ಗಳಿಸಲು ಅಗತ್ಯ ಅರ್ಹತೆಗಳನ್ನು ನಮ್ಮಧಾಗಿಸಿಕೊಳ್ಳಬೇಕು ಇದನ್ನೂ ಸಹಾ ಸನ್ಮಾರ್ಗದಲ್ಲಿ ಪಡೆಯಲು ಶ್ರಮಿಸಬೇಕು, ಆದರೆ ಇಂದಿನ ಹಲವರು ಹೀಗೆ ಮಾಡದೆ ತಮಗೆ ಅರ್ಹತೆಯಿಲ್ಲದನ್ನು ಗಳಿಸಲು ಅದೆಂತಹಾ ಅಡ್ಡದಾರಿ\ ತಪು,್ಪ ಅಧರ್ಮ, ಅನೀತಿಯುತ ಮಾರ್ಗ\ ಹಿಡಿದು ಇಂದು ಸಾಗುತ್ತಿದ್ದಾರೆ ಎಂಬುದರ ಕಿರು ಚಿತ್ರಣ ಪ್ರಸಕ್ತ ಲೇಖನದಲ್ಲಿದೆ.
ಕೀರ್ತಿ ಗೌರವ ಮರ್ಯಾದೆ ಇವುಗಳಲ್ಲಿ ಮೊದಲಿಗೆ ಮೇಲೆದ್ದು ಕಾಣುವುದು ವ್ಯಕ್ತಿಯ ಹೆಸರು. ಇಂತಹವ, ಇಂತಹುದು, ಹೀಗೆ, ಎಂಬುದು. ಇವುಗಳ ಸಾಧನೆಗಾಗಿ ಕೆಲವರು ತಮ್ಮಲ್ಲಿರುವ ಧನ ಬಲ ಬಳಸುವ, ಅಂದರೆ ಅರ್ಥವಾಗಲಿಲ್ಲವೇ ! ತಮ್ಮಲ್ಲಿ ಇಲ್ಲದ್ದನ್ನು ಕೊಂಡುಕೊಳ್ಳುವುದು. ಇದರ ಬೆಲೆ ಎಷ್ಟಾದರೂ ಸರಿÀ, ರೆಡಿ ಎಂಬುದು. ಇದಕ್ಕಾಗಿ ಇವರು ವೆಚ್ಚ ಮಾಡಲು ಸಿದ್ದವಾಗಿರುವ ಹಣ, ಇವರÀ ಸ್ವ ಶ್ರಮ, ನ್ಯಾಯ ಮಾರ್ಗದ್ದಂತೂ ಆಗಿರಲಾರದು. ಈ ಹಣ ವೆಚ್ಚವಾದರೂ ಚಿಂತೆಯಿಲ್ಲ, ತನ್ನಲ್ಲಿಲ್ಲದ್ದು ತನದಾಗಿಸಿಕೊಳ್ಳ†ಬೇಕೆಂಬುದೇ ಇವರ ಜೀವನದ ಪರಮೋಚ್ಚ ಗುರಿ.
ಈ ಮಾರ್ಗ ಕೆಲಸ ಮಾಡದಿದ್ದರೆ ತನ್ನ ಜಾತಿ ಬಲ ಪ್ರಯೋಗಿಸುವುದು. ಈ ಮಾರ್ಗದಲ್ಲಿ ಸ್ವಲ್ಪ ಕಾಲ ಕಾಯಬೇಕಾಗಬಹುದಾದರೂ ಇದು ಗ್ಯಾರಂಟಿ ಫಲ ನೀಡುತ್ತದೆ ಏಕೆಂದರೆ ಈ ಮಾರ್ಗ ಹಿಂದೆ ಅನುಸರಿಸಿದವರಿಗೆ ನಿರೀಕ್ಷಿತ ಫಲ ನೀಡಿದೆ ಎಂಬುದು ಇವರ ದೃಢ ನಂಬಿಕೆ. ಇವರ ದುರದೃಷ್ಟP ಈ ಮಾರ್ಗದಲ್ಲಿ ಗುರಿ ಸಾಧನೆಯಾಗದಿದ್ದರೇ ! ದಾರಿಗಳೆಲ್ಲವೂ ಮುಚ್ಚಿದಂತೇನೇ ? ಉಹೂಂ, ಮರಳಿ ಯತ್ನವ ಮಾಢು ಟ್ರೆöÊ ಟ್ರೆöÊ ಅಗೈನ್, ನಿರಾಶರಾಗಬೇಡಿ ಎಂದು ಕವಿಯೋರ್ವರು ಹೇಳಿಲ್ಲವೇ ! ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುವುದು, ಜೊತೆಗೇ, ಚತುರೋಪಾಯಗಳಾದ ಬೇಧ ದಂಡಗಳನ್ನು ಹೊಸ ಕೈಲಿಹಿಡಿದು ಮುನ್ನಡೆಯುವುದು. ತನ್ನ ದಾರಿಗೆ ಯಾರು ಅಡ್ಡ ನಿಂತಿದ್ದಾರೆ ಎಂಬುದನ್ನು ಪತ್ತೆ ಮಾಡಿ ಅವರು ದೂರ ಸರಿಯುವಂತೆ ಏನು ಮಾಡಬೇಕು ಎಂಬುದನ್ನು ಚಿಂತಿಸಿ ಬೇಧ ದಂಡ ಮಂತ್ರ ತಂತ್ರಗಳ ಪ್ರಯೋಗಿಸಿದರೆ ನೀರೀಕ್ಷಿತ ಫಲ ಕೊಡದಿರುತ್ತದೆಯೇ ? ಎಂಬುದು ಇವರ ನಂಬಿಕೆ. ಆದರೆ ಇಂತಹಾ ಮಾರ್ಗಗಳನ್ನು ಹಿಡಿದು ಓಡುವುದು ಎಲ್ಲರಿಗೂ ಅಧಾಧ್ಯ ಎಂಬುದAತೂ ಹಲವರ ಅಭಿಮತ ವಾಗಿರುತ್ತÀದೆ,
ಹೀಗೆ ಕೀರ್ತಿ ಮನ್ನಣೆಯ ದಾಹ ವ್ಯಕ್ತಿಗಳನ್ನು ವಶಪಡಿಸಿಕೊಂಡು ಕುಣಿಸಲಾರಂಭಿಸಿದರೆ ಮನುಷ್ಯ ಮನುಷ್ಯನಾಗಿ ವರ್ತಿಸದೆ ದಾನವಾನಾಗೋ ಕ್ರೂರ ಜಂತುವAತೆಯೋ ವರ್ತಿ ಸುತ್ತಾನೆ. ಅಕಸ್ಮಾತ್ ಇವುಗಳ ದಾಹ ಇವನದಾದಾಗ ಸುಮ್ಮನಿರುತ್ತಾನೆಯೇ ? ಇವನು ಶಾಂತವಾಗುವುದಲ್ಲ. ಬದಲಿಗೆ, ದೊರೆತಷ್ಟೂ ತೃಪ್ತರಾಗದೆ, ಇವು ಇನ್ನಷ್ಟು ಬೇಕು, ಮತ್ತಷ್ಟು ಬೇಕು ಎಂಬ ಬೇಕುಗಳ ಪಟಿ ಇವರನ್ನು ಕಾಡಿಸಿ ಪೀಡಿಸಿ ಇಚ್ಚಿಸಿದ್ದನ್ನು ಪಡೆಯುವವರೆಗೂ ಇವರಿಗೆೆ ವಿಶ್ರಾಂತಿ ಕೊಡದೆ ದುಷ್ಕರ್ಮ, ಪಾಪ ಅನ್ಯಾಯ ಅನೀತಿ, ಯಾವುದನ್ನಾದರೂ ಮಾಡಲು ಹಿಂದೆ ನೋಡದೆ ಬಿಡದೆ, ತಕ್ಕ ತಂತ್ರ, ಕುತಂತ್ರಗಳನ್ನು ಮನದಲ್ಲೇ ಹೆಣೆ ಯಲು ಅರಂಭಿಸುವAತೆ ಒತ್ತಾಯಿಸುತ್ತದೆ ಈ ತಂತ್ರಗಳು..
“ಘಟಂ ಬಿಂದ್ಯಾತ್ ಪಟಂ ಚಿಂದ್ಯಾತ್, ಕುರ್ಯಾದ್ಯಾ ಗಾರ್ದಭಸ್ವನಂ| ಯೇನಕೇನ ಪ್ರಕಾರೇಣ ಪ್ರಸಿದ್ದ ಪುರುಷೋಭವ” ಅರ್ಥಾತ್, ಗಡಿಗೆ, ಮಡಕೆÉ ಒಡೆದೋ, ಬಟ್ಟೆ ಹರಿದೋ, ಕತ್ತೆಯಂತೆ ಕಿರುಚಿಯೋ, ಹಾಗೋ, ಹೀಗೋ, ಹ್ಯಾಗೋ ಒಂದು ರೀತಿಯಲ್ಲಿ ಪ್ರಸಿದ್ಧಿಗೆ ಬರಬೇಕು ಎಂಬ ಸುಭಾಷಿತದಂತೆ ಈ ಮನ್ನಣೆಯ ದಾಹದವರು ವರ್ತಿಸುತ್ತಾರೆ. ದಿನ ನಿತ್ಯದ ವ್ಯವಹಾರಗಳಲ್ಲಿ “ಐ ಡೋಂಟ್ ನೋ ವಾಟ್ ಯು ಡು, ಹೌ ಯು ಡು, ಬಟ್ ಸಮ್ ಹೌ ಯು ಹೇವ್ ಟು ಡು ಇಟ್” ಎಂದೋ, ನಿನ್ನ ಅಗತ್ಯ ಗುರಿ ಸಾಧಿಸಲು, ‘ಬೆಗ್ ಬಾರೋ, ಸ್ಟೀಲ್’ ಈ ಮೂರು ಮಾರ್ಗಗಳ ಪೈಕಿ, ನೀ ಯಾವುದಾದರೂ ದಾರಿ ಹಿಡಿ, ಆ ದಾರಿ, ಒಳಿತೋ ಕೆಡುಕೋ ಇತ್ಯಾದಿ ವಿಶ್ಲೇಷಣೆ ನೋಡುವಂತಿಲ್ಲ., ಕೆಲಸ ಸಾಧಿಸುವುದು ಮುಖ್ಯ ಅಷ್ಟೇ ಎಂದು ಇವರ ಮನ ಇವರನ್ನು ಪ್ರಚೋದಿಸುತ್ತಲೇ ಇರುತ್ತದೆ.
ಮನುಷ್ಯನ ಇಂತಹಾ ಹಸಿವುಗಳನ್ನು ಕುರಿತು : “ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ ಗಳಿಗೆಲ್ಲಾ \ಇನಿಸುಣಿಸು ಬೆದೆ, ಬೆದರು ಅಷ್ಟೇ ಜೀವತವು \ಮನುಜನೆಂತನಿತರಿA ತೃಪ್ತಿಪಡೆವನ ವಂಗೆ \ಕ್ಷಣ ಕ್ಷಣವು ಹೊಸ ಹಸಿವು ಮಂಕುತಿಮ್ಮ” ದನ ಸಿಂಹ ಹುಲಿ ಹಕ್ಕಿ, ಹಾವುಗಳಂತಹಾ ಪ್ರಾಣಿಗಳಿಗೆ ತಿನ್ನುವುದಕೆ ಸ್ವಲ್ಪ ಆಹಾರ, ಹೆಣ್ಣು ಗಂಡಿನ ಸಂಗದ ಆಸೆ, ಜೀವನದ ಅಂಜಿಕೆ ಇಷ್ಟೇ ಇವುಗಳ ಬೇಕುಗಳ ಪಟ್ಟಿ. ಆದರೆ ಮನುಷ್ಯನಿಗೆ ಪ್ರತಿ ಕ್ಷಣವೂ ಹೊಸ ಹೊಸ ಹಸಿವುಗಳು ಹುಟ್ಟುತ್ತಲೇ ಇರುತ್ತವೆ, ಎಂದಿದೆ ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗ. ಇದನ್ನೇ ಮುಂದÀರಿಸುತ್ತಾ,
ಮನಸು ಬೆಳೆದಂತೆಲ್ಲಾ ಹಸಿವು ಬೆಳೆಯುವುದಯ್ಯಾ\ತಣಿಸಲದನೊಗೆಯುವುದು ಬಗೆ ಬಗೆಯ ಯುಕ್ತಿ \\ ಮನುಜನೇಳಿಗೆಯದರಿನ್ ಆ ಮನಸಿನೇಳಿಗೆಗೆ\ ಕೊನೆಯೆಲ್ಲಿ ಚಿಂತಿಸೆಲೋ, ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು\ ಬೇಕೆನುತ ಬೊಬ್ಬಿಡುತಲಿಹ ಘಟವನಿದನು ಮಂಕುತಿಮ್ಮ, \ಹೆಸರು ಹೆಸರೆಂದು ಬಸವಳಿವುದೇಕಯ್ಯ,, ಕಸದೊಳಗೆ ಕಸವಾಗಿ ಹೋಹನಲೆ ನೀನು , ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು, ಮನದಿ” ಎಂದಿರುವ ಕಗ್ಗದ ಸಾಲುಗಳು ಇದೇ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.
ಲಕ್ಷಾಂತರ ಜೀವಿಗಳ ಪೈಕಿ ಈ ಜೀವಿಗಳು ಮನುಷ್ಯ ಜನ್ಮ ಪಡೆದಿರುವುದು ಆಯುಷ್ಯ ಪೂರ್ತಿ ಕೇವಲ ಲೌಕಿಕ ವಿಷಯಗಳ ಬಗ್ಗೆ ಶ್ರಮಿಸಿ ಹೋರಾಡಲೆಂದೇ ? ಅಥವಾ ಮನುಷ್ಯ ಸಾಧಿಸಬೇಕಾದ ಗುರಿ ಮತ್ಯಾವುದದರೂ ಉಂಟೆ ? ಎಂಬ ಚಿಂತನೆ ಮನಸ್ಸಿಗೆ ಬಂದಾಗ ಕೇಳಿಸುವುದು ಹಿಂದಿನ ಅನುಭವಿ ಮಹನೀಯರ ಉಪದೇಶ : “ಮಾನವ ಜನ್ಮ ದೊಡ್ಡದೋ ಹುಚ್ಚಪ್ಪಗಳಿರಾ, ಇದಕೆ ಹಾನಿ ಮಾಡಲು ಬೇಡಿ ಎಂದ ದಾಸ ಶ್ರೇಷ್ಠ ಪುರಂದರ ದಾಸರ ಬುದ್ದಿವಾದ, “ಜಂತೂನಾA ನರಜನ್ಮ ದುರ್ಲಭಮತಃ\ಶತಕೋಟಿ ಜನ್ಮ ಸುಕೃತೈಃ ಪುಣ್ಯೆöÊರ್ವಿನಾ ಲಭ್ಯತೇ\ ದುರ್ಲಭಂ ತ್ರಯಮೇವೈತದ್ದೇ ವಾನುಗ್ರಹಹೆತುಕಮ್\ಮನುಷ್ಯತ್ವಂ ಮುಮುಕ್ಷÄತ್ವಂ ಮಹಪುರುಷಸಂಶ್ರಯಃ” ಎಂದಿರುವ ವಿವೇಕ ಚೂಡಾಮಣಿ ಮನುಷ್ಯ ಜನ್ಮ ಪಡೆಯುವುದು ಬಹು ಕಷ್ಟ ಎಂಬ ಸರ್ವ ಕಾಲಿಕ ಸತ್ಯವನ್ನು ಸಾರಿದೆ. ಇಂತಹಾ ದುರ್ಲಭವಾದ ಜನ್ಮ ಪಡೆದ ಮನುಷ್ಟನ ಪರಮೋಚ್ಛ ಗುರಿ ಮೋಕ್ಷ ಸಾಧನೆಯೇ ಹೊರತು ಅಲ್ಪ ಕಾಲಿಕ ಸುಖ ಸಂತಸ ಆನಂದ ನೀಡಬಹುದಾದ ವಿಷಯಗಳಿಗಲ್ಲ ಎಂದಿದ್ದಾರೆ ಜ್ಞಾನಿಗಳು. ನಮ್ಮದು ಶುದ್ಧ ಬದುಕಾಗಬೇಕು. ಬದುಕಿನಲಿ ಬದ್ಧತೆ ಇರಬೇಕು. ನಮ್ಮದು ಬುದ್ಧನ ಬದುಕಾಗ ಬೇಕು. ನಮ್ಮ ಜೀವನ ಹೇಗಿರಬೇಕು ಎಂದರೆ, “ಹುಟ್ಟುವಾಗ ನಾ ಅಳುತ್ತಾ ಹುಟ್ಟಿದೆ, ಊರಿನ ಜನರು ನಗುತ್ತಿದ್ದರು, ಸಾಯುವಾಗ ನಾ ನಗುತ್ತಾ ಸಾಯಬೇಕು, ಎಷ್ಟು ಒಳ್ಳೆಯ ಮನುಷ್ಯ ಸತ್ತ ಎಂದು ಊರಿನ ಜನ ಅಳುತ್ತಿರಬೇಕು”ಹಾಗಿದ್ದರೆ ಅದು ಸಾರ್ಥಕ ಜೀವನ ಎನಿಸುತ್ತದೆ ಎಂದಿರುವ ಸಂತ ಶಿರೋಮಣಿ ಕಬೀರದಾಸರ ವಾಣಿ ಈ ಸನದರ್ಭದಲ್ಲಿ ನೆನಪಿಸಿಕೊಳ್ಳಬೇಕು
ಪ್ರತಿ ವ್ಯಕ್ತಿ ತನಗೆ ಆಸಕ್ತಿ ಅಭಿರುಚಿ ಇರುವ ಯಾವುದದರೊಂದು ರಂಗ, ಕ್ಷೇತ್ರದಲ್ಲಿ ತಾನೇ ನಿಗದಿಪಡಿಸಿಕೊಂಡ ಗುರಿ ಸಾಧಿಸಿ, ಹೆಸರು ಗಳಿಸಲು, ಗಣ್ಯ ಎನಿಸಿಕೊಳ್ಳಲು, ಉನ್ನತ ಸ್ಥಾನಮಾನ ಪಡೆಯಲು, ಸನ್ಮಾರ್ಗದಲ್ಲಿ ಶ್ರದ್ಧೆ, ನಿಷ್ಠೆ, ಛಲ, ಶ್ರಮ, ಪ್ರಾಮಾಣಿಕತೆ, ಅಧ್ಯಯನ ಅಗತ್ಯ. ಇವುಗಳು ನಮಗೆ ದೊರೆಯಬೇಕಾದರೆ ಈ ದಿಸೆಯಲ್ಲಿ ನಮ್ಮ ಕೆಲಸಗಳಲ್ಲಿ ಶ್ರದ್ದಾಸಕ್ತಿಗಳಿಟ್ಟು ಶ್ರಮಿಸಬೇಕು. “ಸತ್ಕರ್ಮಕ್ಕೆ ಸತ್ಫಲ, ಬಿತ್ತಿದಂತೆ ಬೆಳೆ, ಕಾಸಿಗೆ ತಕ್ಕ ಕಜ್ಜಾಯ” ಎಂಬAತೆ ಮನುಷ್ಯನ ಶ್ರಮ, ಪ್ರಯತ್ನದ ಜೊತೆಗೆ ದೈವಾನುಗ್ರಹವೂ ಜೊತೆಗೂಡಿದರೆ ನಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲು ಸಾಧ್ಯ. ರ‍್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ್ ।
ಮಾ ರ‍್ಮಫಲಹೇತರ‍್ಭೂರ‍್ಮಾ ತೇ ಸಂಘೋ ⁇ ಸ್ತ್ವರ‍್ಮಣಿ॥ 2-47 ಎಂಬ ಗೀತೋಪದೇಶ ಅನುಸರಿಸಿ ಕಾರ್ಯೋನ್ಮುಖರಾದರೆ ನಮಗೆ ದೊರಕಬೇಕಾದ್ದು ದೊರಕಿ ಸಂತಸ ಸಮಧಾನ ಶಾಂತಿಗಳು ನಮ್ಮದಾಗಬಹುದು.
************************************

Comments
Post a Comment