ಅಜ್ಜ-ಮೊಮ್ಮಗ ಸಂವಾದ 2095

ಅಜ್ಜ-ಮೊಮ್ಮಗ  ಸಂವಾದ  2095 

ಲೇಖನ  - ಜೆ. ಎಸ್. ಗಾಂಜೇಕರ, ಕುಮಟಾ 

"ಅಜ್ಜ  - ಮೊಮ್ಮಗ ನ  ನಡುವೆ  ನಡೆಯ ಬಹುದಾದ  ಸಂವಾದ   2095 ನೇ ಇಸವಿ ಯಲ್ಲಿ."



ಸೋಮು  : ಸುಮೀ , ಈಗಷ್ಟೇ  T. V. ಯಲ್ಲಿ   ಮಂಗಳ  ಗ್ರಹ ದಲ್ಲಿ  ಫ್ಲೋಟ್ ಮಾರುವುದಿದೆ ಯೆoದು ಜಾಹೀರಾತು  ಬಂದಿದೆ  ಕಣೇ. ನಾನು  ಅಪ್ಲಾಯ್  ಮಾಡಲೇ ? 

ಸುಮೀ  : ಬೇಗನೆ  ಅರ್ಜಿ  ಹಾಕಿ . ತಡಮಾಡಬೇಡಿ. ಇಲ್ಲಿ  ಕರೋನಾದಿಂದ  ಬಳಲಿ  ಸಾಯುವುದಕ್ಕಿಂತ   ಮಂಗಳ ಗ್ರಹದಲ್ಲಿ  ಮನೆ ಮಾಡಿ  ವಾಸಿಸುವುದೇ  ಲೇಸು.

ಸೋಮು  : ಸರಿ  ಕಣೆ ,  ಹಾಗೆ  ಮಾಡುತ್ತೇನೆ.

      ----  ಕೆಲವು  ವಾರದ  ಬಳಿಕ ----

ಸೋಮು  : ಸುಮೀ ,  ನನಗೆ  ಮಂಗಳಗ್ರಹ ದಲ್ಲಿ  ಫ್ಲೋಟ್  ಮಂಜೂರಾಗಿದೆಯೆoದು  ತಿಳಿಸಿದ್ದಾರೆ ಕಣೇ. ನಾವು  ಅಲ್ಲಿಗೆ  ಹೋಗಿ  ಮನೆ  ಕಟ್ಟಿಕೊಂಡು  ಹಾಯಾಗಿರೋಣ ! ಇಲ್ಲಿ  ಕರೋನಾದಿಂದ  ಬಳಲುವ  ಬದಲು  ಅಲ್ಲಿಗೆ  ಹೋಗುವುದೇ  ಲೇಸು  !

     ----- ಕೆಲವು  ತಿಂಗಳ  ತರುವಾಯ ----

ಸೋಮು  ಹಾಗೂ  ಸುಮೀ   ಮಂಗಳಗ್ರಹಕ್ಕೆ  ತಲುಪಿದರು.

ಅಲ್ಲಿಯ  ತಂಪಾದ  ವಾತಾವರಣ  ನೋಡಿ  ಖುಷಿ  ಯಾದರು.  ಅಲ್ಲಿಗೆ  ಅವರಿಗಿಂತ   ಮೊದಲೇ  ಜನರು  ಬಂದು  ಭವ್ಯವಾದ  ಮನೆ  ಕಟ್ಟಿಕೊಂಡು  ವಾಸವಾಗಿದ್ದರು.  ಹೀಗಾಗಿ  ಸೋಮು ಹಾಗೂ  ಸುಮೀಗೆ  ಬೇಸರವಾಗಲಿಲ್ಲ.  ಅವರ  ಪರಿಚಯ  ಮಾಡಿಕೊಂಡು  ಅವರ  ಸಹಾಯ ಪಡೆದು  ಭವ್ಯ  ಮನೆ ನಿರ್ಮಿಸಿ  ವಾಸಮಾಡಿದ.


ಮೊದಮೊದಲು  ಸಂತಸವಾಯಿತು.  ಕ್ರಮೇಣ  ತನ್ನ  ಬಂಧು - ಬಾಂಧವರೆಲ್ಲರ  ನೆನಪು  ಕಾಡತೊಡಗಿತು.  ಅವರೆಲ್ಲರೂ  ಹೇಗೆ  ಇದ್ದಾರೆಂಬ ಯೋಚನೆಯೂ  ಬರತೊಡಗಿತು.  ಕ್ರಮೇಣ  ಮಂಗಳ ಗ್ರಹದ  ವಾತಾವರಣಕ್ಕೆ  ಹೊಂದಿಕೊಂಡು  ಹೋದರು.

ಅಲ್ಲಿಗೆ  ಹೋದ  ವರ್ಷದಲ್ಲಿ  ಅವರಿಗೆ  ಒಂದು ಗಂಡು ಮಗು ಆಯಿತು.  ಆತನಿಗೆ  ಸುಕುಮಾರ  ಎಂದು ನಾಮಕರಣ ಮಾಡಿದರು.

ಆತನ  ಶಿಕ್ಷಣವು  ಮಂಗಳ ಗ್ರಹ ದಲ್ಲಿಯೇ  ಆಯಿತು.

ಮುಂದೆ  ಆತ ಅಲ್ಲಿಯ ಒಂದು ಕಂಪನಿಯಲ್ಲಿ  ನೌಕರಿ ಮಾಡತೊಡಗಿದ. ಸೋಮು ತನ್ನ ಮಗ  ಸುಕುಮಾರನಿಗೆ  ಆತ್ಮೀಯ ಗೆಳೆಯನ  ಮಗಳೊoದಿಗೆ  ಮದುವೆ ಮಾಡಿದರು.

ಸುಕುಮಾರನಿಗೆ  ಮಗ ಹುಟ್ಟಿದ. ಆತನಿಗೆ ರಾಜು ಎಂದು ನಾಮಕರಣ ಮಾಡಿದರು.  ಸೋಮು ಹಾಗೂ ಸುಮಿ  ಅಜ್ಜ - ಅಜ್ಜಿಯಾದರು.

ಇಲ್ಲಿಯ  ವಿಶೇಷತೆ  ಏನಂದರೆ  -- ಮಂಗಳ ಗ್ರಹಕ್ಕೆ  ಬಂದ   ಎಲ್ಲಾ  ಧರ್ಮ ದವರು  ಒಟ್ಟುಗೂಡಿ  ತಾವು  ಮಾನವಕುಲಕ್ಕೆ  ಸೇರಿದವರು  ಎಂದು  ಅನ್ಯೋನ್ಯರಾಗಿ  ಬಾಳತೊಡಗಿದರು.  ಶಾಲೆ ,  ಆಸ್ಪತ್ರೆ  ನಿರ್ಮಿಸಿ  ತಮ್ಮದೇ  ಆದ  ಕಾಯಿದೆ  -  ಕಾನೂನನ್ನು  ರಚಿಸಿ  ಎಲ್ಲರ  ಸಮ್ಮತಿ  ಪಡೆದು  ಚಾಚೂ  ತಪ್ಪದೇ  ಕಾರ್ಯರೂಪಕ್ಕೆ  ತರುತ್ತಿದ್ದರು.

ನ್ಯಾಯ  ಸಮ್ಮತವಾದ  ಜೀವನ  ನಡಿಸುತ್ತಿದ್ದರು.

ಹೀಗಾಗಿ,  ಯಾವ ಪಕ್ಷ - ರಾಜಕೀಯ ಕ್ಕೆ  ಒಳಗಾಗದೇ  ಬಡವ  - ಬಲ್ಲಿದ  ಭೇದ  ವಿಲ್ಲದೇ  ಸಮಾನರಾಗಿ  ಬದುಕುವಂತಾದರು. 

ವರ್ಷಗಳು ಉರುಳಿದವು.

2095 ನೇ  ಇಸವಿಯಲ್ಲಿ  ಸೋಮುನ  ವಯಸ್ಸು  75 ವರ್ಷ.  ಆತನ  ಮೊಮ್ಮಗ  ರಾಜು ನ  ವಯಸ್ಸು  10 ವರ್ಷ. ಮಂಗಳಗ್ರಹ ದಲ್ಲಿ  ಹುಟ್ಟಿ  ಬೆಳೆದವನು.

ಆಗ  ಅಜ್ಜ  - ಮೊಮ್ಮಗ ನ  ನಡುವೆ  ನಡೆಯ ಬಹುದಾದ  ಸಂವಾದ  2095 ನೇ ಇಸವಿ ಯಲ್ಲಿ  :

ಮೊಮ್ಮಗ  :  ಅಜ್ಜಾ ,  ನೀನು  ಹಾಗು  ಅಜ್ಜಿ  ಪ್ರಥ್ವಿ  ಲೋಕದವರೆಂದು  ಕೇಳಲ್ಪಟ್ಟೆ  ನಿಜವೇ ?

ಅಜ್ಜ  : ಹೌದಪ್ಪಾ  ರಾಜು.  ನಾವು  ಪ್ರಥ್ವಿ ಯಲ್ಲಿ  ವಾಸವಾಗಿದ್ದವರು.  ಅಲ್ಲಿ  ನಿನ್ನ  ಮುತ್ತಜ್ಜ  - ಮುತ್ತಜ್ಜಿ  ವಾಸವಾಗಿದ್ದರು. ಈಗ ಅವರು parvataಅಲ್ಲಿ  ನಮ್ಮ  ಸ್ವಂತ  ಮನೆಯಿದೆ.

ಮೊಮ್ಮಗ  : ನೀವು  ಇಲ್ಲಿಗೆ  ಬರಲು  ಕಾರಣವೇನು ?

ಅಜ್ಜ  : ರಾಜು,  ಪ್ರಥ್ವಿಯಲ್ಲಿ  2019ಕ್ಕೆ  ಕರೋನಾ ಎಂಬ  ಮಹಾ  ರೋಗ  ಹರಡಿತ್ತು.  ಆಗ  ಆ  ರೋಗಕ್ಕೆ ಬಹಳಷ್ಟು  ಮಂದಿ  ತುತ್ತಾದರು.  ಆ  ರೋಗಕ್ಕೆ  ನನ್ನ  ತಂದೆ - ತಾಯಿಯವರೂ ( ನಿನ್ನ  ಮುತ್ತಜ್ಜ - ಮುತ್ತಜ್ಜಿ ) ನಿಧನರಾದರು. ಕೆಲವು  ಸಂಬಂಧಿಕರೂ  ಬಲಿ ಯಾದರು. ಹೀಗಾಗಿ   ನಾನು ಹಾಗೂ ನಿನ್ನಜ್ಜಿ  ಇಲ್ಲಿಗೆ  ಬರಬೇಕಾಯಿತು.

ಮೊಮ್ಮಗ ರಾಜು  :  ಅಜ್ಜಾ ,  ನನ್ನನ್ನು  ಒಮ್ಮೆ  ಪ್ರಥ್ವಿಗೆ  ಕರಕೊಂಡು  ಹೋಗು. ನಾನೂ  ಪ್ರಥ್ವಿ ನೋಡಬೇಕಾಗಿದೆ.

ಅಜ್ಜ  : ಖಂಡಿತ  ರಾಜು  ಕರೆದುಕೊಂಡು  ಹೋಗುವೆ. ಅಲ್ಲಿ ಸುಂದರವಾದ ಪ್ರೇಕ್ಷಣೀಯ  ಸ್ಥಳಗಳಿವೆ. ಅಲ್ಲಿಯ ನಿಸರ್ಗ ಸೌಂದರ್ಯವನ್ನು  ತೋರಿಸುವೆ. ಗುಡ್ಡ, ಬೆಟ್ಟ, ನದಿ,ಪರ್ವತಗಳಿವೆ. ಭವ್ಯವಾದ ದೇಗುಲಗಳಿವೆ. ಇದೆಲ್ಲವನ್ನು ನೋಡುವೆ.

ರಾಜುನಿಗೆ  ತುಂಬಾ ಖುಷಿಯಾಯಿತು. ತನ್ನ ಅಜ್ಜ - ಅಜ್ಜಿ ವಾಸವಾಗಿದ್ದ ಸ್ಥಳ  ನೋಡಲು ಹೋಗುವೆ ಎಂದು ಹಿರಿಹಿರಿ ಹಿಗ್ಗಿ  ಕುಣಿದ.





Comments