ಎಷ್ಟು ಗಳಿಸಿಟ್ಟೊಡಮ್ ನಿನಗೆ ದಕ್ಕುವುದೆಷ್ಟು . . . ! ?
ಲೇಖಕರು : ಎಂ ಆರ್ ವೆಂಕಟರಾಮಯ್ಯ
ಶೀರ್ಷಿಕೆಯಲ್ಲಿನ ಸಾಲನ್ನು ಡಿ ವಿ ಜಿ ಯವರ ಮಂಕು ತಿಮ್ಮನ ಕಗ್ಗದಿಂದ ಆರಿಸಿಕೊಳ್ಳಲಾಗಿದೆ. ಶೀರ್ಷಿಕೆಯಲ್ಲಿರುವ “ನಿನಗೆ ದಕ್ಕುವುದೆಷ್ಟು?” ಎಂಬ ಪ್ರಶ್ನೆಗೆ ಹೆಚ್ಚು ಜನರ ಉತ್ತರ ಎಂದರೆ “ಇದೇನ್ ಪ್ರಶ್ನರ‍್ರೀ ! ನಾವು ಗಳಿಸಿದ್ದೆಲ್ಲಾ ನಮ್ಮದೇ ಹೊರತು ಭೇರೆಯವರದು ಹೇಗಾಗುತ್ತೆ ?
. ನಮ್ಮ ಶ್ರಮದ ಗಳಿಕೆಯನ್ನು ಬೇರೆಯವರ ವಶವಾಗಲು ನಾವ್ಯಾಕ್ ಬಿಡ್ತೇವೆ ? ಯಾರೂ ಬಿಡೋದಿಲ್ಲ. ಒಂದು ವೇಳೆ ನಾವೇನಾದರೂ ಪುಣ್ಯ ಸಂಪಾದನೆಗೋ ದಯೆ ಧರ್ಮ ಕನಿಕರಕ್ಕೋ ನಮ್ಮ ಗಳಿಕೆಯ ಪೈಕಿ ಒಂದಷ್ಟನ್ನು ಅರ್ಹರಿಗೆ ನೀಡೋಣವೆಂಬ ಮನಸ್ಸು ನಮಗಿದ್ದರೂ ನಮ್ಮ ಮಕ್ಕಳು ಇದಕ್ಕೆ ಸಮ್ಮತಿಸುತ್ತಾರೆಯೇ | ನೋ ಚಾನ್ಸ್. ದಾರೀಲಿ ಹೋಗೋರಿಗಲ್ಲಾ ದಾನ ಕೊಟ್ಟು ನಮ್ಮನ್ನು ದಾರಿಯಮೇಲೆ ಹಾಕ್ತೀಯಾ ? ನಿನ್ನ ಗಳಿಕೆಯೇನು ಮುಫತ್ತಾಗಿಯೋ, ಸುಲಭವಾಗಿಯೋ, ದಾನ ಪಡೆದದ್ದೋ ಅಲ್ಲ. ನೀನೇದರೂ ಇಂತಹಾ ತಿಕ್ಕಲು ಆಲೋಚನೆ ಮಾಡುವುದಾದರೆ ಈಗಲೇ ಆಸ್ತಿಯೆಲ್ಲಾ ಮಕ್ಜಳಿಗೆ ಭಾಗ ಮಾಡಿ ಕೊಟ್ ಬಿಡು ಆಮೇಲೆ ನಿನ್ನ ಭಾಗದ ಆಸ್ತೀನ ದಾರೀಲಿ ಹೋಗೋ ದಾ¸ಯ್ಯನಿಗೆ ಕೊಟ್ಟು ಅವನ ಕೈಲಿ ಮುಖಕ್ಕೆ ಬಣ್ಣದ ನಾಮ ಇಡಿಸಿಕೊಂಡು ಗೋವಿಂದ, ಗೋವಿಂದ, ಗೋವಿಂದ ಆಂತಾ ಜಾಗಟೆ ಭಾರಿಸಿಕೊಂಡು ಬೀದೀಲಿ ಹೋಗು ಆಂತಾರಷ್ಟೇ.಼ ಹೀಗಾಗಿ ನನ್ನದೇ ಗಳಿಕೇಲಿ ನಾನೇ ದಾನ ಸಹಾ ಕೊಡಲು ಅವಕಾಶವಾಗದು ಅಂತಾರೆ ಇವರು.
ಇದೆಲ್ಲದರ ಒಟ್ಟಾರೆ ನೀತಿ ಎಂದರೆ “ನಿನ್ನ ಗಳಿಕೆ ಸಧ್ಯಕ್ಕೆ ನಿನ್ದು, ನಂತರದಲ್ಲಿ ನಿನ್ನ ಮಕ್ಕಳದೋ ವಾರಸುದಾರರದೋ ಆಗುತ್ತೆ”.
ಈಗ ಎರಡನೆಯ ವರ್ಗದವರ ಪ್ರತಿಕ್ರಿಯೆ : ‘ಋಣಾನುಬಂಧರೂಪೇಣ’ ಎಂಬAತೆ ಋಣವಿದ್ದಷ್ಟು ಮಾತ್ರ ನಮಗೆ ದಕ್ಕುತ್ತೆ. ನಮಗೆಷ್ಟು ಸಿಗಬೇಕು ಅಂತಾ ದೇವರ ಇಚ್ಚೆಯಿರುತ್ತೊ ಅಷ್ಟು ಮಾತ್ರ ನಮಗೆ ಸಿಕ್ಕಿ ಉಳಿಯುತ್ತೆ., ಸಮುದ್ರಕ್ಕೆ ಹೋಗಿ ಮೊಣಕಾಲು ಉದ್ದದ್ಟು ಆಳದ ನೀರಿಗೆ ಇಳಿದರೂ ನಮಗೆ ಸಿಗುವುದು ಕೇವಲ ಒಂದು ಬೋಗಸೆ ನೀರಷ್ಟೇ ಅಲ್ಲವೇ ? “ಎಷ್ಟು ನೀನುಂಡರೇA ಪುಷ್ಟಿ ಮೈಗಾಗುವುದು ? ಹೊಟ್ಟೆ ಜೀರ್ಣೀಸುವಷ್ಟೇ ಮಿಕ್ಕುದೆಲ್ಲಾ ಕಸ” ಎಂಬ ಡಿ ವಿ ಜಿ ಯವರ ಕಗ್ಗದ ಸಾಲುಗಳಂತೆ ನಾವೆಷ್ಟು ಊಟಮಾಡಿದರೂ ಹೊಟ್ಟೆ ಜೀರ್ಣೀಸಿಕೊಳ್ಳುವಷ್ಟು ಮಾತ್ರ ಬಳಕೆಯಾಗುತ್ತೆ. ಉಳಿದಿದ್ದೆಲ್ಲಾ ಕಸವಾಗಿ ದೇಹದಿಂದ ಹೊರಕ್ಕೆ ಹೋಗುತ್ತೆ. ಹೀಗೇನೇ “ಎಷ್ಟು ಗಳಿಸಿಟ್ಟೊಡಮ್ ನಿನಗೆ ದಕ್ಕುವುದೆಷ್ಟು . . . ! ? ಎಂಬ ಪ್ರಶ್ನೆಗೆ ಉತ್ತರವಾಗುತ್ತದೆ. ಶೀರ್ಷಿಕೆಯಲ್ಲಿನ ಸಾಲಿನ ಬಗ್ಗೆ ಇದು ಎರಡನೆಯ ವರ್ಗದವರ ಪ್ರತಿಕ್ರಿಯೆಯಾಗಬಹುದು
ಈಗ ಮತೆ ಮೊದಲನೆ ವರ್ಗದವರ ಅನಿಸಿಕೆ ಬಗ್ಗೇನೇ ಚರ್ಚಸೋಣ. “ಎಷ್ಟು ಗಳಿಸಿಟ್ಟೊಡಮ್ ನಿನಗೆ ದಕ್ಕುವುದೆಷ್ಟು . . . ! ? ಋಣಾನುಬಂಧ ರೂಪೇಣ” ಎಂಬ ತತ್ವಗಳನ್ನೇ ನಂಬಿಕೊAಡು಼ ನಮಗೆಷ್ಟು ದಕ್ಕಬೇಕೋ ಅಷ್ಟೇ ದಕ್ಕೋದು ಅಂತಾ ಸಂಪಾದಿಸೋ ಪ್ರಯತ್ನ ಮಾಡದೆ “Àನಮಗೆ ಸಿಕ್ಕಿದ್ದು ಸಾಕಪ್ಪಾ, ನಾ ತೃಪ್ತ, ಇನ್ನು ನನಗೆ ಬೇಡ” ಎಂದು ಸುಮ್ಮನೆ ಕುಳಿತರೆ ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ, ಕುರಿ, ಮಕ್ಕಳಿಗೇನೂ ಆಸ್ತಿ ಮಾಡದೇ ಕಣ್ ಮುಚ್ ಕೊಂಡರೆ ಮುಂದೆ ನಮ್ಮ ಬಗ್ಗೆ ಅವರೇನ್ ಅನ್ನಬಹುದು ? “ ಥೂ, ನಮ್ಮ ಹಿರಿಯರು ಅನ್ನಿಸಿಕೊಂಡವರು ನಮಗೇನೂ ಆಸ್ತಿ ಮಾಡಿದೆ ಕಣ್ ಮುಚ್ ಕೊಂಡ್ರು, ಅವರೆಲ್ಲಾ ವೇಸ್ಟ್ ಬಾಡಿಗಳು ಅಂತಾ ನಮ್ಮನ್ ಆಡಿ ಕೊಳ್ಳೋದಿಲ್ಲವಾ ?
ಅದಕ್ಕೇ ಅವರ ಬಾಯಿಗೆ ನಾವು ಸಿಗದೆ ‘ಗಾಳಿ ಬಂದಾಗ ತೂರಿಕೋ, ಬೀಟ್ ದಿ ಐರನ್ ವೈಲ್ ಇಟ್ ಈಸ್ ಹಾಟ್”ಎಂಬ ಗಾದೆಗಳಂತೆ ನಮಗೆ ಅವಕಾಶ ಸಿಕ್ಕಾಗ ಹೆಚ್ಚು ಹೆಚ್ಚು ಆಸ್ತಿ ಸಂಪಾದಿಸಿಡಬೇಕು. ಬರಲಿ, ಇನ್ನೂ ಬರಲಿ, ಮತ್ತಷ್ಟು, ಮಗದಷ್ಟು ರ‍್ತಾಯಿರಲಿ, ‘ಬೇಕು, ಬೇಕು ಅನ್ನೋದು ನಮ್ಮ ನಿತ್ಯ ಜಪವಾಗಬೇಕು†಼ “ಇದಂ ಲಬ್ಧಮಿದಂ ನಷ್ಟಮಿದಂ ಲಪ್ಸೆöÊ ಪುನರ್ಧಿಯಾ\ ಎಂಬAತೆ, ಇಷ್ಟು ಬಂತು, ಇಷ್ಟು ವೆಚ್ಚವಾಯ್ತು, ವೆಚ್ಚವಾಗಿದ್ದನ್ನು ಮತ್ತೆ ಹೇಗೆ ಸಂಪಾದಿಸೋದು ಎಂಬುದು ನಮ್ಮ ನಿತ್ಯ ಆಲೋÃಚನೆಯಾಗಬೇಕು.಼ ಎನ್ನುವವರು ಇವರು.
ಸಾಧಾರವಾಗಿ ಇಂತಹಾ ಸಂದರ್ಭದಲ್ಲಿ ಜನರ ಬಾಯಲ್ಲಿ ಬಲು ಸುಲಭವಾಗಿ ಹೊರಬರಬಹುದಾದ ಒಂದು ಸತ್ಯ ವಾಕ್ಯ ಎಂದರೆ “ ಎಷ್ಟು ಸಂಪಾದಿಸಿದರೇನ್ರೀ ಪ್ರಯೋಜನ ? ಆ, ಎಲ್ಲರಿಗೂ ದಕ್ಕಬೇಕಾದ್ದು ಒಂದೇ. ಅದೇ 6 * 3 ಅಡಿ ಜಾಗ, ಅದು ಸಿಕ್ಕೇ ಸಿಗುತ್ತೆ, ವೃಥಾ ಕಷ್ಟ ಪಟ್ಟು ಆರೋಗ್ಯ ನೆಮ್ಮದಿ ಕಳಕೊಂಡು ನರಳೋದು ಯಾಕೆ ! ಅನ್ನೋದ್ ಜನ ಸಾಮಾನ್ಯರ, ಅಧ್ಯಾತ್ಮಗಳ ಅಂಬೋಣ. ನೀವೇನಂತೀರಿ ಸರ್ ! ಈ ಮಾತು ಸರ್ವ ಕಾಲಿಕ ಸತ್ಯ ವಲ್ಲವೇ ! ಹೀಗಂದಾಗ ಈ ಮಾತನ್ನು ಸಮರ್ಥಿಸಲು ಎಂತಹುದಾದರೂ ಉದಾಹರಣೆ : ಪ್ರಸಂಗ ಉಂಟೆ ಎಂದಿರಾ !
ೆಲ್ ಕೌಂಟ್ ಲೆವ್ ನಿಕೊಲಾಯೆವಿಚ್ ಎಂಬ ಜನ್ಮ ನಾಮಧೇಯದೊಂದಿಗೆ 1828- 1910 ರ ಼ ನಡುವೆ ಜೀವಿಸಿದ್ದ ರಷ್ಯಾದ ಸರ್ವ ಕಾಲಿಕ ಶ್ರೇಷ್ಠ ಬರಹಗಾರ, ಪ್ರಭಾವಶಾಲಿ ಹಾಗೂ ನೋಬೆಲ್ ಶಾಂತಿ ಪ್ರಶಸ್ತಿ ಪಡೆದ ‘ಲಿಯೋ ಟಾಲ್ ಸ್ಟಾಯ್ ರವರು ಬರೆದ “ಊoತಿ muಛಿh ಟಚಿಟಿಜ ಜoes ಚಿ mಚಿಟಿ ಟಿeeಜ” ಎಂ¨ ಸಣ್ಣ ಕತೆ ಹೀಗಿದೆ :
“ಆ ರೈತ ತನ್ನ ನೆರೆಯವರ ಬಳಿ ಇದ್ದ ಬಹಳಷ್ಟು ಭೂಮಿ ನೋಡಿ, ಅಯ್ಯೋ. ಇಷ್ಟೊಂದ್ ಭೂಮಿ ನನಗಿಲ್ಲವಲ್ಲಾ ! ಇಷ್ಟು ತನ್ನಲ್ಲಿದ್ದಿದ್ದರೆ ತಾನೆಷ್ಟೊಂದು ಬೆಳೆ ಬೆಳೆದು ಹೆಚ್ಚು ಹೆಚ್ಚು ಹಣ ಸಂಪಾದಿಸಬಹುದಾಗಿತ್ತಲ್ಲವಾ ! ಅಂತಾ ತನ್ನ ಅಸಮಾಧಾನ ತೋಡಿಕೊಂಡ ತನ್ನ ಮಿತ್ರನೊಡನೆ, ್ತ. ಇದಕ್ಕೆ ಪ್ರತಿಕ್ರಿಯಿಸಿದ ಆ ಮಿತ್ರ, “ನೋಡಪ್ಫಾ, ನೀ ಎಷ್ಟು ವರ್ಷ ಇಲ್ಲೇ ಇದ್ದರೂ ಹೆಚ್ಚು ಜಮೀನು ಕೊಳ್ಳಲಾಗೊಲ್ಲ, ಇಲ್ಲಿಂದ ಮುಂದೆ ಸ್ವಲ್ಪ ದೂರದಲ್ಲಿ ಒಂದು ಪರ್ವತ ಪ್ರದೇಶವಿದೆ. ಅಲ್ಲಿ ದೊಡ್ಡ ಜಮೀನುದಾರರು ಬೇಕಾದಷ್ಟು ಜಮೀನು ಹೊಂದಿದ್ದಾರೆ. ಇವರೆಲ್ಲಾ ಮೋಜು ಮಸ್ತೀಲಿ ಕಾಲ ಕಳೀತರ‍್ತಾರೆ, ನೀ ಅವರ ಬಳಿ ಹೋಗಿ ವ್ಯಾಪಾರ ಮಾಡಿದರೆ ನೀ ಅಗ್ಗದ ಬೆಲೆಗೆ ಹೆಚ್ಚು ಜಮೀನು ಕೊಳ್ಳಬಹುದು ಎಂಬ ಸಲಹೆ ನೀಡಿದ. ಇದನ್ನು ಕೇಳಿದ ನಮ್ಮೀ ರೈತನ ಬಾಯಲ್ಲಿ ನೀರೂರಿತು. ತನ್ನ ಕುಟುಂಬದವರಿಗೂ ಈ ವಿಚಾರ ತಿಳಿಸದೆ ಮರು ದಿನವೇ ಆ ಪರ್ವತ ಪ್ರದೇಶದತ್ತ ಪಯಣಿಸಿದ
ಅಲ್ಲಿನ ಜಮೀನುದಾರರÀ ಮುಖ್ಯಸ್ಥನಿಗೆ ತಾನು ಕೊಂಡು ಹೋಗಿದ್ದ ಆಕರ್ಷಕ ಬಹುಮಾನ ಗಳನ್ನು ನೀಡಿ ತಾನು ಜಮೀನು ಖರೀದಿಸಲು ಬಂದಿರುವುದಾಗಿ ತಿಳಿಸಿದಾಗ, ಅಲ್ಲಿನ ಜಮೀನುದಾರರ ಮುಖ್ಯಸ್ಥ 1 ದಿನಕ್ಕೆ 1000 ರೂಬೆಲ್ ಹಣÀ ನೀ ನೀಡಿ ನೀ ಎಷ್ಟು ದೂರದವರೆಗೂ ನಡೆಯ ಬಲ್ಲೆಯೋ ಅಷ್ಟು ಭೂಮಿ ನಿನದಾಗುತ್ತದೆ. ನೀನು ಪಯಣ ಶುರು ಮಾಡಿದ ಪಾಯಿಂಟ್‌ನಿAದ ಕೊನೆ ಸೇರುವವರೆಗಿನ ಪಾಯಿಂಟ್‌ವರೆಗಿನ ಜಾಗವನ್ನು ಗುರುತು ಮಾಡಬೇಕು. ಆದರೆ ನೀ ಮರೆಯದಿರಬೇಕಾದ ಷರತ್ ಎಂದರೆ Éಸಂಜೆ ಸೂರ್ಯ ಮುಳುಗುವುದರೊಳಗೆ ನೀ ಬೆಳಗ್ಗೆ ಹೊರಟ ಪಾಯಿಂಟ್ ಜಾಗವನ್ನು ಸೇರಿ ಕೊಳ್ಳಬೇಕು. ಅಕಸ್ಮಾತ್ ನೀ ಸೂರ್ಯ ಮುಳುಗುವುದರೊಳಗೆ ಪಯಣದ ಪ್ರಾರಂಭದ ಪಾಯಿಂಟ್ ತಲುಪದಿದ್ದರೆ ಭೂಮಿ ಹಾಗೂ ನೀ ಕೊಟ್ಟಿದ್ದ 1000 ರೂಬೆಲ್ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂಬ ಷರತ್ತನ್ನು ಆ ಜಮೀನುದಾರರ ಮುಖ್ಯಸ್ಥ ರೈತನಿಗೆ ತಿಳಿಸಿದ.
ನಮ್ಮೀ ರೈತ ಹೆಚ್ಚು ಜಮೀನನ್ನು ತನದಾಗಿಸಿಕೊಳ್ಳಬೇಕೆಂಬ ಆತೀ ಆಸೆಯಲ್ಲಿ ಮುಳುಗಿದ್ದ ಕಾರಣ ನಾ ಹೆÀಚ್ಚು ದೂರ ಚಲಿಸಿ ನಂತರ ಸೂರ್ಯ ಮುಳುಗುವುದರೊಳಗೇ ನಾ ಹಿಂತಿರುಗಬಹುದು ಎಂಬ ಧೈರ್ಯ ವಹಿಸಿ ಉತ್ಸಾಹದಿಂದಲೇ ಪ್ರಯಾಣ ಪ್ರಾರಂಭಿಸಿದ.
ತಾನು ಪಯಣಿಸಿದ ದಾರಿಯ ಉದ್ದಕ್ಕೂ ಗುದ್ದಲಿಯಿಂದ ಗುರುತು ಮಾಡುತ್ತಾ ಮುಂದೆ ಬೇಗ ಬೇಗ ಹೆಜ್ಜೆ ಹಾಕಿ ನಡೆದ. ಸೂಂiÀið ಮಧ್ಯಾಹ್ನ ನೆತ್ತಿಯ ಮೇಲೆ ಬಂದಾಗಲೂ ಇವನು ಗುದ್ದಲಿಯಿಂದ ಗುರುತುಮಾಡುತ್ತಾ ಮುನ್ನಡೆÉಯುತ್ತಲೇ ಇದ್ದ. ಸಂಜೆ ಆಗುತ್ತಾ ಬಂದಿದೆ ಎಂದು ಇವನಿಗೆ ಅನ್ನಿಸಿದಾಗ ಇವನು ವಾಪಸ್ ಹೊರಡುವ ನಿರ್ಧಾರ ಮಾಡಿ ದೊಡ್ಡ ಹೆಜ್ಜೆಗಳನ್ನು ಹಾಕತೊಡಗಿದ.† ಕೆಲ ನಿಮಿಷಗಳಲ್ಲೇ ಓಡುತ್ತಾ ಪಯಣಿಸಿದ, ಆಕಾಶದಲ್ಲಿ ಸೂರ್ಯ ಮುಳುಗಿದ ಎನುವಷ್ಟರಲ್ಲೇ ಇವನು ಬೆಳಗ್ಗೆ ಹೊರಟ ಜಾಗ ತಲುಪಿ, “ಓಹ್ ! ಪಂದ್ಯದಲ್ಲಿ ನಾ ಗೆದ್ದೆ” ಎಂದು ಕೇಕೆ ಹಾಕುತ್ತೆ ನಿಂತಿದ್ದವನು, ಇದ್ದಕಿದ್ದಂತೆಯೇ ನೆಲಕ್ಕೆ ದೊಪ್ಪನೆ ಬಿದ್ದ, ಮೆಲೇಳಲಾರದೆ ಕಣ್ ಮುಚ್ಚಿ ಶಾಶ್ವತವಾಗಿ ಚಿರ ನಿದ್ರೆಗೆ ಜಾರಿದ.
ಅಯ್ಯೋ ! ಎಂತಹಾ ದುರದೃಷ್ಟವಂತ ಇವನು ! ಕೈಗೆ ಬಂದ ತುತ್ತು ಬಾಯಿಗೆ ಬರದಾಯಿತು ಇವನಿಗೆ ಎಂದು ಅಲ್ಲಿದ್ದ ವರುÀ ಮರುಗಿದರು. ಇವನ ಅಂತ್ಯ ಸಂಸ್ಕಾರಕ್ಕೆ ಆಳುಗಳು ನೆಲ ಗುಳಿ ತೋಡಿದ್ದು 6 ಆಡಿ ಉದ್ದ 3 ಅಡಿ ಅಗಲಕ್ಕೆ. ವಾಸ್ತವವಾಗಿ ಇವನಿಗೆ ಅಗತ್ಯವಿದ್ದ ಜಾಗ ಎಂದರೆ ಈ 6 * 3 ಅಡಿ ಜಾಗವಷ್ಞೇ ಎಂದು ಅಲ್ಲಿದ್ದವರು ಸತ್ತ ರೈತನಿಗೆ ಶ್ರದ್ಧಾಂಜಲಿ ಅರ್ಪಿಸಿದರು ಎಂಬುದರೊAದಿಗೆ ಲಿಯೋ ಟಾಲ್ ಸ್ಟಾಯ್ ಅವರು ಬರೆದ ಈ ಸಣ್ಣ ಕತೆ ಮುಕ್ತಾಯಗೊಂಡಿದೆ.
ಇದು ಎಂದೋ ನಡೆದ, ಸಣ್ಣ ಮಕ್ಕಳಿಗೆ ಹೇಳಬಹುದಾದ ಸಣ್ಣ ಕತೆಯಷ್ಟೇ. ಇದರಿಂದ ಕಲಿಯಲೇನಿದೆ ಹಿರಿಯರಿಗೆ, ! ಎಂ¨ ನಿರ್ಲಕ್ಷö್ಯ ಸಲ್ಲದು ನಿಸರ್ಗದಲ್ಲಿ, ನಮ್ಮೆಲ್ಲರ ಜೀವನದುದ್ದಕ್ಕೂ ನಡೆಯುವ ಪ್ರತಿ ಘಟನೆಯಲ್ಲೂ ಮನುಷ್ಯ ಕಲಿಯ ಬೇಕಾದ ನೀತಿ ಪಾಠ ಅಡಗಿಯೇ ಇರುತ್ತದೆ. ಆದರೆ ಇದನ್ನು ಕಾಣಬಹುದಾದ ಕಣ್ ದೃಷ್ಟಿ, ಕಂಡಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದ ಮನಸಿರಬೇಕಷ್ಟೇ.
“ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ” ಎಂಬ ತತ್ವದಂತೆ ನಾವು ಸುಖವಾಗಿ ಜೀವನ ನಡೆಸಲು ಬೇಕಾದ ಸೌಕರ್ಯಗಳಿಗೆಲ್ಲಾ ಒಂದು ಮಿತಿಯಿದೆ, “ನೀ ಎಷ್ಟುಂಡರೇA ? ಪುಷ್ಟಿ ಮೈಗಾಗುವುದು ? ನಿನಗೆ ದಕ್ಕುವುದೆಷ್ಟು ? ಹೊಟ್ಟೆ ಜೀರ್ಣಿಸುವಷ್ಟೇ ಎಂದಿರುವ ಡಿ ವಿ ಜಿಯವರ ಕಗ್ಗದ ಸಾಲುಗಳು ಈ ಸಂದರ್ಭದಲ್ಲಿ ಗಮನಾರ್ಹ
ಪ್ರತಿಯೊಂದು ಚಟುವಟಕೆ\ ವಸ್ತು, ವಿಷಯಗಳನ್ನು ನಮ್ಮ ಬಳಕೆಗೆ ಬಳಸಿಕೊಳ್ಳುವಾಗ ಅದರದರದೇ ಆದ ಇತಿ ಮಿತಿಗಳಿರುತ್ತವೆ ಈ ಇತಿ ಮಿತಿಗಳನ್ನು ಗಮನದಲ್ಲಿರಿಸಿ ನಡೆದರೆ ನಮಗೆ ಸಿಗುವುದು ಗರಿಷ್ಠ ಸುಖ, ಸಂತಸ, ಹಿತ.
ಸೃಷ್ಟಿಯಲ್ಲಿನ ಪ್ರತಿ ಚರಾ ಚರಾ ವಸ್ತುವಿಗೂ ಆದಿ ಇದ್ದಂತೆ ಅಂತ್ಯವಿದ್ದೇ ಇರುತ್ತದೆ. ಹೀಗೇನೇ ಮನುಷ್ಯನಿಗೂ ‘ಜಾತಸ್ಯ ಮರಣಂ ಧೃವಂ’ ಎಂಬAತೆ ಜನನದ ನಂತರ ಮರಣ ತಪ್ಪಿದ್ದಲ್ಲ. ಪಂಚ ಭೂತಗಳಿಂದಾದ ಈ ದೇಹ ನಶ್ವರ, ಅಶಾಶ್ವತ. ‘ಶತಕೋಟಿ ರಾಯರುಗಳು ಆಳಿದ ನೆಲವ ನನ್ನದೆನ್ನುತ್ತ ಶಾಸನವ ಬರೆಸಿ, ಬಿನ್ನಾಣದ ಮನೆ ಕಟ್ಟಿ , ಕೋಟೆ ಕೊತ್ತಲವನಿಕ್ಕಿ, ಚೆನ್ನಿಗನು ಅಸುವಳಿಯೆ, ಹೊರಗೆ ಹಾಕುವರೋ ‘ ಎಂದು ದಾಸ ಶ್ರೇಷ್ಠ ಪುರಂದರ ದಾಸರು ಉಲ್ಲೇಖಿಸಿರುವ ಜೀವನ ಸತ್ಯ ಮನುಷ್ಯ ಹೆಜ್ಜೆ ಇಡಬೇಕಾಧಾಗ ಪಾಲಿಸಬೇಕಾದ ನೀತಿ಼ ಎಂತಹುದು ಎಂಬುದಕ್ಕೆ ದಾಸರ ಈ ನುಡಿಗಳು ಉದಾಹರಣೆಯಾಗಿದೆ
‘ಅನಿತ್ಯಾಣಿ ಶರೀರಾಣಿ ವಿಭವೋ ನೈವ ಶಾಶ್ವತಃ ನಿತ್ಯಂ ಸನ್ನಿಹಿತೋ ಮೃತ್ಯುಃ ಕರ್ತವ್ಯೋಃ ಧರ್ಮ ಸಂಗ್ರಹಃ’ ಪ್ರತಿ ಘಳಿಗೆಯಲ್ಲೂ ಮೃತ್ಯವು ಹತ್ತಿರ ಬರುತ್ತಿರುತ್ತದೆ. ನಮ್ಮೊಂದಿಗೆ ಸದಾ ನೆರಳಾಗಿ ಹಿಂಬಾಲಿಸುವುದು ಈ ನಮ್ಮ ಶರೀರ ಯಾವ ಕ್ಷಣದಲ್ಲಾದರೂ ನಾಶವಾಗಬಹುದು. ನಮ್ಮ ಜೀವಿತಾವಧಿಯಲ್ಲಿ ಏನೆಲ್ಲಾ ಎಷ್ಟೆಲ್ಲಾ ಸಂಪಾದಿಸಿದ್ದರೂ ಇಹಲೋಕವನ್ನು ಬಿಡುವಾಗ ಇವು ಯಾವುವೂ ನಮ್ಮೊಂದಿಗೆ ಬರುವುದಿಲ್ಲ. ನಮ್ಮೊಂದಿಗೆ ಬರುವುದು ನಾವು ಮಾಡಿದ ಪಾಪ ಪುಣ್ಯಗಳಷ್ಟೇ† ಎಂಬ ಸತ್ಯವನ್ನು ಸದಾ ನಾವು ನೆನಪಿಟ್ಟು ಜೀವಿsiಸಿದರೆ ಅದು “ವಿವೇಕಯುತ\ಸಾರ್ಥಕ ಜೀವನ ಎನಿಸಿಕೊಳ್ಳುತ್ತದೆ.
&&&&&&&&&&&&&&&&&&&&&&&&&&&&&&&&&&&&ಸಸಸಸಸ
Comments
Post a Comment