ಗೌರಿ ಗಣೇಶ ಹಬ್ಬ
ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ. ಗಣೇಶೋತ್ಸವ ಸಮಾರಂಭಗಳು ನಗರಗಳು ಸೇರಿದಂತೆ ಪ್ರತಿ ರಾಜ್ಯದ ಎಲ್ಲ ಹಳ್ಳಿ ಹಳ್ಳಿಗಳಲ್ಲಿ ಮನೆಗಳಲ್ಲಿ ಮನೆಯ ಅಂಗಳದ ಬೀದಿಗಳಲ್ಲಿ ಗಣೇಶ ಹಬ್ಬ ಆಚರಿಸುತ್ತಾರೆ. ಗಣೇಶೋತ್ಸವಗಳು ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಗೆ ತನ್ನದೇ ಆದ ವೈಶಿಷ್ಟವಿದೆ. ಭಾದ್ರಪದ ಮಾಸ ಶುಕ್ಲ ಪಷ ಚತುರ್ಥಿಯಂದು ಮಾಡುವ ಗಣೇಶನ ಹಬ್ಬ ಒಂದು ರೀತಿಯಲ್ಲಿ ವಿನಾಯಕನ ಹುಟ್ಟು ಹಬ್ಬವೆಂದೇ ಹೇಳಬಹುದು. ಗಣೇಶನ ಹಬ್ಬವನ್ನು ದೇಶದಾದ್ಯಂತ ಆಚರಿಸುತ್ತಾರೆ, ಜಾತಿ ಮತ ಬೇದವಿಲ್ಲದೇ ಶ್ರೀ ಗಣೇಶವನ್ನು ವೈಭವದಿಂದ 5 ದಿನಗಳವರೆಗೆ ಪೂಜಿಸುತ್ತಾರೆ. ಕೆಲವರು ಒಂದೇ ದಿನ ಪೂಜಿಸುತ್ತಾರೆ. ಗಣೇಶನ ಪೂಜೆಯ ಮೊದಲ ದಿನವೆ ಗೌರಿಪೂಜೆ ಮಾಡುತ್ತಾರೆ. ದೇಶದಲ್ಲೇ ಅತಿ ಹೆಚ್ಚು ವೈಭವದಿಂದ ಗಣೇಶಹಬ್ಬ ಆಚರಿಸುವ ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಪ್ರತಿಯೊಂದು ಮನೆ ಮನೆಯಂಗಳದಲ್ಲಿ ಗಣಪತಿಯ ಮೂರ್ತಿಯನ್ನು ತಂದು ಒಂದು ದಿನ, ಮೂರು, ಐದು, ಏಳು ಹನ್ನೊಂದು ಹಾಗು ಇಪ್ಪತ್ತೊಂದು ದಿನಗಳವರೆಗೆ ಪೂಜಿಸಿ, ಆರಾಧಿಸುತ್ತಾರೆ. ಮನೆಯಲ್ಲಿ ಯಾವುದೇ ಒಂದು ಶುಭ ಸಮಾರಂಭ ನಡೆಯುವ ಸಂದರ್ಭದಲ್ಲಿ ಶುಭ ಸಮಾರಂಭ ಆರಂಭವಾಗುವುದೇ ಗಣೇಶನ ಪೂಜೆಯಿಂದ ಗಣಪತಿಯನ್ನು ವಿಘ್ನನಿವಾರಕ ಎನ್ನುತ್ತಾರೆ. ನಾವು ಮಾಡುವಂತಹ ಕೆಲಸವು ಯಾವುದೇ ತೊಂದರೆಯಿಲ್ಲದೇ ಶೀಘ್ರವಾಗಿ ಪೂರ್ಣವಾಗಲಿ ಎಂದು ವಿನಾಯಕನಿಗೆ ಪೂಜೆ ಮಾಡುತ್ತೇವೆ. ಗಣೇಶ ಏಕದಂತ, ಮಂಗಳಮೂರ್ತಿ ವಿಘ್ನೇಶ್ವರ, ಲಂಬೋದರ, ವಿನಾಯಕ ಗಜಮುಖ ಮೋಷಿಕವಾಹಕ, ಮೋದಕ ಪ್ರಿಯ, ಪಿಲೈಯಾರ್, ಮುಂತಾದ ಅನೇಕ ಹೆಸರುಗಳಿವೆ. ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರ ಎಂದು ಕರೆಯುತ್ತೇವೆ. ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಮುಂತಾದ ಪೂಜ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಕಾಗದ ಪ್ಲಾಸ್ಚಿಕ್ ನಿಂದ ಮಾಡಲಾದ ವಸ್ತುಗಳನ್ನು ಮುಂತಾದವುಗಳನ್ನು ತೆಗೆಯಬೇಕು. ವಿಸರ್ಜನೆ ಮಾಡುವ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಪವಿತ್ರವಾಗುತ್ತದೆ. ಕೆರೆ ಮತ್ತು ಸಮುದ್ರದ ನೀರಿನಲ್ಲಿ ಮಣ್ಣಿನ ಗಣೇಶ ವಿಗ್ರಹಗಳನ್ನು ಮಾತ್ರ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಪ್ಲಾಸ್ಟಿಕ್ ವಸ್ತುಗಳು ಮರ ಮತ್ತು ಬಿದಿರು ಕಡ್ಡಿಗಳು ಕಸ ವಿಲೇವಾರಿ ಸ್ಥಳಗಳಿಗೆ ನೀಡಬೇಕು. ನಮ್ಮ ಸುತ್ತಮುತ್ತ ಇರುವ ಪರಿಸರ ನಾವು ಕಾಪಡಬೇಕು. ಈ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಣ್ಣಿನಿಂದ ಮಾಡಿದ ಗಣಪತಿಗಳನ್ನು ನಮ್ಮ ನಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿ ಆಚರಿಸೋಣ.


Comments
Post a Comment