ಕಾಲಕ್ಕೆ ತಕ್ಕಂತೆ ನಡೆಯಬೇಕು ಭಾಗ 2

ಕಾಲಕ್ಕೆ ತಕ್ಕಂತೆ ನಡೆಯಬೇಕು ಭಾಗ 2 

ಲೇಖಕರು :ಎಂ ಆರ್ ವೆಂಕಟರಾಮಯ್ಯ



 ‘ಕಾಲ’ ಬದಲಾವಣೆ’ ವಿಷಯ ಕುರಿತ ಚಿಂತನೆ. Change is an integral part of life ಎಂದಿದ್ದಾನೆ ಒಬ್ಬ ಆಂಗ್ಲ ಕವಿ, ‘ಬದಲಾವಣೆ’ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಬದಲಾವಣೆಗೆ ನಾವು ಹೇಗೆ ಒಗ್ಗಿಕೊಂಡಿದ್ದೇವೆ ಎಂಬುದಕ್ಕೆ ನಮ್ಮ ಜೀವನದ ಚಕ್ರವನ್ನೇ ಗಮನಿಸೋಣ. ಜನ್ಮ ಕಾಲದಲ್ಲಿ ಶಿಶುವಾಗಿದ್ದ ನಾವು ಹಾಗೇಯೇ ಉಳಿದೆವೇ ? ಇಲ್ಲ, ಬಾಲ್ಯ, ಗೃಹಸ್ಥಾಶ್ರಮ, ವಾನಪ್ರಸ್ತ ಮತ್ತು ಸಂನ್ಯಾಸ ಎಂಬ ಚತುರಾಶ್ರಮಗಳನ್ನೂ ಹಾದು ಪಯಣಿಸುತ್ತೇವಲ್ಲವೇ ? ಅಂದು ನಮ್ಮ ಕಣ್ಣೆದುರಿಗೆ ಜನಿಸಿದ ಮಕ್ಕಳು ಇಂದು ಮಕ್ಕಳಂತೆಯೇ ಉಳಿದಿದ್ದಾರೆಯೇ ? ಇವರು ಬದಲಾಗುತ್ತಿಲ್ವೇ ? 

 ಜಗತ್ತಿನಲ್ಲಿ ಇರುವ ಪ್ರತಿಯೊಂದೂ ಹಿಂದಿದ್ದಂತೆ ಇಂದಿಲ್ಲ, ಇಂದಿರುವಂತೆ ಕೆಲ ಕಾಲದ ನಂತರ ಹೀಗೇ ಇರುವುದಿಲ್ಲ. ಅವು ಬದಲಾಗುತ್ತಿರುತ್ತವೆ,. ಹೀಗೆ ಬದಲಾವಣೆ ಎಂಬುದು ಜಗದ ನಿಯಮ. ಪ್ರಕೃತಿ ಧರ್ಮವಾಗಿದೆ. ಜಗತ್ತಿನಲ್ಲಿನ ಪ್ರತಿಯೊಂದೂ ಪ್ರತಿ ನಿಮಿಷವೂ ಬದಲಾಗು ತ್ತಿರುವಾಗ ಈ ಜಗತ್ತಿನೊಳಗೇ ಬದುಕುತ್ತಿರುವ ನಾವು ಇದಕ್ಕೆ ಹೊಂದಿಕೊಂಡು  ಬದುಕಲು ಬದಲಾಗಬೇಕೇ ವಿನಃ “ಅಪ್ಪ ಹಾಕಿದ ಆಲದ ಮರ” ಎಂದು ಅದಕ್ಕೆ ನೇಣು ಹಾಕಿಕೊಳ್ಳುತೇವೆಯೇ ! ಬಂಗಾರದ ಸೂಜಿ ಎಂದು ಅದನ್ನು ಕಣ್ಣಿಗೊತ್ತಿಕೊಳ್ಥೇವೆಯೇ ?

ಹಿಂದಿನ ಯಾವುದೋ ಯುಗದಲ್ಲಿ ಆಚರಿಸುತ್ತಿದ್ದ ಇಂದು ಔಟ್ ಡೇಟೆಡ್ ಆಗಿರುವ ಆಚರಣೆಗಳನ್ನು ಹಿಡಿದು ನೇತಾಡುವುದು ಸರಿಯೇ ?ಹಿಂದಿನವರAತೆ ಇಂದು ಉಡುಪು ಧರಿಸುತ್ತಿಲ್ಲ,ಅವರು ಸೇವಿಸುತ್ತಿದ್ದ ಆಹಾರ ನಾವು ಸೇವಿಸದೆ ಅದನ್ನು ನಮ್ಮ ರುಚಿಗೆ ತಕ್ಕಂತೆ ಬದಲಾಯಿಸಿಕೊಂಡಿದ್ದೇವೆ. ಯಂತ್ರ ತಂತ್ರ ವಿದ್ಯೆ ಕಲಿತು ಅವರಂತೆ ವ್ಯವಸಾಯ ಪೌರೋಹಿತ್ಯ ಬಡಗಿª ,ಕಮ್ಮಾರ ಚಮ್ಮಾರ ಅಕ್ಕಸಾಲಿಗ ವೃತ್ತಿ ನಾವು ಇಂದು ಮಾಡ್ತಿಲ್ಲ ಈ ಬಾಬ್ತುಗಳಲ್ಲೆಲ್ಳಾ ನಾವು ಬದಲಾಗಿ ನವ ನಾಗರಿಕರಾಗಿದ್ಧೇವೆ. ಆದರೆ ಹಿಂದಿನ ಆಚಾರ ವಿಚಾರ ಪದ್ದತಿ ಸಂಪ್ರದಾಯ ಇತ್ಯಾದಿ ವಿಷಯಗಳ ಮಾತಿ ಬಂದಾಗ ನಾವು ಮತ್ತೆ ಹಿಂದಿನ ಯುಗದ ಪದ್ದತಿ ಹಿಡಿದು ನೇತಾಡೋದು ಸರಿಯಾ ! ನಾವು ಮಾನವರಾಗಬೇಕೋ ದಾನವರಾಗಬೇಕೋ ! ಮಾನವರಾಗಿ ವರ್ತಿಸಿ ನಾವೂ ಸುಖಿಸಿ ಬೇರೆಯವರನ್ನೂ ಸುಖದಿಂದ ಇರಲು ಅವಕಾಶ ಕಲ್ಪಿಸಬೇಕಲ್ಲವೇ !

 ಈಗ ಮಾತನಾಡುವುದಕ್ಕೆ ಆಯ್ಕೆ ಮಾüಡಿಕೊಂಡಿರುವ ವಿಷಯ ಸಾಮಾಜಿಕ ಆಚಾರ, ಪದ್ದತಿ.

 ಸಾಗರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ-ಮಹಿಳೆಯರಿಂದಲೇ ಆಂತ್ಯಕ್ರಿಯೆ ವಿಧಿ ವಿಧಾನ” ಶೀರ್ಷಿಕೆಯಡಿ ದಿನಾಂಕ 30\04\2025 ರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಕಟೆಯಾದ ವರದಿ ಹೀಗಿದೆ :

 ಶಂಕರ ಭಟ್ಟರು (ಕಾಲ್ಪನಿಕ ಹೆಸರು) ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವರು ಸೊರಬದ ಉಳವಿಯ ಒಂದು ದೇವಾಲಯದಲ್ಲಿನ ಅರ್ಚಕರಾಗಿದ್ದರು ಕೆಲ ಕಾಲದ ಹಿಂದೆ ಈಚೆ ಇವರು ಕಾಯಿಲೆಯಿಂದ ಮೃತಪಟ್ಟಿದ್ದರು. ಕಳೆದ ಹಲವು ತಿಂಗಳುಗಳಿಂದ  ಇವರ ಮಗಳು ಸೊಸೆ ಪತ್ನಿ ಹಾಗೂ ಇವರ ತಮ್ಮನ ಹೆಂಡತಿ ಇವರನ್ನು ಅಕ್ಕರೆಯಿಂದ ನೋಡಿಕೊಂಡಿದ್ದರು ಆದರೆ ಮಲಗಿದ್ದಲ್ಲೇ ಮೃತಪಟ್ಟಿದ್ದರು ಇವರೆಲ್ಲರಿಗೂ ಮೃತರ ಮೇಲಿದ್ದ ಅತಿ ಪ್ರೀತಿ ವಿಶ್ವಾ¸ ಗೌರವಗಳ ಕಾರಣ ಇವರ ಚಟ್ಟವನ್ನು ಈ ಹೆಂಗಸರೇ ಹೊರಬೇಕು, ಅಂತ್ಯ ಕ್ರಿಯೆಯನ್ನೂ ಈ ಹೆಂಗಸರೇ ನಡೆಸಬೇಕು ಎಂದು ಈ ಸ್ತೀಯುರು ತಮ್ಮಲ್ಲೇ ಮಾತನಾಡಿಕೊಂಡು ಮನೆಯ ಗಂಡಸರನ್ನು ಒಪ್ಪಿಸಿದ್ದರಂತೆ. ನಂತರದಲ್ಲಿ ಮೃತರ ಚಟ್ಟವನ್ನು ಇವರು ಹೊತ್ತಿದ್ದೇ ಅಲ್ಲದೇ ಹೆಣ್ಣು ಮಕ್ಕಳೇ ಮೃತರ ಅಂತ್ಯ ಕ್ರಿಯೆಯನ್ನು ಸ್ವತಃ ನಿಂತು ನಡೆಸಿದರಂತೆ. ವಿಶ್ವನಾಥಭಟ್ಟರು ಎಂಬುವರು ಬರೆದ “ಸದ್ಗತಿ” ಪುಸ್ತಕದಲ್ಲಿ”ಹೆಣ್ಣು ಮಕ್ಕಳು ಕೂಡ ತಂದೆ ತಾಯಿಯರ ಅಂತ್ಯಕ್ರಿಯೆ ನೆರವೇರಿಸಬಹುದೆಂಬ ಅಂಶಗಳನ್ನು ಶಾಸ್ತ್ರೋಕ್ತವಾಗಿ  ವಿವರಿಸಿ ಗಂಡು ಮಕ್ಕಳಷ್ಟೇ ತಂದೆ ತಾಯಿಯರ ಅಂತ್ಯಕ್ರಿಯೆ ಮಾಡಿದರೆ ಸದ್ಗತಿ ಎಂಬ ಮನೋಭಾವ ಸಮಾಜದಿಂದ ಹೋಗಬೇಕು ಎಂಬ ಸಂದೇಶವನ್ನು ಈ ಸ್ತ್ರೀಯರು  ಸಮಾಜಕ್ಕೆ ಸಾರಿದ್ದçರು. 

 ಈ ಕ್ರಾಂತಿಕಾರಿ ನಡೆಯನ್ನು ಮೆಚ್ಚಿ ಹಲವು ಸಂಘ ಸಂಸೈಗಳು ಈ ಸ್ತ್ರೀಯರ ಧೈರ್ಯು ಸಾಹಸಗಳನ್ನು ಮೆಚ್ಚಿದ್ದçರು ಈ ಅನಿರೀಕ್ಷಿತ ಬದಲಾವಣೆಗೆ ನಾವೂ ಹ್ಯಾಟ್ಸ್ ಆಫ್ ಟು ದೆಮ್ ಮೇ ದೇರ್ ಟ್ರೈಬ್  ಇನ್ ಕ್ರೀಸ್ ಎನ್ನಬಾರದೇಕೆ ! ? 

 ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಜನರು, “ಕಾಲಕ್ಕೆ ತಕ್ಕಂತೆ ನಡೆಯಬೇಕು, ಮೂಢ ನಂಬಿಕೆಗಳಿಗಳಿಗೆ ವಿದಾಯ ಹೇಳಿ ಆಧುನಿಕ ಚಿಂತನಗಳನ್ನು ಪಾಲಿಸಬೇಕು . ನಾವೆಲ್ಲರೂ ಮಾನವರು, ನಮ್ಮದು ಮಾನವ ಧರ್ಮ. ಮೊದಲು ನಾವು ಮಾನವರು. ಆನಂತರ ನಾವು ಆ ಜಾತಿ, ಈ ಜಾತಿ, ಮತ, ಧರ್ಮದವರು, ನಾವೆಲ್ಲರೂ ಮಾನವರು ಎಂದು ಒಪ್ಪಿದ ಮೇಲೆ, ನಮದೆಲ್ಲರದೂ ಒಂದೇ ಧರ್ಮವಾಗಿರಬೇಕು, ಮಾನವ ಸಮುದಾಯವನ್ನು ರಕ್ಷಿಸುವಂತಹುದು ಧರ್ಮ. ಮಾನವರ ಶ್ರೇಯೋಭಿವೃದ್ಧಿಗೆ, ಇಹ ಪರಗಳ ಒಳಿತಿಗೆ ಸಾಧನವಾಗಿರುವುದೇ ಧರ್ಮ. ಇದೇ ಮಾನವ ಧರ್ಮ, ನೀ ಏನಾದರು ಆಗು ಆದರೆ ಮೊದಲು ಮಾನವನಾಗು ಎಂಬ ಕವಿ ವಾಣಿ ಇತ್ಯಾದಿಗಳನ್ನು ಅವಕಾಶ ಸಿಕ್ಕಿದಾಗ ವೇದಿಕೆಗಳ ಮೇಲೆ ಘೋಷಿಸಿ ಚಪ್ಪಾಳೆ ಪಡೆದು ಖುಷಿ ಪಡುವªರಾಗಿದ್ದಾರೆ. ನುಡಿಯುವುದು ಒಂದು, ನಡೆ ಬೇರೊಂದು ಎಂಬುದು ಮನುಷ್ಯ ಧರ್ಮವಾಗದು. ಇದಕ್ಕೆ ಬದಲಿಗೆ ನುಡಿದಂತೆ ನಡೆದು ಇತರರಿಗೆ ಮಾರ್ಗದರ್ಶಕರಾದರೆ ಸಮಾಜ ದೇವರು ಎಲ್ಲರೂ ಮೆಚ್ಚುತ್ತಾರೆ. ಆಗ ಇವರು ಮಹಾನ್ ಎಂದು ಕರೆಸಿಕೊಳ್ಳಲು ಸಾಧ್ಯ. 

 ಸಾಗರದ ಈ ಹೆಣ್ಣು ಮಕ್ಕಳಲ್ಲಿದ್ದ ದೃಢ ನಿರ್ಧಾರ, ಧೈರ್ಯ, ಹಿಡಿದ ಕೆಲಸವನ್ನು ಸಾಧಿಸಿದ ಇವರ ಛಲ ಮೆಚ್ಚಿ ಭೇ಼ಷ್ ಎಂದು ಇವರ ಬೆನ್ನುತಟ್ಟೋಣ. ಇಂತಹುದೇ ಕಷ್ಟ ಪ್ರಸಂಗದಲ್ಲಿ ಇರುವವರಿಗೆ ಈ ಕ್ರಾಂತಿಕಾರಕ ಹೆಜ್ಜೆ ಪ್ರೇರಣೆಯಾಗಿ ತೊಂದರೆ ಮುಕ್ತರಾಗಲಿ ಎಂದು ಆಶಿಸೋಣ

 “ಹ್ಯಾಟ್ಸ್ ಆಘ್ “ ಪದದ ಕನ್ನಡ  ಅರ್ಥ” ಚೆನ್ನಾಗಿ ಮಾಡಲಾಗಿದೆ, ಕರ‍್ತಿ- ಅಭಿ ನಂದನೆಗಳು, ಒಳ್ಳೆಯ ಕೆಲಸ ಎಂಬುದಾಗಿರುತ್ತದೆ. ಇದುವರೆಗೂ ಹೇಳಿದ್ದನ್ನೆಲ್ಲಾ ಕೇಳಿದ ಹಲವರು, ಇಷ್ಟಕ್ಖೂ ಈಗ್ಯಾಕೆ ಈ ‘`ಹ್ಯಾಟ್ಸ್ ಆಫ್’ ವಿಚಾರ ಚರ್ಚೆ ಮಾಡಬೇಕು ಎಂದು ಪ್ರಶ್ನಿಸÀಬಹುದು. ‘ಅಪರೂಪದಲ್ಲಿ ಅಪರೂಪ’ ಎನ್ನಬಹುಧಾದ ಇಲ್ಲಿರುವ ಒಂದು ಪ್ರಸಂಗ ಓದಿದರೆ ನಮ್ಮ ಅರಿವಿಲ್ಲದೇನೇ ಬಾಯಿಂದ ಬರುತ್ತೆ “?ಹ್ಯಾಟ್ಸ್ ಆಫ್” ಆಂತಾ. 

 ಆತನಿಗೆ ಗಂಡು ಮಕ್ಕಳಿರಲಿಲ್ಲ. ಇದನ್ನೇ ಕಾರಣ ಮಾಡಿಕೊಂಡ ಹೆಚ್ಚಿನ ಸಂಪ್ರದಾಯಸ್ಥರೋ, ಆಚಾರ ವಂತರೋ, ಧರ್ಮ ಶಾಸ್ತçಗಳನ್ನು ಓದಿದ ಪಂಡಿತ ಮಹಾಶಯರೋ, ‘ಅಯ್ಯೋ ಪಾಪ, ಇತನಿಗೆ ಗತಿಯೇ ಇಲ್ಲ. ಒಂದ್ ಗಂಡ್ ಮಗ ಅಂತಾ ಇದ್ದಿದ್ದರೆ ಮುಕ್ತಿ, ಮೋಕ್ಷ ಸಿಗತಾಯಿತ್ತು. ಇದು ಈಗ ಸಿಗದಂತಾಯಿತ್ತು. ಯಾಕೆ ಅಂದರೆ ಈತನಿಗೆ ಗಂಡ್ ಮಕ್ಕಳೇ ಇಲ್ಲವಲ್ಲಾ ! ಈತ ಪಡೆದಿರೋದು ಹೆಣ್ ಪಿಳ್ಳೆಗಳನ್ನೆ ಎಂದು ಗೊಣಗಿದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿ಼,”ಅದಕ್ಕೇ ಈತನಿಗೆ ದುರ್ಗತಿ ಸಿಗುತ್ತೆ. ಇದನ್ನೆಲ್ಲಾ ಈತ ಅಂದೇ ಮುಂದಾಲೋಚಿಸಿ ಒಂದ್ ಗಂಡ್ ಹೈಕಳ್ನ ಪಡೆದಿದ್ದರೆ ಸದ್ಗತಿ ಸಿಗತಿತ್ತಾ ! ದಡ್ಡ ಇವ” ಎಂದು ತಮ್ಮನ್ನು ತಾವೇ ಜಾಣರು ಎಂದು ಆತ್ಮ ಪ್ರಶಂಸೆ ಮಾಡಿಕೊಂಡರು ಹತ್ತಿರದವರೊಬ್ಬರು. 

 ನೀವ್ ಮಾತಾಡಿದ್ದೆಲ್ಲಾ ಇವ ಯೋಚಿಸಬೇಕಾಗಿದ್ದದ್ದು ಬದುಕಿದ್ದಾಗ. ರ‍್ರೀ ಯಪ್ಪಾ, ಈಗ್ ಈತ ಹೋಗ್ಯಾನ್ ರ‍್ರೀ, ಆಗಲೇ ಸತ್ತಾನೆ, ಅದ್ಕೆ ಇವನ ಹೆಣ ಎತ್ತಿ ದಫನ್ ಯಾರ್ ಮಾಡೋರ್ ಅದ್ ಹೇಳ್ರಲ್ಲಾ ಅಂದ್ರು ಪಕ್ಕದಲ್ಲಿದ್ ಹುಬ್ಲಿ ಮಂದಿ. 

 ಇದುವರೆಗಿನ ಚರ್ಚೆಯೆಲ್ಲಾ ಆ ಸತ್ತ ಆಟೋ ಚಾಲಕನ ಮನೆಯ ಹೊರಗಡೆ ನಡೆದಿದ್ದು. ಬನ್ನಿ, ಈಗ, ಈ ಮನೆಯ ಒಳಗೆ ನಡೀತಿರೋ ಮಾತು ಕತೆಗಳು ದೃಶ್ಯ ನೋಡೋಣ. ಸತ್ತ ಆಟೊ ಚಾಲಕನಿಗೆ ಗಂಡ್ ಮಕ್ಕಳಿರಲಿಲ್ಲ. ಆತನಿಗಿ ದ್ದಿದ್ದು ಇಬ್ಬರು ಹೆಣ್ ಮಕ್ಕಳೇ. ಇವರೂ ಸಣ್ಣ ವಯಸ್ಸಿನ ಓದ್‌ತಿರೋ ಬಾಲಕಿಯರು. ಮನುಷ್ಯನಿಗೆ ಸಾವು ಬರುತ್ತೆ ಅಂತಾನೇ ತಿಳಿಯದಿರೊ ಅಮಾಯಕÀ ಮಕ್ಕಳು. ಸಂಪಾದಿಸೋ ಗಂಡ, ಪತ್ನಿ ಮಕ್ಕಳ ರಕ್ಷಣೆ ಮಾಡಬೇಕಾದವನೇ ತರ‍್ಕೊಂಡನಲ್ಲಾ ! ಮುಂದೆ ನಮ್ಮ ಹೊಟ್ಟೆ ಬಟ್ಟೆ ನೆಲೆ ಯಾರ್ ನೋಡ್ ಕೊಳ್ತಾರೆ ? ಅನ್ನೋ ಸಂಕಟ ಸತ್ತವನ ಪತ್ನಿಗಾದರೆ, ಅಯ್ಯೋ, ಅಪ್ಪಾ ಇಲ್ಲದೆ ನಾವ್ ಬದುಕೋದ್ ಹೇಗೆ ? ನಮಗ್ಯಾರಿನ್ನ ಅಪ್ಫಾ ! ನಾವ್ ಇನ್ ಯಾರನ್ನ ಅಪ್ಫಾ ಅಂತಾ ಕರದ್ ತಬ್ಬಿ ಮಾತನಾಡಿಸೋದು ಅಂತಾ ಬಿಕ್ಕಿ ಬಿಕ್ಕಿ ಅಳತಿದ್ದುವು ಆ ಹೆಣ್ ಮಕ್ಕಳು. 

 ಇನ್ನು ಸತ್ತವನ ಅಂತಿಮ ದರ್ಶನ ಪಡೆಯಲು ಬಂದು ಸೇರಿದ್ದ ಬಂಧುಗಳ ನಡುವೆ ಬಿಸಿ ಬಿಸಿ ಚರ್ಚೆ ನಡೆದಿತ್ತು, ಏ, ನೀ ಮುಂದೆ ನಿಂತು ಈ ಕಾರ್ಯ ಮುಗಿಸೋ, ಸತ್ತವನಿಂದ ನೀ ಎಷ್ಟೊಂದ್ ಸಹಾಯ ಪಡೆದಿದ್ದೆ ಅಂತ ಒಬ್ಬ ಅಂತಿದ್ದರೆ, ನೆರವು ಪಡೆದಿದ್ದವ ಅಂತಿದ್ದ, ಏ, ನನಗಾಗದಪ್ಪಾ, ನಾ ಈ ಕೆಲಸ ಮಾಡಿದೆ ಅಂತಾ ಅಪ್ಪಯ್ಯನಿಗೆ ತಿಳಿದರೆ ಆತು, ನನ್ನ ಹೊಡೆದ್ ಸಾಯಿಸ್ತಾನಷ್ಟೇ ಅಂತಾ ಹಿಂದೆ ಸರಿದ. 

 ಏ, ಬಾಳ್ಯಾ, ನೀ ಅದರೂ ಮಾಡಿ ಮುಗಿಸಬೋದಲ್ಲಾ ಅಂತಾ ಹಿರಿಯ ಬಂಧು ಅಂದಾಗ, ಏ, ಅಗವಲ್ಲದೊ ಮಾರಾಯಾ, ನನ್ ತಮ್ನಿಗೆ ಮದುವೆ ಮಾತು ಕತೆ ನಡೀತಾ ಅಯ್ತಿ, ನನಗಾಗದಪ್ಪಾ ಈ ಹೊಣೆ ಅಂದ, 

 ಈ ಮಧ್ಯೆ, ಆ ಗ್ರಾಮದ ಹಿರಿಯ ಮುಂದೆ ಬಂದ್, ಏನ್ರಪ್ಫಾ ! ನೀವೆಲ್ಲಾ ಈ ಸತ್ತವನ ಸಂಬಂಧಿಗಳೇ ಅಲ್ವಾ ? ಇವ ಬದಕಿದ್ದಾಗ ನೀವೆಲ್ಲಾ ಇವನ್ ಮನೇಲಿ ಉಂಡರ‍್ರೀ,ü ಆಂದ್ ಉಂಡ ಋಣನಾದ್ರೂ ತೀರಿಸ್ಲಿಕ್ಕೆ ಆದ್ರೂ ಇಂದು ಯಾರಾದರೂ ಇವನ ದಫನ್ ಮಾಡಿ ಮುಗಿಸ್ರಲ್ಲಾ ಅಂದ ಆ ಹಿರಿಯ, ಉಹುಂ, ತುಟ್ ಪಿಟ್ ಅನ್ಲಿಲ್ಲಾ ಯಾವ ಬಂಧುವೂ. 

 ಇಷ್ಟರಲ್ಲೇ ಅ ಸತ್ತವನ ಜಾತಿಯ ಆ ಊರಿನ ಪೂಜಾರಪ್ಪಾ ಜನರನ್ನು ದೂರ ಸರಿಸಿ, ಅ ಸತ್ತವನ ಹಿರಿ ಮಗಳತ್ತ ತಿರುಗಿ, ಬಾರವ್ವಾ, ನೀ ತರ‍್ಸು ಅಪ್ಪಯ್ಯನ ಋಣಾವ ಅನ್ನುತ್ತಾ ಆ ಮಗಳ ಕೈ ಹಿಡಿದು ಹೊರ ನಡೆದ.

 ಈಗ ಅಲ್ಲಿ ಸುರುವಾಗಿತ್ತು ಗುಸಗುಸ ಪಿಸ ಪಿಸಾ, ಎಲ್ಲಾದ್ರೂ ಉಂಟಾ, ಹಿಂಗೆ ? ಹೆಂಗಸು ಮಸಾಣಕ್ಕ್ ಹೋಗೋದುಂಟಾ ! ಅಂತಾ ಮೂಗಿನ್ ಮೇಲ್ ಬೆರಳಿಟ್ ಕೊಂಡ್ರು ಬಂಧುಗಳು ಅನ್ನಿಸಿಕೊಂqವ್ರು. ಆಗ ನೆಪ್ಫಾತು ‘ಬಂಧುಗಳೆAದರೆ ಅಗಾಗ್ಗೆ ಬಂದ್ ಉಂಡ್ ಹೋಗೋರು ಬಂಧುಗಳು’ ಅನ್ನೋ ಸರ್ವಜ್ಞನ ಪದ\ ಕೆಟ್ಟರೆ ಕೈ ಹಿಡಿಯುವುದಿಲ್ಲ, ಬದುಕಿ ಸರಿಯಿದ್ದರೆ ನೋಡಿ ಸಹಿಸದೋರ ಹೆಸರೇ ‘ಬಂಧುಗಳು’ ಅನ್ನೋ ಹಳೆಯ ಗಾದೆ. 

 ಸತ್ತವನ ಮಗಳು ಈ ವೇಳೆಗೆ 11 ವರ್ಷದ 6 ನೇ ಇಯತ್ತಿನಲ್ಲಿ ಓದ್‌ತಿದ್ದ ಬಾಲೆ ಆದ ಶಾಕ್‌ನಿಂದ ಚೇತರಿಸಿಕೊಂಡ ವಳೇ, ಅಮ್ಮನ್ನ ತಬ್ಬಿ ನಿ ಅಳಬ್ಯಾಡವೇ, ನಾ ಇರತೀನಿ ಸದಾ ನಿನ್ ಜೋಡಿ, ಅಪ್ಪಯ್ಯನ ಕಾರ್ಯ ನಾ ಮುಗಿಸ್ತಿನಿ ಅಂತಾ ಪೂಜಾರಪ್ಪ;ನ ಸಂಗಡ ಹೊರಟಳು. ಊರಿನ ಕೆಲವು ಹಣವಂತರು ಕಾರ್ಯದಲ್ಲಿ ಕೈ ಜೋಡಿಸಿ ಮಗಳಿಂದ ಕಾರ್ಯ ಮುಗಿಸಿದರು ಎಂಬುದರೊAದಿಗೆ ಈ ಪ್ರಸಂಗ ಮುಗೀತು. ಈಗ ನೀವ್ ಹೇಳ್ರ, ಈ ಮಗೀಗೆ, ಆ ಊರಿನ ಪೂಜಾರಪ್ಪನಿಗೆ “ಹ್ಯಾಟ್ಸ್ ಆಫ್ ಟು ದೆಮ್” ಅಂತ ಹೊಗಳಿ ನಾವೆಲ್ಳಾ ಬೆನ್ ತಟ್ ಬರ‍್ದಾ ! 

 ಬಂಧುಗಳೆಂದರೆ ಅಲ್ಲಿದ್ದವರಂತವರೇನಾ ! ಇವರೇನಾ ! ಇರ‍್ನೆಲ್ಲಾ ಆ ಸತ್ತವನಿಗೆ ಸೇರ್ ದವರು, ಕೂಡಿದವರು, ಅನ್ನಬೇಕಾ ? ಅ ಸತ್ತೋನ್ ಜೀವಂತಿದ್ಧಾಗ ಅವನ ಕೂಡಾ ಸೇರಿ ನಕ್ಕರು, ಅವ್ನ ಕಾಸಲ್ಲೇ ಉಂಡ್ರು, ಕುಡಿದರು, ಅವ್ನ ಬೆನ್ ತಟ್ಟಿ ಭೇಷ್ ಭೇಷ್ ಅಂತ ಹೊಗಳಿದ್ರು, ಸತ್ ಮೇಲೆ ‘ಇವ ನಮ್ಮವನಲ್ಳಾ’ ಅಂತಾ ದೂರ ಸರಿದವರು ಇವರು. ‘ಇರುವಾಗ ಎಲ್ಲಾ ನೆಂಟರು, ಸತ್ತಾಗ ಯಾರು ಇಲ್ಲ “ ಎಂದು ಒಂದೇ ಬಳ್ಳಿಯ ಹೂಗಳು ಕನ್ನಡ ಚಲನ ಚಿತ್ರಕ್ಕೆ ಮೊಹಮದ್ ರಫಿ ಅಂದು ಹಾಡಿದ್ದ ಈ ಹಾಡು ಪ್ರಸಕ್ತ ಪ್ರಸಂಗದಲ್ಲೇ ಸಾಬೀತಾಗಿರುವುದರಿಂದ, ರಫಿಯ ಹಾಡು ಅದೆಷ್ಟು ಸರ್ವ ಕಾಲಿಕ ಸತ್ಯ ಎಂಬುದು ಸ್ಪಷ್ಟವಾಗುತ್ತದೆ ssssssssssssssಶೀರ್ಷಿಕೆಯಲ್ಲಿರುವ ವಿಷಯ, . ‘ಹ್ಯಾಟ್ಸ್ ಆಫ್’ ಯಾರಿಗೆ, ಯಾಕೆ, ಹೇಳಬೇಕು ? ಎಂಬ ಪ್ರಶ್ನೆಗೆ ಉತ್ತರ ಈಗ ಸಿಕ್ಕಿರಬೇಕಲ್ಲವೇ ?

*****.

Comments

  1. ಜೀವನದ ಮೌಲ್ಯಾತ್ಮಕ ವಿಚಾರಗಳು ತಮ್ಮ ಲೇಖನದಲ್ಲಿ ಎದ್ದು ತೋರುತ್ತವೆ

    ReplyDelete

Post a Comment