'ಸುಖ ದುಃಖೇ ಸಮೆ ಕೃತ್ವ ಲಾಭ ಲಾಭೌ ಜಯ ಜಯೌ'
ಲೇಖನ - ಅಡಿಲೈಡ್ ಮಾಲು
'ಸುಖ ದುಃಖೇ ಸಮೆ ಕೃತ್ವ ಲಾಭ ಲಾಭೌ ಜಯ ಜಯೌ' ಇದರ ಅರ್ಥ?
'ಸುಖ-ದುಃಖ, ಲಾಭ-ನಷ್ಟ , ಜಯ-ಅಪಜಯಗಳನ್ನು ಸಮಚಿತ್ತಗಳಿಂದ ತೆಗೆದುಕೊಳ್ಳಬೇಕು'
ಈ ಮೇಲಿನ್ ಸಾಲು ಶ್ರೀಮದ್ಭಗವದ್ಗೀತೆಯಲ್ಲಿನ ಒಂದು ಶ್ಲೋಕದ ಸಾಲು.
ಶ್ರೀಕೃಷ್ಣನು ಯುದ್ಧ ಭೂಮಿಯಲ್ಲಿ ಈ ಈ ಶ್ಲೋಕದ ಸಾಲು ಕೇಳದವರು ಅಪರೊಪ.
ಸಮಚಿತ್ತ ಸ್ಥಿಥಿಯು ಸ್ಥಿತಪ್ರಜ್ಞನ ಲಕ್ಷಣ. ಸಾಮಾನ್ಯ ಜನರಾದ ನಾವು ಶ್ರೀಕೃಷ್ಣನು ತಿಳಿಸಿದ
ಈ ಉತ್ತಮ ಗುಣವನ್ನು ನಮ್ಮ ಜೀವನದಲ್ಲಿ ಧಾರಣೆಮಾಡುವುದು ಸುಲಭ ಸ್ಟಾಧಾವಾದುದಲ್ಲ.
ಈ ದೈವಿೇ ಗುಣವು ಸ್ಥಿತಪ್ರಜ್ಞನಾಗಿದ್ದ ಭಗವಾನ್ ಬುದ್ಧನಲ್ಲಿತ್ತು.
ಒಮ್ಮೆ ಭಗವಂತನಾದ ಬುಧ್ಧನು ಧ್ಯಾನ ಸ್ಥಿತಿಯಲ್ಲಿ ಕುಳಿತಿದ್ದನು.
ಅಲ್ಲಿಗೆ ಆಕ್ರೋಶ ಭಾರದ್ವಾಜ ಎಂಬ ಒಬ್ಬ ವ್ಯಕ್ತಿಯು ಬುದ್ಧನ ಎದುರು
ನಿಂತು ಸಮಚಿತ್ತ ಕಳೆದುಕೊಂಡು ಒಂದೇ ಸಮನೆ ಬಯ್ಯಲು
ಪ್ರಾರಂಭಿಸಿದನು. ಬುಧ್ಧನಿಂದ ಏನೂ ಪ್ರತಿಕ್ರಿಯೆ ಬರದಿರುವ ಕಾರಣ,
ಮತ್ತಷ್ಟು ಕೋಪಗೊಂಡು ಬಯ್ಯುವುದನ್ನು ಮುಂದುವರೆಸಿದನು. . ಕೊನೆಗೆ ಏನೂ ತೋಚದೆ ಸುಮ್ಮನೆ ನಿಂತನು.
ಬುದ್ಧನು ನಿಧಾನವಾಗಿ ಕಣ್ತೆರೆದು ಸಮಾಧಾನ ಚಿತ್ತದಿಂದ
'ಭಾರದ್ವಾಜ, ನಿನ್ನ ಮನೆಗೆ ಯಾರಾದರೊ ಇಷ್ಟ ಮಿತ್ರರು ಬರುತ್ತಿರುತ್ತಾರೆಯೇ ಎಂದು ಕೇಳಿದನು.
'ಹೌದು, ಬರುತ್ತಿರುತ್ತಾರೆ ಎಂದು ಭಾರದ್ವಾಜ ಹೇಳಿದ.
'ನೀನು ಅವರಿಗೆ ಆದರದಿಂದ ಆಹಾರ ನೀಡುತ್ತೀಯಾ ?'
'ಹೌದು, ಆಹಾರವನ್ನು ನೀಡುತ್ತೇನೆ'
'ಅದು ಅವರಿಗೆ ಬೇಡವೆನ್ನಿಸಿದರೆ ಏನು ಮಾಡುತ್ತೀಯಾ ?'
'ಇನ್ನೇನು ಮಾಡುವುದು, ನಾನೇ ಅದನ್ನು ಇಟ್ಟುಕೊಂಡು ತಿನ್ನುತ್ತೇನೆ '
'ಒಳ್ಳಯದು ಭಾರದ್ವಾಜ, ನೀನು ಕೋಪದಿಂದ ನುಡಿದ ಬೈಗಳನ್ನು ನಾನು ಸ್ವೀಕರಿಸಲಾರೆ , ಅವುಗಳು ನಿನ್ನಲ್ಲೇ ಇರಲಿ' ಎಂದ ಬುಧ್ಧ.
ಅಂದಿನಿಂದ ಆಕ್ರೋಶ ಕಳೆದು ಭಾರದ್ವಾಜ ಬುದ್ಧನ ಶಿಷ್ಯನಾದ.
ಆಕ್ರೋಶ ಭಾರದ್ವಾಜನಂಥವರು ಈ ಜಗತ್ರಿನ್ನಲ್ಲಿ ಬಹಳ . ಆದರೆ ಶ್ರೀಕೃಷ್ಣನು ತಿಳಿಸಿದ ಸ್ಥಿತಪ್ರಜ್ಞೆಯುಳ್ಳವರು ವಿರಳ.
ಬುದ್ಧನಿಗೆ ಇದ್ದ ಆ ಸಮಚಿತ್ತವನ್ನು ಜಿೇವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ನಾವುಗಳೂ ಕೂಡ ಮಾಡಿದರೇ ಉತ್ತಮ
Comments
Post a Comment