ಆಹಾರವೇ ಔಷಧಿ
ಜೀರಿಗೆಆರೋಗ್ಯ ಲೇಖನ - ಶ್ರೀಮತಿ ರಾಜಿ ಜಯದೇವ್
Accredited Practicing Dietitian
ನೀವೆಲ್ಲಾ ನೋವು ನಿವಾರಣೆಗೆ ಆಸ್ಪಿರಿನ್ (aspirin)
ಮಾತ್ರೆ ತೆಗೆದುಕೊಂಡಿರಬಹುದು. ನೋವು ನಿವಾರಣೆಗೆ ಕಾರಣ
ಆಸ್ಪಿರಿನ್ (aspirin) ನಲ್ಲಿರುವ ಸ್ಯಾಲಿಸಿಲಿಕ್ ಆಸಿಡ್ (salicylic acid) ಎಂಬ ರಾಸಾಯನಿಕ.
ಸ್ಯಾಲಿಸಿಲಿಕ್ ಆಸಿಡ್ (Salicylic acid) ಎಲ್ಲಾ ತರದ ಹಣ್ಣು ಮತ್ತು ತರಕಾರಿಗಳಲ್ಲಿ ಸ್ವಲ್ಪ ಮಟ್ಟಿಗೆ
ಇರುತ್ತದೆ. ಆದರೆ ಗಿಡಮೂಲಿಕೆಗಳಲ್ಲಿ (ಕೊತ್ತಂಬರಿ ಸೊಪ್ಪು, ಪುದೀನಾ) ಮತ್ತು ಮಸಾಲೆ ಪದಾರ್ಥಗಳಲ್ಲಿ
ಅತಿ ಹೆಚ್ಚು ಇರುತ್ತದೆ. ಅಚ್ಚ ಕಾರದ ಪುಡಿ ಮತ್ತು ಅರಶಿನದಲ್ಲಿ ಸ್ಯಾಲಿಸಿಲಿಕ್ ಆಸಿಡ್
(salicylic acid) ಶೇಕಡಾ 0.1 ಕ್ಕಿಂತ ಹೆಚ್ಚು ಇದ್ದರೆ, ಜೀರಿಗೆಯಲ್ಲಿ ಶೇಕಡಾ 1.5 ಕ್ಕಿಂತ ಹೆಚ್ಚು ಇರುತ್ತದೆ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳಲ್ಲಿ
ಜೀರಿಗೆಯನ್ನು ಹಲವಾರು ಸಣ್ಣ ಪುಟ್ಟ ಖಾಯಿಲೆಗಳಿಗೆ,
ಉದಾಹರಣೆಗೆ ಅಜೀರ್ಣ, ಹೊಟ್ಟೆ ನೋವು, ಗಂಟಲು ನೋವು, ಶೀತ, ನೆಗಡಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ. ಆದರೆ ಜೀರಿಗೆಯನ್ನು ರೋಗ
ನಿವಾರಣೆಗೆ ಔಷಧಿಯಾಗಿ ಉಪಯೋಗಿಸಬಹುದು ಎಂದು ಸಾಬೀತುಪಡಿಸಲು ಯಾವ ಅಧ್ಯಯನಗಳೂ ನಡೆದಿಲ್ಲ. ಆದರೇನಂತೆ,
ಸ್ಯಾಲಿಸಿಲಿಕ್ ಆಸಿಡ್ (salicylic acid) ನೋವು ನೀಗಿಸುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ
ಪುರಾವೆಗಳಿವೆ ಮತ್ತು ಇತರ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಜೀರಿಗೆಯಲ್ಲಿ ಸ್ಯಾಲಿಸಿಲಿಕ್ ಆಸಿಡ್
(salicylic acid) ನ ಅಂಶ ಅತ್ಯಂತ ಹೆಚ್ಚು ಪ್ರಮಾಣದಲ್ಲಿದೆ. ಉತ್ತಮ ಆರೋಗ್ಯಕ್ಕಾಗಿ ಜೀರಿಗೆಯನ್ನು
ಪ್ರತಿದಿನ ಉಪಯೋಗಿಸುವುದು ಆರೋಗ್ಯಕಾರಿ. ಭಾರತದ ಜನಪ್ರಿಯ ಪಾನೀಯಗಳಾದ ಜೀರಾ ಪಾನಿ ಮತ್ತು ಲಸ್ಸಿಯನ್ನು
ತಯಾರಿಸುವ ಪಾಕವಿಧಾನಗಳು ಇಲ್ಲಿವೆ.
ಜೀರಾ
ಪಾನಿ
1 ಟೀ ಚಮಚೆ ಜೀರಿಗೆಯನ್ನು 2 ಲೋಟ ಬಿಸಿ ನೀರಿಗೆ ಹಾಕಿ
ರಾತ್ರಿಯಿಡೀ ನೆನೆಯಲು ಬಿಡಿ. ಮಾರನೆಯ
ದಿನ ಸೋಸಿಕೊಂಡು ಕುಡಿಯಿರಿ. ಥರ್ಮಾಸ್ ಫ್ಲಾಸ್ಕಿನಲ್ಲಿ ಹಾಕಿಟ್ಟರೆ ಉತ್ತಮ. ಬೇಕಿದ್ದರೆ
1/2 ಟೀ
ಚಮಚೆ ಅಜ್ವಾನ್ ನನ್ನು ಸೇರಿಸಬಹುದು.
ಲಸ್ಸಿ
1/2 ಲೋಟ ಕೊಬ್ಬಿಲ್ಲದ ಮೊಸರು (fat free yoghurt)
1/2 ಟೀ ಚಮಚೆ ಹುರಿದ ಜೀರಿಗೆಯ ಪುಡಿ
1/4 ಟೀ ಚಮಚೆ ಉಪ್ಪು (ನಿಮಗೆ ಬೇಕೇ ಬೇಕು ಅನಿಸಿದರೆ
ಮಾತ್ರ)
4-6 ಎಲೆ ಪುದೀನಾ (ಇಷ್ಟವಿದ್ದಲ್ಲಿ)
1 ½ ಒಂದೂವರೆ ಲೋಟ ನೀರು
ಈ ಎಲ್ಲಾ ಪದಾರ್ಥಗಳನ್ನು ಎಲೆಕ್ಟ್ರಿಕ್ ಬ್ಲೆಂಡರ್ ನಲ್ಲಿ
ಸೇರಿಸಿ, 3-5 ಸೆಕೆಂಡುಗಳ ಕಾಲ ಮಿಶ್ರಣ ಮಾಡಿ.
—----
ಆಹಾರವೇ ನಿಮಗೆ ಔಷಧಿಯಾಗಲಿ

Comments
Post a Comment