ಹೇಗಿದ್ದೋನು ಹೇಗಾದ ! ?

 ಹೇಗಿದ್ದೋನು ಹೇಗಾದ ! ? 

 ಲೇಖಕರು “ ಎಂ ಆರ್ ವೆಂಕಟರಾಮಯ್ಯ


 ಶೀರ್ಷಿಕೆಯಲ್ಲಿನ ಉದ್ಗಾರವನ್ನು ನಮ್ಮ ಜನ ವಿಭಿನ್ನ ಸಂದರ್ಭಗಳಲ್ಲಿ ಬಳಸುವುದನ್ನು ನಾವು ಕೇಳುತ್ತಿರುತ್ತೇವೆ.. ಉದಾಹರಣೆಗೆ. ಕಡುಬಡತನದಲ್ಲಿದ್ದ ಒಬ್ಬ ವ್ಯಕ್ತಿಗೆ ದಿಢೀರನೆ ಸಿರಿ ದೊರೆತ ಕಾರಣ ಅವನು ವಿಲಾಸಿ ಜೀವನ ನಡೆಸುವುದನ್ನು ಕಂಡವರು, ನೋಡಿದರೇನ್ರೀ ! ಈ ಮೊದಲು ತಿನ್ನೋಕಿದ್ರೆ ಉಡೋಕೆ ರ‍್ಲಿಲ್ಲ, ಅಂತಹವನು ಈಗ ನೋಡಿ ಎಂತಹಾ ವೈಭೋಗದ ಜೀವನ ನಡೆಸ್ತಿದ್ದಾನೆ ! ಹೇಗಿದ್ದೋನು ಹೇಗಾದನಪ್ಪಾ ! ಅಂತ ಅಚ್ಚರಿ ವ್ಕಕ್ತಪಡಿಸ್ತಸಾರೆ ಜನ. 

 ಇದಕ್ಕೆ ವಿರುದ್ಧವಾದ ಸನ್ನಿವೇಶ : ಸಿರಿಯ ಉತ್ತುಂಗದಲ್ಲಿದ್ದವನು ಕಾರಣಾಂತರಗಳಿಂದ ಕಡು ಬಡತನಕ್ಕೆ ಇಳಿದಾಗಲೂ ಸಹಾನುಭೂತಿ ತೋರಿಸಿದ ಜನ ‘ಹೇಗಿದ್ದೋನು ಹೇಗಾದನಪ್ಪಾ ! ಪಾಪ ! ಅಂತಾರೆ..

 ಆರೋಗ್ಯವಾಗಿದ್ದವನೊಬ್ಬ ಇದ್ದಕ್ಕಿದ್ದಂತೆ ವಾಸಿಯಾಗದ ಕಾಯಿಲೆಗೆ ಸಿಲುಕಿ ನರಳುತ್ತಿರುವಾಗ, ‘ಹೇಗಿದ್ದೋನ್ ಹೇಗಾಗೋದ ? ಅಂತಾರೆ ಕಂಡ ಜನ. 

 ಇದುವರೆಗೂ ಉಲ್ಲೇಖಿಸಿದ ಸಂದರ್ಭಗಳನ್ನು ಹೊರತುಪಡಿಸಿದ ಒಂದು ಸಂದರ್ಭದಲ್ಲೂ ವ್ಯಕ್ತಿಗೆ ಹೀಗಾಬಹುದು ಎಂದು ಯಾರೂ, ಯಾವಾಗಲೂ, ಊಹಿಸಲೇ ಆಗದ ಸ್ಥಿತಿ ತಲುಪಿದಾಗಲೂ ‘ಅಯ್ಯೋ, ಹೇಗಿದ್ದೋನ್ ಹೇಗಾಗ್ ಬಿಟ್‌ನಪ್ಪಾ’ ! ಎಂಬ ಉದ್ಗಾರ ನಮ್ಮ ಬಾಯಿಂದ ಹೊರಬರಬಹುದು.ಅಂದಿನ ಕಾಲದ ಹಲವು ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾದ, ನಾ ಓದಿದ ಇಂತಹಾ ಎರಡು ಪ್ರಸಂಗಗಳು ಹೀಗಿವೆ : 

 20 ಜುಲೈ 1919 ರಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ಜನಿಸಿದ ಎಡ್‌ಮಂಡ್ ಹಿಲರಿ ನಂತರದ ಅವಧಿಯಲ್ಲಿ ಒಬ್ಬ ಸಾಹಸಿ ಪರ್ವತಾರೋಹಿ, ಅನ್ವೇಷಕ ಎನಿಸಿಕೊಂಡನು. ಇವನ ಸಹವರ್ತಿ ತೇನ್ಜಿಂಗ್ ನಾರ್ಗೆ ಶೇರ್ಪಾ ಜನಾಂಗದ ಒಬ್ಬ ಪರ್ವತಾರೋಹಿಯಾಗಿದ್ದು ಈತನು ಅಂದು ಹಿಮಾಲಯ ಪರ್ವತದ ಆರೋಹಣೆಗೆ ಪ್ರÀಯತ್ನಿಸುತ್ತಿದ್ದ ತಂಡಗಳಿಗೆ ನೆರವು ನೀಡುತ್ತಿದ್ದನು. ಇಂತಹಾ ನೆರವು ನೀಡುವ ಕಾರ್ಯದಲ್ಲ್ಲಿ ಹಲವು ವರ್ಷಗಳಲ್ಲಿ ಇವರಿಗೆ ದೊರಕಿದ ಅನುಭಗಳನ್ನು ಬಳಸಿ ಈ ಇಬ್ಬರ ಜೋಡಿ ಮೌಂಟ್ ಎವೆರೆಸ್ಟ್ ಪರ್ವತವನ್ನು ಏರುವ ಪ್ರಯತ್ನ ಪ್ರಾರಂಭಿಸಿದರು. 

 ಯಾವದೋ ಒಂದು ಸಣ್ಣ ಗುಡ್ಡ ಬೆಟ್ಟ ಪರ್ವತವನ್ನೋ ಏರುವಷ್ಟು ಸುಲಭ ಕಾಯಕವಾಗಿರಲಿಲ್ಲ ಇವರು ಕೈಹಾಕಿದ್ಧ ಕಾರ್ಯ. ಸದಾ ದಟ್ಟ ಮಂಜಿನಿAದ ತುಂಬಿದ್ದ ತಾಣವಾಗಿದ್ದು ಆ ಹಿಮ, ಕೊರೆತ, ಥಂಡಿಗೆ ಶರೀರದ ಅಗಾಂಗಗಳು ಕದಲಿಸಲಾರದಷ್ಟು ಸೆಟೆದು ಕೊಳ್ಳುತ್ತಿದ್ದ ವಾತಾವರಣ, ಹವಾಮಾನದಲ್ಲಿ ಇವರು ಸಾಹಸ ಕಾರ್ಯಕ್ಕೆ ಕೈಹಾಕಿದ್ದರು. ಹೀಗಾಗಿ. ಮೌಂಟ್ ಎವೆರೆಸ್ಟ್ ಏರುವಿಕೆ ದೊಡ್ಡ ಸವಾಲಿನ ಹಾಗೂ ಅತ್ಯಂತ ಅಪಾಯಕಾರಿ ಕಾರ್ಯವಾಗಿತ್ತು. ಇವರಿಗೂ ಮುಂಚೆ ಈ ಪರ್ವತ ಏರುವ .ಈ ಪ್ರಯತ್ನದಲ್ಲಿ ಯಶಸ್ಸು ಪಡೆಯಲಾಗದೆ ಹಲವು ತಂಡಗಳು ತಮ್ಮ ಪ್ರಯತ್ನವನ್ನು ಅರ್ಧ ಹಾದಿಯಲ್ಲಿಯೇ ಕೈ ಬಿಟ್ಟಿದ್ದುವು. 

 ಇಲ್ಲಿನ ಪರ್ವತದ ಮೇಲೆ ಸಂಕುಚಿತ ಗಾಳಿ, ದಿಢೀರನೆ ಬದಲಾಗುವ ಹವಾಮಾನ, ಸತತವಾಗಿ ಸುರಿಯುತ್ತಿರುವ ಹಿಮಪಾತ, ತೀವ್ರ ಕಡಿದಾದ ಬಂಡೆಗಳು ಹಲವೆಡೆಗಳಾದರೆ ಕೆಲವೆಡೆ ದೈತ್ಯಾಕಾgದ ಬಂಡೆಗಳು, ಇವುಗಳ ನಡುವಿನ ಬಿರುಕು ಕಂದಕಗಳು ಇವರ ಕಾರ್ಯಕ್ಕೆ ಅಡೆ ತಡೆಯುಂಟುಮಾಡಿದ್ದುವು. ಜೊತೆಗೆ ಪರ್ವತದ ಮೇಲೆ ಏರುತ್ತ ಏರುತ್ತಿದ್ದ ಹಾಗೇ ಈ ಎತ್ತರ ಮನುಷ್ಯವ ಮೆದುಳಿಗೆ ಅಗತ್ಯವಾಗುವಷ್ಟು ಆಮ್ಲಜನಕ ಪೂರೈಸುವುದಿಲ್ಲ, ಈ ಕಾರಣದಿಂದ 8000 ಅಡಿಗಳ ಮೇಲಿನ ಎತ್ತರಕ್ಕೆ ಎರುವ ಪರ್ವತಾರೋಹಿಗಳು ಸಾಮಾಣ್ಯವಾಗಿ ‘ಪರ್ವತÀ ಕಾಯಿಲೆಗೆ ಒಳಗಾಗುತ್ತಿದ್ದರು. ಅಕಸ್ಮಾತ್ ಇವನ್ನು ನಿರ್ಲಕ್ಷಿಸಿ ಪರ್ವತ ಏರಿದರೆ ಈ ರೋಗ ಲಕ್ಷಣಗಳು ರೋಗವನ್ನು ಮತ್ತಷ್ಟು ಉಲ್ಭಣಗೊಳಿಸುತ್ತಿತ್ತು,

 ಆಹಾರದ ಕೊರತೆ, ನಿದ್ರೆಯ ಕೊರತೆ, ತಲೆನೋವು, ಇತ್ಯಾದಿಗಳೂ ಪರ್ವತಾರೋಹಿಗಳನ್ನು ಕಾಡುತ್ತಿತ್ತು.. ಇಂತಹಾ ಹಲವು ಅಡ್ಡಿಗಳಿಗೆ ಆರೋಹಿಗಳು ತಮ್ಮನ್ನು ತಾವು ಒಗ್ಗಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತಿತ್ತು. ಈ ಕಾರಣದಿಂದ .ಮೌಂಟ್ ಎವೆರೆಸ್ಟ್ ಏರಲು ಹಿಲೇರಿ ಮತ್ತು ತೇನ್ ಜಿಂಗ್‌ಗೆ ಬಹಳ ಕಾಲ ಹಿಡಿಯಿತು.

 ಕೊನೆಗೂ ಈ ಎಲ್ಲಾ ತರಹದ ಅಡೆ ತಡೆಗಳನ್ನೆಲ್ಲಾ ಮೀರಿ ಈ ಎಡ್‌ಮಂಡ್ ಹಿಲರಿ ತೇನ್‌ಜಿಂಗ್ ನಾರ್ಗೆ ಜೋಡಿ 1953 ರ ಮೇ 29 ರ ಬೆಳಗ್ಗೆ 11. 30 ಕ್ಕೆ ಸುಮಾರು 29,035 ಅಡಿ (8,850 ಮೀ) ಎತ್ತರವಿದ್ದ ನೇಪಾಳ ಮತ್ತು ಟಿಬೆಟ್, ಚೀನಾದ ಗಡಿಯಲ್ಲಿನ ಮೌಂಟ್ ಎವೆರೆಸ್ಟ್ ಶಿಖರವನ್ನು ಅಂತಿಮವಾಗಿ ಏರಿದ ಪ್ರಪ್ರಥಮ ಪರ್ವತಾರೋಹಿಗಳಾಗಿ ಪ್ರಸಿದ್ಧಿ ಗಳಿಸಿದರು .ತಮ್ಮ ಜೀವನದ ಅತ್ಯಂತ ಹಿಗ್ಗಿನ ಈ ಸುಸಂದರ್ಭದಲ್ಲಿ. ಹಿಲರಿ ತೇನ್‌ಜಿಂಗ್ ಪರಸ್ಪರರು ಕೈ,ಕುಲುಕಿ ಅಪ್ಪಿ. ಸಂತಸ ವಿನಿಮಯಮಾಡಿಕೊಂಡರು. ಅಷ್ಟು ಸಹಸ್ರಾರು ಅಡಿಗಳ ಎತ್ತರದಲ್ಲಿ ಇವರ ಉಸಿರಾಟಕ್ಕೆ ಗಾಳಿ ಕಡಿಮೆ ಸಿಗುವ ಕಾರಣ ಮೌಂಟ್ ಎವೆರೆಸ್ಟ್ ಮೇಲೆ ಹೆಚ್ಚು ಕಾಲ ಇವರು ಉಳಿದರೆ ಪ್ರಾಣಾಪಾಯ ಎಂಬ ಸತ್ಯ ಅರಿತು ತಮಗೆ ಸಿಕ್ಕಿದ ಅಲ್ಪ ಕಾಲದಲ್ಲೇ ಅಲ್ಲಿನ ಛಾಯಾ ಚಿತ್ರಗಳನ್ನು ತೆಗೆದುಕೊಂಡು ಪರ್ವತದಿಂದ ಕೆಳಗೆ ಇಳಿಯಲಾರಂಭಿಸಿದರು. 

 ಈ ವೇಳೆಗೆ ಇವರ ಯಶಸ್ವಿ ಆರೋಹದ ಸಂತಸದ ಸುದ್ದಿ ವಿಶ್ವದಾದ್ಯಂತ ಹರಡಿ ಎಲ್ಲೆಡೆಗಳಲ್ಲೂ ಜನ ಈ ವಿಜಯಶಾಲಿಗಳಿಗೆ ಜಯಘೋ಼ಷ ಕೂಗಿದರು. ಈ ವೀರರ ಸಾಹಸಕ್ಕೆ ಪ್ರಪಂಚದ ಹಲವು ರಾಷ್ಟçಗಳು ಮೆಚ್ಚುಗೆ ವ್ಯಕ್ತಪಡಿಸಿದುವು. 

 ಪ್ರಪಂಚದಲ್ಲೇ ಅತ್ಯಂತ ಎತ್ತರದ ಮೌಂಟ್ ಎವೆರಸ್ಟ್ ಏರಿ ವಿಶ್ವಪ್ರಖ್ಯಾತಿ ಗಳಿಸಿದ ಇವರ ಯಶೋಗಾಥೆ ಕಂಡು ಕೇಳಿದ ಜನ “ ಹೌದೇ ! ಪ್ರಾಣದ ಹಂಗು ತೊರೆದು ಆ ಮಂಜಿನ ತಾಣದಲ್ಲಿ ಅಷ್ಟು ಸಾವಿರ ಅಡಿಗಳ ಎತ್ತರ ಏರಿದರೆ ! ಅದೆಂತಹಾ ಗಟ್ಟಿ ಗುಂಡಿಗೆಯಪ್ಪಾ ಇವರದು ! ಹೇಗಿದ್ದವರು ಹೇಗಾದರಪ್ಪಾ ! “ ಎಂಬ ಅಚ್ಚರಿ ವ್ಯಕ್ಯಪಡಿಸಲಾರಭಿಸಿದರು.

 1953 ಜೂನ್ 6 ಬ್ರಿಟಿಷ್ ಸಾಮ್ರಾಜ್ಯವು ಹಿಲರಿಯನ್ನು “ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್’ ಎಂಬ ಪ್ರಶಸ್ತಿ ನೀಡಿ ಗೌರವಿಸಿತು. ಕ್ವೀನ್ ಎಲಿಜೆಬೆತ್ ‘ಕಾರೊನೇಷನ್ ಮೆಡಲ್’ ದೊರೆಯಿತು. 1987 ರಲ್ಲಿ “ಆರ್ಡರ್ ಆಫ್ ನ್ಯೂಜಿಲ್ಯಾಂಡ್’ ಎಂಬ ಗೌರವ, 1958 ರಲ್ಲಿ ‘ಪೋಲಾರ್ ಮೆಡಲ್’, ಫ್ರಾನ್ಸ್, ನೇಪಾಳ, ಪೋಲೆಂಡ್ ಹೀಗೆ ಹಲವು ವಿದೇಶಿ ಸರ್ಕಾರಗಳು ಹಿಲರಿಯ ಮೇಲೆ ಗೌರವ ಪ್ರಶಸ್ತಿಗಳ ಮಳೆ ಸುರಿಸಿತು. ಭಾರತ ಸರ್ಕಾರವೂ ಹಿಲರಿಗೆ ಹೈಯೆಸ್ಟ್ ಸಿವಿಲಿಯನ್ ಅವಾರ್ಡ್ ಆದÀ “ಪದ್ಮ ವಿಭೂಷಣ” ಪ್ರಶಸ್ತಿಯನ್ನು ನೀಡಿತು. ಇದೆಲ್ಲಾ ಹಿಲರಿಯ ಉತ್ತುಂಗ ಸ್ಥಿತಿ. 

 ಇದೆಲ್ಲಾ ಅಂದಿನ ಈತನ ಅವಿಸ್ಮರಣಿಯ ಸಾಧನೆಯಾಗಿ 50 ವರ್ಷಗಳು ಕಳೆದ ಸಂದರ್ಭಾಚರಣೆ : ಸ್ಮರಣಾರ್ಥ ಸಮಾರಂಭ ಏರ್ಪಾಟಾಗಿತ್ತು.. ಇದರ ಅಂಗವಾಗಿ ಅಭಿಮಾನಿಗಳು ಈತನನ್ನು ಸನ್ಮಾನಿಸಲು ಆಹ್ವಾನಿಸಿದ್ದರು. ಈ ದಿಸೆಯಲ್ಲಿ ಎಲ್ಲ ಸಿದ್ಧತೆಗಳೂ ಮುಗಿದಿದ್ದುವು. ಗಣ್ಯಾತಿಗಣ್ಯರು ಸಭೆಗೆ ಆಗಮಿಸಿದ್ದರು. ಅತಿಥಿಯ ಆಗಮನ ಮಾತ್ರ ಬಾಕಿ ಇತ್ತು. ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಎಲ್ಲರ ದೃಷ್ಟಿ ಡಯಾಸ್ ಕಡೆಗೆ ಹೊರಳಿತು. ಸನ್ಮಾನ ಸ್ವೀಕರಿಸಲು ಉತ್ಸುಕನಾಗಿ ಆಗಮಿಸಿದ ಈ ಅತಿಥಿಗೆ ದುರದೃಷ್ಟ ಕೈ ಕೊಟ್ಟಿತು.. ಅಲ್ಲಿದ್ದ ಆರು ಮೆಟ್ಟಿಲುಗಳಿದ್ದ ವೇದಿಕೆಯನ್ನು ಈತ ಏರಲಾರದೆ ಮೈ ತುಂಬಾ ಬೆವರು ಸುರಿಸಿ ಏದುಸಿರು ಬಿಡುತ್ತಾ ಸುಸ್ತಾಗಿ ನಿಂತ. ಕೂಡಲೇ ಅಭಿಮಾನಿಗಳು ಈತನನ್ನು ಕೈಗಳ ಮೇಲೆತ್ತಿ ತಂದು ಆಸನದಲ್ಲಿ ಕುಳ್ಳರಿಸಿದರು. ಹಿಂದೊಮ್ಮೆ 29, 035 ಅಡಿ ಎತ್ತರದ ಮೌಂಟ್ ಎವೆರೆಸಟ್ ಶಿಖರವೇರಿದ ತಾನು ಇಂದು ಕೇವಲ 6 ಮೆಟ್ಟಿಲುಗಳಿರುವ ವೇದಿಕೆಯನ್ನು ಹತ್ತಲಾರದಾದೆನಲ್ಲಾ ! ಇಂತಹಾ ನನ್ನ ಅಸಹಾಯಕತೆಯನ್ನು ಜನ ನೋಡಿ ‘ಇವನೇನಾ ಅಂದು ಅಷ್ಟು ಅಡಿ ಎತ್ತವಿರುವ ಎವೆರೆಸ್ಟ್ ಏರಿದ್ದು’ ಎಂದು ಗಹ ಗಹಿಸಿ ನಗುವ ದುಸ್ಥಿತಿಗೇಕೆ ನನ್ನ ಏಕೆ ತಂದೆ ದೇವರೇ ? ಇದಕ್ಕೆ ಬದಲು ನಾ ನಿಂತಿರುವ ಭೂಮಿಯೇ ಬಾಯಿ ತೆರೆದು ನನ್ನ ನುಂಗಬಾರದಿತ್ತೇ ! ಎಂಬ ದುಃಖ ಅವನನ್ನು ಬಾಧಿಸಿ ಕಣ್‌ಗಳಲ್ಲಿ ನೀರು ತುಂಬಿ ಗಳಗಳನೆ ಅಳಲಾರಭಿಸಿದನು, ‘ಹೇಗಿದ್ದೋನ್ ಹೇಗಾದನಪ್ಪಾ ! ಪಾಪ ‘ ಎಂದು ಅಲ್ಲಿ ನೆರೆದಿದ್ದವರು ಕಂಬನಿ ಮಿಡಿದರು. 

 ಇಂತಹುದೇ ಎರಡನೆಯ ದುರಂತ ಪ್ರಕರಣ, “ಐರನ್ ಲೇಡಿ, ಉಕ್ಕಿನ ಮಹಿಳೆ” ಎಂಬೆಲ್ಲಾ ಹೊಗಳಿಕೆಗೆ ಪಾತ್ರಳಾಗಿ, ಹೊರ ಜಗತ್ತಿನಲ್ಲಿ ಪ್ರಖ್ಯಾತಳಾಗಿ, ಹನ್ನೊಂದು ವರ್ಷಗಳ ಕಾಲ, ಅನಭಿಷಕ್ತ ರಾÀಣಿಯಂತೆ, ಇಂಗ್ಲಿಷ್ ಸಾಮ್ರಾಜ್ಯವನ್ನು ಅಳಿದವಳು, ಬ್ರಿಟನ್ನಿನ ಪ್ರಧಾನಿ, ‘ಮ್ಯಾಗಿ’ ಎಂದೇ ಪ್ರಸಿದ್ಧಳಾಗಿದ್ದ ಮಾರ್ಗರೇಟ್ ಥ್ಯಾಚರ್. ಇದೇ ‘ಮ್ಯಾಗಿ’ ಮುಂದೆ, ಪ್ರತಿ ಪಕ್ಷದ ನಾಯಕರೂ ಮಾತನಾಡಲಾರದವರಾಗಿದ್ದರು. ಮಾತು, ಕೃತಿಯಲ್ಲಿ ಅಷ್ಟು ಅಸಾಧಾರಣ ಫ್ರೌಢಿಮೆ ಸಾಧಿಸಿದ್ದ ಈಕೆ, ಜನ ಪ್ರಿಯತೆಯಲ್ಲಿ ಅಂದಿನ ‘ವಿನ್‌ಸ್ಟನ್ ಚರ್ಚಿಲ್‌ಗೆ ಸಮನಾಗಿದ್ದಳು. ಎಂದು ಈಕೆಯನ್ನು ಅಂದಿನ ಜನ ಪತ್ರಿಕೆಗಳು ಬಣ್ಣಿಸಿದ್ದುವು. ಈಕೆಯ ವಿರುದ್ಧ ಬಲವಾಗಿ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸುತ್ತಿದ್ದ ಹಲವು ನಾಯಕರು, ಈಕೆಯ ಮುಂದೆ ಮಾತು ಮರೆತು ಹೋದಂತೆ ಮಂಕಾಗಿ ಕುಳಿತಿರುತ್ತಿದ್ದರು. ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳಬಹುದಾದ್ದು ಎಂದರೆ, ಹೌಸ್ ಅಫ್ ಕಾಮನ್ಸ್ : ಲಾರ್ಡ್ಸ್ನಲ್ಲಿ ಮ್ಯಾಗಿ ಮಾತಿಗೆ ನಿಂತರೆ, ಪಕ್ಕದ ಥೇಮ್ಸ್ ನದಿಯ ಜುಳು ಜುಳು ಕೇಳಿಸುವಷ್ಟು ನಿಶ್ಯಬ್ಧವಿರುತ್ತಿತ್ತು. 

ಆದರೆ ಇಂತಹಾ ವಗಿಗೆ ಮುಂದಾದ್ದೇನು ! 50 ವರ್ಷಕ್ಕೂ ಹೆಚ್ಚಿನ ಕಾಲದಿಂದ ಸಹ ವರ್ತಿಯಾಗಿದ್ದ ಪತಿ, ಡೆನಿಸ್, ಕೆಲವೇ ದಿನಗಳ ನಂತರ ತೀರಿಕೊಂಡನು. ಗಂಡನ ನಿಧನ, ಮ್ಯಾಗಿಯಲ್ಲಿ ನಿರ್ಲಪ್ತತೆ ಸೃಜಿಸಿತ್ತು. ಏಕಾಂಗಿತನ ಕಾಡತೊಡಗಿತು. ಆದ ಆಘಾತದಿಂದ ಆಕೆ ತತ್ತರಿಸಿದ್ದಳು. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಮ್ಯಾಗಿ, ವಾಕ್ ಮತ್ತು ಶ್ರವಣ ಶಕ್ತಿ ಕಳೆದುಕೊಂಡಳು. ದೇಹ ಸೊರಗಿ, ಮುಖ ಸುಕ್ಕಾಗಿ, ಮರೆವು ದಟ್ಟವಾಗಿ ಆವರಿಸಿತು. ತನ್ನೆದುರಿಗಿದ್ದವನ್ನೂ ಗುರುತಿಸಲಾರದಷ್ಟು ಮರೆವು, ದೃಷ್ಟಿ ದೋಷ ಮ್ಯಾಗಿಯಲ್ಲಿ ನೆಲೆಸಿತು. ಹಿಂದೊಂದು  ಕಾಲಕ್ಕೆ, ಆಕೆಯಲ್ಲಿದ್ದ ಆತ್ಮ ವಿಶ್ವಾಸ, ಛಲಗಳನ್ನು ಕಂಡು ಕರುಬುತ್ತಿದ್ದವರು, ಈಕೆಯ ಧೈರ್ಯ ಸ್ಥೈರ್ಯ ಗಳಿಗೆ ಮಾರುಹೋಗಿದ್ದವರು, ಈಕೆಯ ಇಂದಿನ ಸ್ಥಿತಿಯನ್ನು ಕಂಡು ಸ್ಥಂಭೀಭೂತರಾದರು. 

 ಹೀಗೆ, “ಬ್ರಿಟಿನ್ನಿನ ಏಕ ಮಾತ್ರ ಪುರುಷ ಪ್ರಧಾನಿ” ಎಂಬ ಕೀರ್ತಿಗೆ ಪಾತ್ರಳಾದ ಮ್ಯಾಗಿಯನ್ನು ಆಕೆಯ ಬದುಕೇ ದಾರುಣವಾಗಿ ಪೀಡಿಸಿ, ನಿಕೃಷ್ಟ, ಹತಭಾಗ್ಯ, ಬದುಕನ್ನು ಸವೆಸುವಂತೆ ಮಾಡಿತು. ಅಂದಿನ ಉಕ್ಕಿನ ಮಹಿಳೆಯ ಮೈ ಮನಕ್ಕೆಲ್ಲಾ ಹಿಡಿಯಿತು ತುಕ್ಕು. “ಬದುಕೆಂದರೆ ಈ ಪಾಟಿ ಕಠೋರವೇ “! ? 

 ಇದುವರೆಗೂ ನೀಡಿದ ಕಷ್ಟಗಳ ಸರ ಮಾಲೆಯ ವಿವರಣೆ ಕೇಳಿ, ಇದು ಕೇವಲಾ ಆ ಇಬ್ಬರೇ ವ್ಯಕ್ತಿಗಳದ್ದು ಅಷ್ಟೇ, ನಮಗೆ, ಅವರಿಗೆ, ಇವರಿಗೆ , ಉಹೂಂ, ಹೀಗಾಗಲಾರದು, ಆಗಲಾರದು, ನಮ್ಮದು ಒಳ್ಳೇ ಹಣೆಯ ಬರಹವಿರುತ್ತೆ ಎಂದುಕೊಂಡರೆ ಅದು ಮೂರ್ಖತನವಾಗಬಹುದು,. ಏಕೆಂದರೆ ಅವರ ಹಣೆ ಬರಹ ಸೀಸ, ಹಿತ್ತಾಳೆಯ ಲೇಖನಿಯಿಂದ ಬರೆದಿದ್ದು, ನಮ್ಮದೆಲ್ಲಾ ಬೆಳ್ಳಿ ಬಂಗಾರದ ಲೇಖನಿಯಲ್ಲಿ ಬರೆದಿರುತ್ತೆ ಅಂತಾ ಬೀಗಬಾರದು. future is not known, anything may happen at any time ಯಾರ ಯಾರ ಜೀವನ ಯಾವಾಗ, ಯಾವ, ದಿಣ್ಣೆ ಏರಬೇಕಾಗುತ್ತೊ, ಯಾವ ಹಳ್ಳಕ್ಕೆ ಇಳಿಯಬೇಕಾಗುತ್ತೊ ತಿಳಿಯದು. ಇದು ಎಲ್ಲರಿಗೂ ಅವ್ಯಕ್ತ. ಅದ್ದರಿಂದ ಪ್ರಸಕ್ತ ವ್ಯಕ್ತಿಗಳ ದುಸ್ಥಿತಿ ಕೇಳಿ, ಅಯ್ಯೋ, ಪಾಪ, ಹೇಗಿದ್ದೋರು ಹೇಗಾದರಪ್ಪಾ ! ಹೀಗಾಗಬಾರದಿತ್ತು, ಎಂಬ ಮಾನವ ಸಹಜ ಕರುಣೆ ಸಹಾನುಭೂತಿ ವ್ಯಕ್ತ ಪಡಿಸಿದರೆ ನಾವು ಮನುಷ್ಯರು ಎನಿಸಿಕೊಳ್ಳಲು ಅರ್ಹತೆ ಪಡೆಯಬಹುದೇನೋ. 

 ವ್ಯಕ್ತಿಯನ್ನು ಹೀಗೆ ಹೇಳದೆ, ಕೇಳದೆ, ಹಳ್ಳಕ್ಕೆ ಬೀಳಿಸುವುದು, ಅವನನ್ನು ಅಸಹಾಯಕನನ್ನಾಗಿ ಮಾಡುವುದು, ನಿಜಕ್ಕೂ ಘೋರ, ಅತಿ ಘೋರ. ಬದುಕಿಯೂ ನರಳುವ ಈ ಸ್ಥಿತಿ, ‘ಜೀವಚ್ಛವವಿದ್ದಂತೆ. ಆತ್ಮೀಯ ಸಂಗಾತಿಯಂತೆ, ನಲುಮೆಯ ನೊಗದ ಜೊತೆಗಾರನಂತೆ, ಕೈ ಹಿಡಿದು ಕರೆದುಕೊಂಡು ಹೋಗುತ್ತಿದ್ದ ಈ ಜೀವನ, ಹೀಗೆ ದಿಢೀರನೆ, ನಡು ನೀರಿನಲ್ಲಿ ಕೈ ಬಿಟ್ಟು, ನಂತರ, ಏನೂ ಆಗೇ ಇಲ್ಲವೇನೋ ಎಂಬಂತೆ, ಅತಿ ಶಾಂತತೆಯಿಂದ, ಮೌನವಾಗಿ ನಡೆದು ಹೋಗುವುದು, ಘಾತುಕದ ಪರಮಾವಧಿ ಎನಿಸುವುದಿಲ್ಲವೇ ! ನಮ್ಮ ಬದುಕೇ, ನಮ್ಮ ವಿರೋಧಿ ಸ್ಥಾನದಲ್ಲಿ ನಿಂತು, ನಮ್ಮ ಹತಾಶೆಯನ್ನು ಕಂಡು ಗಹ ಗಹಿಸಿ ನಗುವುದು ದೊಡ್ಡ ದುರಂತ. ಅವನ ಬದುಕೇ ಅವನನ್ನು ಅಟ್ಟಿಸಿಕೊಂಡು ಬಂದು ಹೊಡೆಯುವುದೇ ! ಹೇಗಿದ್ದೋರು ಹೇಗಾದರಪ್ಪಾ ! ? ಇವೆಲ್ಲವನ್ನೂ ನಂಬಲಾರದಾಗಿದ್ದರೂ ನಂಬಬೇಕು. ಏಕೆಂದರೆ ಇದು ಜೀವನ ಇವರನ್ನು ನಡೆಸಿದ ಪರಿ. “ಬದುಕೆಂದರೆ ಇಷ್ಟು ಘೋರವೇ ! ?

Comments