ರಿಸ್ಕ್ ಬೇಡ ಅಂದರೆ ರಸ್ಕ್ ತಿನ್ನಲಾಗದು

 ರಿಸ್ಕ್ ಬೇಡ ಅಂದರೆ ರಸ್ಕ್ ತಿನ್ನಲಾಗದು

 ಲೇಖಕರು : ಎಂ ಆರ್ ವೆಂಕಟರಾಮಯ್ಯ

 


 ಶೀರ್ಷಿಕೆಯಲ್ಲಿ ‘ರಿಸ್ಕ್, ರಸ್ಕ್ ಎಂಬ ಪದಗಳು ಪ್ರಾಸಬದ್ದವಾಗಿವೆ ಎಂಬ ಕಾರಣದಿಂದ ಬಳಸಲಾಗದೆ. ‘ಕಷ್ಟ ಪಟ್ಟರೆ ಫಲುವುಂಟು, ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಬಳಕೆಯಲ್ಲಿರುವ ಗಾದೆಗಳು ಶೀರ್ಷಿಕೆಯಲ್ಲಿರುವ ವಾಕ್ಯಕ್ಕೆ ಬಹು ಸಮೀಪವಾÀಗಿವೆ. 

 ‘ರಿಸ್ಕ್’ ಎಂಬ ಪದಕ್ಕೆ ಸಾಹಸ ಕೈಗೊಳ್ಳುವುದು, ಅವಕಾಶಗಳನ್ನು ಹುಡುಕುತ್ತಾ ಹೋಗುವುದು, ಅಧೃಷ್ಟ ಪರೀಕ್ಷೆಗೆ ಒಳಪಡುವುದು ಮೊದಲಾದ ಮುಖಗಳಿವೆ ಇದೇ ರಿಸ್ಕ್ ಎಂಬ ಪದಕ್ಕೆ ಇಂಗ್ಲೀಷಿನಲ್ಲಿ ಅಡ್ವೆಂಚರ್, ಚಾನ್ಸ್, ಡೇರ್, ಎಂಡೇAಜರ್, ಸ್ಟೇಕ್, ಪೆರಿಲ್, ತ್ರೆಟ್ ಮೊದಲಾದ ಪದಗಳು ಬಳಖೆಯಲ್ಲಿವೆ.. ಈ ರಿಸ್ಕ್ನಲ್ಲಿ ಹಾದಿ ಸುಗಮವಾಗಿರಬಹುದು, ಮುಳ್ಳು ಕಲ್ಲುಗಳು ಇಳಿಜಾರು ಏರುಗಳೂ ಇರಬಹುದು, ಈ ಹಾದಿ, ಮಾರ್ಗದಲ್ಲಿ ನಾವು ಇಚ್ಛಿಸಿದ ಸತ್ಫಲ ಸಿಗಬಹುದು, ಅಪಾಯ ಗಂಡಾAತರವನ್ನೂ ಎದುರಿಸಬೇಕಾಗಬಹುದು, ಹಾನಿಯೂ ಸಂ¨sವಿಸಬಹುದು, ಆಪತ್ತನ್ನೂ ಎದುರಿಸಬೇಕಾಗಬಹುದು, ಈ ಹಿನ್ನೆಲೆಯಲ್ಲಿ ರಿಸ್ಕ್ ಅರ್ಥಾತ್ ಸಾಹಸ ಕೈಗೊಳ್ಳಲು ‘ಕಮ್ ವಾಟ್ ಮೇ, ಐ ವಿಲ್ ಫೇಸ್ ಇಟ್, ಬಂದಿದ್ದೆಲ್ಲಾ ಬರಲಿ, ಗೋವಿಂದನ ದಯೆಯಿರಲಿ, ಎಂದು ಎದೆ ಗಟ್ಟಿ ಮಾಡಿಕೊಂಡು ಮುನ್ನುಗ್ಗುವ ಧೈರ್ಯ,ಸಾಹಸವಿರಬೇಕು. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಗಾದೆಯಲ್ಲಿ ನಂಬಿಕೆಯಿರಬೇಕು. ನನ್ನೀ ಕಾರ್ಯದಿಂದ ಸಿಹಿ ಸಿಗಲಿ, ಕಹಿ ಬರಲಿ, ನಾ ಉಣ್ಣುತ್ತೇನೆ ಎಂಬ ನಿರ್ಧಾವಿರಬೇಕು. ಈ ಹಿನ್ನೆಲೆಯಲ್ಲಿ ಪುರುಷ ಪ್ರಯತ್ನ ಮಾಡಿದಾಗ ದೈವ ಕೃಪೆ ಜೊತೆಯಾದರೆ ನಮ್ಮ ರಿಸ್ಕ್ ಪರಿಣಾಮವಾಗಿ ರಸ್ಕ್ ಸಿಹಿ ತಿನ್ನಬಹುದು. 

 ಒಂದು ವೇಳೆ ನಮ್ಮ ಪ್ರಯತ್ನಕ್ಕೆ ನಿರೀಕ್ಷಿತ ಫಲ ದೊರಕದಿದ್ದರೆ ನಮ್ಮ ಪ್ರಯತ್ನ, ನಮ್ಮ ಅನುಸರಿತ ಕ್ರಮದಲ್ಲಿ ಎಲ್ಲೋ, ಏನೋ, ದೋಷ, ತಪ್ಪು ಆಗಿರಬೇಕು, ಏನಾ ದೋಷ ಎಂಬುದನ್ನು ಪತ್ತೆ ಮಾಡಿ ಅದನ್ನು ಸರಿಪಡಿಸಿ, ಟ್ರೆöÊ ಟ್ರೆöÊ ಅಗೈನ್, ಮರಳಿ ಯತ್ನವ ಮಾಡು ಎಂಬAತೆ ಮರು ಪ್ರಯತ್ನಕ್ಕೆ ಮುಂದಾಗಬೇಕು. ಕಾರ್ಯ ಎಂತಹುದೇ ಇರಲಿ, ರಿಸ್ಕ್ ಗೆ ಸಿದ್ಧರಾಗುವವರ ಪರಿ ಇದು. 

 ಇಷ್ಟೆಲ್ಲಾ ವಿವರಣೆ ತಿಳಿಸಿದ್ದು ಓದಿ, ಅಯ್ಯೋ. ಈ ಪಂಚಾಯತಿಯೆಲ್ಲಾ ನಮಗೇಕಪ್ಪಾ, ನಾವು ಧೈರ್ಯವಾಗಿ ಮುನ್ನುಗಿದಾಗ ಸತ್ಫಲ ದೊರೆತರೆ, ರಿಸ್ಕ್ ತಗೊಂಡಿದ್ದಕ್ಕೂ ಸಾರ್ಥಕ, ಹಾಗಿಲ್ಲದೆ ನಾವಿಚ್ಚಿಸಿದ ಫಲ ದೊರೆಯದೆಯೋ, ಗುರಿ ಸಾಧಿಸಲಾಗದೆಯೋ ನಮ್ಮ ಪ್ರಯತ್ನ ನಿರರ್ಥಕವಾದರೆ ಆಗ ನಮ್ಮ ಶ್ರಮವೆಲ್ಲಾ ವೇಸ್ಟ್ ಆದಂತಲ್ಲವೇ ? ಆಗ ನಮಗೆಷ್ಟು ಕಷ್ಟ ನಷ್ಟ, ಮನಸ್ಸಿಗೆ ಕಷ್ಟ, ಅವಮಾ£ವಾಗುತ್ತೆ. ? ಇವೆಲ್ಲಾ ನಾವಾಗಿ ನಾವೇ ಏಕೆ ತಲೆಯÀ ಮೇಲೆ ಎಳೆದುಕೊಳ್ಳಬೇಕು ! ಆ ಸಿಹಿಗೆ ಆಸೆ ಪಡುವುದೂ ಬೇಡ, ಅದಕ್ಕಾಗಿ ರಿಸ್ಕ್, ಕಷ್ಟ ನಷ್ಟ ಯಾವುದನ್ನೂ ಅನುಭವಿಸುವುದೂ ಬೇಡ ಎನ್ನುವವರು ಸಾಹಸಿಗಳಾಗಲಾರರು. 

 ಹಾಗಾದರೆ ಈ ವರ್ಗದ ಜನರ ಧ್ಯೇಯ, ಗುರಿ ಏನು ? ಎಂದರೆ ರಿಸ್ಕೂ ಬೇಡ, ಇದು ತರಬಹುದಾದ ಅವಾರ್ಡ್ ರಿವಾರ್ಡೂ ಬೇಡ ಎನ್ನುವವರು “ಕಡಿಮೆ ಶ್ರಮಕ್ಕೆ ಹೆಚ್ಚು ಫಲ” ಲೆಸ್ ವರ್ಕ್, ಮೋರ್ ಪೇ ಪಡೆಯುವುದು ಇವರ ಗುರಿ, ಧ್ಯೇಯ.. ಈ ನೀತಿಯನ್ನು ಗಮನದಲ್ಲಿಟ್ಟುಕೊಂಡು ಮನುಷ್ಯ ಯಾವುದೇ ಕೆಲಸಕ್ಕೆ ಕೈಹಾಕಲಿ, ಅಲ್ಲೆಲ್ಲಾ ಹೆಚ್ಚು ಶ್ರಮ ವಹಿಸಲು ಇಚ್ಚಿಸುವುದಿಲ್ಲ. ಗಡಿಯಾರದ ಕಡೆ ನಿಗಾ ವಹಿಸಿ, ವರ್ಕಿಂಗ್ ಅವರ್ಸ್ ಮುಗಿದ ಕೂಡಲೇ ಕೆಲಸದ ಜಾಗದಿಂದ ಹೊರಬೀಳುವ ಜಾಯಮಾನ ಬಹಳಷ್ಟು ಜನರದ್ದಾಗಿರುತ್ತದೆ ತಮಗಿರುವ ಹುದ್ದೆ, ಶ್ರೇಣಿ ಸಂಬಳಕ್ಕೇ ತೃಪಿ ಪಟ್ಟು, ಏ ಸಾಕಪ್ಪಾ ಇಷ್ಟೇ, ಇನ್ನೂ ಹೆಚ್ಚಿನ ಉನ್ನತ ಶ್ರೇಣಿಯ ಹುದ್ದೆ ಬಡ್ತಿ ಸಂಬಳ ಹೆಚ್ಚಳಕ್ಕೆ ಆಸೆ ಪಟ್ರೆ ನಾವು ಹೆಚ್ಚು ರಿಸ್ಕ್ ತಗೊಂಡ್ ಹೆಚ್ಚು ಗಂಟಗಳ ಕಾಲ ಕೆಲಸ ಮಾಡಬೇಕು, ನಮ್ಮ ಅಧೀನ ಸಿಬ್ಬಂದಿಯಿAದ ಕೆಲಸ ಮಾಡಿಸಬೇಕು. ಮಾಡಿಸಲಾಗದಿದ್ದರೆ ಇವ ಈ ಕೆಲಸಕ್ಕೆ ನಾಲಾಯಕ್ ಎಂಬ ಅಪಯಶಸ್ಸು, ಕೆಟ್ಟ ಹೆಸರು ಸಂಪಾದಿಸಬೇಕಾಗುತ್ತೆ, ಈ ಪಂಚಾಯತಿಯೆಲ್ಲಾ ಯಾಕ್ ಬೇಕಾಗಿದೆಯಪ್ಪಾ ! ಎಂಬ ಅಲ್ಪ ತೃಪ್ತರು ನಮ್ಮ ನಡುವೆ ಬಹಳಷ್ಟು ಜನರಿದ್ದಾರೆ. 

 ಈ ಮಾನಸಿಕ ಸ್ಥಿತಿ ಹೊಂದಿರುವ ಜನರನ್ನು ಹಲವು ಸರ್ಕಾರಿ ಸಂಸ್ಥೆಗಳಲ್ಲಿ, ಬ್ಯಾಂಕ್‌ಗಳಲ್ಲಿ ಕಾಣಸಿಗ್ತಾರೆ. ಏನ್ ಸರ್ ಬಹಳ ವರ್ಷ ಆಯ್ತಲ್ವಾ ಈ ಹುದ್ದೆಗೆ ನೀವ್ ಬಂದು ! ಯಾವಾಗ ಪ್ರಮೋಶನ್ ಎಂದು ವಿಚಾರಿಸಿದ ಕೂಡಲೇ “ ಸ್ವಾಮಿ, ನಮಗೆ ಆ ಪ್ರಮೋಶನ್ನೂ ಬೇಡ, ಆದರಲ್ಲಿರುವ ಹೆವಿ ರಿಸ್ಕ್, ಕಿರಿಕಿರಿನೂ ಬೇಡ, ಯಾಕೆ ಗೊತ್ತಾ ! ಕೆಲಸ ಮಾಡಿಸಲಿಲ್ಲ ಅಂತಾ ಮೇಲಿನವರಿಂದ ಆಕ್ಷೇಪಣೆ, ಬೈಸಿಕೊಳ್ಳೋದು, ನಿಂದನೆ ಪಡೆಯೋದು, ಬೇಗ ಬೇಗ ಹೆಚ್ಚು ಕೆಲಸ ಮಾಡ್ರೀ ಅಂತ ನಮ್ಮ ಅಧೀನ ಸಿಬ್ಬಂದಿಗೆ ಹೇಳಿದರೆ, ಅವರು ರ‍್ರಿ ಸ್ವಾಮಿ, ‘ನಾ ಮಾಡೋದ್ ಇಷ್ಟೇ, ಏನ್ ಮಾಡ್ಕೊತಿಯೋ ಮಾಡ್ಕೊ ಹೋಗ್’ ಎಂಬ ಧಮ್ಕಿ ಪಡೆಯೋದ್, ಇವರನ್ನ ಸ್ವಲ್ಪ ಪುಸಲಾಯಿಸಿದರೆ, ಮಾರನೆಯ ದಿನವೇ ಇವರ ಮನೆಯವರು ಲಾಂಗ್ ಲೀವ್ ಅರ್ಜಿ, ಮೆಡಿಕಲ್ ಸರ್ಟಿಫಿಕೆಟ್ ನನಗೆ ಬರುತ್ತೆ, ಏ ನಿನ್ನೆ ಚೆನ್ನಾಗಿದ್ದನಲ್ಲಪ್ಪಾ ಅಂದರೆ, ಹೌದು ಸರ್ ಕೆಲಸ ಮುಗಿಸಿ ಮನೆಗೆ ಬಂದ ಕೂಡಲೇ ಮಲಗಿದ, ಇವನಿಗೆ ಬರ ಬಾರದ ರೋಗ ಬಂದಿದೆ ಸರ್ ಅಂತಾರೆ ಇವನ ಮನೆಯವರು. ಇದರ ಪರಿಣಾಮ, ನಾನೇ ಇವನ ಕೆಲಸ ಮಾಡಿ ಬಾಸ್ ನ ಮೆಚ್ಚಿಸಬೇಕಾಗುತ್ತೆ. ಹೀಗೆ, ಅತ್ತ, ಇತ್ತ, ಎರಡೂ ಕಡೆಯಿಂದ ನಮಗೆ ಥೂ ಛೀ, ಗೂಸಗಳು ಆವಾಗಾವಾಗ, ಮನಸ್ಸಿಗೆ ನೆಮ್ಮದಿಯೂ ಇರೊದಿಲ್ಲ, ಆರಾಮಾವಾಗಿರಲು ಸಾಧ್ಯವಿರೊಲ್ಲ. ಅದಕ್ಕೇ ನಾ ಇರೋ ಹುದ್ದೇಲೇ ರ‍್ನೀನಿ ಸ್ವಾಮಿ ಪ್ರಮೋಶನ್ ಬೇಡ ಅಂತ ರ‍್ಕೊಟ್ ಬಿಟ್ಟೆ. ಈಗ ನನಗೆ ನೋ ವರಿ. ವರ್ಷಾನುಗಟ್ಟಲೆಯಿಂದ ಮಾಡಿದ್ದೇ ಮಾಡ್ತಿರೋ ಕೆಲಸ, ಸಂಬಳ ಮಾತ್ರ ವರ್ಷ ವµð ಅದÀಷ್ಟಕ್ಕೆ ಅದೇ ಹೆಚ್ಚಾಗ್ತಿರುತ್ತೆ ಅಂತಾ ಬಹಳ ಖುಷಿಯಿಂದ ಹೇಳೋ ಭೂಪರು ನಿಮಗೆ ಅದೆಷ್ಟೋ ಜನ ಸಿಗ್ತಾರೆ. ‘ಕಡಿಮೆ ಶ್ರಮ. ಹೆಚ್ಚು ಫಲ’ ಎನ್‌ಜಾಯ್ ಮಾಡುತ್ತಿರುವರು. 

 ಬಹಳ ವರ್ಷಗಳ ಹಿಂದೆ ಒಬ್ಬ ಪ್ರಸಿದ್ಧ ಕನ್ನಡ ಪ್ರತಿಕೆಯ ಹಿರಿಯ ಸಂಪಾಕರೊಬ್ಬರು ತಮ್ಮ ಸಂಪಾದಕೀಯ ಲೇಖನದಲ್ಲಿ ಒಬ್ಬ ಆಂಗ್ಲ ಬರಹಗಾರರೊಬ್ಬರ ಪುಸ್ತಕದ ಬಗ್ಗೆ ಪ್ರಸ್ತಾವಿಸುತ್ತಾ (ಇವರ ಹಾಗೂ ಇವರ ಆಂಗ್ಲ ಪುಸ್ತಕದ ಹೆಸರು ನನಗೆ ಈಗ ನೆನಪಾಗುತ್ತಿಲ್ಲ) ‘ನಮ್ಮಲ್ಲಿನ ಬಹ¼ಷ್ಟು ಕೆಲಸಗಾರರು ಅದೆಷ್ಟು ವರ್ಷಗಳಾದರೂ ಕೆಲಸಗಾರರಾಗಿಯೇ ಉಳಿಯುತ್ತಾರೆಯೇ ಹೊರತು ಅದೇಕೆ ಆ ಸಂಸ್ಥೆಯ ಮಾಲೀಕರಾಗುವುದಿಲ್ಲ ? “ ಎಂಬ ವಿಷಯದ ಬಗ್ಗೆ ಚರ್ಚಿಸುತ್ತಾ, ಏಕೆಂದರೆ ಈ ಆಂಗ್ಲ ಬರಹಗಾರರ 

ಪ್ರಕಾರ : 

 “ಇವರೆಲ್ಲಾ ಅಲ್ಪ ತೃಪ್ತರು., ಅರ್ಥತ್ ಸಿಕ್ಕಿದಷ್ಚರಲ್ಲೇ ತೃಪ್ತಿಪಟ್ಟುಕೊಳ್ಳುತ್ತಿರುವರು. ಹೆಚ್ಚಿನದಕ್ಕೆ ಆಸೆ ಪಟ್ಟರೆ ರಿಸ್ಕ್ ತಗೋ ಬೇಕು, ಆಗ ಅಕಸ್ಮಾತ್ ಕಷ್ಟ ಅಪಾಯ ತೊಂದರೆ ನಷ್ಟ ಅವಮಾನಕ್ಕೆ ಸಿಲುಕಿಕೊಂಡರೆ ! ? ಏ ಬೇಡಪ್ಪಾ ಅದೆಲ್ಲಾ ಎಂಬ ಹಿಂಜರಿಕೆ ಉಳ್ಳವರಿವರು. ಇವರು ಹೇಗೆಂದರೆ ಊಟ ಮಾಡಿದರೆ ಅಜೀರ್ಣವಾಗಬಹುದು, ಕಾಯಿಲೆ ಬರಹುದು ಎಂಬ ಹೆದರಿಕೆಯಲ್ಲಿ ಊಟವನ್ನೇ ಮಾಡದಿರುವ ಹಾಗೆ ಎಂದಿದ್ದಾರೆ ಡಿವಿ ಜಿ ಯವರು ತಮ್ಮ ಕಗ್ಗದಲ್ಲಿ.

 ಇವರು ಮಾಡುತ್ತಿರುವ ಕೆಲಸವನ್ನು ಹೊರತುಪಡಿಸಿ ಇವರ ಎಡ ಬಲಗಳಲ್ಲಿರುವ ಕೆಲಸಗಾರರು, ಇವರ ಶಾಖೆಗಳ ಕೆಲಸಗಳ ಕುರಿತು ತಿಳಿದು ಕಲಿಯಲು, ಆ ಕೆಲಸಗಳನ್ನ ತಾವು ಮಾಡಿ ಅದರ ಅನುಭವಗಳನ್ನೂ ಪಡೆದು ತನ್ನ ಜ್ಞಾನ ಬಂಢಾರವನ್ನು ಹೆಚ್ಚಿಸಿ ಕೊಳ್ಳೋಣ, ಸಂಸ್ಥೆಯ ಎಲ್ಲಾ ಶಾಖೆಗಳ ಕೆಲಸ, ವಿಭಿನ್ನತೆ, ಅದರ ಅನುಭವಗಳನ್ನು ಕಲಿತಿದ್ದರೆ ಮುಂದೊAದು ದಿನ ಹಣ ಸರಿಮಾಡಿಕೊಂಡು ಇಂತಹಾ ಒಂದು ಸಂಸ್ಥೆಯನ್ನು ಸಣ್ಣ ಮಟ್ಟದಲ್ಲಿ ತಾನೇ ಹುಟ್ಟು ಹಾಕಬಹುದಲ್ಲವೇ ? ಎಂಬ ಯೋಚನೆ, ಆಲೋಚನೆ ಇವರ ಮನದಲ್ಲಿ ಮೂಡುವುದೇ ಇಲ್ಲ. ಈ ಪ್ರಯತ್ನವನ್ನೇ ಇವರು ಮಾಡುವುದಿಲ್ಲ ‘ಕೂಪ ಮಂಡೂಕ’ ಎಂಬ ಗಾದೆಯಂತೆ ತನಗಿರುವ ಅರಿವೇ ಮಹತ್ತರವಾದ್ದು , ಪರರ ಚಿಂತೆ ತನಗೇಕೆ ? ಆ ಹೆಚ್ಚುವರಿ ಕೆಲಸಗಳ ಬಗ್ಗೆ ಕಲಿತರೆ ಅಕಸ್ಮಾತ್ ಮಾಲೀಕ ಈಗ ಕೊಡತಿರೋ ಸಂಬಳಕ್ಕೇ ಆ ಹೆಚ್ಚುವರಿ ಕೆಲಸವನ್ನೂ ತನಗೇ ಅಂಟಿಸಿದರೆ ಆಗ ಹೆಚ್ಚು ಕೆಲಸ, ಕಡಿಮೆ ಸಂ¨ಳ ‘ ಪಡೆಯಬೇಕಾದ ಸಂಭವ ಬರಬಹುದು, ‘ನನಗೇನು ಗ್ರಹಚಾರ ಹೆಚ್ಚು ಕೆಲಸ ಮಾಡೋಕೆ’ ? ಅದಕ್ಕೇ, ಹೆಚ್ಚು ಕೆಲಸ\ಬೇರೆಯವರ ಕೆಲಸ ಕಲಿಯೋಕೆ ಹೋಗಬಾರದು, ಆದಷ್ಟೂ ಕಡಿಮೆ ಕೆಲಸ ಮಾಡಿ ಹೆಚ್ಚು ಆದಾಯ ಪಡೆಯೋ ಉಪಾಯ ನಾವು ಕಲಿಯಬೇಕು’ ಎಂಬುದು ಸಹ ಉದ್ಯೋಗಿಗಳಿಗೆ ಇವರ ಸಂದೇಶ. ಈ ವರ್ಗದರ ಈ ಮೈಂಡ್ ಸೆಟ್ ಕಾರಣವೇ ಕೆಲಸಗಾರರು ಕೆಲಸಗಾರರ ರಾಗಿಯೇ ಉಳಿಯಲು ಕಾರಣ ಎಂಬುದು” ಆ ಆಂಗ್ಲ ಬರಹಗಾರನ ಅಭಿಪ್ರಾಯವಾಗಿತ್ತು, 

 ಇದೇ ಸಂದರ್ಭದಲ್ಲಿ ನೆನಪಾಗುವ ಮತ್ತೊಂದು ವರ್ಗದವರ ‘ಮೋಡಸ್ ಆಪರೆಂಡಿ’ ಹೀಗಿರುತ್ತದೆ : ಈ ಕೆಲಸ ಬಹಳ ಅರ್ಜೆಂಟ್ ಇದೆ. ಇದನ್ನು ಮಾಡ್ತಿದ್ದವನು ಅನಿವಾರ್ಯ ಕಾರಣಗಳಿಂದ ಬಂದಿಲ್ಲ, ಕಾರಣ ನೀ ಇದನ್ನು ಮಾಡಿ ಮುಗಿಸಪ್ಪಾ ಎಂದ ಮೇಲಧಿಕಾರಿ ಮಾತಿಗೆ ನಮ್ಮೀ ಸ್ವಾಮಿ, ಹೇಳೋದೇನ್ ಗೊತ್ತಾ ! ನನಗಾ ಕೆಲಸ ಬರೊಲ್ಲ\ ನಾ ಯಾವತ್ತೂ ಇದನ್ನ ಮಾಡಿಲ್ಲ ಎಂಬ ಸಬೂಬು ಹೇಳಿ ಕೆಲಸ ತಪ್ಪಿಸಿಕೊಳ್ಳೋದು, ಆದರೂ ಮೇಲಧಿಕಾರಿ ಇವನನ್ನು ಬಿಡದೆ, ಏ, ಇಷ್ಟು ವರ್ಷಗಳ ಸರ್ವಿಸ್ ಮಾಡಿದಿಯಾ, ನಿನಗೆ ಬರೊಲ್ವಾ ಈ ಸಣ್ಣ ಕೆಲಸ ! ನಿನಗೆ ಗೊತ್ತಿದೆ ಮಾಡಪ್ಪಾ ಇವತ್ತೊಂದ್ ದಿನ ಎಂಬ ಮೇಲಧಿಕಾರಿ ಪುಸ ಲಾಯಿಸಿದರೆ, ಇವನಿಗೆ ಈವತ್ತು ಬುದ್ದಿ ಕಲಿಸ್ತೀನಿ ನೋಡು ಎನ್ನುತ್ತಾ ಕೊಟ್ಟ ಕೆ¯ಸಾನ ಬೇಗ ರಿಪೇರಿಯಾಗದ ರೀತಿೆ ಕೆಡಿಸಿಡುವುದು, ಆಗ ಇವನ ಮೇಲೆ ಮೇಲಧಿಕಾರಿಗೇ ಬೇಸರವಾಗಿ ಆ ಕೆಲಸಾನ ಬೇರೆಯವರಿಂದ ಮಾಡಿಸ್ತಾನೆ. 

 ಮುಂದೊಂದು ದಿನ ಇಂತಹುದೇ ಸಂದರ್ಭ ಬಂದಾಗ ಮೇಲಧಿಕಾರಿ ಆ ಕೆಲಸವನ್ನು ಹಿಂದೆ ಕೆಡಿಸಿಟ್ಟನಲ್ಲಾ ಅವನ ಹತ್ತರ ಕೊಡೋದೇ ಇಲ್ಲ. ಮತ್ತೊಬ್ನ ಹತ್ತಿರ ಹೋಗಿ, ಏ ಅವನಿಗೆ ಕೆಲಸ ಬರೊಲ್ಲಪ,್ಪ ಹೋದ ಸಾರಿ ಕೆಡಿಸಿಟ್ಟ ಎನ್ನುತ್ತಾನೆ ಮೇಲಧಿಕಾರಿ. 

 ಹೀಗೆ ನಮ್ಮೀ ಕೆಲಸಗಾರ ಹೆಚ್ಚುವರಿ ಕೆಲಸದಿಂದ ಮುಕ್ತನಾದ. ಕಡಿಮೆ ಶ್ರಮ, ಹೆಚ್ಚು ಆದಾಯ” ಎಂಬ ಮಂತ್ರ ಜಪಿಸೋವ್ನು. ರಿಸ್ಕ್ ಬೇಡ ಎಂಬುವವರ ಕಾರ್ಯ ವೈಖರಿ ಇದು ಸ್ವಾಮಿ. ಯಾಕ್ ಹೀಗೆ ? ಎಂದು ಪ್ರಶ್ನಿಸುವವರಿಗೆ’ ನಾವಿರೋದೇ ಹೀಗೆ ಸ್ವಾಮಿ” ಎನ್ನುವವರು. ಇವರು,

 ಅದೊಂದ್ ಆಫೀಸಿಲ್ಲಿ ಬಾಸ್, ಸ್ಟೆನೋ ಒಬ್ಬನನ್ನ ಕರೆದು ಡಿಕ್ಟೇಟ್ ಮಾಡತೊಡಗಿದ. ಸ್ವಲ್ಪ ಸ್ಪೀಡಾಗಿ. ಸರ್, ಈ ಸ್ಪೀಡ್‌ನಲ್ಲಿ ನಾ ಬರೆದುಕೊಳ್ಳಲಾರೆ ಎಂದ ಧೈರ್ಯªಗಿ. ಇದೇನ್ ಸ್ಪೀಡಯ್ಯ ? ನರ‍್ಮಲ್ ಆಗಿದೆ ಎಂದ ಬಾಸ್, ಸ್ಟೆನೋ ಮರು ಮಾತನಾಡದೆ ತನಗೆ ತೋಚಿದಂತೆ ಬರೆದುಕೊಂಡವನೇ ಮರು ದಿನದಿಂದ ಎರಡು ದಿನ ರಜೆ ಹಾಕಿ ಹೊರಟ, ಮೂರನೆಯ ದಿನ ಬಂದವನೇ ತನ್ನ ನೊಟ್ ಬುಕ್ ತೆಗೆದು ಓದೋ ಪ್ರಯತ್ನ ಮಾಡಿದಾಗ, ಅವನಿಗೆ ತನ್ನ ಔಟ್ ಲೈನ್ ತನಗೇ ಅರ್ಥವಾಗಲಿಲ್ಲ. ಇವನ ಟ್ರಾನ್ಸ್ ಕ್ರಿಪ್ಶನ್ ನೋಡಿದ ಬಾಸ್ಗೆ ತಾನು ಹೇಳಿದ್ದೊಂದ್ದನ್ನೂ ಟೈಪ್ ಮಾಡದೆ ತನಗೆ ತೋಚಿದ್ದನ್ನು ಟೈಪ್ ಮಾಡಿದ್ದಾನಲ್ಲಾ, ಎಲಾ ಇವನ ! ಎಂ¨ ಕೋಪ ಬಂದಿತ್ತು. ತಕ್ಷಣ ಕೇಂದ್ರ ಕಚೇರಿಗೆ ಕಾಗದ ಬರೆದು ಈ ಸ್ಟೆನೊ ನನಗೆ ಬೇಡ ಬೇರೆಯವರು ಬರೊದು ನಿಧಾನವಾದರೂ ಪರವಾಗಿಲ್ಲ ಒಳ್ಳೆಯವನನ್ನು ಕಳುಹಿಸಿ ಎಂದ ಬಾಸ್

 ಇದುವರೆಗೆ ವಿವರಿಸಿದ ಕಾರಣಗಳಿಂದ, ಬಹಳಷ್ಟು ಜನ ಹೆಚ್ಚುವರಿ : ಉನ್ನತ ಹುದ್ದೆಗಳು, ಹೆಚ್ಚು ಸಂಬಳ, ಉನ್ನತ ಸ್ಥಾನ ಮಾನ, ಯಶಸ್ಸು, ಕೀರ್ತಿ ಇತ್ಯಾದಿಗಳಾವುವನ್ನೂ ಪಡೆಯದೆ ಚಿs is ತಿheಡಿe is ಛಿoಟಿಜಣioಟಿ’ ನಲ್ಲೇ ಮುಂದುವರಿದು ಮೂಲೆ ಗುಂಪಾಗುತ್ತಾರೆ. ಬಹು ಬೇಗ ಎಲೆ ಮರೆಯ ಕಾಯಿಯಂತೆ ಮರೆಯಾಗುತ್ತಾರೆ. ರಿಸ್ಕ್ ಬೇಡ ಎಂದರೆ ತಿನ್ನಲು ರಸ್ಕ್ ಸಿಗೊಲ್ಲ, ರಸ್ಕ್ ಪಡೆಯಬೇಕು ಎಂಬ ಮನವಿದ್ದವರು ರಿಸ್ಕ್ ತೆಗೆದುಕೊಳ್ಳಲೇ ಬೇಕಾಗುವುದು ಅನಿವಾರ್ಯವಾಗುತ್ತದೆ. “ರಿಸ್ಕೋ, ರಸ್ಕೋ ಯಾವುದಿರಲಿ ? ! ಎಂಬ ಪ್ರಶ್ನೆಗೆ ನಿರ್ಧಾರ ವ್ಯಕ್ತಿಗತವಾದದ್ಧೇ.

Comments