ಭೀಷ್ಮ ಪ್ರತಿಜ್ಞೆ

ಭೀಷ್ಮ  ಪ್ರತಿಜ್ಞೆ

ಲೇಖನ : ಜೆ. ಎಸ್. ಗಾಂಜೇಕರ, ಕುಮಟಾ (ಉ. ಕನ್ನಡ )



ಕಾಲೇಜಿನ  ವಾರ್ಷಿಕೋತ್ಸವದ  ಅಂಗವಾಗಿ  ಚರ್ಚಾಕೂಟ ಜರುಗಿತು.  ಚರ್ಚೆಯ  ವಿಷಯ  " ಬ್ರಹ್ಮಚರ್ಯ  V /S  ಗ್ರಹಸ್ಥ .


ಆ  ಚರ್ಚಾಕೂಟ ದಲ್ಲಿ  ತಿಮ್ಮ  ಬ್ರಹ್ಮಚರ್ಯ  ಪರ  ಭಾಷಣ  ಮಾಡುತ್ತ  "  "ಬ್ರಹ್ಮಚರ್ಯ  ಜೀವನ ದಿಂದ ವ್ಯಕ್ತಿ  ತನ್ನ  ಗುರಿಯತ್ತ  ಬಹು  ಬೇಗ  ತಲುಪಬಲ್ಲ. ಆತ  ಸ್ವತಂತ್ರ ನಾಗಿರುತ್ತಾನೆ. ಸಂಸಾರದ  ಜಂಜಾಟ  ಇರುವುದಿಲ್ಲ. ಯಾವ  ತಾಪತ್ರಯವೂ  ಇರುವುದಿಲ್ಲ. ಆಧ್ಯಾತ್ಮಿಕ  ಜ್ಞಾನ  ಪಡೆಯಲು  ತುಂಬಾ  ಅನುಕೂಲ  ವಾಗುವುದು.

ನಾನು  ನಿಜ  ಜೀವನದಲ್ಲಿ  ಅಖಂಡ  ಬ್ರಹ್ಮಚಾರಿ ಯಾಗಿಯೇ  ಇರುವೆ. ಇದು  ನನ್ನ  ಭೀಷ್ಮ  ಪ್ರತಿಜ್ಞೆ "ಎಂದು  ಹೇಳಿ ಎಲ್ಲರಿಂದಲೂ ಚಪ್ಪಾಳೆ  ಗಿಟ್ಟಿಸಿಕೊಂಡ. ಭಾಷಣ  ಮಾಡಿದ ನಂತರ  ಆತನ  ಗೆಳೆಯರು   " ಹೌದೇನೋ  ತಿಮ್ಮಾ " ಎಂದು  ಕೇಳಿದರು. 

ಆಗ  ತಿಮ್ಮ ನಿಶ್ಚಿತ  ಸ್ವರದಲ್ಲಿ  ಹೇಳಿದ  " ಹೌದಪ್ಪಾ ಹೌದು" ಎಂದ.

ಈ  ಸುದ್ದಿ  ತಿಮ್ಮನ  ಮನೆಗೆ  ತಲುಪಿದಾಗ  ಆತನ  ತಂದೆ  ರಾಮು,

" ಯಾಕೋ  ತಿಮ್ಮ ,  ನೀನು  ಬ್ರಹ್ಮಚಾರಿಯಾಗಿಯೇ  ಉಳಿಯುವಿಯಂತೆ  ಹೌದೇನೋ " ಎಂದು  ಕೇಳಿದಾಗ

ತಿಮ್ಮ  " ಹೌದಪ್ಪಾ  ನಾನು ಬ್ರಹ್ಮಚಾರಿ ಯಾಗಿಯೇ ಇರುವೆ" ಎಂದ.

ಆಗ  ತಂದೆ ರಾಮು,  " ನನ್ನ  ವಂಶದ  ಕುಡಿ  ನೀನೊಬ್ಬನೇ. ನೀನು  ಮದುವೆ ಆಗಲೇಬೇಕು. " ಎಂದು  ಒತ್ತಾಯಿಸಿದರು. ಆಗ  ತಿಮ್ಮಾ  " ಅಪ್ಪಾ ,  ನನಗೆ ಬ್ರಹ್ಮಚಾರಿಯಾಗಿರುವುದೇ  ಇಷ್ಟ "ಎಂದು  ಹೇಳಿ  ಹೊರಟ.

ತಂದೆ,  ತಮಾಷೆಗಾಗಿ  ಹೇಳುತ್ತಾನೆಂದು  ತಿಳಿದರು.  ಆದರೆ  ಮುಂದೆ  ತಿಮ್ಮಾ  ಮದುವೆ  ಮಾಡಿಕೊಳ್ಳಲು  ಆಸಕ್ತಿ  ತೋರಿಸಲಿಲ್ಲ.  ತಂದೆ- ತಾಯಿಯವರಿಗೆಗೆ  ಚಿoತೆಯಾಯಿತು .

ಒಮ್ಮೆ  ರಾಮುನ  ಗೆಳೆಯ  ಸೋಮು  ಬಂದಾಗ ,   ' ರಾಮು, ನನ್ನ  ಮಗಳಿಗೆ  ಗಂಡು  ಹುಡುಕಲು  ಬಂದಿರುವೆ " ಎಂದ.  ಆಗ  ರಾಮು " ಗೆಳೆಯಾ,  ನನ್ನ ಮಗ  ಇದ್ದಾನೆ. ನಾನು  ನಿನ್ನ  ಮಗಳನ್ನು  ಸೊಸೆಯಾಗಿ  ಸ್ವೀಕರಿಸಲು  ರೆಡಿ  ಇದ್ದೇವೆ " ಎಂದ . ಸೋಮುನಿಗೆ  ಖುಷಿ ಯಾಯಿತು.

ರಾಮು  ಹೇಳಿದ " ಆದರೆ ನನ್ನ  ಮಗ  ಅಖಂಡ  ಬ್ರಹ್ಮಚಾರಿಯಾಗಿ  ಉಳಿಯುತ್ತೇನೆಂದು  ಹೇಳುತ್ತಾನೆ " ಎಂದ. 

ಅದರ ಬಗ್ಗೆ  ಚಿoತೆ  ಬಿಡು.  ನನ್ನ  ಮಗಳು  ನಿನ್ನ ಮಗನಿಗೆ ತಕ್ಕ  ಹುಡುಗಿ. ಅವಳ  ರೂಪರಾಶಿ ಕಂಡು  ಮರುಳಾಗುತ್ತಾನೆ.  ಅವನನ್ನು  ಸರಿದಾರಿಗೆ  ತರುತ್ತಾಳೆ,  ಅದರ  ಚಿoತೆ  ಬಿಡು " ಎಂದ.

ಕೆಲವು  ದಿನಗಳ  ನಂತರ   ತಿಮ್ಮಾ  ಸೋಮುನ  ಮಗಳಾದ  ಸುಮತಿಯ  ಸೌಂದರ್ಯಕ್ಕೆ  ಮರುಳಾಗಿ  ಮದುವೆಯಾದ. ಎರಡು  ಮಕ್ಕಳ  ತಂದೆ ಸಹ  ಆದ.

ಕೆಲವು  ವರ್ಷದ  ನಂತರ  ತಿಮ್ಮನ  ಗೆಳೆಯ  ರಘು  ಸಿಕ್ಕಾಗ  " ತಿಮ್ಮ, ಇನ್ನೂ  ಮದುವೆ  ಆಗಲಿಲ್ಲವೇನೋ? " ಎಂದು  ಕೇಳಿದ.

ಹೇ  ರಘು, ನಾನು  ಮದುವೆಯಾಗಿ  ಎರಡು  ಮಕ್ಕಳ  ತಂದೆ  ಕಣೋ " ಎಂದ.

ಆಶ್ಚರ್ಯ ಪಡುವ  ಸರತಿ  ರಘುವಿನದು.

ಆಗ  ರಘು " ತಿಮ್ಮಾ , ಆ  ಚರ್ಚಾ ಕೂಟ ದಲ್ಲಿ  ಮಾಡಿದ  ಭೀಷ್ಮ  ಪ್ರತಿಜ್ಞೆ  ಮುರಿದು  ಬಿಟ್ಟಿಯಲ್ಲೊ " ಎಂದ.

ಆಗ  ತಿಮ್ಮ  ಗಟ್ಟಿಯಾಗಿ  ಹೇಳಿದಾ " ರಘು,  ಆ  ಪ್ರತಿಜ್ಞೆ  ಮಾಡಿದ್ದು  ಭೀಷ್ಮ.  ನಾನಲ್ಲ. "ಎಂದ.

ಆತನ  ಕೂಗು  ಕೇಳಿ  ತಂಗಿ  ಲತಾ ಓಡಿ ಬಂದು  " ಏಕೆ  ಅಣ್ಣಾ ,  ಪ್ರತಿಜ್ಞೆ  ಎಂದು  ಏನೇನೋ  ಬಡಬಡಿಸುತ್ತಿದ್ದೆಯಲ್ಲ  ಏನು  ಸಮಾಚಾರ ?  ಎಂದು  ಕೇಳಿದಾಗ  ತಿಮ್ಮನಿಗೆ  ಅರಿವಾಯಿತು  ತಾನು  ಕಂಡದ್ದು  ಕನಸೆoದು.

ಲತಾ,  ನಾಳೆ  ಕಾಲೇಜನಲ್ಲಿ  ಚರ್ಚಾಕೂಟ  ಇದೆ. ಅದರ  ಬಗ್ಗೆ  ವಿಚಾರ ಮಾಡುತ್ತಾ  ಮಲಗಿದ್ದೆ. ಆಗ  ಕನಸು  ಕಂಡೆ.


  

Comments

  1. ಹಾಸ್ಯ ಪ್ರಸಂಗ ಚೆನ್ನಾಗಿದೆ

    ReplyDelete
  2. Nammellara kanasu was like that Once upon a time :)

    ReplyDelete

Post a Comment