ತೊರವೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ

 ತೊರವೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ

ಲೇಖನ ಸೇವೆ :ಸುರೇಂದ್ರ ಮುತಾಲಿಕ, ವಿಜಯಪುರ




ಭಕ್ತ ಬಾಲಕನಾದ ಪ್ರಲ್ಹಾದನ ಭಕ್ತಿಗೆ ಮೆಚ್ಚಿ ದುಷ್ಟರ 
ಮರ್ಧನ ಶಿಷ್ಟರ ರಕ್ಷಣೆಗೆ ಅವತಾರವೆ ನರಸಿಂಹ ಅವತಾರ.ಇಂತಹ ನರಸಿಂಹ ದೇವರ ಮೂರ್ತಿಗಳು
ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಾಣುತ್ತೇವೆ.
ಉತ್ತರಕರ್ನಾಟಕದ ವಿಜಯಪುರ ಜಿಲ್ಲೆಯ ಪಶ್ಚಿಮಕ್ಕೆ
ಕೇವಲ ಆರು ಕೀಮಿ ದೂರದ ತೊರವೆ ಎಂಬ ಗ್ರಾಮದಲ್ಲಿ ಪೌರಾಣಿಕ, ಇತಿಹಾಸ ಪ್ರಸಿದ್ಧವೆನಿಸಿದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ ನೋಡುವದೇ ಭಾಗ್ಯ.
ಪರಕೀಯರ ದಾಳಿಯಿಂದ ರಕ್ಷಿಸುವ ಉದ್ದೇಶದಿಂದ
ಗುಹೆಯಲ್ಲಿ ಬಚ್ಚಿಟ್ಟ ಕಾರಣ ಈಗಲೂ ಗುಹಾಂತರ್ಯಾಮಿಯಾಗಿ ಪೂಜೆಗೊಳ್ಳುತ್ತಿರುವನು.
ಈ ನರಸಿಂಹ ದೇವರು ತ್ವರಿತವಾಗಿ ಅನುಗ್ರಹ ಮಾಡವವ ಎಂಬ ಪ್ರಸಿದ್ಧ ಪಡೆದಕಾರಣ ಈ ಗ್ರಾಮ ತ್ವರಿತಾಲಯ ಎಂಬುದಾಗಿ ಕರೆದರು,ಕಾಲಾಂತರದಲ್ಲಿ ತೊರವೆ ಎಂಬ ಗ್ರಾಮವಾಯಿತು.
ಸುಮಾರು 1500ನೇ ಶತಮಾನದಲ್ಲಿ ಇದೇ ತೊರವೆಯ
ನರಹರಿ ಎಂಬವರು ಕುಮಾರ ವಾಲ್ಮೀಕಿ ಎಂಬ ಹೆಸರಿನಿಂದ ಪ್ರಸಿದ್ಧರಾಗಿ ದೇವಸ್ಥಾನದಲ್ಲಿ ಕುಳಿತು
ಕನ್ನಡದಲ್ಲಿ ತೊರವೆಯ ರಾಮಾಯಣವೆಂಬ ಅದ್ಭುತ ಕಾವ್ಯ ರಚಿಸಿದರು.ಅದರ ಮೂಲ ಪ್ರತಿ ಇಲ್ಲಿಕಾಣಲು ಸಿಗುವುದು.


ಪುರಂದರದಾಸರು ತೊರವೆಯ ನರಸಿಂಹ ದೇವರ ದರ್ಶನ ಪಡೆದು ತಮ್ಮಪದದಲ್ಲಿ ತೊರವೆಯ ನರಸಿಂಹ ವಡೆಯ ಪುರಂದರ ವಿಠಲ ಎಂದು ರಚಿಸಿದ್ದಾರೆ.
ಈಗ ಪೂಜೆಗೊಳ್ಳುವ ನರಸಿಂಹ ದೇವರ ಮೂರ್ತಿ ಇರದೆ ಅದರ ಜಾಗದಲ್ಲಿ ಬೃಹತ್ತಾದ ನರಸಿಂಹ ಸಾಲಿಗ್ರಾಮ ಇರಲು ಅದಕ್ಕೆ ಕಲಿಪ್ರಭಾವದಿಂದ ನೈವೇದ್ಯ
ತೋರಿಸಲು ಕಷ್ಟಸಾಧ್ಯವಾಯಿತು. ದೇವರು ಅರ್ಚಕರ
ಸ್ವಪ್ನದಲ್ಲಿ ನನ್ನ ಈ ಸಾಲಿಗ್ರಾಮ ಶಿಲೆಯನ್ನು ಕೃಷ್ಣಾನದಿಯಲ್ಲಿ
 ವಿಸರ್ಜಸಿರಿ. ಎಂದಾಗ ಆಚಾರ್ಯರು ದಯನೀಯವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗದಿರು ಸ್ವಾಮಿ ಎಂದು ಕಂಬನಿಗರದಾಗ ನನ್ನ ಮೂರ್ತಿಯೊಂದು ಕೃಷ್ಣಾನದಿಯ ದಂಡೆಯಲ್ಲಿರುವದು
ವಿಜಯಪುರ ದಕ್ಷಿಣದ ಕಡೆ ಹೋಗಿ ನದಿಯ ದಂಡೆಯ
ಮೇಲೆ ಹಸಿ ಹುಲ್ಲು ಹಾಕುತ್ತ ಹೋಗಿರಿ ಅದಕ್ಕೆಬೆಂಕಿ
ತಗಲಿದ ಸ್ಥಳದಲ್ಲಿ ಅಗೆಯಿರಿ ಎಂಬ ಸಂದೇಶವಾಯಿತು.


ಅದರಂತೆ ಮಾಡಲಾಗಿ ಬಾಗೇವಾಡಿ ತಾಲ್ಲೂಕಿನ ಮುಳಗಡೆ ಆಗುವ ಪೂರ್ವದಲ್ಲಿ ಇದ್ದ ಚಿಮ್ಮಲಗಿ ಗ್ರಾಮ
ಬಳಿ ಶಾಲೀಗ್ರಮ ಶಿಲೆಯ ಅಷ್ಟ ಭುಜದ ನರಸಿಂಹ
ದೇವರ ಮೂರ್ತಿಯು ದೊರೆತಾಗ ಆನಂದಭರಿತರಾದರು
ಈ ಮೂರ್ತಿಯನ್ನು ರುದ್ರಾಂಶ ಸಂಭತರಾದ ದುರ್ವಾಸ
ಮುನಿಗಳು ಪೂಜಿಸಿದ ರೆಂದು ಅನುಭವ ಹೊಂದಿದ
ಕಾರಣ ಇಗಿರುವ ನರಸಿಂಹ ದೇವರ ಬಲಗಡೆ ಶಿವಲಿಂಗ
ಕಾಣಬಹುದು.
ಇಗಿರುವ ನರಸಿಂಹ ದೇವರ ಮೂರ್ತಿಯು ಸಾಲಿಗ್ರಾಮ ಶಿಲೆಯಲ್ಲಿದ್ದು ಅಷ್ಟ ಭುಜ ಹೊಂದಿರುವನು.ಮುಂದಿನ ಎರಡು ಕೈಗಳಿಂದ ಹಿರಣ್ಯ ಕಶ್ಯಪನನ್ನು ತನ್ನ ತೊಡೆಯ
ಮೇಲೆ ಹಾಕಿ ಅವನ ಜಠರದಿಂದ ಕರಳನ್ನು ಬಗೆದಂತೆ
ಹಾಗೆ ಉಳಿದ ಹಸ್ತಗಳಲ್ಲಿ ಶಂಖ ಚಕ್ರ ಗಧಾ ಧಾರಣೆ ಮಾಡಿರುವ. ಬಲತೊಡೆಯ ಮೇಲೆ ಲಕ್ಷ್ಮೀ ಹಾಗೂ ಎಡ ತೊಡೆಯಮೇಲೆ ಭಕ್ತ ಪ್ರಹ್ಲಾದನಿರುವನು.



ಈತರಹದ ಸಂದರ ಹಾಗೂ ಅನುಗ್ರಹ ಮಾಡವ ಮೂರ್ತಿಎಲ್ಲೂ ಕಾಣಸಿಗದು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶದಲ್ಲಿ ಅನೇಕ
ಮನೆತನದವರಿಗೆ ತೊರವೆಯ ನರಸಿಂಹ ದೇವರೆ ಕುಲ
ದೇವರೆಂದು ಬಂದು ತಮ್ಮ ಸೇವೆ ಸಲ್ಲಿಸುತ್ತಿರುವರು.
ಪ್ರತಿದಿನ ಅರ್ಚಕರು ದೇವರಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ಭಕ್ತರು ರೋಮಾಂಚನ ಹೊಂದುವರು. ಇಂತಹ ಅಪರೂಪದ ನರಸಿಂಹ ದೇವರ ದರ್ಶನ ಪಡೆಯುವದೆ ಭಾಗ್ಯ.

ಲೇಖನ ಸೇವೆ :ಸುರೇಂದ್ರ ಮುತಾಲಿಕ, ವಿಜಯಪುರ





Comments

  1. ಮಾಹಿತಿ ಮತ್ತು ಚಿತ್ರಗಳು ತುಂಬಾ ಸೊಗಸಾಗಿವೆ.

    ReplyDelete
  2. Good Information on this temple. we visited this temple in 2018 with Dr. U & V Narasapur

    ReplyDelete

Post a Comment